Tag: Minister for Medical Education

  • ಬೇರೊಬ್ಬರ ಬಿಡಿಎ ಸೈಟ್ ಮೇಲೆ ಸಚಿವರ ಕಣ್ಣು – ಅಧಿಕಾರ ಬಳಸಿ ಶರಣ್‍ಪ್ರಕಾಶ್ ಪಾಟೀಲ್ ದರ್ಪ

    ಬೇರೊಬ್ಬರ ಬಿಡಿಎ ಸೈಟ್ ಮೇಲೆ ಸಚಿವರ ಕಣ್ಣು – ಅಧಿಕಾರ ಬಳಸಿ ಶರಣ್‍ಪ್ರಕಾಶ್ ಪಾಟೀಲ್ ದರ್ಪ

    ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವರಾದ ಶರಣ್ ಪ್ರಕಾಶ್ ಪಾಟೀಲ್ ಯಾರದ್ದೋ ಬಿಡಿಎ ಸೈಟನ್ನ ನನಗೆ ಕೊಡಿ ಅಂತಿದ್ದಾರೆ. 30/40 ಬೇಡ 50/80 ಸೈಟು ಕೊಡಿ ಅಂತ ದುಂಬಾಲು ಬಿದ್ದಿದ್ದಾರೆ.

    ಬೆಂಗಳೂರಿನ ಹೆಚ್‍ಬಿಆರ್ ಲೇಔಟ್‍ನ 1ನೇ ಹಂತದಲ್ಲಿ ಸಚಿವರಿಗೆ 40/60 ಸೈಟ್ ಹಂಚಿಕೆಯಾಗಿತ್ತು. ಅದನ್ನ ರಿಜಿಸ್ಟರ್ ಕೂಡ ಮಾಡಿಕೊಂಡ್ರು. ಆದ್ರೆ ಸಚಿವರು ಈಗ ನನಗೆ ಆ ಸೈಟ್ ಬೇಡ, ಹೆಚ್‍ಎಸ್‍ಆರ್ ಲೇಔಟ್‍ನಲ್ಲಿರೋ ಸರ್ವೇ ನಂಬರ್ 1089ಎ ನಲ್ಲಿರುವ ಕುಮಾರ್ ಅನ್ನೋರ 50/80 ಸೈಟನ್ನು ಬದಲಿ ನಿವೇಶನವಾಗಿ ಕೊಡಿ ಅಂತ ಬಿಡಿಎಗೆ ಒತ್ತಡ ಹಾಕ್ತಿದ್ದಾರೆ. ಮಿನಿಸ್ಟರ್ ಪವರ್ ಬಳಸಿಕೊಂಡು ಮಾಲೀಕನೇ ತನ್ನ ಸೈಟ್ ಬಳಿ ಹೋಗದಂತೆ ಪೊಲೀಸರನ್ನೇ ನಿಯೋಜಿಸಿದ್ದಾರೆ.

    ಕೆಲ ಅಧಿಕಾರಿಗಳು ಒಂದು ಬಾರಿ ಹಂಚಿಕೆಯಾಗಿರೋ ಸೈಟ್ ಕ್ಯಾನ್ಸಲ್ ಮಾಡಿ ಬೇರೆ ಕಡೆ ಕೊಡೋದಕ್ಕೆ ಆಗಲ್ಲ ಎಂದು ವರದಿ ನೀಡಿದ್ದಾರೆ. ಈ ವರದಿಯಿಂದ ಕೆಂಡಾಮಂಡಲರಾಗಿರೋ ಸಚಿವರು ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಅವರಿಗೆ ಫೋನ್ ಮಾಡಿ ನನಗೆ ಆ ಸೈಟ್ ಬೇಕೆ ಬೇಕು ಅಂತ ಆವಾಜ್ ಹಾಕಿದ್ದಾರಂತೆ. ಆದ್ರೆ ಬಿಡಿಎ ಕಾಯ್ದೆ ಪ್ರಕಾರ ಈ ರೀತಿ ಸೈಟ್‍ಗಳನ್ನು ಹಂಚಿಕೆ ಮಾಡಲು ಸಾಧ್ಯವಿಲ್ಲ.

    ಸಚಿವರ ಆವಾಜ್‍ಗೆ ಬೆದರಿರೋ ಸೈಟ್ ಮಾಲೀಕ ಕುಮಾರ್ ಮಾಧ್ಯಮಗಳ ಮುಂದೆಯೂ ಬರ್ತಿಲ್ಲ.