Tag: Milk Tanker

  • ಬೆಳ್ಳಂಬೆಳಗ್ಗೆ ಭೀಕರ ಅಪಘಾತ – 18 ಮಂದಿ ದುರ್ಮರಣ, 20ಕ್ಕೂ ಹೆಚ್ಚು ಮಂದಿಗೆ ಗಾಯ

    ಬೆಳ್ಳಂಬೆಳಗ್ಗೆ ಭೀಕರ ಅಪಘಾತ – 18 ಮಂದಿ ದುರ್ಮರಣ, 20ಕ್ಕೂ ಹೆಚ್ಚು ಮಂದಿಗೆ ಗಾಯ

    ಲಕ್ನೋ: ಬೆಳ್ಳಂಬೆಳಗ್ಗೆ ದೆಹಲಿಗೆ ತೆರಳುತ್ತಿದ್ದ ಡಬಲ್‌ ಡೆಕ್ಕರ್‌ ಬಸ್‌ (Double Decker Bus0 ಹಾಲಿನ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು 18 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ (Lucknow Agra Expressway) ನಡೆದಿದೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

    ಘಟನೆ ಮಾಹಿತಿ ಪಡೆದು ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು (UP Police) ಗಾಯಾಳುಗಳನ್ನು ರಕ್ಷಿಸಿದ್ದಾರೆ. ಬಳಿಕ ಚಿಕಿತ್ಸೆಗಾಗಿ ಬಂಗಾರ್‌ಮೌನ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವುದಾಗಿ ಪ್ರಾಥಮಿಕ ಮೂಲಗಳು ತಿಳಿಸಿವೆ.

    ಈ ಕುರಿತು ಮಾಹಿತಿ ನೀಡಿರುವ ಉನ್ನಾವೋ ಮ್ಯಾಜಿಸ್ಟ್ರೇಟ್‌ ಗೌರಂಗ್‌ ರಾಠಿ, ಬುಧವಾರ (ಇಂದು) ಮುಂಜಾನೆ 5:15ರ ಸುಮಾರಿಗೆ ಬಿಹಾರದ ಮೋತಿಹಾರಿಯಿಂದ ಬರುತ್ತಿದ್ದ ಡಬಲ್‌ ಡೆಕ್ಕರ್‌ ಖಾಸಗಿ ಬಸ್, ಹಾಲಿನ ಟ್ಯಾಂಕರ್‌ಗೆ (Milk Tanker) ಡಿಕ್ಕಿ ಹೊಡೆದಿದೆ. ಇದರಿಂದ 18 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಸುಮಾರು 20ಕ್ಕೂ ಮಂದಿ ಗಾಯಗೊಂಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಬಸ್‌ನ ಅತಿವೇಗದ ಚಾಲನೆಯೇ ಕಾರಣವಾಗಿದೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಸಮೀಪದ ಗರ್ಹಾ ಗ್ರಾಮದ ನಿವಾಸಿಗಳು ಸಿಒ ಅರವಿಂದ್ ಚೌರಾಸಿಯಾ ನೇತೃತ್ವದ ಪೊಲೀಸ್ ತಂಡಕ್ಕೆ ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಿದ್ದಾರೆ. ಘಟನೆ ಕಂಡು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ಸಂತಾಪ ಸೂಚಿಸಿದ್ದಾರೆ.

  • ಹಾಸನ ಭೀಕರ ಅಪಘಾತ ಪ್ರಕರಣ – ಎಸ್ಕೇಪ್ ಆಗಿದ್ದ ಹಾಲಿನ ಟ್ಯಾಂಕರ್ ಚಾಲಕ ಪೊಲೀಸರ ವಶಕ್ಕೆ

    ಹಾಸನ ಭೀಕರ ಅಪಘಾತ ಪ್ರಕರಣ – ಎಸ್ಕೇಪ್ ಆಗಿದ್ದ ಹಾಲಿನ ಟ್ಯಾಂಕರ್ ಚಾಲಕ ಪೊಲೀಸರ ವಶಕ್ಕೆ

    ಹಾಸನ: ಜಿಲ್ಲೆಯ ಅರಸೀಕೆರೆ (Arsikere) ತಾಲೂಕಿನಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಲಿನ ಟ್ಯಾಂಕರ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಟೆಂಪೋ ಟ್ರಾವೆಲರ್, ಹಾಲಿನ ಲಾರಿ ಹಾಗೂ ಸಾರಿಗೆ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ 9 ಜನರ ದಾರುಣವಾಗಿ ಸಾವನ್ನಪ್ಪಿದ್ದರು. ಒನ್ ವೇನಲ್ಲಿ ಬಂದು ಅಪಘಾತಕ್ಕೆ ಕಾರಣವಾಗಿದ್ದ ಹಾಲಿನ ಟ್ಯಾಂಕರ್ ಚಾಲಕ ನವೀನ್, ಅಪಘಾತ ನಂತರ ವಾಹನ ಬಿಟ್ಟು ಪರಾರಿಯಾಗಿದ್ದನು. ಇದೀಗ ನವೀನ್‍ನನ್ನು ಬಾಣಾವರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.  ಇದನ್ನೂ ಓದಿ: ಧರ್ಮಸ್ಥಳ, ಹಾಸನಾಂಬೆ ದರ್ಶನ ಮುಗಿಸಿ ವಾಪಸಾಗುತ್ತಿದ್ದಾಗ ಭೀಕರ ಅಪಘಾತ – ಮಕ್ಕಳು ಸೇರಿ 9 ಮಂದಿ ದುರ್ಮರಣ

    ಅರಸೀಕೆರೆ ತಾಲೂಕಿನ, ಹಳ್ಳಿಕೆರೆ ಗ್ರಾಮದ ಹದಿನಾಲ್ಕು ಮಂದಿ ಟೆಂಪೋ ಟ್ರಾವೆಲರ್ ವಾಹನದಲ್ಲಿ ನಿನ್ನೆ ಧರ್ಮಸ್ಥಳಕ್ಕೆ ತೆರಳಿದ್ದರು. ಮಕ್ಕಳು ಸೇರಿದಂತೆ ಪುರುಷರು ಮುಡಿ ನೀಡಿ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದು ಪೂಜೆ ಸಲ್ಲಿಸಿ, ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನದ ಅಧಿದೇವತೆ ಹಾಸನಾಂಬೆ ದೇವಾಲಯಕ್ಕೆ ಆಗಮಿಸಿ ದೇವಿ ದರ್ಶನ ಪಡೆದು ಎಲ್ಲರೂ ಹಳ್ಳಿಕೆರೆ ಗ್ರಾಮಕ್ಕೆ ತೆರಳುತ್ತಿದ್ದರು. ಸ್ವಗ್ರಾಮ ತಲುಪಲು ಎರಡು ಕಿಲೋಮೀಟರ್ ಇತ್ತು. ಐದು ನಿಮಿಷದಲ್ಲಿ ಮನೆ ಸೇರಿಕೊಳ್ಳುತ್ತಿದ್ದರು. ಅಷ್ಟೊತ್ತಿಗಾಗಲೇ ಅಪಘಾತ ಸಂಭವಿಸಿ ಈ ದುರಂತ ನಡೆದಿದೆ. ಇದನ್ನೂ ಓದಿ: ಈ ಮನೆ ಅದಕ್ಕಲ್ಲ, ಮಿತಿ ಮೀರಿದ ರೂಪೇಶ್- ಸಾನ್ಯ ರೊಮ್ಯಾನ್ಸ್‌ಗೆ ಕಿಚ್ಚ ವಾರ್ನಿಂಗ್

    Live Tv
    [brid partner=56869869 player=32851 video=960834 autoplay=true]

  • ಹಾಲಿನ ಟ್ಯಾಂಕರ್ ಪಲ್ಟಿ- ರಸ್ತೆಯಲ್ಲೇ ಪೋಲಾಯ್ತು ಲಕ್ಷಾಂತರ ಮೌಲ್ಯದ ಹಾಲು

    ಹಾಲಿನ ಟ್ಯಾಂಕರ್ ಪಲ್ಟಿ- ರಸ್ತೆಯಲ್ಲೇ ಪೋಲಾಯ್ತು ಲಕ್ಷಾಂತರ ಮೌಲ್ಯದ ಹಾಲು

    ಬೆಳಗಾವಿ(ಚಿಕ್ಕೋಡಿ): ಹಾಲು ಸಾಗಿಸುತ್ತಿದ್ದ ಟ್ಯಾಂಕರ್ ಒಂದು ಜಿಲ್ಲೆಯ ನಿಪ್ಪಾಣಿ ಹೊರವಲಯದ ತವದಿ ಘಾಟ್‍ನಲ್ಲಿ ಪಲ್ಟಿಯಾಗಿದ್ದು, ಲಕ್ಷಾಂತರ ರೂ. ಮೌಲ್ಯದ ಹಾಲು ರಸ್ತೆಯಲ್ಲಿಯೇ ಹೊಳೆಯಂತೆ ಹರಿದು ಪೋಲಾಗಿದೆ.

    ಬೆಳಗಾವಿಯಿಂದ ಮುಂಬೈಗೆ ಟ್ಯಾಂಕರ್ ನಲ್ಲಿ ಹಾಲನ್ನು ಸಾಗಿಸಲಾಗುತ್ತಿತ್ತು. ತವದಿ ಘಾಟ್‍ನಲ್ಲಿ ಟ್ಯಾಂಕರ್ ಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಹಾಲು ಟ್ಯಾಂಕರ್ ನಿಂದ ಸೋರಿ, ರಸ್ತೆಯಲ್ಲಿ ಹೊಳೆಯಂತೆ ಹರಿದು ಹೋಗುತ್ತಿದೆ. ಸದ್ಯ ಅಪಘಾತದಲ್ಲಿ ಗಾಯಗೊಂಡಿರುವ ಚಾಲಕನನ್ನು ಸ್ಥಳೀಯರು ಆಸ್ಪತ್ರಗೆ ದಾಖಲಿಸಿದ್ದಾರೆ.

    ಬರೋಬ್ಬರಿ 16 ಸಾವಿರ ಲೀಟರ್ ಹಾಲನ್ನು ಹೊತ್ತೊಯ್ಯುವ ಸಾಮರ್ಥ್ಯದ ಟ್ಯಾಂಕರ್ ಇದಾಗಿದ್ದು, ಈ ಬೃಹತ್ ಟ್ಯಾಂಕರ್ ರಸ್ತೆಯಲ್ಲಿ ಪಲ್ಟಿಯಾಗಿರುವುದಕ್ಕೆ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಿಪ್ಪಾಣಿ ಶಹರ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.

  • ಹಾಲಿನ ಟ್ಯಾಂಕರ್ ಪಲ್ಟಿ- ಹಾಲು ತುಂಬಿಕೊಳ್ಳಲು ಮುಗಿಬಿದ್ದ ಜನ್ರು

    ಹಾಲಿನ ಟ್ಯಾಂಕರ್ ಪಲ್ಟಿ- ಹಾಲು ತುಂಬಿಕೊಳ್ಳಲು ಮುಗಿಬಿದ್ದ ಜನ್ರು

    ಚಿಕ್ಕಬಳ್ಳಾಪುರ: ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿಯಾದ ಪರಿಣಾಮ ಹಾಲೆಲ್ಲಾ ರಸ್ತೆ ಪಾಲಾಗಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಹೊರವಲಯದ ವಾಪಸಂದ್ರ ಸೇತುವೆ ಬಳಿ ನಡೆದಿದೆ

    ಸಾದಲಿ ಗ್ರಾಮದ ಹಾಲು ಶೀತಲೀಕರಣ ಕೇಂದ್ರದಿಂದ ಹಾಲನ್ನ ಯಲಹಂಕದ ಕೆಎಂಎಫ್ ನ ಮದರ್ ಡೈರಿಗೆ ಟ್ಯಾಂಕರ್ ಮೂಲಕ ಸಾಗಿಸಲಾಗುತ್ತಿತ್ತು. ಆದರೆ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ವಾಪಸಂದ್ರ ಸೇತುವೆ ಕೆಳಭಾಗದ ತಿರುವಿನಲ್ಲಿ ಉರುಳಿಬಿದ್ದಿದೆ. ಹಾಲಿನ ಟ್ಯಾಂಕರ್ ಪಲ್ಟಿಯಾದ ಕಾರಣ ಟ್ಯಾಂಕರ್ ನಲ್ಲಿದ್ದ ಬಹುತೇಕ ಹಾಲು ರಸ್ತೆಪಾಲಾಗಿದೆ. ರಸ್ತೆಯ ತುಂಬೆಲ್ಲಾ ಹಾಲಿನ ಹೊಳೆಯೇ ಹರಿದಿದೆ.

    ಘಟನೆಯಲ್ಲಿ ಟ್ಯಾಂಕರ್‍ನ ಚಾಲಕ ಕ್ಲೀನರ್ ಸೇರಿದಂತೆ ನಾಲ್ವರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ. ಸದ್ಯಕ್ಕೆ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಲು ರಸ್ತೆ ಪಾಲಾಗುತ್ತಿದ್ದನ್ನು ಗಮನಿಸಿದ ಜನರು ಬಿಂದಿಗೆ, ಬಾಟಲ್ ಮತ್ತು ಕ್ಯಾನ್‍ಗಳಲ್ಲಿ ತುಂಬಿಸಿಕೊಂಡು ಸಂತೋಷದಿಂದ ಹೋಗಿದ್ದಾರೆ.

    ಸಾದಲಿ ಶೀತಲೀಕರಣ ಕೇಂದ್ರದಿಂದ ರಾಷ್ಟ್ರೀಯ ಹೆದ್ದಾರಿ 7 ರ ಮುಖಾಂತರ ಚಿಕ್ಕಬಳ್ಳಾಪುರ, ದೇವನಹಳ್ಳಿ ಮಾರ್ಗದಿಂದ ಯಲಹಂಕಕ್ಕೆ ಸಂಚರಿಸುತ್ತಿತ್ತು. ಆದರೆ ವಾಪಸಂದ್ರ ಸೇತುವೆ ಬಳಿ ಚಿಕ್ಕಬಳ್ಳಾಪುರ ನಗರದೊಳಗೆ ಪ್ರವೇಶ ಮಾಡಿದೆ. ಅಸಲಿಗೆ ಚಿಕ್ಕಬಳ್ಳಾಪುರ ನಗರದೊಳಗೆ ಪ್ರವೇಶ ಮಾಡದೆ ನೇರವಾಗಿ ಯಲಹಂಕಕ್ಕೆ ತೆರಳಬಹುದಿತ್ತು. ಆದರೆ ಟ್ಯಾಂಕರ್ ಚಾಲಕನ ಹಣದ ಆಸೆಗೆ ಮಾರ್ಗ ಮಧ್ಯೆ ಚಿಕ್ಕಬಳ್ಳಾಪುರ ನಗರಕ್ಕೆ ಪ್ರಯಾಣಿಕರನ್ನ ಹತ್ತಿಸಿಕೊಂಡಿದ್ದಾನೆ. ಅವರನ್ನ ಇಳಿಸುವ ಸಲುವಾಗಿಯೇ ಚಾಲಕ ಚಿಕ್ಕಬಳ್ಳಾಪುರ ನಗರದತ್ತ ಪ್ರವೇಶ ಮಾಡಿದ್ದಾನೆ. ಈ ವೇಳೆ ದುರದೃಷ್ಟವಶಾತ್ ಚಿಕ್ಕಬಳ್ಳಾಪುರ ನಗರ ಪ್ರವೇಶದ ಆರಂಭದ ತಿರುವಿನಲ್ಲಿ ಟ್ಯಾಂಕರ್ ಪಲ್ಟಿಯಾಗಿದೆ.

    ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕ್ರೇನ್ ಸಹಾಯದಿಂದ ಟ್ಯಾಂಕರ್‍ನ್ನು ತೆರವುಗೊಳಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.