Tag: Milana Nagaraj

  • ನೀರೊಳಗೆ ಡ್ಯುಯೇಟ್ ಹಾಡಿದ ಪೃಥ್ವಿ ಹಾಗೂ ಮಿಲನಾ

    ನೀರೊಳಗೆ ಡ್ಯುಯೇಟ್ ಹಾಡಿದ ಪೃಥ್ವಿ ಹಾಗೂ ಮಿಲನಾ

    ಫಾರ್​ ರಿಜಿಸ್ಟ್ರೇಷನ್​ ಸ್ಯಾಂಡಲ್​ವುಡ್​ನಲ್ಲಿ ನಾನಾ ವಿಚಾರಗಳಿಂದ ಸದ್ದು ಮಾಡುತ್ತಿರುವ ಹೊಸ ಸಿನಿಮಾ. ಪೃಥ್ವಿ ಅಂಬಾರ್ ಹಾಗೂ ಮಿಲನ ನಾಗರಾಜ್‌ ನಟಿಸಿರುವ ಈ ಚಿತ್ರದ ಕದ್ದ ಕದ್ದ ಹಾಡನ್ನು ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ನಿನ್ನೆ ಬಿಡುಗಡೆ ಮಾಡಲಾಯಿತು. ನಿರ್ದೇಶಕ ಕಂ ನಟರಾಗಿರುವ ಡಾರ್ಲಿಂಗ್ ಕೃಷ್ಣ ಸಾಂಗ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಹಾಡು ಬಿಡುಗಡೆ ಬಳಿಕ ಮಾತನಾಡಿದ ಡಾರ್ಲಿಂಗ್ ಕೃಷ್ಣ, ಬ್ಯೂಟಿಫುಲ್ ಸಾಂಗ್. ನನಗೆ ತುಂಬಾ ಇಷ್ಟವಾಯಿತು. ಮೇಕಿಂಗ್ ವಿಚಾರ ಇರಬಹುದು. ಪೃಥ್ವಿ ಹಾಗೂ ಮಿಲನಾ ಇಬ್ಬರು ತುಂಬಾ ಚೆನ್ನಾಗಿ ಕಾಣಿಸುತ್ತಿದ್ದಾರೆ. ಸಾಂಗ್ ಔಟ್ ಫುಟ್ ಚೆನ್ನಾಗಿ ಬಂದಿದೆ. ಎಲ್ಲಾ ಸಿನಿಮಾಗಳಿಗಿಂತ ಈ ಚಿತ್ರದಲ್ಲಿ ಮಿಲನಾ ತುಂಬಾ ಮುದ್ದಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪೃಥ್ವಿ ವಂಡರ್ ಫುಲ್ ಆಕ್ಟರ್. ಇವರಿಬ್ಬರ ಕಾಂಬಿನೇಷನ್ ಕ್ಲಿಕ್ ಆಗುತ್ತದೆ ಎಂದರು.

    ನಿರ್ಮಾಪಕರಾದ ನವೀನ್ ರಾವ್  ಮಾತನಾಡಿ, ಈ ಹಾಡು ಮಾಡುವುದು ತುಂಬಾ ಚಾಲೆಂಜಿಂಗ್ ಆಗಿ ಇತ್ತು. ಇರ್ಮಾನ್ ಸರ್ ಅವರನ್ನು ಕನ್ವೆನ್ಸ್ ಮಾಡಿ ಎಲ್ಲೆಲ್ಲೋ ಹೋಗಿ ಬಂದ್ವಿ. ಆ ನಂತರ ಇಲ್ಲೇ ಶೂಟಿಂಗ್ ಮಾಡುವ ಅವಕಾಶ ಸಿಕ್ಕಿತ್ತು. ಇದನ್ನು ಡಿಫರೆಂಟಾಗಿ ಮಾಡಬೇಕು ಎಂದು ಕೇಳಿಕೊಂಡಾಗ ಪ್ಲಾನ್ ಮಾಡಿ ಮಾಡಲಾಯಿತು. ಇಡೀ ಹಾಡಲ್ಲಿ ಪೃಥ್ವಿ ಹಾಗೂ ಮಿಲನಾ ಅಷ್ಟೇ ಕಾಣಬಹುದು. ಆದರೆ ತೆರೆ ಹಿಂದೆ 160 ಜನರ ಪರಿಶ್ರಮವಿದೆ. ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದರು. ನಿರ್ದೇಶಕ ನವೀನ್ ದ್ವಾರಕನಾಥ್ ಮಾತನಾಡಿ, ಕಾಲೇಜ್ ಸಮಯದಲ್ಲಿ ಹಾಡು ಬರೆಯಲು ಯೋಚನೆ ಮಾಡುತ್ತಿದ್ದೇವು. ಆಗ ಸಮಯದಲ್ಲಿ ಬರೆದ ಹಾಡು ಇದು. ಈಗ ಅದನ್ನು ಬಳಸಿಕೊಂಡಿದ್ದೇವೆ. ನಕುಲ್ ಹಾಡಿಗೆ ಬೇರೆ ಆಯಾಮ ಕೊಟ್ಟಿದ್ದಾರೆ. ಪರ್ಫಾಮೆನ್ಸ್ ವಿಚಾರಕ್ಕೆ ಬಂದರೆ. ಯಾವ ರೀತಿ ಮಾಡುವುದು ಆದಾಗ ಸುಮಾರು ಐಡಿಯಾ ಬಂತು. ಅಂಡರ್ ವಾಟರ್ ಪ್ಲಾನ್ ಮಾಡಿದ್ದು ಇರ್ಮಾನ್ ಸರ್. ಅವರಿಗೆ ಕ್ರೆಡಿಟ್ ಸಲ್ಲಬೇಕು. ಇದೊಂದು ಒಳ್ಳೆ ಅನುಭವ. ಹಾಗೂ ಸಾಹಸ. ಮಿಲನಾ ಮತ್ತು ಪೃಥ್ವಿ ಬೆಂಬಲದಿಂದ ಹಾಡು ಚೆನ್ನಾಗಿ ಬಂದಿದೆ ಎಂದು ತಿಳಿಸಿದರು.

    ನಟಿ ಮಿಲನಾ ನಾಗರಾಜ್ ಮಾತನಾಡಿ, ನೆಲ ಹಾಗೂ ಸ್ನೊ ಮೇಲೆ ಸಾಂಗ್ ಮಾಡಿದ್ದೇವೆ. ಫೂಲ್ ಒಳಗಡೆ ಸಾಂಗ್ ಎಂದಾಗ ಡಿಫರೆಂಟ್ ಇರುತ್ತದೆ ಅನ್ನೋ ಎಕ್ಸೈಟ್ ಆಯ್ತು. ಆದರೆ ಸಿಕ್ಕ ಪಟ್ಟೆ ಕಷ್ಟವಾಯಿತು. ಕಾಸ್ಟ್ಯೂಮ್ ಹೇವಿ ಅನಿಸುತಿತ್ತು. ನನ್ನ ಇಷ್ಟು ವರ್ಷದ ಕರಿಯರ್ ನಲ್ಲಿ ಶೂಟಿಂಗ್ ಅಂತಾ ಕಷ್ಟಪಟ್ಟ ದಿನ ಅದು. ಅವತ್ತು ಔಟ್ ಫುಟ್ ಬಗ್ಗೆ ಚಿಂತೆ ಹೋಗಿತ್ತು. ಇವತ್ತು ಔಟ್ ಫುಟ್ ನೋಡ್ತಿದ್ದ ವರ್ತ್ ಅನಿಸುತ್ತದೆ. ಆರ್ಟಿಸ್ಟ್ ಎಲ್ಲಾ ಸಾಂಗ್ ಮಾಡುತ್ತಿದ್ದೇವು. ಎಲ್ಲಾ ಸೇಮ್ ಸಾಂಗ್ಸ್ ಮಾಡುತ್ತಿದ್ದೇವು. ಆದರೆ ಇದು ವಿಭಿನ್ನ ಎಂದರು.

    ನಟ ಪೃಥ್ವಿ ಅಂಬಾರ್ ಮಾತನಾಡಿ, ಸಾಂಗ್ ತುಂಬಾ ಚೆನ್ನಾಗಿ ಮಾಡಿದ್ದಾರೆ. ನಿರ್ಮಾಪಕರು ಫ್ಯಾಷನೇಟೆಡ್ ಪ್ರೊಡ್ಯೂಸರ್. ಸದಾ ಅಭಿರುಚಿ ಸಿನಿಮಾ ಮಾಡಬೇಕು ಅನ್ನೋದು ನನ್ನ ಆಸೆ. ನವೀನ್ ಸರ್ ಐಟಿ ಬ್ಯಾಕ್ ಡ್ರಾಪ್ ನಿಂದ ಬಂದಿರೋದ್ರಿಂದ ಅವರ ಜೊತೆ ಕೆಲಸ ಮಾಡುವ ಟೈಫ್ ಬೇರೆ ಇದೆ. ಪೂರ್ತಿ ಸಿನಿಮಾ ಎಂಜಾಯ್ ಮಾಡಿಕೊಂಡು ಶೂಟ್ ಮಾಡಿದ್ದೇವೆ. ಕದ್ದು ಕದ್ದು ಹಾಡು ಎಲ್ಲರಿಗೂ ಹಾಡು ಇಷ್ಟವಾಗುತ್ತದೆ ಎಂದರು. ಕದ್ದು ಕದ್ದು ಹಾಡಿಗೆ ನಾಗಾರ್ಜುನ್ ಶರ್ಮಾ ಸಾಹಿತ್ಯ, ಆರ್ ಕೆ ಹರೀಶ್ ಸಂಗೀತ, ನಕುಲ್ ಅಭಯಂಕರ್ ಕಂಠ ಕುಣಿಸಿದ್ದಾರೆ. ಅಂಡರ್ ವಾಟರ್ ನಲ್ಲಿ ಹಾಡು ಮೂಡಿಬಂದಿದ್ದು, ಇರ್ಮಾನ್ ಸರ್ದಾರಿಯಾ ನೃತ್ಯ ಸಂಯೋಜನೆಯಲ್ಲಿ ಪೃಥ್ವಿ ಹಾಗೂ‌ ಮಿಲನಾ ಹೆಜ್ಜೆ ಹಾಕಿದ್ದಾರೆ.

     

    ರವಿಶಂಕರ್‌, ತಬಲಾ ನಾಣಿ, ಸುಧಾ ಬೆಳವಾಡಿ, ಬಾಬು ಹಿರಣಯ್ಯ, ಸ್ವಾತಿ, ರಮೇಶ್‌ ಭಟ್‌, ಉಮೇಶ್‌ ಎಂಬ ದೊಡ್ಡ ತಾರಾ ಬಳಗವೇ ಇದೆ. ಚಿತ್ರದ ಚಿತ್ರಕಥೆ, ನಿರ್ದೇಶನ ದ್ವಾರಕನಾಥ್‌, ಸಂಗೀತ ಸಂಯೋಜನೆ ಆರ್‌.ಕೆ ಹರೀಶ್‌, ಅಭಿಲಾಷ್‌ ಕಲಾತಿ, ಅಭಿಷೇಕ್‌ ಜಿ.ಕಾಸರಗೋಡು ಛಾಯಾಗ್ರಹಣ, ಮನು ಶೇಡ್ಗರ್‌ ಸಂಕಲನ ಚಿತ್ರಕ್ಕಿದೆ. ರಂಗಭೂಮಿ ಹಿನ್ನೆಲೆ ಹಾಗೂ ಸಾಕಷ್ಟು ಕಿರುಚಿತ್ರಗಳನ್ನು ಮಾಡಿ ಅನುಭವ ಹೊಂದಿರುವ ನವೀನ್‌ ದ್ವಾರಕನಾಥ್‌ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದು, ನಿಶ್ಚಲ್‌ ಫಿಲಂಸ್‌ ಬ್ಯಾನರ್‌ನಲ್ಲಿ ನವೀನ್‌ ರಾವ್‌ ಬಂಡವಾಳ ಹೂಡಿದ್ದಾರೆ.

  • ಮೈಸೂರು ದಸರಾದಲ್ಲಿ ‘F0R REGN’ ಚಿತ್ರದ ಪೋಸ್ಟರ್ ರಿಲೀಸ್

    ಮೈಸೂರು ದಸರಾದಲ್ಲಿ ‘F0R REGN’ ಚಿತ್ರದ ಪೋಸ್ಟರ್ ರಿಲೀಸ್

    ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈಗ ದಸರಾ ಸಡಗರ. ಇದೇ ಸಂದರ್ಭದಲ್ಲಿ ಪೃಥ್ವಿ ಅಂಬರ್ (Prithvi Amber) ಹಾಗೂ ಮಿಲನ ನಾಗರಾಜ್ ನಾಯಕ – ನಾಯಕಿಯಾಗಿ ನಟಿಸಿರುವ  ‘F0R REGN’ (ಫಾರ್ ರಿಜಿಸ್ಟರೇಷನ್) ಚಿತ್ರದ  ‘ಲವ್ ಗಳ್  ಸುಮಧುರ ಹಾರ್ಟ್ ಗಳ್ ಗಿರಗಿರ’ ಎಂಬ ಟ್ರಾವೆಲ್ ವಿಡಿಯೋ ಸಾಂಗ್ ಹಾಗೂ ನೂತನ ಪೋಸ್ಟರ್ ಬಿಡುಗಡೆಯಾಯಿತು. ‘ಮಾಲ್ ಆಫ್ ಮೈಸೂರು’ ಮಲ್ಟಿಪ್ಲೆಕ್ಸ್ ನಲ್ಲಿ ಪ್ರವಾಸೋದ್ಯಮ ಇಲಾಖೆಯ ಜಾಯಿಂಟ್ ಕಮೀಷನರ್ ಕೆ.ಎಂ.ಸವಿತಾ ಅವರು ಹಾಡು ಹಾಗು ಪೋಸ್ಟರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು.

    ಚಿತ್ರದ ನಾಯಕಿ ಮಿಲನಾ ನಾಗರಾಜ್ (Milana Nagaraj), ನಿರ್ದೇಶಕ ನವೀನ್ ದ್ವಾರಕನಾಥ್ (Naveen Dwarkanath) ಹಾಗೂ ನಿರ್ಮಾಪಕ ನವೀನ್ ರಾವ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಾಲ್ ನಲ್ಲಿ ಮೊಳಗಿದ ಈ ಸುಮಧುರ ಗೀತೆಗೆ ಅಭಿಮಾನಿಗಳು ಫಿದಾ ಆದರು.  ಇದನ್ನೂ ಓದಿ:ನವೆಂಬರ್ ನಲ್ಲಿ ಅಜಯ್ ರಾವ್ ನಟನೆಯ ‘ಮನ್ ರೇ’ ಶೂಟಿಂಗ್

    ನಾಗಾರ್ಜುನ ಶರ್ಮ ಈ ಹಾಡನ್ನು ಬರೆದಿದ್ದು, ಆರ್ ಕೆ ಹರೀಶ್ ಸಂಗೀತ ನೀಡಿದ್ದಾರೆ. ಐರಾ ಉಡುಪಿ ಹಾಗೂ ದೀಪಕ್ ದೊಡ್ಡೇರ ಈ ಹಾಡನ್ನು ಹಾಡಿದ್ದಾರೆ. ಸದ್ಯದಲ್ಲೇ ನಮ್ಮ ಚಿತ್ರವನ್ನು ಪ್ರಾದೇಶಿಕ ಸೆನ್ಸಾರ್ ಮಂಡಳಿ ವೀಕ್ಷಿಸಲಿದೆ. ಚಿತ್ರದ ನಾಯಕ ಪೃಥ್ವಿ ಅಂಬರ್ ವಿದೇಶ ಪ್ರವಾಸದಲ್ಲಿದ್ದು, ನವೆಂಬರ್ ನಲ್ಲಿ ಬರಲಿದ್ದಾರೆ. ಅವರು ಬಂದ ಕೂಡಲೆ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.

    ನಿಶ್ಚಲ್ ಫಿಲಂಸ್ ಮೂಲಕ  ಎನ್ .ನವೀನ್ ರಾವ್ ನಿರ್ಮಿಸಿರುವ ಈ ಚಿತ್ರವನ್ನು  ನವೀನ್ ದ್ವಾರಕನಾಥ್ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಹರೀಶ್ ಸಂಗೀತ ನಿರ್ದೇಶನ,  ಅಭಿಷೇಕ್ ಕಲ್ಲತ್ತಿ- ಅಭಿಷೇಕ್ ಕಾಸರಗೋಡು  ಛಾಯಾಗ್ರಹಣ ಹಾಗೂ ಮನು ಶೆಡ್ಗಾರ್ ಅವರ ಸಂಕಲನವಿದೆ. ಪೃಥ್ವಿ ಅಂಬರ್, ಮಿಲನ‌ ನಾಗರಾಜ್, ರವಿಶಂಕರ್, ಬಾಬು ಹಿರಣ್ಣಯ್ಯ, ಸ್ವಾತಿ, ಸುಧಾ ಬೆಳವಾಡಿ, ತಬಲನಾಣಿ, ರಮೇಶ್ ಭಟ್, ಸಿಹಿಕಹಿ ಚಂದ್ರು ಮುಂತಾದವರು  ತಾರಾಬಳಗದಲ್ಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಮ – ಮುತ್ತು ಲಕ್ಷ್ಮಿಯ ಜೊತೆ ನಮ್ಮ ಮಾತುಕತೆ

    ರಾಮ – ಮುತ್ತು ಲಕ್ಷ್ಮಿಯ ಜೊತೆ ನಮ್ಮ ಮಾತುಕತೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 50 ಕಥೆ ರಿಜೆಕ್ಟ್ ಮಾಡಿ `ಕೌಸಲ್ಯ ಸುಪ್ರಜಾ ರಾಮ’ ಒಪ್ಪಿದ್ದೇಕೆ ಆದಿ-ನಿಧಿ?

    50 ಕಥೆ ರಿಜೆಕ್ಟ್ ಮಾಡಿ `ಕೌಸಲ್ಯ ಸುಪ್ರಜಾ ರಾಮ’ ಒಪ್ಪಿದ್ದೇಕೆ ಆದಿ-ನಿಧಿ?

    ನೀವೆಲ್ಲರೂ ಶಶಾಂಕ್ ನಿರ್ದೇಶಿಸಿರುವ `ಕೌಸಲ್ಯ ಸುಪ್ರಜಾ ರಾಮ’ (Kausalya Supraja Rama) ಸಿನಿಮಾ ಮಾಡೋದಕ್ಕೆ ಕಾತುರರಾಗಿರುತ್ತೀರಿ. ಆದಿ ಮತ್ತು ನಿಧಿ ಮತ್ತೆ ಒಂದಾಗಿರುವುದರಿಂದ ಬಿಗ್‍ಸ್ಕ್ರೀನ್‍ನ ಮೇಲೆ ಈ ಕ್ಯೂಟ್ ಕಪಲ್ಸ್ ನ ಕಣ್ತುಂಬಿಕೊಳ್ಳುವುದಕ್ಕೆ ಕುತೂಹಲಭರಿತರಾಗಿರುತ್ತೀರಿ. ಅಚ್ಚರಿ ಏನಪ್ಪ ಅಂದರೆ `ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಒಪ್ಪಿಕೊಳ್ಳುವುದಕ್ಕೂ ಮುನ್ನ ಆದಿ ಮತ್ತು ನಿಧಿ ಹತ್ತಲ್ಲ, ಇಪ್ಪತ್ತಲ್ಲ, ಭರ್ತಿ 50 ಪ್ರಾಜೆಕ್ಟ್‍ಗಳನ್ನ ರಿಜೆಕ್ಟ್ ಮಾಡಿದ್ದಾರಂತೆ. ಈ ಬಗ್ಗೆ ಸ್ವತಃ ನಿಧಿಮಾ ನಮ್ಮೊಟ್ಟಿಗೆ ಮಾತನಾಡಿದ್ದಾರೆ. ಒಂದಿಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ.

    ಆದಿ ಮತ್ತು ನಿಧಿ ಬೆಳ್ಳಿತೆರೆಯ ಬೊಂಬಾಟ್ ಜೋಡಿ. ಲವ್ ಮಾಕ್ಟೇಲ್ ಚಿತ್ರದ ಮೂಲಕ ಕಿಕ್ಕೇರಿಸಿದ ಈ ಕ್ಯೂಟ್ ಕಪಲ್ಸ್ ಗೆ ಸಿಕ್ಕಾಪಟ್ಟೆ ಬೇಡಿಕೆಯಿದೆ. ನೆಕ್ಸ್ಟ್ ಲೆವೆಲ್ ಫ್ಯಾನ್ ಬೇಸ್ ಜೊತೆಗೆ ಹೊಸದೊಂದು ಕ್ರೇಜ್ ಸೃಷ್ಟಿಸಿ, ಸೆನ್ಸೇಷನ್ ಸೃಷ್ಟಿಸಿರೋ ಈ ತಾರಾ ಜೋಡಿ ಹಿಂದೆ ಅಭಿಮಾನಿಗಳು ಮಾತ್ರವಲ್ಲ ನಿರ್ದೇಶಕರು ಮತ್ತು ನಿರ್ಮಾಪಕರು ಕ್ಯೂ ನಿಂತಿದ್ದಾರೆ. ಬಿಗ್‍ಸ್ಕ್ರೀನ್‍ಗೆ ಕಿಚ್ಚು ಹಚ್ಚಿ, ಬಾಕ್ಸ್ ಆಫೀಸ್‍ನಲ್ಲಿ ಬಂಗಾರದ ಬೆಳೆ ತೆಗೆಯೋ ಈ ಸ್ಟಾರ್ ಜೋಡಿನಾ ಹಾಕ್ಕೊಂಡು ಪಿಕ್ಚರ್ ಮಾಡಬೇಕು ಅಂತ ಹಪಹಪಿಸುತ್ತಿದ್ದಾರೆ. ಅಚ್ಚರಿ ಅಂದರೆ ಲವ್ ಮಾಕ್ಟೇಲ್ 1 ಹಾಗೂ 2 ಚಿತ್ರಗಳು ತೆರೆಗೆ ಬಂದ್ಮೇಲೆ ಸುಮಾರು 50 ಕಥೆಗಳು ಆದಿ-ನಿಧಿನಾ ಅರಸಿಕೊಂಡು ಬಂದಿವೆಯಂತೆ. ಆದರೆ, ಪುನಃ ಪುನಃ ತೆರೆಮೇಲೆ ಒಂದಾಗಲು ಬಯಸದ ಲವ್‌ ಬರ್ಡ್ಸ್, ಮೊಗ್ಗಿನ ಮನಸ್ಸು ಡೈರೆಕ್ಟರ್ ಕೆತ್ತಿದ ಕಥೆಗೆ ಮನಸೋತಿದ್ದಾರೆ. `ಕೌಸಲ್ಯ ಸುಪ್ರಜಾ ರಾಮ’ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

    ಅಂದ್ಹಾಗೇ, ಜನ ಆದಿ ಮತ್ತು ನಿಧಿನಾ ನೋಡಿ ಮೆಚ್ಚಿಕೊಂಡಿದ್ದಾರೆ. ಹಾಗಂತ, ಪದೇ ಪದೇ ಪೇರ್ ಆಗಿ ನಟಿಸೋದು ಸರಿಯಲ್ಲ ಎನ್ನುವ ಕಾರಣಕ್ಕೆ ಅರಸಿಕೊಂಡು ಬಂದಂತಹ ಸಿನಿಮಾಗಳನ್ನೆಲ್ಲಾ ತಿರಸ್ಕರಿಸಿದ್ದಂತೂ ನಿಜ. ಆದರೆ, `ಕೌಸಲ್ಯ ಸುಪ್ರಜಾ ರಾಮ’ ಚಿತ್ರವನ್ನ ರಿಜೆಕ್ಟ್ ಮಾಡುವುದಕ್ಕೆ ಮನಸ್ಸು ಒಪ್ಪಲಿಲ್ಲ. ನಿರ್ದೇಶಕ ಶಶಾಂಕ್ ಅವರು ಅದ್ಭುತವಾದ ಕಥೆನಾ ರಚಿಸಿದ್ದರಿಂದ ಮೊದಲು ಕೃಷ್ಣ ಅವರು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟರು. ಡಾರ್ಲಿಂಗ್‍ಗೆ ಪ್ರೇಮಂ ಪೂಜ್ಯಂ ಬ್ಯೂಟಿ ಬೃಂದಾ (Brinda Acharya) ಜೊತೆಯಾದ್ರೂ ಕೂಡ ಆ ರೋಲ್ ಪ್ಲೇ ಮಾಡುವುದಕ್ಕೆ ನಾನು ಒಪ್ಪಿಗೆ ಸೂಚಿಸಿದೆ. ಇದೊಂದು ಸೆನ್ಸಿಬಲ್ ಪಾತ್ರ ಆಗಿದ್ದರಿಂದ ಸಿನಿಮಾ ಒಪ್ಪಿಕೊಳ್ಳುವುದಕ್ಕೆ ಆರಂಭದಲ್ಲಿ ನಂಗೆ ಭಯ ಇತ್ತು. ಆದರೆ, ಶಶಾಂಕ್‍ರಂತಹ (Shashank) ದೊಡ್ಡ ನಿರ್ದೇಶಕರ ಸಿನಿಮಾ ಕೈಬಿಡುವುದಕ್ಕೆ ನಾನು ಸಿದ್ದಳಿರಲಿಲ್ಲ. ಹೀಗಾಗಿ, ಆ ಕ್ಯಾರೆಕ್ಟರ್ ನ ಚಾಲೆಂಜ್ ಆಗಿ ತೆಗೆದುಕೊಂಡು ನಟಿಸಿದ್ದೇನೆ ಅಂತಾರೇ ನಟಿ ಮಿಲನ ನಾಗರಾಜ್.

    ಅಷ್ಟಕ್ಕೂ, `ಕೌಸಲ್ಯ ಸುಪ್ರಜಾ ರಾಮ’ ಚಿತ್ರದಲ್ಲಿ ಮಿಲನ ಪಾತ್ರ ಏನು? ಈ ಕುತೂಹಲದ ಪ್ರಶ್ನೆಗೆ ನಿರ್ದೇಶಕರಾಗಲಿ, ಮಿಲನ ಆಗಲಿ ಉತ್ತರ ಕೊಡುತ್ತಿಲ್ಲ. ಕಾರಣ, ಮಿಲನ ಬಹುಮುಖ್ಯವಾದ ಪಾತ್ರ ನಿಭಾಯಿಸಿದ್ದಾರಂತೆ. ಇಲ್ಲಿವರೆಗೂ ಸಿಲ್ವರ್ ಸ್ಕ್ರೀನ್ ಮೇಲೆ ನಾವ್ಯಾರು ನೋಡಿರದ ಲುಕ್ ನಲ್ಲಿ ನಿರ್ದೇಶಕರು ನಿಧಿನಾ ತೋರಿಸಿದ್ದಾರಂತೆ. ಇಂಟ್ರೆಸ್ಟಿಂಗ್ ಮ್ಯಾಟರ್ ಏನಪ್ಪ ಅಂದರೆ ನಿಧಿ ಇಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿದ್ದಾರೆ. ಎಷ್ಟು ಬೋಲ್ಡ್ ಎಂಬುದಕ್ಕೆ ರಿಲೀಸ್ ಆಗಿರುವ ’90 ಹಾಕು ಕಿಟ್ಟಪ್ಪ’ ಹಾಡು ನೋಡಿದರೆ ಗೊತ್ತಾಗುತ್ತೆ. ಇದು ಜಸ್ಟ್ ಟೀಸರ್ ಅಷ್ಟೇ, ಪಿಕ್ಚರ್ ಅಭಿ ಬಾಕಿ ಹೈ ಅಂತ ಅಂದುಕೊಳ್ಳಬಹುದು. ಇನ್ನೊಂದು ವಿಶೇಷ ಅಂದರೆ ಆದಿ-ನಿಧಿ ಫ್ಯಾನ್ಸ್ ಗೆ ನಿರಾಸೆಯಾಗಲ್ಲ. ಯಾಕಂದ್ರೆ, ಕೃಷ್ಣ ಹಾಗೂ ಮಿಲನ ಕಾಂಬಿನೇಷನ್ ದೃಶ್ಯಗಳು ಈ ಚಿತ್ರದಲ್ಲಿವೆ. ಸಿನಿಮಾಪ್ರೇಮಿಗಳಿಗೆ ಕಿಕ್ ಕೊಡುವಂತಹ, ಅಭಿಮಾನಿಗಳು ಹುಚ್ಚೇಳುವಂತಹ ಸನ್ನಿವೇಶಗಳನ್ನ ಡೈರೆಕ್ಟರ್ ರಸವತ್ತಾಗಿ ಕಟ್ಟಿಕೊಟ್ಟಿದ್ದಾರೆ. ಅದೆಲ್ಲವನ್ನೂ ತೆರೆಮೇಲೆ ನೋಡುವುದಕ್ಕೆ  ಕೆಲವೇ ಕೆಲವು ದಿನಗಳು ಬಾಕಿಯಿವೆ.

    ಶಶಾಂಕ್ ನಿರ್ದೇಶನದ ಎಲ್ಲಾ ಸಿನಿಮಾಗಳಂತೆ ಇಲ್ಲಿಯೂ ಒಂದು ಕ್ಯೂಟ್ ಲವ್‍ಸ್ಟೋರಿನಾ ಕಾಣಬಹುದು. ಜೊತೆಗೆ ಫ್ಯಾಮಿಲಿ ವ್ಯಾಲ್ಯೂಸ್, ತಾಯಿ-ಮಗನ ಸೆಂಟಿಮೆಂಟ್ ಈ ಪಿಕ್ಚರ್‍ನಲ್ಲಿದೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣುಮಕ್ಕಳು ಯಾವ್ಯಾವ ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಾನು ಗಂಡಸು ಅನ್ನೋ ಅಹಂಕಾರನ ತಲೆಗೇರಿಸಿಕೊಂಡಿರೋ ಗಂಡಸರ ಮಧ್ಯೆ ಹೆಣ್ಣುಮಕ್ಕಳು ಎಷ್ಟೆಲ್ಲಾ ಸಂಕಷ್ಟಗಳನ್ನ ಸಹಿಸಿಕೊಂಡು ಬದುಕುತ್ತಿದ್ದಾರೆ. ಮೇಲ್ ಇಗೋದಿಂದ ಸ್ತ್ರೀಯರು ಎಷ್ಟು ಸಫರ್ ಆಗ್ತಿದ್ದಾರೆ, ಮೇಲ್ ಇಗೋ ಸಮಾಜವನ್ನ ಎಷ್ಟರ ಮಟ್ಟಿಗೆ ವ್ಯಾಪಿಸಿಕೊಂಡಿದೆ ಮತ್ತು ಎಷ್ಟೆಲ್ಲಾ ಪರಿಣಾಮ ಬೀರುತ್ತಿದೆ ಇದೆಲ್ಲವನ್ನೂ `ಕೌಸಲ್ಯ ಸುಪ್ರಜಾ ರಾಮ’ ಚಿತ್ರದ ಮೂಲಕ ಶಶಾಂಕ್ ಸೊಸೈಟಿಗೆ ತಿಳಿಸುವುದಕ್ಕೆ ಹೊರಟಿದ್ದಾರೆ. ಡಾಲಿಂಗ್ ಕೃಷ್ಣ (Darling Krishna), ಮಿಲನ ನಾಗರಾಜ್ (Milana Nagaraj), ಬೃಂದಾ ಆಚಾರ್ಯ, ರಂಗಾಯಣ ರಘು, ಸುಧಾ ಬೆಳವಾಡಿ, ಅಚ್ಯುತ್ ಕುಮಾರ್, ನಾಗಭೂಷಣ್ ಸೇರಿದಂತೆ ಹಲವರು ಪಾತ್ರವರ್ಗದಲ್ಲಿದ್ದಾರೆ. ಕೃಷ್ಣ-ಮಿಲನ ಜೋಡಿಯ ಆರನೇ ಕಾಂಬಿನೇಷನ್ ಚಿತ್ರ ಇದಾಗಿದ್ದು, ಲವ್‌ ಬರ್ಡ್ಸ್ ಚಿತ್ರದ ನಂತರ ಈ ಕ್ಯೂಟ್ ಪೇರ್ ಮತ್ತೆ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.

    ಇದೇ ಜುಲೈ 28ರಂದು ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಶಶಾಂಕ್ ಸಿನಿಮಾಸ್ ಮತ್ತು ಕೌರವ ಪ್ರೊಡಕ್ಷನ್ ಅಡಿಯಲ್ಲಿ `ಕೌಸಲ್ಯ ಸುಪ್ರಜಾ ರಾಮ’ ಚಿತ್ರ ರಿಚ್ ಆಗಿಯೇ ಮೂಡಿಬಂದಿದೆ. ಕುಟುಂಬ ಸಮೇತ ಥಿಯೇಟರ್‍ಗೆ ಬಂದು ನೋಡುವಂತಹ ಸಿನಿಮಾ ಇದಾಗಿದ್ದು, ಪ್ಯಾನ್ ಇಂಡಿಯಾ ರೀಚ್ ಆಗುವ ಟೆಕ್ನಿಕಲ್ ಕ್ವಾಲಿಟಿ ಪ್ಲಸ್ ಕ್ವಾಂಟಿಟಿಯನ್ನೊಳಗೊಂಡಿದೆ. ಸಿನಿಮಾಟೋಗ್ರಫಿ ಮೂಲಕ ಕಥೆನಾ ಜನರಿಗೆ ಕನ್ವೆ ಮಾಡುವಂತಹ ಪ್ರಯೋಗಕ್ಕೆ ಶಶಾಂಕ್ ಕೈಹಾಕಿದ್ದು, ಸುಜ್ಞಾನ್ ಕ್ಯಾಮೆರಾ ಕೈಚಳಕ ತೋರಿದ್ದಾರೆ. ಗಿರಿ ಮಹೇಶ್ ಸಂಕಲನ ಮಾಡಿದ್ದಾರೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದ್ದಾರೆ. ಶಶಾಂಕ್ ಸಿನಿಮಾಸ್ ಮತ್ತು ಕೌರವ ಪ್ರೊಡಕ್ಷನ್ ಅಡಿಯಲ್ಲಿ `ಕೌಸಲ್ಯ ಸುಪ್ರಜಾ ರಾಮ’ ಚಿತ್ರ ರಿಚ್ ಆಗಿಯೇ ಮೂಡಿಬಂದಿದೆ. ಇಂಟ್ರೆಸ್ಟಿಂಗ್ ಸಂಗತಿ ಅಂದರೆ `ಕೌಸಲ್ಯ ಸುಪ್ರಜಾ ರಾಮ’ ಚಿತ್ರ ಕೆನಡಾ ಹಾಗೂ ಯುಎಸ್‍ಎನಲ್ಲೂ ಬಿಡುಗಡೆಯಾಗ್ತಿದೆ. ಆರ್‌ ಆರ್ ಆರ್ ನಂತಹ ದೊಡ್ಡ ದೊಡ್ಡ ಸಿನಿಮಾಗಳನ್ನ ವಿತರಣೆ ಮಾಡಿದಂತಹ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ, `ಕೌಸಲ್ಯ ಸುಪ್ರಜಾ ರಾಮ’ ಚಿತ್ರದ ಡಿಸ್ಟ್ರಿಬ್ಯೂಷನ್ ಜವಾಬ್ದಾರಿ ಹೊತ್ತಿರುವುದು ವಿಶೇಷ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ’90 ಹಾಕು ಕಿಟ್ಟಪ್ಪ’ ಎಂದು ಹೇಳುತ್ತ ಬಂದ ಮಿಲನಾ ಡ್ಯಾನ್ಸ್‌ಗೆ ಫ್ಯಾನ್ಸ್‌ ಬೋಲ್ಡ್

    ’90 ಹಾಕು ಕಿಟ್ಟಪ್ಪ’ ಎಂದು ಹೇಳುತ್ತ ಬಂದ ಮಿಲನಾ ಡ್ಯಾನ್ಸ್‌ಗೆ ಫ್ಯಾನ್ಸ್‌ ಬೋಲ್ಡ್

    ಸ್ಯಾಂಡಲ್‌ವುಡ್‌ನಲ್ಲಿ ಹೊಸ ಹವಾ ಕ್ರಿಯೇಟ್ ಮಾಡಿರೋ ‘ಕೌಸಲ್ಯ ಸುಪ್ರಜಾ ರಾಮ’ (Kausalya Supraja Rama) ಸಿನಿಮಾ ಇದೇ ಜುಲೈ 28ಕ್ಕೆ ತೆರೆಗೆ ಬರೋದ್ದಕ್ಕೆ ಸಜ್ಜಾಗಿದೆ. ಇದರ ನಡುವೆ ’90 ಹಾಕು ಕಿಟ್ಟಪ್ಪ’ ಸಾಂಗ್ ಭಾರೀ ವೈರಲ್ ಆಗುತ್ತಿದೆ. ಮಿಲನಾ ಎಣ್ಣೆ ಏಟಿನ ಹಾಡಿಗೆ ಬಿಗ್ ರೆಸ್ಪಾನ್ಸ್ ಸಿಕ್ತಿದೆ. ಈ ಹಾಡಿನ ಬಗ್ಗೆ ನಟಿ ಮಿಲನಾ ಕೂಡ ಮಾತನಾಡಿದ್ದಾರೆ.

    ಡಾರ್ಲಿಂಗ್ ಕೃಷ್ಣ(Darling Krishna), ಮಿಲನಾ, ಬೃಂದಾ ಕಾಂಬೋಗೆ ಸ್ಟಾರ್ ಡೈರೆಕ್ಟರ್ ಶಶಾಂಕ್ (Director Shashank) ಅವರು ನಿರ್ದೇಶನ ಮಾಡಿದ್ದಾರೆ. 90 ಹಾಕು ಕಿಟ್ಟಪ್ಪ ಹಾಡಿನ ಜರ್ನಿ ಬಗ್ಗೆ ಮಿಲನಾ ತೆರೆ ಹಿಂದಿನ ಶ್ರಮದ ಬಗ್ಗೆ ಬಿಚ್ಚಿಟ್ಟಿದ್ದಾರೆ. ನಾನು ರಿಯಲ್ ಲೈಫ್‌ನಲ್ಲಿ ಕುಡಿಯೋದಿಲ್ಲ. ಈ ಸಾಂಗ್ ಮಾಡುವಾಗ ಕುಡಿದಿರೋ ರೀತಿ ಆಕ್ಟ್ ಮಾಡಬೇಕಾಗಿತ್ತು. ಎಷ್ಟೋ ಜನ ಹೇಳ್ತಿದ್ದಾರೆ. ಸಾಂಗ್‌ಗೂ ಡ್ಯಾನ್ಸ್ ಕನೆಕ್ಟ್ ಆಗುತ್ತಿಲ್ಲ ಅಂತಾ ಹೇಳ್ತಿದ್ದಾರೆ. ಕುಡಿದವರು ಹಾಗೇ ಡ್ಯಾನ್ಸ್ ಮಾಡುತ್ತಾರೆ ಅನಿಸುತ್ತೆ.

    ಇಂತಹ ಒಂದು ಪಾತ್ರ ಮಾಡಬೇಕಾದರೆ ಮೆಂಟಲಿ ಫಿಸಿಕಲಿ ರೆಡಿಯಾಗಿರಬೇಕಾಗುತ್ತದೆ. ಕುಡಿದರೆ ಹೇಗೆ ವರ್ತಿಸುತ್ತಾರೆ ಎಂಬುದನ್ನ ನಾನು ಫೀಲ್ ಮಾಡಿಲ್ಲ. ಇದನೆಲ್ಲ ಊಹೆ ಮಾಡಿಕೊಂಡು ಸಾಂಗ್ ಮಾಡಿರೋದು. ಯೆಸ್.. ಸಾಂಗ್ ಶೂಟ್ ಕಷ್ಟವಾಗಿತ್ತು. ಲಿಪ್ ಸಿಂಕ್ ಮಾಡುತ್ತಾ ಆಕ್ಟ್ ಮಾಡಬೇಕು. ಪಾತ್ರಕ್ಕೆ ಬೇಕಾಗಿರೋದ್ರಿಂದ ಈ ತರಹ ಸಾಂಗ್ ಮಾಡಿದೆ.

    90 ಹಾಕು ಕಿಟ್ಟಪ್ಪ ಸಾಂಗ್ ಕೆಲವರು ನೆಗೆಟಿವ್ ಕಾಮೆಂಟ್ ಮಾಡಿರುವ ಬಗ್ಗೆ ನಟಿ ರಿಯಾಕ್ಟ್ ಮಾಡಿದ್ದಾರೆ. ‘ಲವ್ ಮಾಕ್ಟೈಲ್ 1’ & ‘ಲವ್ ಮಾಕ್ಟೈಲ್ 2’ ಎರಡರಲ್ಲೂ ನಿಧಿಮಾ(Nidhima)  ಆಗಿ ಕಾಣಿಸಿಕೊಂಡಿದ್ದೀನಿ. ಪಾತ್ರ ಅಂತಾ ಬಂದಾಗ ಬೇರೆ ಬೇರೆ ಪಾತ್ರಗಳನ್ನ ಆಯ್ಕೆ ಮಾಡಬೇಕಾಗುತ್ತದೆ. ಇದೊಂದೇ ಪಾತ್ರ ಅಂತಾ ನಾವು ಕೂರೋಕೆ ಆಗಲ್ಲ. ನಿಧಿಮಾ ಪಾತ್ರ ನನ್ನ ಕೆರಿಯರ್‌ನಲ್ಲಿ ಬಹುದೊಡ್ಡ ಬ್ರೇಕ್ ಕೊಟ್ಟಿದೆ. ಸಿನಿಮಾದಲ್ಲಿ ಮುತ್ತುಲಕ್ಷ್ಮಿ ಪಾತ್ರ ಪ್ಲೇ ಮಾಡಿದ್ದೀನಿ. ಆದರೆ ತುಂಬಾ ಸೆನ್‌ಸಿಟಿವ್ ಆಗಿ ಒಳ್ಳೆಯ ರೀತಿಯ ಸಂದೇಶ ಇಟ್ಟುಕೊಂಡೆ ಸಿನಿಮಾದಲ್ಲಿ ತೋರಿಸಲಾಗಿದೆ ಎಂದು ಮಿಲನಾ (Milana) ಮಾತಾಡಿದ್ದಾರೆ. ಇದನ್ನೂ ಓದಿ:ರಾಜಮೌಳಿ ಡೈರೆಕ್ಷನ್, ರಾಮ್ ಚರಣ್ ಜೊತೆ ಆಕ್ಟಿಂಗ್- ಪ್ರಭಾಸ್ ಕೊಟ್ರು ಗುಡ್ ನ್ಯೂಸ್

    ನಿಧಿಮಾ ಪಾತ್ರವನ್ನ ಜನ ಎಷ್ಟು ಹಚ್ಚಿಕೊಂಡಿದ್ದಾರೆ ಅನ್ನೋದು ನನಗೆ ಗೊತ್ತು. ಅದಕ್ಕೆ ಶಶಾಂಕ್ ಅವರು ಕಥೆ ಹೇಳಿದಾಗ ಸಿನಿಮಾ ಮಾಡೋದಾ ಬೇಡ್ವಾ ಅಂತಾ ತುಂಬಾ ಯೋಚನೆ ಮಾಡಿದೆ ಎಂದು ನಟಿ ಹೇಳಿದ್ದಾರೆ. ಈ ಪಾತ್ರ ವೆರೈಟಿ ಆಗಿದೆ. ಕಥೆ ಹಣೆದಿರುವ ರೀತಿ ಡಿಫರೆಂಟ್‌ ಆಗಿದೆ. ಮನೆಮಂದಿ ಕುಳಿತು ನೋಡುವ ಸಿನಿಮಾ ಇದಾಗಿದೆ. ಇದೇ ಜುಲೈ 28ಕ್ಕೆ ‘ಕೌಸಲ್ಯ ಸುಪ್ರಜಾ ರಾಮ’ ತೆರೆಗೆ ಬರಲಿದೆ ಸಿನಿಮಾ ನೋಡಿ ಅಂತಾ ಮಿಲನಾ ಮನವಿ ಮಾಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 200-300 ಕೋಟಿ ಅಲ್ಲ ಕಥೆ ಮುಖ್ಯ ಎಂದ ಡಾರ್ಲಿಂಗ್: ‘ಕೌಸಲ್ಯ ಸುಪ್ರಜಾ ರಾಮ’ ದಿ ಬೆಸ್ಟ್ ಕಥೆ, ಕೃಷ್ಣ ದಿಲ್ ಖುಷ್

    200-300 ಕೋಟಿ ಅಲ್ಲ ಕಥೆ ಮುಖ್ಯ ಎಂದ ಡಾರ್ಲಿಂಗ್: ‘ಕೌಸಲ್ಯ ಸುಪ್ರಜಾ ರಾಮ’ ದಿ ಬೆಸ್ಟ್ ಕಥೆ, ಕೃಷ್ಣ ದಿಲ್ ಖುಷ್

    ನ್ನಡ ಚಿತ್ರರಂಗದ ಡಾರ್ಲಿಂಗ್ (Darling Krishna),  ಇಂಡಸ್ಟ್ರಿಗೆ ಬಂದು ಹದಿಮೂರು ವರ್ಷಗಳು ಕಳೀತಾ ಬಂತು.  ಈ ಹದಿಮೂರು ವರ್ಷದಲ್ಲಿ  20 ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾದಿಂದ ಸಿನಿಮಾಗೆ ಹೊಸ ಬಗೆಯ ಪ್ರಯೋಗ ಮಾಡುತ್ತಾ ಬೆಳ್ಳಿತೆರೆಯನ್ನಾವರಿಸಿಕೊಂಡಿದ್ದಾರೆ. ಸೋಲು, ಗೆಲುವನ್ನ ಸಮನಾಗಿ ಕಾಣುತ್ತಾ ಮುನ್ನಡೆಯುತ್ತಿರುವ ಡಾರ್ಲಿಂಗ್, ಲವ್ ಮಾಕ್ಟೇಲ್ ಚಿತ್ರದಿಂದ ಸ್ಟಾರ್ ಪಟ್ಟಕ್ಕೇರಿದರು. ನಟನಾಗಿ, ನಿರ್ದೇಶಕನಾಗಿ ದಿಗ್ವಿಜಯ ಸಾಧಿಸಿದರು. ಮದರಂಗಿ ಕೃಷ್ಣನಾಗಿದ್ದ ಡಾರ್ಲಿಂಗ್, ಲವ್ ಮಾಕ್ಟೇಲ್ ಆದಿಯಾಗಿ ಪ್ರಮೋಷನ್ ಪಡೆದರು. ಈಗ ಕೌಸಲ್ಯ ಸುಪ್ರಜಾ ರಾಮನಾಗಿ(Kausalya Supraja Rama)  ಕಮಾಲ್ ಮಾಡಲು ರೆಡಿಯಾಗಿದ್ದಾರೆ. ಇದು ನನ್ನ ಸಿನಿಮಾ ಕರಿಯರ್ ನ ದಿ ಬೆಸ್ಟ್ ಕಥೆಯುಳ್ಳ ಚಿತ್ರವೆಂದು ಹೇಳುವ ಮೂಲಕ ಕುತೂಹಲ ಕೆರಳಿಸಿದ್ದಾರೆ.

    `ಕೌಸಲ್ಯ ಸುಪ್ರಜಾ ರಾಮ’ ಶೀರ್ಷಿಕೆಯಿಂದಲೇ ಕಲಾಭಿಮಾನಿಗಳ ಕಿವಿಯನ್ನರಳಿಸಿದ್ದ ಸಿನಿಮಾ. ಶಶಾಂಕ್ (Shashank) ನಿರ್ದೇಶನದ ಚಿತ್ರ ಎನ್ನುವ ಕಾರಣಕ್ಕೆ ಕುತೂಹಲ ಮೂಡಿತ್ತು. ಡಾರ್ಲಿಂಗ್ ಎಂಟ್ರಿಕೊಟ್ಮೇಲೆ ಆ ಕೂತೂಹಲ ದುಪ್ಪಟ್ಟಾಯ್ತು. ಬದಲಾದ ಆದಿಯ ಲುಕ್ಕು, ಗೆಟಪ್ಪು ಅಭಿಮಾನಿಗಳನ್ನ ಮಾತ್ರವಲ್ಲ ಸಿನಿಮಾಪ್ರೇಮಿಗಳನ್ನೂ ಕಣ್ಣರಳಿಸಿ ನೋಡುವಂತೆ ಮಾಡ್ತು.ಅದ್ಯಾವಾಗ ಆದಿ ಜೊತೆ ಪ್ರಮೋಷನಲ್ ವಿಡಿಯೋಗಳಲ್ಲಿ ನಿಧಿ ಕಾಣಿಸಿಕೊಂಡರೋ ಕೌಸಲ್ಯ ಸುಪ್ರಜಾ ರಾಮನ ಮೇಲೆ ನಿರೀಕ್ಷೆ ದುಪ್ಪಟ್ಟಾಯ್ತು. ಟ್ರೇಲರ್ ಹಾಗೂ ಹಾಡುಗಳನ್ನ ನೋಡಿದ್ಮೇಲೆ ಕುತೂಹಲ ಗರಿಗೆದರಿದೆ. ಫಸ್ಟ್ ಡೇ ಫಸ್ಟ್ ಶೋ ಮಿಸ್ ಮಾಡದೇ ಸಿನಿಮಾ ನೋಡುವ ಕಾತುರ ಪ್ರೇಕ್ಷಕರಲ್ಲಿ ಹೆಚ್ಚಿದೆ. ಇದನ್ನೂ ಓದಿ:ದುಬೈನಲ್ಲಿ ಬಿಗ್ ಬಾಸ್ ದೀಪಿಕಾ ದಾಸ್ ಮೋಜು-ಮಸ್ತಿ

    ಆದಿ ಮತ್ತು ನಿಧಿನಾ ಒಟ್ಟಿಗೆ ನೋಡಬೇಕೆನ್ನುವ ಅಭಿಮಾನಿಗಳಿಗೆ ಮತ್ತು ಪ್ರೇಕ್ಷಕರಿಗೆ ಈ ಸಿನಿಮಾ ಖಂಡಿತವಾಗಲೂ ಇಷ್ಟವಾಗುತ್ತೆ. ವಿಶೇಷ ಅಂದರೆ ಹಿಂದೆಂದೂ ಕಂಡಿರದ ಅವತಾರದಲ್ಲಿ ಕೃಷ್ಣ ಹಾಗೂ ಮಿಲನ ಮಿಂಚಿದ್ದಾರೆ. ಡಾರ್ಲಿಂಗ್‍ಗೆ ಜೋಡಿಯಾಗಿ ಬೃಂದಾ ಆಚಾರ್ಯ ಕಾಣಿಸಿಕೊಂಡ್ರೂ ಕೂಡ ಕೃಷ್ಣ ಹಾಗೂ ಮಿಲನ ನಾಗರಾಜ್ ಕಾಂಬಿನೇಷನ್ ದೃಶ್ಯಗಳು ಚಿತ್ರದಲ್ಲಿರಲಿವೆ. ಈ ಬಗ್ಗೆ ಹೆಚ್ಚು ಡೀಟೈಲ್ಸ್ ಬಿಟ್ಟುಕೊಡದ ಕೃಷ್ಣ, ಇಲ್ಲಿ ವಿಲನ್ನು ನಾನೇ, ಹೀರೋನೂ ನಾನೇ ಅಂತೇಳುವ ಮೂಲಕ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದರು. ನನ್ನ ಕ್ಯಾರೆಕ್ಟರ್ ಡೆಪ್ತ್ ಆಗಿದೆ. ವಿವಿಧ ಆಯಾಮಗಳನ್ನೊಳಗೊಂಡ ಪಾತ್ರ ಇದಾಗಿದ್ದು, ನನ್ನ ಕರಿಯರ್ ನ ದಿ ಬೆಸ್ಟ್ ಕಥೆಯುಳ್ಳ ಚಿತ್ರ ಎಂದು ಖುಷಿಯಿಂದ ಹೇಳಿಕೊಂಡರು.

    ಕೌಸಲ್ಯ ಸುಪ್ರಜಾ ರಾಮ ಡಾರ್ಲಿಂಗ್ ಕರಿಯರ್ ನ ಬಿಗ್ಗೆಸ್ಟ್ ಸಿನಿಮಾ ಅಂತೆ. ಹೈಯೆಸ್ಟ್ ರೆಮ್ಯೂನರೇಷನ್ ಪಡೆದಿದ್ದು ಇದೇ ಸಿನಿಮಾಗೆನ್ನುವ ಸುದ್ದಿಯಿದೆ. ಈಗಾಗಲೇ ನಾಲ್ಕೈದು ಭಾರೀ ಸಿನಿಮಾ ನೋಡಿರುವ ಡಾರ್ಲಿಂಗ್, ಈ ಸಿನಿಮಾ ಒಳ್ಳೆ ಸಿನಿಮಾ ಆಗುತ್ತೆ. ಪ್ರೇಕ್ಷಕರ ಮನಸಲ್ಲಿ ದೀರ್ಘಕಾಲ ಉಳಿಯೋ ಚಿತ್ರವಾಗುತ್ತೆ ಎಂದಿದ್ದಾರೆ. ಸ್ಟ್ರಾಂಗ್ ಕಂಟೆಂಟ್ ಮುಂದೆ 200 ಕೋಟಿ 300 ಕೋಟಿ ಲೆಕ್ಕಕ್ಕೆ ಬರಲ್ಲ. ಬಿಲ್ಡಪ್, ಹೈಪ್ ಕೊಡುವುದರ ಕಡೆ ಗಮನ ಕೊಡದೇ, ಸಿನಿಮಾ ಮಾಡುವ ಕಡೆ ಗಮನ ಕೊಡಬೇಕು. ಆಗ ಒಳ್ಳೆ ಕಂಟೆಂಟ್ ಇರುವ ಸಿನಿಮಾಗಳನ್ನ ಕಮರ್ಷಿಯಲ್ ವೇನಲ್ಲಿ ಕಟ್ಟಿಕೊಡುವುದಕ್ಕೆ ಸಾಧ್ಯವಾಗುತ್ತೆನ್ನುವ ಮಾತನ್ನಾಡಿದರು. ಇಲ್ಲಿತನಕ ಯಾರೂ ಟಚ್ ಮಾಡದ ಕಥೆಯೊಂದನ್ನ ನಿರ್ದೇಶಕ ಶಶಾಂಕ್ `ಕೌಸಲ್ಯ ಸುಪ್ರಜಾ ರಾಮ’ ಚಿತ್ರದಲ್ಲಿ ಹೇಳಿದ್ದು, ಪ್ರತಿಯೊಬ್ಬರಿಗೂ ಈ ಸಿನಿಮಾ ಕನೆಕ್ಟ್ ಆಗುತ್ತೆ ಎಂದರು.

    ಅಂದ್ಹಾಗೇ ಈ ಚಿತ್ರ ಮೇಲ್ ಇಗೋ ಕುರಿತಾದದ್ದು. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣುಮಕ್ಕಳು ಯಾವ್ಯಾವ ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಾನು ಗಂಡಸು ಅನ್ನೋ ಅಹಂಕಾರನ ತಲೆಗೇರಿಸಿಕೊಂಡಿರೋ ಗಂಡಸರ ಮಧ್ಯೆ ಹೆಣ್ಣುಮಕ್ಕಳು ಎಷ್ಟೆಲ್ಲಾ ಸಂಕಷ್ಟಗಳನ್ನ ಸಹಿಸಿಕೊಂಡು ಬದುಕುತ್ತಿದ್ದಾರೆ. ಮೇಲ್ ಇಗೋದಿಂದ ಸ್ತ್ರೀಯರು ಎಷ್ಟು ಸಫರ್ ಆಗ್ತಿದ್ದಾರೆ, ಮೇಲ್ ಇಗೋ ಸಮಾಜವನ್ನ ಎಷ್ಟರ ಮಟ್ಟಿಗೆ ವ್ಯಾಪಿಸಿಕೊಂಡಿದೆ ಮತ್ತು ಎಷ್ಟೆಲ್ಲಾ ಪರಿಣಾಮ ಬೀರುತ್ತಿದೆ ಅನ್ನೋದೇ ಕೌಸಲ್ಯ ಸುಪ್ರಜಾ ರಾಮ ಚಿತ್ರದ ತಿರುಳು. ಡಾಲಿಂಗ್ ಕೃಷ್ಣ, ಮಿಲನ ನಾಗರಾಜ್ (Milana Nagaraj), ಬೃಂದಾ ಆಚಾರ್ಯ, ರಂಗಾಯಣ ರಘು, ಸುಧಾ ಬೆಳವಾಡಿ, ಅಚ್ಯುತ್ ಕುಮಾರ್, ನಾಗಭೂಷಣ್ ಸೇರಿದಂತೆ ಹಲವರು ಪಾತ್ರವರ್ಗದಲ್ಲಿದ್ದಾರೆ. ಮೊಗ್ಗಿನ ಮನಸ್ಸು, ಕೃಷ್ಣನ್ ಲವ್‍ಸ್ಟೋರಿ, ಕೃಷ್ಣಲೀಲಾ ಥರ ಇಲ್ಲೊಂದು ಕ್ಯೂಟ್ ಲವ್‍ಸ್ಟೋರಿಯ ಜೊತೆಗೆ ಫ್ಯಾಮಿಲಿ ವ್ಯಾಲ್ಯೂಸ್ ಕುರಿತಾದ ಅಂಶಗಳನ್ನ ಚಿತ್ರದಲ್ಲಿ ನೋಡಬಹುದು. ತಾಯಿ-ಮಗನ ಸೆಂಟಿಮೆಂಟ್‍ನ ಚಿತ್ರದಲ್ಲಿ ಕಾಣಬಹುದು.

     

    ಇದೇ ಜುಲೈ 28ರಂದು ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಶಶಾಂಕ್ ಸಿನಿಮಾಸ್ ಮತ್ತು ಕೌರವ ಪ್ರೊಡಕ್ಷನ್ ಅಡಿಯಲ್ಲಿ `ಕೌಸಲ್ಯ ಸುಪ್ರಜಾ ರಾಮ’ ಚಿತ್ರ ರಿಚ್ ಆಗಿಯೇ ಮೂಡಿಬಂದಿದೆ. ಕುಟುಂಬ ಸಮೇತ ಥಿಯೇಟರ್‍ಗೆ ಬಂದು ನೋಡುವಂತಹ ಸಿನಿಮಾ ಇದಾಗಿದ್ದು, ಪ್ಯಾನ್ ಇಂಡಿಯಾ ರೀಚ್ ಆಗುವ ಟೆಕ್ನಿಕಲ್ ಕ್ವಾಲಿಟಿ ಪ್ಲಸ್ ಕ್ವಾಂಟಿಟಿಯನ್ನೊಳಗೊಂಡಿದೆ. ಸಿನಿಮಾಟೋಗ್ರಫಿ ಮೂಲಕ ಕಥೆನಾ ಜನರಿಗೆ ಕನ್ವೆ ಮಾಡುವಂತಹ ಪ್ರಯೋಗಕ್ಕೆ ಶಶಾಂಕ್ ಕೈಹಾಕಿದ್ದು, ಸುಜ್ಞಾನ್ ಕ್ಯಾಮೆರಾ ಕೈಚಳಕ ತೋರಿದ್ದಾರೆ. ಗಿರಿ ಮಹೇಶ್ ಸಂಕಲನ ಮಾಡಿದ್ದಾರೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದ್ದಾರೆ. ಶಶಾಂಕ್ ಸಿನಿಮಾಸ್ ಮತ್ತು ಕೌರವ ಪ್ರೊಡಕ್ಷನ್ ಅಡಿಯಲ್ಲಿ `ಕೌಸಲ್ಯ ಸುಪ್ರಜಾ ರಾಮ’ ಚಿತ್ರ ರಿಚ್ ಆಗಿಯೇ ಮೂಡಿಬಂದಿದೆ. ಇಂಟ್ರೆಸ್ಟಿಂಗ್ ಸಂಗತಿ ಅಂದರೆ `ಕೌಸಲ್ಯ ಸುಪ್ರಜಾ ರಾಮ’ ಚಿತ್ರ ಕೆನಡಾ ಹಾಗೂ ಯುಎಸ್‍ಎ ನಲ್ಲೂ ಬಿಡುಗಡೆಯಾಗ್ತಿದೆ. ಆರ್‌ ಆರ್ ಆರ್ ನಂತಹ ದೊಡ್ಡ ದೊಡ್ಡ ಸಿನಿಮಾಗಳನ್ನ ವಿತರಣೆ ಮಾಡಿದಂತಹ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ, `ಕೌಸಲ್ಯ ಸುಪ್ರಜಾ ರಾಮ’ ಚಿತ್ರದ ಡಿಸ್ಟ್ರಿಬ್ಯೂಷನ್ ಜವಾಬ್ದಾರಿ ಹೊತ್ತಿರುವುದು ವಿಶೇಷ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಸಿ ನೆಡುವ ಮೂಲಕ ಹುಟ್ಟು ಹಬ್ಬ ಆಚರಿಸಿದ ಡಾರ್ಲಿಂಗ್ ಕೃಷ್ಣ

    ಸಸಿ ನೆಡುವ ಮೂಲಕ ಹುಟ್ಟು ಹಬ್ಬ ಆಚರಿಸಿದ ಡಾರ್ಲಿಂಗ್ ಕೃಷ್ಣ

    ಸ್ಯಾಂಡಲ್ ವುಡ್ ಹೆಸರಾಂತ ನಟ, ನಿರ್ದೇಶಕ ಡಾರ್ಲಿಂಗ್ ಕೃಷ್ಣ ನಿನ್ನೆ ತಮ್ಮ ಹುಟ್ಟು ಹಬ್ಬವನ್ನು (Birthday) ನೆಲಮಂಗಲದ ಬಸವೇಶ್ವರ  ಕಾಲೇಜಿನಲ್ಲಿ ಆಚರಿಸಿಕೊಂಡರು.  ಸಾವಿರಾರು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಕಾಲೇಜಿನ ಆವರಣದಲ್ಲಿ ಸಸಿ ನೆಡುವ ಅರ್ಥಪೂರ್ಣ ಕಾರ್ಯಕ್ರಮದ ಮೂಲಕ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ‘ಕೌಸಲ್ಯಾ ಸುಪ್ರಜಾ ರಾಮ’ ಚಿತ್ರತಂಡದ  ನಿರ್ದೇಶಕ ಶಶಾಂಕ್ (Shashank), ನಾಯಕಿ ಬೃಂದಾ ಆಚಾರ್ಯ, ಮಿಲನ ನಾಗರಾಜ್ (Milana Nagaraj) ಮತ್ತು ಪವಾಡ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಭಾಗವಹಿಸಿದ್ದರು.

    ಡಾರ್ಲಿಂಗ್ ಕೃಷ್ಣ (Darling Krishna)  ಅವರ ಹುಟ್ಟು ಹಬ್ಬಕ್ಕಾಗಿ ಅವರ ಮತ್ತೊಂದು ನಟನೆಯ ಸಿನಿಮಾ ‘ಶುಗರ್ ಫ್ಯಾಕ್ಟರಿ’ (Sugar Factory) ಚಿತ್ರತಂಡ ವಿಶೇಷ ಪೋಸ್ಟರ್ ಒಂದನ್ನು ರಿಲೀಸ್ ಮಾಡಿದೆ. ಈ ಮೂಲಕ ತನ್ನ ಚಿತ್ರದ ನಾಯಕನಿಗೆ ಚಿತ್ರತಂಡ ಶುಭಾಶಯ ತಿಳಿಸಿದೆ. ಇದನ್ನೂ ಓದಿ:ಬಾಲಿವುಡ್‌ ಚಿತ್ರಗಳ ಫ್ಲಾಪ್‌ ಬಳಿಕ ರಶ್ಮಿಕಾ ನಟನೆ 3ನೇ ಚಿತ್ರದ ಟೀಸರ್‌ ರಿಲೀಸ್

    ದೀಪಕ್ ಅರಸ್ (Deepak) ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ನಟಿ ಅಮೂಲ್ಯ ಸಹೋದರರಾಗಿರುವ ದೀಪಕ್ ಅರಸ್ ಈ ಹಿಂದೆ ಅಮೂಲ್ಯ, ರಾಕೇಶ್ ಅಡಿಗ ಜೋಡಿಯ ಮನಸಾಲಜಿ ಚಿತ್ರ ನಿರ್ದೇಶಿಸಿದ್ದರು, ಇದೀಗ ಎರಡನೇ ಸಿನಿಮಾವಾಗಿ ಶುಗರ್ ಫ್ಯಾಕ್ಟರಿ ಚಿತ್ರ ನಿರ್ದೇಶನ ಮಾಡುತ್ತಿದ್ದು, ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನ ದೀಪಕ್ ಅರಸ್ ಅವರೇ ಬರೆದಿದ್ದಾರೆ.

     

    ಫನ್ ರೋಮ್ಯಾಂಟಿಕ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಮೂವರು ನಾಯಕಿಯರಿದ್ದು, ಅದ್ವಿತಿ ಶೆಟ್ಟಿ, ಸೊನಾಲ್ ಮೊಂಥೆರೋ, ಶಿಲ್ಪಾ ಶೆಟ್ಟಿ ಶುಗರ್ ಫ್ಯಾಕ್ಟರಿ ನಟಿಮಣಿಯರಾಗಿ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಚೇತನ್ ಕುಮಾರ್, ಅರಸು ಅಂತಾರೆ, ಚಂದನ್ ಶೆಟ್ಟಿ ಸಾಹಿತ್ಯ ಬರೆಯುತ್ತಿದ್ದಾರೆ. ಕಬೀರ್ ರಫಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣದಲ್ಲಿ ಶುಗರ್ ಫ್ಯಾಕ್ಟರಿ ಚಿತ್ರ ಸೆರೆಯಾಗಿದೆ.

  • ಪ್ಯಾರಿಸ್‌ಗೆ ಹಾರಿದ Love ಬರ್ಡ್ಸ್ ಡಾರ್ಲಿಂಗ್‌ ಕೃಷ್ಣ- ಮಿಲನಾ

    ಪ್ಯಾರಿಸ್‌ಗೆ ಹಾರಿದ Love ಬರ್ಡ್ಸ್ ಡಾರ್ಲಿಂಗ್‌ ಕೃಷ್ಣ- ಮಿಲನಾ

    ಡಾರ್ಲಿಂಗ್ ಕೃಷ್ಣ- ಮಿಲನಾ ನಾಗರಾಜ್ (Milana Nagaraj) ಅವರು ಸದ್ಯ ವೆಕೇಷನ್ ಮೂಡ್‌ನಲ್ಲಿದ್ದಾರೆ. ದಂಪತಿಗಳಿಬ್ಬರು ಪ್ಯಾರಿಸ್‌ಗೆ ಹಾರಿದ್ದಾರೆ. ಈ ಕುರಿತ ಫೋಟೋವನ್ನ ಕೃಷ್ಣ ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

    ಸ್ಯಾಂಡಲ್‌ವುಡ್ (Sandalwood) ಸ್ಟಾರ್ ಜೋಡಿಗಳಲ್ಲಿ ಮಿಲನಾ ನಾಗರಾಜ್- ಡಾರ್ಲಿಂಗ್ ಕೃಷ್ಣ ಕೂಡ ಒಬ್ಬರು. ಸಾಕಷ್ಟು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಿ ಸತಿ-ಪತಿಗಳಾಗಿ ಅಭಿಮಾನಿಗಳಿಗೆ ಆದರ್ಶವಾಗಿ ಬದುಕುತ್ತಿದ್ದಾರೆ. ಲವ್‌ ಮಾಕ್ಟೈಲ್ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ನಿರ್ದೇಶಕನಾಗಿ ಸೈ ಎನಿಸಿಕೊಂಡರೆ, ಪತಿಯ ಸಿನಿಮಾ ಮಿಲನಾ ಸಾಥ್ ನೀಡಿದ್ದರು.

     

    View this post on Instagram

     

    A post shared by Milana Nagaraj (@milananagaraj)

    ಸಿನಿಮಾ ಕೆಲಸಕ್ಕೆ ಬ್ರೇಕ್ ಹಾಕಿ, ಪ್ಯಾರಿಸ್‌ಗೆ (Paris) ಡಾರ್ಲಿಂಗ್ ಕೃಷ್ಣ ದಂಪತಿ ಹಾರಿದ್ದಾರೆ. ಏಪ್ರಿಲ್‌ನಲ್ಲಿ ಮಿಲನಾ ಹುಟ್ಟುಹಬ್ಬಕ್ಕೆ ಥೈಲ್ಯಾಂಡ್‌ಗೆ ಹೋಗಿದ್ದರು. ಇದೀಗ ಪ್ಯಾರಿಸ್‌ನ ಸುಂದರ ತಾಣಗಳಿಗೆ ಭೇಟಿ ನೀಡುತ್ತಾ ಕೃಷ್ಣ- ಮಿಲನಾ ಎಂಜಾಯ್ ಮಾಡ್ತಿದ್ದಾರೆ. ಇದನ್ನೂ ಓದಿ:ಬಾಯ್‌ಫ್ರೆಂಡ್ ಪರಿಚಯಿಸಿದ ಕೀರ್ತಿ ಸುರೇಶ್- ಹುಡುಗ ಯಾರು?

     

    View this post on Instagram

     

    A post shared by Darling Krishna (@darling_krishnaa)

    ಡಾರ್ಲಿಂಗ್ ಕೃಷ್ಣ (Darling Krishna)ಅವರ ಲಿಸ್ಟ್‌ನಲ್ಲಿ ಲವ್ ಮಾಕ್ಟೈಲ್‌ 3, ಕೌಸಲ್ಯಾ ಸುಪ್ರಜಾ ರಾಮ, ಲವ್ ಮಿ  ಹೇಟ್ ಮಿ ಸೇರಿದಂತೆ ಹಲವು ಚಿತ್ರಗಳಿವೆ. ಲವ್ ಮಾಕ್ಟೈಲ್‌ 3, ಆರಾಮ ಅರವಿಂದ್‌ ಸ್ವಾಮಿ ಸೇರಿದಂತೆ ಹಲವು ಸಿನಿಮಾಗಳು ಮಿಲನಾ ನಾಗರಾಜ್ ಅವರ ಕೈಯಲ್ಲಿದೆ.

  • `ಲವ್ ಮಾಕ್ಟೈಲ್‌ 3′ ಬಗ್ಗೆ ಅಪ್‌ಡೇಟ್ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ

    `ಲವ್ ಮಾಕ್ಟೈಲ್‌ 3′ ಬಗ್ಗೆ ಅಪ್‌ಡೇಟ್ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ

    ಸ್ಯಾಂಡಲ್‌ವುಡ್ (Sandalwood) ಸೆಲೆಬ್ರಿಟಿಗಳ ಮನೆಯಲ್ಲಿ ಯುಗಾದಿ ಸಂಭ್ರಮ ಕಳೆಗಟ್ಟಿದೆ. ಈ ಶುಭದಿನದಂದು ತಮ್ಮ ಮುಂದಿನ ಕೆಲಸ ಬಗ್ಗೆ  ಡಾರ್ಲಿಂಗ್ ಕೃಷ್ಣ ದಂಪತಿ ಕೂಡ ʻಲವ್ ಮಾಕ್ಟೈಲ್ʼ (Love Moctail) ಸೀಕ್ವೇಲ್ ಬಗ್ಗೆ ಸಿಹಿಸುದ್ದಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಯುಗಾದಿ ಹಬ್ಬದಂದು ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದ ರಾಗಿಣಿ

    ‌ʻಲವ್ ಮಾಕ್ಟೈಲ್ʼ ಪಾರ್ಟ್ 1 ಮತ್ತು ಪಾರ್ಟ್ 2ನಲ್ಲಿ ಆದಿ-ನಿಧಿಮಾ ಸ್ಟೋರಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಚೆಂದದ ಲವ್ ಸ್ಟೋರಿ ಜೊತೆ ಎಮೋಷನಲಿ ಸಿನಿಮಾ ಪ್ರೇಕ್ಷಕರಿಗೆ ಕನೆಕ್ಟ್ ಆಗಿತ್ತು. ಮತ್ತೆ ಇದರ ಮುಂದುವರೆದ ಭಾಗ ಬರುತ್ತೋ ಇಲ್ವೋ ಅಂತಾ ಎಂಬ ಸ್ಪಷ್ಟತೆ ಇರಲಿಲ್ಲ. ಅದಕ್ಕೀಗ ಉತ್ತರ ಸಿಕ್ಕಿದೆ.

     

    View this post on Instagram

     

    A post shared by Darling Krishna (@darling_krishnaa)

    ಡಾರ್ಲಿಂಗ್ ಕೃಷ್ಣ (Darling Krishna) ಮತ್ತು ಮಿಲನಾ ನಾಗರಾಜ್ (Milana Nagaraj) ಅವರಿಗೆ ಪಾರ್ಟ್ 3 ಮಾಡುವ ಉದ್ದೇಶ ಅವರಿಗೆ ಇತ್ತು. ಆದರೆ ಒಳ್ಳೆಯ ಕಥೆ ಸಿಕ್ಕರೆ ಮಾತ್ರ ಮಾಡುತ್ತೇವೆ ಎಂದು ಅವರು ಹೇಳಿದ್ದರು. ಈಗ ಸೂಕ್ತವಾದ ಕಥೆ ಸಿಕ್ಕಿದೆ. ಹಾಗಾಗಿ ಅಧಿಕೃತವಾಗಿ `ಲವ್ ಮಾಕ್ಟೇಲ್ 3′ (Love Mocktail 3) ಬಗ್ಗೆ ಅನೌನ್ಸ್ ಮಾಡಲಾಗಿದೆ.

     

    View this post on Instagram

     

    A post shared by Darling Krishna (@darling_krishnaa)

    ಮತ್ತೆ ಆದಿ- ನಿಧಿಮಾ ಕಥೆ ಹೇಳಲು ʻಕ್ರಿಸ್‌ಮೀʼ ಜೋಡಿ ರೆಡಿಯಾಗಿದ್ದಾರೆ. `ಲವ್ ಮಾಕ್ಟೈಲ್ 3’ಗಾಗಿ ತಯಾರಿ ನಡೆಯುತ್ತಿದೆ. ಸದ್ಯದಲ್ಲೇ ಮತ್ತಷ್ಟು ಅಪ್‌ಡೇಟ್ ಅನ್ನ ಈ ಜೋಡಿ ಕೊಡಲಿದ್ದಾರೆ.

  • ‘ಲವ್ ಬರ್ಡ್ಸ್’ ಹಾಡು ರಿಲೀಸ್ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್

    ‘ಲವ್ ಬರ್ಡ್ಸ್’ ಹಾಡು ರಿಲೀಸ್ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್

    ಡ್ಡಿಪುಡಿ ಚಂದ್ರು ನಿರ್ಮಿಸಿರುವ ‘ಲವ್ ಬರ್ಡ್ಸ್’ ಚಿತ್ರಕ್ಕಾಗಿ ಕವಿರಾಜ್ ಅವರು ಬರೆದಿರುವ ‘ನೀನೇ ದೊರೆತ ಮೇಲೆ’  ಎಂಬ ಹಾಡು ಬಿಡುಗಡೆಯಾಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಇತ್ತೀಚೆಗೆ ಈ ಹಾಡನ್ನು ಬಿಡುಗಡೆ ಮಾಡಿ ಶುಭ ಕೋರಿದರು. ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ಮಾಸ್ತಿ ಮುಂತಾದವರು ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

    ಕೌಟುಂಬಿಕ ಚಿತ್ರಗಳು ಇತ್ತೀಚೆಗೆ ಬರುತ್ತಿರುವುದು ಸ್ವಲ್ಪ ಕಡಿಮೆ. ಆ ಸಮಯದಲ್ಲಿ ನನಗೆ ಉತ್ತಮ ಕೌಟುಂಬಿಕ ಚಿತ್ರವೊಂದನ್ನು ನಿರ್ದೇಶಿಸಬೇಕೆಂದು ಆಸೆಯಾಯಿತು. ನಿರ್ಮಾಪಕ ಕಡ್ಡಿಪುಡಿ ಚಂದ್ರು ಕಥೆ ಮೆಚ್ಚಿ ನಿರ್ಮಾಣಕ್ಕೆ ಮುಂದಾದರು. ಪ್ರತಿಯೊಬ್ಬರ ಜೀವನದಲ್ಲೂ ಮದುವೆ ಮಹತ್ತರವಾದ ಘಟ್ಟ. ಎಲ್ಲರಿಗೂ ಮದುವೆ ಬಗ್ಗೆ ಸಾಕಷ್ಟು ಕನಸುಗಳಿರುತ್ತದೆ. ಆ ಪ್ರಸಂಗಕ್ಕೆ ತಕ್ಕದಾದ ಹಾಡೊಂದನ್ನು ಕವಿರಾಜ್ ಅದ್ಭುತವಾಗಿ ಬರೆದಿದ್ದಾರೆ. ಅರ್ಜುನ್ ಜನ್ಯ ಅಷ್ಟೇ ಚೆನ್ನಾಗಿ ಸಂಗೀತ ನೀಡಿದ್ದಾರೆ. ಡಾರ್ಲಿಂಗ್ ಕೃಷ್ಣ – ಮಿಲನ ನಾಗರಾಜ್ ಚೆನ್ನಾಗಿ ನಟಿಸಿದ್ದಾರೆ ಎಂದು ನಿರ್ದೇಶಕ ಪಿ.ಸಿ.ಶೇಖರ್ ಹಾಡಿನ ಬಗ್ಗೆ ಮಾಹಿತಿ ನೀಡಿದರು. ಇದನ್ನೂ ಓದಿ: ತೆಲುಗು ಯುವನಟ ಸುಧೀರ್ ಆತ್ಮಹತ್ಯೆ: ಚಿತ್ರೋದ್ಯಮಕ್ಕೆ ಮತ್ತೊಂದು ಆಘಾತ

    ನಮ್ಮ ‘ಲವ್ ಮಾಕ್ಟೇಲ್’ ಚಿತ್ರದ ಮೊದಲ ಹಾಡನ್ನು ಪುನೀತ್ ಸರ್ ಹಾಗೂ ಆಶ್ವಿನಿ ಅವರಿಗೆ ತೋರಿಸಿದ್ದೆವು. ಇಬ್ಬರು ನೋಡಿ ಮನಸಾರೆ ಹರಸಿದ್ದರು. ಈ ಚಿತ್ರದ ಹಾಡನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಬಿಡುಗಡೆ ಮಾಡಿರುವುದು ಸಂತೋಷವಾಗಿದೆ ಎಂದರು ಮಿಲನ ನಾಗರಾಜ್. ಮದುವೆಗೆ ಸಂಬಂಧಿಸಿದ  ಈ ಹಾಡು ಎಲ್ಲರ ಮನಸ್ಸಿಗೂ ಹತ್ತಿರವಾಗಲಿದೆ ಎಂದು ಸಾಹಿತಿ ಕವಿರಾಜ್ ತಿಳಿಸಿದರು.

    ಹಾಡು ಬಿಡುಗಡೆ ಮಾಡಿದ್ದ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಹಾಗು ಆಗಮಿಸಿದ್ದ ಗಣ್ಯರಿಗೆ ನಿರ್ಮಾಪಕ ಕಡ್ಡಿಪುಡಿ ಚಂದ್ರು ಧನ್ಯವಾದ ತಿಳಿಸಿದರು. ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್, ಸಂಯುಕ್ತ ಹೊರನಾಡು, ಸಾಧುಕೋಕಿಲ, ರಂಗಾಯಣ ರಘು,  ಅವಿನಾಶ್, ವೀಣಾ ಸುಂದರ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k