Tag: mine owner

  • ಗಣಿ ಮಾಲೀಕನ ಮಗ ನಿಗೂಢ ನಾಪತ್ತೆ – ರಾಜಕೀಯ ಒತ್ತಡಕ್ಕೆ ಮಣಿದ್ರಾ ಪೊಲೀಸರು..?

    ಗಣಿ ಮಾಲೀಕನ ಮಗ ನಿಗೂಢ ನಾಪತ್ತೆ – ರಾಜಕೀಯ ಒತ್ತಡಕ್ಕೆ ಮಣಿದ್ರಾ ಪೊಲೀಸರು..?

    ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಗಣಿ ಮಾಲೀಕನ ಮಗ ನಿಗೂಢ ನಾಪತ್ತೆಯಾಗಿದ್ದು, ಈ ಪ್ರಕರಣ ಭಾರಿ ಸಂಚಲನ ಮೂಡಿಸಿದೆ. ಕಳೆದ 24 ದಿನಗಳಿಂದ ಹೊಸಪೇಟೆ ಮೂಲದ ಬನಶಂಕರಿ ಮೈನ್ಸ್ ಮಾಲೀಕನ ಮಗ ಪ್ರದೀಪ್ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.

    ಅಕ್ಟೋಬರ್ 26ರಂದು 3.30ರ ಸುಮಾರಿಗೆ ಮನೆಯಿಂದ ಹೊರಟಿದ್ದ ಪ್ರದೀಪ್ 24 ದಿನಗಳಿಂದ ಮನೆಗೆ ಬಂದಿಲ್ಲ. ಹೀಗಾಗಿ ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದೆ. ಯುವಕ ನಾಪತ್ತೆ ಹಿನ್ನೆಲೆಯಲ್ಲಿ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಸ್ನೇಹಿತರ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ಯುವಕ ಮರಳಿ ಬಂದಿಲ್ಲ.

    ಈ ನಡುವೆ ಪ್ರದೀಪ್ ಬೇರೆ ಗಣಿ ಮಾಲೀಕನ ಮಗಳ ಜೊತೆ ವ್ಯವಹಾರ ಹೊಂದಿದ್ದ ಎನ್ನಲಾಗಿದ್ದು, ಅವರೇ ಮಗನನ್ನು ಕಿಡ್ನ್ಯಾಪ್ ಮಾಡಿಸಿದ್ದಾರೆ ಎಂದು ಯುವಕನ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ. ಈ ಸಂಬಂಧ ಹೊಸಪೇಟೆಯ ಚಿತ್ತವಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಾಗಿ ಇಷ್ಟೂ ದಿನವಾದರೂ ಪೊಲೀಸರು ಮಗನನ್ನು ಹುಡುಕುತ್ತಿಲ್ಲ. ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸರಿಂದ ಕೇಸ್ ಮುಚ್ಚಿ ಹಾಕುವ ಹುನ್ನಾರ ಮಾಡುತ್ತಿದ್ದಾರೆ ಎಂದು ಕುಟುಂಬದವರು ದೂರಿದ್ದಾರೆ.