Tag: militants

  • ಜಮ್ಮು ಕಾಶ್ಮೀರದಲ್ಲಿ ಉಗ್ರರ ಗುಂಡಿನ ದಾಳಿಗೆ 4 ಪೊಲೀಸರು ಬಲಿ

    ಜಮ್ಮು ಕಾಶ್ಮೀರದಲ್ಲಿ ಉಗ್ರರ ಗುಂಡಿನ ದಾಳಿಗೆ 4 ಪೊಲೀಸರು ಬಲಿ

    ಶ್ರೀನಗರ: ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಬುಧವಾರ ಉಗ್ರರ ಜೊತೆಗಿನ ಗುಂಡಿನ ದಾಳಿಯಲ್ಲಿ ನಾಲ್ಕು ಮಂದಿ ಪೊಲೀಸರು ಹುತಾತ್ಮರಾಗಿದ್ದಾರೆ.

    ಆರ್ಹಮಾದಲ್ಲಿ ಉಗ್ರರು ಏಕಾಏಕಿ ದಾಳಿ ನಡೆಸಿದ ಪರಿಣಾಮ ಪೊಲೀಸರು ಮೃತಪಟ್ಟಿದ್ದಾರೆ. ದಾಳಿ ವೇಳೆ ಗಂಭೀರವಾಗಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಇಷ್ಫಾಕ್ ಅಹಮ್ಮದ್ ಮಿರ್, ಜವಾಯ್ದ್ ಅಹಮ್ಮದ್ ಭಟ್, ಮೊಹಮ್ಮದ್ ಇಕ್ಬಾಲ್ ಮಿರ್ ಮತ್ತು ಎಸ್‍ಪಿಒ ಆದಿಲ್ ಮಂಜುರ್ ಭಟ್ ಹುತಾತ್ಮರಾಗಿದ್ದಾರೆ. ಈ ಘಟನೆಗೆ ಸಂಬಂಧಪಟ್ಟಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಆರಂಭಿಸಿದ್ದಾರೆ.

    ಬುಧವಾರ ಬೆಳಗ್ಗೆ ಅನಂತನಾಗ್ ಜಿಲ್ಲೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರರ ಜೊತೆಗಿನ ಗುಂಡಿನ ಕಾಳಗದಲ್ಲಿ ಭಾರತೀಯ ಸೇನೆ ಇಬ್ಬರು ಉಗ್ರರನ್ನು ಹತ್ಯೆ ಮಾಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಮ್ಮು ಕಾಶ್ಮೀರ: ಇಬ್ಬರು ಉಗ್ರರ ಎನ್‍ಕೌಂಟರ್

    ಜಮ್ಮು ಕಾಶ್ಮೀರ: ಇಬ್ಬರು ಉಗ್ರರ ಎನ್‍ಕೌಂಟರ್

    ಶ್ರೀನಗರ: ಜಮ್ಮು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರಗಾಮಿಗಳು ಎನ್‍ಕೌಂಟರ್‍ಗೆ ಬಲಿಯಾಗಿದ್ದಾರೆ.

    ಉಗ್ರರ ವಿರುದ್ಧದ ಕಾರ್ಯಾಚರಣೆ ನಡೆಸುವ ವೇಳೆ ರಕ್ಷಣಾ ಪಡೆಯ ವಿರುದ್ಧ ದಾಳಿ ನಡೆಸಿದ್ದಾರೆ. ಪ್ರತಿಯಾಗಿ ಭಾರತೀಯ ಯೋಧರು ನಡೆಸಿದ ದಾಳಿಯಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ದಾರೆ.

    ಈ ಕುರಿತು ಮಾಹಿತಿ ನೀಡಿರುವ ಜಮ್ಮು ಕಾಶ್ಮೀರ ಡಿಎಸ್‍ಪಿ ಶೇಷ ಪೌಲ್ ವೈದ್, ಇಬ್ಬರು ಉಗ್ರರು ಮೃತರಾಗಿರುವುದು ಖಚಿತವಾಗಿದೆ. ಕಾರ್ಯಾಚರಣೆಯನ್ನು ಮುಂದುವರಿಸುವುದಾಗಿ ತಿಳಿಸಿದ್ದು, ಹತ್ಯೆಯಾದ ಉಗ್ರರ ಹೆಸರ ದೇಹವನ್ನು ತೆರವು ಮಾಡಿದ ವೇಳೆ ಉಗ್ರರ ಖಚಿತ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿ ಟ್ವೀಟ್ ಮಾಡಿದ್ದಾರೆ.

    ಕಳೆದ ಜುಲೈ 15 ರಂದು ನಡೆದ ಜಮ್ಮುವಿನ ಟ್ರಾಲ್ ನಲ್ಲಿ ನಡೆದ ಕಾರ್ಯಾಚರಣೆಯಲ್ಲೂ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಬಳಿಕ ಜೂನ್ 22 ರಂದು ನಡೆದ ಎನ್‍ಕೌಂಟರ್ ನಲ್ಲಿ ಜಮ್ಮು ಕಾಶ್ಮೀರದ ಪೊಲೀಸ್ ಪೇದೆಯನ್ನು ಅಪಹರಿಸಿ ಕೊಲೆ ಮಾಡಿದ್ದ 3 ಉಗ್ರರನ್ನು ಎನ್‍ಕೌಂಟರ್ ಮಾಡಲಾಗಿತ್ತು.

  • ಪೇದೆ ಕೊಲೆಗೈದಿದ್ದ 3 ಉಗ್ರರ ಎನ್‍ಕೌಂಟರ್ – ಮುಂದುವರಿದ ಕಾರ್ಯಾಚರಣೆ

    ಪೇದೆ ಕೊಲೆಗೈದಿದ್ದ 3 ಉಗ್ರರ ಎನ್‍ಕೌಂಟರ್ – ಮುಂದುವರಿದ ಕಾರ್ಯಾಚರಣೆ

    ಶ್ರೀನಗರ: ಜಮ್ಮು-ಕಾಶ್ಮೀರದ ಪೊಲೀಸ್ ಪೇದೆಯನ್ನು ಅಪಹರಿಸಿ ಕೊಲೆಗೈದಿದ್ದ ಮೂವರು ಉಗ್ರರನ್ನು ಭಾರತೀಯ ಯೋಧರು ಎನ್‍ಕೌಂಟರ್ ಮಾಡಿದ್ದು, ಉಗ್ರರ ವಿರುದ್ಧದ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.

    ಕಾಶ್ಮೀರ ಕುಲ್ಗಾವ್ ಜಿಲ್ಲೆಯ ಪೊಲೀಸ್ ಪೇದೆ ಸಲೀಂ ಅಹಮ್ಮದ್ ಶಾಹರನ್ನು ಹತ್ಯೆ ಮಾಡಲಾಗಿದ್ದ ಮೂರು ಕಿ.ಮೀ ದೂರದಲ್ಲಿ ಕಾರ್ಯಾಚರಣೆ ನಡೆದಿದ್ದು, ಹತ್ಯೆಯಾದ ಉಗ್ರರಲ್ಲಿ ಒಬ್ಬ ಪಾಕಿಸ್ತಾನ ಮೂಲದವನು ಎಂಬ ಅನುಮಾನವನ್ನು ಸೇನೆ ವಕ್ತಾರರು ವ್ಯಕ್ತಪಡಿಸಿದ್ದಾರೆ.

    ಕೇಂದ್ರ ಮೀಸಲು ಪಡೆ ಹಾಗೂ ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಇಂದು ಮುಂಜಾನೆ ಎನ್‍ಕೌಂಟರ್ ಮಾಡಲಾಗಿದೆ. ಈ ವೇಳೆ ಉಗ್ರರ ಬಳಿ ಇದ್ದ ಎಕೆ47 ಗನ್ ಗಳನ್ನು ವಶಕ್ಕೆ ಪಡೆಯಲಾಗಿದೆ. ದಾಳಿಯ ವೇಳೆ ಸಾವನ್ನಪ್ಪಿದ ಉಗ್ರರಲ್ಲಿ ಓರ್ವ ಲಷ್ಕರ್-ಎ-ತೊಯ್ಬಾ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದು, ಉಳಿದ ಇಬ್ಬರು ಕಾಶ್ಮೀರದ ಮೂಲದ ಉಗ್ರರು ಎಂದು ಡಿಸಿಪಿ ಶೇಷ್ ಪಾಲ್ ವೈಡ್ ತಿಳಿಸಿದ್ದಾರೆ.

    ಗುಪ್ತಚರ ಇಲಾಖೆ ಮಾಹಿತಿ ಅನ್ವಯ ಉಗ್ರರ ಹುಡುಕಾಟ ಕಾರ್ಯಾಚರಣೆ ಆರಂಭಿಸಿದ ಯೋಧರ ವಿರುದ್ಧ ಉಗ್ರರು ಮೊದಲು ಗುಂಡಿನ ದಾಳಿ ನಡೆಸಿದ್ದಾರೆ. ಪ್ರತಿಯಾಗಿ ಯೋಧರು ನಡೆಸಿದ ದಾಳಿಯಲ್ಲಿ ಉಗ್ರರು ಬಲಿಯಾಗಿದ್ದಾರೆ. ಕಾರ್ಯಾಚರಣೆ ಭಾಗವಾಗಿ ಕಾಶ್ಮೀರ ಕುಲ್ಗಾಮ್ ಹಾಗೂ ಅನಂತನಾಗ್ ಜಿಲ್ಲೆಗಳಲ್ಲಿ ಮೊಬೈಲ್ ನೆಟ್ ವರ್ಕ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

    ಕಳೆದ ಒಂದು ತಿಂಗಳ ಹಿಂದೆ ಈದ್ ಸಂಭ್ರಮದಲ್ಲಿ ಭಾಗಹಿಸಲು ಮನೆಗೆ ತೆರಳುತ್ತಿದ್ದ ಕಾಶ್ಮೀರದ ಯೋಧನನ್ನು ಅಪಹರಣ ಮಾಡಿ ಉಗ್ರರು ಕೊಲೆ ಮಾಡಿದ್ದರು. ಬಳಿಕ ಎರಡು ದಿನಗಳ ಹಿಂದೆಯಷ್ಟೇ ರಜೆಯ ಮೇಲೆ ಮನೆಗೆ ತೆರಳಿದ್ದ ಪೊಲೀಸ್ ಪೇದೆಯನ್ನು ಅಪಹರಿಸಿ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿತ್ತು.

  • ರಂಜಾನ್ ಯುದ್ಧ ವಿರಾಮ ಬಳಿಕ ನಾಲ್ವರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

    ರಂಜಾನ್ ಯುದ್ಧ ವಿರಾಮ ಬಳಿಕ ನಾಲ್ವರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

    ಶ್ರೀನಗರ: ರಂಜಾನ್ ಹಬ್ಬರ ಕದನ ವಿರಾಮ ಹಿಂತೆಗೆದುಕೊಂಡ ಬಳಿಕ ನಡೆದ ಭಾರತೀಯ ಸೇನೆಯ ಮೊದಲ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರನ್ನು ಹೊಡೆದುರುಳಿಸಿದೆ.

    ಉತ್ತರ ಕಾಶ್ಮೀರದ ಬಂಡಿಪೊರಾ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ನಡೆದ ಭಾರತೀಯ ಸೈನಿಕರು ಹಾಗೂ ಉಗ್ರರ ನಡುವಿನ ಎನ್‍ಕೌಂಟರ್ ನಲ್ಲಿ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ.

    ಕಳೆದ ಜೂನ್ 14 ರಂದು ಬಂಡಿಪೊರಾ ಜಿಲ್ಲೆಯಲ್ಲಿ ಯೋಧರನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ 2 ಯೋಧರು ಹುತಾತ್ಮರಾಗಿದ್ದರು. ಇದೇ ವೇಳೆ ಭಾರತ ಸರ್ಕಾರ ರಂಜಾನ್ ಕದನ ವಿರಾಮ ಒಪ್ಪಂದವನ್ನು ಹಿಂಪಡೆಯುತ್ತಿದ್ದಾಗಿ ತಿಳಿಸಿ ಸೈನಿಕರಿಗೆ ಕಾರ್ಯಾರಚಣೆ ನಡೆಸಲು ಸೂಚನೆ ನೀಡಿತ್ತು. ಸದ್ಯ ಎನ್‍ಕೌಂಟರ್ ನಲ್ಲಿ ಹತ್ಯೆಯಾದ ಉಗ್ರರ ಗುರುತು ಪತ್ತೆಯಾಗಿಲ್ಲ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾಗಿ ವರದಿಯಾಗಿದೆ. ಅಲ್ಲದೇ ಈ ಪ್ರದೇಶದಲ್ಲಿ ಹೆಚ್ಚಿನ ಉಗ್ರರು ಅಡಗಿರುವ ಶಂಕೆ ಮೇಲೆ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ.

    ಸತತ 1,220 ಗಂಟೆಗಳ ರಂಜಾನ್ ಕದನ ವಿರಾಮದ ಬಳಿಕ ಈ ಕುರಿತು ಟ್ವೀಟ್ ಮಾಡಿದ್ದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಕಾಶ್ಮೀರಿ ಕಣಿವೆಯಲ್ಲಿ ಶಾಂತಿಯನ್ನು ಕದಡಲು ಯತ್ನಿಸುವವರ ವಿರುದ್ಧ ಹಾಗೂ ಉಗ್ರರ ವಿರುದ್ಧ ಕಾರ್ಯಾಚರಣೆಯನ್ನು ಕೈಗೊಳ್ಳಲು ಸೂಚನೆ ನೀಡಿದ್ದಾಗಿ ತಿಳಿಸಿದ್ದರು.

  • ಅಕ್ರಮವಾಗಿ ಗಡಿ ಪ್ರವೇಶಿಸುತ್ತಿದ್ದ ನಾಲ್ವರು ಉಗ್ರರನ್ನು ಸದೆಬಡಿದ ಸೇನೆ

    ಅಕ್ರಮವಾಗಿ ಗಡಿ ಪ್ರವೇಶಿಸುತ್ತಿದ್ದ ನಾಲ್ವರು ಉಗ್ರರನ್ನು ಸದೆಬಡಿದ ಸೇನೆ

    ಕಾಶ್ಮೀರ: ಶನಿವಾರ ಬೆಳಗ್ಗೆ ಉತ್ತರ ಕಾಶ್ಮೀರದ ತಂಗ್ದಾರ್ ವಲಯದಲ್ಲಿ ಅಕ್ರಮವಾಗಿ ಗಡಿ ಪ್ರವೇಶ ಮಾಡುತ್ತಿದ್ದ 4 ಮಂದಿ ಉಗ್ರರನ್ನು ಭಾರತೀಯ ಸೈನಿಕರು ಹೊಡೆದುರುಳಿಸಿದ್ದಾರೆ.

    ಶನಿವಾರ ಬೆಳಗ್ಗೆ ಉತ್ತರ ಕಾಶ್ಮೀರದ ತಂಗ್ದಾರ್ ವಲಯದಲ್ಲಿ ಅಕ್ರಮವಾಗಿ ಗಡಿ ಪ್ರವೇಶ ಮಾಡುತ್ತಿದ್ದ 4 ಮಂದಿ ಉಗ್ರರನ್ನು ಸದೆಬಡೆಯಲಾಗಿದೆ. ಕಾರ್ಯಾಚರಣೆಯನ್ನು ಮುಂದುವರೆಸುತ್ತಿದ್ದು ಹೆಚ್ಚಿನ ಉಗ್ರರು ಇರಬಹುದೆಂದು ಶಂಕಿಸಲಾಗಿದೆ ಎಂದು ಭಾರತೀಯ ಸೇನಾ ವಕ್ತಾರ ರಾಜೇಶ್ ಕಾಲಿಯಾ ತಿಳಿಸಿದ್ದಾರೆ.

    ರಂಜಾನ್ ಹಬ್ಬದ ಪ್ರಯುಕ್ತ ಭಾರತದ ಗಡಿ ಪ್ರದೇಶಗಳಲ್ಲಿ ಭಾರತ ಸೇನೆಯು ಕದನ ವಿರಾಮವನ್ನು ಘೋಷಿಸಿತ್ತು. ಇಂದು ಭಾರತದ ಗಡಿ ನಿಯಂತ್ರಣ ರೇಖೆಯ ಬಳಿ ಉಗ್ರರು ಅಕ್ರಮವಾಗಿ ಪ್ರವೇಶವನ್ನು ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಹೊಡೆದುರುಳಿಸಲಾಗಿದೆ. ಕಳೆದೆರಡು ದಿನಗಳಿಂದ ಭಾರೀ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ವರದಿಯಾಗಿದೆ.

    ವಿಶೇಷವಾಗಿ ಉತ್ತರ ಕಾಶ್ಮೀರದ ಪ್ರದೇಶಗಳಲ್ಲಿ ಹಿಮ ಕರಗುತ್ತಿರುವುದುರಿಂದ ಮುಂದಿನ ದಿನಗಳಲ್ಲಿ ಉಗ್ರರು ಈ ಗಡಿ ಪ್ರದೇಶದ ಮೂಲಕ ಒಳನುಸುಳುವ ಸಾಧ್ಯತೆ ಹೆಚ್ಚಿದೆ ಎಂದು ಸೇನಾ ವಲಯ ತಿಳಿಸಿದೆ.

  • ಭಾರತೀಯ ಸೇನಾ ದಿನಾಚರಣೆಯಂದೇ 7 ಪಾಕಿಸ್ತಾನಿ ಸೈನಿಕರನ್ನ ಹೊಡೆದುರುಳಿಸಿದ ಯೋಧರು

    ಭಾರತೀಯ ಸೇನಾ ದಿನಾಚರಣೆಯಂದೇ 7 ಪಾಕಿಸ್ತಾನಿ ಸೈನಿಕರನ್ನ ಹೊಡೆದುರುಳಿಸಿದ ಯೋಧರು

    ಪೂಂಚ್: ಇಂದು ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಭಯೋತ್ಪಾದಕರನ್ನು ಹೊಡೆದುರುಳಿಸಿದ ಬೆನ್ನಲ್ಲೇ ಪಾಕಿಸ್ತಾನ ಸೈನಿಕರು ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಪ್ರತೀಕಾರ ದಾಳಿ ನಡೆಸಿ ಪಾಕ್ 7 ಸೈನಿಕರನ್ನು ಹೊಡೆದುರುಳಿಸಿದ್ದಾರೆ.

    ದೇಶಾದ್ಯಂತ ಇಂದು 70ನೇ ಸೇನಾ ದಿನ ಸಂಭ್ರಮಾಚರಣೆಯಲ್ಲಿ ತೊಡಗಿರುವ ವೇಳೆ ಪಾಕ್ ಸೈನಿಕರ ಅಪ್ರಚೋದಿತ ನಡೆಸಿದ್ದಾರೆ. ಪ್ರತಿಯಾಗಿ ನಡೆದ ದಾಳಿಯಲ್ಲಿ ಭಾರತೀಯ ಸೇನೆ ಪಾಕ್ ನ ಏಳು ಸೈನಿಕರನ್ನು ಹೊಡೆದುರುಳಿಸಿ ತಮ್ಮ ಶೌರ್ಯವನ್ನು ತೋರಿಸಿದ್ದಾರೆ.

    ಜಮ್ಮು ಕಾಶ್ಮೀರ ಪೂಂಚ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ರೇಖೆಯ ಮೇಧಾರ್ ಸೆಕ್ಟರ್ ಕೋಟ್ಲಿ ಪ್ರದೇಶದಲ್ಲಿ ಪಾಕಿಸ್ತಾನ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಕೂಡ ಗುಂಡಿನ ದಾಳಿ ನಡೆಸಿದ ಪರಿಣಾಮವಾಗಿ ಪಾಕಿಸ್ತಾನದ ನಾಲ್ಕು ಸೇನಾ ಪೋಸ್ಟ್ ಗಳು ಧ್ವಂಸವಾಗಿದ್ದು, ಏಳು ಸೈನಿಕರು ಹತ್ಯೆಯಾಗಿರುವ ಕುರಿತು ಸೇನೆ ಮೂಲಗಳು ಮಾಹಿತಿ ನೀಡಿದೆ. ಅಲ್ಲದೇ ಈ ಕುರಿತು ಟ್ವೀಟ್ ಮಾಡಿರುವ ಪಾಕ್ ಸರ್ಕಾರ ಕನಿಷ್ಟ 4 ಸೈನಿಕರು ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.

    ಅಲ್ಲದೇ ಇಂದು ಬೆಳಗ್ಗೆ ಭಾರತ ಗಡಿ ನುಸುಳಲು ಯತ್ನಿಸಿದ್ದ ಪಾಕ್ ಮೂಲದ ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ಐವರು ಉಗ್ರರನ್ನು ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಭಾರತೀಯ ಯೋಧರು ಹೊಡೆದುರುಳಿಸಿದ್ದರು.

    ಪಾಕ್ ಆತ್ಮಾಹುತಿ ದಾಳಿ ನಡೆಸುವ ತಂಡ ಭಾರತ ಗಡಿ ಉಳಿಸಲು ಯತ್ನಿಸುತ್ತಿರುವ ಮಾಹಿತಿ ಪಡೆದ ಯೋಧರು, ಜಮ್ಮು ಕಾಶ್ಮೀರ ಪೊಲೀಸ್ ಹಾಗೂ ಪ್ಯಾರಾಮಿಲಿಟರಿ ಸೈನಿಕರೊಂದಿಗೆ ಜಂಟಿ ಕಾರ್ಯಾಚರನೆ ನಡೆಸಿ ಉಗ್ರರನ್ನು ಹೊಡೆದು ಉರುಳಿಸಿದ್ದರು. ಪ್ರಸ್ತುತ ಭಾರತೀಯ ಸೇನೆ ಐದು ಉಗ್ರರ ಮೃತ ದೇಹಗಳನ್ನು ವಶಕ್ಕೆ ಪಡೆದುಕೊಂಡಿದೆ. ಉಗ್ರರ ಬಳಿ ಆಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದು, ದೇಶದಲ್ಲಿ ಭಾರೀ ಪ್ರಮಾಣದ ಸ್ಫೋಟಕ್ಕೆ ಸಂಚು ರೂಪಿಸಿದ್ದರು ಎಂದು ಸೇನೆಯ ಮೂಲಗಳು ತಿಳಿಸಿದೆ.

    ಭಾರತೀಯ ಸೇನಾ ದಿನಾಚರಣೆ ವಿಶೇಷ ಸಮಾರಂಭದಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದ ಬಳಿಕ ಮಾತನಾಡಿದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು, ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ. ಅಲ್ಲದೆ ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ಅಪ್ರಚೋದಿತ ದಾಳಿ ನಡೆಸುತ್ತಿದೆ. ಆದರೆ ಪಾಕಿಸ್ತಾನದ ಪ್ರಚೋದಿತ ದಾಳಿಗಳಿಗೆ ಅದೇ ರೀತಿಯಲ್ಲಿ ತಿರುಗೇಟು ನೀಡುವ ಸಾಮರ್ಥ್ಯ ಭಾರತಕ್ಕಿದೆ ಎಂಬುದನ್ನು ಆ ದೇಶ ಮರೆಯಬಾರದು ಎಂದು ಹೇಳಿದರು.

  • ಶಬರಿಮಲೆಗೆ ಹೋಗುವ ಅಯ್ಯಪ್ಪ ಭಕ್ತರಿಗೆ ಶಾಕಿಂಗ್ ನ್ಯೂಸ್: ಐಸಿಸ್ ಸಂಚು ಏನು ಗೊತ್ತಾ?

    ಶಬರಿಮಲೆಗೆ ಹೋಗುವ ಅಯ್ಯಪ್ಪ ಭಕ್ತರಿಗೆ ಶಾಕಿಂಗ್ ನ್ಯೂಸ್: ಐಸಿಸ್ ಸಂಚು ಏನು ಗೊತ್ತಾ?

    ತಿರುವಂತನಪುರಂ: ಶಬರಿಮಲೆಗೆ ಹೋಗುವ ಅಯ್ಯಪ್ಪ ಭಕ್ತರಿಗೆ ಶಾಕಿಂಗ್ ನ್ಯೂಸ್. ನೀರು, ಪ್ರಸಾದದಲ್ಲಿ ವಿಷ ಬೆರೆಸಿ ಅಯ್ಯಪ್ಪ ಮಾಲಾಧಾರಿಗಳನ್ನು ಹತ್ಯೆ ಮಾಡಲು ಐಸಿಸ್ ಉಗ್ರರು ಸಂಚು ರೂಪಿಸಿರುವ ಆಘಾತಕಾರಿ ವಿಚಾರ ಈಗ ಬೆಳಕಿಗೆ ಬಂದಿದೆ.

    ರೈಲಿನ ಒಳಗಡೆ ಮತ್ತು ನಿಲ್ದಾಣದಲ್ಲಿ ವಿಷ ಮಿಶ್ರಿತ ನೀರನ್ನು ಸರಬರಾಜು ಮಾಡಿ ಭಕ್ತರನ್ನು ಹತ್ಯೆ ಮಾಡಲು ಉಗ್ರರು ಸಂಚು ರೂಪಿಸಿದ್ದಾರೆ ಎನ್ನುವ ಮಾಹಿತಿಯನ್ನು ಗುಪ್ತಚರ ಇಲಾಖೆ ಕೇರಳ ಪೊಲೀಸರಿಗೆ ನೀಡಿದೆ.

    ಗುಪ್ತಚರ ಇಲಾಖೆಯ ಮಾಹಿತಿ ಅನ್ವಯ ತ್ರಿಶ್ಯೂರ್ ನಲ್ಲಿ ರೈಲ್ವೇ ಪೊಲೀಸರು ಮಲೆಯಾಳಂನಲ್ಲಿ ಪತ್ರವನ್ನು ಬಿಡುಗಡೆ ಮಾಡಿದ್ದು, ರೈಲ್ವೇ ನಿಲ್ದಾಣದಲ್ಲಿ ಶಮರಿಮಲೆ ಯಾತ್ರಾರ್ಥಿಗಳ ಮತ್ತು ಇತರೆ ಯಾತ್ರಿಗಳ ಕುಡಿಯುವ ನೀರು, ಆಹಾರದ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ಹರಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಭಾರತದ ಮೇಲೆ ಐಸಿಸ್ ಉಗ್ರರು ದಾಳಿ ನಡೆಸಲು ಸಂಚು ರೂಪಿಸಿದ್ದು, ಇದರ ಭಾಗವಾಗಿ ಶಬರಿಮಲೆ ಅಯ್ಯಪ್ಪ ಭಕ್ತರ ಮೇಲೆ ಟಾರ್ಗೆಟ್ ಮಾಡಿದ್ದಾರೆ ಎಂಬುದಾಗಿ ವೆಬ್‍ಸೈಟ್ ಒಂದು ವರದಿ ಮಾಡಿದೆ.

    ಇತ್ತೀಚೆಗೆ ಮಲೆಯಾಳಂ ಭಾಷೆಯಲ್ಲಿರುವ ಐಸಿಸ್ ಬೆದರಿಕೆ ಇರುವ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. 10 ನಿಮಿಷಗಳ ಈ ಆಡಿಯೋ ಬೆದರಿಕೆಯಲ್ಲಿ, ಐಸಿಸ್ ಉಗ್ರನೊಬ್ಬ ವಾಹನಗಳನ್ನು ಬಳಸಿ ದಾಳಿಗೆ ಕರೆ ನೀಡಿದ್ದ. ಅಮೆರಿಕ, ಯೂರೋಪ್ ಸೇರಿದಂತೆ ವಿಶ್ವದ ಹಲವೆಡೆ ಹೇಗೆ ಟ್ರಕ್, ಕಾರ್‍ಗಳನ್ನು ಅಡ್ಡಾದಿಡ್ಡಿ ನುಗ್ಗಿಸಿ ಜನರನ್ನು ಹತ್ಯೆ ಮಾಡಲಾಗಿದೆಯೋ ಅದೇ ರೀತಿ ಭಾರತದಲ್ಲೂ ಮಾಡಬೇಕೆಂದು ಪ್ರಚೋದನೆ ನೀಡಿದ್ದ.

    ಕುಂಭಮೇಳ, ತ್ರಿಶೂರ್ ಪೂರಮ್ ಸೇರಿದಂತೆ ಲಕ್ಷಾಂತರ ಜನರು ಭಾಗಿಯಾಗುವ ಕಾರ್ಯಕ್ರಮಗಳನ್ನು ಟಾರ್ಗೆಟ್ ಮಾಡಬೇಕು. ನಿಮ್ಮ ಬುದ್ಧಿವಂತಿಕೆ ಉಪಯೋಗಿಸಿ ಆಹಾರದಲ್ಲಿ ವಿಷವನ್ನು ಬೆರೆಸಿ ಕೃತ್ಯ ಎಸಗಿ ಎಂದು ಆತ ಆಡಿಯೋದಲ್ಲಿ ಕರೆ ನೀಡಿದ್ದ.

    ಕೆಲ ವರ್ಷಗಳಿಂದ ಸುಮಾರು 100 ಮಂದಿ ಕೇರಳೀಯರು ಐಸಿಸ್ ಉಗ್ರ ಸಂಘಟನೆ ಸೇರಿದ್ದಾರೆ ಕೇರಳ ಪೊಲೀಸರು ಈ ಹಿಂದೆ ತಿಳಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ವಾಟ್ಸಪ್, ಟೆಲಿಗ್ರಾಂ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ವಿನಿಮಯವಾದ 300ಕ್ಕೂ ಹೆಚ್ಚು ಧ್ವನಿ ಸಂದೇಶಗಳು ಮತ್ತು ಇತರ ದಾಖಲೆಗಳನ್ನು ಕೇರಳ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮಗಳು ವರದಿ ಮಾಡಿತ್ತು.

     

  • ರೋಹಿಂಗ್ಯಾ ಮುಸ್ಲಿಂ ಉಗ್ರರಿಂದ 28 ಹಿಂದೂಗಳ ಮಾರಣಹೋಮ

    ರೋಹಿಂಗ್ಯಾ ಮುಸ್ಲಿಂ ಉಗ್ರರಿಂದ 28 ಹಿಂದೂಗಳ ಮಾರಣಹೋಮ

    ಯಂಗೂನ್: ರೋಹಿಂಗ್ಯಾ ಮುಸ್ಲಿಂ ಉಗ್ರಗಾಮಿಗಳು ರಾಖಿನೆ ರಾಜ್ಯದಲ್ಲಿ 28 ಹಿಂದೂಗಳನ್ನು ಹತ್ಯೆ ಮಾಡಿದ್ದಾರೆ ಎಂದು ಮ್ಯಾನ್ಮರ್ ಆರ್ಮಿ ಅಧಿಕಾರಿಗಳು ಹೇಳಿದ್ದಾರೆ.

    ಅರಾಕನ್ ರೋಹಿಂಗ್ಯಾ ಸಾಲ್ವೇಶನ್ ಆರ್ಮಿ (ಎಆರ್‍ಎಸ್‍ಎ) ಉಗ್ರಗಾಮಿಗಳು 28 ಹಿಂದೂಗಳನ್ನು ಕ್ರೂರವಾಗಿ ಹತ್ಯೆ ಮಾಡಿದ್ದಾರೆ ಎಂದು ಮ್ಯಾನ್ಮರ್ ಸೇನೆಯ ಮುಖ್ಯಸ್ಥರು ವೆಬ್‍ಸೈಟ್ ಮೂಲಕ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

    ಉಗ್ರರು 20 ಮಹಿಳೆಯರು, 8 ಪುರುಷರು ಹಾಗೂ 10 ವರ್ಷಕ್ಕಿಂತ ಕೆಳಗಿನ 6 ಮಕ್ಕಳನ್ನು ಹತ್ಯೆ ಮಾಡಿದ ಬಳಿಕ ಶವಗಳನ್ನು ಗುಂಡಿ ತೋಡಿ ಹೂಳಿದ್ದಾರೆ ಎಂದು ಮ್ಯಾನ್ಮಾರ್ ಸೇನೆ ತಿಳಿಸಿದೆ.

    ಈ ಹತ್ಯೆ ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳು ನೆಲೆಸಿರುವ ರಾಖೈನ್ ಖಾ ಮಾಂಗ್ ಸೆಯ್ಕ್ ಎಂಬ ಹಳ್ಳಿಯಲ್ಲಿ ನಡೆದಿದ್ದು, ಯೆ ಬಾವ್ ಕ್ಯಾ ಎಂಬ ಸ್ಥಳದಲ್ಲಿ ದೇಹಗಳು ದೊರೆತಿದೆ ಎಂದು ಸೇನೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

    ಆಗಸ್ಟ್ 25 ರಂದು ರೋಹಿಂಗ್ಯಾ ಮುಸ್ಲಿಂ ಉಗ್ರಗಾಮಿಗಳು ದಾರಿಯಲ್ಲಿ ಕಾಣಿಸಿಕೊಳ್ಳುವ ಪ್ರತಿಯೊಬ್ಬರನ್ನು ಮನಸ್ಸಿಗೆ ಬಂದಂತೆ ಕೊಲ್ಲುತ್ತಾ ಮುಂದೆ ಸಾಗಿದರು. ಅಷ್ಟೇ ಅಲ್ಲದೇ ಕೆಲ ಜನರನ್ನು ಸ್ಥಳೀಯ ಅರಣ್ಯ ಪ್ರದೇಶಕ್ಕೆ ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ ಎಂದು ಪ್ರತ್ಯಕ್ಷದರ್ಶಿ ವ್ಯಕ್ತಿಗಳು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

    ಎಆರ್‍ಎಸ್‍ಎ ಉಗ್ರಗಾಮಿ ಸಂಘಟನೆಗೆ ಸೇರಿದ ಸದಸ್ಯರು ಮ್ಯಾನ್ಮಾರ್ ಸೈನಿಕರ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯ ನಂತರ ಮ್ಯಾನ್ಮಾರ್ ಸೇನೆ ರೋಹಿಂಗ್ಯಾ ಮುಸ್ಲಿಮರ ದಾಳಿ ನಡೆಸಿತ್ತು. ಮ್ಯಾನ್ಮಾರ್ ಸೇನೆಯ ಹಿಂಸಾಚಾರಕ್ಕೆ ಬೆದರಿ ಸುಮಾರು 4 ಲಕ್ಷಕ್ಕೂ ಅಧಿಕ ರೋಹಿಂಗ್ಯಾ ಮುಸ್ಲಿಮರು ಬಾಂಗ್ಲಾ ದೇಶಕ್ಕೆ ವಲಸೆ ಹೋಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮ್ಯಾನ್ಮಾರ್ ಸೇನೆಯ ದಬ್ಬಾಳಿಕೆಯನ್ನು ವಿಶ್ವಸಂಸ್ಥೆ ಖಂಡಿಸಿತ್ತು.

  • ಬುಡಕಟ್ಟು ಜನರ ಮೇಲೆ ದಾಳಿಗೆ ಸಂಚು ರೂಪಿಸಿದ್ದ 3 ಐಸಿಸ್ ಉಗ್ರರನ್ನ ಕೊಂದ ಕಾಡುಹಂದಿಗಳು

    ಬುಡಕಟ್ಟು ಜನರ ಮೇಲೆ ದಾಳಿಗೆ ಸಂಚು ರೂಪಿಸಿದ್ದ 3 ಐಸಿಸ್ ಉಗ್ರರನ್ನ ಕೊಂದ ಕಾಡುಹಂದಿಗಳು

    ಬಾಗ್ದಾದ್: ಇರಾಕ್‍ನಲ್ಲಿ ಬುಡಕಟ್ಟು ಜನರ ಮೇಲೆ ದಾಳಿಗೆ ತಯಾರಿ ನಡೆಸಿದ್ದ ಐಸಿಸ್ ಉಗ್ರರ ಗುಂಪಿನ ಮೇಲೆ ಕಾಡುಹಂದಿಗಳು ದಾಳಿ ಮಾಡಿದ್ದು, ಮೂವರು ಉಗ್ರರು ಸಾವನ್ನಪ್ಪಪಿದ್ದಾರೆ.

    ಸ್ಥಳೀಯರ ಮಾಹಿತಿಯ ಪ್ರಕಾರ ಉಗ್ರರು ಇಲ್ಲಿನ ಕಿರ್ಕುಕ್ ಬಳಿಯಿರುವ ಹಮ್ರಿನ್ ಬೆಟ್ಟದ ಸಮೀಪದಲ್ಲಿ ಅಡಗಿದ್ದರು. ಕಾಡುಹಂದಿಗಳು ಮೂವರು ಐಸಿಸ್ ಉಗ್ರರನ್ನು ಕೊಂದಿದ್ದು, ಐವರನ್ನು ಗಂಭೀರವಾಗಿ ಗಾಯಗೊಳಿಸಿವೆ.

    ಇಲ್ಲಿನ ಉಬೇದ್ ಬುಡಕಟ್ಟು ಜನಾಂಗದ ಮುಖ್ಯಸ್ಥರು ಹಾಗೂ ಐಸಿಸ್ ನಿಗ್ರಹ ದಳದ ಮೇಲ್ವಿಚಾರಕರಾದ ಶೇಖ್ ಅನ್ವರ್-ಅಲ್ ಅಸ್ಸಿ ಅವರು ಹೇಳೋ ಪ್ರಕಾರ ಹವೀಜಾ ಪ್ರದೇಶವನ್ನ ಉಗ್ರರು ವಶಪಡಿಸಿಕೊಂಡ ನಂತರ ಇಲ್ಲಿನ ಬೆಟ್ಟಪ್ರದೇಶವನ್ನು ಬುಡಕಟ್ಟು ಜನರು ಬಿಟ್ಟು ಹೋಗಿದ್ದು ಅವರ ಮೇಲೆ ಉಗ್ರರು ದಾಳಿಗೆ ಉದ್ದೇಶಿಸಿದ್ದರು ಎನ್ನಲಾಗಿದೆ.

    ಹತ್ತಿರದ ಜೋಳದ ಹೊಲ ಹಾಗೂ ಇಲ್ಲಿನ ಸುತ್ತಮುತ್ತಲ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಕಾಡುಹಂದಿಗಳಿಗೆ ಇವರ ಓಡಾಟದಿಂದ ಕಿರಿಕಿರಿಯಾಗಿರಬಹುದು ಎಂದು ಅವರು ಹೇಳಿದ್ದಾರೆ.

    ಹವಿಜಾದಿಂದ ಓಡಿಹೋಗಲು ಯತ್ನಿಸಿದ 25 ಮಂದಿಯನ್ನ ಉಗ್ರರು ಕೊಂದಿದ್ದು, ಸ್ಥಳವನ್ನು ಬಿಟ್ಟುಹೋಗಲು ತಯಾರಿ ನಡೆಸಿದವರನ್ನೂ ಕೊಲ್ಲಬೇಕೆಂದಿದ್ದರು. ಆದ್ರೆ ಕಾಡುಹಂದಿಗಳಿಂದ ಅವರೇ ಸಾವನ್ನಪ್ಪದ್ದಾರೆ ಎಂದು ಶೇಖ್ ಹೇಳಿದ್ದಾರೆ.

    ಹವೀಜಾ ಇರಾಖ್‍ನ ಮೊಸುಲ್ ನಗರದಿಂದ 100 ಮೈಲಿ ದೂರದಲ್ಲಿದ್ದು, ವಿಮೋಚನೆಯಾಗುವ ಹಂತದಲ್ಲಿದೆ. ಆದ್ರೆ ಐಸಿಸ್ ವಿರುದ್ಧ ಹೋರಾಟದಲ್ಲಿದೆ ಎಂದು ವರದಿಯಾಗಿದೆ.

  • ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ- ಓರ್ವ ಪೊಲೀಸ್ ಪೇದೆ ಹುತಾತ್ಮ

    ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ- ಓರ್ವ ಪೊಲೀಸ್ ಪೇದೆ ಹುತಾತ್ಮ

    – ಕಟ್ಟಡ ಸುತ್ತುವರೆದು ಒರ್ವ ಉಗ್ರನನ್ನು ಕೊಂದ ಸೇನೆ

    ಶ್ರೀನಗರ: ಜಮ್ಮು ಕಾಶ್ಮೀರದ ಪುಲ್‍ವಾಮಾ ಭಾಗದ ಟ್ರಾಲ್‍ನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ.

    ಇಲ್ಲಿನ ಜನವಸತಿ ಕಟ್ಟಡದೊಳಗೆ ಹಿಜ್‍ಬುಲ್ ಮುಜಾಹಿದ್ದೀನ್ ಸಂಘಟನೆಯ 5 ಉಗ್ರರು ನುಗ್ಗಿದ್ದಾರೆ ಎನ್ನಲಾಗಿದ್ದು, ಈಗಾಗಲೇ ಓರ್ವ ಉಗ್ರನನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.

    ಶನಿವಾರ ಸಂಜೆ ಉಗ್ರರು ಗುಂಡಿನ ದಾಳಿ ಆರಂಭಿಸಿದ್ದು, ಕಾರ್ಯಾಚರಣೆ ವೇಳೆ ಪೊಲೀಸ್ ಪೇದೆ ಮನ್ಜೂರ್ ಅಹಮದ್ ಹುತಾತ್ಮರಾಗಿದ್ದಾರೆ. ಇನ್ನೂ ಕೆಲವು ಉಗ್ರರು ಕಟ್ಟದೊಳಗೆ ಅಡಗಿರುವ ಶಂಕೆಯಿದ್ದು ಭಾರತೀಯ ಸೇನೆಯ ಕಾರ್ಯಾಚರಣೆ ಮುಂದುವರೆದಿದೆ.

    ಘಟನಾ ಸ್ಥಳದ 10 ಕಿ.ಮೀ ದೂರದವರಗೆ ಕರ್ಫ್ಯೂ ಜಾರಿ ಮಾಡಲಾಗಿದೆ.