Tag: Milk Rate

  • ಇಂದಿನಿಂದ ದೇಶಾದ್ಯಂತ ಅಮುಲ್ ಹಾಲಿನ ದರ 2 ರೂ. ಹೆಚ್ಚಳ

    ಇಂದಿನಿಂದ ದೇಶಾದ್ಯಂತ ಅಮುಲ್ ಹಾಲಿನ ದರ 2 ರೂ. ಹೆಚ್ಚಳ

    -ನಂದಿನಿ ಹಾಲಿನ ದರ ಏರಿಕೆ ಬಳಿಕ ಮತ್ತೆ ಗ್ರಾಹಕರಿಗೆ ಬರೆ

    ಬೆಂಗಳೂರು: ನಂದಿನಿ ಹಾಲಿನ (Nandini Milk) ದರ ಏರಿಕೆ ಬಳಿಕ ಇದೀಗ ದೇಶಾದ್ಯಂತ ಅಮುಲ್ ಹಾಲಿನ (Amul Milk)  ದರ 2 ರೂ. ಏರಿಕೆಯಾಗಿದೆ.

    ಇತ್ತೀಚಿಗಷ್ಟೇ ಕೆಎಂಎಫ್ (KMF) ನಂದಿನಿ ಹಾಲಿನ ದರವನ್ನು ಏರಿಕೆ ಮಾಡಿತ್ತು. ಇದೀಗ ಅಮುಲ್ ಹಾಲಿನ ದರ ಹೆಚ್ಚಿಸುವ ಮೂಲ ಗ್ರಾಹಕರಿಗೆ ಮತ್ತೆ ಬರೆ ಎಳೆದಂತಾಗಿದೆ. ದೇಶಾದ್ಯಂತ ಪರಿಷ್ಕೃತ ದರ ಇಂದಿನಿಂದಲೇ (ಮೇ 1) ಜಾರಿಯಾಗಿದೆ.ಇದನ್ನೂ ಓದಿ: ಧರ್ಮ, ರಾಗಿಣಿ ನಟನೆಯ ‘ಸಿಂಧೂರಿ’ ಚಿತ್ರಕ್ಕೆ ಅದ್ಧೂರಿ ಚಾಲನೆ

    ಈ ದರ ಏರಿಕೆಯು ಅಮುಲ್ ಸ್ಟ್ಯಾಂಡರ್ಡ್, ಅಮುಲ್ ಬಫೆಲೋ, ಅಮುಲ್ ಗೋಲ್ಡ್, ಅಮುಲ್ ಸ್ಲಿಮ್ ಆಂಡ್ ಟ್ರಿಮ್, ಅಮುಲ್ ಚಾಯ್‌ಮಜಾ, ಅಮುಲ್ ತಾಜಾ ಹಾಗೂ ಅಮುಲ್ ಕೌಮಿಲ್ಕ್‌ಗಳಿಗೆ ಅನ್ವಯವಾಗುತ್ತದೆ. ಕಳೆದ ವರ್ಷವಷ್ಟೇ ಗ್ರಾಹಕರಿಗೆ ರಿಲೀಫ್ ನೀಡಲು ಅಮುಲ್ ಸುಮಾರು ಐದು ತಿಂಗಳ ಕಾಲ 1 ಲೀ. ಮತ್ತು 2 ಲೀ. ಹಾಲಿನ ಪ್ಯಾಕ್‌ಗಳಲ್ಲಿ ಕ್ರಮವಾಗಿ 50 ಮಿಲಿ ಮತ್ತು 100 ಮಿಲಿ ಹೆಚ್ಚುವರಿ ಹಾಲನ್ನು ಉಚಿತವಾಗಿ ನೀಡಿತ್ತು. ಇದಲ್ಲದೆ 2025ರ ಜನವರಿಯಲ್ಲಿ 1 ಲೀ. ಪ್ಯಾಕ್‌ನ ಬೆಲೆಯನ್ನು 1 ರೂ. ಕಡಿಮೆ ಮಾಡಿತ್ತು.

    ಯಾವ ಪ್ಯಾಕೆಟ್‌ಗೆ ಎಷ್ಟು?
    ಅಮುಲ್ ಸ್ಟ್ಯಾಂಡರ್ಡ್ ಹಾಲು (500 ಮಿ.ಲೀ)
    ಹಳೆಯ ಬೆಲೆ: 30 ರೂ.-ಹೊಸ ಬೆಲೆ: 31 ರೂ.

    ಅಮುಲ್ ಬಫೆಲೋ (ಎಮ್ಮೆ ಹಾಲು) 500 ಮಿ.ಲೀ
    ಹಳೆಯ ಬೆಲೆ: 36 ರೂ.-ಹೊಸ ಬೆಲೆ: 37 ರೂ.

    ಅಮುಲ್ ಗೋಲ್ಡ್ ಮಿಲ್ಕ್ (500 ಮಿ.ಲೀ)
    ಹಳೆಯ ಬೆಲೆ: 33 ರೂ.-ಹೊಸ ಬೆಲೆ: 34 ರೂ.

    ಅಮುಲ್ ಗೋಲ್ಡ್ ಹಾಲು (1 ಲೀಟರ್)
    ಹಳೆಯ ಬೆಲೆ: 65 ರೂ.-ಹೊಸ ಬೆಲೆ: 67 ರೂ.

    ಅಮುಲ್ ಸ್ಲಿಮ್ ಆಂಡ್ ಟ್ರಿಮ್ ಮಿಲ್ಕ್ (500 ಮಿ.ಲೀ)
    ಹಳೆಯ ಬೆಲೆ: 24 ರೂ.-ಹೊಸ ಬೆಲೆ: 25 ರೂ.

    ಅಮುಲ್ ಚಾಯ್ ಮಜಾ ಹಾಲು (500 ಮಿ.ಲೀ)
    ಹಳೆಯ ಬೆಲೆ: 31 ರೂ.-ಹೊಸ ಬೆಲೆ: 32 ರೂ.

    ಅಮುಲ್ ತಾಜಾ ಹಾಲು (500 ಮಿ.ಲೀ)
    ಹಳೆಯ ಬೆಲೆ: 27 ರೂ.-ಹೊಸ ಬೆಲೆ: 28 ರೂ.

    ಅಮುಲ್ ತಾಜಾ ಹಾಲು (1 ಲೀಟರ್)
    ಹಳೆಯ ಬೆಲೆ: 53 ರೂ.-ಹೊಸ ಬೆಲೆ: 55 ರೂ.ಇದನ್ನೂ ಓದಿ: ಹೊಸ ಯೆಲ್ಲೋ ಬೋರ್ಡ್ ವಾಹನ ಖರೀದಿಸುವವರಿಗೆ ಶಾಕ್‌ – ಇಂದಿನಿಂದಲೇ ಕಟ್ಬೇಕು ಲೈಫ್‌ ಟೈಮ್‌ ಟ್ಯಾಕ್ಸ್‌!

  • ಹಾಲಿನ ದರ ಏರಿಕೆ – ಇಂದು ಕ್ಯಾಬಿನೆಟ್‌ನಲ್ಲಿ ತೀರ್ಮಾನ, 2-3 ರೂ. ಹೆಚ್ಚಳ ಸಾಧ್ಯತೆ?

    ಹಾಲಿನ ದರ ಏರಿಕೆ – ಇಂದು ಕ್ಯಾಬಿನೆಟ್‌ನಲ್ಲಿ ತೀರ್ಮಾನ, 2-3 ರೂ. ಹೆಚ್ಚಳ ಸಾಧ್ಯತೆ?

    ಬೆಂಗಳೂರು: ಬಸ್, ಮೆಟ್ರೋ ದರ ಏರಿಕೆ ಬಳಿಕ ಇದೀಗ ರಾಜ್ಯದಲ್ಲಿ ಹಾಲಿನ ದರ ಏರಿಕೆಗೆ (Milk Rate Hike) ಪ್ರಸ್ತಾಪಿಸಿದ್ದು, ಇಂದು ಕ್ಯಾಬಿನೆಟ್‌ನಲ್ಲಿ (Cabinet) ನಿರ್ಧಾರವಾಗಲಿದೆ.ಇದನ್ನೂ ಓದಿ:ಹಾಲಿನ ದರ ಏರಿಕೆ – ಇಂದು ಸಿಎಂ ಸಭೆಯಲ್ಲಿ ನಿರ್ಧಾರ ಸಾಧ್ಯತೆ!

    ನಡೆದ ಸಭೆಯಲ್ಲಿ ಸಿಎಂ (CM Siddaramaiah) ಈ ದರಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಹಾಲಿನ ದರ ಹೆಚ್ಚಳ ಹಣ ಕೇವಲ ರೈತರಿಗಷ್ಟೇ ಇರಲಿ ಎಂದಿದ್ದರು. ಆದರೆ ಸಭೆಯ ಬಳಿಕ 5 ರೂ.ಯಾದರೂ ಹೆಚ್ಚಳ ಮಾಡಿ, ಅದರಲ್ಲಿ 3 ರೂ. ರೈತರಿಗೆ, 2 ರೂ. ಒಕ್ಕೂಟಗಳಿಗೆ ಇರಲಿ ಎಂದು ಪ್ರಸ್ತಾಪಿಸಿದ್ದರು.

    ಒಕ್ಕೂಟಗಳ ಪ್ರಸ್ತಾಪವನ್ನು ಒಪ್ಪದೇ ಕ್ಯಾಬಿನೆಟ್‌ನಲ್ಲಿ ತೀರ್ಮಾನಿಸುವಾಗಿ ಸಿಎಂ ತಿಳಿಸಿದ್ದರು. ಈ ಹಿನ್ನೆಲೆ ಇವತ್ತು ಕ್ಯಾಬಿನೆಟ್ ಸಭೆಯಲ್ಲಿ ಹಾಲಿನ ದರ ಏರಿಕೆ ಪ್ರಸ್ತಾಪಿಸುವ ಸಾಧ್ಯತೆಯಿದ್ದು, 2 ಅಥವಾ 3 ರೂ. ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ ಕೊಡುತ್ತಾ ಎಂದು ಕಾದುನೋಡಬೇಕಿದೆ.ಇದನ್ನೂ ಓದಿ: ಬಿಎಂಟಿಸಿ ಬಸ್ ಹರಿದು ಇಬ್ಬರು ವ್ಯಕ್ತಿಗಳ ಸಾವು – ಚಾಲಕ, ನಿರ್ವಾಹಕ ಎಸ್ಕೇಪ್

  • ಮತ್ತೆ ನಂದಿನಿ ಹಾಲಿನ ದರ ಏರಿಕೆ ಸಾಧ್ಯತೆ

    ಮತ್ತೆ ನಂದಿನಿ ಹಾಲಿನ ದರ ಏರಿಕೆ ಸಾಧ್ಯತೆ

    ಬೆಂಗಳೂರು: ಮತ್ತೆ ನಂದಿನಿ ಹಾಲಿನ ದರ (Nandini Milk Rate) ಏರಿಕೆಯಾಗುವ ಸಾಧ್ಯತೆಯಿದೆ. ನಂದಿನಿ ಹಾಲಿನ ದರ ಪರಿಷ್ಕರಣೆಗೆ ಕರ್ನಾಟಕ ಹಾಲು ಮಾರಾಟ ಮಹಾಮಂಡಳ (KMF) ಚಿಂತನೆ ನಡೆಸಿದೆ.

    ಕೆಎಂಎಫ್ ಅಧಿಕಾರಿಗಳ ಮಟ್ಟದಲ್ಲಿ ದರ ಏರಿಕೆ ಕುರಿತು ಸದ್ಯ ಚಿಂತನೆ ನಡೆದಿದ್ದು, ಸರ್ಕಾರ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದರೆ ಹೊಸ ವರ್ಷದ ಆರಂಭದಲ್ಲೇ ನಂದಿನಿ ಹಾಲಿನ ದರ ಏರಿಕೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಶಕ್ತಿ ಯೋಜನೆ ಇಕ್ಕಟ್ಟಿನಲ್ಲಿ ಸಾರಿಗೆ ಇಲಾಖೆ – ಮೀಸಲಿಟ್ಟ ಹಣ ಹೈಸ್ಪೀಡ್‌ನಲ್ಲಿ ಖರ್ಚು

     

    ಬೆಲೆ ಏರಿಕೆ ಯಾಕೆ?
    ಆರ್ಥಿಕ ನಷ್ಟದ (Economic Loss) ಹಿನ್ನೆಲೆ ಈ ಹಿಂದೆ 5 ರೂ. ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಕೆಎಂಎಫ್‌ ಮನವಿ ಮಾಡಿತ್ತು. ಆದರೆ ಸರ್ಕಾರ ಅಕ್ಟೋಬರ್‌ನಲ್ಲಿ ಕೇವಲ 3 ರೂಪಾಯಿ ಮಾತ್ರ ಏರಿಕೆ ಮಾಡಿತ್ತು. ಈಗ 14 ಹಾಲು ಒಕ್ಕೂಟ ಗಳಿಂದ ಮನವಿ ಬಂದಲ್ಲಿ ಕೂಡಲೇ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲು ಕೆಎಂಎಫ್ ತಯಾರಿ ನಡೆಸುತ್ತಿದೆ.  ಇದನ್ನೂ ಓದಿ: ಗಣ್ಯರ ಮಾಹಿತಿ ಮೊದಲೇ ಗೊತ್ತಿತ್ತು – ಸಿಎಂ ಭದ್ರತಾ ವಿಚಾರದಲ್ಲಿ ಎಡವಿದ್ರಾ ಧಾರವಾಡ ಪೊಲೀಸರು?

    ಕಳೆದ ಬಾರಿ 3 ರೂ. ನೇರವಾಗಿ ರೈತರಿಗೆ ನೀಡಿದ ಹಿನ್ನೆಲೆ ಒಕ್ಕೂಟಗಳಿಗೆ ನಷ್ಟದ ಸರಿದೂಗಿಸಲು ದರ ಪರಿಷ್ಕರಣೆ ಅನಿವಾರ್ಯ ಎನ್ನುತ್ತಿದ್ದಾರೆ ಕೆಎಂಎಫ್ ಅಧಿಕಾರಿಗಳು. ಸದ್ಯ ಜನವರಿಯಲ್ಲಿ ಒಕ್ಕೂಟಗಳ ಸಭೆ ಕರೆದು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲು ಕೆಎಂಎಫ್ ಚಿಂತನೆ ನಡೆಸಿದೆ.

     

  • ಆ.1 ರಿಂದ ಹಾಲಿನ ದರ 3 ರೂ. ಹೆಚ್ಚಳ- ಯಾವುದಕ್ಕೆ ಎಷ್ಟು?

    ಆ.1 ರಿಂದ ಹಾಲಿನ ದರ 3 ರೂ. ಹೆಚ್ಚಳ- ಯಾವುದಕ್ಕೆ ಎಷ್ಟು?

    ಬೆಂಗಳೂರು: ಹಾಲಿನ ದರ  (Milk Rate) 3 ರೂ. ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದ್ದು, ಆಗಸ್ಟ್ 1 ರಿಂದ ಈ ದರ ಜಾರಿಯಾಗಲಿದೆ.

    ಹೆಚ್ಚಳವಾಗಿರುವ ಹಾಲಿನ ದರವನ್ನು ರೈತರಿಗೆ (Farmer) ನೀಡಲು ತೀರ್ಮಾನ ಮಾಡಲಾಗಿದೆ. ಪ್ರತಿ ಲೀಟರ್ ಹಾಲಿನ ದರ 3 ರೂಪಾಯಿ ಏರಿಕೆಯಾಗಲಿದೆ. ಕೆಎಂಎಫ್ 5 ರೂಪಾಯಿ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಸಚಿವ ಸಂಪುಟ ಸಭೆಯಲ್ಲಿ 3 ರೂ. ಹೆಚ್ಚಳಕ್ಕೆ ತೀರ್ಮಾನ ಮಾಡಲಾಗಿದೆ. ಹೀಗಾಗಿ ಆಗಸ್ಟ್ 1 ರಿಂದ ನೂತನ ಹಾಲಿನ ದರ ಜಾರಿಯಾಗಲಿದೆ.

    ಯಾವುದಕ್ಕೆ ಎಷ್ಟು ದರ..?
    ಟೋನ್ಡ್ ಹಾಲು- 39- 42 ರೂ.
    ಹೋಮೋಜಿನೈಸ್ಟ್ ಟೋನ್ಡ್ ಹಾಲು (ನೀಲಿ ಪ್ಯಾಕೇಟ್) 40- 43 ರೂ.
    ಸ್ಪೇಷಲ್ ಹಾಲು (ಆರೆಂಜ್) 45- 48 ರೂ.
    ಶುಭಂ ಹಾಲು (ಹಸಿರು)- 45-48 ರೂ.
    ಸಮೃದ್ದಿ ಹಾಲು (ನೇರಳೆ ಪ್ಯಾಕೆಟ್) -50-53 ರೂ.
    ಸಂತೃಪ್ತಿ ಹಾಲು- 52-55 ರೂ.
    ಮೊಸರು- 47- 50 ರೂ.

    ಒಟ್ಟಿನಲ್ಲಿ ಹಾಲಿನ ದರ ಏರಿಕೆಯಾಗುತ್ತಿರುವ ಸುದ್ದಿ ಕೇಳುತ್ತಿದಂತೆಯೇ ಜನ ಕಿಡಿಕಾರಿದ್ದಾರೆ. ಈ ಸರ್ಕಾರ ಬಂದ್ಮೇಲೆ ಎಲ್ಲ ರೇಟ್ ಜಾಸ್ತಿ ಆಗುತ್ತಿದೆ. ಅಗತ್ಯವಸ್ತುಗಳ ಬೆಲೆ ಏರಿಕೆಯಾಗಿದೆ. ಈಗ ಹಾಲಿನ ದರ ಕೂಡ ಜಾಸ್ತಿ ಮಾಡ್ತ ಇದ್ದಾರೆ. ಒಂದು ಕಡೆ ಫ್ರೀ ಕೊಟ್ಟು ಹೀಗೆ ರೇಟ್ ಜಾಸ್ತಿ ಮಾಡಿ ಜನರಿಗೆ ತೊಂದರೆಯಾಗುವಂತೆ ಮಾಡುತ್ತಿದ್ದಾರೆ. ಫ್ರೀ ಸ್ಕೀಮ್ ಬೇಡ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಬೇಡಿ ಎಂದು ಸಾರ್ವಜನಿಕರು ಮನವಿ ಮಾಡುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಖರೀದಿ ಹಾಲಿಗೆ ಲೀಟರ್‌ಗೆ 1.75 ರೂ. ಕಡಿತ ಮಾಡಿದ ಮನ್ಮುಲ್

    ಖರೀದಿ ಹಾಲಿಗೆ ಲೀಟರ್‌ಗೆ 1.75 ರೂ. ಕಡಿತ ಮಾಡಿದ ಮನ್ಮುಲ್

    ಮಂಡ್ಯ: ಹಳೆ ಮೈಸೂರು ಭಾಗದಲ್ಲಿ ಮುಂಗಾರು ಮಳೆ ಕ್ಷೀಣಿಸಿರುವ ಹಿನ್ನೆಲೆ ಬರಗಾಲದ ಮುನ್ಸೂಚನೆಯನ್ನು ಎದುರಿಸುತ್ತಿದೆ. ಈ ಹೊತ್ತಿನಲ್ಲಿ ಮಂಡ್ಯ (Mandya) ಜಿಲ್ಲೆಯ ರೈತರಿಗೆ ಮನ್ಮುಲ್ (MANMUL) ಬಿಗ್ ಶಾಕ್ ನೀಡಿದೆ.

    ರೈತರಿಂದ ಖರೀದಿ ಮಾಡುವ ಹಾಲಿಗೆ (Milk) ಲೀಟರ್‌ಗೆ 1.75 ರೂ. ಅನ್ನು ಕಡಿತ ಮಾಡಿದೆ. ಲೀಟರ್ ಹಾಲಿಗೆ 32.25 ರೂ. ಬದಲಿಗೆ 30.50 ರೂ. ಅನ್ನು ಇಂದಿನಿಂದ ನೀಡಲಾಗುತ್ತದೆ ಎಂದು ಮನ್ಮುಲ್ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಮನ್ಮುಲ್ ಒಕ್ಕೂಟದ ಸ್ಥಿತಿಗತಿಯನ್ನು ನೋಡಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆದೇಶ ಪ್ರತಿಯಲ್ಲಿ ಉಲ್ಲೇಖ ಮಾಡಲಾಗಿದೆ. ಇದನ್ನೂ ಓದಿ: ರಸ್ತೆಯಲ್ಲಿ ಸಿಕ್ಕ 12,900 ರೂ.ಹಣವನ್ನ ಪೊಲೀಸರಿಗೆ ಕೊಟ್ಟು ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿಗಳು

    ಮೊದಲೇ ಮಳೆ ಇಲ್ಲದೆ ವ್ಯವಸಾಯ ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ಇರುವ ರೈತರು, ಹೈನುಗಾರಿಕೆಯನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದರು. ಇದೀಗ ಮನ್ಮುಲ್ ತೆಗೆದುಕೊಂಡಿರುವ ನಿರ್ಧಾರ ರೈತರಲ್ಲಿ ಆತಂಕ ಉಂಟುಮಾಡಿದೆ. ಇದನ್ನೂ ಓದಿ: ರಾಜ್ಯದ 28 ಜಿಲ್ಲೆಗಳಲ್ಲಿ ಮುಂಗಾರು ಮಳೆ ಕೊರತೆ – ಈವರೆಗೆ 26% ಮಾತ್ರ ಬಿತ್ತನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಾಲಿನ ದರ ಏರಿಸದೇ ಇದ್ದರೆ ಪಂಜಾಬ್ ರೈತರ ರೀತಿ ಹೋರಾಟ: ಜಿ.ಆರ್. ಭಾಸ್ಕರ್

    ಹಾಲಿನ ದರ ಏರಿಸದೇ ಇದ್ದರೆ ಪಂಜಾಬ್ ರೈತರ ರೀತಿ ಹೋರಾಟ: ಜಿ.ಆರ್. ಭಾಸ್ಕರ್

    ನೆಲಮಂಗಲ: ಹಾಲಿನ ದರ ಏರಿಕೆಗೆ ಪಟ್ಟು ಇಲ್ಲದಿದ್ದಲ್ಲಿ ಪಂಜಾಬ್ ರೀತಿ ಹೋರಾಟದ ಹಾದಿ ತುಳಿಯುವ ದಿನ ಹತ್ತಿರಲ್ಲೆ ಇದೇ ಎಂದು ಬಮೂಲ್ ಶಿಬಿರದ ನಿದೇರ್ಶಕ ಜಿ.ಆರ್. ಭಾಸ್ಕರ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

    ಈ ಕುರಿತು ಕಾಸರಘಟ್ಟದಲ್ಲಿ 183ನೇ ತಾಲೂಕಿನ ನೂತನ ಸಂಘಕ್ಕೆ ಚಾಲನೆ ನೀಡಿ ವೇದಿಕೆಯಲ್ಲಿ ಮಾತನಾಡಿದ ಅವರು, ಹೈನುಗಾರಿಕೆ ಅವಲಂಬಿಸಿರುವ ರೈತಾಪಿ ವರ್ಗದವರ ದೈನಂದಿನ ಜೀವನ ಇಂದು ಬಹಳ ಕಷ್ಟವಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಹಾಲಿನ ದರ ಹೆಚ್ಚಳವಾಗಿಲ್ಲ. ಇಂದು ಬೇರೆ-ಬೇರೆ ರಾಜ್ಯಗಳಲ್ಲಿ ಹಾಲಿನ ದರ ಹೆಚ್ಚಿದೆ. ನಮ್ಮ ರಾಜ್ಯದಲ್ಲಿ ಮೂರು ವರ್ಷಗಳಿಂದ ದರ ಏರಿಕೆಯಾಗಿಲ್ಲ. ಸರ್ಕಾರ ಕೂಡಲೇ ದರ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.  ಇದನ್ನೂ ಓದಿ: ವಿಎಲ್‍ಸಿ ಮೀಡಿಯಾ ಪ್ಲೇಯರ್ ಬಳಸಿ ಚೀನಾ ಸೈಬರ್ ದಾಳಿ

    ಹಾಲು ಉತ್ಪಾದಕರಿಗೆ ಯಾವುದೇ ಲಾಭಾಂಶ ಉಳಿಯುತ್ತಿಲ್ಲ. ಕಳೆದ ವರ್ಷ 56 ಕೋಟಿ ನಷ್ಟ ಸರಿದೂಗಿಸಿದ್ದೇವೆ. ಕೂಡಲೇ ದರ ಏರಿಕೆ ಮಾಡದಿದ್ದರೆ. ನಮ್ಮ ರಾಜ್ಯದ ರೈತರು ಪಂಜಾಬ್ ರೀತಿ ಹೋರಾಟದ ಹಾದಿ ತುಳಿಯುವ ದಿನ ಹತ್ತಿರದಲ್ಲೇ ಇದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 1,033 ಪಾಸಿಟಿವ್, 43 ಸಾವು

  • ಹಾಲಿನ ದರ ಏರಿಕೆ ಆಲೋಚನೆ ಸರ್ಕಾರದ ಮುಂದಿಲ್ಲ – ಪಶುಸಂಗೋಪನ ಸಚಿವರ ಸ್ಪಷ್ಟನೆ

    ಹಾಲಿನ ದರ ಏರಿಕೆ ಆಲೋಚನೆ ಸರ್ಕಾರದ ಮುಂದಿಲ್ಲ – ಪಶುಸಂಗೋಪನ ಸಚಿವರ ಸ್ಪಷ್ಟನೆ

    ಬೆಂಗಳೂರು: ರಾಜ್ಯ ಸರ್ಕಾರವು ಹಾಲಿನ ದರ ಹೆಚ್ಚಳ ಮಾಡುವ ಯಾವುದೇ ಚಿಂತನೆಯನ್ನು ನಡೆಸಿಲ್ಲ ಎಂದು ಪಶು ಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ರೈತರಿಗೆ ಸರ್ಕಾರ ನೀಡುತ್ತಿರುವ 5 ರೂ. ಸಹಾಯ ಧನ ಸರಿಯಾದ ಸಮಯಕ್ಕೆ ತಲುಪುತ್ತಿದೆ. ಹಾಲಿನ ದರ ಏರಿಕೆ ಮಾಡುವ ಆಲೋಚನೆ ಸರ್ಕಾರದ ಮುಂದಿಲ್ಲ. ದರ ಹೆಚ್ಚಳ ಹಾಗೂ ಕಡಿಮೆ ಮಾಡುವ ಕುರಿತು ಯಾವುದೇ ಚಿಂತನೆ ನಡೆಸಿಲ್ಲ ಎಂದು ಸ್ಪಷ್ಟನೆ ನೀಡಿದರು.

    ಮೈಕ್ರೋ ಚಿಪ್: ಪಶು ಭಾಗ್ಯ ಯೋಜನೆ ಅಡಿ ನೀಡುವ ಹಸುಗಳಿಗೆ ಮೈಕ್ರೋ ಚಿಪ್ ಅಳವಡಿಕೆ ಮಾಡಲಾಗುತ್ತಿದೆ. ಹಾಲು ಕರೆಯುವ ಹಸುಗಳಿಗೆ ಮಾತ್ರ ಚಿಪ್ ಆಳವಡಿಕೆ ಕಾರ್ಯ ನಡೆಸಲಾಗುತ್ತಿದೆ. ಚಿಪ್ ಮೂಲಕ ಹಸುವಿನ ಸಂಪೂರ್ಣ ಮಾಹಿತಿ ಟ್ರಾಕ್ ಮಾಡಲಾಗುತ್ತಿದೆ. ಇದರಿಂದ ಹಸುವಿನ ಆರೋಗ್ಯ ಬಗ್ಗೆ ಮಾಹಿತಿ ಪಡೆಯಲು ಸಹಾಯಕವಾಗುತ್ತದೆ. ಚಿಪ್ ಅಳವಡಿಸುವ ಕಾರ್ಯ ಶೇ.60 ರಷ್ಟು ಕಾರ್ಯ ಪೂರ್ಣಗೊಂಡಿದ್ದು, ಇದುವರೆಗೂ 1.8 ಲಕ್ಷ ಹಸುಗಳಿಗೆ ಚಿಪ್ ಆಳವಡಿಕೆ ಮಾಡಲಾಗಿದೆ. ಒಂದು ಚಿಪ್ಪಿನ ಬೆಲೆ 6 ರೂ. 20 ಪೈಸೆ ಎಂದು ವಿವರಿಸಿದರು.

    ರೇವಣ್ಣ ಹಸ್ತಕ್ಷೇಪವಿಲ್ಲ: ಕೆಎಂಎಫ್ ಹೆಚ್ಚಿನ ಅಭಿವೃದ್ಧಿ ಆಗುತ್ತಿಲ್ಲ ಎಂವ ಸಚಿವ ರೇವಣ್ಣ ಹೇಳಿಕೆ ವಿಚಾರವಾಗಿ ಪ್ರಕ್ರಿಯೆ ನೀಡಿದ ಅವರು, ಲೋಕೋಪಯೋಗಿ ಇಲಾಖೆ ಸಚಿವ ರೇವಣ್ಣ ಅವರು ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಆದರೆ ಕೆಎಂಎಫ್ ಅಭಿವೃದ್ಧಿಗೆ ರೇವಣ್ಣ ಅವರ ಕೊಡುಗೆ ಅಪಾರ. ಯಾರೇ ಆದ್ರು ಕಟ್ಟಿದ ಸಂಸ್ಥೆಗೆ ಸಮಸ್ಯೆ ಮಾಡಿದರೆ ಎಲ್ಲರಿಗೂ ನೋವಾಗುತ್ತೆ. ಆ ವೇಳೆ ಹೇಳಿಕೆ ನೀಡಿರಬಹುದು ಅಷ್ಟೇ ಎಂದರು.

    ಇದೇ ವೇಳೆ ಟಿಪ್ಪು ಕಾರ್ಯಕ್ರಮಕ್ಕೆ ಆಗಮಿಸದ ಕುರಿತು ಸ್ಪಷ್ಟನೆ ನೀಡಿದ ನಾಡಗೌಡ ಅವರು, ಟಿಪ್ಪು ಜಯಂತಿಗೆ ಕಾರ್ಯಕ್ರಮಕ್ಕೆ ಆಗಮಿಸಲು ನಾನು ಟಿಕೆಟ್ ಬುಕ್ ಮಾಡಿದ್ದೆ, ಆದರೆ ಸಚಿವ ರೇವಣ್ಣ ನಾನು ಹೋಗುತ್ತೆನೆ ಎಂದು ಹೇಳಿದ್ದರು. ಅದ್ದರಿಂದ ನಾನು ಆಗಮಿಸಲಿಲ್ಲ ಎಂದರು.

    ರಾಜ್ಯದಿಂದ ತೆಲಂಗಾಣ ಹಾಗೂ ಆಂಧ್ರಪ್ರದೇಶಕ್ಕೆ ಸರಬರಾಜು ಆಗುತ್ತಿದ್ದ ಮೇವು ತಡೆಯಲು ಆದೇಶ ಮಾಡಲಾಗಿದೆ. ಬೇಸಿಗೆ ವೇಳೆ ಮೇವಿನ ಕೊರತೆ ನೀಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ರಾಜ್ಯದಲ್ಲಿ ದೊರೆಯುವ ಮೇವನ್ನು ವೈಜ್ಞಾನಿಕವಾಗಿ ಸಂರಕ್ಷಣೆ ಮಾಡಲಾಗುವುದು ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews