Tag: Minister of Water Resources

  • ಖಾತೆ ಬದಲಾವಣೆ, ಹಂಚಿಕೆ ಮುಖ್ಯಮಂತ್ರಿ ಪರಮಾಧಿಕಾರ: ರಮೇಶ್ ಜಾರಕಿಹೊಳಿ

    ಖಾತೆ ಬದಲಾವಣೆ, ಹಂಚಿಕೆ ಮುಖ್ಯಮಂತ್ರಿ ಪರಮಾಧಿಕಾರ: ರಮೇಶ್ ಜಾರಕಿಹೊಳಿ

    – ಖಾತೆ ಬದಲಾವಣೆ ಬಗ್ಗೆ ನನಗೆ ಮಾಹಿತಿಯಿಲ್ಲ
    – ಮುಖ್ಯಮಂತ್ರಿ ಜೊತೆ ನಿಲ್ಲಬೇಕು

    ಹಾಸನ: ಖಾತೆ ಬದಲಾವಣೆ ಬಗ್ಗೆ ನನಗೆ ಮಾಹಿತಿಯಿಲ್ಲ, ಖಾತೆ ಬದಲಾವಣೆ ಅಥವಾ ಹಂಚಿಕೆ ಮಾಡುವುದು ಮುಖ್ಯಮಂತ್ರಿ ಪರಮಾಧಿಕಾರ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

    ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಬೆಟ್ಟದಾಲೂರು ಬಳಿ ನಡೆಯುತ್ತಿರುವ ಎತ್ತಿನಹೊಳೆ ಕಾಮಗಾರಿ ಯೋಜನೆಯನ್ನು ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಸಚಿವರು ಅಸಮಾಧಾನಗೊಂಡಿಲ್ಲ, ಎಲ್ಲವನ್ನೂ ಮುಖ್ಯಮಂತ್ರಿ ಅವರು ಸರಿಪಡಿಸುತ್ತಾರೆ. ಖಾತೆ ಹಂಚಿಕೆ ಕುರಿತಾಗಿ ನಾನು ಯಾರ ಜೊತೆಯಲ್ಲೂ ಚರ್ಚಿಸಿಲ್ಲ, ಅಸಮಾಧಾನವಿದ್ದರೆ ಮಿತ್ರ ಮಂಡಳಿ ಹಾಗೂ ಬಿಜೆಪಿ ಶಾಸಕರನ್ನು ಮನವಿ ಮಾಡುತ್ತೇವೆ ಎಂದು ತಿಳಿಸಿದರು.

    ಕೋವಿಡ್ ನಿಂದ ಸಂಕಷ್ಟ ಅನುಭವಿಸದ್ದೇವೆ, ಇಂತಹ ಸಂದರ್ಭದಲ್ಲಿ ಎಲ್ಲರು ಮುಖ್ಯಮಂತ್ರಿ ಕೈ ಬಲಪಡಿಸಬೇಕು. ಮುಂದಿನ ಎರಡು ವರ್ಷ ಅಭಿವೃದ್ಧಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

    ಇದೇ ವೇಳೆ ಸಚಿವರೆದುರೇ ರೈತರೊಬ್ಬರು ಎತ್ತಿನಹೊಳೆ ಪರಿಹಾರ ನೀಡದೇ ಇರುವ ಬಗ್ಗೆ ಆಕ್ರೋಶ ಹೊರಹಾಕಿದರು.ಅಷ್ಟೇ ಅಲ್ಲದೇ ಸಮರ್ಪಕ ಪರಿಹಾರ ನೀಡದೇ ಕಾಮಗಾರಿ ನಡೆಯಲು ಅವಕಾಶ ನೀಡಲ್ಲ ಎಂದು ಎಚ್ಚರಿಸಿದ್ದಾರೆ. ಆದರೆ ಸಚಿವರು ಮಾತ್ರ ಕೇಳಿಯೂ ಕೇಳದಂತೆ ಸ್ಥಳದಿಂದ ತೆರಳಿದರು.