Tag: Milk price

  • ನನ್ನ ಪ್ರಕಾರ ಹಾಲಿನ ದರ ಇನ್ನೂ ಜಾಸ್ತಿ ಮಾಡಬೇಕಿತ್ತು: ಡಿಕೆಶಿ

    ನನ್ನ ಪ್ರಕಾರ ಹಾಲಿನ ದರ ಇನ್ನೂ ಜಾಸ್ತಿ ಮಾಡಬೇಕಿತ್ತು: ಡಿಕೆಶಿ

    ಬೆಂಗಳೂರು: ನನ್ನ ಪ್ರಕಾರ ಇನ್ನೂ ಬೆಲೆ ಏರಿಕೆ ಜಾಸ್ತಿ ಮಾಡಬೇಕಿತ್ತು. ಯಾರು ಬೇಕಾದ್ರು ವಿವಾದ ಮಾಡಲಿ, ಯಾರು ಬೇಕಾದ್ರು ಬೈಯಲಿ. ವಿರೋಧ ಮಾಡೋರು ಮಾಡಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹಾಲಿನ ದರ (Milk Price Hike) ಏರಿಕೆಯನ್ನು ಮತ್ತೆ ಸಮರ್ಥನೆ ಮಾಡಿಕೊಂಡರು. ಇದೇ ವೇಳೆ ಹಾಲಿನ ದರ ಏರಿಕೆಗೆ ಬಿಜೆಪಿ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ವಿರೋಧ ವ್ಯಕ್ತಪಡಿಸುವುದರಿಂದಲೇ ಬಿಜೆಪಿಯವರು ರೈತರ ವಿರೋಧಿಗಳು ಎಂಬುದು ಅರ್ಥ ಆಗುತ್ತದೆ. 2 ರೂ. ಜಾಸ್ತಿ ಅಗಿರೋದು ರೈತರಿಗೆ ತಲುಪುತ್ತದೆ. ರೈತರು ಎಷ್ಟು ಕಷ್ಟ, ಎಷ್ಟು ಸಂಕಷ್ಟದಲ್ಲಿ ಇದ್ದಾರೆ ಅಂತ ಬಿಜೆಪಿ ಅವರಿಗೆ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

    ರೈತರಿಗೆ ಹಣ ಹೋಗಲ್ಲ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಯಾರು ಹೇಳಿದ್ದು ಕೆಎಂಎಫ್ ಅಂದರೆ ರೈತರ ಒಕ್ಕೂಟ. ಕೆಎಂಎಫ್ ಅಧ್ಯಕ್ಷರದ್ದು ಅಲ್ಲ. ಮೊದಲು ಏರಿಕೆ ಮಾಡಿದ ಹಣ ಮತ್ತು ಮಂಗಳವಾರ ಜಾಸ್ತಿ ಮಾಡಿರೋ ಹಣ ರೈತರಿಗೆ ಹೋಗುತ್ತದೆ. ಕೆಎಂಎಫ್ ಉಳಿಬೇಕು. ಕೆಎಂಎಫ್ ಅಂದರೆ ರೈತರ ಒಕ್ಕೂಟ. ರೈತರೇ ಅಲ್ಲಿ ಇರೋದು. ರೈತರು ಬಿಟ್ಟು ವರ್ತಕರು ಯಾರೂ ಇಲ್ಲ. ರೈತರಿಗೋಸ್ಕರ ಇವತ್ತು ಸಹಾಯ ಆಗ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸಿಬಿಐನಿಂದ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಬಂಧನ

    ನನ್ನ ಪ್ರಕಾರ ಇನ್ನು ಬೆಲೆ ಏರಿಕೆ ಜಾಸ್ತಿ ಮಾಡಬೇಕಿತ್ತು. ಯಾರು ಬೇಕಾದ್ರು ವಿವಾದ ಮಾಡಲಿ, ಯಾರು ಬೇಕಾದ್ರು ಬೈಯಲಿ. ವಿರೋಧ ಮಾಡೋರು ಮಾಡಲಿ. ರೈತರನ್ನು ಕೇಳಲಿ ರೈತರ ಪರಿಸ್ಥಿತಿ ಏನು ಅಂತ. ಅವರು ಸಾಕಲು ಆಗದೇ ಹಸುಗಳನ್ನು ಮಾರಿಕೊಳ್ಳುತ್ತಿದ್ದಾರೆ. ಬಿಜೆಪಿ ಅವರ ರೈತ ವಿರೋಧಿ ಧೋರಣೆ ಇದರಲ್ಲಿ ಎದ್ದು ಕಾಣ್ತಿದೆ. ಅವರೇ ಒತ್ತಾಯ ಮಾಡಬೇಕಿತ್ತು. ಅಮೂಲ್ ನಲ್ಲಿ ಎಷ್ಟು ಇದೆ?, ಮಹಾರಾಷ್ಟ್ರ ಬೇರೆ ರಾಜ್ಯದಲ್ಲಿ ಎಷ್ಟು ಇದೆ? ಅದನ್ನ ತಂದು ಮೊದಲು ನೋಡಲಿ. ಮೊದಲು ರೈತರನ್ನು ಬದುಕಿಸೋ ಕೆಲಸ ಬಿಜೆಪಿ ಅವರು ಮಾಡಲಿ ಎಂದು ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.

  • ಲೀಟರ್ ಹಾಲಿಗೆ 1.50 ರೂ. ಇಳಿಸಿ ಮನ್ಮುಲ್ ಆದೇಶ

    ಲೀಟರ್ ಹಾಲಿಗೆ 1.50 ರೂ. ಇಳಿಸಿ ಮನ್ಮುಲ್ ಆದೇಶ

    ಮಂಡ್ಯ: ಬರದ ನಡುವೆಯೇ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (Manmul) ರೈತರಿಗೆ ಶಾಕ್‌ ನೀಡಿದೆ. ಲೀಟರ್‌ ಹಾಲಿಗೆ 1.50 ರೂ. ಇಳಿಕೆ ಮಾಡಿ ಆದೇಶ ಹೊರಡಿಸಿದೆ.

    ಇತ್ತ ಮನ್ಮುಲ್‌ ಹಾಲಿನ ದರ (Milk Price) ಇಳಿಕೆ ಮಾಡಿದೆ. ಆದರೆ ಅತ್ತ ಪಶು ಆಹಾರದ ಬೆಲೆ ಏರಿಕೆಯಾಗಿದೆ. ಇದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಹೈನುಗಾರಿಕೆ ನಂಬಿಕೊಂಡಿರುವ ಮಂಡ್ಯ ರೈತರು ಕಂಗಾಲಾಗಿದ್ದಾರೆ. ಇದನ್ನೂ ಓದಿ: ಹಿಜಬ್ ಕುರಿತು ಎಚ್ಚರಿಕೆ ಹೆಜ್ಜೆ ಇಡಲು ಕೆಪಿಸಿಸಿ ನಿರ್ಧಾರ- ಸಿಎಂಗೆ ಹಿರಿಯರ ಸಲಹೆ ಏನು..?

    ಮನ್ಮುಲ್ ಆಡಳಿತ ಮಂಡಳಿ ನಿರ್ಧಾರಕ್ಕೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ KMF ಪಶು ಆಹಾರದ ಬೆಲೆ ಚೀಲಕ್ಕೆ 50 ರೂ. ಏರಿಕೆ ಮಾಡಿದೆ. ಡಿಸೆಂಬರ್ 1 ರಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದೆ.

    ಈ ಹಿಂದೆ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 33.50 ರೂ. ನೀಡಲಾಗುತ್ತಿತ್ತು. ಇದೀಗ 1.50 ಕಡಿತಗೊಳಿಸಿದ್ದು, 32 ರೂ.ಗೆ ಇಳಿಕೆಯಾಗಿದೆ. ಬರಗಾಲದಲ್ಲಿ ಹಾಲಿನ ದರ ಕಡಿತಗೊಳಿಸಿರುವುದಕ್ಕೆ ರೈತ ಸಂಘ ಕಿಡಿಕಾರಿದೆ. ಕೂಡಲೇ ದರ ಹೆಚ್ಚಳ ಮಾಡದಿದ್ರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ದತ್ತಜಯಂತಿಯ ಶೋಭಾಯಾತ್ರೆಯಲ್ಲಿ 25 ಸಾವಿರಕ್ಕೂ ಹೆಚ್ಚು ಭಕ್ತರು ಭಾಗಿ

  • ಹಾಲಿನ ದರ ಪ್ರತಿ ಲೀಟರ್‌ಗೆ 5 ರೂ. ಹೆಚ್ಚಳಕ್ಕೆ ಬೇಡಿಕೆ

    ಹಾಲಿನ ದರ ಪ್ರತಿ ಲೀಟರ್‌ಗೆ 5 ರೂ. ಹೆಚ್ಚಳಕ್ಕೆ ಬೇಡಿಕೆ

    ಬೆಂಗಳೂರು: ರೈತರಿಗೆ ಕೊಡುತ್ತಿದ್ದ ಹಾಲಿನ ಪ್ರೋತ್ಸಾಹ ಧನ ಕಡಿತಗೊಳಿಸಿ ವಿರೋಧಕ್ಕೆ ಕಾರಣವಾಗಿದ್ದ ಹಾಲು ಒಕ್ಕೂಟ ಸಿಎಂ ಸೂಚನೆ ಮೇರೆಗೆ ಇದೀಗ ಹಾಲಿನ ಪ್ರೋತ್ಸಾಹ ಧನ ನೀಡೋದಕ್ಕೆ ಮುಂದಾಗಿದೆ. ಆದರೆ ಈಗ ಹಾಲು ಒಕ್ಕೂಟ ಸರ್ಕಾರಕ್ಕೊಂದು ಕಂಡಿಷನ್ ಕೂಡ ಹಾಕಿದೆ. ಗ್ರಾಹಕರಿಗೆ ಬಿಗ್ ಶಾಕ್ ಕೊಡುವ ರೀತಿಯಲ್ಲಿ ಕಾಣಿಸ್ತಾ ಇದೆ.

    ಬೆಲೆಯೇರಿಕೆ ಬಿಸಿ ಜನರನ್ನು ನಿರಂತರವಾಗಿ ಸುಡುತ್ತಿದೆ. ಇದರ ಮಧ್ಯೆ ಈಗ ಹಾಲಿನ ದರ (Milk Price) ಏರಿಕೆಯ ಭೀತಿ ಜನರಿಗೆ ಕಾಡುತ್ತಿದೆ. ಯಾಕೆಂದ್ರೆ ಹಾಲು ಒಕ್ಕೂಟಗಳು ನಷ್ಟದ ಕಾರಣಕ್ಕೆ ಎರಡು ತಿಂಗಳಿಂದ ರೈತರಿಗೆ ನೀಡುತ್ತಿದ್ದ ಸಹಾಯಧನವನ್ನು ನಿಲ್ಲಿಸೋಕೆ ತಯಾರಾಗಿದ್ದವು. ಇದಕ್ಕೆ ದೊಡ್ಡ ವಿರೋಧ ವ್ಯಕ್ತವಾಗುತ್ತಿದ್ದಂತೆ ಸಿಎಂ (Siddaramaiah) ಸೂಚನೆಯ ಮೇರೆಗೆ ಕಡಿತಗೊಳಿಸಿದ ದರವನ್ನು ಮತ್ತೆ ನೀಡಲು ಒಕ್ಕೂಟಗಳು ಮುಂದಾಗಿದೆ. ಆದರೆ ಸರ್ಕಾರದ ಮುಂದೆ ಈಗ ದರ ಏರಿಕೆಯ ಪ್ರಸ್ತಾವನೆ ಇಡಲು ತಯಾರಾಗಿದೆ. ನಿತ್ಯವೂ 16 ಲಕ್ಷ ನಷ್ಟದಲ್ಲಿ ನಡೆಯುತ್ತಿದೆ. ಇದು ಕೆಎಂಎಫ್‍ (KMF) ನ ಹಾದಿಗೆ ಕಷ್ಟವಾಗಲಿದೆ. ಪ್ರತಿ ಲೀಟರ್ ಗೆ 5 ರೂಪಾಯಿ ಹೆಚ್ಚಳಕ್ಕೆ ಮನವಿ ಮಾಡಲು ನಿರ್ಧಾರ ಮಾಡಲು ನಿರ್ಧರಿಸಿದೆ.

    ಹಾಲಿನ ದರ ಏರಿಕೆ ಅನಿವಾರ್ಯತೆ ಅನ್ನೋದು ಹಾಲು ಒಕ್ಕೂಟದ ಮಾತು. ಆದರೆ ಗ್ರಾಹಕರು ಮಾತ್ರ ಇದಕ್ಕೆ ತಯಾರಾಗಿಲ್ಲ. ಅತ್ತ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸರ್ಕಾರ ದರ ಏರಿಕೆಯತ್ತ ಮನಸು ಮಾಡೋದು ಅನುಮಾನ. ಇದನ್ನೂ ಓದಿ: ವಿಧಾನಸಭೆ ಗೆದ್ದ ಕಾಂಗ್ರೆಸ್‍ಗೆ ಲೋಕಸಭೆಯೇ ಟಾರ್ಗೆಟ್- ವಿವಾದ ಸೃಷ್ಠಿಸದಂತೆ ಹೈಕಮಾಂಡ್ ಸೂಚನೆ

    ರೈತರ ಏಳಿಗೆ ಹಾಗೂ ಕನ್ನಡಿಗರ ಮನೆಮಾತಾಗಿರುವ ನಂದಿನಿ ನಷ್ಟದ ಹಾದಿಯಲ್ಲಿದೆ ಅನ್ನೋದು ಕೊಂಚ ಶಾಕಿಂಗ್. ರೈತರ ಸಂಸ್ಥೆ ಕನ್ಮಡಿಗರ ಅಸ್ಮಿತೆಯ ಸಂಕೇತವಾಗಿರುವ ಕೆಎಂಎಫ್ ಅನ್ನು ಉದ್ಧಾರ ಮಾಡೋಕೆ ಕೈ ಸರ್ಕಾರ ಹೇಗೆ ಕಾರ್ಯನಿರ್ವಹಿಸುತ್ತೆ ಅನ್ನೋದು ನೋಡಬೇಕು.

     

  • ಮಂಡ್ಯ ರೈತರಿಗೆ ಶಾಕ್ ಕೊಟ್ಟ ಮನ್ಮುಲ್ – ಹಾಲಿನ ದರದಲ್ಲಿ ಲೀಟರ್‌ಗೆ 1 ರೂ. ಕಡಿತ

    ಮಂಡ್ಯ ರೈತರಿಗೆ ಶಾಕ್ ಕೊಟ್ಟ ಮನ್ಮುಲ್ – ಹಾಲಿನ ದರದಲ್ಲಿ ಲೀಟರ್‌ಗೆ 1 ರೂ. ಕಡಿತ

    ಮಂಡ್ಯ: ರೈತರ ಖರೀದಿ ಹಾಲಿನ (Milk) ದರದಲ್ಲಿ ಲೀಟರಿಗೆ 1 ರೂ. ಕಡಿತ ಮಾಡಿ ಮನ್ಮುಲ್ (MANMUL) ಆದೇಶ ಹೊರಡಿಸಿದ್ದು, ಮಂಡ್ಯ (Mandya) ರೈತರಿಗೆ ಬಿಗ್ ಶಾಕ್ ನೀಡಿದೆ.

    ಜೂನ್ ತಿಂಗಳಲ್ಲೇ ಮನ್ಮುಲ್ ಪರಿಷ್ಕೃತ ದರ ಆದೇಶ ಜಾರಿ ಮಾಡಿದ್ದು, ಮುಂದಿನ ಆದೇಶದವರೆಗೂ ಪರಿಷ್ಕೃತ ದರ ಮುಂದುವರೆಯಲಿದೆ. ಮನ್ಮುಲ್ ಪ್ರತೀ ಲೀಟರ್ ಹಾಲಿಗೆ 2 ರೂ. ಹೆಚ್ಚುವರಿ ಪ್ರೋತ್ಸಾಹ ಧನ ನೀಡುತ್ತಿತ್ತು. ಇದೀಗ ಖರೀದಿ ಹಾಲಿನ ದರದಲ್ಲಿ ಲೀಟರ್‌ಗೆ 1 ರೂ. ಕಡಿತಗೊಳಿಸಿ ರೈತರಿಗೆ ಶಾಕ್ ನೀಡಿದೆ. ಇದನ್ನೂ ಓದಿ: ರೈಲು ದುರಂತ – ಕನ್ನಡಿಗರ ಸುರಕ್ಷತೆ ಮೇಲ್ವಿಚಾರಣೆಗೆ ಸಚಿವ ಸಂತೋಷ್ ಲಾಡ್ ನಿಯೋಜನೆ

    ಮುಂಗಾರು ಮಳೆಯಾಗಿ ಹಸಿರು ಮೇವು ಲಭ್ಯತೆಗೆ ದರ ಕಡಿತಗೊಳಿಸಲಾಗಿದೆ ಎಂದು ಮನ್ಮುಲ್ ಸಮರ್ಥನೆ ನೀಡಿದೆ. ಸದ್ಯ ಹಾಲು ಉತ್ಪಾದಕರಿಗೆ 32.25 ರೂ. ಬದಲು 31.25 ರೂ. ಕೊಡುವುದಾಗಿ ನಿಗದಿಯಾಗಿದೆ. ಇದನ್ನೂ ಓದಿ: ಮಾದಪ್ಪನ ಕ್ಷೇತ್ರದ ಆನೆ ಉಮಾಮಹೇಶ್ವರಿಗೆ 5 ಲಕ್ಷ ರೂ. ಆರೋಗ್ಯ ವಿಮೆ

  • ಚಾಮುಲ್ ಹಾಲು ಉತ್ಪಾದಕರಿಗೆ ಗುಡ್‌ನ್ಯೂಸ್ – 2 ರೂ. ಹೆಚ್ಚಳ

    ಚಾಮುಲ್ ಹಾಲು ಉತ್ಪಾದಕರಿಗೆ ಗುಡ್‌ನ್ಯೂಸ್ – 2 ರೂ. ಹೆಚ್ಚಳ

    ಚಾಮರಾಜನಗರ: ಜಿಲ್ಲಾ ಹಾಲು ಒಕ್ಕೂಟವು (CHAMUL) ಉತ್ಪಾದಕರಿಗೆ ಗುಡ್ ನ್ಯೂಸ್ ನೀಡಿದೆ.

    ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದಿಂದ (CHAMUL) ಪರಿಷ್ಕೃತ ದರ ಪ್ರಕಟವಾಗಿದ್ದು, ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 2 ರೂ. ಹೆಚ್ಚಳ (Milk Price) ಮಾಡಿದೆ. ಇದನ್ನೂ ಓದಿ: ಚರ್ಮಗಂಟು ರೋಗದಿಂದ ಮೃತಪಟ್ಟ ಜಾನುವಾರುಗಳಿಗೆ ಪರಿಹಾರ ನೀಡಲು 2 ಕೋಟಿ ರೂ. ಬಿಡುಗಡೆ: ಪ್ರಭು ಚವ್ಹಾಣ್

    ಪ್ರಸ್ತುತ 1 ಲೀಟರ್ ಹಾಲಿಗೆ 28.85 ರೂ. ಸಿಗುತ್ತಿತ್ತು. ಇನ್ನು ಮುಂದೆ ಚಾಮುಲ್ (CHAMUL) ರೈತರಿಂದ 30.85 ರೂ.ಗೆ ಪ್ರತಿ ಲೀಟರ್ ಹಾಲನ್ನು ಖರೀದಿಸಲಿದೆ. ಇದನ್ನೂ ಓದಿ: ಬೆಳಗಾವಿ–ಹುನಗುಂದ–ರಾಯಚೂರು ಹೈವೇ ನಿರ್ಮಾಣಕ್ಕೆ ಅನುಮೋದನೆ: ಮೋದಿಗೆ ಜೋಶಿ ಅಭಿನಂದನೆ

    ಈಗಾಗಲೇ ರಾಜ್ಯದ ಕೆಲ ಜಿಲ್ಲೆಗಳಲ್ಲಿ ರಾಸುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ಸಾವಿರಾರು ಹಸುಗಳು ರೋಗಕ್ಕೆ ತುತ್ತಾಗಿವೆ. ಈ ನಡುವೆ ಚಾಮುಲ್ ಹಾಲಿನ ದರ ಹೆಚ್ಚಿಸಿರುವ ಮೂಲಕ ಸಂಕಷ್ಟದಲ್ಲಿದ್ದ ರೈತರು ನಿಟ್ಟುಸಿರು ಬಿಡುವಂತೆ ಮಾಡಿದೆ.

    ಲಂಪಿ ವೈರಸ್ ಹೇಗೆ ಹರಡುತ್ತೆ?
    ಜಾನುವಾರುಗಳಲ್ಲಿ ಚರ್ಮಗಂಟು ರೋಗ (Lumpy Virus) ಸಾಂಕ್ರಾಮಿಕ ಕಾಯಿಲೆ ಕಂಡು ಬಂದಿದ್ದು, ಇದು ಕ್ಯಾಪ್ರಿಸಾಕ್ಸ್ ಎಂಬ ವೈರಾಣುವಿನಿಂದ ಬರುತ್ತದೆ. ಹಸು, ಎಮ್ಮೆಗಳಲ್ಲಿ ಅದರಲ್ಲೂ ಮಿಶ್ರತಳಿ ರಾಸುಗಳಲ್ಲಿ ಹೆಚ್ಚಾಗಿ ಹಾಗೂ ತೀಕ್ಷ್ಣವಾಗಿ ಕಾಣಿಸಿಕೊಳ್ಳುತ್ತದೆ. ಈ ರೋಗವು ಮುಖ್ಯವಾಗಿ ಸೊಳ್ಳೆ, ನೊಣ, ಉಣ್ಣೆ ಅಂತಹ ಕೀಟಗಳಿಂದ ಹಸುಗಳಿಗೆ ಬಹುಬೇಗ ಹರಡುತ್ತದೆ. ಮಳೆಗಾಲದಲ್ಲಿ ಮತ್ತು ನಂತರದ ದಿನಗಳಲ್ಲಿ ಹೆಚ್ಚಾಗಿ ಈ ರೋಗವು ಪಸರಿಸುತ್ತದೆ. ಹೀಗಾಗಿ ಜನರು ಎಚ್ಚರಿಕೆ ವಹಿಸಬೇಕು ಎಂದು ಪಶುಪಾಲನಾ ಇಲಾಖೆ ಸಲಹೆ ನೀಡಿದೆ.

    ಸರ್ಕಾರ ಈ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳಲು ಸೂಚಿಸಿದೆ. ಜೊತೆಗೆ ಚರ್ಮಗಂಟು ರೋಗದಿಂದ ಮೃತಪಟ್ಟ ಜಾನುವಾರುಗಳಿಗೆ ಪರಿಹಾರ ನೀಡಲು ಅನುದಾನ ನೀಡಿದೆ. ಮಾಲೀಕರಿಗೆ ನಷ್ಟವನ್ನು ಭರಿಸಲು 2022ರ ಆಗಸ್ಟ್ 1ನೇ ತಾರೀಖಿನಿಂದ ಅನ್ವಯ ಆಗುವಂತೆ ಪ್ರತಿ ಹೈನು ರಾಸುಗಳಿಗೆ ಗರಿಷ್ಠ 20,000 ರೂ. ಮತ್ತು ಎತ್ತುಗಳಿಗೆ 30,000 ರೂ. ಹಾಗೂ ಪ್ರತಿ ಕರುವಿಗೆ 5,000 ರೂ. ಪರಿಹಾರ ನೀಡಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಡಿ.1 ರಿಂದ ಮಿಲ್ಮಾ ಹಾಲಿನ ದರ ಲೀಟರ್‌ಗೆ 6 ರೂ. ಏರಿಕೆ

    ಡಿ.1 ರಿಂದ ಮಿಲ್ಮಾ ಹಾಲಿನ ದರ ಲೀಟರ್‌ಗೆ 6 ರೂ. ಏರಿಕೆ

    ತಿರುವನಂತಪುರಂ: ಕರ್ನಾಟಕದಲ್ಲಿ (Karnataka) ಹಾಲಿನ (Milk) ದರ ಹೆಚ್ಚಳಗೊಂಡ ಬೆನ್ನಲ್ಲೇ ಕೇರಳದ (Kerala) ಹಾಲು ಒಕ್ಕೂಟ ಮಿಲ್ಮಾ (Milma)  ಹಾಲಿನ ದರ ಹೆಚ್ಚಳಕ್ಕೆ ಮುಂದಾಗಿದೆ.

    ಮಿಲ್ಮಾ ಹಾಲಿನ ದರವನ್ನು ಡಿ.1 ರಿಂದ ಲೀಟರ್‌ಗೆ 6 ರೂ. ಏರಿಕೆಗೆ ನಿರ್ಧರಿಸಿದೆ. ಈ ಹಿಂದೆ 2019ರಲ್ಲಿ ಲೀ.4 ರೂ. ಏರಿಸಲಾಗಿತ್ತು. ಇದೀಗ 3 ವರ್ಷಗಳ ನಂತರ ಲೀ.6 ರೂ. ಏರಿಕೆ ಮಾಡಲು ಮಿಲ್ಮಾ ನಿರ್ಧಾರ ಕೈಗೊಂಡಿದೆ. ಇದನ್ನೂ ಓದಿ: ಮನೆ ಕೆಲಸದಾಕೆ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಹೃದಯಾಘಾತ

    ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಮಿಲ್ಮಾ ಫೆಡರೇಶನ್ ಅಧ್ಯಕ್ಷ ಕೆ.ಎಸ್. ಮಣಿ, ಈ ಹಿಂದೆ ಹಾಲಿನ ದರ ಏರಿಕೆ ಮಾಡಿದಾಗ ರೈತರಿಗೆ 3.35 ರೂ. ಸಿಗುತ್ತಿತ್ತು. ಇದೀಗ 6 ರೂ. ಏರಿಕೆ ಮಾಡಿದಾಗ 5.25 ರೈತರಿಗೆ ಸಿಗಲಿದೆ. ಈ ಬಗ್ಗೆ ಮಿಲ್ಮಾ ಹಾಲು ಒಕ್ಕೂಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.

    ಮಿಲ್ಮಾ ಹಾಲು ದರ ಏರಿಕೆಗೂ ಮುನ್ನ ಪಶುವೈದ್ಯಕೀಯ ಮತ್ತು ಕೃಷಿ ವಿಶ್ವವಿದ್ಯಾನಿಲಯಗಳು ಹೈನುಗಾರರಿಗೆ ತಗಲುವ ವೆಚ್ಚಗಳ ಕುರಿತು ಅಧ್ಯಯನ ನಡೆಸಿತ್ತು. ಈ ಅಧ್ಯಯನದ ವರದಿಯನ್ನು ಆಧಾರಿಸಿದಾಗ ರೈತರಿಗೆ ಒಂದು ಲೀ.ಗೆ 8.57 ರೂ. ನಷ್ಟವಾಗುತ್ತಿರುವ ಬಗ್ಗೆ ಸ್ಪಷ್ಟವಾಗಿತ್ತು. ಹಾಗಾಗಿ ಮಿಲ್ಮಾ ಹಾಲಿನ ದರ 6 ರೂ. ಏರಿಕೆಗೆ ನಿರ್ಧರಿಸಿದೆ. ಇದನ್ನೂ ಓದಿ: ಐಫೋನ್ ಫ್ಯಾಕ್ಟರಿಯ ಘರ್ಷಣೆ – ಲಾಕ್‌ಡೌನ್ ವಿಸ್ತರಿಸಿದ ಚೀನಾ

    Live Tv
    [brid partner=56869869 player=32851 video=960834 autoplay=true]

  • ಹಾಲಿನ ದರ 2 ರೂ. ಹೆಚ್ಚಳ- ವರ್ಷದಲ್ಲಿ 3ನೇ ಬಾರಿಗೆ ದರ ಏರಿಕೆ

    ಹಾಲಿನ ದರ 2 ರೂ. ಹೆಚ್ಚಳ- ವರ್ಷದಲ್ಲಿ 3ನೇ ಬಾರಿಗೆ ದರ ಏರಿಕೆ

    ನವದೆಹಲಿ: ಅಮೂಲ್ (Amul) ಬಳಿಕ ಮದರ್ ಡೈರಿ (Mother Dairy) ಸಹ ಹಸು ಹಾಗೂ ಎಮ್ಮೆ ಹಾಲಿನ ಬೆಲೆಯನ್ನು (Milk Price) ಪ್ರತಿ ಲೀಟರ್‌ಗೆ 2 ರೂ. ಹೆಚ್ಚಿಸಿದೆ. ಅಕ್ಟೋಬರ್ 16ರಿಂದಲೇ ನಿಗದಿತ ಬೆಲೆ ಜಾರಿಗೆ ಬರಲಿದೆ ಎಂದು ಮದರ್ ಡೈರಿ ವಕ್ತಾರರು ತಿಳಿಸಿದ್ದಾರೆ.

    ಅಮೂಲ್ ಸದ್ದಿಲ್ಲದೇ ಹಾಲಿನ ದರ ಹೆಚ್ಚಿಸಿದ ಕೆಲವೇ ಗಂಟೆಗಳಲ್ಲಿ ಮದರ್ ಡೈರಿ ಈ ನಿರ್ಧಾರ ತೆಗೆದುಕೊಂಡಿದೆ. ಇದು ವರ್ಷದಲ್ಲಿ 3ನೇ ಬಾರಿಗೆ ಬೆಲೆ ಏರಿಕೆಯಾಗಿದೆ. ಇದನ್ನೂ ಓದಿ: ಹಾಡಹಗಲೇ ವ್ಯಕ್ತಿಯಿಂದ 7 ಲಕ್ಷ ರೂ. ದೋಚಿದ ಕಳ್ಳರು

    ಅಮುಲ್ ಬ್ರಾಂಡ್ ಅಡಿಯಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನ ಮಾರಾಟ ಮಾಡುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (GCMMF) ಗುಜರಾತ್ ಹೊರತುಪಡಿಸಿ ಎಲ್ಲಾ ಮಾರುಕಟ್ಟೆಗಳಲ್ಲಿ ಅಮುಲ್ ಗೋಲ್ಡ್ ಮತ್ತು ಎಮ್ಮೆಯ ಹಾಲಿನ ಬೆಲೆಯನ್ನು ಪ್ರತಿ ಲೀಟರ್‌ಗೆ 2 ರಷ್ಟು ಹೆಚ್ಚಿಸಿತು. ನಂತರ ಮದರ್ ಡೈರಿ (MotherDairy) ಈ ಕ್ರಮಕ್ಕೆ ಮುಂದಾಗಿದೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಗೆ ಬಂದಿದ್ದ ಕೈ ನಾಯಕನಿಗೆ ಹೃದಯಾಘಾತ!

    ಜಿಸಿಎಂಎಂಎಫ್ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್.ಸೋಧಿ ಮಾತನಾಡಿ, `ಕೊಬ್ಬಿನ ಬೆಲೆ ಏರಿಕೆಯಿಂದಾಗಿ ಅಮುಲ್ ಗೋಲ್ಡ್ (Amul Gold) ಮತ್ತು ಎಮ್ಮೆ ಹಾಲಿನ ಬೆಲೆಯನ್ನು ಲೀಟರ್‌ಗೆ 2ರೂ. ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಾಲಿನ ದರ 3 ರೂ. ಹೆಚ್ಚಳಕ್ಕೆ ಕೆಎಂಎಫ್ ನಿರ್ಧಾರ

    ಹಾಲಿನ ದರ 3 ರೂ. ಹೆಚ್ಚಳಕ್ಕೆ ಕೆಎಂಎಫ್ ನಿರ್ಧಾರ

    ಬೆಂಗಳೂರು: ಬೆಲೆ ಏರಿಕೆಯಿಂದ ಈಗಾಗಲೇ ಜನ ರೋಸಿ ಹೋಗಿದ್ದಾರೆ. ಈ ನಡುವೆ ನಂದಿನ ಹಾಲಿನ ದರವನ್ನು 3 ರೂ.ಗೆ ಹೆಚ್ಚಳ ಮಾಡಲು ಕೆಎಂಎಫ್ ನಿರ್ಧರಿಸಿದೆ.

    ಹಾಲಿನ ದರ ಹೆಚ್ಚಳ ಮಾಡುವಂತೆ ಕಳೆದ 8 ತಿಂಗಳಿಂದ ಕೆಎಂಎಫ್ ವತಿಯಿಂದ ಸರ್ಕಾರಕ್ಕೆ ಮನವಿ ಮಾಡಿಲಾಗಿದೆ ಹೀಗಿದ್ದರೂ ರಾಜ್ಯ ಸರ್ಕಾರ ಈ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ. ರೈತರು ಹಾಗೂ ಕೆಎಂಎಫ್‍ನ ಜಿಲ್ಲಾ ಹಾಲು ಒಕ್ಕೂಡಗಳಿಂದ ಹಾಲಿನ ದರ ಹೆಚ್ಚಳಕ್ಕೆ ಒತ್ತಡ ಹೆಚ್ಚಾಗಿದೆ. ಹೀಗಾಗಿ ಕೆಎಂಎಫ್ ತನಗೆ ಇರುವ ಅಧಿಕಾರವನ್ನು ಬಳಸಿಕೊಂಡು ತಾನೇ ಹಾಲಿನ ದರವನ್ನು ಏರಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಬ್ರಿಟನ್ ರಾಣಿಯ ಕಿರೀಟದಲ್ಲಿದ್ದ ಕೊಹಿನೂರು ವಜ್ರದ ಮೂಲ ಯಾದಗಿರಿ!

    ಈ ಕುರಿತಂತೆ ನಗರದ ಖಾಸಗಿ ಹೋಟೆಲ್‍ನಲ್ಲಿ ಶುಕ್ರವಾರ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ನಡೆದ ಕೆಎಂಎಫ್ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಂಡಿದ್ದು, ಕೆಎಂಎಫ್‍ನ ಎಲ್ಲ 14 ಜಿಲ್ಲಾ ಹಾಲು ಒಕ್ಕೂಟಗಳು ಹಾಲಿನ ದರ ಹೆಚ್ಚಳ ಮಾಡುವುದಕ್ಕೆ ಬೆಂಬಲ ನೀಡಿದೆ. ನಂದಿನಿ ಹಾಲಿನ ದರವನ್ನು ಮೂರು ರೂಪಾಯಿ ಹೆಚ್ಚಳ ಮಾಡಲಿದ್ದು, ಇದನ್ನು ಹಾಲು ಉತ್ಪಾದಕ ರೈತರಿಗೆ ವರ್ಗಾಯಿಸಲಾಗುವುದು ಎಂದು ಹೇಳಲಾಗಿದೆ. ಇದನ್ನೂ ಓದಿ: ನಾನೂ ಸಿದ್ದರಾಮಯ್ಯರನ್ನ ಕಚ್ಚೆ ಹರುಕ ಅನ್ನಬಹುದಲ್ವಾ?: ಸಿಟಿ ರವಿ

    Live Tv
    [brid partner=56869869 player=32851 video=960834 autoplay=true]