Tag: minister Nawab Malik

  • ಕಂಗನಾ ವಿರುದ್ಧ ಶಿಸ್ತು ಕ್ರಮ: ನವಾಬ್‌ ಮಲಿಕ್‌ ಎಚ್ಚರಿಕೆ

    ಕಂಗನಾ ವಿರುದ್ಧ ಶಿಸ್ತು ಕ್ರಮ: ನವಾಬ್‌ ಮಲಿಕ್‌ ಎಚ್ಚರಿಕೆ

    ಮುಂಬೈ: ಕಾನೂನಿಗಿಂತ ಯಾರು ಮೇಲಲ್ಲ ಎಂದು ಬಾಲಿವುಡ್‌ ನಟಿ ಕಂಗನಾ ರಣಾವತ್‌ ವಿರುದ್ಧ ಮಹಾರಾಷ್ಟ್ರ ಸಚಿವ ನವಾಬ್‌ ಮಲಿಕ್‌ ವಾಗ್ದಾಳಿ ನಡೆಸಿದ್ದಾರೆ.

    ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಖಲಿಸ್ತಾನಿಗಳಿಗೆ ಹಾಗೂ ಸಿಖ್‌ ಸಮುದಾಯವನ್ನು ಉಗ್ರರಿಗೆ ಹೋಲಿಸಿ ವಿವಾದಕ್ಕೆ ಕಾರಣವಾಗಿರುವ ಕಂಗನಾ ವಿರುದ್ಧ ಸಚಿವ ಮಲಿಕ್‌ ಗರಂ ಆಗಿದ್ದಾರೆ. ಅಲ್ಲದೇ ಕಂಗನಾ ಅವರಿಗೆ ಒದಗಿಸಿರುವ ಭದ್ರತೆ ಕುರಿತು ಟೀಕಾಪ್ರಹಾರ ನಡೆಸಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ವೇಗಿ ಭುವನೇಶ್ವರ್ ದಂಪತಿಗೆ ಹೆಣ್ಣು ಮಗು ಜನನ

    ಕಂಗನಾ ಅವರು ಎಲ್ಲರನ್ನೂ ನಿಂದಿಸುತ್ತಿದ್ದಾರೆ. ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರನ್ನು ಅವಮಾನಿಸಿದ್ದಾರೆ. 1947ರಲ್ಲಿ ಸಿಕ್ಕ ಸ್ವಾತಂತ್ರ್ಯ ಭಿಕ್ಷೆ ಎಂದಿದ್ದಾರೆ. ಅಲ್ಲದೇ ಹಲವು ಸಮುದಾಯಗಳ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಸಚಿವರು ಟೀಕಿಸಿದ್ದಾರೆ.

    ಕಂಗನಾ ಅವರ ಹೇಳಿಕೆಗಳು ಸ್ವೀಕಾರಾರ್ಹವಲ್ಲ. ಕಾನೂನಿಗಿಂತ ಯಾರೂ ಮಿಗಿಲಲ್ಲ. ಕಂಗನಾ ಅವರಿಗೆ ಝಡ್‌ ಶ್ರೇಣಿಯ ಭದ್ರತೆ ಕಲ್ಪಿಸಿರಬಹುದು. ಭದ್ರತೆಯಿಂದ ಕಾನೂನಿನ ರಕ್ಷಣೆ ಸಾಧ್ಯವಿಲ್ಲ. ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ಮೊದಲ ಮೊಹಬ್ಬತ್ ರಾಹುಲ್ ದ್ರಾವಿಡ್ ಎಂದ ಬಾಲಿವುಡ್ ನಟಿ

    ಭಾರತದ ಸ್ವಾತಂತ್ರ್ಯ, ಮಹಾತ್ಮ ಗಾಂಧಿ ಅವರ ಅಹಿಂಸಾ ಮಾರ್ಗ, ರೈತರ ಪ್ರತಿಭಟನೆ, ಸಿಖ್‌ ಸಮುದಾಯದವರ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ನಟಿ ಕಂಗನಾ ರಣಾವತ್‌ ಅವರು ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

  • ಡ್ರಗ್ ಕೇಸ್ – ಮಹಾರಾಷ್ಟ್ರದ ಸಚಿವರ ಸೋದರಳಿಯ ಅರೆಸ್ಟ್

    ಡ್ರಗ್ ಕೇಸ್ – ಮಹಾರಾಷ್ಟ್ರದ ಸಚಿವರ ಸೋದರಳಿಯ ಅರೆಸ್ಟ್

    – ಡ್ರಗ್ಸ್ ಡೀಲರ್ ಜೊತೆ ವ್ಯವಹಾರ

    ಮುಂಬೈ: ಮಹಾರಾಷ್ಟ್ರದ ಸಚಿವ ನವಾಬ್ ಮಲ್ಲಿಕ್ ಸೋದರಳಿಯ ಸಮೀರ್ ಖಾನ್‍ರನ್ನು ಎನ್‍ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಬುಧವಾರ ಬೆಳಗ್ಗೆ ವಿಚಾರಣೆಗೆಂದು ಕರೆಸಿದ್ದ ಅವರನ್ನು ಹಲವು ವಿಚಾರಣೆಗಳ ಬಳಿಕ ಇದೀಗ ಬಂಧಿಸಿದ್ದಾರೆ.

    ಬ್ರಿಟಿಷ್ ಮೂಲದ ಕರಣ್ ಸಜ್ನಾನಿ ಎಂಬಾತನ ಜೊತೆ ಸಮೀರ್ ಖಾನ್ 20 ಸಾವಿರ ರೂ.ಯಷ್ಟು ವ್ಯವಹಾರ ನಡೆಸಿದ ಹಿನ್ನೆಲೆ ವಿಚಾರಣೆಗೆ ಕರೆಸಲಾಗಿತ್ತು. ಕಳೆದ ವಾರ ಕರಣ್ ಮತ್ತು ಇಬ್ಬರು ಮಹಿಳೆಯರನ್ನ ಪೊಲೀಸರು ಬಂಧಿಸಿ, ಮೂವರ ಬಳಿಯಲ್ಲಿದ್ದ 200 ಕೆಜಿ ಡ್ರಗ್ಸ್ ವಶಕ್ಕೆ ಪಡೆದುಕೊಂಡಿದ್ದರು.

    ಕಳೆದ ವಾರ ಬಾಂದ್ರಾ ವೆಸ್ಟ್‍ಗೆ ಕೊರಿಯರ್ ಮೂಲಕ ಬಂದ ಗಾಂಜಾವನ್ನ ಅಧಿಕಾರಿಗಳು ವಶಪಡಿಕೊಂಡು ತನಿಖೆ ನಡೆಸಿದ್ದರು. ತನಿಖೆಯಲ್ಲಿ ಕರಣ್ ಗಾಂಜಾ ಆಮದು ಮಾಡಿಕೊಳ್ಳುತ್ತಿರುವ ವಿಷಯ ಬೆಳಕಿಗೆ ಬಂದಿತ್ತು. ಎನ್‍ಡಿಪಿಎಸ್ ಕಾಯ್ದೆ ಅಡಿ ಎನ್‍ಸಿಬಿ ಅಧಿಕಾರಿಗಳು ರಹಿಲ್ ಫರ್ನಿಚರ್ ವಾಲಾ, ಸಹಿಸ್ತಾ ಫರ್ನಿಚರ್ ವಾಲಾ ಮತ್ತು ರಾಮ್ ಕುಮಾರ್ ಅಲಿಯಾಸ್ ಪಾನ್‍ವಾಲಾನನ್ನು ಬಂಧಿಸಿದ್ದರು.

    ಕರಣ್ ವಿಚಾರಣೆ ವೇಳೆ ಡ್ರಗ್ಸ್ ವ್ಯವಹಾರದಲ್ಲಿ ಸಮೀರ್ ಖಾನ್ ಪಾತ್ರವೂ ಕಂಡು ಬಂದ ಹಿನ್ನೆಲೆ ಎನ್‍ಸಿಬಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಸುದೀರ್ಘ ವಿಚಾರಣೆ ಬಳಿಕ ಸಮೀರ್ ಖಾನ್ ನನ್ನ ಬಂಧಿಸಲಾಗಿದೆ.