Tag: milk dairy

  • 12 ಮಹಿಳೆಯರು ಕಟ್ಟಿದ ಡೈರಿಯ ಯಶೋಗಾಥೆ – ಗದಗ ಜಿಲ್ಲೆಗೆ ಮಾದರಿ ಡೋಣಿ ಮಹಿಳಾ ಸಂಘ

    12 ಮಹಿಳೆಯರು ಕಟ್ಟಿದ ಡೈರಿಯ ಯಶೋಗಾಥೆ – ಗದಗ ಜಿಲ್ಲೆಗೆ ಮಾದರಿ ಡೋಣಿ ಮಹಿಳಾ ಸಂಘ

    – 2010 ರಲ್ಲಿ ಆರಂಭ, 485ಕ್ಕೆ ಏರಿದ ಸದಸ್ಯರ ಸಂಖ್ಯೆ
    – ಮೊದಲು 25 ಲೀ. ಈಗ 1 ಸಾವಿರ ಲೀ. ಹಾಲು ಸಂಗ್ರಹ

    ಗದಗ: ಕೈಲಾಗದು ಎಂದು ಕೈಕಟ್ಟಿ ಕುಳಿತುಕೊಳ್ಳದೇ ಮನಸ್ಸು ಮಾಡಿದರೆ ಏನನ್ನಾದರೂ ಸಾಧನೆ ಮಾಡಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ ಡೋಣಿ ಗ್ರಾಮದ ಮಹಿಳೆಯರು. 12 ರೈತ ಮಹಿಳೆಯರು ಕಟ್ಟಿದ ಡೈರಿ (Milk Dairy) ಇದೀಗ ಬೆಳೆದು ಹೆಮ್ಮೆಯ ಹೆಮ್ಮರವಾಗಿದೆ.

    ಹೌದು ಗದಗ (Gadag) ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ (Doni) ಗ್ರಾಮದ 12 ರೈತ ಮಹಿಳೆಯರು ತಾವು ಸ್ವಾವಲಂಬನೆಯಿಂದ ಬದುಕಲು  14 ವರ್ಷಗಳ ಹಿಂದೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಹುಟ್ಟುಹಾಕಿದ್ದರು. 2010ರಲ್ಲಿ ದಿನಕ್ಕೆ 25 ಲೀಟರ್ ಹಾಲು ಸಂಗ್ರಹದಿಂದ ಆರಂಭಗೊಂಡ ಸಂಘದಲ್ಲಿ ಈಗ ಸುಮಾರು ಒಂದು ಸಾವಿರ ಲೀಟರ್‌ವರೆಗೆ ಹಾಲು ಸಂಗ್ರಹವಾಗುತ್ತಿದೆ. ಇದನ್ನೂ ಓದಿ: ಮಂಗಳೂರು ನಗರದಲ್ಲಿ ತಲೆಯೆತ್ತಿದೆ ಸ್ಮಾರ್ಟ್ ಮಾರ್ಕೆಟ್‌ಗಳು – ಉದ್ಘಾಟನೆಯಾಗದೇ ಪಾಳುಬಿದ್ದ ಹೊಸ ಕಟ್ಟಡಗಳು

    ಹಾಲು ಕರೆಯುವುದರಿಂದ ಹಿಡಿದು ಸರದಿ ಸಾಲಿನಲ್ಲಿ ನಿಂತು ಹಾಲು ಹಾಕುವವರು, ಡೈರಿಯಲ್ಲಿ ಕೆಲಸ ಮಾಡುವವರು ಮಹಿಳೆಯರೇ ಇದ್ದಾರೆ. ಸಂಘಕ್ಕೆ ಈಗ 485 ಮಂದಿ ಹಾಲು ಹಾಕುವ ಸದಸ್ಯರಿದ್ದಾರೆ. ಕಳೆದ 14 ವರ್ಷಗಳಿಂದ ಅಧ್ಯಕ್ಷೆ, ಉಪಾಧ್ಯಕ್ಷೆ, ಕಾರ್ಯದರ್ಶಿ, ಖಜಾಂಚಿ ಯಾರೂ ಬದಲಾಗಿಲ್ಲ. ಅವರಲ್ಲಿ ಒಗ್ಗಟ್ಟು ಹಾಗೂ ಸಾಕಷ್ಟು ಹೊಂದಾಣಿಕೆ ಇರುವುದರಿಂದ ಆರಂಭದಿಂದ ಇದ್ದವರೇ ಮುಂದುವರೆಯುತ್ತಿದ್ದಾರೆ.

    ಸಂಘದ ಎಲ್ಲ ಸದಸ್ಯರಿಗೆ, ಆಡಳಿತ ಮಂಡಳಿ ಸದಸ್ಯರಿಗೆ ಹಾಲು ಒಕ್ಕೂಟದಿಂದ, ತರಬೇತಿ, ನಬಾರ್ಡ್ ಬ್ಯಾಂಕ್, ಕೆವಿಜಿ ಬ್ಯಾಂಕ್ ಅಧಿಕಾರಿಗಳಿಂದ ಮಾಹಿತಿ ಮತ್ತು ತರಬೇತಿ ನೀಡಲಾಗುತ್ತಿದೆ. ಆಯ್ದ ಸಂಘದ ಸದಸ್ಯರಿಗೆ ಹಸು, ಎಮ್ಮೆಯನ್ನು ಸರ್ಕಾರ ಮತ್ತು ಸಂಘದ ಅನುದಾನದಲ್ಲಿ ಕೊಡಿಸುತ್ತಾರೆ. ಸಂಘದ ಸದಸ್ಯರು ಹಾಗೂ ಜಾನುವಾರುಗಳಿಗೆ ಇವರೇ ವಿಮೆ ಮಾಡಿಸುತ್ತಾರೆ. ಕಳೆದ 14 ವರ್ಷದಲ್ಲಿ 15 ಲಕ್ಷ ರೂ. ಹೆಚ್ಚು ಪರಿಹಾರ ಕೊಡಿಸಿದ್ದಾರೆ. ಇವರ ಸಾಧನೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸರ್ಕಾರ ಮತ್ತು ಬ್ಯಾಂಕ್‌ಗಳು ಹೈನುಗಾರಿಕೆ, ಹಾಲು ಉತ್ಪಾದನೆಗೆ ಹೆಚ್ಚಿನ ಆರ್ಥಿಕ ನೆರವು ನೀಡಬೇಕು ಎಂಬ ಬೇಡಿಕೆ ಈ ಮಹಿಳೆಯರದ್ದಾಗಿದೆ. ಸಂಘದ ಎಲ್ಲ ಹಣಕಾಸು ವ್ಯವಹಾರಗಳನ್ನು ಬ್ಯಾಂಕ್ ಖಾತೆ ಮೂಲಕ ನಡೆಸುತ್ತಿದ್ದು ಮಹಿಳೆಯರೇ ನೋಡಿಕೊಳ್ಳುತ್ತಿರುವುದು ವಿಶೇಷ.

  • ಮನ್ಮುಲ್‌ನಲ್ಲಿ ಮೆಗಾ ಡೈರಿ ಉದ್ಘಾಟಿಸಿದ ಗೃಹ ಸಚಿವ ಅಮಿತ್ ಶಾ

    ಮನ್ಮುಲ್‌ನಲ್ಲಿ ಮೆಗಾ ಡೈರಿ ಉದ್ಘಾಟಿಸಿದ ಗೃಹ ಸಚಿವ ಅಮಿತ್ ಶಾ

    ಮಂಡ್ಯ: ಇಂದು ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಜೆಡಿಎಸ್ ಭದ್ರಕೋಟೆ ಮಂಡ್ಯಗೆ (Mandya) ತೆರಳಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ. ಮಂಡ್ಯದ ಮನ್ಮುಲ್‌ನಲ್ಲಿ (Manmul) ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಾಣವಾಗಿರುವ ಮೆಗಾ ಡೈರಿಯನ್ನು (Milk Dairy) ಅಮಿತ್ ಶಾ ಉದ್ಘಾಟಿಸಿದ್ದಾರೆ.

    ಸಕ್ಕರೆ ನಾಡಿಗೆ ಬಂದಿಳಿದ ಅಮಿತ್ ಶಾ ಅವರನ್ನು ಬಿಜೆಪಿ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಮದ್ದೂರು ತಾಲೂಕಿನ ಹುಲಿಗೆರೆಪುರ ಹೆಲಿಪ್ಯಾಡ್‌ಗೆ ಹೆಲಿಕಾಫ್ಟರ್ ಮೂಲಕ ಆಗಮಿಸಿದ ಅವರು ಬಳಿಕ ರಸ್ತೆ ಮಾರ್ಗವಾಗಿ ಮಂಡ್ಯದ ವಿವಿ ಆವರಣ ತಲುಪಿದ್ದಾರೆ. ಅಮಿತ್ ಶಾ ಅವರಿಗೆ ಅಪ್ಪಟ ರೇಷ್ಮೆ ಬಳಸಿ ತಯಾರಿಸಲಾಗಿರುವ ಮೈಸೂರು ಪೇಟವನ್ನು ಸ್ವಾಗತದ ವೇಳೆ ತೊಡಿಸಲಾಗಿದೆ. ಸರ್ದಾರ್ ವಲ್ಲಭಭಾಯಿ ಪಟೇಲರ ಬೆಳ್ಳಿಯಲ್ಲಿ ತಯಾರಾಗಿರುವ ಪ್ರತಿಮೆಯನ್ನೂ ಉಡುಗೊರೆಯಾಗಿ ನೀಡಲಾಗಿದೆ.

    ಅಮಿತ್ ಶಾ ಅವರು ಉದ್ಘಾಟಿಸಿರುವ ಮೆಗಾ ಡೈರಿ ಸುಮಾರು 260 ಕೋಟಿ ರೂ. ವೆಚ್ಚದಲ್ಲಿ ಸಿದ್ಧವಾಗಿದೆ. 10-14 ಲಕ್ಷ ಲೀ. ಹಾಲು ಸಂಸ್ಕರಣಾ ಸಾಮರ್ಥ್ಯವನ್ನು ಇದು ಹೊಂದಿದ್ದು, 30 ಮೆಟ್ರಿಕ್ ಟನ್ ಹಾಲಿನ ಪುಡಿ ಉತ್ಪಾದಿಸುವ ಸಾಮರ್ಥ್ಯವನ್ನೂ ಇದು ಹೊಂದಿದೆ. 2 ಲಕ್ಷ ಲೀ. ಯುಹೆಚ್‌ಡಿ ಹಾಲನ್ನು ಪ್ಯಾಕ್ ಮಾಡಬಹುದಾದ ಕಟ್ಟಡ ಇದಾಗಿದ್ದು, ಇಲ್ಲಿ ಬೆಣ್ಣೆ, ತುಪ್ಪ, ಪೇಡ, ಬರ್ಫಿ, ಕೋವಾ, ಲಾಡು, ಬೆಲ್ಲದ ಬರ್ಫಿ, ಮೊಸರು, ಮಜ್ಜಿಗೆ ತಯಾರಿಕಾ ಘಟಕವೂ ಇದೆ. ಮೆಗಾ ಡೈರಿಯಿಂದಾಗಿ ಮಂಡ್ಯ ಜಿಲ್ಲೆಯ 99 ಸಾವಿರ ರೈತರಿಗೆ ಅನುಕೂಲವಾಗಲಿದೆ. ಇದನ್ನೂ ಓದಿ: ಆಪರೇಷನ್ ಓಲ್ಡ್ ಮೈಸೂರು ಸುಳಿವು ನೀಡಿದ ಶಾ- ಜಾತಿ ಸಮೀಕರಣದ ಫಸ್ಟ್ ರಿಪೋರ್ಟ್ ಪಡೆದ ಚಾಣಕ್ಯ

    ಉದ್ಘಾಟನೆ ಬಳಿಕ ಮಾತನಾಡಿದ ಅಮಿತ್ ಶಾ, ಸಹಕಾರಿಗಳಿಗೆ, ರೈತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ಮಂಡ್ಯ ಮೆಗಾ ಡೈರಿ ಉದ್ಘಾಟನೆ ಆಗಿದೆ. 260 ಕೋಟಿ ರೂ. ವೆಚ್ಚದಲ್ಲಿ ಮಿಲ್ಕ್ ಫ್ಲಾಂಟ್ ನಿರ್ಮಾಣ ಆಗಿದೆ. ಪ್ರತಿದಿನ 10 ಲಕ್ಷ ಲೀ. ಹಾಲು ಸಂಸ್ಕರಣೆ ಆಗುತ್ತದೆ. ಮುಂದಿನ ದಿನಗಳಲ್ಲಿ 14 ಲಕ್ಷ ಲೀ. ಸಂಸ್ಕರಣೆಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.

    ಅಮಿತ್ ಶಾ ಭಾಷಣವನ್ನು ಕನ್ನಡಕ್ಕೆ ಅನುವಾದಿಸುತ್ತಿದ್ದ ವೇಳೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬರಡು ನೆಲದಲ್ಲೂ ಕಮಲ ಅರಳಿಸುವುದು ಅಮಿತ್ ಶಾಗೆ ಗೊತ್ತಿದೆ. ಅದಕ್ಕೆ ಅವರನ್ನು ಚುನಾವಣಾ ಚಾಣಾಕ್ಷ ಎನ್ನುತ್ತಾರೆ ಎಂದು ಹೊಗಳಿದರು. ಇದನ್ನೂ ಓದಿ: ತಾಯಿಗೆ ಸರ್ಪ್ರೈಸ್‌ ಕೊಡಲು ತೆರಳ್ತಿದ್ದಾಗಲೇ ದುರಂತ – ಪಂತ್ ಅಭಿಮಾನಿಗಳ ಆಕ್ರಂದನ

    Live Tv
    [brid partner=56869869 player=32851 video=960834 autoplay=true]

  • ಹಾವೇರಿಯ ಜಂಗಮನಕೊಪ್ಪದಲ್ಲಿ ಹಾಲು ಸಂಸ್ಕರಣಾ ಡೇರಿ ಸ್ಥಾಪನೆಗೆ ಸರ್ಕಾರದ ಒಪ್ಪಿಗೆ: ಬೊಮ್ಮಾಯಿ

    ಹಾವೇರಿಯ ಜಂಗಮನಕೊಪ್ಪದಲ್ಲಿ ಹಾಲು ಸಂಸ್ಕರಣಾ ಡೇರಿ ಸ್ಥಾಪನೆಗೆ ಸರ್ಕಾರದ ಒಪ್ಪಿಗೆ: ಬೊಮ್ಮಾಯಿ

    -15 ಕೋಟಿ ರೂಪಾಯಿ ಅನುದಾನ, ಪಿಪಿಪಿ ಮಾದರಿಯಲ್ಲಿ ಅನುಷ್ಠಾನ

    ಬೆಂಗಳೂರು : ಧಾರವಾಡ ಹಾಲು ಒಕ್ಕೂಟದ ವತಿಯಿಂದ ಹಾವೇರಿ ಜಿಲ್ಲೆಯ ಜಂಗಮನಕೊಪ್ಪ ಗ್ರಾಮದಲ್ಲಿ 1 ಲಕ್ಷ ಲೀಟರ್ ಸಾಮಥ್ರ್ಯದ ಹಾಲು ಸಂಸ್ಕರಣಾ ಡೇರಿ ಹಾಗೂ ಅಲ್ಟ್ರಾ ಹೀಟ್ ಟ್ರೀಟ್ಮೆಂಟ್ ಪ್ಯಾಕಿಂಗ್ ಘಟಕವನ್ನು 90 ಕೋಟಿ ರೂಪಾಯಿ ವೆಚ್ಚದಲ್ಲಿ (ಪಿಪಿಪಿ) ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸುವ ಮಹತ್ವಾಕಾಂಕ್ಷಿ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಹಾಗೂ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಬೆಂಗಳೂರಿನಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಾವೇರಿ ಜಿಲ್ಲೆಯ ಹಾಲು ಉತ್ಪಾದಕರ ಬಹುದಿನಗಳ ಈ ಬೇಡಿಕೆಗೆ ಅನುಮೋದನೆ ದೊರೆಯಿತು ಎಂದು ತಿಳಿಸಿದರು.

    ಧಾರವಾಡ ಹಾಲು ಒಕ್ಕೂಟ ಮಹಾಮಂಡಳಿ ವ್ಯಾಪ್ತಿಯಲ್ಲಿ ನಾಲ್ಕು ಜಿಲ್ಲೆಗಳು ಬರುತ್ತವೆ. ಈ ಜಿಲ್ಲೆಗಳಲ್ಲಿ ಒಟ್ಟು 45,000 ಹಾಲು ಉತ್ಪಾದಕ ಸದಸ್ಯರಿದ್ದಾರೆ. ಆದರೆ ಹಾವೇರಿ ಜಿಲ್ಲೆಯಲ್ಲಿ 22,000 ಹಾಲು ಉತ್ಪಾದಕರಿದ್ದಾರೆ. ಜಿಲ್ಲೆಯಲ್ಲಿ ಪ್ರತಿ ದಿನ ಒಂದು ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ.

    ಮುಂದಿನ ಐದು ವರ್ಷಗಳಲ್ಲಿ ಹಾಲು ಉತ್ಪಾದನೆ ಪ್ರಮಾಣ ಶೇ.20ರಷ್ಟು ವೃದ್ಧಿಯಾಗುವ ನಿರೀಕ್ಷೆ ಇದೆ. ಆದ್ದರಿಂದ ಹಾವೇರಿಯಲ್ಲಿ 1 ಲಕ್ಷ ಲೀಟರ್ ಸಾಮಥ್ರ್ಯದ ಹಾಲು ಸಂಸ್ಕರಣಾ ಡೇರಿ ಹಾಗೂ ಅಲ್ಟ್ರಾ ಹೀಟ್ ಟ್ರೀಟ್ಮೆಂಟ್ ಪ್ಯಾಕಿಂಗ್ ಘಟಕದ ಯೋಜನೆ ಸಿದ್ಧಪಡಿಸಲಾಗಿತ್ತು. ಈ ಮಹತ್ವಾಕಾಂಕ್ಷಿ ಯೋಜನೆಗೆ ಸಚಿವರಿಂದ ಇಂದು ಅನುಮತಿ ದೊರೆತಿದೆ ಎಂದು ಬಸವರಾಜ್ ಬೊಮ್ಮಾಯಿ ಹರ್ಷ ವ್ಯಕ್ತಪಡಿಸಿದರು.

    ಹಾಲು ಸಂಸ್ಕರಣೆ ಹಾಗೂ ಪ್ಯಾಕಿಂಗ್ ಘಟಕ ಸ್ಥಾಪನೆ ಹಾವೇರಿ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆ ಆಗಿತ್ತು. ಜಿಲ್ಲೆಯಲ್ಲಿ ಕ್ಷೀರ ಕ್ರಾಂತಿಗೆ ಈ ಯೋಜನೆ ಸಹಕಾರಿಯಾಗಲಿದೆ. ಪಿಪಿಪಿ ಮಾದರಿಯ ಈ ಯೋಜನೆಗೆ ಸರ್ಕಾರದ ವತಿಯಿಂದ 15 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ ಎಂದು ಹೇಳಿದರು.

  • ಹಾಲಿನ ಡೈರಿಗೆ ನುಗ್ಗಿದ ಖಾಸಗಿ ಬಸ್- ಇಬ್ಬರಿಗೆ ಗಾಯ

    ಹಾಲಿನ ಡೈರಿಗೆ ನುಗ್ಗಿದ ಖಾಸಗಿ ಬಸ್- ಇಬ್ಬರಿಗೆ ಗಾಯ

    ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ವೊಂದು ಹಾಲಿನ ಡೈರಿಗೆ ನುಗ್ಗಿದ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ತಟ್ಟೆಕೆರೆ ಗ್ರಾಮದಲ್ಲಿ ನಡೆದಿದೆ.

    ಗೊರಗುಂಟೆಪಾಳ್ಯದ ಶಾಹಿ ಗಾರ್ಮೆಂಟ್ಸ್ ಗೆ ಪ್ರತಿದಿನ ನೌಕರರನ್ನು ಕರೆದೊಯ್ಯುತ್ತಿದ್ದ ಬಸ್ ಇದಾಗಿದ್ದು, ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ನಂತರ ಹಾಲಿನ ಡೈರಿಗೆ ನುಗ್ಗಿದೆ. ಘಟನೆಯಿಂದ ಕೂದಲೆಳೆ ಅಂತರದಲ್ಲಿ ಸ್ಥಳೀಯರು ಪಾರಾಗಿದ್ದು, ಇಬ್ಬರಿಗೆ ಗಾಯವಾಗಿದೆ.

    ಗಾಯಾಳುಗಳನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಡಾಬಸ್‍ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.