Tag: minister aanjaneya

  • ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಸಚಿವ ಆಂಜನೇಯ ಘಟನೆಗೆ ಟ್ವಿಸ್ಟ್

    ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಸಚಿವ ಆಂಜನೇಯ ಘಟನೆಗೆ ಟ್ವಿಸ್ಟ್

    ದಾವಣಗೆರೆ: ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಸಚಿವ ಆಂಜನೇಯ ಘಟನೆಗೆ ಇದೀಗ ಟ್ವಿಸ್ಟ್ ದೊರೆತಿದೆ.

    ಹೌದು. ತಮ್ಮ ಕ್ಷೇತ್ರದ ಮತದಾರರ ಸಿಟ್ಟಿನಿಂದ ತಪ್ಪಿಸಿಕೊಳ್ಳಲು ಸಚಿವರು ಹೀಗೆ ಮಾಡಿದ್ದಾರೆ ಅನ್ನೋ ಮಾತುಗಳು ಇದೀಗ ಕೇಳಿಬರುತ್ತಿದೆ. ಸಚಿವರು ಶನಿವಾರ ಹೊಳಲ್ಕೆರೆಯಲ್ಲಿ ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ ಭರಮಸಾಗರ ಹೋಬಳಿ ವ್ಯಾಪ್ತಿಯ ಇಸಾಮುದ್ರ, ಅರಬಗಟ್ಟ, ಹೆಗ್ಗೆರೆಯಲ್ಲಿ ಜನ ತಮ್ಮ ಸಿಟ್ಟು ಹೊರಹಾಕಿದ್ದರು.

    ಗೆದ್ದು ಸಚಿವರಾಗಿ ಹೋದ್ಮೆಲೆ ಈಗ ಬಂದಿದ್ದೀರಿ ಮತ ಕೇಳೋಕೆ?. ನಿಮಗೇಕೆ ಮತ ಹಾಕಬೇಕು?. ಅರಬಗಟ್ಟಿಯಲ್ಲಿ ಸದಾಶಿವ ಆಯೋಗದ ವರದಿ ಯಾಕ್ ಜಾರಿ ಮಾಡಿಲ್ಲ ಅಂತ ಪ್ರಶ್ನಿಸಿದ್ದರು. ಸದಾಶಿವ ಆಯೋಗದ ವರದಿ ವಿಚಾರದಲ್ಲಿ ಸ್ಪಷ್ಟ ನಿಲುವು ತೋರುತ್ತಿಲ್ಲ ಅಂತ ತರಾಟೆಗೆ ತೆಗೆದುಕೊಂಡ್ರು. ಈ ವೇಳೆ ವಾಗ್ವಾದ ನಡೆದಿದ್ದು, ಪರಿಣಾಮ ಸಚಿವರಿಗೆ ಎದೆನೋವು ಕಾಣಿಸಿಕೊಂಡು ಸ್ಥಳದಲ್ಲೇ ಕುಸಿದುಬಿದ್ದಿದ್ದರು.

    ತಕ್ಷಣವೇ ಅವ್ರನ್ನು ಇಸಾಮುದ್ರದ ಕಾಂಗ್ರೆಸ್ ಮುಖಂಡನ ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತ್ರ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

  • ರಂಗಮಂದಿರ ನಿರ್ಮಾಣಕ್ಕೆ ಶಾಲೆಯನ್ನೇ ಕೆಡವಿದ ಚಿತ್ರದುರ್ಗ ಶಾಸಕನ ಬೆಂಬಲಿಗ!

    ರಂಗಮಂದಿರ ನಿರ್ಮಾಣಕ್ಕೆ ಶಾಲೆಯನ್ನೇ ಕೆಡವಿದ ಚಿತ್ರದುರ್ಗ ಶಾಸಕನ ಬೆಂಬಲಿಗ!

    ಚಿತ್ರದುರ್ಗ: ಸರ್ಕಾರಿ ಶಾಲೆಗಳು ಮುಚ್ಚಿ ಹೋಗ್ತಿವೆ, ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರ್ತಾನೆ ಇಲ್ಲ ಅನ್ನೋ ಕೂಗು ಒಂದೆಡೆಯಾದ್ರೆ ಇತ್ತ ಚಿತ್ರದುರ್ಗದಲ್ಲಿ ಕಾಂಗ್ರೆಸ್ ಶಾಸಕರ ಬಲಗೈ ಬಂಟನೊಬ್ಬ ಇರೋ ಶಾಲಾ ಕೊಠಡಿಗಳನ್ನೇ ನೆಲಸಮ ಮಾಡಿಸಿ ತನ್ನ ದರ್ಪ ದೌಲತ್ತು ಪ್ರದರ್ಶನ ಮಾಡಿದ್ದಾನೆ.

    ಹೌದು. ಇದು ಸಮಾಜ ಕಲ್ಯಾಣಕ್ಕೆ ಅಂತಾ ಇರೋ ಸಚಿವ ಎಚ್ ಆಂಜನೇಯ ಜಿಲ್ಲೆಯ ಕಥೆ. ಚಿತ್ರದುರ್ಗ ತಾಲೂಕಿನ ಬೆಳಗಟ್ಟದಲ್ಲಿರುವ ಪ್ರಾಥಮಿಕ ಶಾಲೆಗೆ ಸೇರಿದ ಮೂರು ಕೊಠಡಿಗಳನ್ನು ಶಾಸಕ ಕೆ ಟಿ ರಘಮೂರ್ತಿ ಬೆಂಬಲಿಗ ವೀರೇಶ್ ರೆಡ್ಡಿ ಧ್ವಂಸಗೊಳಿಸಿದ್ದಾನೆ.

    ರಂಗಮಂದಿರ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿ ಒಂದು ವರ್ಷವಾಗಿದೆ. ಆದ್ರೆ ಎಲ್ಲೂ ಜಾಗ ಇಲ್ಲ. ಹೀಗಾಗಿ ಶಾಲಾ ಕಟ್ಟಡ ನೆಲಸಮ ಮಾಡಿಸಿದ್ದೇವೆ. ಬೇಕಾದ್ರೆ ಇಡೀ ಶಾಲೆಯನ್ನೇ ಕೆಡವಿ ಹಾಕಿ ಅಂತಾ ಶಾಸಕರು ಬೇರೆ ಹೇಳಿದ್ದಾರೆ ಎಂದು ವಿರೇಶ್ ರೆಡ್ಡಿ ತಿಳಿಸಿದ್ದಾನೆ.

    ಸ್ಥಳೀಯ ಮುಖಂಡರ ಮುಂದಾಳತ್ವದಲ್ಲಿ ಏಕಾಏಕಿ ಶನಿವಾರದಿಂದ ಕಟ್ಟಡವನ್ನು ಕೆಡವುತ್ತಿದ್ದಾರೆ. ಶಾಲೆಯ ಮೂಖ್ಯೋಪಾಧ್ಯಾಯರು, ಎಸ್‍ಡಿಎಂಸಿ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಾಸಕರ ಅನುಮತಿ ಸಿಕ್ಕಿದೆ. ಇನ್ಯಾರನ್ನ ಕೇಳ್ಬೇಕು ಅಂತಾ ದರ್ಪದಿಂದ ಮಾತನಾಡಿದ್ದಾರೆ ಅಂತಾ ಸ್ಥಳೀಯ ನಿವಾಸಿಗಳು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.