Tag: Minister ST Somashekar

  • ವಿಶ್ವವನ್ನೇ ಕಾಡಿದ ಕೊರೊನಾ ಈ ವರ್ಷ ಕೊನೆಯಾಗಲಿ- ಹೊಸ ವರ್ಷಕ್ಕೆ ಎಸ್‍ಟಿಎಸ್ ಶುಭ ಹಾರೈಕೆ

    ವಿಶ್ವವನ್ನೇ ಕಾಡಿದ ಕೊರೊನಾ ಈ ವರ್ಷ ಕೊನೆಯಾಗಲಿ- ಹೊಸ ವರ್ಷಕ್ಕೆ ಎಸ್‍ಟಿಎಸ್ ಶುಭ ಹಾರೈಕೆ

    ಬೆಂಗಳೂರು: 2020, 2021ರಲ್ಲಿ ಇಡೀ ವಿಶ್ವವನ್ನೇ ಕಾಡಿದ ಕೊರೊನಾ ಈ ವರ್ಷ ಕೊನೆಯಾಗಲಿ. ಆರೋಗ್ಯಕರ ಸಮಾಜ ನಿರ್ಮಾಣ ಮಾಡುವತ್ತಾ ಎಲ್ಲರೂ ಒಟ್ಟಿಗೆ ಹೆಜ್ಜೆ ಹಾಕೋಣ ಎಂದು ಸಹಕಾರ ಸಚಿವ ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಜನತೆಗೆ ಹೊಸ ವರ್ಷದ ಶುಭ ಸಂದೇಶವನ್ನು ನೀಡಿದ್ದಾರೆ.

    ಎಲ್ಲರಿಗೂ 2022ರ ಹೊಸ ವರ್ಷದ ಶುಭಾಶಯಗಳು. 2022ರಲ್ಲಿ ರೋಗ ರುಜಿನಗಳು ಸಂಭವಿಸದೆ ಜನತೆ ಸುಖ, ಸಂತೋಷ, ನೆಮ್ಮದಿಯನ್ನು ಕಾಣಲಿ. ಭವಿಷ್ಯ ಇನ್ನಷ್ಟು ಉಜ್ವಲವಾಗಲಿ. ಹೊಸ ಉಲ್ಲಾಸದಿಂದ ಹೊಸ ವರ್ಷವನ್ನು ಸ್ವಾಗತಿಸೋಣ. ಹೊಸ ಕನಸು, ಹೊಸ ಹುರುಪಿನೊಂದಿಗೆ, ಹಳೆಯ ಸುಂದರ ನೆನಪುಗಳೊಂದಿಗೆ ಭವಿಷ್ಯದತ್ತ ಹೆಜ್ಜೆ ಹಾಕೋಣ ಎಂದು ಎಸ್‍ಟಿ ಸೋಮಶೇಖರ್ ಹೊಸ ವರ್ಷಕ್ಕೆ ಹಾರೈಸಿದರು. ಇದನ್ನೂ ಓದಿ: ರಾಜ್ಯದ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ ಸಿಎಂ ಬೊಮ್ಮಾಯಿ

    ಕಳೆದೆರಡು ವರ್ಷದಲ್ಲಿ ಕೊರೋನಾ ಸಾಕಷ್ಟು ಪಾಠ ಕಲಿಸಿದೆ. ಇಡೀ ಮನುಕುಲವನ್ನೇ ಕಾಡಿದ ಕೊರೊನಾದಿಂದ ಜನರ ಜೀವನಶೈಲಿ ಬದಲಾಗುವಂತಾಗಿದೆ. ಹೊಸವರ್ಷಾಚರಣೆಗಿಂತ ಹೊಸ ವರ್ಷದಲ್ಲಿ ಸಾಧಿಸಬೇಕಿರುವುದರ ಕಡೆ ಗಮನ ಹರಿಸಬೇಕು. ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು, ಜನರ ಜೀವನಮಟ್ಟ ಉತ್ತಮವಾಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು, ಯುವಕರಿಗೆ ಉದ್ಯೋಗ ಕಲ್ಪಿಸಿ ಈ ದೇಶವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯುವ ಕೆಲಸಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಹೇಳಿದರು. ಇದನ್ನೂ ಓದಿ: 3 ಕೋಟಿ ವೆಚ್ಚದ ರಸ್ತೆ ನಿರ್ಮಾಣ, 1 ಕೋಟಿಯ ಯುಜಿಡಿ ಕಾಮಗಾರಿಗೆ ಶೀಘ್ರ ಚಾಲನೆ: ಜಗದೀಶ್ ಶೆಟ್ಟರ್

    2021 ಕಳೆದು 2022 ಆಗಮಿಸಿದೆ. ಸಮಯ ಬಹಳ ಅಮೂಲ್ಯ. ಪ್ರತಿಕ್ಷಣ, ಪ್ರತಿದಿನವನ್ನು ಸದ್ಬಳಕೆ ಮಾಡಿಕೊಳ್ಳೋಣ. ಪ್ರತಿಯೊಬ್ಬರ ಕನಸುಗಳು ನನಸಾಗಲಿ, ನಿಮ್ಮ ಪ್ರತಿಯೊಂದು ಹೆಜ್ಜೆಯೂ ಸುಖಕರವಾಗಿರಲಿ. ಬದುಕಿನಲ್ಲಿ ಹೊಸ ಬದಲಾವಣೆ ತರಲಿ, ಯಶಸ್ಸು ನಿಮ್ಮದಾಗಲಿ ಎಂದು ಈ ಸಂದರ್ಭದಲ್ಲಿ ಆಶಿಸುತ್ತೇನೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಎಂದರು.

  • ರಾಷ್ಟ್ರೀಯ ಸಹಕಾರಿ ವಸತಿ ಮಹಾಮಂಡಳಿ ವಾರ್ಷಿಕ ಸಭೆ, ಬೆಂಗಳೂರಿನಲ್ಲಿ ನಡೆಸಿ: ಸೋಮಶೇಖರ್ ಮನವಿ

    ರಾಷ್ಟ್ರೀಯ ಸಹಕಾರಿ ವಸತಿ ಮಹಾಮಂಡಳಿ ವಾರ್ಷಿಕ ಸಭೆ, ಬೆಂಗಳೂರಿನಲ್ಲಿ ನಡೆಸಿ: ಸೋಮಶೇಖರ್ ಮನವಿ

    ನವದೆಹಲಿ: ರಾಷ್ಟ್ರೀಯ ಸಹಕಾರಿ ವಸತಿ ಮಹಾಮಂಡಳಿಯ ಮುಂದಿನ ವಾರ್ಷಿಕ ಸಭೆಯನ್ನು ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆಸುವಂತೆ ಕರ್ನಾಟಕದ ಸಹಕಾರ ಸಚಿವರು ಹಾಗೂ ರಾಷ್ಟ್ರೀಯ ಸಹಕಾರಿ ವಸತಿ ಮಹಾಮಂಡಳಿ ನಿರ್ದೇಶಕರಾದ ಎಸ್.ಟಿ.ಸೋಮಶೇಖರ್, ರಾಷ್ಟ್ರೀಯ ಸಹಕಾರಿ ವಸತಿ ಮಹಾಮಂಡಳಿಗೆ ಮನವಿ ಮಾಡಿದರು.

    ನವದೆಹಲಿಯಲ್ಲಿ ಇಂದು ನಡೆದ ರಾಷ್ಟ್ರೀಯ ಸಹಕಾರಿ ವಸತಿ ಮಹಾಮಂಡಳಿ ಅಧ್ಯಕ್ಷರಾದ ಬಿಜಯ್ ಕುಮಾರ್ ಸಿಂಗ್ ನೇತೃತ್ವದಲ್ಲಿ ವಸತಿ ಮಹಾಮಂಡಳಿ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಇದನ್ನೂ ಓದಿ: ನ್ಯಾಯಾಂಗದಲ್ಲಿ ಮಹಿಳೆಯರಿಗೆ 50% ಮೀಸಲಾತಿ ನೀಡಬೇಕು: ಸಿಜೆಐ ರಮಣ

    ಮಹಾರಾಷ್ಟ್ರ, ಕೇರಳ, ಪಂಜಾಬ್, ಪಶ್ಚಿಮ ಬಂಗಾಳ, ಹರಿಯಾಣ ಸೇರಿದಂತೆ ಸಭೆಯಲ್ಲಿ 15ಕ್ಕೂ ಹೆಚ್ಚು ರಾಜ್ಯಗಳ ನಿರ್ದೇಶಕರು ಭಾಗವಹಿಸಿದ್ದರು. ರಾಷ್ಟ್ರೀಯ ವಸತಿ ನೀತಿ ಜಾರಿಗೊಳಿಸಲು ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು.

    ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ನಿವೇಶನ ದೊರಕಿಸಿಕೊಡುವ ಬಗ್ಗೆ ಕೆಲವು ಅಡ್ಡಿ ಆತಂಕಗಳಿವೆ. ಭೂಸ್ವಾಧೀನಕ್ಕೆ ಸಂಬಂಧಪಟ್ಟಂತೆ ಕೆಲವು ಅಡಚಣೆಗಳಿದ್ದು ಇವುಗಳನ್ನು ಪರಿಹರಿಸಲು ಕೇಂದ್ರ ಗೃಹ ಸಚಿವರು ಹಾಗೂ ಸಹಕಾರ ಸಚಿವರಾದ ಅಮಿತ್ ಶಾ ಅವರನ್ನು ಭೇಟಿ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಇದನ್ನೂ ಓದಿ: ಬೀದರ್‌ಗೆ ಗುಲಾಬ್ ಚಂಡಮಾರುತದ ಎಫೆಕ್ಟ್- ಜಿಲ್ಲೆಯಲ್ಲಿ ಧಾರಾಕಾರ ಮಳೆ

    ಈ ಸಭೆಯಲ್ಲಿ ಎಲ್ಲಾ ರಾಜ್ಯಗಳಲ್ಲಿ ಸಹಕಾರಿ ವಸತಿ ಮಹಾಮಂಡಳಿಗಳನ್ನು ಬಲಪಡಿಸಲು ಕೆಲವು ಮುಖ್ಯ ತಿದ್ದುಪಡಿ ತರುವ ಬಗ್ಗೆ ಚರ್ಚಿಸಲಾಯಿತು.

  • ಬರೋ ದಿನಗಳಲ್ಲಿ ಎಚ್.ವಿಶ್ವನಾಥ್‍ಗೂ ಸೂಕ್ತ ಸ್ಥಾನಮಾನ ಸಿಗಲಿದೆ: ಸಚಿವ ಎಸ್‍ಟಿ ಸೋಮಶೇಖರ್

    ಬರೋ ದಿನಗಳಲ್ಲಿ ಎಚ್.ವಿಶ್ವನಾಥ್‍ಗೂ ಸೂಕ್ತ ಸ್ಥಾನಮಾನ ಸಿಗಲಿದೆ: ಸಚಿವ ಎಸ್‍ಟಿ ಸೋಮಶೇಖರ್

    -ಸಮ್ಮಿಶ್ರ ಸರ್ಕಾರದ ಪತನಕ್ಕೆ ಮುನ್ನುಡಿ ಬರೆದಿದ್ದು ಆನಂದ್ ಸಿಂಗ್

    ಬಳ್ಳಾರಿ: ಪಕ್ಷದ ಕೋರ್ ಕಮಿಟಿಯಲ್ಲಿ ಸಭೆಯಲ್ಲಿ ಎಚ್.ವಿಶ್ವನಾಥ್ ಅವರ ಬಗ್ಗೆಯೂ ತೀರ್ಮಾನವಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ಬದಲಾವಣೆಯಾಗಿದೆ. ಬರುವ ದಿನಗಳಲ್ಲಿ ಖಂಡಿತ ಸೂಕ್ತ ಸ್ಥಾನ ಸಿಗಲಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.

    ಬಳ್ಳಾರಿಯ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರೊಂದಿಗೆ ಈ ಕುರಿತು ಒಂದು ಗಂಟೆ ಕಾಲ ಚರ್ಚಿಸಿದ್ದೇನೆ. ಅವರೂ ಭರವಸೆ ನೀಡಿದ್ದಾರೆ. ಕೋರ್ ಕಮಿಟಿಯಲ್ಲಿ ಅಂತಿಮ ತೀರ್ಮಾನವಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ಬದಲಾವಣೆ ಆಗಿದೆ. ಎಚ್.ವಿಶ್ವನಾಥ್ ಅವರ ಜೊತೆಗೆ ನಾವೆಲ್ಲರೂ ಇದ್ದೇವೆ ಎಂದರು.

    ವಿಶ್ವನಾಥ್ ಅವರಿಗೆ ಪರಿಷತ್ ಟಿಕೆಟ್ ತಪ್ಪಲು ಸಿದ್ದರಾಮಯ್ಯ, ಎಚ್‍ಡಿ ಕುಮಾರಸ್ವಾಮಿ ಕಾರಣ ಎನ್ನುವ ವಿಶ್ವನಾಥ್ ಅವರ ಹೇಳಿಕೆ ಸುಳ್ಳು. ಎಚ್‍ಡಿ ಕುಮಾರಸ್ವಾಮಿಗೂ, ಸಿದ್ದರಾಮಯ್ಯಗೂ ಬಿಜೆಪಿಗೂ ಸಂಬಂಧವಿಲ್ಲ ಎಂದರು.

    ಇದೇ ವೇಳೆ ಸಮ್ಮಿಶ್ರ ಸರ್ಕಾರ ಪತನದ ಕುರಿತು ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿದ್ದಾಗ ಮೊದಲು ರಾಜೀನಾಮೆ ಕೊಟ್ಟಿದ್ದು ಆನಂದ್ ಸಿಂಗ್. ಮೊದಲು ರಾಜೀನಾಮೆ ನೀಡುವ ಧೈರ್ಯ ಮಾಡಿದ್ದು ಆನಂದ ಸಿಂಗ್, ಅವರಿಂದಾಗಿ ನಾವು ಸಚಿವರಾಗಿದ್ದೇವೆ. ರಾಜೀನಾಮೆಗೆ ಫೌಂಡೇಶನ್ ಹಾಕಿದ್ದು ಆನಂದ್ ಸಿಂಗ್ ಎಂದು ಬಣ್ಣಿಸಿದರು. ಎಲ್ಲರೂ ಕೊಡ್ತಿವಿ, ಕೊಡ್ತಿವಿ ಅಂತ ಹೇಳಿದ್ದರು. ಆದರೆ ಯಾರೂ ಕೊಡಲಿಲ್ಲ. ಆನಂದ್ ಸಿಂಗ್ ಮೊದಲು ಕೊಟ್ಟು ಧೈರ್ಯ ಪ್ರದರ್ಶಿಸಿದರು. ನಂತರ ನಾವು ರಾಜೀನಾಮೆ ಕೊಟ್ಟೆವು. ಆ ಮೂಲಕ ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಬರಲು ಕಾರಣವಾದೆವು ಎಂದು ತಿಳಿಸಿದರು.