Tag: Milk Price Hike

  • ರೈತರ ಹೆಸರಿನಲ್ಲಿ ಹಾಲಿನ ದರ ಏರಿಸಿ ಜನರಿಗೆ ಬರೆ: ಬೊಮ್ಮಾಯಿ

    ರೈತರ ಹೆಸರಿನಲ್ಲಿ ಹಾಲಿನ ದರ ಏರಿಸಿ ಜನರಿಗೆ ಬರೆ: ಬೊಮ್ಮಾಯಿ

    ನವದೆಹಲಿ: ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿರುವುದನ್ನು ಮರೆಮಾಚಲು ರೈತರ ಹೆಸರಿನಲ್ಲಿ ಹಾಲಿನ ದರ ಏರಿಕೆ (Milk Price Hike) ಮಾಡಿ ಜನರ ಮೇಲೆ ಬರೆ ಎಳೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಕಿಡಿಕಾರಿದ್ದಾರೆ.

    ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಳೆದ ಆರು ತಿಂಗಳಿನಿಂದ ಹಾಲು ಉತ್ಪಾದಕರಿಗೆ ಯಾವುದೇ ಪ್ರೋತ್ಸಾಹಧನ ಬಿಡುಗಡೆ ಮಾಡಿಲ್ಲ. ಸುಮಾರು 500 ಕೋಟಿ ರೂ. ಪ್ರೋತ್ಸಾಹಧನ ಕೊಡುವುದು ಬಾಕಿ ಇದೆ. ಪ್ರೋತ್ಸಾಹ ಧನ ಇಲ್ಲದೇ ರೈತರು ಮತ್ತು ಹಾಲು ಒಕ್ಕೂಟಗಳು ಸಂಕಷ್ಟಕ್ಕೀಡಾಗಿವೆ. ಇಡೀ ವರ್ಷ ಪ್ರೋತ್ಸಾಹಧನ ನೀಡದೇ, ನೀವೇ ದರ ಹೆಚ್ಚಳ ಮಾಡಿಕೊಂಡು ನೀವೇ ಪ್ರೋತ್ಸಾಹಧನ ನೀಡಿ ಎಂದು ಜನರ ಮೇಲೆ ಹೊರೆ ಹಾಕಿದ್ದಾರೆ. ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡು ರಾಜ್ಯ ದಿವಾಳಿಯಾಗಿರುವುದಕ್ಕೆ ಇದು ಮತ್ತೊಂದು ಸಾಕ್ಷಿ ಎಂದು ಅವರು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: Milk Price Hike | ಗ್ಯಾರಂಟಿ ಸರ್ಕಾರದ ಬಂದ ಮೇಲೆ ಯಾವುದು ಎಷ್ಟು ಏರಿಕೆ? ಮುಂದೆ ಏನೇನು ಶಾಕ್ ಸಿಗುತ್ತೆ?

    ತಮ್ಮ ವೈಫಲ್ಯ ಮುಚ್ಚಿಕೊಂಡು ಸರ್ಕಾರ ಕೊಡಬೇಕಾದ ಪ್ರೋತ್ಸಾಹಧನವನ್ನು ಕೆಎಂಎಫ್‌ಗೆ 4 ರೂ. ಹಾಲಿನ ದರ ಹೆಚ್ಚಳ ಮಾಡಿ, ಜನರ ಮೇಲೆ ಭಾರ ಹೇರಿದೆ. ವರ್ಷದಲ್ಲಿ ಮೂರು ಬಾರಿ 9 ರೂ. ಹೆಚ್ಚಳ ಮಾಡಿದ್ದಾರೆ. ಇದೊಂದು ಬೇಜವಾಬ್ದಾರಿ ರಾಜ್ಯ ವಿರೋಧಿ ಸರ್ಕಾರವಾಗಿದೆ. ರಾಜ್ಯವನ್ನು ದಿವಾಳಿ ಮಾಡಿ ಆರ್ಥಿಕವಾಗಿ ಸದೃಢವಾಗಿರುವ ರಾಜ್ಯವನ್ನು ಆರ್ಥಿಕವಾಗಿ ಅತ್ಯಂತ ದುರ್ಬಲವಾಗಿರುವ ರಾಜ್ಯವನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಇಷ್ಟೆಲ್ಲಾ ಆದರೂ ರಾಜ್ಯ ಸರ್ಕಾರ ಭಂಡತನಕ್ಕೆ ಬಿದ್ದಿದೆ. ವಿದ್ಯುತ್ ದರ ಹೆಚ್ಚಳ ಮಾಡಿದೆ. ಡಿಜಿಟಲ್ ಮೀಟರ್ ಅಳವಡಿಕೆ ದೊಡ್ಡ ಹಗರಣವಾಗಿದೆ. ಪೆಟ್ರೋಲ್, ಡಿಸೇಲ್, ಮುದ್ರಾಂಕ ನೋಂದಣಿ ಶುಲ್ಕ ಎಲ್ಲವನನ್ನೂ ಹೆಚ್ಚಳ ಮಾಡಿದ್ದಾರೆ. ಅಬಕಾರಿ ತೆರಿಗೆ ದರವಂತೂ ಲೆಕ್ಕವಿಲ್ಲದಷ್ಟು ಹೆಚ್ಚಳ ಮಾಡಿದ್ದಾರೆ. ಕಳೆದ ವರ್ಷ ಸುಮಾರು 40 ಸಾವಿರ ಕೋಟಿ ರೂ. ಹೆಚ್ಚಿನ ತೆರಿಗೆ ಭಾರವನ್ನು ಜನರ ಮೇಲೆ ಹಾಕಿದ್ದಾರೆ. ಈಗ ಸುಮಾರು 55 ಸಾವಿರ ಕೋಟಿ ರೂ. ಹೊಸ ತೆರಿಗೆ ಮೂಲಕ ಜನರ ಮೇಲೆ ಹಾಕಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    – ಬಡವರು ಅತಿ ಬಡವರಾಗುತ್ತಿದ್ದಾರೆ
    ಇಷ್ಟೆಲ್ಲಾ ಆದರೂ ಸುಮಾರು 1.16 ಲಕ್ಷ ಕೋಟಿ ರೂ. ಸಾಲ ತೆಗೆದುಕೊಂಡಿದ್ದಾರೆ. ಒಂದು ಕಡೆ ತೆರಿಗೆ (Tax) ಇನ್ನೊಂದೆಡೆ ಬೆಲೆ ಏರಿಕೆ ಭಾರ, ಇದರಿಂದ ಮಧ್ಯಮ ವರ್ಗದವರು ಬಡವರಾಗುತ್ತಿದ್ದಾರೆ. ಬಡವರು ಅತಿ ಬಡವರಾಗುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಸರ್ಕಾರ ನೇರ ಹೊಣೆಯಾಗಿದೆ. ಈ ಸರ್ಕಾರದ ಬಗ್ಗೆ ಜನರು ಬೇಸತ್ತಿದ್ದಾರೆ. ಈ ಸರ್ಕಾರ ಆದಷ್ಟು ಬೇಗ ತೊಲಗಲಿ ಅಂತ ಜನ ಶಾಪ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.

    ರಾಜ್ಯ ಸರ್ಕಾರಕ್ಕೆ ರೈತರ ಮೇಲೆ ಅಷ್ಟೊಂದು ಕಾಳಜಿ ಇದ್ದರೆ, ಸರ್ಕಾರ ಕೊಡಬೇಕಾಗಿರುವ ಪ್ರೋತ್ಸಾಹ ಧನ ಏಕೆ ಕೊಡುತ್ತಿಲ್ಲ? ತಮ್ಮ ಆರ್ಥಿಕ ದಿವಾಳಿತನ ಮುಚ್ಚಿಕೊಳ್ಳಲು ರೈತರ ಹೆಸರಿನಲ್ಲಿ ದರ ಹೆಚ್ಚಿಸಿದ್ದಾರೆ. ಅದನ್ನು ರೈತರಿಗೆ ಪೂರ್ಣ ಪ್ರಮಾಣದಲ್ಲಿ ನೀಡುವುದಿಲ್ಲ ಎಂದಿದ್ದಾರೆ.

    ಶಾಸಕರಾದ ಎಸ್.ಟಿ. ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಅವರಿಗೆ ಪಕ್ಷ ನೋಟಿಸ್‌ ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೆ ಪಕ್ಷದ ಶಿಸ್ತು ಸಮಿತಿ ಅವರಿಗೆ ನೋಟಿಸ್‌ ಕೊಟ್ಟಿದೆ. ಅವರು ನೋಟಿಸ್‌ಗೆ ಉತ್ತರ ನೀಡಲಿದ್ದಾರೆ. ಹೀಗಾಗಿ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ನಂದಿನಿ ಹಾಲಿನ ದರ 4 ರೂ. ಹೆಚ್ಚಳ – ರೈತರಿಗೆ ಪೂರ್ಣ ಹಣ ವರ್ಗಾವಣೆಗೆ ಕ್ಯಾಬಿನೆಟ್ ತೀರ್ಮಾನ

  • ನಂದಿನಿ ಹಾಲಿನ ದರ 4 ರೂ. ಹೆಚ್ಚಳ – ರೈತರಿಗೆ ಪೂರ್ಣ ಹಣ ವರ್ಗಾವಣೆಗೆ ಕ್ಯಾಬಿನೆಟ್ ತೀರ್ಮಾನ

    ನಂದಿನಿ ಹಾಲಿನ ದರ 4 ರೂ. ಹೆಚ್ಚಳ – ರೈತರಿಗೆ ಪೂರ್ಣ ಹಣ ವರ್ಗಾವಣೆಗೆ ಕ್ಯಾಬಿನೆಟ್ ತೀರ್ಮಾನ

    ಬೆಂಗಳೂರು: ಬಸ್, ಮೆಟ್ರೋ ದರ ಏರಿಕೆ ಬಳಿಕ ಇದೀಗ ರಾಜ್ಯದಲ್ಲಿ ಹಾಲಿನ ದರ ಏರಿಕೆ (Milk Price Hike) ಮಾಡುವ ಮೂಲಕ ರಾಜ್ಯದ ಜನತೆಗೆ ದೊಡ್ಡ ಶಾಕ್‌ ಕೊಟ್ಟಿದೆ. ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದ ರಾಜ್ಯದ ಜನತೆಗೆ ದರ ಏರಿಕೆಯ ಬಿಸಿ ಮುಟ್ಟಿಸಿದೆ.

    ಪ್ರತಿ ಲೀಟರ್‌ ನಂದಿನಿ ಹಾಲಿನ (Nandini Milk) ದರ 4 ರೂ. ಹೆಚ್ಚಳ ಮಾಡಲು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಏಪ್ರಿಲ್ 1ರಿಂದ ನೂತನ ದರ ಜಾರಿ ಆಗಲಿದೆ.

    ಅಲ್ಲದೆ ಈ ಹಿಂದೆ ಅರ್ಧ ಲೀಟರ್ ಪ್ಯಾಕೆಟ್ ಹಾಲಿಗೆ 50ml ಹೆಚ್ಚುವರಿ ಹಾಲು, 2 ರೂಪಾಯಿ ಹೆಚ್ಚುವರಿ ಹಣವನ್ನ ವಾಪಸ್ ಪಡೆಯಲು ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದೆ.‌ ಇನ್ನು ಕ್ಯಾಬಿನೆಟ್ ತೀರ್ಮಾನದಿಂದಾಗಿ ರೈತರಿಗೆ ಪ್ರತಿ ಲೀಟರ್ ಹಾಲಿಗೆ ಕೊಡ್ತಿದ್ದ 31 ರೂಪಾಯಿ 68 ಪೈಸೆ ಹಣ ಇನ್ನು ಮುಂದೆ 35 ರೂಪಾಯಿ 68 ಪೈಸೆ ಹಣ ಕೊಡಬೇಕಾಗುತ್ತೆ.

    ಯಾವ ಹಾಲಿನ ದರ ಎಷ್ಟಾಗಬಹುದು?

    – ನೀಲಿ‌ ಪ್ಯಾಕೆಟ್ ಹಾಲು – 44 ರೂ ನಿಂದ 48 ರೂ
    – ಆರೆಂಜ್ ಪ್ಯಾಕೆಟ್ ಹಾಲು – 54 ರೂ‌. ನಿಂದ 58  ರೂ.
    – ಸಮೃದ್ಧಿ ಹಾಲಿನ‌ ಪ್ಯಾಕೆಟ್ 56 ರೂ. ನಿಂದ 60 ರೂ.
    – ಗ್ರೀನ್ ಸ್ಪೇಷಲ್ 54 ರೂ. ನಿಂದ 58 ರೂ.
    – ನಾರ್ಮಲ್ ಗ್ರೀನ್ 52 ರೂ. ನಿಂದ 56 ರೂ.

    6-8 ರೂ. ಹಾಲಿನ ದರ ಹೆಚ್ಚಳಕ್ಕೆ ಒಕ್ಕೂಟಗಳು ಪ್ರಸ್ತಾಪಿಸಿದ್ದವು. ಆದರೆ ಸೋಮವಾರ ನಡೆದ ಸಭೆಯಲ್ಲಿ ಸಿಎಂ ಈ ದರಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಹಾಲಿನ ದರ ಹೆಚ್ಚಳ ಹಣ ಕೇವಲ ರೈತರಿಗಷ್ಟೇ ಇರಲಿ ಎಂದಿದ್ದರು. ಆದರೆ ಸಭೆಯ ಬಳಿಕ 5 ರೂ.ಯಾದರೂ ಹೆಚ್ಚಳ ಮಾಡಿ, ಅದರಲ್ಲಿ 3 ರೂ. ರೈತರಿಗೆ, 2 ರೂ. ಒಕ್ಕೂಟಗಳಿಗೆ ಇರಲಿ ಎಂದು ಪ್ರಸ್ತಾಪಿಸಿದ್ದರು. ಆದ್ರೆ ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ 4 ರೂ. ಹೆಚ್ಚಳಕ್ಕೆ ಸಂಪುಟ ಒಪ್ಪಿಗೆ ಸೂಚಿಸಿದೆ.

  • ಹಾಲಿನ ದರ ಏರಿಕೆಯ ಒತ್ತಡಕ್ಕೆ ಮಣಿಯದ ಸಿಎಂ – ಇಂದಿನ ಹೈವೋಲ್ಟೇಜ್ ಸಭೆಯಲ್ಲಿ ಏನಾಯ್ತು?

    ಹಾಲಿನ ದರ ಏರಿಕೆಯ ಒತ್ತಡಕ್ಕೆ ಮಣಿಯದ ಸಿಎಂ – ಇಂದಿನ ಹೈವೋಲ್ಟೇಜ್ ಸಭೆಯಲ್ಲಿ ಏನಾಯ್ತು?

    ಬೆಂಗಳೂರು: ಹಾಲು ಒಕ್ಕೂಟಗಳ (Milk Unions) ದರ ಏರಿಕೆಯ (Milk Price) ಒತ್ತಡಕ್ಕೆ ಮಣಿಯದ ಸಿಎಂ ಸಿದ್ದರಾಮಯ್ಯ (Siddaramaiah), ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ ಹಾಲಿನ ದರ ಹೆಚ್ಚಳದ ಬಗ್ಗೆ ತೀರ್ಮಾನಿಸುವುದಾಗಿ ನಿರ್ಣಯ ಮಾಡಿದ್ದಾರೆ. ಹಾಲು ದರ ಹೆಚ್ಚಳದ ಹಣ ಸಂಪೂರ್ಣವಾಗಿ ರೈತರಿಗೆ ವರ್ಗಾಯಿಸಲೇಬೇಕು ಎನ್ನುವ ನಿಲುವಿಗೆ ಅಂಟಿಕೊಂಡ ಸಿಎಂ, ಹಾಲು ಒಕ್ಕೂಟಗಳು ಇರುವುದು ರೈತರಿಗೆ ಅನುಕೂಲ ಮಾಡುವುದಕ್ಕೆ ಮಾತ್ರ, ಲಾಭ ಮಾಡುವುದಕ್ಕಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

    ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತದ ಅಧ್ಯಕ್ಷರು ಮತ್ತು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರ ಹಾಗೂ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಕಾವೇರಿ ನಿವಾಸದಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ಹಾಲಿನ ದರ ಹೆಚ್ಚಳ ಕುರಿತು ಒಕ್ಕೂಟಗಳ ಅಭಿಪ್ರಾಯ ಸಂಗ್ರಹ ಮಾಡಲಾಯಿತು. ಹಾಲಿನದರ ಹೆಚ್ಚಳ ಮಾಡಿದರೆ ಮೊತ್ತವನ್ನು ಸಂಪೂರ್ಣವಾಗಿ ರೈತರಿಗೆ ವರ್ಗಾವಣೆಯಾಗಬೇಕು ಎಂದು ಸಭೆಯಲ್ಲಿ ಸಿಎಂ ಸ್ಪಷ್ಟಪಡಿಸಿದ್ದಾರೆ.

    ಅನಗತ್ಯ ಆಡಳಿತಾತ್ಮಕ ವೆಚ್ಚಗಳಿಂದಾಗಿಯೇ ಕೆಲವು ಒಕ್ಕೂಟಗಳು ನಷ್ಟ ಅನುಭವಿಸುವಂತಾಗಿದೆ. ಆಡಳಿತಾತ್ಮಕ ವೆಚ್ಚ ಯಾವುದೇ ಕಾರಣಕ್ಕೂ 2%ಕ್ಕಿಂತ ಹೆಚ್ಚಾಗಬಾರದು ಎಂದು ಸಲಹೆ ‌ನೀಡಿದ್ದಾರೆ ಎನ್ನಲಾಗಿದೆ.

    ಬಳ್ಳಾರಿ ಹಾಲಿನ ಒಕ್ಕೂಟ 1.43 ಕೋಟಿಯಷ್ಟು ನಷ್ಟದಲ್ಲಿದ್ದು, ಫೆಬ್ರವರಿ ಅಂತ್ಯಕ್ಕೆ ಒಟ್ಟು 3 ಒಕ್ಕೂಟಗಳು ನಷ್ಟದಲ್ಲಿವೆ. ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಲಿನ ದರ ಹೆಚ್ಚಳ ಮಾಡಿದರೆ ಸ್ವಲ್ಪ ಮೊತ್ತವನ್ನು ಒಕ್ಕೂಟಗಳಿಗೆ ವರ್ಗಾಯಿಸಲು ಹಾಲು ಒಕ್ಕೂಟಗಳು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಸಭೆಯಲ್ಲಿ ಸಹಕಾರ ಸಚಿವ, ಪಶುಸಂಗೋಪನಾ ಸಚಿವರು ಹಾಜರಿದ್ದರು

  • ಹಾಲಿನ ದರ ಏರಿಕೆಗೆ ಕೆಎಂಎಫ್ ತಾತ್ಕಾಲಿಕ ಬ್ರೇಕ್- ಈ ವರ್ಷ ಹಾಲಿನ ದರ ಏರಿಕೆ ಬಹುತೇಕ ಡೌಟ್

    ಹಾಲಿನ ದರ ಏರಿಕೆಗೆ ಕೆಎಂಎಫ್ ತಾತ್ಕಾಲಿಕ ಬ್ರೇಕ್- ಈ ವರ್ಷ ಹಾಲಿನ ದರ ಏರಿಕೆ ಬಹುತೇಕ ಡೌಟ್

    ಬೆಂಗಳೂರು: ಹಾಲಿನ ದರ ಏರಿಕೆ ಭೀತಿಯಲ್ಲಿದ್ದ ಜನತೆಗೆ ಸದ್ಯಕ್ಕೆ ಆ ಚಿಂತೆ ದೂರವಾಗುವ ಸಾಧ್ಯತೆ ಇದೆ. ಸರ್ಕಾರ ತಾತ್ಕಾಲಿಕ ರಿಲೀಫ್ ನೀಡುವ ಸಾಧ್ಯತೆ ಇದ್ದು, ದರ ಏರಿಕೆ ಮಾಡುವ ನಿರ್ಧಾರದಿಂದ ಹಿಂದೆ ಸರಿದಂತಿದೆ.

    ಕಳೆದ ಕೆಲ ದಿನಗಳ ಹಿಂದಷ್ಟೇ ಸಿಎಂ (CM Siddaramaih) ಸಮಾವೇಶವೊಂದರಲ್ಲಿ ಬಹಿರಂಗವಾಗಿ ದರ ಏರಿಕೆ ಮಾಡುವ ಬಗ್ಗೆ ಸುಳಿವು ನೀಡಿದ್ದರು. ಅದು ಕೂಡ ಏರಿಕೆ ಕಂಡ ಹಣವನ್ನ ನೇರವಾಗಿ ರೈತರಿಗೆ ತಲುಪಿಸುವ ಬಗ್ಗೆ ಕೂಡ ಸುಳಿವು ಕೊಟ್ಟಿದ್ದರು. ಆ ಬೆನ್ನಲ್ಲೆ ಕೆಎಂಎಫ್ (KMF) ಕೂಡ ಏರಿಕೆ ಸಂಬಂಧ ಕೆಲ ಸಭೆಗಳನ್ನು ಮಾಡಿ ಏರಿಕೆಗೆ ಬೇಕಾದಂತ 2023ರ ಪ್ರಸ್ತಾವನೆ ಸಲ್ಲಿಕೆಗೂ ತಯಾರಿ ಮಾಡಿತ್ತು. ಈ ಬೆನ್ನಲ್ಲೆ ಸದ್ಯ ದರ ಏರಿಕೆ ಬೇಡ ಅನ್ನೋ ನಿರ್ಧಾರಕ್ಕೆ ಸರ್ಕಾರ ಬಂದಂತಿದ್ದು, ಈ ವರ್ಷ ಬಹುತೇಕ ಈ ಬಗ್ಗೆ ಯೋಚನೆ ಬೇಡ ಅನ್ನೋ ತೀರ್ಮಾನ ಮಾಡಿದೆಯಂತೆ. ಇದನ್ನೂ ಓದಿ: ನಾವು ಎಲ್ಲಿಯೂ, ಯಾವತ್ತೂ ಸಿಎಂ ಪದವಿ ಬಗ್ಗೆ ಚರ್ಚೆ ಮಾಡಿಲ್ಲ: ಸಚಿವ ಪರಮೇಶ್ವರ್‌

    ಇದೇ ವರ್ಷ ಈಗಾಗಲೇ ಎರಡು ಬಾರಿ ಏರಿಕೆ ಕಂಡಿದ್ದ ಹಾಲಿನ ದರ, ಮತ್ತೆ ಏರಿಕೆಯಾದ್ರೆ ಹೇಗೆ ಅನ್ನೋ ಆತಂಕ ಗ್ರಾಹಕರಲ್ಲಿ ಮನೆ ಮಾಡಿತ್ತು. ಅಲ್ಲದೇ ಈಗಾಗಲೇ . ಲೀಟರ್ ಗೆ 48 ರೂ ತಲುಪಿದ್ದು, ಮತ್ತೆ ಹೆಚ್ಚಾದರೆ ಹೇಗೆ ಅನ್ನೋ ಆತಂಕ ಕೂಡ ಗ್ರಾಹಕರಲ್ಲಿ ಮೂಡಿತ್ತು. ಸರ್ಕಾರದ ಈ ನಿರ್ಧಾರ ಸದ್ಯಕ್ಕಂತು ಗುಡ್ ನ್ಯೂಸ್ ಅಂದ್ರೆ ತಪ್ಪಾಗಲ್ಲ. ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಟಿಕೆಟ್‌ನಲ್ಲಿ ಕನ್ನಡ ಕಗ್ಗೊಲೆ – ಪ್ರಯಾಣಿಕರ ಆಕ್ರೋಶ

    ಕೆಎಂಎಫ್ 5 ರೂ. ಏರಿಕೆಗೆ ಪ್ರಸ್ತಾವನೆ ಸಿದ್ಧತೆ ಮಾಡಿತ್ತು. ಇದು ಫೈನಲ್ ಆಗಿದ್ರೆ ಸರ್ಕಾರ 1 ರಿಂದ 2 ರೂ. ದರ ಏರಿಕೆ ಮಾಡುವ ಸಾಧ್ಯತೆ ಇತ್ತು. ಆದರೆ ಸರ್ಕಾರ ಪರಿಷ್ಕರಣೆ ಕೈ ಬಿಡುವ ಸಾಧ್ಯತೆ ಹಿನ್ನೆಲೆ ಗ್ರಾಹಕರು ಸದ್ಯಕ್ಕಂತು ಕೊಂಚ ನಿರಾಳ ಆಗಬಹುದು. ಇದನ್ನೂ ಓದಿ:  ಅಡಿಕೆ ವ್ಯಾಪಾರಿಗೆ ಬೆದರಿಸಿ 17 ಲಕ್ಷ ದರೋಡೆ – 7 ಮಂದಿ ಅರೆಸ್ಟ್

    ಸದ್ಯ ಹಾಲಿನ ದರ ಎಷ್ಟಿದೆ?
    – ನೀಲಿ ಪ್ಯಾಕೆಟ್ ಹಾಲು 44 ರೂ.
    – ಕೇಸರಿ ಪ್ಯಾಕೆಟ್ ಹಾಲು 48 ರೂ.
    – ಶುಭಂ ಪ್ಯಾಕೆಟ್ ಹಾಲು 50 ರೂ
    – ಸಮೃದ್ಧಿ ಹಾಲಿನ ಪ್ಯಾಕೆಟ್ 53 ರೂ. ಇದನ್ನೂ ಓದಿ: ದಸರಾ ಜಂಬೂಸವಾರಿ ಮೆರವಣಿಗೆಗೆ ಪೊಲೀಸ್ ಇಲಾಖೆ ಬಿಗಿ ಭದ್ರತೆ: ಕಮಿಷನರ್ ಸೀಮಾ ಲಾಟ್ಕರ್

  • ಗ್ರಾಹಕರಿಗೆ ಬೆಲೆ ಏರಿಕೆ ಮಾಡಿ ರೈತರಿಗೂ ಸಿದ್ದರಾಮಯ್ಯ ಸರ್ಕಾರ ಮೋಸ ಮಾಡ್ತಿದೆ: ಹೆಚ್‌ಡಿಕೆ ಕಿಡಿ

    ಗ್ರಾಹಕರಿಗೆ ಬೆಲೆ ಏರಿಕೆ ಮಾಡಿ ರೈತರಿಗೂ ಸಿದ್ದರಾಮಯ್ಯ ಸರ್ಕಾರ ಮೋಸ ಮಾಡ್ತಿದೆ: ಹೆಚ್‌ಡಿಕೆ ಕಿಡಿ

    ಬೆಂಗಳೂರು: ರೈತನ ಹೆಸರಿನಲ್ಲಿ ಗ್ರಾಹಕನಿಗೆ ಬೆಲೆ ಜಾಸ್ತಿ ಮಾಡಿ ರೈತನಿಗೂ ಹಣ ಕೊಡದೆ ಸರ್ಕಾರ ದುಡ್ಡು ವಸೂಲಿ ಮಾಡುತ್ತಿದೆ. ಇದು ಸರ್ಕಾರದ ಹವ್ಯಾಸ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಸಿದ್ದರಾಮಯ್ಯ (Siddaramaiah) ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ಹಾಲಿನ ದರ ಏರಿಕೆ (Milk Price Hike) ಮಾಡುವ ಬಗ್ಗೆ ಸಮರ್ಥನೆ ಮಾಡಿಕೊಳ್ಳುತ್ತಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ಜೆಪಿ ಭವನದಲ್ಲಿ ಮಾತನಾಡಿದ ಅವರು, ಯಾರ ಹತ್ತಿರ ಕಿತ್ತುಕೊಂಡು ಯಾರಿಗೋ ದಾನ ಮಾಡಿದಂತೆ ಇವರು ಮಾಡುತ್ತಿದ್ದಾರೆ. ಗ್ರಾಹಕರ ಮೇಲೆ ಹೊರೆ ಹೊರಿಸಿ ಕೊಡುತ್ತೇವೆ ಎನ್ನುತ್ತಿದ್ದಾರೆ. ರೈತರ ಹೆಸರಿನಲ್ಲಿ ಗ್ರಾಹಕರಿಗೆ ಬೆಲೆ ಏರಿಕೆ ಮಾಡುತ್ತಾರೆ. ರೈತನಿಗೆ (Farmers) ಹಾಲು ಉತ್ಪಾದಕರ ಸಂಘದಲ್ಲಿ ಒಂದೂವರೆ- ಎರಡು ರೂಪಾಯಿ ಈ ಸರ್ಕಾರ ಕಡಿಮೆ ಮಾಡಿದೆ. ಯಾಕೆ ಕಡಿಮೆ ಮಾಡಿದ್ರಿ? ರೈತನಿಗೆ ಕೊಡೋ ಹಣವನ್ನು ಈ ಸರ್ಕಾರ ಕಡಿತ ಮಾಡಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಬೇಡಿಕೆ ಈಡೇರಿಸಲು ಸ್ವಲ್ಪ ಸಮಯ ಕೊಡಿ: ಪ್ರತಿಭಟನಾ ನಿರತ ಕಿರಿಯ ವೈದ್ಯರಿಗೆ ಸಿಎಂ ಮಮತಾ ಬ್ಯಾನರ್ಜಿ ಮನವಿ

    ರೈತರಿಗೆ ಕುಮಾರಸ್ವಾಮಿ, ದೇವೇಗೌಡ ಏನು ಮಾಡಿದ್ದಾರೆ ಎಂದು ಶುಕ್ರವಾರ ಮಾಗಡಿಯಲ್ಲಿ ಪ್ರಶ್ನೆ ಮಾಡಿದ ಸಿಎಂಗೆ ತಿರುಗೇಟು ಕೊಟ್ಟ ಅವರು, ಸಾಲಮನ್ನಾ ಮಾಡಿದ್ದು ಕುಮಾರಸ್ವಾಮಿ. ನೀರಾವರಿ ಯೋಜನೆ ನೆನೆಗುದಿಗೆ ಬಿದ್ದಿತ್ತು. ಕರ್ನಾಟಕ ನೀರಾವರಿ ಯೋಜನೆಗಳಿಗೆ ಶಕ್ತಿ ಕೊಟ್ಟಿದ್ದು ದೇವೇಗೌಡರು. ರಸಗೊಬ್ಬರ ಸಬ್ಸಿಡಿ ಕೊಟ್ಟಿದ್ದು ದೇವೇಗೌಡರು. ರೈತರಿಗೆ 2 ರೂ. ಹಾಲಿನ ಪ್ರೋತ್ಸಾಹ ಧನ ಕೊಟ್ಟಿದ್ದು ಯಡಿಯೂರಪ್ಪ ಅವರು. ನಾನು ಸಿಎಂ ಆದಾಗ ಎರಡನೇ ಬಾರಿಗೆ 6 ರೂ. ಮಾಡಲು ಹೋಗಿದ್ದೆ. ನಾನು ಇದನ್ನು ಜಾರಿ ಮಾಡಲು ಆಗದಂತೆ ಸರ್ಕಾರ ತೆಗೆದಿದ್ದು ಯಾರು? ನಾವು ಇವರಿಂದ ಹೇಳಿಸಿಕೊಳ್ಳಬೇಕಾ? ಇವರೇನು ಮಾಡಿದ್ದಾರೆ ನಮಗೆ ಗೊತ್ತಿಲ್ಲವಾ? ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸುರಕ್ಷಿತ, ಸಮೃದ್ಧ ಜಮ್ಮು-ಕಾಶ್ಮೀರ ನಿರ್ಮಿಸುತ್ತೇವೆ, ಇದು ಮೋದಿ ಗ್ಯಾರಂಟಿ: ಪ್ರಧಾನಿ ಭರವಸೆ

  • ಕಾಂಗ್ರೆಸ್ ಸರ್ಕಾರ ಹಾಲನ್ನು ಹಾಲಾಹಲ ಮಾಡಿದೆ: ಆರ್.ಅಶೋಕ್

    ಕಾಂಗ್ರೆಸ್ ಸರ್ಕಾರ ಹಾಲನ್ನು ಹಾಲಾಹಲ ಮಾಡಿದೆ: ಆರ್.ಅಶೋಕ್

    – ಕಾಂಗ್ರೆಸ್ ಮನೆ ಹಾಳು ಮಾಡೋ ಸರ್ಕಾರ

    ಬೆಂಗಳೂರು: ಹಾಲಿನ ದರ ಏರಿಕೆ (Milk Price Hike) ಸಮರ್ಥನೆ ಮಾಡಿಕೊಂಡ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ (R Ashok) ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಹಾಲನ್ನು ಇವತ್ತು ಈ ಸರ್ಕಾರ ಹಾಲಾಹಲ ಮಾಡಿದೆ. ಒಂದು ವರ್ಷದ ಹಿಂದೆ 3 ರೂ. ಈಗ 2 ರೂ. ಏರಿಕೆ ಆಗಿದೆ. ಮೊದಲು ಏರಿಕೆ ಮಾಡಿದಾಗ 80% ಹಣ ರೈತರಿಗೆ ಕೊಡುತ್ತೇವೆ ಎಂದಿದ್ದರು. 10 ಪೈಸೆ ಹಣ ರೈತರಿಗೆ ಇವರು ಕೊಟ್ಟಿಲ್ಲ. ನಿಮ್ಮ ಯೋಗ್ಯತೆಗೆ 10 ಪೈಸೆ ರೈತರಿಗೆ ಕೊಡಲಿಲ್ಲ. 50 ಎಂಎಲ್‌ಗೆ 2 ರೂ. ಜಾಸ್ತಿ ಮಾಡಿದ್ದೀನಿ ಅಂತೀರಾ. ಅಪ್ಪಾ ಬುದ್ಧಿವಂತ ಅರ್ಥಶಾಸ್ತ್ರಜ್ಞ ದೇಶಕ್ಕೆ ಅರ್ಥ ಹೇಳಿ ಕೊಡೋಕೆ ಹೋಗಿದ್ದೀಯಾ ಅಲ್ಲವಾ. 50 ಎಂಎಲ್ ಕಡಿಮೆ ಕೊಟ್ಟು, 2 ರೂಪಾಯಿ ಕಡಿಮೆ ತಗೋ ಎಂದು ಕಿಡಿಕಾರಿದರು. ಇದನ್ನೂ ಓದಿ: ಸ್ವಾಮೀಜಿ ಸ್ಥಾನ ಬಿಟ್ಟು ಕೊಡುತ್ತಾರಾದ್ರೆ, ನಾನು ಖಾವಿ ಬಟ್ಟೆ ಹಾಕ್ತೀನಿ: ಕೆಎನ್ ರಾಜಣ್ಣ

    ನಿನ್ನ ಜಾಸ್ತಿ ಹಾಲು ಕೇಳಿದ್ದು ಯಾರಪ್ಪ? ಸಿದ್ದರಾಮಯ್ಯ ಧರ್ಮದರ್ಶನ ಮಾಡೋ ಜಾಗದಲ್ಲಿ ಯಾರಾದ್ರು ಬಂದು ಕೇಳಿದ್ರಾ? ಅರ್ಜಿ ಕೊಟ್ಟು 50 ಎಂಎಲ್ ಜಾಸ್ತಿ ಕೊಡು ಅಂತ ಕೇಳಿದ್ರಾ? ನೀನು ಒಬ್ಬ ಸಿಎಂ ಆಗಿ ಮಳೆಗಾಲ ಬಂದಾಗ ಹಾಲು ಉತ್ಪಾದನೆ ಜಾಸ್ತಿ ಆಗುತ್ತದೆ. ಹೆಚ್ಚುವರಿ ಹಾಲನ್ನು ಏನು ಮಾಡಬೇಕು ಅಂತ ದಾರಿ ಕಂಡುಕೊಳ್ಳಬೇಕಿತ್ತು. ಸಹಾಯ ಮಾಡೋ ಜ್ಞಾನ ಸಿದ್ದರಾಮಯ್ಯಗೆ ಇಲ್ಲ. ದುಡ್ಡು ಒಡೆಯೋ ಜ್ಞಾನ ಇದೆ. ಇದಕ್ಕೇನಾ ನಿಮ್ಮನ್ನು ಅರ್ಥಶಾಸ್ತ್ರಜ್ಞ ಅನ್ನೋದು. ಇದಾ ಅರ್ಥಶಾಸ್ತ್ರ ಅಂದರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರ್ನಾಟಕ ಮುಂದಾಗುತ್ತಿದ್ದಂತೆ ಹೊಸೂರಿನಲ್ಲಿ ಏರ್ಪೋರ್ಟ್ ಘೋಷಿಸಿದ ಸ್ಟಾಲಿನ್

    ಹೊಟೇಲ್ ಹೋದಾಗ ಎರಡು ಇಡ್ಲಿ ಕೇಳಿದಾಗ ಹೊಟೇಲ್ ಅವನು 3 ಇಡ್ಲಿ ತೆಗೆದುಕೊಳ್ಳಬೇಕು, ಹಣ ಜಾಸ್ತಿ ಕೊಡಬೇಕು ಅಂದರೆ ಏನು ಅರ್ಥ? ಬೇಕಾಗಿರೋದು ಎರಡು ಇಡ್ಲಿ. ಹಸಿವಿಗೆ ಬೇಕಾಗಿರೋ ಇಡ್ಲಿ ಬಿಟ್ಟು 3 ಇಡ್ಲಿ ಹೆಚ್ಚಾಗಿ ಕೊಟ್ಟು 10 ರೂ. ಜಾಸ್ತಿ ಕೊಡು ಅಂದರೆ ನಾವು ಕೊಡ್ತೀವಾ? ಹೊಟೇಲ್ ಅವನಿಗೆ ಕಪಾಳಕ್ಕೆ ಹೊಡೆಯುತ್ತೇವೆ. ಈ ಸರ್ಕಾರಕ್ಕೆ ಜನರು ಕಪಾಳಕ್ಕೆ ಹೊಡೆಯಬೇಕು. ನಾವು ಸರ್ಕಾರದ ಕಪಾಳಕ್ಕೆ ಹೊಡೆಯಲು ಆಗೊಲ್ಲ. ಜನರು ಕಪಾಳಕ್ಕೆ ಹೊಡೆಯಬೇಕು. ನಾನು ಹೆಚ್ಚು ಹಾಲು ಕೇಳಿದ್ನಾ ಯಾಕೆ ಕೊಟ್ಟೆ ಅಂತ ಕಪಾಳಕ್ಕೆ ಹೊಡೆದು ಕೇಳಬೇಕು. 15 ಬಜೆಟ್ ಮಂಡನೆ ಮಾಡಿರೋ ಸಿಎಂ ಇವರು. ನನಗೂ ಅದಕ್ಕೂ ಸಂಬಂಧವಿಲ್ಲ ಅಂತಾ ಸಿಎಂ ಹೇಳುತ್ತಾರೆ. ಸರ್ಕಾರಕ್ಕೆ ಬೆಲೆ ಏರಿಕೆ ಬರೋದಿಲ್ಲ ಅಂತಾರೆ. ಡಿಸಿಎಂ ಮಾತೆತ್ತಿದರೆ ನೋಡೇ ಇಲ್ಲ. ಈ ಊರಿನವನೇ ಅಲ್ಲ ಅಂತಾರೆ. ಇವರು ಮಾಡಿದ ಎಲ್ಲಾ ಬೆಲೆ ಏರಿಕೆಗೂ ಸಮರ್ಥನೆ ಮಾಡಿಕೊಳ್ಳುತ್ತಿದ್ದೀರಾ. ಪೆಟ್ರೋಲ್, ವಿದ್ಯುತ್ ಬೆಲೆ, ಸ್ಟಾಂಪ್ ಡ್ಯೂಟಿ ಜಾಸ್ತಿ ಆದರೂ ಸಮರ್ಥನೆ ಕೊಟ್ಟರು. ಮದ್ಯದ ಬೆಲೆ ಜಾಸ್ತಿ ಮಾಡಿದ್ದೀರಿ. ಸಿರಿವಂತರ ಎಣ್ಣೆಗೆ ರೇಟ್ ಕಡಿಮೆ ಮಾಡಿ, ಬಡವರಿಗೆ ರೇಟ್ ಜಾಸ್ತಿ ಮಾಡಿದ್ದೀರಿ. ಮತ್ತೆ ಎಣ್ಣೆ ರೇಟ್ ಜಾಸ್ತಿ ಮಾಡೋಕೆ ಮುಂದಾಗಿದ್ದಾರೆ. ಇದು ಮನೆ ಹಾಳು ಸರ್ಕಾರ. ಇನ್ನೆರೆಡು ದಿನ ಇವರೇ ಇದ್ದರೆ ಕರ್ನಾಟಕವನ್ನು ದೋಚಿ ದರೋಡೆ ಮಾಡುತ್ತಾರೆ. ಆಲಿಬಾಬಾ ಮತ್ತು 40 ಕಳ್ಳರ ರೀತಿ ಎಲ್ಲಾ ಹೊಡೆದುಕೊಂಡು ಹೋಗುತ್ತಾರೆ. ಎಲ್ಲಾ ಹಣವನ್ನ ಡೆಲ್ಲಿ ಎಟಿಎಂ ಆಗಿ ಕಳುಹಿಸಿಕೊಡುತ್ತಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಿಎಂ ಸ್ಥಾನ ಹೈಕಮಾಂಡ್ ತೀರ್ಮಾನ ಮಾಡುತ್ತೆ ಸ್ವಾಮೀಜಿಯವರಲ್ಲ: ಸಿದ್ದರಾಮಯ್ಯ

    ಜನರಿಗೆ ನಾನು ಕೈ ಮುಗಿದು ಕ್ಷಮೆ ಕೇಳುತ್ತೇನೆ. ದಯವಿಟ್ಟು ಜನರು ತಯಾರಾಗಿರಿ. ಇನ್ನು ಮುಂದೆ ಏನಿದ್ದರೂ ಬೆಲೆ ಏರಿಕೆ ಮಾತ್ರ. ಎಲ್ಲಾ ಬೆಲೆ ಏರುತ್ತವೆ. ಜನರು ತಯಾರಾಗಿರಿ. ನಾವು ಈಗಾಗಲೇ ಈ ಭ್ರಷ್ಟ, ದುಷ್ಟ ಸರ್ಕಾರದ ವಿರುದ್ಧ ಹೋರಾಟ ಮಾಡಿ ಒಂದು ವಿಕೆಟ್ ಬೀಳಿಸಿದ್ದೇವೆ. ಎರಡನೇ ವಿಕೆಟ್ ನಮಗೆ ಸಿದ್ದರಾಮಯ್ಯ ಅವರೇ. ಆ ವಿಕೆಟ್ ಅನ್ನು ಈ ಅಧಿವೇಶನದಲ್ಲಿ ಬೀಳಿಸುತ್ತೇವೆ. ಹಾಲಿನ ದರ ಏರಿಕೆ ವಿಚಾರವಾಗಿ ಹೋರಾಟ ಮಾಡುತ್ತೇವೆ. ನಮ್ಮ ಅಧ್ಯಕ್ಷರು, ನಾಯಕರ ಜೊತೆ ಮಾತಾಡಿದ್ದೇನೆ. 3 ಅಥವಾ 4ನೇ ತಾರೀಕು ಸಿಎಂ ಮನೆಗೆ ಮುತ್ತಿಗೆ ಹಾಕೋ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಡಿಕೆ ಬ್ರದರ್ಸ್ ಪೈಕಿ ಯಾರೇ ನಿಂತ್ರು ಸೋಲಿಸ್ತೀವಿ: ಆರ್.ಅಶೋಕ್

  • ಇಂದಿನಿಂದ ಮತ್ತೆ ಅಮುಲ್ ಹಾಲಿನ ಬೆಲೆ ಏರಿಕೆ

    ಇಂದಿನಿಂದ ಮತ್ತೆ ಅಮುಲ್ ಹಾಲಿನ ಬೆಲೆ ಏರಿಕೆ

    ಗಾಂಧಿನಗರ: ಅಮುಲ್ ಬ್ರ‍್ಯಾಂಡ್ ಹೆಸರಿನಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (GCMMF) ಮತ್ತೆ ಹಾಲಿನ ಬೆಲೆ ಏರಿಕೆ ಮಾಡಿದೆ.

    ಹಾಲಿನ ಬೆಲೆ ಪ್ರತಿ ಲೀಟರ್‌ಗೆ 3 ರೂ. ಹೆಚ್ಚಿಸಿದೆ. ದರ ಪರಿಕ್ಷರಣೆಯ ನಂತರ ಅಮುಲ್ ಗೋಲ್ಡ್ ಹಾಲಿನ ಬೆಲೆ ಪ್ರತಿ ಲೀಟರ್‌ಗೆ 66 ರೂ. ಆಗಿದೆ. ಅಮುಲ್ ತಾಜಾ 1 ಲೀಟರ್‌ಗೆ 54 ರೂ. ಹಾಗೂ ಅಮುಲ್ ಎ2 ಎಮ್ಮೆ ಹಾಲಿನ ದರ ಪ್ರತಿ ಲೀಟರ್‌ಗೆ 70 ರೂ.ಗಳಿಗೆ ಏರಿಕೆ ಕಂಡಿದೆ. ಈ ದರ ಫೆ.3ರಿಂದಲೇ ಜಾರಿಗೆ ಬರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

    ಜಿಸಿಎಂಎಂಎಫ್ 2022ರ ಅಕ್ಟೋಬರ್‌ನಲ್ಲಿ ಗೋಲ್ಡ್, ತಾಜಾ ಹಾಗೂ ಶಕ್ತಿ ಬ್ರ್ಯಾಂಡ್‌ಗಳ ಹಾಲಿನ ಬೆಲೆಯನ್ನು 2 ರೂ. ಹೆಚ್ಚಿಸಿತ್ತು. ಇದನ್ನೂ ಓದಿ: ಬೆಂಗಳೂರಿನಲ್ಲಿ ಜಿ20 ಶೃಂಗಸಭೆ – ತಾಜ್ ವೆಸ್ಟ್ ಎಂಡ್ ಆವರಣದ ಮೇಲೆ No Fly Zone ಜಾರಿ

    ಇದೀಗ ಫೆ.3ರಿಂದ ಜಾರಿಗೆ ಬರುವಂತೆ ಅಮುಲ್ ಪ್ಯಾಕೆಟ್ ಹಾಲಿನ ಬೆಲೆಯನ್ನು ಪರಿಷ್ಕರಿಸಿದೆ. ಹಾಲಿನ ಒಟ್ಟಾರೆ ಕಾರ್ಯಾಚರಣೆ ಮತ್ತು ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳ ಆಗಿರುವುದು ಹಾಗೂ ದನಗಳ ಮೇವಿನ ವೆಚ್ಚ ಏರಿಕೆಯಾಗಿರುವುದರಿಂದ ಹಾಲಿನ ದರ ಹೆಚ್ಚಿಸಲಾಗಿದೆ ಎಂದು ಅಮಲ್ ಹೇಳಿದೆ. ಇದನ್ನೂ ಓದಿ: `ಕಲಾತಪಸ್ವಿ’ ಖ್ಯಾತ ಚಲನಚಿತ್ರ ನಿರ್ಮಾಪಕ ಕೆ. ವಿಶ್ವನಾಥ್ ನಿಧನ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k