Tag: Milana Nagaraj

  • ‘ಲವ್ ಬರ್ಡ್ಸ್’ ಗಾಗಿ ಲಾಯರ್ ಆದ ಸಂಯುಕ್ತ ಹೊರನಾಡು

    ‘ಲವ್ ಬರ್ಡ್ಸ್’ ಗಾಗಿ ಲಾಯರ್ ಆದ ಸಂಯುಕ್ತ ಹೊರನಾಡು

    ತಾರಾ ಜೋಡಿ ಡಾರ್ಲಿಂಗ್ ಕೃಷ್ಣ – ಮಿಲನ ನಾಗರಾಜ್ ನಾಯಕ-ನಾಯಕಿಯಾಗಿ ನಟಿಸಿರುವ “ಲವ್ ಬರ್ಡ್ಸ್” ಚಿತ್ರದಲ್ಲಿ ನಟಿ ಸಂಯುಕ್ತ ಹೊರನಾಡು ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಾರಿಗೂ ಅಂಜದ ದಿಟ್ಟ ಹುಡುಗಿಯಾಗಿ, ತೆಗೆದುಕೊಂಡ ಎಲ್ಲಾ ಕೇಸ್ ಗಳಲ್ಲೂ ಯಶಸ್ಸು ಗಳಿಸುವ ಯಶಸ್ವಿ ಲಾಯರ್ ಆಗಿ ಅಭಿನಯಿಸಿರುವ ಸಂಯುಕ್ತ ಹೊರನಾಡು ಪಾತ್ರದ ಹೆಸರು ಮಾಯಾ. ಈಕೆ  ನಾಯಕ ಹಾಗೂ ನಾಯಕಿ ದೀಪಕ್ – ಪೂಜಾ ಇಬ್ಬರಿಗೂ ಗೆಳತಿ ಕೂಡ.

    ಯಂಗ್ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಂಯುಕ್ತ ಹೊರನಾಡು ಅವರ ಪಾತ್ರಕ್ಕೆ ಸರಿಹೊಂದುವ ಕಾಸ್ಟ್ಯೂಮ್ಸ್ ಗಳನ್ನು ಬಳಸಿಕೊಳ್ಳಲಾಗಿದೆ ಹಾಗೂ ಮೊದಲ ಬಾರಿಗೆ ಸಂಯುಕ್ತ ಹೊರನಾಡು ಅವರ ಪಾತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ ಎಂದು ನಿರ್ದೇಶಕ ಪಿ.ಸಿ.ಶೇಖರ್ ತಿಳಿಸಿದ್ದಾರೆ. ಇದನ್ನೂ ಓದಿ: ರಶ್ಮಿಕಾ ಬೀಚ್ ಫೋಟೋ: ದೇವರಕೊಂಡ ಕ್ಲಿಕ್ಕಿಸಿದ್ದಾ ಎಂದ ನೆಟ್ಟಿಗರು

    ಶ್ರೀಬನಶಂಕರಿ ಚಿತ್ರಾಲಯ ಲಾಂಛನದಲ್ಲಿ ಕಡ್ಡಿಪುಡಿ ಚಂದ್ರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರದ ಮೊದಲ ಹಾಡು ಜನವರಿ 22 ರಂದು ಬಿಡುಗಡೆಯಾಗಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಡಾರ್ಲಿಂಗ್ ಕೃಷ್ಣ – ಮಿಲನ ನಾಗರಾಜ್ ನಟನೆಯ ‘ಲವ್ ಬರ್ಡ್ಸ್’ ಟೀಸರ್ ರಿಲೀಸ್

    ಡಾರ್ಲಿಂಗ್ ಕೃಷ್ಣ – ಮಿಲನ ನಾಗರಾಜ್ ನಟನೆಯ ‘ಲವ್ ಬರ್ಡ್ಸ್’ ಟೀಸರ್ ರಿಲೀಸ್

    ಡ್ಡಿಪುಡಿ ಚಂದ್ರು ನಿರ್ಮಿಸಿರುವ, ಪಿ.ಸಿ.ಶೇಖರ್ ನಿರ್ದೇಶನದ, ಡಾರ್ಲಿಂಗ್ ಕೃಷ್ಣ(Darling Krishna) – ಮಿಲನ ನಾಗರಾಜ್ (Milana Nagaraj) ನಾಯಕ, ನಾಯಕಿಯಾಗಿ ನಟಿಸಿರುವ ‘ಲವ್ ಬರ್ಡ್ಸ್’ (Lovebirds) ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನಾಯಕ, ನಾಯಕಿಯ ಪಾತ್ರವನ್ನು ಪರಿಸಿಚಯಿಸುವ ಈ ಟೀಸರ್ ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕನ್ನಡ ಚಿತ್ರರಂಗದ ಖ್ಯಾತ ನಟರಾದ ವಿಜಯ ರಾಘವೇಂದ್ರ ಹಾಗೂ ಅಜಯ್ ರಾವ್ ‘ಲವ್ ಬರ್ಡ್ಸ್’ ಚಿತ್ರದ ಟೀಸರ್ (Teaser) ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

    ನಾನು ಸಾಮಾನ್ಯವಾಗಿ ಒಂದೇ ತರಹದ ಚಿತ್ರ ಮಾಡುವುದಿಲ್ಲ. ಬೇರೆಬೇರೆ ರೀತಿಯ ಚಿತ್ರ ಮಾಡುತ್ತಿರುತ್ತೇನೆ. ಲಾಕ್ ಡೌನ್ ಸಮಯದಲ್ಲಿ ಬರೆದ ಕಥೆಯಿದು. ಮದುವೆಯಾದ ನನ್ನ ಸ್ನೇಹಿತರು ಹಂಚಿಕೊಳ್ಳುತ್ತಿದ್ದ ಕೆಲವು ವಿಷಯಗಳು ಈ ಕಥೆ ಬರೆಯಲು ಸ್ಪೂರ್ತಿ. ಕಥೆ ಬರೆಯಬೇಕಾದರೆ ಕೃಷ್ಣ – ಮಿಲನ ನಾಗರಾಜ್ ಅವರೆ ನಾಯಕ-ನಾಯಕಿ ಅಂತ ನಿರ್ಧರಿಸಿದ್ದೆ. ಆನಂತರ ನಿರ್ಮಾಪಕ ಚಂದ್ರು ಅವರಿಗೆ ಕಥೆ ಹೇಳಿದೆ. ಅವರು ಚಿತ್ರ ಮಾಡಲು ಮುಂದಾದರು.  ಚಿತ್ರತಂಡದ ಸಹಕಾರದಿಂದ “ಲವ್ ಬರ್ಡ್ಸ್” ಚಿತ್ರ ಚೆನ್ನಾಗಿ ಬಂದಿದೆ. ನಿಮ್ಮೆಲ್ಲರ ಸಹಕಾರವಿರಲಿ ಎಂದರು ನಿರ್ದೇಶಕ ಪಿ.ಸಿ.ಶೇಖರ್. ಇದನ್ನೂ ಓದಿ: ಮದುವೆ ಬಗ್ಗೆ ನಟಿ ರಚಿತಾ ರಾಮ್ ಮನದಾಳದ ಮಾತು

    ಚಿತ್ರ ಚೆನ್ನಾಗಿ ಬಂದಿದೆ. ಟೀಸರ್ ಬಿಡುಗಡೆ ಮಾಡಿಕೊಟ್ಟ ವಿಜಯ ರಾಘವೇಂದ್ರ – ಅಜಯ್ ರಾವ್ ಅವರಿಗೆ ಧನ್ಯವಾದ. ಮುಂದಿನವಾರ ಚಿತ್ರದ ಹಾಡನ್ನು ಬಿಡುಗಡೆ ಮಾಡುತ್ತೇವೆ ಎಂದು ನಿರ್ಮಾಪಕ ಕಡ್ಡಿಪುಡಿ ಚಂದ್ರು ತಿಳಿಸಿದರು. ನಾನು ಹಾಗೂ ಮಿಲನ ನಾಗರಾಜ್ “ಲವ್ ಮಾಕ್ಟೇಲ್” ಚಿತ್ರದ ನಂತರ ಮಾಡಿರುವ ಚಿತ್ರವಿದು. ಅದರಲ್ಲಿ ಆದಿ ಹಾಗೂ ನಿಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆವು. ಇದರಲ್ಲಿ ದೀಪಕ್ – ಪೂಜಾ ಪಾತ್ರದಲ್ಲಿ ಅಭಿನಯಿಸಿದ್ದೇವೆ. ಚಿತ್ರದಲ್ಲಿ ಆಕ್ಷನ್ ಸನ್ನಿವೇಶಗಳು ಚೆನ್ನಾಗಿದೆ. ನಿರ್ದೇಶಕ ಪಿ.ಸಿ.ಶೇಖರ್ ಚಿತ್ರವನ್ನು ಚೆನ್ನಾಗಿ ಮಾಡಿದ್ದಾರೆ. ನಿರ್ಮಾಪಕ ಚಂದ್ರು ಅವರಿಗೆ ಧನ್ಯವಾದ ಎಂದರು ಡಾರ್ಲಿಂಗ್ ಕೃಷ್ಣ.

    ನಿರ್ಮಾಪಕ ಚಂದ್ರು ಅವರು ತುಂಬಾ ಫಾಸ್ಟ್. ನಾನಿದ್ದ ಜಾಗಕ್ಕೆ ಬಂದು ಈ ಚಿತ್ರದ ಕುರಿತು ಹೇಳಿದರು. ಕಥೆ ಇಷ್ಟವಾಯಿತು. ಪಿ.ಸಿ.ಶೇಖರ್ ಸುಂದರವಾದ ಕಥೆ ಬರೆದಿದ್ದಾರೆ. “ಲವ್ ಬರ್ಡ್ಸ್” ಚಿತ್ರದಲ್ಲಿ ಲವ್ ಅಷ್ಟೇ ಅಲ್ಲ. ಬೇರೆ ವಿಷಯಗಳು ಇದೆ. ಎಲ್ಲರೂ ಚಿತ್ರ ನೋಡಿ ಪ್ರೋತ್ಸಾಹ ನೀಡಿ ಎಂದು ಮಿಲನ ನಾಗರಾಜ್ ಹೇಳಿದರು. ಹೊಸಪ್ರತಿಭೆ ಗೌರವ್ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು.

     

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • `ಲವ್ ಬರ್ಡ್ಸ್’ ಚಿತ್ರದಲ್ಲಿ ಮಿಲನಾ ನಾಗರಾಜ್: ಸಿನಿಮಾದ ಫಸ್ಟ್ ಲುಕ್ ಔಟ್

    `ಲವ್ ಬರ್ಡ್ಸ್’ ಚಿತ್ರದಲ್ಲಿ ಮಿಲನಾ ನಾಗರಾಜ್: ಸಿನಿಮಾದ ಫಸ್ಟ್ ಲುಕ್ ಔಟ್

    `ಲವ್ ಮಾಕ್ಟೈಲ್‌ʼ (Love Mocktail) ಸಿನಿಮಾದ  ಸೂಪರ್ ಸಕ್ಸಸ್ ನಂತರ `ಲವ್ ಬರ್ಡ್ಸ್’ (Love Birds) ಆಗಿ ಮಿಂಚಲು ಕೃಷ್ಣ ಮತ್ತು ಮಿಲನಾ ರೆಡಿಯಾಗಿದ್ದಾರೆ. ಇದೀಗ ಮಿಲನಾ ಅವರ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದೆ.

     

    View this post on Instagram

     

    A post shared by Milana Nagaraj (@milananagaraj)

    ಡಾರ್ಲಿಂಗ್ ಕೃಷ್ಣ (Darling Krishna) ಮತ್ತು ಮಿಲನಾ ನಾಗರಾಜ್ (Milana Nagaraj) ಜೋಡಿ `ಲವ್ ಬರ್ಡ್ಸ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿರುವ ಬಗ್ಗೆ ಈ ಹಿಂದೆ ಸುದ್ದಿಯಾಗಿತ್ತು. ಈಗ ಈ ಸಿನಿಮಾದ ಮಿಲನಾ ನಾಗರಾಜ್ ಪಾತ್ರದ ಲುಕ್ ಬಿಡುಗಡೆ ಆಗಿದೆ. ಮಿಲನಾ ಈ ಸಿನಿಮಾದಲ್ಲಿ ಫ್ಯಾಷನ್ ಡಿಸೈನರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

     

    View this post on Instagram

     

    A post shared by Milana Nagaraj (@milananagaraj)

    ಸ್ಯಾಂಡಲ್‌ವುಡ್‌ನ ರಿಯಲ್ ಲವ್ ಬರ್ಡ್ಸ್ ಎಂದೇ ಕರೆಯಲ್ಪಡುವ ಕ್ರಿಸ್‌ಮಿ ಜೋಡಿ ಲವ್ ಮಾಕ್ಟೈಲ್, ಲವ್ ಮಾಕ್ಟೈಲ್‌ 2, ಮಿ.ಬ್ಯಾಚುಲರ್ ಸಿನಿಮಾಗಳ ನಂತರ `ಲವ್ ಬರ್ಡ್ಸ್’ ಆಗಿ ಮಿಂಚಲು ಸಜ್ಜಾಗಿದ್ದಾರೆ. ಈಗಾಗಲೇ ಸಿನಿಮಾದ ಶೇ. 80ರಷ್ಟು ಚಿತ್ರಿಕರಣ ಕಂಪ್ಲೀಟ್ ಆಗಿದೆ.

     

    View this post on Instagram

     

    A post shared by Milana Nagaraj (@milananagaraj)

    `ಲವ್ ಬರ್ಡ್ಸ್’ ಸಿನಿಮಾದಲ್ಲಿ ಗಂಡ ಹೆಂಡತಿ ಸಂಬಂಧದ ಬಗೆಗಿನ ಕಥೆ ಇದೆ. ಮದುವೆಯನ್ನು ಹೇಗೆ ಸುಂದರಗೊಳಿಸಬಹುದು ಎಂಬ ಬಗ್ಗೆ ತೆರೆಯ ಮೇಲೆ ತೋರಿಸಲು ನಿರ್ದೇಶಕ ಪಿ.ಸಿ ಶೇಖರ್ (Director Pc Shekar) ಹೊರಟಿದ್ದಾರೆ. ಮಿಲನಾ ನಾಗರಾಜ್ ಫ್ಯಾಷನ್ ಡಿಸೈನರ್ (Fashion Designer) ಆಗಿ ಸಖತ್ ಬೋಲ್ಡ್ ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಂಡಿರುವ ಅವರು ಇಂಡಿಪೆಂಡೆಂಟ್ ಯುವತಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಡಾರ್ಲಿಂಗ್ ಕೃಷ್ಣ ಕೂಡ ಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: ರಾಜಕೀಯ ಅಖಾಡಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್

     

    View this post on Instagram

     

    A post shared by Milana Nagaraj (@milananagaraj)

    ಸದ್ಯ ಈ ಚಿತ್ರದ ಮಿಲನಾ ಲುಕ್ ಏಲ್ಲೆಡೆ ಸದ್ದು ಮಾಡುತ್ತಿದೆ. ನಟಿಯ ಮೊದಲ ಲುಕ್ ನೆಟ್ಟಿಗರ ಗಮನ ಸೆಳೆದಿದೆ. ಸದ್ಯದಲ್ಲೇ ಸಿನಿಮಾ ತೆರೆಗೆ ಅಬ್ಬರಿಸಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • MOCOBOT ಕ್ಯಾಮೆರಾ ಬಳಸಿ ‘F0R REGN’ ಸಿನಿಮಾದ ಅಂಡರ್ ವಾಟರ್ ಸಾಂಗು ಶೂಟ್

    MOCOBOT ಕ್ಯಾಮೆರಾ ಬಳಸಿ ‘F0R REGN’ ಸಿನಿಮಾದ ಅಂಡರ್ ವಾಟರ್ ಸಾಂಗು ಶೂಟ್

    ಪೃಥ್ವಿ ಅಂಬರ್ ಹಾಗೂ ಮಿಲನ ನಾಗರಾಜ್ ನಾಯಕ – ನಾಯಕಿಯಾಗಿ ನಟಿಸಿರುವ  “F0R REGN”. (ಫಾರ್ ರಿಜಿಸ್ಟರೇಷನ್) ಚಿತ್ರದ ಚಿತ್ರೀಕರಣ ಹಾಡೊಂದರ‌ ಚಿತ್ರೀಕರಣದೊಂದಿಗೆ ಮುಕ್ತಾಯವಾಗಿದೆ. ಅಂಡರ್ ವಾಟರ್ ನಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದೆ.

    ಈ ಹಾಡಿನ ಚಿತ್ರೀಕರಣಕ್ಕಾಗಿ  “ಮೋಕೊ ಬೋಟ್” ಕ್ಯಾಮರಾ ಬಳಸಲಾಗಿದೆ.‌ ನನಗೆ ತಿಳಿದ ಕನ್ನಡ ಚಿತ್ರರಂಗದಲ್ಲಿ ಹಾಡೊಂದರ ಚಿತ್ರೀಕರಣಕ್ಕಾಗಿ ಈ ಕ್ಯಾಮೆರಾ ಬಳಸಿರುವುದು ಇದೇ ಮೊದಲು ಎನ್ನುತ್ತಾರೆ ನಿರ್ದೇಶಕ ನವೀನ್ ದ್ವಾರಕನಾಥ್.  ಛಾಯಾಗ್ರಾಹಕ ಅಭಿಷೇಕ್ ಕಾಸರಗೋಡು ಈ ಹಾಡನ್ನು ಅದ್ಭುತವಾಗಿ ಸೆರೆ ಹಿಡಿದಿದ್ದಾರೆ. ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನವಿರುವ ಈ ಹಾಡಿನಲ್ಲಿ ಪೃಥ್ವಿ ಅಂಬರ್ ಹಾಗೂ ಮಿಲನ ನಾಗರಾಜ್ ಅಭಿನಯಿಸಿದ್ದಾರೆ‌. ಇದನ್ನೂ ಓದಿ: `ಅವತಾರ್ 2′ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ: 2 ಕೋಟಿ ಟಿಕೆಟ್ ಸೋಲ್ಡ್ ಔಟ್

    ಇತ್ತೀಚಿಗೆ ಬಿಡುಗಡೆಯಾಗಿರುವ ಚಿತ್ರದ ಫಸ್ಟ್ ಲುಕ್ ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಪ್ರೇಮಿಗಳ ದಿನಾಚರಣೆಯ ಸಂದರ್ಭದಲ್ಲಿ ಈ ಚಿತ್ರ ತೆರೆಗೆ ಬರುವ ನಿರೀಕ್ಷೆಯಿದೆ. ನಿಶ್ಚಲ್ ಫಿಲಂಸ್ ಮೂಲಕ ಎನ್ .ನವೀನ್ ರಾವ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.  ನವೀನ್ ದ್ವಾರಕನಾಥ್ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಹರೀಶ್ ಸಂಗೀತ ನಿರ್ದೇಶನ,  ಅಭಿಷೇಕ್ ಕಲ್ಲತ್ತಿ- ಅಭಿಷೇಕ್ ಕಾಸರಗೋಡು  ಛಾಯಾಗ್ರಹಣ ಹಾಗೂ ಮನು ಶೆಡ್ಗಾರ್ ಅವರ ಸಂಕಲನವಿದೆ.

    ಪೃಥ್ವಿ ಅಂಬರ್, ಮಿಲನ‌ ನಾಗರಾಜ್, ರವಿಶಂಕರ್, ಬಾಬು ಹಿರಣ್ಣಯ್ಯ, ಸ್ವಾತಿ, ಸುಧಾ ಬೆಳವಾಡಿ, ತಬಲನಾಣಿ, ರಮೇಶ್ ಭಟ್, ಸಿಹಿಕಹಿ ಚಂದ್ರು ಮುಂತಾದವರು  ತಾರಾಬಳಗದಲ್ಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪೃಥ್ವಿ ಅಂಬರ್ ಹಾಗೂ ಮಿಲನ ನಾಗರಾಜ್ ಕಾಂಬಿನೇಷನ್ ಸಿನಿಮಾ ಫೆ.10ಕ್ಕೆ ರಿಲೀಸ್

    ಪೃಥ್ವಿ ಅಂಬರ್ ಹಾಗೂ ಮಿಲನ ನಾಗರಾಜ್ ಕಾಂಬಿನೇಷನ್ ಸಿನಿಮಾ ಫೆ.10ಕ್ಕೆ ರಿಲೀಸ್

    ಪೃಥ್ವಿ ಅಂಬರ್ ಹಾಗೂ ಮಿಲನ ನಾಗರಾಜ್ ನಾಯಕ – ನಾಯಕಿಯಾಗಿ ನಟಿಸಿರುವ  “F0R REGN”. (ಫಾರ್ ರಿಜಿಸ್ಟರೇಷನ್) ಚಿತ್ರ 2023 ರ ಫೆಬ್ರವರಿ 10ರಂದು ಬಿಡುಗಡೆಯಾಗಲಿದೆ. ಕರ್ನಾಟಕ ರಾಜ್ಯೋತ್ಸವದ ಶುಭದಿನದಂದು ಚಿತ್ರದ ಬಿಡುಗಡೆ ದಿನಾಂಕ ಹಾಗೂ ಫಸ್ಟ್ ಲುಕ್ ಅನಾವರಣಗೊಂಡಿದೆ. ನಿರ್ಮಾಪಕ ನವೀನ್ ರಾವ್  ಹಾಗೂ  ನಿರ್ದೇಶಕ ನವೀನ್ ದ್ವಾರಕನಾಥ್ ಅವರ ಪೋಷಕರು ಫಸ್ಟ್ ಲುಕ್ ಹಾಗೂ ಬಿಡುಗಡೆ ದಿನಾಂಕವನ್ನು ಅನಾವರಣಗೊಳಿಸಿದರು‌.

    ನಾನು ಹಾಗೂ ನಿರ್ಮಾಪಕ ನವೀನ್ ರಾವ್ ಸಹಪಾಠಿಗಳು. ಕಿರುಚಿತ್ರಗಳನ್ನು ನಿರ್ದೇಶಿಸುತ್ತಿದ್ದ ನನಗೆ ಒಂದು ದಿನ ನನ್ನ ಸ್ನೇಹಿತ ನವೀನ್ ರಾವ್ ಈ ಚಿತ್ರವನ್ನು ನಿರ್ದೇಶಿಸಲು ಪ್ರೇರೇಪಿಸಿದರು. ಪೃಥ್ವಿ ಅಂಬರ್ ಹಾಗೂ ಮಿಲನ ನಾಗರಾಜ್ ನಾಯಕ – ನಾಯಕಿ ಅಂತ ನಿರ್ಧರಿಸಲಾಯಿತು. ಆಗ ಅವರಿಬ್ಬರ ” ದಿಯಾ” ಹಾಗೂ “ಲವ್ ಮಾಕ್ಟೇಲ್” ಸಿನಿಮಾಗಳು ಯಶಸ್ವಿಯಾಗಿದ್ದವು. ಹೀಗೆ ಚಿತ್ರ ಆರಂಭವಾಗಿ ಈಗ ಬಿಡುಗಡೆ ಹಂತಕ್ಕೆ ತಲುಪಿದೆ. ಫೆಬ್ರವರಿ ಹತ್ತರಂದು ಚಿತ್ರ ಬಿಡುಗಡೆಯಾಗುತ್ತಿದೆ ಎಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ನವೀನ್ ದ್ವಾರಕನಾಥ್. ಇದನ್ನೂ ಓದಿ:‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಅಪ್ಪುಗೆ ಅರ್ಪಿಸಿದ ಪುನೀತ್ ಪತ್ನಿ ಅಶ್ವಿನಿ

    ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದಾಗ ನನಗೆ ಅನಿಸಿದ್ದು, ನಿರ್ಮಾಪಕ ಹಣ ಒದಗಿಸಿಕೊಡತ್ತಾನೆ.‌ ಆದರೆ ಇಡೀ ತಂಡ ಚಿತ್ರಕ್ಕಾಗಿ ಎಷ್ಟು ಕಷ್ಟ ಪಡುತ್ತದೆ ಎಂದು.  ಅವರೆಲ್ಲರ ಶ್ರಮದಿಂದ ಉತ್ತಮ ಚಿತ್ರವೊಂದು ನಿರ್ಮಾಣವಾಗಿದೆ. ನೋಡಿ ಹಾರೈಸಿ ಎಂದರು ನಿರ್ಮಾಪಕ ನವೀನ್ ರಾವ್. ನಾನು ತುಳು ಸಿ‌ನಿಮಾ ಒಂದನ್ನು ಆಗಷ್ಟೇ ಮುಗಿಸಿದೆ. ಮಂಗಳೂರಿನಲ್ಲಿ ನಿರ್ದೇಶಕರು ಈ ಚಿತ್ರದ ಕಥೆ ಹೇಳಿದರು. ಇಷ್ಟವಾಯಿತು. ಎಲ್ಲದ್ದಕ್ಕೂ ರಿಜಿಸ್ಟ್ರೇಷನ್ ಕಡ್ಡಾಯ. ನಾವು ಪ್ರೀತಿಗೂ ರಿಜಿಸ್ಟ್ರೇಷನ್ ಕಡ್ಡಾಯವಾದರೆ ಹೇಗೆ ಎಂಬುದನ್ನು ತೋರಿಸಿದ್ದೇವೆ ಎನ್ನುತ್ತಾರೆ ನಾಯಕ ಪೃಥ್ವಿ ಅಂಬರ್.

    ಒಳ್ಳೆಯ ತಂಡದೊಂದಿಗೆ ಒಳ್ಳೆಯ ಚಿತ್ರ ಮಾಡಿದ್ದು ಖುಷಿಯಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ. ಫೆಬ್ರವರಿ ತಿಂಗಳು ನನಗೆ ಲಕ್ಕಿ. ಈ ಚಿತ್ರ ಕೂಡ ಅದೇ ತಿಂಗಳಲ್ಲಿ ತೆರೆಗೆ ಬರುತ್ತಿರುವುದು ಮತ್ತಷ್ಟು ಖುಷಿಯಾಗಿದೆ ಎಂದರು ನಾಯಕಿ ಮಿಲನ ನಾಗರಾಜ್. ಸಂಗೀತ ನಿರ್ದೇಶಕ ಹರೀಶ್ ಹಾಗೂ ಕಾರ್ಯಕಾರಿ ನಿರ್ಮಾಪಕ ನಿರಂಜನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಪೃಥ್ವಿ ಅಂಬರ್, ಮಿಲನ‌ ನಾಗರಾಜ್, ರವಿಶಂಕರ್, ಬಾಬು ಹಿರಣ್ಣಯ್ಯ, ಸ್ವಾತಿ, ಸುಧಾ ಬೆಳವಾಡಿ, ತಬಲನಾಣಿ, ರಮೇಶ್ ಭಟ್, ಸಿಹಿಕಹಿ ಚಂದ್ರು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಿಲನಾ ನಾಗರಾಜ್ ನಟನೆಯ ‘ಓ’ ಸಿನಿಮಾಗಾಗಿ ಹಾಡಿದ ಪುನೀತ್ ರಾಜ್ ಕುಮಾರ್

    ಮಿಲನಾ ನಾಗರಾಜ್ ನಟನೆಯ ‘ಓ’ ಸಿನಿಮಾಗಾಗಿ ಹಾಡಿದ ಪುನೀತ್ ರಾಜ್ ಕುಮಾರ್

    ವ್ ಮಾಕ್ಟೇಲ್  ಚಿತದ ನಂತರ ಮಿಲನಾ ನಾಗರಾಜ್ (Milana Nagaraj) ಹಾಗೂ ಅಮೃತಾ ಅಯ್ಯಂಗಾರ್ (Amrita Iyengar) ಒಟ್ಟಿಗೇ ನಟಿಸಿರುವ ವಿಭಿನ್ನ ಪ್ರೇಮಕಥಾಹಂದರ ಇರುವ ವಾಮಾಚಾರ ಹಾಗೂ ಹಾರರ್ ಹಿನ್ನೆಲೆಯಲ್ಲಿ ಮೂಡಿಬಂದಿರುವ  ಚಿತ್ರ ಓ (O). ಮಹೇಶ್ ಸಿ.ಅಮ್ಮಲ್ಲಿದೊಡ್ಡಿ (Mahesh Ammallidoddy) ಅವರ ಚಿತ್ರಕಥೆ ಹಾಗೂ ನಿರ್ದೇಶನವಿರುವ ಈ ಚಿತ್ರದ ಟ್ರೈಲರ್ (Trailer) ಬಿಡುಗಡೆ ಕಾರ್ಯಕ್ರಮ ವಿಜಯದಶಮಿಯ ಶುಭ ಸಂದರ್ಭದಲ್ಲಿ ನೆರವೇರಿತು. ಕಿರಣ್ ತಲಕಾಡು ಅವರು ಕಥೆ ಬರೆದು ಏಕಾಕ್ಷರ ಫಿಲಂಸ್ ಬ್ಯಾನರ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

    ಕೋವಿಡ್‌ಗೂ ಮುನ್ನವೇ ಪ್ರಾರಂಭವಾಗಿದ್ದ ಈ ಚಿತ್ರ ಎಲ್ಲಾ ಅಡೆತಡೆಗಳನ್ನು ದಾಟಿ ಈಗ ಬಿಡುಗಡೆಯ ಹಂತ ತಲುಪಿದೆ. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಮಹೇಶ್ ಈವರೆಗೆ ನಾನೇನು ಹಾರರ್ ಸಿನಿಮಾಗಳನ್ನು ನೋಡಿದ್ದೇನೋ, ಅದೆಲ್ಲಕ್ಕಿಂತ ವಿಭಿನ್ನವಾಗಿರಬೇಕು ಎಂದು ಮಾಡಿದ ಚಿತ್ರ. ಒಂದು ಕುಟುಂಬದಲ್ಲಿ ಅಕ್ಕತಂಗಿಯ ಮೇಲೆ ನಡೆಯುವ ಕಥೆಯಿದು. ಓ ಎಂಬ ಪದಕ್ಕೆ ಅರ್ಥವನ್ನು ಚಿತ್ರದಲ್ಲಿ ಹೇಳಿದ್ದೇವೆ. ಅಲ್ಲದೆ ವಾಮಾಚಾರ ಮಾಡುವುದು ತಪ್ಪು ಅಂತಲೇ ತೋರಿಸಿದ್ದೇವೆ. ಈಗಾಗಲೇ ಚಿತ್ರದ ಫಸ್ಟ್ ಕಾಪಿ ಬಂದಿದ್ದು, ನ.೧೧ಕ್ಕೆ  ಬಿಡುಗಡೆಯಾಗುತ್ತಿದೆ. ನನ್ನ ಜೊತೆ ಕೆಲಸ ಮಾಡಿರುವ ರಿತೇಶ್, ಚೇತನ್ ಮೂಲಕ ನಿರ್ಮಾಪಕ ಕಿರಣ್ ಅವರು ಪರಿಚಯವಾದರು ಎಂದು ವಿವರಿಸಿದರು. ಇದನ್ನೂ ಓದಿ:ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಮೂರು ದಿನದ ಗಳಿಕೆ 230 ಕೋಟಿಗೂ ಅಧಿಕ

    ನಿರ್ಮಾಪಕ ಕಿರಣ್ ತಲಕಾಡು ಮಾತನಾಡುತ್ತ ನನಗೆ ಚಿಕ್ಕವನಿದ್ದಾಗಲೇ ನನಗೆ ಏಕಾಕ್ಷರ ಶೀರ್ಷಿಕೆಯಿಟ್ಟುಕೊಂಡು ಸಿನಿಮಾ ಮಾಡಬೇಕೆಂಬ ಆಸೆಯಿತ್ತು. ಸೆನ್ಸಾರ್ ಮಂಡಳಿಯವರು ಸಿನಿಮಾ ನೋಡಿ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದು ಪ್ರಶಂಸಿಸಿದರು. ನಮ್ಮ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ಒಂದು ಹಾಡನ್ನು ಹಾಡಿದ್ದಾರೆ. ಆ ಹಾಡಿನ ಬಿಡುಗಡೆಯನ್ನು ದೊಡ್ಡ ಇವೆಂಟ್ ಮೂಲಕ ಮಾಡಬೇಕೆಂಬ ಯೋಚನೆಯಿದೆ. ಆಡಿಯೋ ಬಿಡುಗಡೆಗೆ ನಾನು ಬರುತ್ತೇನೆ ಎಂದೂ ಪುನೀತ್ ಅವರು ಹೇಳಿದ್ದರು.ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಚಿತ್ರವನ್ನು ಜನರಿಗೆ ಹೇಗೆಲ್ಲಾ ತಲುಪಿಸಬೇಕೆಂದು ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದೇವೆ ಎಂದು ಹೇಳಿದರು.

    ನಾಯಕಿ ಮಿಲನಾ ನಾಗರಾಜ್ ಮಾತನಾಡಿ ಹಬ್ಬದ ಶುಭ ದಿನದಂದು ನಮ್ಮ ಚಿತ್ರದ ಟ್ರೇಲರ್ ಬಿಡುಗಡೆಯಾಗುತ್ತಿದೆ. ಲಾಕ್‌ಡೌನ್‌ಗೂ ಮುನ್ನವೇ ಈ ಸಿನಿಮಾ ಪ್ರಾರಂಭವಾಗಿತ್ತು. ಬೇರೆಯದೇ ರೀತಿಯ ಅನುಭವ ಕೊಡುವಂಥ ಚಿತ್ರವಿದು. ಈ ಥರದ ಚಿತ್ರಗಳನ್ನು ಮಾಡುವಾಗ ತುಂಬಾ ಸಹನೆ ಇರಬೇಕು, ಅದು ಈ ನಿರ್ದೇಶಕರಲ್ಲಿತ್ತು. ಅಮೃತ ನನ್ನ ಸಹೋದರಿ ಪಾತ್ರ ಮಾಡಿದ್ದಾರೆ. ಸಿದ್ದು ಕೂಡ ಒಂದೊಳ್ಳೇ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಬ್ಲಾಕ್ ಮ್ಯಾಜಿಕ್, ಹಾರರ್ ಹೀಗೆ ತುಂಬಾ ವಿಷಯಗಳಿವೆ. ಇದನ್ನು ನಾರ್ಮಲ್ ಸಿನಿಮಾ ರೀತಿ ಶೂಟ್ ಮಾಡಲು ಸಾಧ್ಯವಿಲ್ಲ, ಬೇರೆಥರದ ಶಾಟ್ ಇಡಬೇಕು ಎಂದು ಚಿತ್ರದ ಬಗ್ಗೆ ಸಾಕಷ್ಟು ಮಾಹಿತಿ ಹಂಚಿಕೊಂಡರು. ನಂತರ ಅಮೃತ ಅಯ್ಯಂಗಾರ್ ಮಾತನಾಡಿ ಚಿತ್ರದಲ್ಲಿ ಹಾರರ್ ಎಫೆಕ್ಟ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ನನ್ನದು  ಎಲ್ಲ ಥರದ ಎಮೋಷನ್ ಕ್ಯಾರಿ ಮಾಡುವಂಥ ಪಾತ್ರ. ಜನರಿಗೆ ಹೆದರಿಸೋದು ತುಂಬಾ ಕಷ್ಟದ ಕೆಲಸ, ಕೆಲವು ಸೀನ್‌ಗಲ್ಲಿ ಆಕ್ಟ್  ಮಾಡುವಾಗ ತುಂಬಾ ಭಯವಾಗಿತ್ತು. ಆಲಾಪ್ ನನ್ನ ತಮ್ಮನ ಪಾತ್ರ ಮಾಡಿದ್ದಾನೆ. ಅವನ ಜೊತೆಗೇ ನನಗೆ ಹೆಚ್ಚು ಸೀನ್‌ಗಳಿವೆ ಎಂದರು. ನಾಯಕ ಸಿದ್ದು ಮೂಲಿಮನಿ ಮಾತನಾಡಿ ನಾನು ಅಭಿನಯಿಸಿದ ಮೊದಲ ಚಿತ್ರವಿದು. ಆಗ ನಾನು ಬೇರೊಂದು ಸಿನಿಮಾಗೆ ಆಡಿಷನ್ ಕೊಟ್ಟಿದ್ದೆ, ಸ್ನೇಹಿತ ಮಹೇಶ್ ನಾನೊಂದು ಸಿನಿಮಾ ಮಾಡುತ್ತಿದ್ದೇನೆ. ಅದರಲ್ಲಿ ನೀನೇ ಹೀರೋ ಅಂದಿದ್ದರು. ಹೇಳಿದ ಹಾಗೇ ಕರೆದು ಹೀರೋ ಮಾಡಿದ್ದಾರೆ ಎಂದು ಹೇಳಿಕೊಂಡರು.

    ನಾಯಕಿಯರ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹಿರಿಯನಟಿ ಸಂಗೀತಾ ಮಾತನಾಡಿ ನಿರ್ಮಾಪಕ ಕಿರಣ್ ನನಗೆ ಫ್ಯಾಮಿಲಿ ಫ್ರೆಂಡ್. ಅವರಿಗೆ ಸಿನಿಮಾ ಬಗ್ಗೆ ತುಂಬಾ ಆಸಕ್ತಿಯಿದೆ. ಇನ್ನೂ ಒಳ್ಳೊಳ್ಳೇ ಚಿತ್ರಗಳನ್ನು ಮಾಡುವಂತಾಗಲಿ, ನಾನೀ ಚಿತ್ರದಲ್ಲಿ ಮಾ.ಆಲಾಪ್, ಅಮೃತಾ ಹಾಗೂ ಮಿಲನಾರ ತಾಯಿಯಾಗಿ ನಟಿಸಿದ್ದೇನೆ ಎಂದು ಹೇಳಿದರು. ಚಿತ್ರಕ್ಕೆ ಛಾಯಾಗ್ರಾಹಕರಾಗಿ ದಿಲೀಪ್ ಚಕ್ರವರ್ತಿ ಕೆಲಸ ಮಾಡಿದ್ದಾರೆ. ಕಿರಣ್ ರವೀಂದ್ರನಾಥ್ ಅವರ ಸಂಗೀತ ಸತೀಶ್ ಬಾಬು ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ. ಉಗ್ರಂ, ಕೆಜಿಎಫ್ ಖ್ಯಾತಿಯ ಶ್ರೀಕಾಂತ್ ಸಂಕಲನಕಾರರಾಗಿ ಕೆಲಸ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಭಾರೀ ಮೊತ್ತಕ್ಕೆ ‘F0R REGN’  ಚಿತ್ರದ ಆಡಿಯೋ ಹಕ್ಕು ಸೇಲ್

    ಭಾರೀ ಮೊತ್ತಕ್ಕೆ ‘F0R REGN’ ಚಿತ್ರದ ಆಡಿಯೋ ಹಕ್ಕು ಸೇಲ್

    ಪೃಥ್ವಿ ಅಂಬರ್ ಹಾಗೂ ಮಿಲನ ನಾಗರಾಜ್ ನಾಯಕ – ನಾಯಕಿಯಾಗಿ ನಟಿಸಿರುವ  “F0R REGN”. (ಫಾರ್ ರಿಜಿಸ್ಟರೇಷನ್) ಚಿತ್ರದ ಆಡಿಯೋ ಹಕ್ಕನ್ನು ಪ್ರತಿಷ್ಟಿತ ಜಂಕಾರ್ ಮ್ಯೂಸಿಕ್ ಸಂಸ್ಥೆ ಭಾರೀ ಮೊತ್ತ‌ ನೀಡಿ ಖರೀದಿಸಿದೆ. ಈ ಚಿತ್ರದಲ್ಲಿ ಆರು ಹಾಡುಗಳಿದ್ದು,   ಬಹದ್ದೂರ್ ಚೇತನ್ ಕುಮಾರ್, ಕವಿರಾಜ್ ಹಾಗೂ ನಾಗಾರ್ಜುನ ಶರ್ಮ ಬರೆದಿದ್ದಾರೆ. ವಿಜಯ್ ಪ್ರಕಾಶ್, ಚಂದನ್ ಶೆಟ್ಟಿ ಹಾಗೂ ವಾಸುಕಿ ವೈಭವ್ ಹಾಡಿದ್ದಾರೆ. ಆರ್.ಕೆ.ಹರೀಶ್ ಈ ಚಿತ್ರದ ಸಂಗೀತ ನಿರ್ದೇಶಕರು. ಇದನ್ನೂ ಓದಿ:ರಚಿತಾ ರಾಮ್ @30: ಹ್ಯಾಪಿ ಬರ್ತ್‌ಡೇ ರಚ್ಚು ಅಂದ್ರು ಫ್ಯಾನ್ಸ್

    ಒಂದೇ ಒಂದು ಹಾಡಿನ ಚಿತ್ರೀಕರಣ ಮಾತ್ರಬಾಕಿಯಿದ್ದು, ಉಳಿದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯ ಮಾತಿನ ಜೋಡಣೆ ನಡೆಯುತ್ತಿದೆ. ಬೆಂಗಳೂರು, ಉಡುಪಿ, ಮಂಗಳೂರು ಹಾಗೂ ಸಕಲೇಶಪುರದಲ್ಲಿ ಚಿತ್ರೀಕರಣ ನಡೆದಿದೆ. ” ದಿಯಾ” ಹಾಗೂ “ಲವ್ ಮಾಕ್ಟೇಲ್” ಚಿತ್ರಗಳ ಮೂಲಕ ಸಿನಿರಸಿಕರ ಮನಗೆದ್ದಿರುವ ಪೃಥ್ವಿ ಅಂಬರ್ ಹಾಗೂ ಮಿಲನ ನಾಗರಾಜ್ ಜೋಡಿಯ ಈ ಚಿತ್ರದ  ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಯಿದೆ.  ರವಿಶಂಕರ್, ಬಾಬು ಹಿರಣ್ಣಯ್ಯ, ಸ್ವಾತಿ, ಸುಧಾ ಬೆಳವಾಡಿ, ತಬಲನಾಣಿ, ರಮೇಶ್ ಭಟ್, ಸಿಹಿಕಹಿ ಚಂದ್ರು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    ನಿಶ್ಚಲ್ ಫಿಲಂಸ್ ಮೂಲಕ  ಎನ್ .ನವೀನ್ ರಾವ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.  ನವೀನ್ ದ್ವಾರಕನಾಥ್ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆಯನ್ನು ನಿರ್ದೇಶಕರೆ ಬರೆದಿದ್ದಾರೆ.  ಅಭಿಷೇಕ್ ಕಲ್ಲತ್ತಿ- ಅಭಿಷೇಕ್ ಕಾಸರಗೋಡು  ಛಾಯಾಗ್ರಹಣ ಹಾಗೂ ಮನು ಶೆಡ್ಗಾರ್ ಅವರ ಸಂಕಲನವಿದೆ.

    Live Tv
    [brid partner=56869869 player=32851 video=960834 autoplay=true]

  • ಮಾಲ್ಡೀವ್ಸ್ ಪ್ರವಾಸದಲ್ಲಿ `ಲವ್ ಮಾಕ್ಟೈಲ್’ ಜೋಡಿ

    ಮಾಲ್ಡೀವ್ಸ್ ಪ್ರವಾಸದಲ್ಲಿ `ಲವ್ ಮಾಕ್ಟೈಲ್’ ಜೋಡಿ

    ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗಾರಾಜ್ ಮತ್ತೆ ಸುದ್ದಿಯಲ್ಲಿದ್ದಾರೆ. ಪತಿ ಡಾರ್ಲಿಂಗ್ ಕೃಷ್ಣನ ಹುಟ್ಟುಹಬ್ಬದ ಸೆಲೆಬ್ರೇಷನ್‌ಗಾಗಿ ಮಾಲ್ಡೀವ್ಸ್‌ನ ಸುಂದರ ತಾಣಗಳಿಗೆ ಭೇಟಿ ಕೊಟ್ಟಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

     

    View this post on Instagram

     

    A post shared by Milana Nagaraj (@milananagaraj)

    `ಲವ್ ಮಾಕ್ಟೈಲ್’ ಮತ್ತು `ಲವ್ ಮಾಕ್ಟೈಲ್‌’ ಪಾರ್ಟ್ 2 ಚಿತ್ರದ ಮೂಲಕ ಸಿಕ್ಕಾಪಟ್ಟೆ ನೇಮ್ ಆ್ಯಂಡ್ ಫೇಮ್ ಗಿಟ್ಟಿಸಿಕೊಂಡಿರುವ ಈ ಜೋಡಿ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ. ಸಾಕಷ್ಟು ಸಿನಿಮಾಗಳ ಮಧ್ಯೆ ಪತಿಯ ಹುಟ್ಟುಹಬ್ಬಕ್ಕಾಗಿ ಮಾಲ್ಡೀವ್ಸ್‌ಗೆ ಈ ಜೋಡಿ ಹಾರಿದೆ. (ಜೂ.12)ರಂದು ಡಾರ್ಲಿಂಗ್ ಕೃಷ್ಣನ ಹುಟ್ಟುಹಬ್ಬವಿತ್ತು. ಪತಿಯ ಬರ್ತಡೇಯನ್ನು ವಿಶೇಷವಾಗಿ ಆಚರಿಸುವುದಕ್ಕೆ ನಟಿ ಮಿಲನಾ ಮಾಲ್ಡೀವ್ಸ್‌ಗೆ ಪ್ಲ್ಯಾನ್ ಮಾಡಿದ್ದರು.

     

    View this post on Instagram

     

    A post shared by Darling Krishna (@darling_krishnaa)

    ಕಳೆದ ಎರಡ್ಮೂರು ದಿನಗಳಿಂದ ಮಾಲ್ಡೀವ್ಸ್‌ನಲ್ಲಿ `ಲವ್ ಮಾಕ್ಟೈಲ್’ ಜೋಡಿ ಬೀಡು ಬಿಟ್ಟಿದ್ದಾರೆ. ಕಡಲ ತೀರದಲ್ಲಿ ನಟ ಕೃಷ್ಣನ ಬರ್ತಡೇಯನ್ನ ವಿಶೇಷವಾಗಿ ನಟಿ ಮಿಲನಾ ಸೆಲೆಬ್ರೇಟ್ ಮಾಡಿದ್ದಾರೆ. ಸದ್ಯ ಮಾಲ್ಡೀವ್ಸ್‌ನಲ್ಲಿರುವ ಇವರಿಬ್ಬರ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಪೊಲೀಸ್ ಠಾಣೆ ಮುಂದೆ ಗಳಗಳನೆ ಅತ್ತ ರಾಖಿ ಸಾವಂತ್, ಹೊಸ ಬಾಯ್ ಫ್ರೆಂಡ್ ಹೈರಾಣ

     

    View this post on Instagram

     

    A post shared by Milana Nagaraj (@milananagaraj)

    `ನಮ್ ದುನಿಯಾ ನಮ್ ಸ್ಟೈಲ್‌ʼ, `ಚಾರ್ಲಿ’, `ಲವ್ ಮಾಕ್ಟೈಲ್’, `ಲವ್ ಮಾಕ್ಟೈಲ್‌ 2′ ಚಿತ್ರದ ನಂತರ `ಲವ್ ಬರ್ಡ್ಸ್’ ಚಿತ್ರದ ಮೂಲಕ ಮತ್ತೆ ಐದನೇ ಬಾರಿಗೆ ತೆರೆಯ ಮೇಲೆ ಕೃಷ್ಣ ಮತ್ತು ಮಿಲನಾ ಜೋಡಿ ಒಂದಾಗುತ್ತಿದೆ. ಒಟ್ನಲ್ಲಿ ನೆಚ್ಚಿನ ಜೋಡಿಯ ಖುಷಿ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

  • ತೆರೆಯ ಮೇಲೂ ಒಂದಾದ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ

    ತೆರೆಯ ಮೇಲೂ ಒಂದಾದ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ

    ವ್ ಮಾಕ್ಟೈಲ್ ಚಿತ್ರದಲ್ಲಿ ಜೋಡಿಯಾಗಿ ಸಿನಿರಂಗವನ್ನು ರಂಜಿಸಿದ್ದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್, ಈ ಸಿನಿಮಾದಲ್ಲಿ ಮಾತ್ರವಲ್ಲ ವೈಯಕ್ತಿಕ ಜೀವನದಲ್ಲೂ ಅವರು ಜೊತೆಯಾದರು. ಸತಿ ಪತಿಯಾಗಿ ಒಂದೊಳ್ಳೆ ಜೀವನ ಸಾಗಿಸುತ್ತಿದ್ದಾರೆ. ಸಿನಿಮಾದಲ್ಲಿ ಪ್ರೇಮಿಯಾಗಿ ಪಾತ್ರ ಮಾಡಿದ್ದವರು, ನಿಜ ಜೀವನದಲ್ಲೂ ಅದನ್ನು ಮುಂದುವರೆಸಿಕೊಂಡು ಹೋಗಿ, ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ಸ್ ನಿಂದ ಮತ್ತೆರಡು ಪ್ಯಾನ್ ಇಂಡಿಯಾ ಸಿನಿಮಾ

    ಲವ್ ಮಾಕ್ಟೈಲ್ ಇಬ್ಬರ ವೃತ್ತಿ ಜೀವನಕ್ಕೆ ದೊಡ್ಡ ಬ್ರೇಕ್ ನೀಡಿತು. ಆನಂತರ ಅವರು ಲವ್ ಮಾಕ್ಟೈಲ್ 2 ನಲ್ಲೂ ಜೊತೆಯಾಗಿಯೇ ನಟಿಸಿದರು. ಬಾಕ್ಸ್ ಆಫೀಸಿನಲ್ಲಿ ಅದು ಅಷ್ಟೇನೂ ಸದ್ದು ಮಾಡದೇ ಇದ್ದರೂ, ಜೋಡಿಯು ನೋಡುಗರಿಗೆ ಇಷ್ಟವಾಯಿತು. ಈಗ ಅದನ್ನೇ ಮುಂದುವರೆಸುವ ನಿಟ್ಟಿನಲ್ಲಿ ನಿರ್ದೇಶಕ ಪಿ.ಸಿ.ಶೇಖರ್ ಮತ್ತೊಂದು ಹೊಸ ಸಿನಿಮಾವನ್ನು ಇದೇ ಜೋಡಿಯಾಗಿ ನಿರ್ದೇಶನ ಮಾಡುತ್ತಿದ್ದಾರೆ. ಅದಕ್ಕೆ ಬ್ಯುಟಿಫುಲ್ ಆಗಿರುವ ಶೀರ್ಷಿಕೆಯನ್ನೂ ಇಟ್ಟಿದ್ದಾರೆ. ಇದನ್ನೂ ಓದಿ : ‘ಕಾಳಿ’ ಟೈಟಲ್ ಧ್ರುವ ಸರ್ಜಾಗಾ? ಅಥವಾ ಅಭಿಷೇಕ್ ಅಂಬರೀಶ್ ಗಾ?

    ಪಿ.ಸಿ. ಶೇಖರ್ ಸಿನಿಮಾ ರಂಗದಲ್ಲಿ ಕೊಂಚ ಗ್ಯಾಪ್ ತಗೆದುಕೊಂಡು ಸಿನಿಮಾವೊಂದನ್ನು ನಿರ್ದೇಶನ ಮಾಡುತ್ತಿದ್ದು, ಈ ಚಿತ್ರಕ್ಕೆ ಲವ್ ಬರ್ಡ್ಸ್ ಎಂದು ಹೆಸರಿಟ್ಟಿದ್ದಾರೆ. ರಿಯಲ್ ಲೈಫ್‍ನ ಲವ್ ಬರ್ಡ್ಸ್ ಅನ್ನೇ ನಾಯಕ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಕಥೆಗೂ ಮತ್ತು ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರ ಜೋಡಿಗೂ ಒಂದಾಣಿಕೆ ಆಗುತ್ತಿದ್ದರಿಂದ, ಇದೇ ಜೋಡಿಯನ್ನು ಆಯ್ಕೆ ಮಾಡಿಕೊಂಡು, ಸಿನಿಮಾ ಮಾಡುತ್ತಿದ್ದಾರೆ. ಇದನ್ನೂ ಓದಿ: ಬ್ರ್ಯಾಂಡ್ ಬೆಂಗಳೂರು ಹೆಸರು ಉಳಿಸಿ – ಪ್ರಧಾನಿಗೆ ನಟ ಅನಿರುದ್ಧ್ ಪತ್ರ

    ಲವ್ ಬರ್ಡ್ಸ್ ಚಿತ್ರಕ್ಕೆ ಮಿಲನಾ ನಾಗರಾಜ್ ನಾಯಕಿಯಾದರೆ, ಡಾರ್ಲಿಂಗ್ ಕೃಷ್ಣ ನಾಯಕ. ಮದುವೆಯಾದ ಜೋಡಿಯ ನಂತರದ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗುತ್ತಿದೆಯಂತೆ. ದಾಂಪತ್ಯ ಜೀವನದ ಹಲವು ಸಂಗತಿಗಳನ್ನು ಈ ಸಿನಿಮಾದ ಮೂಲಕ ಹೇಳಲು ಹೊರಟಿದ್ದಾರಂತೆ ನಿರ್ದೇಶಕರು.

  • ಸೀರೆ ಹಂಚಿಕೆವಾಗ ನುಕುನುಗ್ಗಲು: ಮಗುವನ್ನು ಎತ್ತಿಕೊಂಡು ಕಾಪಾಡಿ ಎಂದು ಕಿರುಚಾಡಿದ ಮಹಿಳೆ

    ಸೀರೆ ಹಂಚಿಕೆವಾಗ ನುಕುನುಗ್ಗಲು: ಮಗುವನ್ನು ಎತ್ತಿಕೊಂಡು ಕಾಪಾಡಿ ಎಂದು ಕಿರುಚಾಡಿದ ಮಹಿಳೆ

    ಹಾಸನ: ಭಾನುವಾರ ವಿಶ್ವ ತಾಯಂದಿರ ದಿನಾಚರಣೆ ನಡೆಯಿತು. ಈ ದಿನವನ್ನು ಹಾಸನದ ಅರಕಲಗೂಡಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಿನಿಮಾ ನಟ-ನಟಿಯರು ಭಾಗವಹಿಸಿದ್ರು. ಆದ್ರೆ ಕಾರ್ಯಕ್ರಮದಲ್ಲಿ ಆದ ಸಣ್ಣ ಎಡವಟ್ಟಿನಿಂದ ತಾಯಿ, ಮಗು ಕಣ್ಣೀರಿಡುವಂತಾಗಿದ್ದು, ಆತಂಕಕ್ಕೆ ಕಾರಣವಾಗಿತ್ತು.

    ಸುತ್ತಲೂ ಸಾವಿರಾರು ಜನ. ಸಾವಿರಾರು ಜನರ ನೂಕುನುಗ್ಗಲಲ್ಲಿ ನಿಂತ ತಾಯಿಯೊಬ್ಬಳು ತನ್ನ ಮಗುವನ್ನು ಕೈಯಲ್ಲಿ ಎತ್ತಿಹಿಡಿದು ಕೂಗಿಕೊಳ್ಳುತ್ತಿರುವ ದೃಶ್ಯ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ. ಅರಕಲಗೂಡು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾದ ಶ್ರೀಧರ್‌ಗೌಡ ಭಾನುವಾರ ವಿಶ್ವ ತಾಯಂದಿರ ದಿನ ಕಾರ್ಯಕ್ರಮ ಆಯೋಜನೆ ಮಾಡಿದ್ರು.

    ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಮಾಜಿ ಸಚಿವೆ ಉಮಾಶ್ರೀ, ಚಲನಚಿತ್ರ ನಟಿಯರಾದ ಸಾನ್ವಿ ಶ್ರೀವಾತ್ಸವ್, ಮಿಲನನಾಗರಾಜ್, ಸಾಧುಕೋಕಿಲ ಸೇರಿದಂತೆ ಹಲವರು ಭಾಗವಹಿಸಿದ್ರು. ಈ ಕಾರಣದಿಂದ ಸಹಜವಾಗಿ ಕಾರ್ಯಕ್ರಮದಲ್ಲಿ ಸಾವಿರಾರು ಜನ ತಾಯಂದಿರು ಭಾಗವಹಿಸಿದ್ರು. ಅವರಿಗೆ ಸೀರೆ ಹಂಚಿಕೆ ಮಾಡಲು ಮುಂದಾದಾಗ ಜನಸಂದಣಿಯಲ್ಲಿ ಸಿಲುಕಿಕೊಂಡ ತಾಯಿ-ಮಗು ನರಳಾಡಿದರು. ಇದನ್ನೂ ಓದಿ:  ಕಾಂಗ್ರೆಸ್ ಕಾವೇರಿ, ಮೇಕೆದಾಟು ವಿಚಾರ ತಂದು ತಮಿಳುನಾಡು, ಕರ್ನಾಟಕ ನಡುವೆ ಬಿರುಕು ಮೂಡಿಸಿದೆ: ಅಣ್ಣಾಮಲೈ 

    ಸೀರೆ ಹಂಚಲು ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿಲ್ಲದಿರುವುದೇ ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದೆ. ಸೀರೆ ಹಂಚಿಕೆ ವಿಷ್ಯ ತಿಳಿದು ಒಮ್ಮೆಲೆ ಸಾವಿರಾರು ಮಹಿಳೆಯರು ಮುಗಿಬಿದ್ದ ಪರಿಣಾಮ, ಮಧ್ಯದಲ್ಲಿ ಸಿಲುಕಿದ ತಾಯಿ ಹಾಗೂ ಅಲ್ಲೇ ಇದ್ದ ಮಗು ಹೊರಬರಲಾರದೆ ಕಂಗಾಲಾಗಿ ಹೋದ್ರು. ಮಗುವನ್ನು ಹಿಡಿದಿದ್ದವರು ಕೈಮೇಲೆತ್ತಿ ಮಗು ರಕ್ಷಣೆಗೆ ಮುಂದಾದ್ರು. ಈ ಸನ್ನಿವೇಶ ಒಂದು ಕ್ಷಣ ಭಯದ ವಾತಾವರಣವನ್ನೇ ಮೂಡಿಸಿತ್ತು.

    ಅಂತಿಮವಾಗಿ ಗುಂಪಿನಲ್ಲಿ ಸಿಲುಕಿದ್ದವರು ಸೇಫಾಗಿ ಹೊರ ಬಂದಿದ್ದಾರೆ. ಆದರೆ ಇಷ್ಟು ದೊಡ್ಡಮಟ್ಟದ ಕಾರ್ಯಕ್ರಮ ಆಯೋಜನೆ ಮಾಡಿದಾಗ ಆದಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕಾರ್ಯಕ್ರದಲ್ಲಿ ಇಂತಹ ಅವಾಂತರ ತಪ್ಪಿದ್ದಲ್ಲ ಅಂತಾನೆ ಹೇಳಬಹುದು. ಇದನ್ನೂ ಓದಿ: ಚಹಾ, ಸಿಗರೇಟ್ ತಂದುಕೊಡುವಂತಹ ರೌಡಿಗಳಿಂದ ನಾನೇನು ಕಲಿಯಬೇಕಿಲ್ಲ: ಯತ್ನಾಳ್