Tag: Milan Prakash

  • ‘ಡೆವಿಲ್’ ಬಗೆಗಿನ ಮಾಹಿತಿ ಸುಳ್ಳು: ಅಧಿಕೃತವಾಗಿ ನಾವೇ ಹೇಳ್ತೀವಿ ಅಂದ ನಿರ್ದೇಶಕ

    ‘ಡೆವಿಲ್’ ಬಗೆಗಿನ ಮಾಹಿತಿ ಸುಳ್ಳು: ಅಧಿಕೃತವಾಗಿ ನಾವೇ ಹೇಳ್ತೀವಿ ಅಂದ ನಿರ್ದೇಶಕ

    ಮಿಲನ ಚಿತ್ರದ ಖ್ಯಾತಿಯ  ಪ್ರಕಾಶ್ ವೀರ್ ಅವರ ನಿರ್ದೇಶನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಯಕರಾಗಿ ನಟಿಸುತ್ತಿರುವ ‘ಡೆವಿಲ್’ (Devil) ಚಿತ್ರದ ಸ್ಕ್ರಿಪ್ಟ್ ಪೂಜೆ  ಎರಡು ತಿಂಗಳ ಹಿಂದೆ ಸರಳವಾಗಿ ನೆರವೇರಿತ್ತು. ಆದರೆ ಚಿತ್ರತಂಡ ಡೆವಿಲ್ ಚಿತ್ರದ ಕುರಿತಂತೆ ಇನ್ನು ಯಾವುದೇ ಪ್ರಚಾರ ಕಾರ್ಯ ಆರಂಭ ಮಾಡಿಲ್ಲ.

    ಮೊದಮೊದಲು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೋ ಪೋಸ್ಟರ್ ಹಾಕಿ ಡೆವಿಲ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅಂತ ಹೇಳಿಕೊಂಡಿದ್ದರು.  ಈಗ ಈ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿದ್ದಾರೆ ಎಂಬ ವಿಷಯವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದಾರೆ. ಈ  ಮೇಲ್ಕಂಡ ಯಾವುದೇ ವಿಷಯಗಳು ಚಿತ್ರತಂಡದ ಅಧಿಕೃತ ಮಾಹಿತಿ ಆಗಿರುವುದಿಲ್ಲ. ಸದ್ಯದಲ್ಲೇ ನಮ್ಮ ಚಿತ್ರದ ಪ್ರಚಾರ ಕಾರ್ಯ ಆರಂಭಿಸುತ್ತೇವೆ‌. ನಮ್ಮ ವೈಷ್ಣೊ ಸ್ಟುಡಿಯೋಸ್ ಸಂಸ್ಥೆಯ ಮೂಲಕವೇ ಅಧಿಕೃತವಾಗಿ ಡೆವಿಲ್ ಚಿತ್ರದ ಬಗ್ಗೆ ಮಾಹಿತಿ ನೀಡುತ್ತಾ ಹೋಗುತ್ತೇವೆ ಎಂದು ನಿರ್ದೇಶಕ ಪ್ರಕಾಶ್ ವೀರ್ ತಿಳಿಸಿದ್ದಾರೆ.

    ಹೆಸರಾಂತ ನಿರ್ದೇಶಕ ಮಿಲನ ಪ್ರಕಾಶ್, ಚಾಲೇಂಜಿಂಗ್ ಸ್ಟಾರ್ ದರ್ಶನ್ (Darshan) ಗಾಗಿ ಒಂದು ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಹಲವು ತಿಂಗಳಿಂದ ಹರಿದಾಡುತ್ತಿತ್ತು. ಬೆಂಗಳೂರಿನ ದೊಡ್ಡ ಮಹಾ ಗಣಪತಿ ದೇವಸ್ಥಾನದಲ್ಲಿ ದರ್ಶನ್ ಅವರ ಹೊಸ ಸಿನಿಮಾದ (New Cinema) ಮುಹೂರ್ತ ಸದ್ದಿಲ್ಲದೇ ನಡೆಯುವ ಮೂಲಕ ನಿಜವಾಗಿತ್ತು.

     

    ಮಿಲನ ಪ್ರಕಾಶ್ (Milan Prakash) ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು, ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕೆ ಇರಲಿದೆ, ವೈಷ್ಣೋ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ಈ ನಡುವೆ ಮತ್ತೊಂದು ಸುದ್ದಿ ಗಾಂಧಿ ನಗರದಲ್ಲಿ ಜೋರಾಗಿಯೇ ಕೇಳಿ ಬರುತ್ತಿದೆ. ದರ್ಶನ್ ಮತ್ತು ಸುದೀಪ್ ಕಾಂಬಿನೇಷನ್ ನ  ದಿಗ್ಗಜರು 2 ಸಿನಿಮಾ ಬಗ್ಗೆ ಚರ್ಚೆ ನಡೆಯುತ್ತಿದೆ. ಮತ್ತೆ ಇಬ್ಬರು ಜೊತೆಯಾಗಿ ನಟಿಸುತ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

  • Breaking: ದರ್ಶನ್ ಹೊಸ ಚಿತ್ರಕ್ಕೆ ಇಂದು ಸದ್ದಿಲ್ಲದೇ ಮುಹೂರ್ತ

    Breaking: ದರ್ಶನ್ ಹೊಸ ಚಿತ್ರಕ್ಕೆ ಇಂದು ಸದ್ದಿಲ್ಲದೇ ಮುಹೂರ್ತ

    ಹೆಸರಾಂತ ನಿರ್ದೇಶಕ ಮಿಲನ ಪ್ರಕಾಶ್, ಚಾಲೇಂಜಿಂಗ್ ಸ್ಟಾರ್ ದರ್ಶನ್ (Darshan) ಗಾಗಿ ಒಂದು ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಹಲವು ತಿಂಗಳಿಂದ ಹರಿದಾಡುತ್ತಿತ್ತು. ಅದೀಗ ನಿಜವಾಗಿದೆ. ಇಂದು ಬೆಂಗಳೂರಿನ ದೊಡ್ಡ ಮಹಾ ಗಣಪತಿ ದೇವಸ್ಥಾನದಲ್ಲಿ ದರ್ಶನ್ ಅವರ ಹೊಸ ಸಿನಿಮಾದ (New Cinema) ಮಹೂರ್ತ ಸದ್ದಿಲ್ಲದೇ ನಡೆದಿದೆ. ಈ ಸಿನಿಮಾಗೆ ತಾತ್ಕಾಲಿಕವಾಗಿ ‘ಡಿ-57 ‘ ಎಂದು ಹೆಸರಿಟ್ಟು ಮಹೂರ್ತ ಮಾಡಲಾಗಿದೆ.

    ಮಿಲನ ಪ್ರಕಾಶ್ (Milan Prakash) ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು, ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕೆ ಇರಲಿದೆ, ವೈಷ್ಣೋ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ಈ ನಡುವೆ ಮತ್ತೊಂದು ಸುದ್ದಿ ಗಾಂಧಿ ನಗರದಲ್ಲಿ ಜೋರಾಗಿಯೇ ಕೇಳಿ ಬರುತ್ತಿದೆ. ದರ್ಶನ್ ಮತ್ತು ಸುದೀಪ್ ಕಾಂಬಿನೇಷನ್ ನ  ದಿಗ್ಗಜರು 2 ಸಿನಿಮಾ ಬಗ್ಗೆ ಚರ್ಚೆ ನಡೆಯುತ್ತಿದೆ. ಮತ್ತೆ ಇಬ್ಬರು ಜೊತೆಯಾಗಿ ನಟಿಸುತ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

    ಸುದೀಪ್ – ದರ್ಶನ್ ಇಬ್ಬರಿಗೂ ಆಪ್ತರಾಗಿರೋ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ (Rockline Venkatesh) ಸಾರಥ್ಯದಲ್ಲಿ ದಿಗ್ಗಜರು 2 ಸಿನಿಮಾ ಬರುತ್ತಾ? ಇಬ್ಬರನ್ನೂ ಜೊತೆಯಾಗಿಸಿ ಸಿನಿಮಾ ಮಾಡ್ತಾರಾ? ಎಂಬ ಕೌತುಕ ಸ್ಯಾಂಡಲ್‌ವುಡ್ ಅಂಗಳದಲ್ಲಿ ಗುಸು ಗುಸು ಚರ್ಚೆ ಶುರುವಾಗಿದೆ.

    ಜ್ಯೂ.ಅಂಬರೀಶ್ – ಜ್ಯೂ.ವಿಷ್ಣುವರ್ಧನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ದರ್ಶನ್- ಸುದೀಪ್ (Sudeep) ಮತ್ತೆ ಒಂದೇ ವೇದಿಕೆಯಲ್ಲಿ ಜೊತೆಯಾಗಿರೋದು ಅಭಿಮಾನಿಗಳ ಕಣ್ಣಿಗೆ ಹಬ್ಬವಾಗಿದೆ. ಈ ಹಿಂದೆ ಅಂಬರೀಶ್ 60ನೇ ವರ್ಷದ ಬರ್ತ್‌ಡೇ ಕಾರ್ಯಕ್ರಮದಲ್ಲಿ ಕುಚಿಕು ಕುಚಿಕು ಡ್ಯಾನ್ಸ್ ಮಾಡಿ ಕಿಚ್ಚ-ದಚ್ಚು ಗಮನ ಸೆಳೆದಿದ್ದರು.

     

    2012ರಲ್ಲಿ ದರ್ಶನ್ ನಟನೆಯ ‘ಸಂಗೊಳ್ಳಿ ರಾಯಣ್ಣ’ ಚಿತ್ರಕ್ಕೆ ಸಂಪೂರ್ಣ ಸಹಕರಿಸಿದ್ದ ಕಿಚ್ಚ. ದರ್ಶನ್ ಈ ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಿದ್ದರು. ಮುಂದೆ ಒಂದೊಳ್ಳೆ ಘಳಿಗೆ ಬಂದರೆ ಒಟ್ಟಿಗೆ ಆಕ್ಟ್ ಮಾಡೋದಾಗಿ ಇಬ್ಬರು ಹೇಳಿದ್ರು. ಅಂಬಿ ಇದ್ದಿದ್ರೆ ಇಷ್ಟೊತ್ತಿಗಾಗ್ಲೇ ಸುದೀಪ್-‌ ದರ್ಶನ್ ಒಂದಾಗುತ್ತಿದ್ದರು. ಇದೀಗ ಇಬ್ಬರನ್ನೂ ಒಂದಾಗಿಸೋ ಪ್ರಯತ್ನಗಳು ಜಾರಿಯಲ್ಲಿವೆ ಎನ್ನಲಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]