Tag: Minister Puttaranga Shetty

  • ರಾಜ್ಯದ ಸಿಎಂ ಎಚ್‍ಡಿಕೆ, ಆದ್ರೆ ಆ ಸ್ಥಾನದಲ್ಲಿ ಸಿದ್ದರಾಮಯ್ಯರನ್ನೇ ನೋಡ್ತೀನಿ: ಪುಟ್ಟರಂಗ ಶೆಟ್ಟಿ

    ರಾಜ್ಯದ ಸಿಎಂ ಎಚ್‍ಡಿಕೆ, ಆದ್ರೆ ಆ ಸ್ಥಾನದಲ್ಲಿ ಸಿದ್ದರಾಮಯ್ಯರನ್ನೇ ನೋಡ್ತೀನಿ: ಪುಟ್ಟರಂಗ ಶೆಟ್ಟಿ

    ಮೈಸೂರು: ರಾಜ್ಯದಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದು, ಆದರೆ ನಾನು ಆ ಸ್ಥಾನದಲ್ಲಿ ನಾನು ಸಿದ್ದರಾಮಯ್ಯರನ್ನ ನೋಡುತ್ತೇನೆ ಎಂದು ಸಚಿವ ಪುಟ್ಟರಂಗಶೆಟ್ಟಿ ಅವರು ಹೇಳಿದ್ದಾರೆ.

    ಈ ಹಿಂದೆ ನಾನು ನೀಡಿದ ಹೇಳಿಕೆಗೆ ಬದ್ಧನಾಗಿದ್ದು, ಬಸವರಾಜ್ ಹೊರಟ್ಟಿ ಅವರು ಹೇಳಿದಂತೆ ಇಲ್ಲಿ ಯಾವುದು ನಡೆಯುವುದಿಲ್ಲ. ಇಲ್ಲಿ ಎಚ್‍ಡಿ ದೇವೇಗೌಡ, ಸಿದ್ದರಾಮಯ್ಯ, ಕುಮಾರಸ್ವಾಮಿ ಅವರು ಆ ಮಾತು ಹೇಳಿದರೆ ಮಾತ್ರ ನಡೆಯುತ್ತದೆ ಎಂದರು.

    ರಾಜ್ಯದ ಸಮ್ಮಿಶ್ರ ಸರ್ಕಾರದಲ್ಲಿ ಗೊಂದಲ ಇಲ್ಲ. ಮತ್ತೆ ಚುನಾವಣೆ ಎದರುಸಬೇಕೆಂಬ ಹೊರಟ್ಟಿ ಅವರು ನೇರ ಚುನಾವಣೆ ಎದುರಿಸಿದರೆ ಅದರ ಸ್ಥಿತಿ ಗೊತ್ತಾಗುತ್ತದೆ. ಯಾವುದೇ ಕಾರಣಕ್ಕೂ ಅವರ ಮಾತು ನಡೆಯುವುದಿಲ್ಲ ಬಿಡಿ. ಸರ್ಕಾರ ಉತ್ತಮವಾಗಿ ಮುನ್ನಡೆಯುತ್ತದೆ. ಸಿದ್ದರಾಮಯ್ಯ ಅವರು ಸಿಎಂ ಆಗಬೇಕು ಎಂಬುವುದು ಶಾಸಕರ ವೈಯಕ್ತಿಕ ಅಭಿಪ್ರಾಯ. ಆದರೆ ಸಿಎಂ ಖಾಲಿ ಇಲ್ಲ, 5 ವರ್ಷ ಸರ್ಕಾರ ತನ್ನ ಅವಧಿಯನ್ನು ಪೂರ್ಣಗೊಳಿಸುತ್ತದೆ ವಿಶ್ವಾಸ ವ್ಯಕ್ತಪಡಿಸಿದರು.

    ಶಾಸಕ ತನ್ವೀರ್ ಸೇಠ್ ಮಾತನಾಡಿ, ಒಂದು ವರ್ಷದಲ್ಲಿ ನಾವು ಮಾಡಬೇಕಾದ ಕೆಲಸ ಮಾಡಿಲ್ಲ. ಒಂದು ವರ್ಷದಲ್ಲಿ ಹಲವು ಚುನಾವಣೆ ಬಂದವು. ಬಿಜೆಪಿ ಶಾಸಕರ ಖರೀದಿಗೆ ಮುಂದಾಗಿತ್ತು. ಅಲ್ಲದೇ ಲೋಕಸಭಾ ಚುನಾವಣೆಯೂ ಬಂದಿತ್ತು. ಈ ಎಲ್ಲ ಕಾರಣದಿಂದಾಗಿ ನಾವು ಒಂದು ವರ್ಷದಲ್ಲಿ ಮಾಡಬೇಕಾದ ಕೆಲಸ ಪರಿಪೂರ್ಣ ಆಗಿಲ್ಲ. ಆದರೆ ಮುಂದಿನ ನಾಲ್ಕು ವರ್ಷ ನಾವು ಸಮರ್ಥವಾಗಿ ಆಡಳಿತ ಮಾಡುವ ವಿಶ್ವಾಸ ಇದೆ ಎಂದರು.

  • ಆಪರೇಷನ್ ಕಮಲಕ್ಕೆ ಸಿಕ್ಕಿ ಜಗ್ಗೇಶ್ ರಾಜಕೀಯ ಭವಿಷ್ಯ ಹಾಳಾಯ್ತು: ಸಚಿವ ಪುಟ್ಟರಂಗಶೆಟ್ಟಿ

    ಆಪರೇಷನ್ ಕಮಲಕ್ಕೆ ಸಿಕ್ಕಿ ಜಗ್ಗೇಶ್ ರಾಜಕೀಯ ಭವಿಷ್ಯ ಹಾಳಾಯ್ತು: ಸಚಿವ ಪುಟ್ಟರಂಗಶೆಟ್ಟಿ

    ರಾಯಚೂರು: ಆಪರೇಷನ್ ಕಮಲಕ್ಕೆ ಒಳಗಾದ ತುರುವೆಕೆರೆ ಮಾಜಿ ಶಾಸಕ ಜಗ್ಗೇಶ್ ಅವರ ರಾಜಕೀಯ ಭವಿಷ್ಯವೇ ಹಾಳಾಗಿದೆ. ಕಾಂಗ್ರೆಸ್ ಶಾಸಕರು ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಸಚಿವರು, ಮಾಜಿ ಶಾಸಕ ಸಿ.ಪಿ.ಯೋಗಿಶ್ವರ್ ಬಿಜೆಪಿ ಸೇರುವಂತೆ ಆಮಿಷ ಒಡ್ಡಿದ್ದರು. ಆದರೆ ನಾನು ಅವರ ಆಮಿಷಕ್ಕೆ ಒಳಗಾಗಿಲ್ಲ. ನಾನು ಬಿಜೆಪಿ ಸೇರಲ್ಲ ಅಂತ ಯೋಗಿಶ್ವರ್‍ಗೆ ಬೈದಿದ್ದೇನೆ. ಚುನಾವಣೆಗೆ ಮುನ್ನವೇ ನನಗೆ ಒತ್ತಾಯಿಸಿ, ಸಚಿವ ಸ್ಥಾನ ಕೊಡುವುದಾಗಿ ಆಮಿಷ ಒಡ್ಡಿದ್ದರು. ಅಂದು ಬೈದಿದ್ದಕ್ಕೆ ಈಗ ಯೋಗಿಶ್ವರ್ ನನ್ನನ್ನ ಸಂಪರ್ಕಿಸಿಲ್ಲ ಎಂದು ತಿಳಿಸಿದರು.

    ಬಿಜೆಪಿಯವರು ಸರ್ಕಾರ ಅತಂತ್ರಗೊಳಿಸುವ ಕೆಲಸ ಮಾಡಬಾರದು. ಬಿಜೆಪಿಯಿಂದ ನಮಗೆ ಯಾವುದೇ ಭಯವಿಲ್ಲ. ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಶಾಸಕ ಸತೀಶ್ ಜಾರಕಿಹೊಳಿ ಸಹೋದರರು ಪಕ್ಷ ಬಿಟ್ಟು ಹೋಗುವುದಿಲ್ಲ ಎಂದ ಸಚಿವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಬಯಕೆ ವ್ಯಕ್ತಪಡಿಸಿದ್ದರು. ಅದಕ್ಕೂ ಬೆಳಗಾವಿ ಗೊಂದಲಕ್ಕೂ ಸಂಬಂಧವಿಲ್ಲ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಈಗಲೂ ನನಗೆ ಸಿದ್ದರಾಮಯ್ಯರೇ ಮುಖ್ಯಮಂತ್ರಿ: ಸಚಿವ ಪುಟ್ಟರಂಗ ಶೆಟ್ಟಿ

    ಈಗಲೂ ನನಗೆ ಸಿದ್ದರಾಮಯ್ಯರೇ ಮುಖ್ಯಮಂತ್ರಿ: ಸಚಿವ ಪುಟ್ಟರಂಗ ಶೆಟ್ಟಿ

    ಮೈಸೂರು: ನನಗೆ ಈಗಲೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂದು ಹಿಂದುಳಿದ ವರ್ಗಗಳ ಖಾತೆಯ ಸಚಿವ ಪುಟ್ಟರಂಗ ಶೆಟ್ಟಿ ಹೇಳಿದ್ದಾರೆ.

    ಇಂದು ವರುಣಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಪುಟ್ಟರಂಗ ಶೆಟ್ಟಿ, ಉಪ್ಪಾರರು ವಿಧಾನಸೌದದ ಮೆಟ್ಟಿಲು ತುಳಿದಿದ್ದಾರೆ ಅಂದರೆ ಅದಕ್ಕೆ ಸಿದ್ದರಾಮಯ್ಯ ಕಾರಣ. ನಾನು ಮಂತ್ರಿಯಾಗಿದ್ದರೆ ಅದು ಸಿದ್ದರಾಮಯ್ಯನವರಿಂದ. ಹೀಗಾಗಿ ನನ್ನ ಪಾಲಿಗೆ ಅವರೇ ಮುಖ್ಯಮಂತ್ರಿಗಳು ಎಂದು ಸಚಿವ ಪುಟ್ಟರಂಗಶೆಟ್ಟಿ ಬಹಿರಂಗವಾಗಿ ಹೇಳಿದರು.

    ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಧರ್ಮಸೇನಾ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗದಿದ್ದರೂ ಮುಖ್ಯಮಂತ್ರಿಗಿಂತಲೂ ಉನ್ನತ ಸ್ಥಾನವಾದ ಸಮನ್ವಯ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಇದು ನಮಗೆ ಸಾಕು. ಜೊತೆಯಲ್ಲಿದ್ದವರೇ ಮೋಸ ಮಾಡಿದಾಗ ನೋವಾಗುತ್ತೆ. ಆದರೆ ನೀವು ಚಾಮುಂಡೇಶ್ವರಿ ಸೋಲಿನಿಂದ ಎದೆಗುಂದಬೇಡಿ ಎಂದು ಮಾಜಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು. ಅಲ್ಲದೇ ನಾನು ಮೊದಲೇ ಹೇಳಿದ್ದೆ ಚಾಮುಂಡೇಶ್ವರಿ ಕ್ಷೇತ್ರ ಬೇಡ ಎಂದು, ಆದರೆ ನನಗೆ ಭಯವಿಲ್ಲ ನಿನಗೇಕೆ ಭಯ ಎಂದು ನನ್ನನ್ನು ಸುಮ್ಮನಾಗಿಸಿದ್ದರು. ಈಗ ಇಲ್ಲಿನ ಜನರೇ ಕೈ ಬಿಟ್ಟಿದ್ದಾರೆ ಅಂತಾ ಬೇಸರ ವ್ಯಕ್ತಪಡಿಸಿದರು. ಇದನ್ನು ಓದಿ: ಅಧಿಕಾರ ಬಂದ ಮೇಲೆ ಎಲ್ಲರು ಕಣ್ಣಿಗೆ ಕಾಣ್ತಿದ್ದಾರಾ? ಪುಟ್ಟರಂಗ ಶೆಟ್ಟಿಗೆ ಮಾಜಿ ಸಿಎಂ ಪ್ರಶ್ನೆ

    ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಮಗನನ್ನು ಭಾರೀ ಅಂತರದಿಂದ ಗೆಲ್ಲಿಸಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು. ನನಗೆ 30 ಸಾವಿರ ಅಂತರ ನೀಡಿದ್ದ ನೀವು, ನನ್ನ ಮಗನಿಗೆ ಅದರ ದುಪ್ಪಟ್ಟು ಮತ ನೀಡಿದ್ದೀರಿ. ಒಳ್ಳೆಯ ನಿರ್ಧಾರ ಮಾಡಿದ ನಿಮಗೆ ನನ್ನ ಧನ್ಯವಾದ ಎಂದು ಹೇಳಿದರು. ಇದೇ ವೇಳೆ ಕಾಂಗ್ರೆಸ್ ಸರ್ಕಾರ ಒಳ್ಳೆ ಕೆಲಸ ಮಾಡಿದರೂ ಜನ ಏಕೆ ಆಶೀರ್ವಾದ ಮಾಡಲಿಲ್ಲ ಎಂದು ತಮ್ಮನ್ನ ತಾವೇ ಪ್ರಶ್ನೆ ಮಾಡಿಕೊಂಡು ಬಳಿಕ ತಮ್ಮ ವ್ಯಂಗ್ಯದ ಶೈಲಿಯಲ್ಲಿ ಬಿಜೆಪಿ ವಿರುದ್ದ ವಾಗ್ದಾಳಿ ಕೂಡ ನಡೆಸಿದರು. ಇಷ್ಟೇಲ್ಲ ಆದರೂ ಒಮ್ಮೆಯೂ ಚಾಮುಂಡೇಶ್ವರಿ ಕ್ಷೇತ್ರದ ಹೆಸರು ಹೇಳದೆ ತಮ್ಮ ಸೋಲಿನ ನೋವನ್ನು ಹೇಳಿಕೊಳ್ಳದೇ ತಮ್ಮ ಒಳಗೆ ನುಂಗಿದರು.