Tag: Military Training

  • 75 ಕೋಟಿ ಮೌಲ್ಯದ ಚಾಪರ್‌ನಲ್ಲಿ ಸೆಕ್ಸ್‌ ಮಾಡುತ್ತಲೇ ಸಿಕ್ಕಿಬಿದ್ದ ಬ್ರಿಟನ್‌ ಸೈನಿಕರು

    75 ಕೋಟಿ ಮೌಲ್ಯದ ಚಾಪರ್‌ನಲ್ಲಿ ಸೆಕ್ಸ್‌ ಮಾಡುತ್ತಲೇ ಸಿಕ್ಕಿಬಿದ್ದ ಬ್ರಿಟನ್‌ ಸೈನಿಕರು

    ಲಂಡನ್‌: ಮಿಲಿಟರಿ ತರಬೇತಿ (Military Training) ವೇಳೆ 75 ಕೋಟಿ ರೂ. ಮೌಲ್ಯದ ಚಾಪರ್‌ನಲ್ಲಿ ಸೆಕ್ಸ್‌ ಮಾಡುತ್ತಿದ್ದಾಗಲೇ ಸೈನಿಕರಿಬ್ಬರು ಸಿಕ್ಕಿಬಿದ್ದಿರುವ ಘಟನೆ ಬ್ರಿಟನ್‌ನಲ್ಲಿ (UK Soldier) ನಡೆದಿದೆ.

    ಯುಕೆ ಮಿಲಿಟರಿ ತರಬೇತಿ ಪ್ರದೇಶದಲ್ಲಿ ಅಪಾಚೆ ಚಾಪರ್‌ನ (Apache helicopter) ರೋಟರ್‌ಗಳಲ್ಲಿ ಅಸಾಮಾನ್ಯ ಚಲನೆ ಕಂಡುಬಂದಿದೆ. ನಿರ್ವಹಣಾ ಸಿಬ್ಬಂದಿ ಇದನನು ಪರಿಶೀಲಿಸಿದಾಗ ಕುಡಿದು ಸೆಕ್ಸ್‌ ಮಾಡುತ್ತಿದ್ದ ಸೈನಿಕರು ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ದೆಹಲಿಗೆ ಹೊರಟ ನಂದಿನಿ – ನ.21ರಿಂದ ರಾಷ್ಟ್ರ ರಾಜಧಾನಿಯಲ್ಲೂ ಸಿಗಲಿದೆ ಕೆಎಂಎಫ್ ಉತ್ಪನ್ನಗಳು

    30 ಎಂಎಂ ಫಿರಂಗಿ ಮತ್ತು ಹೆಲ್ಫೈರ್ ಕ್ಷಿಪಣಿಗಳನ್ನು ಹೊಂದಿದ ಶಸ್ತ್ರಸಜ್ಜಿತ ಅಪಾಚೆ ಚಾಪರ್‌ ತರಬೇತಿ ಪೂರ್ಣಗೊಳಿಸಿತ್ತು. ಇದಾದ ಬಳಿಕವೂ ರೋಟರ್‌ಗಳು ಮೇಲಕ್ಕೆ ಮತ್ತು ಕೆಳಕ್ಕೆ ತೂಗಾಡುವುದು ಕಂಡುಬಂದಿತ್ತು. ಹೆಲಿಕಾಪ್ಟರ್‌ನಿಂದ ವಿಚಿತ್ರ ಶಬ್ಧಗಳು ಕೇಳಿಬರುತ್ತಿರು ಪರಿಶೀಲನೆಗೆ ಮುಂದಾದಾಗ ಸೈನಿಕರಿಬ್ಬರು ಅರೆಬೆತ್ತಲಾಗಿ ಚಾಪರ್‌ ಹಿಂಬದಿಯ ಕಾಕ್‌ಪಿಟ್‌ನಲ್ಲಿ ಸೆಕ್ಸ್‌ ಮಾಡುತ್ತಿರುವುದು ಕಂಡುಬಂದಿದೆ. ಪುರುಷ ಸೈನಿಕ ಸೇನಾ ಸಮವಸ್ತ್ರದಲ್ಲಿದ್ದರೆ, ಮಹಿಳೆ ಸಾಮಾನ್ಯ ಉಡುಪಿನಲ್ಲಿದ್ದಳು ಎಂದು ವರದಿಗಳು ತಿಳಿಸಿವೆ.

    ಬಳಿಕ ಇಬ್ಬರ ವಿರುದ್ಧ ಕ್ರಮ ಜರುಗಿಸಲು ಮಿಲಿಟರಿ ಏವಿಯೇಷನ್ ​​ಅಥಾರಿಟಿಗೆ ವರದಿ ನೀಡಲಾಯಿತು. ಪುರುಷ ಸೈನಿಕನು 653 ಸ್ಕ್ವಾಡ್ರನ್‌ನ ಕಮಾಂಡರ್‌ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಇನ್ನೂ ಕೆಲ ಸ್ಥಳೀಯ ವರದಿಗಳ ಪ್ರಕಾರ, 2016ರಲ್ಲಿ ಈ ಘಟನೆ ನಡೆದಿದ್ದು ಇದೀಗ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಗುಜರಾತ್‌ ಕರಾವಳಿಯಲ್ಲಿ 700 ಕೆಜಿ ಮಾದಕ ವಸ್ತು ವಶ – 8 ಮಂದಿ ಇರಾನ್ ಪ್ರಜೆಗಳು ಅರೆಸ್ಟ್‌

  • ಉಕ್ರೇನ್‌ ಮೇಲೆ ಯುದ್ಧ: ರಷ್ಯಾದಲ್ಲಿ ಶಾಲಾ ಮಕ್ಕಳಿಗೂ ಸೇನಾ ತರಬೇತಿ

    ಉಕ್ರೇನ್‌ ಮೇಲೆ ಯುದ್ಧ: ರಷ್ಯಾದಲ್ಲಿ ಶಾಲಾ ಮಕ್ಕಳಿಗೂ ಸೇನಾ ತರಬೇತಿ

    ಮಾಸ್ಕೋ: ಉಕ್ರೇನ್‌ (Ukraine) ಮೇಲೆ ನಡೆಯುತ್ತಿರುವ ಯುದ್ಧದ ಹಿನ್ನೆಲೆ ರಷ್ಯಾದಲ್ಲಿ (Russia) ಶಾಲಾ ಮಕ್ಕಳಿಗೂ ಸೇನಾ ತರಬೇತಿ ನೀಡಲಾಗುತ್ತಿದೆ. ಮಕ್ಕಳು ಶಸ್ತ್ರಾಸ್ತ್ರ ಹಿಡಿದು ತರಬೇತಿ ಪಡೆಯುತ್ತಿರುವ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

    ದಕ್ಷಿಣದ ನಗರವಾದ ವ್ಲಾಡಿಕಾವ್ಕಾಜ್‌ನಲ್ಲಿ ಸೇನಾ ಸಮವಸ್ತ್ರದಲ್ಲಿ ಹದಿಹರೆಯದ ಬಾಲಕರು ಶಸ್ತ್ರಾಸ್ತ್ರಗಳನ್ನು ಹಿಡಿದು ತರಬೇತಿಯಲ್ಲಿ ನಿರತರಾಗಿದ್ದಾರೆ. ಅವರಿಗೆ ಸೇನಾ ಸಿಬ್ಬಂದಿ ತರಬೇತಿ ನೀಡುತ್ತಿದ್ದಾರೆ. ಇದನ್ನೂ ಓದಿ: ಪಪುವಾ ನ್ಯೂಗಿನಿಯಾದಲ್ಲಿ ಭಾರಿ ಭೂಕುಸಿತಕ್ಕೆ 100 ಮಂದಿ ಬಲಿ

    ಪಿಸ್ತೂಲ್‌ನಿಂದ ಗುಂಡು ಹಾರಿಸುವುದು ಸುಲಭ. ಆದರೆ ಆಕ್ರಮಣಕಾರಿ ರೈಫಲ್‌ನಿಂದ ಗುರಿಯಿಟ್ಟು ಫೈರ್‌ ಮಾಡುವುದು ತುಂಬಾ ಕಷ್ಟಕರವಾಗಿದೆ ಎಂದು ಶಾಲಾ ವಿದ್ಯಾರ್ಥಿ ಡೇವಿಡ್ ತನ್ನ ತರಬೇತಿ ಅನುಭವ ಹಂಚಿಕೊಂಡಿದ್ದಾನೆ.

    ಉಕ್ರೇನ್‌ ಮೇಲಿನ ರಷ್ಯಾ ಯುದ್ಧ ಈಗ 3ನೇ ವರ್ಷಕ್ಕೆ ಕಾಲಿಟ್ಟಿದೆ. ರಷ್ಯಾದಲ್ಲಿ ಯುವಕರಿಗೆ ಮಿಲಿಟರಿ ಸೇವೆ ಕಡ್ಡಾಯವಾಗಿದೆ. ತರಬೇತಿ ಕುರಿತು ರಷ್ಯಾದ ಉತ್ತರ ಒಸ್ಸೆಟಿಯಾ ಪ್ರದೇಶದ ನಾಯಕ ನಿವೃತ್ತ ವೈಸ್ ಅಡ್ಮಿರಲ್ ಸೆರ್ಗೆಯ್ ಮೆನೈಲೊ ಮಾತನಾಡಿ, ತರಬೇತಿಯು ತಂಡದಲ್ಲಿ ಯುವಜನರು ಮಿಲಿಟರಿ ಕರ್ತವ್ಯ ಪೂರೈಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿಯೆಟ್ನಾಂನ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ – 14 ಮಂದಿ ಬಲಿ

    ಪ್ರತಿಯೊಬ್ಬರೂ ಜೀವಗಳನ್ನು ಉಳಿಸಲು. ಶಸ್ತ್ರಾಸ್ತ್ರಗಳನ್ನು ನಿರ್ವಹಿಸಲು ಮತ್ತು ದೈಹಿಕವಾಗಿ ಸದೃಢರಾಗಿರಬೇಕು ಎಂದು ಸಶಸ್ತ್ರ ಪಡೆಗಳನ್ನು ಬೆಂಬಲಿಸುವ ಸ್ವಯಂಸೇವಕ ಸಂಸ್ಥೆಯ ಸ್ಥಳೀಯ ಮುಖ್ಯಸ್ಥ ಬೋರಿಸ್ ಕಾಂಟೆಮಿರೊವ್ ಹೇಳಿದ್ದಾರೆ.

  • 2 ತಿಂಗಳು ಸೇನಾ ತರಬೇತಿ ಪಡೆಯಲಿದ್ದಾರೆ ಧೋನಿ

    2 ತಿಂಗಳು ಸೇನಾ ತರಬೇತಿ ಪಡೆಯಲಿದ್ದಾರೆ ಧೋನಿ

    ನವದೆಹಲಿ: ವಿಶ್ವಕಪ್ ನಂತರ ಧೋನಿ ಕ್ರಿಕೆಟಿಗೆ ನಿವೃತ್ತಿ ಹೇಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ವಿಂಡೀಸ್ ಪ್ರವಾಸದಲ್ಲಿ ಟೀಂ ಇಂಡಿಯಾದಲ್ಲಿ ಭಾಗಿಯಾಗದ ಕಾರಣ ನಿವೃತ್ತಿ ಹೇಳುತ್ತಾರಾ ಎನ್ನುವ ಪ್ರಶ್ನೆ ಎದ್ದಿತ್ತು. ಈಗ ಧೋನಿ ತನ್ನ ಆಸೆಯನ್ನು ಬಹಿರಂಗ ಪಡಿಸುವ ಮೂಲಕ ಅಭಿಮಾನಿಗಳು ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

    ಮಹೇಂದ್ರ ಸಿಂಗ್ ಧೋನಿ ಕಾಶ್ಮೀರದಲ್ಲಿ ಸೇನಾ ತರಬೇತಿಗೆ ಹೋಗುತ್ತಿದ್ದಾರೆ. ಧೋನಿ ಅವರು ಪ್ಯಾರಾಚೂಟ್ ರೆಜಿಮೆಂಟ್ ಸೇನಾ ತಂಡವನ್ನು ಸೇರಿ ಕರ್ತವ್ಯ ನಿರ್ವಹಿಸಲು ಇಚ್ಛಿಸಿದ್ದರು. ಅದರಂತೆಯೇ ಧೋನಿ ಅವರು ಪ್ಯಾರಾಚೂಟ್ ರೆಜಿಮೆಂಟ್ ಬೆಟಾಲಿಯನ್ ಅನ್ನು ಸೇರಿಕೊಂಡು ತರಬೇತಿಯಲ್ಲಿ ಭಾಗವಹಿಸಲು ಅನುಮತಿ ಕೇಳಿದ್ದರು. ಇದೀಗ ಧೋನಿ ಅವರ ಮನವಿಯನ್ನು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಪುರಸ್ಕರಿಸಿ ಆರ್ಮಿ ಬೆಟಾಲಿಯನ್ ತರಬೇತಿ ಪಡೆಯಲು ಧೋನಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.

    ಧೋನಿ ಅವರು ಮುಂದಿನ ಎರಡು ತಿಂಗಳವರೆಗೂ ಪ್ಯಾರಾಚೂಟ್ ರೆಜಿಮೆಂಟ್ ಬೆಟಾಲಿಯನ್ ಜೊತೆ ಜಮ್ಮು ಮತ್ತು ಕಾಶ್ಮೀರದಲ್ಲಿ ತರಬೇತಿ ಪಡೆಯಲಿದ್ದಾರೆ. ಆದರೆ ಧೋನಿ ಅವರು ಯಾವುದೇ ಸೇನಾ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು ಅವಕಾಶವಿರುವುದಿಲ್ಲ.

    ಕರ್ನಲ್ ಗೌರವ ಹುದ್ದೆ
    ಧೋನಿ ಅವರಿಗೆ 2011ರಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆ ನೀಡಲಾಗಿತ್ತು. ಈ ಕರ್ನಲ್ ಗೌರವ ಹುದ್ದೆ ಟೆರಿಟೋರಿಯಲ್ ಆರ್ಮಿಯ 106ನೇ ಇನ್‍ಫ್ಯಾಂಟ್ರಿ ಬೆಟಾಲಿಯನ್‍ಗೆ ಸೇರಿದ್ದಾಗಿತ್ತು. ಭಾರತೀಯ ಸೇನೆ ಹೊಂದಿರುವ ಎರಡು ಪ್ಯಾರಾಚೂಟ್ ರೆಜಿಮೆಂಟ್‍ಗಳು ಪೈಕಿ ಇನ್‍ಫ್ಯಾಂಟ್ರಿ ಬೆಟಾಲಿಯನ್ ಒಂದಾಗಿದೆ. ವಿಶೇಷವೆಂದರೆ ಈ ಹಿಂದೆ ಅಂದರೆ 2015ರಲ್ಲಿ ಕೂಡ ಧೋನಿ ಆಗ್ರಾದಲ್ಲಿ ಪ್ಯಾರಾಚೂಟ್ ರೆಜಿಮೆಂಟ್ ಸೇನಾ ತಂಡದವರೊಂದಿಗೆ ತರಬೇತಿ ಪಡೆದುಕೊಂಡಿದ್ದರು.

    ವಿಶ್ವಕಪ್ ಕ್ರಿಕೆಟ್ ವೇಳೆ ಧೋನಿ ಕೀಪಿಂಗ್ ವೇಳೆ ಪ್ಯಾರಾಚೂಟ್ ರೆಜಿಮೆಂಟ್ ಬಲಿದಾನ್ ಬ್ಯಾಡ್ಜ್ ಧರಿಸಿ ಗೌರವ ಸೂಚಿಸಿದ್ದರು. ಭಾರತದವರು ಈ ಬ್ಯಾಡ್ಜ್ ಧರಿಸಿದರೆ ತಪ್ಪೇನು ಎಂದು ಪ್ರಶ್ನಿಸಿದ್ದರು. ಆದರೆ ಐಸಿಸಿ ಬಿಸಿಸಿಐಗೆ ಸೂಚನೆಯ ಹಿನ್ನೆಲೆಯಲ್ಲಿ ಧೋನಿ ನಂತರದ ಪಂದ್ಯಗಳಲ್ಲಿ ಬಲಿದಾನ್ ಬ್ಯಾಡ್ಜ್ ಇರುವ ಗ್ಲೌಸ್ ಧರಿಸಿರಲಿಲ್ಲ.

    ಧೋನಿ ಅವರು, ತಾವೂ ಎರಡು ತಿಂಗಳ ಕಾಲ ಕ್ರಿಕೆಟ್ ಪಂದ್ಯಗಳ ಆಯ್ಕೆಗೆ ಲಭ್ಯವಿರುವುದಿಲ್ಲ ಎಂದು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ತಿಳಿಸಿದ್ದಾರೆ. ವಿಶ್ವಕಪ್ ಪ್ರಾರಂಭವಾಗುವ ಮೊದಲೇ ಧೋನಿ ಸೇನಾ ತರಬೇತಿಗೆ ಹೋಗಬೇಕೆಂದು ತೀರ್ಮಾನಿಸಿದ್ದರು. ಆದರೆ ಕೆಲ ಸರಣಿ, ಐಪಿಎಲ್ ಪಂದ್ಯಗಳಿಂದಾಗಿ ಧೋನಿ ತರಬೇತಿ ಪಡೆಯಲು ಸಾಧ್ಯವಾಗಿರಲಿಲ್ಲ. ಈಗ ಕ್ರಿಕೆಟಿಗೆ 2 ತಿಂಗಳು ವಿರಾಮ ಘೋಷಿಸಿ ಧೋನಿ ಸೇನಾ ತರಬೇತಿ ಪಡೆಯಲು ತೆರಳುತ್ತಿದ್ದಾರೆ.

    ಆಗಸ್ಟ್ 3 ರಿಂದ ಹೋಗುವ ಭಾರತದ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಧೋನಿ ಅವರನ್ನು ಆಯ್ಕೆ ಮಾಡಿಲ್ಲ. ಎಂಎಸ್‍ಕೆ ಪ್ರಸಾದ್ ನೇತೃತ್ವದ ಹಿರಿಯ ಆಯ್ಕೆ ಸಮಿತಿ ಏಕದಿನ, ಟಿ20ಐ ಮತ್ತು ಟೆಸ್ಟ್ ತಂಡಗಳನ್ನು ಆಯ್ಕೆ ಮಾಡಲು ಭಾನುವಾರ ಮುಂಬೈನಲ್ಲಿ ಸಭೆ ಸೇರಿತ್ತು.

    ಅಲ್ಲಿ ಎಂಎಸ್ ಧೋನಿ ಸೀಮಿತ ಓವರ್ ಗಳ ಸರಣಿಗೆ ಲಭ್ಯವಿರುವುದಿಲ್ಲ. ಅವರು ಕೂಡ ತಾವು ಇರುವುದಿಲ್ಲ ಎಂದು ತಿಳಿಸಿದ್ದಾರೆ. ವಿಶ್ವಕಪ್ ನಂತರ ನಾವು ಕೆಲವು ಯೋಜನೆಗಳನ್ನು ಹಾಕಿದ್ದೇವೆ. ಜೊತೆಗೆ ರಿಷಬ್ ಪಂತ್ ಅವರಿಗೆ ಹೆಚ್ಚಿನ ಅವಕಾಶಗಳನ್ನು ನೀಡಲು ಯೋಚಿಸಿದ್ದೇವೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್ ತಿಳಿಸಿದ್ದರು.

    ನಾವು ಧೋನಿ ಅವರೊಂದಿಗೆ ಭವಿಷ್ಯದ ಚರ್ಚಿಸಿದ್ದೇವೆ. ನಿವೃತ್ತಿ ಅವರ ವೈಯಕ್ತಿಕವಾದ ವಿಚಾರವಾಗಿದೆ. ಧೋನಿಯಂತಹ ಮಹಾನ್ ಕ್ರಿಕೆಟಿಗರಿಗೆ ಯಾವಾಗ ನಿವೃತ್ತಿ ಹೊಂದಬೇಕೆಂದು ತಿಳಿದಿದೆ ಎಂದು ಅವರು ಹೇಳಿದರು.