Tag: Milana Prakash

  • ರಾಜಸ್ಥಾನದಲ್ಲಿ ‘ಡೆವಿಲ್’ ಚಿತ್ರೀಕರಣ ಮುಗಿಸಿದ ದರ್ಶನ್- ನಾಳೆ ಬೆಂಗಳೂರಿನತ್ತ ಚಿತ್ರತಂಡ

    ರಾಜಸ್ಥಾನದಲ್ಲಿ ‘ಡೆವಿಲ್’ ಚಿತ್ರೀಕರಣ ಮುಗಿಸಿದ ದರ್ಶನ್- ನಾಳೆ ಬೆಂಗಳೂರಿನತ್ತ ಚಿತ್ರತಂಡ

    ಟ ದರ್ಶನ್ (Darshan) ಸದ್ಯ ‘ಡೆವಿಲ್’ (Devil) ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಅಪ್‌ಡೇಟ್‌ವೊಂದು ಹೊರಬಿದ್ದಿದೆ. ರಾಜಸ್ಥಾನದಲ್ಲಿ ದರ್ಶನ್ ಯಶಸ್ವಿಯಾಗಿ ‘ಡೆವಿಲ್‌’ ಶೂಟಿಂಗ್‌ ಮಾಡಿ ಮುಗಿಸಿದ್ದಾರೆ. ಇದನ್ನೂ ಓದಿ:ಅಂದು ಹೈದರಾಬಾದ್‌ನವಳು, ಇಂದು ಕರ್ನಾಟಕ: ರಶ್ಮಿಕಾ ಮಂದಣ್ಣ ಹೇಳಿಕೆ ವೈರಲ್

    ಇತ್ತೀಚೆಗೆ ಮೈಸೂರಿನಲ್ಲಿ ‘ಡೆವಿಲ್’ ಸಿನಿಮಾದ ಚಿತ್ರೀಕರಣ ಮಾಡಲಾಗಿತ್ತು. ಈ ಬೆನ್ನಲ್ಲೇ ರಾಜಸ್ಥಾನಕ್ಕೆ ‘ಡೆವಿಲ್’ ಟೀಮ್ ತೆರಳಿತ್ತು.  ಒಂದು ವಾರಗಳ ಕಾಲ ರಾಜಸ್ಥಾನದಲ್ಲಿ ಯಶಸ್ವಿಯಾಗಿ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ ದರ್ಶನ್ & ಟೀಮ್. ಹಾಗಾಗಿ ಏ.2ರಂದು ಬೆಂಗಳೂರಿಗೆ ‘ಡೆವಿಲ್’ ಟೀಮ್ ವಾಪಸ್ಸಾಗಲಿದೆ. ಇದನ್ನೂ ಓದಿ:ಕಣ್ಣಿನಲ್ಲಿ ಪೊರೆ ಬೆಳೆದ ಮಗುವಿನ ಶಸ್ತ್ರಚಿಕಿತ್ಸೆಗೆ ಸಹಾಯ ಮಾಡಿದ ಧ್ರುವ ಸರ್ಜಾ

    ಮುಂದಿನ ಹಂತದ ಚಿತ್ರೀಕರಣವು ಹೈದರಾಬಾದ್‌ನಲ್ಲಿ ನಡೆಯಲಿದೆ. ಸದ್ಯದಲ್ಲೇ ‘ಡೆವಿಲ್’ ಟೀಮ್ ತೆರಳಲಿದೆ. ಅಂದಹಾಗೆ, ಈ ವರ್ಷದ ಅಂತ್ಯದಲ್ಲಿ ಡೆವಿಲ್ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ.

    ಈ ಚಿತ್ರದಲ್ಲಿ ದರ್ಶನ್ ಜೊತೆ ಕರಾವಳಿ ನಟಿ ರಚನಾ ರೈ, ಶರ್ಮಿಳಾ ಮಾಂಡ್ರೆ, ಬಿಗ್ ಬಾಸ್ ವಿನಯ್ ಗೌಡ (Vinay Gowda) ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಈ ಹಿಂದೆ ತಾರಕ್ ನಿರ್ದೇಶನ ಮಾಡಿದ್ದ ಮಿಲನಾ ಪ್ರಕಾಶ್ ಅವರೇ ‘ಡೆವಿಲ್’ ಚಿತ್ರವನ್ನು ನಿರ್ದೇಶನ ಮಾಡ್ತಿದ್ದಾರೆ.

  • ‘ಡೆವಿಲ್ ಶೂಟಿಂಗ್’ಗೂ ಮುನ್ನ ಕುಕ್ಕೆಗೆ ಭೇಟಿ ನೀಡಿದ ದರ್ಶನ್ ಟೀಮ್

    ‘ಡೆವಿಲ್ ಶೂಟಿಂಗ್’ಗೂ ಮುನ್ನ ಕುಕ್ಕೆಗೆ ಭೇಟಿ ನೀಡಿದ ದರ್ಶನ್ ಟೀಮ್

    ಡೆವಿಲ್ (Devil) ಚಿತ್ರತಂಡದಿಂದ ಹೊಸದೊಂದು ಅಪ್ ಡೇಟ್ ಸಿಕ್ಕಿದೆ. ಈಗಾಗಲೇ ದರ್ಶನ್ (Darshan) ನಟನೆಯ ಡೆವಿಲ್ ಚಿತ್ರೀಕರಣ ಶುರುವಾಗಿದೆ ಎಂದೇ ಹೇಳಲಾಗಿತ್ತು. ಆದರೆ, ಈವರೆಗೂ ಚಿತ್ರದ ಶೂಟಿಂಗ್ ಮಾಡಿಲ್ಲವೆಂದು ಗೊತ್ತಾಗಿದೆ. ಮೊದಲ ಹಂತದ ಚಿತ್ರೀಕರಣವು ಇದೇ ಸೋಮವಾರದಿಂದ ಬೆಂಗಳೂರಿನ ರಾಕ್ ಲೈನ್ ಸ್ಟುಡಿಯೋದಲ್ಲಿ ನಡೆಯಲಿದೆ. ಅದಕ್ಕೂ ಮುನ್ನ ಚಿತ್ರತಂಡ ಕುಕ್ಕೆ ಸುಬ್ರಮಣ್ಯಂ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದೆ.

    ಈಗಾಗಲೇ ‘ಡೆವಿಲ್’ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿ ಭರ್ಜರಿ ಸೌಂಡ್ ಮಾಡ್ತಿದೆ. ದಚ್ಚು ಹುಟ್ಟುಹಬ್ಬದ ದಿನ ಫ್ಯಾನ್ಸ್‌ಗೆ ಇದೊಂದು ಸರ್ಪ್ರೈಸ್ ಗಿಫ್ಟ್ ಆಗಿತ್ತು. ದರ್ಶನ್ ‘ಡೆವಿಲ್’ನಲ್ಲಿ (Devil Film) ವಿಭಿನ್ನ ಲುಕ್‌ನಲ್ಲಿ ಕಾಣಿಸ್ಕೊಂಡಿದ್ದಾರೆ. ಹಾಗಾದ್ರೆ ಈ ಸಿನಿಮಾದ ಬ್ಲಾಕ್‌ಬಸ್ಟರ್ ಅಪ್‌ಡೇಟ್ ಏನು? ಶೂಟಿಂಗ್ ಶುರುವಾಗೋದು ಯಾವಾಗ? ಆ ಬಗ್ಗೆ ಖುದ್ದು ದರ್ಶನ್ ಬಿಚ್ಚಿಟ್ಟ ಮಾಹಿತಿ ಇಲ್ಲಿದೆ.

    ದರ್ಶನ್ ಹುಟ್ಟುಹಬ್ಬದ ದಿನವೇ ‘ಡೆವಿಲ್’ ಚಿತ್ರದ ಫಸ್ಟ್ ಲುಕ್ ರಿವೀಲ್ ಆಯ್ತು. ಅಬ್ಬರಿಸುವ ಡೈಲಾಗ್ ಮೂಲಕ ದಚ್ಚು ಎಂಟ್ರಿ ಬಹಳ ಕುತೂಹಲಕಾರಿಯಾಗಿತ್ತು. ‘ನಮ್ಮ ಮನೆಯಲೊಂದು ಪುಟ್ಟ ಪಾಪು ಇರುವುದು’ ಎಂಬ ವಿಭಿನ್ನ ಡೈಲಾಗ್ ಹೇಳುವ ಮೂಲಕ ದರ್ಶನ್ ಉಗ್ರವಾಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ನಿರೀಕ್ಷೆ ದುಪ್ಪಟ್ಟಾಗಿದೆ. ಮಾರ್ಚ್‌ನಿಂದ ಚಿತ್ರೀಕರಣ ಪ್ರಾರಂಭವಾಗುತ್ತದೆ ಎಂದಿದ್ದರು ದರ್ಶನ್. ಅದು ಈಗ ನಿಜವಾಗಿದೆ.

    ಮಿಲನ ಪ್ರಕಾಶ್ (Milana Prakash) ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು, ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕೆ ಇರಲಿದೆ, ವೈಷ್ಣೋ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ.

     

    ಡಿಬಾಸ್ ಕೈಯಲ್ಲಿ ಈಗ 9ಕ್ಕೂ ಹೆಚ್ಚು ಚಿತ್ರಗಳಿವೆ. ರಮೇಶ್ ಪಿಳ್ಳೈ, ಶೈಲಜಾ ನಾಗ್ ಮತ್ತು ಬಿ.ಸುರೇಶ, ಮೋಹನ್ ನಟರಾಜನ್, ಸೂರಪ್ಪ ಬಾಬು, ಸಚ್ಚಿದಾನಂದ ಇಂಡುವಾಳ, ಕೆ.ಮಂಜುನಾಥ್, ರಘುನಾಥ್ ಸೋಗಿ, ಮಹೇಶ್ ಸುಖಧರೆ, ರಾಘವೇಂದ್ರ ಹೆಗ್ಡೆ ಹೀಗೆ ಸಾಲು ಸಾಲು ನಿರ್ಮಾಪಕರು ದರ್ಶನ್‌ಗಾಗಿ ಸಿನಿಮಾ ಮಾಡಲು ಮುಂದೆ ಬಂದಿದ್ದಾರೆ. ದರ್ಶನ್ ಹುಟ್ಟುಹಬ್ಬದಂದು (ಫೆ.16) ಸಿನಿಮಾಗಳನ್ನು ಘೋಷಣೆ ಕೂಡ ಮಾಡಿದ್ದಾರೆ.

  • ದರ್ಶನ್ ಹುಟ್ಟು ಹಬ್ಬಕ್ಕೆ ‘ಡೆವಿಲ್’ ಚಿತ್ರದ ಫಸ್ಟ್ ಲುಕ್

    ದರ್ಶನ್ ಹುಟ್ಟು ಹಬ್ಬಕ್ಕೆ ‘ಡೆವಿಲ್’ ಚಿತ್ರದ ಫಸ್ಟ್ ಲುಕ್

    ವೈಷ್ಣೋ ಸ್ಟುಡಿಯೋಸ್ ಲಾಂಛನದಲ್ಲಿ ಜೆ.ಜಯಮ್ಮ ಅವರು ನಿರ್ಮಿಸುತ್ತಿರುವ, ಪ್ರಕಾಶ್ ವೀರ್ ನಿರ್ದೇಶನದ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ನಾಯಕರಾಗಿ ನಟಿಸುತ್ತಿರುವ ಬಹು ನಿರೀಕ್ಷಿತ ‘ಡೆವಿಲ್’ ಚಿತ್ರದ  ಫಸ್ಟ್ ಲುಕ್ (First Look) ಟೀಸರ್ ಫೆಬ್ರವರಿ 15ರ‌ ರಾತ್ರಿ 11.59ಕ್ಕೆ ಬಿಡುಗಡೆಯಾಗಲಿದೆ. ಚಿತ್ರದ ಫಸ್ಟ್ ಲುಕ್ ಟೀಸರ್ ಗೆ ದರ್ಶನ್ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

    ಮಿಲನ ಚಿತ್ರದ ಖ್ಯಾತಿಯ  ಪ್ರಕಾಶ್ ವೀರ್ ಅವರ ನಿರ್ದೇಶನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಯಕರಾಗಿ ನಟಿಸುತ್ತಿರುವ ‘ಡೆವಿಲ್’ (Devil) ಚಿತ್ರದ ಸ್ಕ್ರಿಪ್ಟ್ ಪೂಜೆ  ಎರಡು ತಿಂಗಳ ಹಿಂದೆ ಸರಳವಾಗಿ ನೆರವೇರಿತ್ತು. ಆದರೆ ಚಿತ್ರತಂಡ ಡೆವಿಲ್ ಚಿತ್ರದ ಕುರಿತಂತೆ ಇನ್ನು ಯಾವುದೇ ಪ್ರಚಾರ ಕಾರ್ಯ ಆರಂಭ ಮಾಡಿರಲಿಲ್ಲ.

    ಮೊದಮೊದಲು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೋ ಪೋಸ್ಟರ್ ಹಾಕಿ ಡೆವಿಲ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅಂತ ಹೇಳಿಕೊಂಡಿದ್ದರು.  ಈಗ ಈ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿದ್ದಾರೆ ಎಂಬ ವಿಷಯವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದಾರೆ. ಈ  ಮೇಲ್ಕಂಡ ಯಾವುದೇ ವಿಷಯಗಳು ಚಿತ್ರತಂಡದ ಅಧಿಕೃತ ಮಾಹಿತಿ ಆಗಿರುವುದಿಲ್ಲ. ಸದ್ಯದಲ್ಲೇ ನಮ್ಮ ಚಿತ್ರದ ಪ್ರಚಾರ ಕಾರ್ಯ ಆರಂಭಿಸುತ್ತೇವೆ‌. ನಮ್ಮ ವೈಷ್ಣೊ ಸ್ಟುಡಿಯೋಸ್ ಸಂಸ್ಥೆಯ ಮೂಲಕವೇ ಅಧಿಕೃತವಾಗಿ ಡೆವಿಲ್ ಚಿತ್ರದ ಬಗ್ಗೆ ಮಾಹಿತಿ ನೀಡುತ್ತಾ ಹೋಗುತ್ತೇವೆ ಎಂದು ನಿರ್ದೇಶಕ ಪ್ರಕಾಶ್ ವೀರ್ ತಿಳಿಸಿದ್ದರು.

     

    ಮಿಲನ ಪ್ರಕಾಶ್ (Milan Prakash) ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು, ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕೆ ಇರಲಿದೆ, ವೈಷ್ಣೋ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ಈ ನಡುವೆ ಮತ್ತೊಂದು ಸುದ್ದಿ ಗಾಂಧಿ ನಗರದಲ್ಲಿ ಜೋರಾಗಿಯೇ ಕೇಳಿ ಬರುತ್ತಿದೆ. ದರ್ಶನ್ ಮತ್ತು ಸುದೀಪ್ ಕಾಂಬಿನೇಷನ್ ನ  ದಿಗ್ಗಜರು 2 ಸಿನಿಮಾ ಬಗ್ಗೆ ಚರ್ಚೆ ನಡೆಯುತ್ತಿದೆ. ಮತ್ತೆ ಇಬ್ಬರು ಜೊತೆಯಾಗಿ ನಟಿಸುತ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

  • ಚಂದನವನದ ಹಿರಿಯ ನಿರ್ಮಾಪಕ ಸಿ.ಜಯರಾಮ್ ಇನ್ನಿಲ್ಲ

    ಚಂದನವನದ ಹಿರಿಯ ನಿರ್ಮಾಪಕ ಸಿ.ಜಯರಾಮ್ ಇನ್ನಿಲ್ಲ

    ಬೆಂಗಳೂರು: ಆಟೋ ರಾಜ, ನಾ ನಿನ್ನ ಬಿಡಲಾರೆಯಂತಹ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಹಿರಿಯ ನಿರ್ಮಾಪಕ ಸಿ. ಜಯರಾಮ್ ನಿಧನರಾಗಿದ್ದಾರೆ.

    auto raja

    ಸೆ.9ರ ಬೆಳಗಿನ ಜಾವ ಜಯರಾಮ್‍ರವರು ಕೊನೆಯುಸಿರೆಳೆದಿದ್ದು, ಇದೀಗ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಹಲವಾರು ಗಣ್ಯಾತಿ ಗಣ್ಯರು ಕಂಬನಿ ಮಿಡಿಯುತ್ತಿದ್ದಾರೆ. 70-80ರ ದಶಕದಲ್ಲಿ ಕನ್ನಡದಲ್ಲಿ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಅವರು ನಂತರ ಸಿನಿಮಾ ನಿರ್ಮಾಣದಿಂದ ದೂರ ಉಳಿದಿದ್ದರು. ಇದನ್ನೂ ಓದಿ: ಮುಂಬೈನಿಂದಲೇ ಕರೆ ಮಾಡಿ ವಕೀಲರ ಜೊತೆ ಅನುಶ್ರೀ ಮಾತು!

    na ninna bidalare

    ಶ್ರೀನಾಥ್ ಹಾಗೂ ಆರತಿ ಅಭಿನಯದ ಪಾವನ ಗಂಗ, ರಜನಿಕಾಂತ್ ಮತ್ತು ವಿಷ್ಣುವರ್ಧನ್ ಒಟ್ಟಿಗೆ ನಟಿಸಿದ್ದ ಗಲಾಟೆ ಸಂಸಾರ, ಆನಂತ್ ನಾಗ್‍ರವರ ‘ನಾ ನಿನ್ನ ಬಿಡಲಾರೆ’, ಶಂಕರ್ ನಾಗ್ ನಟಿಸಿದ್ದ ಆಟೋ ರಾಜ ಹೀಗೆ ಹಲವಾರು ಹಿಟ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ಜಯರಾಮ್ ನೀಡಿದ್ದಾರೆ. ಅಲ್ಲದೇ ಜಯರಾಮ್‍ರವರು ಪಾರ್ವತಮ್ಮ ರಾಜ್‌ ಕುಮಾರ್‌ರವರ ಸಹೋದರಿಯನ್ನೇ ವಿವಾಹವಾಗಿದ್ದರು. ಇದನ್ನೂ ಓದಿ: ತಲ್ವಾರ್‌ನಿಂದ ಕೇಕ್ ಕತ್ತರಿಸಿ ಬರ್ತ್‍ಡೇ ಆಚರಿಸಿಕೊಂಡ ಡಾಬಾ ಮಾಲೀಕ

    prakash

    ಸದ್ಯ ಜಯರಾಮ್ ಅವರ ಪುತ್ರ ಮಿಲನ ಪ್ರಕಾಶ್ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡು ದೊಡ್ಡ ಹೆಸರು ಮಾಡಿದ್ದಾರೆ. ನಟ ಪುನೀತ್ ರಾಜ್ ಕುಮಾರ್ ಅವರ ಮಿಲನ, ವಂಶಿ, ವಿನಯ್ ರಾಜ್ ಕುಮಾರ್ ಅವರ ಸಿದ್ದಾರ್ಥ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ್, ಯಶ್ ಹಾಗೂ ವಿಜಯ್ ರಾಘವೇಂದ್ರರವರು ನಟಿಸಿರುವ ಗೋಕುಲ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

  • ದರ್ಶನ್ – ಪ್ರಕಾಶ್ ಪುನರ್ ಮಿಲನ!

    ದರ್ಶನ್ – ಪ್ರಕಾಶ್ ಪುನರ್ ಮಿಲನ!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಬರ್ಟ್ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡು ಕೊಂಚ ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ. ಇನ್ನೇನು ಗೌರಿ ಗಣೇಶ ಹಬ್ಬ ಮುಗಿಯುತ್ತಲೇ ಆ ಚಿತ್ರದ ಎರಡನೇ ಹಂತದ ಚಿತ್ರೀಕರಣ ನಡೆಯಲಿದೆ. ರಾಬರ್ಟ್ ಜೊತೆಗೇ ಮತ್ತೊಂದಷ್ಟು ಚಿತ್ರಗಳೂ ಕೂಡಾ ದರ್ಶನ್ ಅವರ ಲಿಸ್ಟಿನಲ್ಲಿ ಸಾಲುಗಟ್ಟಿ ನಿಂತಿವೆ. ಹಾಗಿದ್ದರೂ ಕೂಡಾ ದರ್ಶನ್ ಮತ್ತೊಂದು ಚಿತ್ರವನ್ನೀಗ ಒಪ್ಪಿಕೊಂಡಿದ್ದಾರೆಂಬ ಮಾತುಗಳೂ ಕೇಳಿ ಬರುತ್ತಿವೆ.

    ವರ್ಷಗಳ ಹಿಂದೆ ದರ್ಶನ್ ಅಭಿನಯ ತಾರಕ್ ಚಿತ್ರ ತೆರೆ ಕಂಡಿತ್ತು. ಆ ಚಿತ್ರವನ್ನು ನಿರ್ದೇಶನ ಮಾಡಿದ್ದವರು ಮಿಲನ ಪ್ರಕಾಶ್. ಆ ಕಾಲಕ್ಕೆ ದರ್ಶನ್ ಪಕ್ಕಾ ಮಾಸ್ ಚಿತ್ರಗಳತ್ತಲೇ ಹೆಚ್ಚಾಗಿ ಒತ್ತು ನೀಡಿದ್ದರು. ಅಂಥಾ ಹೊತ್ತಿನಲ್ಲಿಯೇ ದರ್ಶನ್ ಅಭಿಮಾನಿಗಳು ಬಹುಕಾಲದಿಂದ ಕಾಯುತ್ತಿದ್ದ ಫ್ಯಾಮಿಲಿ ಸಬ್ಜೆಕ್ಟಿನ ಕಥೆಯೊಂದಿಗೆ ಪ್ರಕಾಶ್ ಮೋಡಿ ಮಾಡಿದ್ದರು. ಈ ಫ್ಯಾಮಿಲಿ ಎಂಟರ್ ಟೈನರ್ ಚಿತ್ರ ಸೂಪರ್ ಹಿಟ್ ಆಗಿತ್ತು. ಅದರಲ್ಲಿನ ದರ್ಶನ್ ನಟನೆಯಂತೂ ಎಲ್ಲರ ಮೆಚ್ಚುಗೆ ಗಳಿಸಿಕೊಂಡಿತ್ತು. ಹೀಗೆ ಹಿಟ್ ಸಿನಿಮಾ ನಿರ್ದೇಶನ ಮಾಡಿದ್ದ ಪ್ರಕಾಶ್ ದರ್ಶನ್ ಅವರ ಮತ್ತೊಂದು ಚಿತ್ರ ನಿರ್ದೇಶನ ಮಾಡೋದು ಗ್ಯಾರೆಂಟಿ ಎನ್ನಲಾಗುತ್ತಿದೆ.

    ಇದಕ್ಕೆ ದರ್ಶನ್ ಕಡೆಯಿಂದಲೇ ಒಪ್ಪಿಗೆ ಸಿಕ್ಕಿದೆಯಂತೆ. ಪ್ರಕಾಶ್ ಕೂಡಾ ಸಮರ್ಥ ತಂಡದೊಂದಿಗೆ ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಳ್ಳಲು ತಯಾರಾಗಿದ್ದಾರೆ. ಸದ್ಯದಲ್ಲಿಯೇ ಟೈಟಲ್ ಲಾಂಚ್ ಮಾಡಿ, ಈ ಚಿತ್ರವನ್ನು ಅಧಿಕೃತಗೊಳಿಸಿ ನಂತರ ಉಳಿದ ಕೆಲಸ ಮಾಡೋ ನಿರ್ಧಾರ ಅವರದ್ದು. ಹಾಗಂತ ಈ ಚಿತ್ರ ಈ ಕೂಡಲೇ ಶುರುವಾಗುತ್ತೆ ಅಂತೇನಲ್ಲ. ದರ್ಶನ್ ಈಗ ರಾಬರ್ಟ್ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅದಾದ ನಂತರ ಒಡೆಯ ಮತ್ತು ವೀರ ಮದಕರಿ ನಾಯಕ ಚಿತ್ರಗಳು ಅವರಿಗಾಗಿ ಕಾದಿವೆ. ಇದಾದ ನಂತರ ಮಿಲನ ಪ್ರಕಾಶ್ ನಿರ್ದೇಶನದ ಚಿತ್ರ ಶುರುವಾಗಲಿದೆಯಂತೆ.

  • ಮತ್ತೆ ಜೊತೆಯಾಗಲಿದ್ದಾರೆ ಚಾಲೆಂಜಿಂಗ್ ಸ್ಟಾರ್, ಮಿಲನ ಪ್ರಕಾಶ್

    ಮತ್ತೆ ಜೊತೆಯಾಗಲಿದ್ದಾರೆ ಚಾಲೆಂಜಿಂಗ್ ಸ್ಟಾರ್, ಮಿಲನ ಪ್ರಕಾಶ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ಮಿಲನ ಪ್ರಕಾಶ್ ಅವರು ಮತ್ತೊಂದು ಸಿನಿಮಾ ಮಾಡಲು ಮುಂದಾಗಿದ್ದಾರೆ.

    ಈ ಹಿಂದೆ ತಾರಕ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದ ಪ್ರಕಾಶ್ ಅವರು ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ಮತ್ತೊಂದು ಸಿನಿಮಾ ಮಾಡಬೇಕೆಂಬ ಯೋಜನೆಯಲ್ಲಿದ್ದಾರೆ. ಇಬ್ಬರು ಜೊತೆಯಲ್ಲಿ ಮಾಡುತ್ತಿರುವುದು 2 ನೇ ಸಿನಿಮಾವಾಗಿದ್ದು, ನಿದೇರ್ಶಕರಾದ ಪ್ರಕಾಶ್ ಅವರ ಸಮ್ಮುಖದಲ್ಲಿ ಚಿತ್ರದ ಕಥೆಯ ಕೆಲಸಗಳು ನಡೆಯುತ್ತಿವೆ. ಈ ಚಿತ್ರದ ಕಥೆ ವಿಭಿನ್ನ ರೀತಿಯಲ್ಲಿದ್ದು, ಬೇಗನೆ ಚಿತ್ರದ ಟೈಟಲ್ ಹಾಗೂ ಸಿನಿಮಾವನ್ನು ತಿಳಿಸುವುದಾಗಿ ಹೇಳಿದ್ದಾರೆ.

    ಚಾಲೆಂಜಿಂಗ್ ದರ್ಶನ್ ಅವರಿಗೆ ಕಾರ್ ಅಪಘಾತ ಸಂಭವಿಸಿದ್ದು, ಈಗ ವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೆ ಗಾಯದ ನೋವಿನಲ್ಲೂ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ.

    ಸದ್ಯಕ್ಕೆ ದಚ್ಚು `ಒಡೆಯ’ ಸಿನಿಮಾದ ಒಂದು ಶೆಡ್ಯೂಲ್ ಕಂಪ್ಲೀಟ್ ಮಾಡಿದ್ದರು. ಅಪಘಾತವಾದ ಮರುದಿನದಿಂದ ಒಡೆಯ ಸಿನಿಮಾದ ಶೂಟಿಂಗ್ ಬೆಂಗಳೂರಿನಲ್ಲಿ ಶುರುವಾಗಬೇಕಿತ್ತು. ಆದ್ರೆ ಅದನ್ನು ಮುಂದೂಡಲಾಗಿತ್ತು. ಆದರೆ ವಿಶ್ರಾಂತಿಯ ಜೊತೆಗೆ `ಯಜಮಾನ’ ಚಿತ್ರದ ಡಬ್ಬಿಂಗ್ ಕೆಲಸವನ್ನು ಮುಗಿಸಿದ್ದಾರೆ. ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕ ಅಂದ್ರೆ ನವೆಂಬರ್ 20ರಿಂದ ದರ್ಶನ್ ಚಿತ್ರೀಕರಣಕ್ಕೆ ಎಂಟ್ರಿಯಾಗಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv