Tag: Millet Banana Dosa

  • ಮಕ್ಕಳು ಇಷ್ಟಪಡೋ ರಾಗಿ, ಬಾಳೆಹಣ್ಣಿನ ದೋಸೆ

    ಮಕ್ಕಳು ಇಷ್ಟಪಡೋ ರಾಗಿ, ಬಾಳೆಹಣ್ಣಿನ ದೋಸೆ

    ರಾಗಿ ಹಾಗೂ ಬಾಳೆಹಣ್ಣು ಬಳಸಿ ಮಾಡಲಾಗೋ ಈ ದೋಸೆ ರುಚಿಕರವಾಗಿದ್ದು ಮಕ್ಕಳು ಇದನ್ನು ಇಷ್ಟಪಟ್ಟು ಸವಿಯುತ್ತಾರೆ. ಕ್ಯಾಲ್ಸಿಯಂ, ಕಬ್ಬಿಣ ಹಾಗೂ ನಾರಿನಂಶ ಹೇರಳವಾಗಿರೋ ರಾಗಿ ಮಕ್ಕಳಿಗಂತೂ ಅತ್ಯುತ್ತಮ ಆಹಾರ. ಬಾಳೆಹಣ್ಣು ಬಳಸಿ ಈ ದೋಸೆಯನ್ನು ಸಿಹಿಯಾಗಿಯೂ ಮಾಡಬಹುದು. ಕೇವಲ 20 ನಿಮಿಷಗಳಲ್ಲಿ ಸುಲಭವಾಗಿ ಮಾಡಬಹುದಾದ ರಾಗಿ, ಬಾಳೆಹಣ್ಣಿನ ದೋಸೆ ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ರಾಗಿ ಹಿಟ್ಟು – ಅರ್ಧ ಕಪ್
    ಬಾಳೆಹಣ್ಣು – 1
    ಸಕ್ಕರೆ – 3 ಟೀಸ್ಪೂನ್
    ತೆಂಗಿನ ತುರಿ – ಕಾಲು ಕಪ್
    ನೀರು – ಅರ್ಧ ಕಪ್
    ಹೆಚ್ಚಿದ ಗೋಡಂಬಿ – 2 ಟೀಸ್ಪೂನ್ ಇದನ್ನೂ ಓದಿ: ಅವಲಕ್ಕಿಯಿಂದ ಮಾಡಿ ನಮ್ಕೀನ್ ಕೇಕ್

    ಮಾಡುವ ವಿಧಾನ:
    * ಮೊದಲಿಗೆ ಒಂದು ಬಟ್ಟಲಿನಲ್ಲಿ ಬಾಳೆಹಣ್ಣನ್ನು ಹಾಕಿ ಫೋರ್ಕ್ ಸಹಾಯದಿಂದ ಅದನ್ನು ಚೆನ್ನಾಗಿ ಮ್ಯಾಶ್ ಮಾಡಿಕೊಳ್ಳಿ.
    * ಅದಕ್ಕೆ ರಾಗಿ ಹಿಟ್ಟು, ಸಕ್ಕರೆ, ನೀರು, ತೆಂಗಿನ ತುರಿ, ಗೋಡಂಬಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ಈ ಹಿಟ್ಟಿಗೆ 10 ನಿಮಿಷ ವಿಶ್ರಾಂತಿ ನೀಡಿ.
    * ಈಗ ಬಿಸಿ ತವಾಗೆ ಒಂದು ಸೌಟಿನಷ್ಟು ಹಿಟ್ಟನ್ನು ಸುರಿಯಿರಿ. ಇದನ್ನು ತೆಳ್ಳಗೆ ಹರಡುವುದು ಬೇಡ. ದೋಸೆ ದಪ್ಪವಾಗಿದ್ದರೆ ಉತ್ತಮ.
    * ದೋಸೆ ಒಂದು ಬದಿ ಬೆಂದ ಬಳಿಕ ಅದನ್ನು ತಿರುವಿ ಹಾಕಿ ಮತ್ತೊಂದು ನಿಮಿಷ ಬೇಯಿಸಿಕೊಳ್ಳಿ.
    * ಉಳಿದ ದೋಸೆಯ ಹಿಟ್ಟನ್ನು ಇದೇ ರೀತಿ ಮಾಡುವುದನ್ನು ಮುಂದುವರಿಸಿ.
    * ಇದೀಗ ಮಕ್ಕಳು ಇಷ್ಟಪಟ್ಟು ಸವಿಯೋ ರಾಗಿ, ಬಾಳೆಹಣ್ಣಿನ ದೋಸೆ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಮನೆಯಲ್ಲೇ ಮಾಡ್ನೋಡಿ ಅಂಜೂರ, ಖರ್ಜೂರ ಬರ್ಫಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]