Tag: Minister of State

  • ಸಚಿವ ಸ್ಥಾನಕ್ಕಾಗಿ ಜಾತಿ ಕಾರ್ಡ್ ಪ್ಲೇ ಮಾಡಿದ ಶಾಸಕ ಬಿ ಸಿ ಪಾಟೀಲ್

    ಸಚಿವ ಸ್ಥಾನಕ್ಕಾಗಿ ಜಾತಿ ಕಾರ್ಡ್ ಪ್ಲೇ ಮಾಡಿದ ಶಾಸಕ ಬಿ ಸಿ ಪಾಟೀಲ್

    ಬೆಂಗಳೂರು: ನಾನು ಪೊಲೀಸ್ ಅಧಿಕಾರಿಯಾಗಿದ್ದವನು, ಹಾಗೆಯೇ ಸಿನೆಮಾ ನಟನೆಯನ್ನು ಮಾಡಿದ್ದು ನನಗೆ ಯಾವುದೇ ಜಾತಿ ಇಲ್ಲ. ಆದರೆ ರಾಜ್ಯದ 10 ಜಿಲ್ಲೆಗಳಲ್ಲಿ ಲಿಂಗಾಯತ ಸಮುದಾಯದ ಪ್ರಭಾವ ಇದ್ದು, ಅದ್ದರಿಂದ ನಮ್ಮ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದು ಶಾಸಕ ಬಿಸಿ ಪಾಟೀಲ್ ಹೇಳಿದ್ದಾರೆ.

    ನಗರದಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಲಿಂಗಾಯತ ಸಮುದಾಯಕ್ಕೆ ಪ್ರಾತಿನಿಧ್ಯ ಬೇಕು ಎಂಬ ಬೇಡಿಕೆ ಇದ್ದು, ನಾನು ಮೂರು ಬಾರಿ ಚುನಾವಣೆಯಲ್ಲಿ ಗೆಲುವು ಪಡೆದಿದ್ದೇನೆ. ಆದರೆ ಕಳೆದ 38 ವರ್ಷಗಳಿಂದ ಹಿರೆಕೇರೂರು ಕ್ಷೇತ್ರಕ್ಕೆ ಸಚಿವ ಸ್ಥಾನ ಸಿಕ್ಕಿಲ್ಲ. ಈಗ ಕ್ಷೇತ್ರಕ್ಕೆ ಸಚಿವ ಸ್ಥಾನ ಲಭಿಸುವ ಅವಕಾಶವಿದ್ದು, ಪಕ್ಷದ ವರಿಷ್ಠರು ಅವಕಾಶ ಮಾಡಿಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

    ಸಂಪುಟ ವಿಸ್ತರಣೆ ವೇಳೆ ಹಲವು ವಿಚಾರಗಳಲ್ಲಿ ಚರ್ಚೆ ನಡೆಸಬೇಕಾಗುತ್ತದೆ. ಆದ್ದರಿಂದ ಕಾಯವುದು ಸೂಕ್ತ ಎಂದು ಸುಮ್ಮನೆ ಇದ್ದೇನೆ. ಅಲ್ಲದೇ ಹಾವೇರಿ, ಗದಗ, ಧಾರವಾಡ ಜಿಲ್ಲೆಗಳಲ್ಲಿ ನಮ್ಮ ಸಮುದಾಯದಿಂದ ಗೆದ್ದ ಏಕೈಕ ಶಾಸಕ ನಾನು. ಇಡೀ ರಾಜ್ಯದಲ್ಲಿ ಪಕ್ಷ ಕಟ್ಟುದ ಕೆಲಸ ಮಾಡುತ್ತೇನೆ. ನಾನು ಏನೇ ಹೇಳಿದರೂ ಇಲ್ಲಿ ಜಾತಿ ಬಿಟ್ಟು ಏನು ಮಾಡುವುದಿಲ್ಲ. ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿಎಸ್ ಯಡಿಯೂರಪ್ಪ ಅವರು ಪಕ್ಷಕ್ಕೆ ಆಹ್ವಾನ ನೀಡಿದ್ದರು, ಆದರೆ ಈಗ ಇಲ್ಲ. ನನಗೆ ಸಚಿವ ಸ್ಥಾನ ಕೊಟ್ಟರೆ ಸಮುದಾಯದ ಅಭಿವೃದ್ಧಿಗೆ ಸಹಾಯ ಆಗಲಿದೆ. ಶೀಘ್ರ ಸಮ್ಮಿಶ್ರ ಸರ್ಕಾರ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.

    ಪಕ್ಷದಲ್ಲಿ ನನ್ನಂತೆ ಹಿರಿಯ ಮುಖಂಡರಾದ ದೇಶಪಾಂಡೆ, ರಾಮಲಿಂಗ ರೆಡ್ಡಿ ಅವರು ಕೂಡ ಸಚಿವ ಸ್ಥಾನ ಆಕಾಂಕ್ಷಿಗಳಿದ್ದು, ಪಕ್ಷದ ಹೈಕಮಾಂಡ್ ತೀರ್ಮಾನವೇ ಅಂತಿಮ. ಅದ್ದರಿಂದ ನಾನು ಎಂದು ಪಕ್ಷದ ನಿಷ್ಠವಂತ ಕಾರ್ಯಕರ್ತನಾಗಿಯೇ ಇರುತ್ತೇನೆ. ನನ್ನ ಕ್ಷೇತ್ರದ ಜನರು ಶಾಸಕ ಸ್ಥಾನ ನೀಡಿದ್ದಾರೆ. ಅದನ್ನು ಕಿತ್ತು ಕೊಳ್ಳಲು ಬೇರೆ ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಆಪ್ತ ಸ್ನೇಹಿತನಿಗೆ ಸಚಿವ ಸ್ಥಾನ ಸಿಕ್ರೆ ಮೀಸೆ ಬೋಳಿಸ್ತೀನಿ: ಆನಂದ್ ಸಿಂಗ್

    ಆಪ್ತ ಸ್ನೇಹಿತನಿಗೆ ಸಚಿವ ಸ್ಥಾನ ಸಿಕ್ರೆ ಮೀಸೆ ಬೋಳಿಸ್ತೀನಿ: ಆನಂದ್ ಸಿಂಗ್

    ಬಳ್ಳಾರಿ: ಒಂದೆಡೆ ರಾಜ್ಯದಲ್ಲಿ ಅಧಿಕಾರಕ್ಕೇರಲು ಬಿಜೆಪಿ ಹವಣಿಸುತ್ತಿದೆ. ಮತ್ತೊಂದೆಡೆ ಸಚಿವ ಸ್ಥಾನ ಪಡೆಯಲು ಕೈ ಶಾಸಕರು ಲಾಭಿ ನಡೆಸೋ ಮೂಲಕ ಕಿತ್ತಾಟ ಶುರುಮಾಡಿದ್ದಾರೆ. ಈ ಮಧ್ಯೆ ತಮಗೆ ಸಚಿವ ಸ್ಥಾನ ನೀಡದೇ ತಮ್ಮ ಸ್ನೇಹಿತನಿಗೆ ಸಚಿವ ಸ್ಥಾನ ಕೊಟ್ಟರೆ ತಮ್ಮ ಮೀಸೆಯನ್ನೆ ಬೋಳಿಸುತ್ತೀನಿ ಎಂದು ಹೊಸಪೇಟೆ ಶಾಸಕ ಆನಂದ್ ಸಿಂಗ್ ಸವಾಲು ಹಾಕಿದ್ದಾರೆ.

    ಇತ್ತೀಚೆಗೆ ಬೆಂಗಳೂರಿನಲ್ಲಿ ಆಪ್ತರ ಜೊತೆ ಸಭೆ ನಡೆಸಿದ್ದ ಹಾಲಿ ಶಾಸಕ, ಮಾಜಿ ಸಚಿವ ಆನಂದ್ ಸಿಂಗ್, ಕಾಂಗ್ರೆಸ್ ಪಕ್ಷ ಸೇರ್ಪಡೆಗೂ ಮುನ್ನ ಹೈಕಮಾಂಡ್ ನನಗೆ ಸಚಿವ ಸ್ಥಾನದ ಭರವಸೆ ನೀಡಿದೆ. ಇದೀಗ ಬಳ್ಳಾರಿ ಶಾಸಕ ನಾಗೇಂದ್ರ ಅವರಿಗೆ ಜಾರಕಿಹೊಳಿ ಬ್ರದರ್ಸ್ ಸಚಿವ ಸ್ಥಾನ ಕೊಡಿಸಿದರೆ ತಾವೂ ಮೀಸೆ ಬೋಳಿಸುವುದಾಗಿ ಸ್ನೇಹಿತರ ಮುಂದೆ ಸವಾಲು ಎಸೆದಿದ್ದಾರೆ. ಅಲ್ಲದೇ ನಾಗೇಂದ್ರಗೆ ಸಚಿವ ಸ್ಥಾನ ನೀಡಿದರೆ ತಾವೂ ಉಳಿದ ಶಾಸಕರ ಸೇರಿ ಹೈಕಮಾಂಡ್ ಗೆ ತಮ್ಮ ಶಕ್ತಿ ಏನೆಂದು ತೋರಿಸಿ ಕೊಡುವುದಾಗಿ ಆನಂದ್ ಸಿಂಗ್ ಚಾಲೆಂಜ್ ಹಾಕಿದ್ದಾರೆ.

    ಸಚಿವ ಸ್ಥಾನದ ಪ್ರಬಲ ಆಕ್ಷಾಂಕಿಯಾಗಿದ್ದ ಆನಂದ್ ಸಿಂಗ್ ಬಳ್ಳಾರಿಗೆ ಸಚಿವ ಡಿಕೆ ಶಿವಕುಮಾರ್ ನನ್ನು ಸಚಿವರನ್ನಾಗಿ ನೇಮಿಸಿದ್ದಕ್ಕೆ ಅಸಮಾಧಾನಗೊಂಡಿದ್ದರು. ಇದೀಗ ಒಂದು ಕಾಲದಲ್ಲಿ ತಮ್ಮ ಆಪ್ತ ಸ್ನೇಹಿತರಾಗಿದ್ದ ಶಾಸಕ ನಾಗೇಂದ್ರಗೆ ಸಚಿವ ಸ್ಥಾನ ನೀಡಿದರೆ ತಾವೂ ಸುಮ್ಮನಿರಲ್ಲ ಅನ್ನೋ ಸಂದೇಶವನ್ನ ರವಾನಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಂಪುಟ ರಚನೆಯಲ್ಲಿ ಉ.ಕ ಅನ್ಯಾಯ, ಹೋರಾಟಕ್ಕೆ ನಾನು ಬದ್ಧ: ಸತೀಶ್ ಜಾರಕಿಹೊಳಿ

    ಸಂಪುಟ ರಚನೆಯಲ್ಲಿ ಉ.ಕ ಅನ್ಯಾಯ, ಹೋರಾಟಕ್ಕೆ ನಾನು ಬದ್ಧ: ಸತೀಶ್ ಜಾರಕಿಹೊಳಿ

    ಬೆಳಗಾವಿ: ಉತ್ತರ ಕರ್ನಾಟಕದ 4 ಜನ ಕಾಂಗ್ರೆಸ್ ಶಾಸಕರಿಗೆ ಮಾತ್ರ ಮಂತ್ರಿಗಿರಿ ನೀಡಿ, ಈ ಭಾಗದ ಶಾಸಕರಿಗೆ ಅನ್ಯಾಯ ಮಾಡಲಾಗಿದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.

    ಬೆಳಗಾವಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಮಾಜಿ ಸಚಿವರು, ಉತ್ತರ ಕರ್ನಾಟಕದಲ್ಲಿ ಒಟ್ಟು 40 ಜನ ಶಾಸಕರಿದ್ದಾರೆ. ಆದರೆ ಕೇವಲ 4 ಜನರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದ್ದು, ಉತ್ತರ ಕರ್ನಾಟಕದ ಶಾಸಕರಿಗೆ ಸಂಪುಟದಲ್ಲಿ ಅನ್ಯಾಯ ಮಾಡಲಾಗಿದೆ. ಈ ಕೂಡಲೇ ಕಾಂಗ್ರೆಸ್ ಪಕ್ಷದ ನಾಯಕರು ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

    ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗುವ ಕಾಲ ಇನ್ನೂ ಕೂಡಿಬಂದಿಲ್ಲ. ದಕ್ಷಿಣ ಕರ್ನಾಟಕದಷ್ಟೇ ಪ್ರಾಮುಖ್ಯತೆ, ಅಧಿಕಾರ ಮುಂಬೈ ಕರ್ನಾಟಕ, ಹೈದ್ರಾಬಾದ್ ಕರ್ನಾಟಕಕ್ಕೂ ಸಿಗಬೇಕು. ಮುಂದೆ ಯಾವುದೇ ಸರ್ಕಾರ ಬಂದರೂ ಇಂತಹ ಅನ್ಯಾಯ ಆಗಬಾರದು. ಉತ್ತರ ಕರ್ನಾಟಕದ ಭಾಗದಲ್ಲಿ ನಾಯಕತ್ವದ ಕೊರತೆಯಿದೆ. ಹೀಗಾಗಿ ಪದೇ ಪದೇ ಅನ್ಯಾಯವಾಗುತ್ತಿದೆ. ಕಾಂಗ್ರೆಸ್ ಸಂಸದೀಯ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಅವರು ಬೆಳೆದಂತೆ ಅನೇಕರು ಈ ಭಾಗದಲ್ಲಿ ಬೆಳೆಯಬೇಕು. ಆದರೆ ಈಗ ಸಚಿವ ಸ್ಥಾನ ಹಂಚಿಕೆಯಲ್ಲಿ ಆಗಿರುವ ಅನ್ಯಾಯದ ವಿರುದ್ಧ ಹೋರಾಡಿ ನ್ಯಾಯ ಒದಗಿಸಲು ನಾನು ಬದ್ಧವಾಗಿರುವೆ ಎಂದು ಹೇಳಿದರು.

    ಉತ್ತರ ಕರ್ನಾಟಕ ಭಾಗದಿಂದ ನನಗೆ ಕೆಪಿಸಿಸಿ ಅಧ್ಯಕ್ಷನಾಗುವ ಅವಕಾಶವಿತ್ತು. ಆದರೆ ಸದ್ಯಕ್ಕೆ ನಾನೇ ಬೇಡವೆಂದು, ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ಒಪ್ಪಿಕೊಳ್ಳುವುದಾಗಿ ಹೇಳಿರುವೆ. ಕೆಪಿಸಿಸಿ ಅಧ್ಯಕ್ಷರು ಯಾರೇ ನೇಮಕಗೊಂಡರು ಅವರಿಗೆ ನನ್ನ ಬೆಂಬಲವಿದೆ. ಕೆಪಿಸಿಸಿ ಅಧ್ಯಕ್ಷರಾದರೆ 5 ವರ್ಷ ರಾಜ್ಯ ಸುತ್ತಬೇಕು, ಪಕ್ಷ ಸಂಘಟನೆ ಮಾಡಬೇಕು. ಆದರೆ ಅಧ್ಯಕ್ಷ ಸ್ಥಾನದಲ್ಲಿದ್ದು, ಪಕ್ಷ ಸಂಘಟನೆ ಮಾಡುವ ಅವಶ್ಯಕತೆ ನನಗಿಲ್ಲ. ಸತೀಶ್ ಜಾರಕಿಹೊಳಿ ಅಂದ್ರೆ ಯಾರು ಅಂತಾ ರಾಜ್ಯದ ಜನರಿಗೆ ಗೊತ್ತಿದೆ ಎಂದು ಕಾಂಗ್ರೆಸ್ಸಿನ ಕೆಲ ನಾಯಕರಿಗೆ ಟಾಂಗ್ ಕೊಟ್ಟರು. ನಿಗಮ ಮಂಡಳಿಗೆ ಬೆಂಬಲಿಗರ ನೇಮಕ ವಿಚಾರವಾಗಿ ಪಟ್ಟಿ ಸಿದ್ಧವಾಗಿದೆ. ಅದನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.

  • ಕ್ಷೇತ್ರದ ಕಾರ್ಯಕರ್ತರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ: ಕೈ ಶಾಸಕ ಶಿವಳ್ಳಿ

    ಕ್ಷೇತ್ರದ ಕಾರ್ಯಕರ್ತರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ: ಕೈ ಶಾಸಕ ಶಿವಳ್ಳಿ

    ಬೆಂಗಳೂರು: ಉತ್ತರ ಕರ್ನಾಟಕ ಭಾಗದಲ್ಲಿ ಒಟ್ಟು 9 ಕಾಂಗ್ರೆಸ್ ಶಾಸಕರು ಜಯಗಳಿಸಿದ್ದೇವೆ. ಅವರಲ್ಲಿ ನಾನು ಹಿರಿಯ ಸ್ಥಾನದಲ್ಲಿದ್ದೆ. ಹೀಗಾಗಿ ನನಗೆ ಸಚಿವ ಸ್ಥಾನ ಸಿಗುತ್ತದೆ ಎನ್ನುವ ಭರವಸೆ ಇತ್ತು ಎಂದು ಶಾಸಕ ಎಸ್.ಸಿ.ಶಿವಳ್ಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಉತ್ತರ ಕರ್ನಾಟಕ ಭಾಗದ ಕುರುಬ ಸಮಾಜದ ಪ್ರಭಾವಿ ವ್ಯಕ್ತಿಯಾಗಿರುವೆ. ಅಲ್ಲದೇ ಕುಂದಗೋಳ ವಿಧಾನಸಭೆ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿರುವ ನನಗೆ ಸಚಿವ ಸ್ಥಾನ ಸಿಗುತ್ತದೆ ಎನ್ನುವ ಭರವಸೆ ಗಾಢವಾಗಿತ್ತು. ಆದರೆ ನನ್ನ ಹೆಸರು ಸಚಿವರ ಪಟ್ಟಿಯಲ್ಲಿ ಇಲ್ಲವೆಂದು ತಿಳಿದಿದ್ದು, ಭಾರೀ ನಿರಾಶೆ ಉಂಟಾಗಿದೆ ಎಂದು ಅವರು ಹೇಳಿದರು.

    ಮುಂದಿನ ಕ್ರಮದ ಬಗ್ಗೆ ಕ್ಷೇತ್ರ ಕಾರ್ಯಕರ್ತರ ಜೊತೆಗೆ ಚರ್ಚೆ ನಡೆಸುತ್ತೇನೆ. ಅಲ್ಲಿಯವರೆಗೆ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಮುಖಂಡರಲ್ಲಿ ಆತಂಕ ಮೂಡಿಸಿದ್ದಾರೆ.

    ಇತ್ತ ಕುಂದಗೋಳ ವಿಧಾನಸಭೆ ಕ್ಷೇತ್ರದ ಕಾರ್ಯಕರ್ತರು ಸಿ.ಎಸ್ ಶಿವಳ್ಳಿ ಅವರಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದು, ಪಕ್ಷದ ಮುಖಂಡರ ಜತೆ ಚರ್ಚೆಗೆ ಶಿವಳ್ಳಿ ನಕಾರ ವ್ಯಕ್ತಪಡಿಸಿದ್ದಾರೆ.

  • ನಾನು ನಾಳೆ ಸಚಿವನಾಗಲ್ಲ: ಪರೋಕ್ಷವಾಗಿ ಅಸಮಾಧಾನ ಪ್ರಕಟಿಸಿದ ಹೊರಟ್ಟಿ

    ನಾನು ನಾಳೆ ಸಚಿವನಾಗಲ್ಲ: ಪರೋಕ್ಷವಾಗಿ ಅಸಮಾಧಾನ ಪ್ರಕಟಿಸಿದ ಹೊರಟ್ಟಿ

    ಮೈಸೂರು: ನಾನು ನಾಳೆ ಸಚಿವನಾಗುವುದಿಲ್ಲ. ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ ಸಚಿವ ಸ್ಥಾನ ಹಂಚಿಕೆ ಮಾಡಲಾಗಿರುವ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲ ಎಂದು ಜೆಡಿಎಸ್‍ನ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.

    ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ನಿಂದ ಜಯಗಳಿಸಿರುವ 37 ಜನ ಶಾಸಕರು ಸಚಿವ ಸ್ಥಾನ ಬೇಕೆಂದು ಪಟ್ಟು ಹಿಡಿದರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸುವವರಿಗೆ ಹಾಗೂ ಹೊಸಬರಿಗೆ ಅವಕಾಶ ನೀಡಲೆಂದು ನಾನೇ ಸುಮ್ಮನಿರುವೆ ಎಂದು ತಿಳಿಸಿದರು.

    ಇದು ನನ್ನ ತ್ಯಾಗವಲ್ಲ, ಸರ್ಕಾರ ಸುಸೂತ್ರವಾಗಿ ನಡೆಯಲು ಅವಕಾಶ ಮಾಡಿಕೊಡುತ್ತಿರುವ ಪ್ರಕ್ರಿಯೆ ಅಷ್ಟೇ. ಹಿರಿಯರಾದ ಎಚ್.ವಿಶ್ವನಾಥ್ ಅವರಿಗೆ ಸಂಪುಟದಲ್ಲಿ ಅವಕಾಶವಿಲ್ಲ ಎನ್ನುವ ವಿಚಾರ ನನಗೆ ಗೊತ್ತಿಲ್ಲ. ಆದರೆ ನನ್ನ ಹೆಸರು ಪಟ್ಟಿಯಲ್ಲಿ ಇಲ್ಲ ಎಂಬುದು ಗೊತ್ತಾಗಿದೆ. ಸಚಿವ ಸ್ಥಾನ ನೀಡುವಂತೆ ನಾನು ಯಾವತ್ತೂ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿಕೊಂಡಿಲ್ಲ. ಅಲ್ಲದೇ ಅವರು ಕೂಡಾ ಈ ವಿಚಾರವಾಗಿ ನನ್ನ ಜೊತೆ ಚರ್ಚೆ ಮಾಡಿಲ್ಲ ಎಂದು ತಿಳಿಸಿದರು.

  • ನಾನು ಯಾರಿಗೂ ಸಚಿವ ಸ್ಥಾನ ಕೇಳಿಲ್ಲ, ವಿರೋಧಿಸಿಲ್ಲ: ಸತೀಶ್ ಜಾರಕಿಹೊಳಿ

    ನಾನು ಯಾರಿಗೂ ಸಚಿವ ಸ್ಥಾನ ಕೇಳಿಲ್ಲ, ವಿರೋಧಿಸಿಲ್ಲ: ಸತೀಶ್ ಜಾರಕಿಹೊಳಿ

    ಬೆಂಗಳೂರು: ನಾನು ಯಾರಿಗೂ ಸಚಿವ ಸ್ಥಾನ ನೀಡುವಂತೆ ಕೇಳಿಲ್ಲ. ಅಲ್ಲದೇ ಯಾರಿಗೂ ಸಚಿವ ಸ್ಥಾನ ನೀಡಬಾರದೆಂದು ವಿರೋಧ ವ್ಯಕ್ತಪಡಿಸಿಲ್ಲ ಎಂದು ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

    ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸಚಿವ ಸ್ಥಾನ ನೀಡುವ ವಿಚಾರದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತದ್ದೇ ಖಾತೆ ನೀಡುವಂತೆ ನಾನು ಬೇಡಿಕೆ ಇಟ್ಟಿಲ್ಲ. ಖಾತೆ ಹಂಚಿಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ತೀರ್ಮಾನಕ್ಕೆ ಬಿಟ್ಟಿದ್ದು ಎಂದು ಅವರು ತಿಳಿಸಿದರು.

    ಯಾವುದೇ ಖಾತೆ ಕೊಟ್ಟರೂ ನಿಭಾಯಿಸಲು ನಾನು ಸಿದ್ಧವಾಗಿರುವೆ. ಪಕ್ಷದಲ್ಲಿ ಹಿರಿಯರಿಗೆ ಸಚಿವ ಸ್ಥಾನ ಬೇಡ, ಹೊಸಬರಿಗೆ ಅವಕಾಶ ಮಾಡಿಕೊಡು ಎನ್ನುವ ಚರ್ಚೆ ಪಕ್ಷದಲ್ಲಿ ನಡೆಯುತ್ತಿದೆ. ಆದರೆ ಹಿರಿಯರಿಗೂ ಸಚಿವ ಸ್ಥಾನ ನೀಡುವುದು ಅನಿವಾರ್ಯ. ನಾನು ಕೆಪಿಸಿಸಿ ಅಧ್ಯಕ್ಷ ಹುದ್ದೆ ಆಕಾಂಕ್ಷಿಯಾಗಿಲ್ಲ, ಈ ಕುರಿತು ಎಲ್ಲಿಯೂ ಬೇಡಿಕೆಯಿಟ್ಟಿಲ್ಲ ಎಂದು ಅವರು ಹೇಳಿದರು.

  • ನಾನು ಕುಮಾರಸ್ವಾಮಿ ಈಗಲೂ ಫ್ರೆಂಡ್ಸ್ – ಎಚ್‍ಡಿಕೆ ಹೇಳಿದ್ರೆ ನಾನೇ ಬಸ್ ಡ್ರೈವರ್ : ಜಮೀರ್ ಅಹ್ಮದ್

    ನಾನು ಕುಮಾರಸ್ವಾಮಿ ಈಗಲೂ ಫ್ರೆಂಡ್ಸ್ – ಎಚ್‍ಡಿಕೆ ಹೇಳಿದ್ರೆ ನಾನೇ ಬಸ್ ಡ್ರೈವರ್ : ಜಮೀರ್ ಅಹ್ಮದ್

    ಬೆಂಗಳೂರು: ಪಕ್ಷದ ನಾಯಕರ ಮೇಲೆ ಸಚಿವ ಸ್ಥಾನಕ್ಕಾಗಿ ಯಾವುದೇ ಒತ್ತಡ ಹೇರಿಲ್ಲ, ನನ್ನ ಸಾಮರ್ಥ್ಯ ಗುರುತಿಸಿ ಸಚಿವ ಸ್ಥಾನ ನೀಡಿದರೆ ಬೇಡ ಎನ್ನುವುದಿಲ್ಲ ಎಂದು ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

    ಇಂದು ಉಪಮುಖ್ಯಮಂತ್ರಿ ಪರಮೇಶ್ವರ್ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಉತ್ತಮ ಸರ್ಕಾರ ನೀಡುವುದು ನಮ್ಮ ಗುರಿಯಾಗಿದ್ದು, ಸಚಿವ ಸ್ಥಾನಕ್ಕಾಗಿ ಪರಮೇಶ್ವರ್ ಅಥವಾ ಯಾವುದೇ ನಾಯಕರ ಮೇಲೆ ಒತ್ತಡ ಹಾಕಿಲ್ಲ ಎಂದರು.

    ಇದೇ ವೇಳೆ ಸಿಎಂ ಕುಮಾರಸ್ವಾಮಿ ಅವರ ಜೊತೆ ಕಾರ್ಯನಿರ್ವಹಿಸುವ ಕುರಿತ ಪ್ರಶ್ನೆಗೆ ಉತ್ತರಿಸಿ, ನಾನು ಕುಮಾರಸ್ವಾಮಿ ಈಗಲೂ ಫ್ರೆಂಡ್ಸ್. ನಮ್ಮದು ಹಳೆಯ ದೋಸ್ತಿ. ಕುಮಾರಸ್ವಾಮಿ ಅವರು ಈಗಲೂ ಬಸ್ ತಗೊಂಡು ಬಾ ಎಂದರೆ ನಾನೇ ಸ್ವತಃ ಡ್ರೈವರ್ ಎಂದು ಹೇಳಿ ನಗು ಬೀರಿದ್ದಾರೆ. ಅಂದಹಾಗೇ ಜಮೀರ್ ಅಹ್ಮದ್ ಖಾನ್ ಅಲ್ಪಸಂಖ್ಯಾತ ಕೋಟಾದಡಿ ಸಚಿವ ಸ್ಥಾನದ ರೇಸ್ ನಲ್ಲಿದ್ದಾರೆ.

    ಜೆಡಿಎಸ್ ನಿಂದ ರೇಬಲ್ ಶಾಸಕರಾಗಿ ಕಾಂಗ್ರೆಸ್ ಸೇರಿದ್ದ ಜಮೀರ್ ಅಹಮ್ಮದ್ ಖಾನ್ ಚುನಾವಣೆಯಲ್ಲಿ ಗೆದ್ದು ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದರು. ಬಹುಮತ ಸಾಬೀತು ಪಡಿಸುವ ವೇಳೆ ಬರೊಬ್ಬರಿ 2 ವರ್ಷಗಳ ಬಳಿಕ ಕುಮಾರಸ್ವಾಮಿ ಅವರ ಜೊತೆ ಕಾಣಿಸಿಕೊಂಡಿದ್ದರು. ಈ ವೇಳೆ ತಾವು ಕಾಂಗ್ರೆಸ್ ಪಕ್ಷದಲ್ಲೇ ಉಳಿಯಲಿದ್ದು, ಪಕ್ಷದ ತೀರ್ಮಾನ ಮೇಲೆ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿರುವುದಾಗಿ ತಿಳಿಸಿದ್ದರು.

  • ಐವರು ಧಾರ್ಮಿಕ ನಾಯಕರಿಗೆ  ಮಂತ್ರಿಸ್ಥಾನ ನೀಡಿದ ಮಧ್ಯಪ್ರದೇಶ ಸರ್ಕಾರ

    ಐವರು ಧಾರ್ಮಿಕ ನಾಯಕರಿಗೆ ಮಂತ್ರಿಸ್ಥಾನ ನೀಡಿದ ಮಧ್ಯಪ್ರದೇಶ ಸರ್ಕಾರ

    ಭೋಪಾಲ್: ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಮಧ್ಯಪ್ರದೇಶ ಸರ್ಕಾರ ಐದು ಮಂದಿ ಹಿಂದೂ ಧಾರ್ಮಿಕ ಮುಖಂಡರಿಗೆ ರಾಜ್ಯ ದರ್ಜೆಯ ಮಂತ್ರಿ ಸ್ಥಾನವನ್ನು ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ.

    ಕಂಪ್ಯೂಟರ್ ಬಾಬಾ, ನರ್ಮಾನಂದ ಮಹಾರಾಜ್, ಹರಿಹರನಂದ ಮಹಾರಾಜ್, ಭೈಯು ಮಹಾರಾಜ್‍ಜಂದ್ ಹಾಗೂ ಪಂಡಿತ್ ಯೋಗೇಂದ್ರ ಮಹಂತ್ ಅವರಿಗೆ ಮಧ್ಯಪ್ರದೇಶ ಸರ್ಕಾರ ಮಂತ್ರಿ ಸ್ಥಾನವನ್ನು ಕಲ್ಪಿಸಿದೆ.

    ಈ ಐದು ಮಂದಿಗೆ ನರ್ಮದಾ ನದಿಯ ಸಂರಕ್ಷಣಾ ಸಮಿತಿ ಸದಸ್ಯ ಸ್ಥಾನಮಾನವನ್ನು ನೀಡಲು ಮಾರ್ಚ್ ತಿಂಗಳಿನಲ್ಲಿ ಕ್ಯಾಬಿನೆಟ್ ಒಪ್ಪಿಗೆ ನೀಡಿತ್ತು. ಹೀಗಾಗಿ ಕೆಲಸ ನಿರ್ವಹಿಸಲು ಸಹಾಯವಾಗುವಂತೆ ಇವರಿಗೆ ಮಂತ್ರಿ ಸ್ಥಾನವನ್ನು ನೀಡಲಾಗಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯ ಕಾಂಗ್ರೆಸ್, ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಸಿಎಂ ಶಿವರಾಜ್ ಚೌಹಾಣ್ ಸರ್ಕಾರ ಕೆಲವರನ್ನು ಸಂತೃಪ್ತಿಗೊಳಿಸುವ ಉದ್ದೇಶದಿಂದ ಈ ಕ್ರಮಕೈಗೊಂಡಿದೆ. ಉತ್ತರ ಪ್ರದೇಶದಲ್ಲಿ ಇಂತಹ ಕ್ರಮಕೈಗೊಂಡ ಕಾರಣ ಏನಾಗಿತ್ತು ಎಂಬುದನ್ನು ಇವರು ತಿಳಿಯಬೇಕಿದೆ ಎಂದು ಆರೋಪಿಸಿದೆ.

    ವಿರೋಧಿ ಪಕ್ಷಗಳ ಆರೋಪಗಳನ್ನು ನಿರಕಾರಿಸಿರುವ ಮಧ್ಯಪ್ರದೇಶ ಬಿಜೆಪಿ ಪಕ್ಷದ ವಕ್ತಾರ ರಜನೀಶ್, ಸರ್ಕಾರವು ನಿಯಮಾವಳಿ ಪ್ರಕಾರವೇ ಕಾರ್ಯನಿರ್ವಹಿಸುತ್ತಿದೆ. ಧಾರ್ಮಿಕ ನಾಯಕರಿಗೆ ನೀಡಿರುವ ಮಂತ್ರಿಸ್ಥಾನಮಾನ ನರ್ಮದಾ ನದಿಯ ಅಭಿವೃದ್ಧಿ ಕಾರ್ಯ ನಡೆಸಲು ನೆರವಾಗುತ್ತದೆ. ಅಲ್ಲದೇ ಜನರನ್ನು ಈ ಕಾರ್ಯದಲ್ಲಿ ಭಾಗವಹಿಸುವಂತೆ ಮಾಡಲು ಧಾರ್ಮಿಕ ಮುಖಂಡರು ಕಾರ್ಯನಿರ್ವಹಿಸುತ್ತಾರೆ ಎಂದು ಹೇಳಿದ್ದಾರೆ.

    ರಾಜ್ಯ ಸರ್ಕಾರ ಕ್ರಮವನ್ನು ಸಮರ್ಥಿಸಿಕೊಂಡಿರುವ ಕಂಪ್ಯೂಟರ್ ಬಾಬಾ ನಮ್ಮ ಕಾರ್ಯಕ್ಕೆ ತಕ್ಕ ಸ್ಥಾನ ನೀಡಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ಕೆಲ ದಿನಗಳ ಹಿಂದೆ ಕಂಪ್ಯೂಟರ್ ಬಾಬಾ ನರ್ಮದಾ ಯೋಜನೆ ನಿರ್ಮಾಣ ಕಾರ್ಯದಲ್ಲಿ ಉಂಟಾಗಿರುವ ವ್ಯಾಪಕ ಭ್ರಷ್ಟಚಾರದ ಕುರಿತು ಯಾತ್ರೆ ನಡೆಸಿ ಜಾಗೃತಿ ಕಾರ್ಯ ನಡೆಸುವುದಾಗಿ ಹೇಳಿಕೆ ನೀಡಿದ್ದರು.