Tag: Mineral

  • ಮಶ್ರೂಮ್ ಸೇವಿಸಿ ಆರೋಗ್ಯಕರವಾದ ಪ್ರೋಟಿನ್‌ ಪಡೆದುಕೊಳ್ಳಿ

    ಮಶ್ರೂಮ್ ಸೇವಿಸಿ ಆರೋಗ್ಯಕರವಾದ ಪ್ರೋಟಿನ್‌ ಪಡೆದುಕೊಳ್ಳಿ

    ಣಬೆ ಬಾಯಿಗೆ ರುಚಿ ಮಾತ್ರವಲ್ಲ, ಅದರಲ್ಲಿ ದೇಹಕ್ಕೆ ಅಗತ್ಯವಿರುವ ಅನೇಕ ಅಂಶಗಳೂ ತುಂಬಿಕೊಂಡಿವೆ. ಅಣಬೆಯಲ್ಲಿನ ಪ್ರೊಟೀನ್ ವಿಟಮಿನ್, ಮಿನರಲ್, ಅಮಿನೊ ಆಸಿಡ್, ಆಂಟಿ ಬಯಾಟಿಕ್, ಮತ್ತು ಆಂಟಿ ಯಾಕ್ಸಿಡಂಟ್ ಅಂಶಗಳು ಆರೋಗ್ಯಕ್ಕೆ ಪೂರಕವಾಗಿದೆ. ಈ ಎಲ್ಲಾ ಅಂಶಗಳನ್ನು ಅಣಬೆ ಒಳಗೊಂಡಿದೆ.

    ಮಶ್ರೂಮ್ ನಿತ್ಯದ ಆಹಾರವಾಗಿ ಬಳಸಿದರೆ ಅದ್ಭುತ ಆರೋಗ್ಯ ಹೊಂದುವುದರಲ್ಲಿ ಸಂಶಯವೇ ಇಲ್ಲ. ಡಯಟ್‍ನಲ್ಲಿ ಅಣಬೆಗೆ ಮೊದಲ ಆದ್ಯತೆ ನೀಡಿದರೆ ಎಷ್ಟೋ ರೋಗಗಳನ್ನು ತಡೆಯಬಹುದಾಗಿದೆ. ಇದನ್ನೂ ಓದಿ: ಅಕ್ಕಿ ತೊಳೆದ ನೀರಿನಿಂದ ನಿಮ್ಮ ಸೌಂದರ್ಯ ಹೆಚ್ಚಿಸಬಹುದು

    * ದೇಹದ ಆರೋಗ್ಯ ಸುಧಾರಣೆಗೆ ಸಹಾಯ ಮಾಡು ಅಂಶಗಳನ್ನು ಅಣಬೆ ಒಳಗೊಂಡಿದೆ. ಆರೋಗ್ಯ ಪ್ರಜ್ಞೆ ಜೊತೆಗೆ ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಯಸುವವರು ಅಣಬೆಯನ್ನು ತಪ್ಪದೆ ಸೇವಿಸಬೇಕು. ಇದನ್ನೂ ಓದಿ: ಅನ್ನದಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೇನು ಗೊತ್ತಾ?

    * ಅಣಬೆಯಲ್ಲಿ ವಿಟಮಿನ್ ಡಿ ಅಧಿಕವಾಗಿರುತ್ತದೆ. ಇದು ಮೊಡವೆಯನ್ನು ಕಡಿಮೆ ಮಾಡಲು ಸಹಾಯವನ್ನು ಮಾಡುತ್ತದೆ.

    * ಅಣಬೆಗಳು ಕರುಳಿನ ಆರೋಗ್ಯಕ್ಕೆ ಅತ್ಯುತ್ತಮ ಆಹಾರ. ಒಳ್ಳೆಯ ಬ್ಯಾಕ್ಟೀರಿಯಾಗಖನ್ನು ಒಳಗೊಂಡಿದ್ದು, ಅವುಗಳ ಸೇವನೆಯಿಂದ ನಮ್ಮ ದೇಹದಲ್ಲಿಯೂ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಪೋಷಣೆ ಮಾಡುತ್ತದೆ.

    * ಕಬ್ಬಿಣಾಂಶದ ಪರಿಣಾಮ ಹೇರವಾಗಿದ್ದು, ರಕ್ತ ಹೀನತೆಯಿಂದ ಬಳಲುತ್ತಿರುವವರಿಗೆ ವರದಾನ ಎನ್ನ ಬಹುದಾಗಿದೆ. ಕೆಂಪು ರಕ್ತಕಣಗಳ ಉತ್ಪಾದನೆ ಪ್ರಮಾಣ ಹೆಚ್ಚಿಸುತ್ತದೆ. ಇದನ್ನೂ ಓದಿ:  ಚಳಿಗಾಲದಲ್ಲಿ ನೀವು ಸೇವಿಸುವ ಆಹಾರದಲ್ಲಿ ಈ ಅಂಶಗಳು ಇರಲಿ

    * ಕ್ಯಾಲ್ಸಿಯಂ ಅಂಶ ಹೆಚ್ಚಾಗಿದ್ದು, ಸಂದು ನೋವಿಗೆ ಶಮನಕಾರಿಯಾಗಿದೆ.

    * ಕ್ಯಾನ್ಸರ್ ನಿರೋಧಕ ಅಂಶಗಳನ್ನು ಒಳಗೊಂಡಿದ್ದು, ಪ್ರಮುಖವಾಗಿ ಸ್ತನ   ಕ್ಯಾನ್ಸರ್‌ ಬಾರದಂತೆ ತಡೆಯುತ್ತದೆ.

  • ಒಂದೇ ಪ್ರದೇಶದಲ್ಲಿ ಏಳು ಬಗೆಯ ಖನಿಜ ಪತ್ತೆ – ರಾಜ್ಯದಲ್ಲಿ ಮೊದಲ ಮ್ಯೂಸಿಯಂ ಮಾಡಲು ಚಿಂತನೆ

    ಒಂದೇ ಪ್ರದೇಶದಲ್ಲಿ ಏಳು ಬಗೆಯ ಖನಿಜ ಪತ್ತೆ – ರಾಜ್ಯದಲ್ಲಿ ಮೊದಲ ಮ್ಯೂಸಿಯಂ ಮಾಡಲು ಚಿಂತನೆ

    ಚಾಮರಾಜನಗರ: ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡಂತಿರುವ ಮಲ್ಲಯ್ಯನಪುರ ಬಳಿ ಒಂದೇ ಪ್ರದೇಶದಲ್ಲಿ ಏಳು ಬಗೆಯ ಖನಿಜಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು ಸಂರಕ್ಷಿಸಿ ಇಲ್ಲೊಂದು ಜಿಯೋಲಾಜಿಕಲ್ ಮ್ಯೂಸಿಯಂ ಸ್ಥಾಪಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

    ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಕ್ಷೇತ್ರ ಪರಿಶೀಲನೆ ನಡೆಸುತ್ತಿದ್ದ ವೇಳೆ ಚಾಮರಾಜನಗರ ಸಮೀಪವೇ ಇರುವ ಮಲ್ಲಯ್ಯನಪುರ ಬಳಿ ಒಂದೇ ಪ್ರದೇಶದಲ್ಲಿ ಏಳು ರೀತಿಯ ಖನಿಜಗಳು ಪತ್ತೆಯಾಗಿರುವುದು ಕಂಡು ಬಂದಿದೆ. ಸರ್ಕಾರಕ್ಕೆ ಸೇರಿದ ಸರ್ವೆ ನಂಬರ್ 124 ರಲ್ಲಿ ಫೆಲ್‍ಸೈಟ್, ಗ್ರಾನೈಟ್ ಫ್ಯೂಷೈಟ್, ಕ್ವಾರ್ಟ್ ಜೈಟ್, ಡೋಲೆರೈಟ್ ಡೈಕ್, ಸ್ಮೋಕಿ ಕ್ವಾರ್ಟ್ಜ್, ಪೆಗ್ಮಟೈಟ್ ಮತ್ತು ಗ್ರಾನೈಟ್ ಗ್ನೈಸ್ ಎಂಬ ಖನಿಜಗಳು ಪತ್ತೆಯಾಗಿವೆ.

    ಒಂದೇ ಪ್ರದೇಶದಲ್ಲಿ ಬೇರೆ ಬೇರೆ ಬಗೆಯ ಖನಿಜಗಳು ಕಂಡು ಬರುವುದು ತೀರಾ ಅಪರೂಪ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಲಕ್ಷ್ಮಮ್ಮ ಹೇಳಿದ್ದಾರೆ. ಹೀಗಾಗಿ ಒಂದೇ ಪ್ರದೇಶದಲ್ಲಿ ವಿವಿಧ ರೀತಿಯ ಖನಿಜಗಳು ಪತ್ತೆಯಾಗಿರುವ ಈ ಪ್ರದೇಶವನ್ನು ಸಂರಕ್ಷಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

    ಮೈಸೂರು ವಿಶ್ವವಿದ್ಯಾನಿಲಯದ ಸಹಕಾರದೊಂದಿಗೆ ಇಲ್ಲೊಂದು ಪ್ರಕೃತಿದತ್ತವಾದ ಜಿಯೋಲಾಜಿಕಲ್ ಮ್ಯೂಸಿಯಂ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಪ್ರದೇಶದಲ್ಲಿ ಸ್ವಾಭಾವಿಕ ಭೂಗರ್ಭ ಸಂಗ್ರಹಾಲಯ ಸ್ಥಾಪಿಸಿ, ಜಿಲ್ಲೆಯ ಇತರ ಕಡೆ ದೊರೆಯುವ ಶಿಲಾ ಮಾದರಿ ಹಾಗೂ ಖನಿಜಗಳ ಮಾದರಿಗಳನ್ನು ಇಲ್ಲಿ ಸಂಗ್ರಹಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಈ ಪ್ರಾಕೃತಿಕ ಭೂಗರ್ಭದಲ್ಲಿ ಸಂಗ್ರಹಾಲಯ ಸ್ಥಾಪಿಸುವುದರಿಂದ ಭೂಮಿಯ ಶಿಲಾಸ್ತರಗಳ ಉಗಮ ಹಾಗೂ ರಚನೆ ಬಗ್ಗೆ ಅಧ್ಯಯನ ಮಾಡಲು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಈ ಸಂಗ್ರಹಾಲಯ ಸ್ಥಾಪನೆಗೆ ಬೇಕಾಗುವ ಅನುಧಾನವನ್ನು ಜಿಲ್ಲಾ ಖನಿಜ ನಿಧಿಯಿಂದ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಚಾಮರಾಜನಗರವನ್ನು ಪ್ರವಾಸಿ ತಾಣವನ್ನಾಗಿ ಸಹ ರೂಪಿಸಲು ನಿರ್ಧರಿಸಲಾಗಿದ್ದು, ಒಂದು ವಿಸ್ತೃತ ಯೋಜನೆ ತಯಾರಿಸಿ ಸಲ್ಲಿಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.