Tag: minister H.D.Revanna

  • ಬರಿಗಾಲಿನಲ್ಲಿಯೇ ಜೆಪಿ ಭವನಕ್ಕೆ ಬಂದ ಹೆಚ್.ಡಿ.ರೇವಣ್ಣ

    ಬರಿಗಾಲಿನಲ್ಲಿಯೇ ಜೆಪಿ ಭವನಕ್ಕೆ ಬಂದ ಹೆಚ್.ಡಿ.ರೇವಣ್ಣ

    ಬೆಂಗಳೂರು: ದೇವರ ಅನುಗ್ರಹದಿಂದ ಸರ್ಕಾರ ನಡೆಯುತ್ತಿದೆ ಎಂದು ಹೇಳಿಕೊಂಡು ಬಂದಿರುವ ಸಚಿವ ಹೆಚ್.ಡಿ.ರೇವಣ್ಣ ಭಾನುವಾರ ಶಾಸಕಾಂಗ ಸಭೆಗೆ ಬರಿಗಾಲಿನಲ್ಲಿ ಆಗಮಿಸಿದ್ದಾರೆ.

    ಇಂದು ಜೆಪಿ ಭವನದಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಶಾಸಕಾಂಗ ಸಭೆ ನಡೆಯುತ್ತಿದೆ. ಜೆಡಿಎಸ್‍ನ ಎಲ್ಲ ಶಾಸಕರು, ವಕ್ತಾರರು ಜೆಪಿ ಭವನಕ್ಕೆ ಆಗಮಿಸಿದ್ದು, ಸಿಎಂ ಬರುವಿಕೆಗಾಗಿ ಕಾಯುತ್ತಿದ್ದಾರೆ. ವಿದೇಶ ಪ್ರವಾಸದಿಂದ ಆಗಮಿಸಿರುವ ಸಿಎಂ ನೇರವಾಗಿ ತಾಜ್ ವೆಸ್ಟ್ ಎಂಡ್ ಹೋಟೆಲ್‍ಗೆ ತೆರಳಿದ್ದು ಕೆಲವೇ ಕ್ಷಣಗಳಲ್ಲಿ ಜೆಪಿ ಭವನಕ್ಕೆ ಆಗಮಿಸಲಿದ್ದಾರೆ.

    ಜೆಪಿ ಭವನಕ್ಕೆ ದೇವೇಗೌಡರು ಆಗಮಿಸುತ್ತಿದ್ದಂತೆ ಕೆಲ ಜೆಡಿಎಸ್ ಕಾರ್ಯಕರ್ತರು ರಾಜೀನಾಮೆ ನೀಡಿರುವ ಹೆಚ್.ವಿಶ್ವನಾಥ್, ನಾರಾಯಾಣ ಗೌಡ ಮತ್ತು ಗೋಪಾಲಯ್ಯ ವಿರುದ್ಧ ಘೋಷಣೆಗಳನ್ನು ಕೂಗಿದರು. ದೇವೇಗೌಡರು ಎಲ್ಲ ಕಾರ್ಯಕರ್ತರಿಗೂ ಶಾಂತವಾಗಿರುವಂತೆ ಸೂಚಿಸಿ ಒಳನಡೆದರು.

  • ನಾನು ಸಿಎಂ, ಡಿಸಿಎಂ ಹುದ್ದೆ ರೇಸ್‍ನಲ್ಲಿಲ್ಲ: ಸಚಿವ ರೇವಣ್ಣ

    ನಾನು ಸಿಎಂ, ಡಿಸಿಎಂ ಹುದ್ದೆ ರೇಸ್‍ನಲ್ಲಿಲ್ಲ: ಸಚಿವ ರೇವಣ್ಣ

    – ರೇಸ್ ನಡೆಸೋಕೆ ನಮ್ಮ ಬಳಿ ಕುದುರೆಗಳೇ ಇಲ್ಲ
    – ಬಿಜೆಪಿ ಅವ್ರಿಗೆ ಲೆಕ್ಕ ಹಾಕೋಕೆ ಬರೊಲ್ಲ

    ಬೆಂಗಳೂರು: ನಾನು ಸಿಎಂ ಅಥವಾ ಡಿಸಿಎಂ ಹುದ್ದೆ ರೇಸ್‍ನಲ್ಲಿಲ್ಲ. ಪಕ್ಷ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನೀಡಿದ ಜವಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ ಎಂದು ಲೋಕೋಪಲೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ರೇಸ್ ನಡೆಸಲು ನಮ್ಮ ಬಳಿ ಕುದುರೆಗಳೇ ಇಲ್ಲ. ಇನ್ನು ಎಲ್ಲಿಂದ ರೇಸ್‍ನಲ್ಲಿ ನಿಲ್ಲುವುದು. ನನಗೆ ನೀಡಿರುವ ಸಚಿವ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ ಎಂದು ನಗೆ ಬೀರಿದರು.

    ಕಾಂಗ್ರೆಸ್-ಜೆಡಿಎಸ್ ಮೈತ್ರಿಯು 18ರಿಂದ 20 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತದೆ. ಜೆಡಿಎಸ್ 5ರಿಂದ 6 ಸೀಟು ಗೆಲ್ಲುತ್ತದೆ. 7 ಸೀಟು ಗೆದ್ದರೂ ಆಶ್ಚರ್ಯ ಪಡಬೇಡಿ. ಆದರೆ ಬಿಜೆಪಿಯವರಿಗೆ ಲೆಕ್ಕ ಹಾಕುವುದಕ್ಕೆ ಬರುವುದಿಲ್ಲ ಎಂದು ವ್ಯಂಗ್ಯವಾಡಿದರು.

    ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಎಲ್ಲರೂ ಮೇ 23ರ ನಂತರ ಸಮಾಧಾನ ಆಗುತ್ತಾರೆ. ನಾನು ಹೇಳಿದ್ದು ಯಾವತ್ತು ಸುಳ್ಳು ಆಗಿಲ್ಲ. ಯಡಿಯೂರಪ್ಪ ತಿರುಪತಿಗೆ ಹೋಗಿದ್ದರು. ಜಗದೀಶ್ ಶೆಟ್ಟರ್ ಅವರಿಗೂ ಪಂಡರಾಪುರಕ್ಕೆ ಹೋಗುವುದಕ್ಕೆ ಹೇಳಿ. ಬಿಜೆಪಿಯವರು ಎಷ್ಟೇ ಡೇಟ್ ಕೊಟ್ಟರು ಸರ್ಕಾರಕ್ಕೆ ಬೀಳಲ್ಲ ಎಂದು ಭವಿಷ್ಯ ನುಡಿದರು.

    ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಬಗ್ಗೆ ಪ್ರಧಾನಿ ಮೋದಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ರಾಜೀವ್ ಗಾಂಧಿಯವರು ಕರ್ನಾಟಕಕ್ಕೆ ಅನೇಕ ಕೊಡುಗೆ ಕೊಟ್ಟಿದ್ದಾರೆ. ಆ ಕೊಡುಗೆ ದೇವೇಗೌಡ ಅವರಿಗೆ ಗೊತ್ತಿದೆ. ಕಾಲ ಬಂದಾಗ ಅವರ ಕೆಲಸದ ಬಗ್ಗೆ ಹೇಳುತ್ತೇನೆ. ರಾಜೀವ್ ಗಾಂಧಿ ಅವರು ಪ್ರಾಮಾಣಿಕ ರಾಜಕಾರಣಿ ಎಂದರು.

  • ಎಚ್‍ಡಿಡಿ ಪೂಜೆ ರಹಸ್ಯ ತಿಳಿಸಿದ ಸಚಿವ ರೇವಣ್ಣ

    ಎಚ್‍ಡಿಡಿ ಪೂಜೆ ರಹಸ್ಯ ತಿಳಿಸಿದ ಸಚಿವ ರೇವಣ್ಣ

    – ಬಿಎಸ್‍ವೈಗೆ ತಿರುಗೇಟು ನೀಡಿದ ಸಚಿವರು
    – ಸುಮ್ಮನೆ ಪ್ರಚಾರ ಕೊಟ್ರೆ ಬೇಡ ಅನ್ನೋಕೆ ಆಗುತ್ತಾ?

    ಬೆಂಗಳೂರು: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಮೊಮ್ಮಕ್ಕಳ ಗೆಲುವಿಗಾಗಿ ಪೂಜೆ ಮಾಡಿಸಿಲ್ಲ. ಅವರ ತಾಯಂದಿರಿಗೆ ಸದ್ಗತಿ ಸಿಗಲೆಂದು ದೇವರ ಮೊರೆಹೋಗಿದ್ದಾರೆ ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ದೇವೇಗೌಡರಿಗೆ ಇಬ್ಬರು ತಾಯಂದಿರು. ಅವರು ಪ್ಲೇಗ್‍ನಿಂದ ಮೃತಪಟ್ಟಿದ್ದರು. 60-70 ವರ್ಷವಾದರೂ ಪೂಜೆ ಮಾಡಿಸಿರಲಿಲ್ಲವಂತೆ. ಹೀಗಾಗಿ ತಾಯಂದಿರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಚಿಕ್ಕಮಗಳೂರಿನ ಕಾಪು ಬಳಿ ಪೂಜೆ ಮಾಡಿಸಿದ್ದಾರೆ ಎಂದು ಹೇಳಿದರು.

    ರೇವಣ್ಣ ಎಲ್ಲಾ ಕೆಲಸದಲ್ಲೂ ಮೂಗು ತೂರಿಸುತ್ತಾರೆ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಹುಬ್ಬಳ್ಳಿಯಲ್ಲಿ ಯಡಿಯೂರಪ್ಪ ಅಳಿಯನನ್ನೆ ಹಾಕಿಕೊಟ್ಟಿದ್ದೇನೆ. ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಕೇಳಿದವರನ್ನು ಕೇಳಿದ ಜಾಗಕ್ಕೆ ಹಾಕಿಕೊಟ್ಟಿದ್ದೇನೆ. ಬೇಕಾದರೆ ಅವರನ್ನೇ ಕೇಳಿ. ಬಿ.ಎಸ್.ಯಡಿಯೂರಪ್ಪನವರಿಗೆ ಅರಳು-ಮರಳು. ಪಾಪ ಅವರಿಗೆ ವಯಸ್ಸಾಗಿದೆ. ಅದಕ್ಕೆ ಏನೇನು ಮಾತನಾಡುತ್ತಿದ್ದಾರೆ ಎಂದು ತಿರುಗೇಟು ಕೊಟ್ಟರು.

    ನಾನು ಯಾವುದೇ ಕಳ್ಳ ವೋಟ್ ಹಾಕಿಸಿಲ್ಲ. ದೇವರಾಜ್ ಎಂತಹ ವ್ಯಕ್ತಿ ಅಂತ ತಿಳಿದುಕೊಂಡು ಮಾತನಾಡಿ. ದೂರು ಕೊಟ್ಟವರ ಮೇಲೆ ಎರಡು ಪ್ರಕರಣ ದಾಖಲಾಗಿವೆ. ಮತದಾನ ದಿನ ನಾನು ಮಾಧ್ಯಮಗಳ ಜೊತೆಗಿದ್ದೆ. ಸೂರಜ್ ಮಗನ ಕೈಯಲ್ಲಿ ವೋಟ್ ಹಾಕಿಸಿದ್ದಾರೆ ಅಂತ ಹೇಳಿದ್ದಾರೆ. ಸೂರಜ್‍ಗೆ ಮಗನೇ ಇಲ್ಲ. ಈ ಸಂಬಂಧ ಯಾವುದೇ ನೊಟೀಸ್ ಆಯೋಗದಿಂದ ಬಂದಿಲ್ಲ. ಯಾವುದೇ ತನಿಖೆ ಮಾಡಿಕೊಳ್ಳಲಿ. ನಾನು ತಪ್ಪು ಮಾಡಿಲ್ಲ ಎಂದು ಹೇಳಿದರು.

    ನಾನು ಕಳ್ಳ ವೋಟ್ ಹಾಕಿಸಿದ ವಿಡಿಯೋ ಇದ್ದರೆ ಕೊಡಲಿ. ಕುಟುಂಬ ಸಮೇತ ಬಂದು ಮತದಾನ ಮಾಡಿದ್ದೇನೆ. ಬೂತ್‍ನಲ್ಲಿ ಕೇಂದ್ರ ಮೀಸಲು ಪಡೆಯಿತ್ತು. ಕಳ್ಳ ವೋಟ್ ಹಾಕಿಸುತ್ತಿದ್ದರೆ ಅವರ ಮೂಲಕ ನಮ್ಮನ್ನ ತಡೆಯಬಹುದಿತ್ತು. ಯಾಕೆ ತಡೆಯಲಿಲ್ಲ ಎಂದು ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದರು.

    ಹೆಚ್‍ಎಂಟಿ (ಹಾಸನ, ಮಂಡ್ಯ, ತುಮಕೂರು) ಬಗ್ಗೆ ಮಾತಾಡದೆ ಕೆಲವರಿಗೆ ಸಮಾಧಾನ ಆಗುವುದಿಲ್ಲ. ಸುಮ್ಮನೆ ಪ್ರಚಾರ ಕೊಟ್ಟರೆ ಬೇಡ ಎನ್ನುವುದಕ್ಕೆ ಆಗುತ್ತಾ? ಈ ವಿಷಯದಲ್ಲಿ ಮಾಧ್ಯಮಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹೆಚ್‍ಎಂಟಿ ದೆಹಲಿಗೆ ಹೋಗೋದು ಗ್ಯಾರಂಟಿ ಎಂದು ಭವಿಷ್ಯ ನುಡಿದರು.

  • ಎಚ್‍ಡಿಡಿ, ರೇವಣ್ಣ, ಕುಮಾರಸ್ವಾಮಿ ದಾದಾಗಳಾ: ಕೆ.ಎಸ್.ಈಶ್ವರಪ್ಪ ಪ್ರಶ್ನೆ

    ಎಚ್‍ಡಿಡಿ, ರೇವಣ್ಣ, ಕುಮಾರಸ್ವಾಮಿ ದಾದಾಗಳಾ: ಕೆ.ಎಸ್.ಈಶ್ವರಪ್ಪ ಪ್ರಶ್ನೆ

    ಚಿತ್ರದುರ್ಗ: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಸಿಎಂ ಕುಮಾರಸ್ವಾಮಿ ದಾದಾಗಳಾ? ಸಚಿವ ರೇವಣ್ಣ ಅವರದ್ದು ಕೇವಲ ಬೊಗಳೆ ಹೇಳಿಕೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಎಚ್.ಡಿ.ದೇವೇಗೌಡ ಅವರನ್ನು ಮುಟ್ಟಿದರೆ ಉಳಿಯಲ್ಲ ಎಂಬ ಸಚಿವ ರೇವಣ್ಣ ಹೇಳಿಕೆಗೆ ತಿರುಗೇಟು ಕೊಟ್ಟರು. ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳ ದಾಳಿ ವೇಳೆ ಕೋಟ್ಯಂತರ ರೂ. ನಗದು, ಅಕ್ರಮ ಆಸ್ತಿ ಪತ್ತೆಯಾಗಿದೆ. ಅದರ ಬಗ್ಗೆ ಸಿಎಂ ಹಾಗೂ ಸಚಿವರು ಏನು ಹೇಳುತ್ತಾರೆ. ಇವತ್ತು ಐಟಿ ಅಧಿಕಾರಿಗಳ ಕೈಗೆ ಸಿಕ್ಕಿಹಾಕಿಕೊಂಡವರು ಹಾಳಾಗುತ್ತಾರೋ ಅಥವಾ ಯಾರು ಹಾಳಾಗ್ತಾರೋ ನೋಡೋಣ. ಆದರೆ ಐಟಿ ದಾಳಿ ರಾಜಕೀಯ ಪ್ರೇರಿತ ಎನ್ನುವ ಆರೋಪ ಸರಿಯಲ್ಲ ಎಂದು ಹೇಳಿದರು.

    ಸಿಎಂ ಕುಮಾರಸ್ವಾಮಿ ಅವರು ಐಟಿ ದಾಳಿಯ ಬಗ್ಗೆ ಮಂಡ್ಯದಲ್ಲಿ ಬುಧವಾರವೇ ಹೇಳಿದ್ದಾರೆ. ಈ ಮೂಲಕ ಗೌಪ್ಯತೆ ಕಾಪಾಡುವಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕುಮಾರಸ್ವಾಮಿ ಅವರು ಸುಪ್ರೀಂಕೋರ್ಟ್ ಹಾಗೂ ಸಂವಿಧಾನಕ್ಕೆ ಬೆಲೆ ಕೊಡುವ ಜನರಲ್ಲ. ಹೀಗಾಗಿ ಸಿಎಂ ಸ್ಥಾನದಿಂದ ವಜಾಗೊಳಿಸಲು ರಾಜ್ಯಪಾಲರಿಗೆ ಒತ್ತಾಯಿಸುತ್ತೇವೆ ಎಂದರು.

    ಐಟಿ ದಾಳಿಯ ಬಗ್ಗೆ ಬಹಿರಂಗ ಹೇಳಿಕೆ ನೀಡುವ ಮೂಲಕ ಸಿಎಂ ಕುಮಾರಸ್ವಾಮಿ ಅವರು ಕಳ್ಳರಿಗೆ ಬೆಂಬಲ ನೀಡಿದ್ದಾರೆ. ಆದರೂ ದಾಳಿಯ ವೇಳೆ ಅನೇಕರ ಮನೆಯಲ್ಲಿ ಕಂತೆ ಕಂತೆ ನೋಟುಗಳು ಸಿಕ್ಕಿವೆ. ಹೀಗಿದ್ದರೂ ಐಟಿ ದಾಳಿಯ ವಿರುದ್ಧ ಕಾಂಗ್ರೆಸ್-ಜೆಡಿಎಸ್ ನಾಯಕರು ಧರಣಿ ಮಾಡಿದ್ದು ಸಂವಿಧಾನ ವಿರೋಧಿ ನಡೆಯಾಗಿದೆ. ಕಳ್ಳರನ್ನು ರಕ್ಷಿಸುತ್ತಿರುವುದು ಅಕ್ಷಮ್ಯ. ಸರ್ವಾಧಿಕಾರಿ ಧೋರಣೆ ಪ್ರಜಾಪ್ರಭುತ್ವದಲ್ಲಿ ನಡೆಯುವುದಿಲ್ಲ ಎಂದು ಮೈತ್ರಿ ನಾಯಕರ ವಿರುದ್ಧ ಕಿಡಿಕಾರಿದರು.

    ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೂ, ನಡವಳಿಕೆಗೂ ಸಂಬಂಧವೇ ಇಲ್ಲ. ಅವರು ಪ್ರತಿ ಬಾರಿಯೂ ಸುಳ್ಳಾಗುತ್ತದೆ ಎಂದು ದೂರಿದರು.

  • ದುರುದ್ದೇಶದಿಂದ ಹೇಳಿಲ್ಲ: ತಮ್ಮ ಹೇಳಿಕೆಯನ್ನ ಸಮರ್ಥಿಸಿಕೊಂಡ ರೇವಣ್ಣ

    ದುರುದ್ದೇಶದಿಂದ ಹೇಳಿಲ್ಲ: ತಮ್ಮ ಹೇಳಿಕೆಯನ್ನ ಸಮರ್ಥಿಸಿಕೊಂಡ ರೇವಣ್ಣ

    ಬೆಂಗಳೂರು: ಪತಿ, ಮಾಜಿ ಸಚಿವ ಅಂಬರೀಶ್ ಸತ್ತು ಇನ್ನೂ ಒಂದೂವರೆ ತಿಂಗಳಾಗಿಲ್ಲ. ಸುಮಲತಾ ಅವರಿಗೆ ಇದೆಲ್ಲ ಬೇಕಿತ್ತಾ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿಕೆ ನೀಡಿದ್ದರು. ಈಗ ಈ ಹೇಳಿಕೆಯನ್ನು ರೇವಣ್ಣ ಅವರು ಸಮರ್ಥಿಸಿಕೊಂಡಿದ್ದಾರೆ.

    ಈ ಬಗ್ಗೆ ಮಾತನಾಡಿದ ರೇವಣ್ಣ ಅವರು, ನಾನು ಸುಮಲತಾ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ನಾನು ದುರುದ್ದೇಶದಿಂದ ಈ ರೀತಿ ಹೇಳಿಲ್ಲ. ಅವರು ಆ ರೀತಿ ಬರುವುದು ಏಕೆ ಎಂದು ಹೇಳಿದ್ದು ಅಷ್ಟೇ. ಹಿಂದೂ ಸಂಸ್ಕೃತಿ ಬಗ್ಗೆ ಹೇಳಿದೆ ಅಷ್ಟೇ. ಹಾಗಾಂತ ಅವರು ರಾಜಕೀಯಕ್ಕೆ ಬರುವುದು ಬೇಡ ಎಂದು ನಾನು ಹೇಳಿಲ್ಲ. ರಾಜಕೀಯಕ್ಕೆ ಬರುವುದಕ್ಕೆ ಎಲ್ಲರೂ ಸ್ವತಂತ್ರರು. ಅವರು ಚುನಾವಣೆಗೆ ನಿಲ್ಲುತ್ತಾರೋ ಅಥವಾ ಇಲ್ಲವೋ ಅದು ಅವರಿಷ್ಟ ಎಂದು ರೇವಣ್ಣ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಗಂಡ ಸತ್ತು ಒಂದೂವರೆ ತಿಂಗಳಾಗಿಲ್ಲ, ಇದೆಲ್ಲಾ ಬೇಕಾ?: ಸುಮಲತಾ ವಿರುದ್ಧ ರೇವಣ್ಣ ಕಿಡಿ

    ಕೆಟ್ಟ ಉದ್ದೇಶದಿಂದ ನಾನು ಈ ಹೇಳಿಕೆಯನ್ನು ನೀಡಿಲ್ಲ. ರಾಜಕೀಯಕ್ಕೆ ಎಂಟ್ರಿ ಕೊಡೋದು ಬಿಡೋದು ಅವರ ಇಷ್ಟ. ನಾನು ಅವರನ್ನು ಬೈದಿಲ್ಲ. ಅವರಿಗೆ ನಾನು ಏಕೆ ಬೈಯಬೇಕು. ಅಲ್ಲದೇ ಅವರು ಮಂಡ್ಯದಿಂದ ನಿಲ್ಲುತ್ತೇನೆ ಎಂದು ಅವರೇ ಸ್ವತಃ ಹೇಳಿದ್ದಾರೆ.

    ಸಚಿವ ರೇವಣ್ಣ ಅಂಬರೀಶ್ ಸತ್ತು ಇನ್ನೂ ಒಂದೂವರೆ ತಿಂಗಳಾಗಿಲ್ಲ. ಸುಮಲತಾ ಅವರಿಗೆ ಇದೆಲ್ಲ ಬೇಕಿತ್ತಾ. ಸಿಎಂ ಕುಮಾರಸ್ವಾಮಿ ಅವರು ಅಂಬರೀಶ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಿಕೊಟ್ಟರು. ಆದರೆ ಸುಮಲತಾ ಅವರಿಗೆ ಯಾವುದೇ ಕೃತಜ್ಞತೆಯೂ ಇಲ್ಲ. ಸುಮಲತಾ ಅವರು ಚಾಲೆಂಜ್ ಮಾಡುತ್ತಿದ್ದಾರೆ. ಇದನ್ನ ನಾವು ಎದುರಿಸಲು ಸಿದ್ಧರಾಗಿದ್ದೇವೆ ಎಂದು ವಾಗ್ದಾಳಿ ನಡೆಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಂಡ ಸತ್ತು ಒಂದೂವರೆ ತಿಂಗಳಾಗಿಲ್ಲ, ಇದೆಲ್ಲಾ ಬೇಕಾ?: ಸುಮಲತಾ ವಿರುದ್ಧ ರೇವಣ್ಣ ಕಿಡಿ

    ಗಂಡ ಸತ್ತು ಒಂದೂವರೆ ತಿಂಗಳಾಗಿಲ್ಲ, ಇದೆಲ್ಲಾ ಬೇಕಾ?: ಸುಮಲತಾ ವಿರುದ್ಧ ರೇವಣ್ಣ ಕಿಡಿ

    ಬೆಂಗಳೂರು: ಪತಿ, ಮಾಜಿ ಸಚಿವ ಅಂಬರೀಶ್ ಸತ್ತು ಇನ್ನೂ ಒಂದೂವರೆ ತಿಂಗಳಾಗಿಲ್ಲ. ಸುಮಲತಾ ಅವರಿಗೆ ಇದೆಲ್ಲ ಬೇಕಿತ್ತಾ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.

    ಸಿಎಂ ಕುಮಾರಸ್ವಾಮಿ ಅವರು ಅಂಬರೀಶ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಿಕೊಟ್ಟರು. ಆದರೆ ಸುಮಲತಾ ಅವರಿಗೆ ಯಾವುದೇ ಕೃತಜ್ಞತೆಯೂ ಇಲ್ಲ. ಸುಮಲತಾ ಅವರು ಚಾಲೆಂಜ್ ಮಾಡುತ್ತಿದ್ದಾರೆ. ಇದನ್ನ ನಾವು ಎದುರಿಸಲು ಸಿದ್ಧರಾಗಿದ್ದೇವೆ ಎಂದು ವಾಗ್ದಾಳಿ ನಡೆಸಿದರು. ಇದನ್ನು ಓದಿ: ರಾತ್ರಿ ಬಿಜೆಪಿ ಮುಖಂಡರನ್ನು ಭೇಟಿ ಮಾಡಿದ್ರು ಸುಮಲತಾ..!

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಸುಮಲತಾ ಅವರು, ಈ ರೀತಿಯ ಟೀಕೆಗಳು ರಾಜಕಾರಣದಿಂದ ಹೊರತಾಗಿಲ್ಲ. ಕೆಲವರು ವೈಯಕ್ತಿಕ ವಿಚಾರಗಳನ್ನೇ ಬಳಸಿಕೊಂಡು ವಾಗ್ದಾಳಿ ನಡೆಸುತ್ತಾರೆ. ಇದು ಅವರಿಗೆ ಅಭ್ಯಾಸವಾಗಿರುತ್ತದೆ. ಇದಕ್ಕೆ ನಾನು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ. ಇದು ನಮ್ಮ ಸಂಸ್ಕಾರವೂ ಅಲ್ಲ. ಅಂಬರೀಶ್ ಅವರು 25 ವರ್ಷ ರಾಜಕೀಯದಲ್ಲಿ ಇದ್ದರೂ ಯಾರೊಬ್ಬರ ವಿರುದ್ಧವೂ ಟೀಕೆ ಮಾಡಲಿಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ. ಇದನ್ನು ಓದಿ: ದರ್ಶನ್ ಇರುವಾಗ ಅಲ್ಲಿ ನಾನ್ಯಾಕೆ- ಸುಮಲತಾ ರಾಜಕೀಯ ಎಂಟ್ರಿ ಬಗ್ಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ

    ಈ ರೀತಿಯ ಟೀಕೆಗಳಿಗೆ ಜನರೇ ಉತ್ತರ ನೀಡುತ್ತಾರೆ. ನನಗೆ ರಾಜಕಾರಣಕ್ಕಿಂತ ಸಂಬಂಧಗಳೇ ಮುಖ್ಯ. ಈ ನಿಟ್ಟಿನಲ್ಲಿ ನಾನು ರಾಜಕಾರಣಕ್ಕೆ ಬಂದಿದ್ದೇನೆ. ಮಂಡ್ಯದ ಜನರ ಜೊತೆಗೆ ಅಂಬರೀಶ್ ಹಾಗೂ ನನಗೆ ಋಣಾನುಬಂಧವಿದೆ ಎಂದು ಹೇಳಿದರು.

    ನನ್ನ ವಿರುದ್ಧ ಟೀಕೆ ಮಾಡಿದರೂ ಜನರು ಮಾತ್ರ ನನ್ನ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ. ಚುನಾವಣೆಯಲ್ಲಿ ಮತದಾರರ ಬೆಂಬಲ ಮುಖ್ಯ. ಹೀಗಾಗಿ ನನಗೆ ಯಾವುದೇ ಹೆದರಿಕೆಯಿಲ್ಲ. ನನ್ನ ವಿರುದ್ಧ ಟೀಕೆ ಮಾಡುವವರು ತಿಳಿದು ಮಾತನಾಡಬೇಕು ಎಂದು ಕಿಡಿಕಾರಿದರು.

    ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಅಂಬರೀಶ್ ತಂದೆ ಸ್ಥಾನದಲ್ಲಿ ಕಾಣುತ್ತಿದ್ದರು. ಹೀಗಾಗಿ ಅವರ ಕುಟುಂಬದವರ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ. ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರಿಗೆ ಪಕ್ಷದಿಂದ ಮೆಚ್ಚುಗೆ ಬೇಕಿತ್ತು. ಹೀಗಾಗಿ ನನ್ನ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಅವರ ಹೇಳಿಕೆಗೆ ನಾನು ಬೇಜಾರು ಮಾಡಿಕೊಳ್ಳಲ್ಲ ಎಂದು ತಿರುಗೇಟು ಕೊಟ್ಟರು.

    ಅಂಬರೀಶ್ ಅವರು ಸ್ವಾರ್ಥ, ದ್ವೇಷ ರಾಜಕಾರಣ ಮಾಡಿಲ್ಲ. ಇತ್ತ ನನ್ನ ಬೆಂಬಲಕ್ಕೆ ಮಂಡ್ಯದ ಜನತೆ ನಿಂತಿದೆ. ನಾನು ರಾಜಕೀಯಕ್ಕೆ ಬಂದಿದ್ದ ಕಾರಣವೇ ಜನರು. ಯಾರನ್ನೂ ದ್ವೇಷಿಸುವ, ಎದುರು ಹಾಕಿಕೊಳ್ಳುವ ಉದ್ದೇಶದಿಂದ ರಾಜಕೀಯಕ್ಕೆ ಬಂದಿಲ್ಲ. ನಾನು ಯಾರಿಗೂ ಸವಾಲು ಹಾಕಿಲ್ಲ ಎಂದು ತಿಳಿಸಿದರು.

    ಬಿಜೆಪಿ ಮುಖಂಡರನ್ನು ಭೇಟಿ ಮಾಡಿದ ಕುರಿತು ಪ್ರತಿಕ್ರಿಯೆ ನೀಡಿದ ಸುಮಲತಾ ಅವರು, ಮಂಡ್ಯದ ಸಮಸ್ಯೆಗಳ ಕುರಿತು ಮೀರಾ ಶಿವಲಿಂಗಯ್ಯ ಅವರು ಸಲಹೆ ನೀಡಿದ್ದಾರೆ. ಇದರ ಹೊರತಾಗಿ ನಾವು ರಾಜಕೀಯ ವಿಚಾರವಾಗಿ ಮಾತನಾಡಿಲ್ಲ. ಮಂಡ್ಯ ಅಭಿವೃದ್ಧಿಯ ಕುರಿತು ಕೆಲವು ಸಲಹೆ ನೀಡಿದ್ದಾರೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಜ್ಯದಲ್ಲಿ ಹೈಡ್ರಾಮ – ಯಾವುದೇ ಚಿಂತೆಯಿಲ್ಲದೇ ವಿದೇಶಕ್ಕೆ ಹಾರಿದ ರೇವಣ್ಣ

    ರಾಜ್ಯದಲ್ಲಿ ಹೈಡ್ರಾಮ – ಯಾವುದೇ ಚಿಂತೆಯಿಲ್ಲದೇ ವಿದೇಶಕ್ಕೆ ಹಾರಿದ ರೇವಣ್ಣ

    ಬೆಂಗಳೂರು: ಆಪರೇಷನ್ ಕಮಲ, ರೆಸಾರ್ಟ್ ರಾಜಕೀಯದಿಂದಾಗಿ ರಾಜ್ಯದಲ್ಲಿ ಸರ್ಕಾರ ಇದೆಯೇ ಇಲ್ಲವೇ ಎನ್ನುವ ಪ್ರಶ್ನೆಯನ್ನು ಜನ ಕೇಳುತ್ತಿದ್ದಾರೆ. ಈ ಮಧ್ಯೆ ಸೂಪರ್ ಸಿಎಂ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದಾರೆ.

    ಸಹೋದರ ಸಿಎಂ ಕುಮಾರಸ್ವಾಮಿ ನೇತೃತ್ವದ ಸರ್ಕಾರಕ್ಕೆ ಗಂಡಾಂತರ ಎದುರಾಗಿದ್ದಕ್ಕೆ ಸಚಿವರು ಯಾವುದೇ ರೀತಿಯ ಟೆನ್ಶನ್ ತಗೆದುಕೊಂಡಿಲ್ಲ. ರಾಜಕೀಯ ಜಂಜಾಟವೇ ಬೇಡ ಅಂತ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಸಚಿವ ರೇವಣ್ಣ ಅವರು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾರೆ. ಸಚಿವರು ಒಂದು ವಾರ ಕಾಲ ಅಲ್ಲಿ ಅಧ್ಯಯನ ನಡೆಸಿ ಮರಳಲಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಲಭ್ಯವಾಗಿದೆ.

    ವಿದೇಶಕ್ಕೆ ಹಾರಿದ್ದನ್ನು ಕಂಡು ಸರ್ಕಾರ ಉಳಿಯುತ್ತೆ ಅಂತಾ ಯಾರಾದ್ರೂ ರೇವಣ್ಣಗೆ ಜ್ಯೋತಿಷ್ಯ ಹೇಳಿದ್ರಾ? ಹೆಚ್‍ಡಿ ರೇವಣ್ಣಗೆ ಸರ್ಕಾರ ಬೀಳಲ್ಲ ಎನ್ನುವ ಅಚಲ ನಂಬಿಕೆ ಬಂದುಬಿಟ್ಟಿದ್ಯಾ ಎನ್ನುವ ಪ್ರಶ್ನೆ ಈಗ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಎಂ ಯಾಕೆ ಕ್ಷಮೆ ಕೇಳ್ಬೇಕು ಅಂತಾ ಪ್ರಶ್ನಿಸಿ ಮಾಧ್ಯಮಗಳ ಮೇಲೆ ರೇವಣ್ಣ ಕಿಡಿ

    ಸಿಎಂ ಯಾಕೆ ಕ್ಷಮೆ ಕೇಳ್ಬೇಕು ಅಂತಾ ಪ್ರಶ್ನಿಸಿ ಮಾಧ್ಯಮಗಳ ಮೇಲೆ ರೇವಣ್ಣ ಕಿಡಿ

    ಬೆಂಗಳೂರು: ಏನ್ರೀ ತಪ್ಪು? ಯಾವ್ ಮಹಿಳೆಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವಮಾನ ಮಾಡಿಲ್ಲ. ಹೀಗಿರುವಾಗ ಅವರು ಯಾಕೆ ಕ್ಷಮೆ ಕೇಳಬೇಕು ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಪ್ರಶ್ನಿಸಿ ಕಿಡಿಕಾರಿದ್ದಾರೆ.

    ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವರು, ಮಹಿಳೆಗೆ ತಾಯಿ ಅಂತ ಕುಮಾರಸ್ವಾಮಿ ಅವರು ಪದ ಬಳಸಿಯೇ ಮಾತನಾಡಿದ್ದಾರೆ. ಆದರೆ ಅವರ ಹೇಳಿಕೆಯನ್ನು ತಿರುಚಲಾಗಿದೆ. ಇದು ನಾಲ್ಕು ಕ್ಷೇತ್ರಗಳಲ್ಲಿ ಸೋತಿರುವ ಬಿಜೆಪಿ ಷಡ್ಯಂತ್ರ. ಅವರಿಗೆ ಮಾನ ಮರ್ಯಾದೆ ಇದ್ದರೆ, ರೈತರ ಸಮಸ್ಯೆಗಳ ಬಗ್ಗೆ ಕಾಳಜಿ ಇದ್ದರೆ ಕೇಂದ್ರ ಸರ್ಕಾರದಿಂದ ಅನುದಾನ ತರುವ ಕೆಲಸ ಮಾಡಲಿ ಎಂದು ಆರೋಪಿಸಿದರು.

    ಬೆಳಗ್ಗೆಯಿಂದ ಚಾನೆಲ್‍ಗಳಲ್ಲಿ ಮೈತ್ರಿ ಸರ್ಕಾರವನ್ನು ಹಾಕೊಂಡು ಕುಟ್ಟಿದ್ದೀರಿ. ನಾವು ಯಾರಿಗೂ ಹೆದರಿಕೊಳ್ಳಲ್ಲ ಎಂದ ಸಚಿವರು, ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ನೀಡುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅವರು ರಾಜೀನಾಮೆ ನೀಡುವುದಿಲ್ಲ. ನನ್ನ ಬಳಿ ಯಾವುದೇ ಸಕ್ಕರೆ ಕಾರ್ಖಾನೆ ಇಲ್ಲ. ಒಂದು ವೇಳೆ ಇದ್ದಿದ್ದರೆ ಉಚಿತವಾಗಿ ಬರೆದುಕೊಡುತ್ತಿದ್ದೆ. ಯಾವುದೇ ಸಚಿವರು ರೈತರ ಹಣ ಬಾಕಿ ಉಳಿಸಿಕೊಂಡಿಲ್ಲ. ಹಾಗೆನಾದರೂ ಇದ್ದರೆ ನಾಳೆ ಚರ್ಚಿಸಿ ಬಾಕಿ ವಾಪಸ್ ಕೊಡಿಸ್ತೀವಿ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಎಚ್‍ಡಿಕೆ ಬಳಿ ನೋಟ್ ಮುದ್ರಣ ಮಾಡೋ ಯಂತ್ರ ಇದೆಯೇ – ಕಬ್ಬು ಬೆಳೆಗಾರರ ಹೋರಾಟದ ಬಗ್ಗೆ ರೇವಣ್ಣ ವ್ಯಂಗ್ಯ

    ಎಚ್‍ಡಿಕೆ ಬಳಿ ನೋಟ್ ಮುದ್ರಣ ಮಾಡೋ ಯಂತ್ರ ಇದೆಯೇ – ಕಬ್ಬು ಬೆಳೆಗಾರರ ಹೋರಾಟದ ಬಗ್ಗೆ ರೇವಣ್ಣ ವ್ಯಂಗ್ಯ

    ಮಂಡ್ಯ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಏನ್ ಪ್ರಿಂಟ್ ಮಾಡುವ ಮಿಷನ್ ಇಟ್ಟಿದ್ದಾರಾ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು, ಕಬ್ಬು ಬೆಳೆಗಾರರ ಹೋರಾಟದ ಕುರಿತು ವ್ಯಂಗ್ಯವಾಗಿ ಮಾತನಾಡಿದ್ದಾರೆ.

    ನಗರದಲ್ಲಿ ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟದ ಕುರಿತು ಮಾತನಾಡಿದ ಅವರು, ಎಲ್ಲದಕ್ಕೂ ಸಿಎಂ ಕುಮಾರಸ್ವಾಮಿ ಅವರನ್ನೇ ಹಿಡಿದುಕೊಂಡರೆ ಹೇಗೆ? ಕಬ್ಬು ಬೆಳೆಗಾರರಿಗೆ ಸಮಸ್ಯೆ ಇರುವುದು ರಾಷ್ಟ್ರಕ್ಕೆ ಗೊತ್ತಿದೆ. ರೈತರನ್ನು ಸಂಕಷ್ಟಕ್ಕೆ ಬಿಡಬಾರದು ಹಾಗೇ ಕಾರ್ಖಾನೆಗಳ ಬಗ್ಗೆ ಕೂಡ ಯೋಚಿಸಬೇಕು. ಪ್ರತಿಭಟನಕಾರರು ಕಾರ್ಖಾನೆ ಸುಡುವುದು, ಕಬ್ಬು ಪೂರೈಕೆ ತಡೆಯುವುದು ಸರಿಯಲ್ಲ ಎಂದು ಸಚಿವರು ಹೇಳಿದರು.

    ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ ನೀಡುವ ಕುರಿತು ಕೇಂದ್ರ ಸರ್ಕಾರ ಮಧ್ಯೆ ಪ್ರವೇಶ ಮಾಡಬೇಕು. ಈ ಪ್ರತಿಭಟನೆ ಹಿಂದೆ ಯಾರು ಇದ್ದಾರೆ ಎನ್ನುವುದು ನಮಗೆ ಗೊತ್ತಿದೆ. ಎಲ್ಲದಕ್ಕೂ ರಾಜ್ಯ ಸರ್ಕಾರವನ್ನು ದೂರುವುದು ಸರಿಯಲ್ಲ. ರಾಜ್ಯ ಸರ್ಕಾರದ ಬಳಿ ನೋಟ್ ಮುದ್ರಣ ಮಾಡುವ ಯಂತ್ರ ಇದೆಯೇ ಎಂದು ರೇವಣ್ಣ ಪ್ರಶ್ನೆ ಮಾಡಿದರು. ಇದನ್ನು ಓದಿ: ನಾಲ್ಕು ವರ್ಷದಿಂದ ಎಲ್ಲಿ ಮಲಗಿದ್ದೆ- ಪ್ರತಿಭಟನಾ ನಿರತ ಮಹಿಳೆಗೆ ಏಕವಚನದಲ್ಲಿ ಸಿಎಂ ಕಿಡಿ

    ಇದೇ ವೇಳೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಸಿಎಂ ಆಗಬೇಕು ಎನ್ನುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಯಾರು ಸಿಎಂ ಆಗಬೇಕು ಎನ್ನುವುದು ನನಗೆ ಸಂಬಂಧವಿಲ್ಲದ ವಿಚಾರ. ಅದು ಏನಿದ್ದರೂ ಪಕ್ಷದ ವರಿಷ್ಠರು ನಿರ್ಧಾರ ಮಾಡುತ್ತಾರೆ. ಇದು ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬಿಟ್ಟ ವಿಚಾರ ಎಂದ ಸಚಿವರು, ನಾನು ಶಾಸಕ ಶ್ರೀರಾಮುಲು ಬಗ್ಗೆ ಮಾತನಾಡಲ್ಲ. ಅವರೊಬ್ಬ ದೊಡ್ಡ ನಾಯಕರು ಎಂದು ವ್ಯಂಗ್ಯವಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಬಿಎಸ್‍ವೈ ತಿರುಗಾಡಿದಷ್ಟು ನಾವು ದೇವಸ್ಥಾನಕ್ಕೆ ಹೋಗಿಲ್ಲ: ಟೆಂಪಲ್ ರನ್ ಸಮರ್ಥಿಸಿಕೊಂಡ ರೇವಣ್ಣ

    ಬಿಎಸ್‍ವೈ ತಿರುಗಾಡಿದಷ್ಟು ನಾವು ದೇವಸ್ಥಾನಕ್ಕೆ ಹೋಗಿಲ್ಲ: ಟೆಂಪಲ್ ರನ್ ಸಮರ್ಥಿಸಿಕೊಂಡ ರೇವಣ್ಣ

    ಬೆಂಗಳೂರು: ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ತಿರುಗಾಡಿದಷ್ಟು ನಾವು ದೇವಸ್ಥಾನಕ್ಕೆ ಹೋಗಿಲ್ಲ. ಕುಲದೇವರಿಗೆ ಹೋಗಿ ಪೂಜೆ ಮಾಡಬಾರದೇ ಎಂದು ಲೋಕೋಪಯೋಗಿ ಸಚಿವ ರೇವಣ್ಣ ಪ್ರಶ್ನಿಸಿ ಬಿಎಸ್‍ವೈಗೆ ಟಾಂಗ್ ಕೊಟ್ಟಿದ್ದಾರೆ.

    ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಟೆಂಪಲ್ ರನ್ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ನಮ್ಮ ಮನೆ ದೇವರಿಗೆ ಪೂಜೆ ಮಾಡುವುದು ತಪ್ಪಾ? ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಜಮ್ಮು-ಕಾಶ್ಮೀರದ ವೈಷ್ಣವಿ ದೇವಿ ದೇವಸ್ಥಾನಕ್ಕೆ ಹೋಗಿದ್ದರು. ನಾವು ಇನ್ನು ಅಲ್ಲಿಯವರೆಗೆ ಹೋಗಿಲ್ಲ, ಇಲ್ಲಿಯ ದೇವರನ್ನು ಅಷ್ಟೇ ನೋಡುತ್ತಿದ್ದೇವೆ. ಅವರಂತೆ ದೇಶದ ಹಾಗೂ ರಾಜ್ಯದ ವಿವಿಧ ದೇವಸ್ಥಾನಗಳಿಗೆ ಹೋಗಿಲ್ಲ ಎಂದು ಕಾಲೆಳೆದರು.

    ಕುಮಾರಸ್ವಾಮಿ 42 ದೇವಸ್ಥಾನಕ್ಕೆ ಹೋಗಿದ್ದರಿಂದಲೇ ರಾಜ್ಯದಲ್ಲಿ ಉತ್ತಮ ಮಳೆ, ಬೆಳೆ, ರೈತರ ಸಾಲ ಮನ್ನಾ ಆಗುತ್ತಿದೆ ಎಂದು ತಮ್ಮ ಟೆಂಪಲ್ ರನ್ ಸಮರ್ಥಿಸಿಕೊಂಡರು.

    ಚುನಾವಣೆ ಬಂದಾಗ ರಾಜಕಾರಣ ಮಾಡೋಣ. ಪ್ರಧಾನಿ ನರೇಂದ್ರ ಮೋದಿಗೆ ಮಧ್ಯಪ್ರವೇಶಿಸಿ ಮಹದಾಯಿ ಸಮಸ್ಯೆಯನ್ನು ಇತ್ಯರ್ಥ ಮಾಡುಬೇಕೆಂದು ರಾಜ್ಯದ 17 ಜನ ಬಿಜೆಪಿ ಸಂಸದರು ಹಾಗೂ ಬಿಎಸ್ ಯಡಿಯೂರಪ್ಪ ಕೇಳಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡ ಸಚಿವರು, ನಾವು 36.5 ಟಿಎಂಸಿ ನೀರು ಕೇಳಿದ್ದೇವು. ಆದರೆ ನಮಗೆ ಸೂಕ್ತ ನ್ಯಾಯ ಸಿಕ್ಕಿಲ್ಲ ಎಂದು ಪ್ರತಿಕ್ರಿಯಿಸಿದರು.

    ಮಳೆಯಿಂದಾಗಿ ರಸ್ತೆಗಳು ಹಾಳಾಗಿದ್ದು, ಜನ ಸಾಮಾನ್ಯರಿಗೆ ತೊಂದರೆಯಾಗದಂತೆ ಶೀಘ್ರ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಅಧಿಕಾರಿಗಳು ಸ್ಥಳದಲ್ಲಿಯೇ ಇದ್ದು ಪರಿಸ್ಥಿತಿಯನ್ನು ನಿಭಾಯಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಣಕ್ಕೆ ಯಾವುದೇ ಚಿಂತೆಬೇಡವೆಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ರಸ್ತೆಯ ಮೇಲೆ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿಯಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿತ್ತು. ಶೀಘ್ರವೇ ರಸ್ತೆ ದುರಸ್ತಿಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇನೆ ಎಂದು ಸಚಿವರು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv