Tag: minister tanveer sait

  • ಮೇ 7ಕ್ಕೆ ಎಸ್‍ಎಸ್‍ಎಲ್‍ಸಿ ಫಲಿತಾಂಶ

    ಮೇ 7ಕ್ಕೆ ಎಸ್‍ಎಸ್‍ಎಲ್‍ಸಿ ಫಲಿತಾಂಶ

    ಬೆಂಗಳೂರು: ಎಸ್‍ಎಸ್‍ಎಲ್‍ಸಿ ಫಲಿತಾಂಶ ಮೇ 7ಕ್ಕೆ ಪ್ರಕಟವಾಗಲಿದ್ದು, ಮೇ 8ಕ್ಕೆ ಆಯಾ ಶಾಲೆಗಳಲ್ಲಿ ಪ್ರಕಟಿಸಲಾಗುವುದೆಂದು ಫ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.

    ನಗರದಲ್ಲಿ ಇಂದು ಮಾತನಾಡಿದ ಸಚಿವರು, ಈ ಬಾರಿಯ ಪರೀಕ್ಷಾ ಸುಧಾರಣಾ ಕ್ರಮಗಳು ತೃಪ್ತಿ ತಂದಿದೆ. ರಾಜ್ಯಾದ್ಯಂತ ಈಗಾಗಲೇ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮುಕ್ತಾಯಗೊಂಡಿದೆ. ಮೇ 7ಕ್ಕೆ ವಿದ್ಯಾರ್ಥಿಗಳು ಫಲಿತಾಂಶ ನಿರೀಕ್ಷಿಸಬಹುದು ಎಂದು ಹೇಳಿದ್ದಾರೆ. ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಹಾಗೆಯೇ ಏಪ್ರಿಲ್ ಕೊನೆಯ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶವೂ ಪ್ರಕಟ ಪಡಿಸಲಾಗುವುದೆಂದು ತನ್ವೀರ್ ಸೇಠ್ ಸ್ಪಷ್ಟಪಡಿಸಿದರು.

    ಪರೀಕ್ಷೆಯ ವೇಳೆ ವಿದ್ಯಾರ್ಥಿಗಳ ಹಾಗೂ ಪೋಷಕರ ಅತಂಕವನ್ನು ದೂರ ಮಾಡಿದ್ದೇವೆ. ರಾಜ್ಯದಲ್ಲಿ ಒಟ್ಟಾರೆ 33 ವಿಷಯಗಳಿಗೆ ಪರೀಕ್ಷೆ ನಡೆದಿದೆ. 8,54,424 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದಾರೆ. ಪರೀಕ್ಷಾ ಮೌಲ್ಯ ಮಾಪನದಲ್ಲೂ ಸುಧಾರಣೆ ತಂದಿದ್ದೇವೆ. ಪರೀಕ್ಷಾ ಗೊಂದಲ ಹಾಗೂ ಆಕ್ರಮಗಳ ಘಟನೆಗಳಿಗೆ ಸೂಕ್ತ ಕ್ರಮಕೈಗೊಳ್ಳುತ್ತೇವೆ. ಇದಕ್ಕೆ ಸಮಿತಿ ರಚನೆ ಮಾಡಿದ್ದೇವೆ. ಸಮಿತಿ ನಿರ್ಧಾರ ಕೈಗೊಳ್ಳುತ್ತದೆ. ಇದೇ ತಿಂಗಳ 16 ರಿಂದ 25ರ ವರೆಗೆ ಮೌಲ್ಯಮಾಪನ ನಡೆಯಲಿದೆ ಎಂದರು. ಪ್ರತಿ ಪ್ರಶ್ನೆ ಪತ್ರಿಕೆಯ ನೀಲಿ ಉತ್ತರ ಪ್ರತಿಗಳನ್ನು ಇಲಾಖೆಯ ವೈಬ್‍ಸೈಟ್ ನಲ್ಲಿ ಪ್ರಕಟಿಸುತ್ತೇವೆ. ನಂತರ ಈ ಕುರಿತು ವಿದ್ಯಾರ್ಥಿಗಳು ಆಕ್ಷೇಪ ಸಲ್ಲಿಸಬಹುದು ಎಂದರು.

  • ಖಾಸಗಿ ಶಾಲೆಗಳ ದುಬಾರಿ ಶುಲ್ಕ- ಸಚಿವ ತನ್ವೀರ್ ಸೇಠ್ ಮನೆಯ ಕಿಟಕಿ ಗಾಜು ಪುಡಿಪುಡಿ

    ಖಾಸಗಿ ಶಾಲೆಗಳ ದುಬಾರಿ ಶುಲ್ಕ- ಸಚಿವ ತನ್ವೀರ್ ಸೇಠ್ ಮನೆಯ ಕಿಟಕಿ ಗಾಜು ಪುಡಿಪುಡಿ

    ಬೆಂಗಳೂರು: ಖಾಸಗಿ ಶಾಲೆಗಳ ದುಬಾರಿ ಶುಲ್ಕವನ್ನು ಖಂಡಿಸಿ ಕರವೇ ಯುವ ಸೇನೆಯಿಂದ ಇಂದು ಧರಣಿ ನಡೆಸಲಾಗಿದ್ದು, ಈ ವೇಳೆ ಕಾರ್ಯಕರ್ತರು ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್ ನಿವಾಸದ ಮೇಲೆ ಮುತ್ತಿಗೆ ಹಾಕಿ ಮನೆಯಲ್ಲಿರುವ ಪಾಟ್ ಮತ್ತು ಕಿಟಕಿ ಗಾಜುಗಳನ್ನ ಒಡೆದಿದ್ದಾರೆ.

    ಸಚಿವ ತನ್ವೀರ್ ಸೇಠ್ ಮನೆಯ ಮುಂದೆ ಕರವೇ ಪ್ರತಿಭಟನೆ ನಡೆಯುತ್ತಿದ್ದಾಗ ಹೈಗ್ರೌಂಡ್ಸ್ ಠಾಣೆ ಪೊಲೀಸರು ತಡವಾಗಿ ಆಗಮಿಸಿದ್ರು. ಬಳಿಕ ಮನೆ ಮುಂದೆ ಕುಳಿತುಕೊಳ್ಳಲು ಮುಂದಾದ ಕೆಲ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ್ರು.

    ಪ್ರತಿಭಟನೆ ನಡೆಯುತ್ತಿದ್ದಂತೆಯೇ ಮನೆಯಿಂದ ಹೊರಬಂದ ಸಚಿವರು ಪ್ರತಿಭಟನಾಕಾರರ ಜೊತೆ ಮಾತನಾಡಿ, ಏಕಾಏಕಿ ಮನಗೆ ನುಗ್ಗೋದು ಪ್ರವೃತ್ತಿ ಅಲ್ಲ. ಬಂದಂತಹ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವುದು ನನ್ನ ಕರ್ತವ್ಯ. ನಾವು ಸಾರ್ವಜನಿಕರಿಂದ ಆಯ್ಕೆ ಅಗಿದ್ದೀವಿ. ನನಗೆ ರಕ್ಷಣೆ ಇದೆ. ಲಿಖಿತವಾಗಿ ದೂರು ಕೊಟ್ರೆ ನಾನು ಕ್ರಮ ಕೈಗೊಳ್ತೇನೆ. ಯಾವುದೇ ಸ್ಪಷ್ಟ ಸಮಸ್ಯೆ ಇಲ್ಲದೆ ಪ್ರತಿಭಟನೆ ಮಾಡಿದ್ರೆ ಅದು ವ್ಯರ್ಥ. ಲಿಖಿತವಾಗಿ ಸಮಸ್ಯೆಗಳನ್ನು ನನಗೆ ತಿಳಿಸಿ ನಾನು ಪ್ರಯತ್ನ ಮಾಡ್ತೆನೆ ಅಂತ ಭರವಸೆ ನೀಡಿದ್ರು.

    ಇಲ್ಲಿಯವರೆಗೆ ಈ ಬಗ್ಗೆ ನನಗೆ ಯಾವುದೇ ದೂರುಗಳು ಬಂದಿಲ್ಲ. ಖಾಸಗಿ ಶಾಲೆಗಳ ದುಬಾರಿ ಶುಲ್ಕದ ವಿರುದ್ಧ ಕ್ರಮ ತೆಗೆದುಕೊಳ್ಳೋ ಭರವಸೆ ನೀಡಿದ್ದೀನಿ. ಇಲಾಖೆಯ ವರದಿಗಳನ್ನು ತರಿಸಿಕೊಂಡು ಇದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಸಂಬಂಧಪಟ್ಟ ಜಿಲ್ಲಾ ಉಸ್ತುವಾರಿ ಮತ್ತು ಡಿಸಿಗಳಿಗೆ ಈ ಬಗ್ಗೆ ಸೂಚನೆ ನೀಡಲಾಗುವುದು. ರಾಜ್ಯದ ಜೀವ ಭಾಷೆ, ನೆಲದ ಬಗ್ಗೆ ನಾವು ಬದ್ಧರಾಗಿದ್ದೇವೆ ಅಂತ ಹೇಳಿದ್ರು.