Tag: Mike Tyson

  • 20 ವರ್ಷಗಳ ಬಳಿಕ ರಿಂಗ್‌ನಲ್ಲಿ ಘರ್ಜಿಸಿದ ಮೈಕ್‌ ಟೈಸನ್‌ – ಜೇಕ್ ಪಾಲ್ ವಿರುದ್ಧ ಸೋಲು

    20 ವರ್ಷಗಳ ಬಳಿಕ ರಿಂಗ್‌ನಲ್ಲಿ ಘರ್ಜಿಸಿದ ಮೈಕ್‌ ಟೈಸನ್‌ – ಜೇಕ್ ಪಾಲ್ ವಿರುದ್ಧ ಸೋಲು

    – ಅತಿದೊಡ್ಡ ಬಾಕ್ಸಿಂಗ್‌ ಫೈಟ್‌ಗೆ ಟೈಸನ್‌ಗೆ ಸಿಕ್ತು 169 ಕೋಟಿ

    ವಾಷಿಂಗ್ಟನ್‌: 20 ವರ್ಷಗಳ ಬಳಿಕ ಬಾಕ್ಸಿಂಗ್ ರಿಂಗ್‌ಗೆ ಇಳಿದು ಘರ್ಜಿಸಿದ 58 ವರ್ಷದ ದಿಗ್ಗಜ ಬಾಕ್ಸರ್ ಮೈಕ್ ಟೈಸನ್ (Mike Tyson), ಎನ್‌ಎಫ್‌ಎಲ್ ಡಲಾಸ್‌ ಕೌಬಾಯ್ಸ್ ಬಾಕ್ಸಿಂಗ್‌ನಲ್ಲಿ 27 ವರ್ಷದ ಯೂಟ್ಯೂಬರ್ ಜೇಕ್‌ ಪಾಲ್ (Jake Paul) ವಿರುದ್ಧ ಸೋಲು ಕಂಡಿದ್ದಾರೆ. ಟೆಕ್ಸಾಸ್‌ನ ಆರ್ಲಿಂಗ್ಟನ್‌ನಲ್ಲಿರುವ ಎಟಿ ಅಂಡ್ ಟಿ ಕ್ರೀಡಾಂಗಣ ಈ ಐತಿಹಾಸಿಕ ಪಂದ್ಯಕ್ಕೆ ಸಾಕ್ಷಿಯಾಯಿತು.

    27 ವರ್ಷ ವಯಸ್ಸಿನ ಪಾಲ್ ಅವರು 79-73 ಅಂಕಗಳಿಂದ ಹೆವಿವೇಯ್ಡ್ ಐಕಾನ್ ಟೈಸನ್ ವಿರುದ್ಧ ಗೆಲುವು ಸಾಧಿಸಿದ್ದಾರೆ. 2024ರ ಅತಿದೊಡ್ಡ ಬಾಕ್ಸಿಂಗ್ ಫೈಟ್ ಎಂದು ಬಿಂಬಿಸಲಾಗಿದ್ದ ಈ ಹಣಾಹಣಿಯನ್ನು ಕಣ್ಣುಂಬಿಕೊಳ್ಳಲು ಟೈಸನ್ ಅಭಿಮಾನಿಗಳು (Tyson Fans) ತುದಿಗಾಲಿನಲ್ಲಿ ನಿಂತಿದ್ದರು. ಸ್ಪರ್ಧೆಗೆ ಇಳಿಯಲು ಟೈಸನ್ ಅವರಿಗೆ 169 ಕೋಟಿ ರೂ. ($20 ಮಿಲಿಯನ್) ಪಾವತಿಸಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಟೀಂ ಇಂಡಿಯಾ ಕ್ಯಾಪ್ಟನ್‌ ರೋಹಿತ್‌ ಶರ್ಮಾ ದಂಪತಿಗೆ ಗಂಡು ಮಗು ಜನನ

    2005ರ ನಂತರ ಅಖಾಡಕ್ಕೆ ಇಳಿದ 58 ವರ್ಷ ವಯಸ್ಸಿನ ಟೈಸನ್ ಅವರ ಪಂಚ್‌ಗಳು ಲಯ ಕಳೆದುಕೊಂಡ ಕಾರಣ ಪಾಲ್ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು. ಹೆವಿವೇಯ್ಡ್ ಮಾಜಿ ಚಾಂಪಿಯನ್ ಟೈಸನ್ 8 ಸುತ್ತಿನ ಬೌಟ್‌ನ ಮೊದಲೆರಡು ಸುತ್ತುಗಳಲ್ಲಿ ತೀವ್ರ ಪೈಪೋಟಿ ನೀಡಿದ್ದರು. ಆದರೆ, ಪಾಲ್ ಅವರು ಚುರುಕಿನ ಪಾದಚಲನೆಯ ಮೂಲಕ ಮೂರನೇ ಸುತ್ತಿನಲ್ಲೇ ಪಾಬಲ್ಯ ಮೆರೆದರು.

    ಎಲ್ಲಾ ಮೂರು ಕಾರ್ಡ್‌ಗಳಲ್ಲಿ ಪಾಲ್ ದೊಡ್ಡ ಅಂತರದಿಂದ ಜಯ ಸಾಧಿಸಿದರು. ಪಂದ್ಯದ ಮುಕ್ತಾಯದ ಬಳಿಕ ಪಾಲ್ ಅವರು ಬಾಕಿಂಗ್ಸ್ ದಂತಕತೆ ಟೈಸನ್ ಅವರಿಗೆ ನಮಸ್ಕರಿಸಿದರು. ಇದನ್ನೂ ಓದಿ: ಆಫ್ರಿಕಾ ವಿರುದ್ಧ ದಾಖಲೆಯ ಜಯದೊಂದಿಗೆ ಸರಣಿ ಗೆದ್ದ ಟೀಂ ಇಂಡಿಯಾ

    20 ವರ್ಷಗಳ ಬಳಿಕ ಸ್ಪರ್ಧೆಗೆ ಮರಳಿದ್ದ ಟೈಸನ್ ಅವರು ಗುರುವಾರ ತೂಕ ಪರೀಕ್ಷೆ ವೇಳೆ ಪಾಲ್ ಅವರಿಗೆ ಕಪಾಳಮೋಕ್ಷ ಮಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಇದನ್ನೂ ಓದಿ: ರನ್‌ ಹೊಳೆಯಲ್ಲಿ ತೇಲಾಡಿದ ಭಾರತ – ಸಂಜು, ತಿಲಕ್‌ ಶತಕಗಳ ಅಬ್ಬರಕ್ಕೆ ದಾಖಲೆಗಳು ಧೂಳಿಪಟ

  • ‘ಲೈಗರ್’ ಸಿನಿಮಾದಲ್ಲಿ ನಟಿಸಲು 25 ಕೋಟಿ ಸಂಭಾವನೆ ಪಡೆದರೂ, ಸಿನಿಮಾನೇ ಮರೆತಿದ್ದರಾ ಮೈಕ್ ಟೈಸನ್

    ‘ಲೈಗರ್’ ಸಿನಿಮಾದಲ್ಲಿ ನಟಿಸಲು 25 ಕೋಟಿ ಸಂಭಾವನೆ ಪಡೆದರೂ, ಸಿನಿಮಾನೇ ಮರೆತಿದ್ದರಾ ಮೈಕ್ ಟೈಸನ್

    ಬಾಕ್ಸಿಂಗ್ ಲೋಕದ ದಂತಕಥೆಯಾಗಿರುವ ಮೈಕ್ ಟೈಸನ್, ಇದೇ ಮೊದಲ ಬಾರಿಗೆ ಭಾರತೀಯ ಸಿನಿಮಾದಲ್ಲಿ ನಟಿಸಿದ್ದರು. ವಿಜಯ್ ದೇವರಕೊಂಡ ನಾಯಕನಾಗಿ ನಟಿಸಿರುವ ಲೈಗರ್ ಸಿನಿಮಾದಲ್ಲಿ ಅವರು ವಿಶೇಷ ಪಾತ್ರವನ್ನು ನಿರ್ವಹಿಸಿದ್ದರು. ಅದು ಕೆಲವೇ ನಿಮಿಷಗಳಲ್ಲಿ ಬಂದು ಹೋಗುವ ಪಾತ್ರವಾದರೂ, ಅವರು ಈ ಚಿತ್ರದಲ್ಲಿ ನಟಿಸಲು ಬರೋಬ್ಬರಿ 25 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.

    ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದಲ್ಲಿ ಬಾಕ್ಸಿಂಗ್ ಕುರಿತಾದ ಕಥೆಯಿದೆ. ಹಾಗಾಗಿ ಕ್ಲೈಮ್ಯಾಕ್ಸ್ ನಲ್ಲಿ ಮೈಕ್ ಟೈಸನ್ ಆಗಮನವಾಗುತ್ತದೆ. ಈ ದೃಶ್ಯದಲ್ಲಿ ನಟಿಸಲು ಅವರು ಭಾರೀ ಮೊತ್ತದ ಹಣ ಬೇಡಿಕೆ ಇಟ್ಟಿದ್ದರು. ಅಷ್ಟೂ ಹಣವನ್ನು ನಿರ್ಮಾಪಕರು ಸಂದಾಯ ಮಾಡಿದ್ದಾರೆ. ಆದರೆ, ಸಿನಿಮಾ ರಿಲೀಸ್ ವೇಳೆಯಲ್ಲಿ ಟೈಸನ್ ತಾವು ಲೈಗರ್ ಸಿನಿಮಾದಲ್ಲಿ ನಟಿಸಿದ್ದೇನೆ ಎನ್ನುವುದನ್ನೇ ಮರೆತು ಹೋಗಿದ್ದರು. ಸಂದರ್ಶನವೊಂದರಲ್ಲಿ ನಾನು ಆ ರೀತಿಯ ಸಿನಿಮಾ ಮಾಡಿದ್ದೇನಾ ಎನ್ನುವಂತೆ ಉತ್ತರ ನೀಡಿದ್ದರು. ಇದನ್ನೂ ಓದಿ:ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ‘ಗಂಡುಮಗ’ ಎಂದು ಹಾಡಿ ಹೊಗಳಿದ ಜಗ್ಗೇಶ್

    ಮೈಕ್ ಟೈಸನ್ ತಮ್ಮ ಸಿನಿಮಾದಲ್ಲಿ ನಟಿಸಿದರೆ, ಚಿತ್ರಕ್ಕೆ ಮತ್ತೊಂದು ತೂಕ ಬರಲಿದೆ ಎಂದು ಚಿತ್ರತಂಡ ನಂಬಿತ್ತು. ಬಹುಶಃ ಆ ನಂಬಿಕೆ ಸುಳ್ಳಾಗಿದೆ. ಸಿನಿಮಾವನ್ನು ಪ್ರೇಕ್ಷಕ ಒಪ್ಪದೇ ಇರುವ ಕಾರಣಕ್ಕಾಗಿ ಸಿನಿಮಾದಲ್ಲಿ ಟೈಸನ್ ಇದ್ದರೂ, ಸಿನಿಮಾ ನಿರೀಕ್ಷೆಯ ಮಟ್ಟ ತಲುಪಿಲ್ಲ. ಸಿನಿಮಾ ರಿಲೀಸ್ ಆಗಿ ಎರಡನೇ ದಿನಕ್ಕೆ ಸಿನಿಮಾ ಫ್ಲ್ಯಾಪ್ ಎಂದು ಘೋಷಿಸಿ ಬಿಟ್ಟರು ನೋಡುಗರು. ಹಾಗಾಗಿ ಸಿನಿಮಾದಲ್ಲಿ ಏನೇ ಕಸರತ್ತು ಮಾಡಿದರು ಅದು ವರ್ಕ್ ಆಗಿಲ್ಲ ಎನ್ನುವುದು ನಿಜವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬಾಕ್ಸಿಂಗ್ ಲೆಜೆಂಡ್ ಟೈಸನ್ ಫಸ್ಟ್ ಲುಕ್‍ಗೆ ಅಭಿಮಾನಿಗಳು ಫಿದಾ

    ಬಾಕ್ಸಿಂಗ್ ಲೆಜೆಂಡ್ ಟೈಸನ್ ಫಸ್ಟ್ ಲುಕ್‍ಗೆ ಅಭಿಮಾನಿಗಳು ಫಿದಾ

    ಚೆನ್ನೈ: ಬಾಕ್ಸಿಂಗ್ ಲೆಜೆಂಡ್ ಮೈಕ್ ಟೈಸನ್ ನಟನೆಯ ‘ಲೈಗರ್’ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಪೋಸ್ಟ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

    ‘ಅರ್ಜುನ್ ರೆಡ್ಡಿ’ ಖ್ಯಾತಿಯ ವಿಜಯ್ ದೇವರಕೊಂಡ ಮುಖ್ಯಭೂಮಿಕೆಯಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ಬಾಕ್ಸಿಂಗ್ ಲೆಜೆಂಡ್ ಮೈಕ್ ಟೈಸನ್ ಕೂಡ ನಟಿಸಿದ್ದಾರೆ. ದೀಪಾವಳಿ ಪ್ರಯುಕ್ತ ಐರನ್ ಮೈಕ್ ಅವರ ಫಸ್ಟ್ ಲುಕ್ ಅನ್ನು ಇಂದು ಬಿಡುಗಡೆ ಮಾಡಲಾಗಿದೆ. ಈ ಪೋಸ್ಟ್ ನೋಡಿದ ಅವರ ಅಭಿಮಾನಿಗಳು ಸಖತ್ ಖುಷಿಯಾಗಿದ್ದು, ವಾವ್ಹ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಯೇ ಭಾರತೀಯ ಸಿನಿಮಾದಲ್ಲಿ ನಟಿಸುತ್ತಿರುವ ಇವರ ಪಾತ್ರದ ಬಗ್ಗೆ ಎಲ್ಲರಿಗೂ ಕುತೂಹಲವಿದೆ.

    ಬಾಕ್ಸಿಂಗ್ ನಲ್ಲಿ ಇಡೀ ಜಗತ್ತಿಗೆ ದೊಡ್ಡ ಹೆಸರು ಮೈಕ್ ಟೈಸನ್. ಇವರನ್ನು ಐರನ್ ಮ್ಯಾನ್ ಎಂದು ಸಹ ಕರೆಯುತ್ತಾರೆ. ಬಾಕ್ಸಿಂಗ್ ರಿಂಗ್ ಗೆ ಬಂದರೆ ಇವರನ್ನು ಸೋಲಿಸಲು ಯಾರಿಂದಲೂ ಆಗುವುದಿಲ್ಲ. ಇವರನ್ನು ಕರೆತರುತ್ತೇವೆ ಎಂದು ಚಿತ್ರತಂಡ ಇತ್ತೀಚೆಗೆ ಫೋಷಣೆ ಮಾಡಿತ್ತು. ಇಂದು ಅವರ ಫಸ್ಟ್ ಲುಕ್ ಅನ್ನು ರಿಲೀಸ್ ಮಾಡಿದೆ. ಇದನ್ನೂ ಓದಿ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಪರಿಸರ ಸ್ನೇಹಿ ಅರಿವು ಮೂಡಿಸಿದ ಪಬ್ಲಿಕ್ ಹೀರೋ

    ಈ ವೇಳೆ ಮೈಕ್ ಅವರು ಚಿತ್ರತಂಡಕ್ಕೆ ಕೆಲವು ಷರತ್ತುಗಳನ್ನು ಹಾಕಿದ್ದು, ನನ್ನ ಭಾಗದ ಶೂಟಿಂಗ್ ಅನ್ನು ಅಮೆರಿಕಾದಲ್ಲಿಯೇ ಮಾಡಬೇಕು. ಆಗ ಮಾತ್ರ ನಾನು ನಿಮ್ಮ ಸಿನಿಮಾದಲ್ಲಿ ನಟಿಸುತ್ತೇನೆ ಎಂದು ಹೇಳಿದ್ದರು. ಅದರಂತೆ ಚಿತ್ರತಂಡ ಅಮೆರಿಕಕ್ಕೆ ಪ್ರಯಾಣ ಬೆಳೆಸಿ ಶೂಟಿಂಗ್ ಪೂರ್ಣಗೊಳಿಸಿಕೊಂಡು ಬಂದಿದೆ.

    ಮೈಕ್ ಅವರ ಫಸ್ಟ್ ಲುಕ್ ಎಲ್ಲರ ಗಮನ ಸೆಳೆದಿದ್ದು, ಈ ಪೋಸ್ಟ್ ಅಲ್ಲಿ ಮೈಕ್ ಅವರ ಮುಖದಲ್ಲಿ ಕೋಪ ಮತ್ತು ಅವರ ಕೈಯ ಬೆಂಕಿಯ ಚಂಡಿದ್ದು, ಥ್ರಿಲಿಂಗ್ ಮೂವೀ ಎಂಬುದು ಈ ಪೋಸ್ಟ್ ಮೂಲಕ ತಿಳಿದುಬರುತ್ತೆ. ಪೋಸ್ಟ್ ನೋಡಿ ಇನ್ನೂ ಈ ಸಿನಿಮಾದಲ್ಲಿ ಇವರ ಪಾತ್ರ ಯಾವುದು? ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡಿದೆ.

    ಮೈಕ್ ಅವರು ಅತಿಥಿ ಪಾತ್ರ ಮಾಡುತ್ತಿದ್ದರೂ, ಅವರನ್ನು ಹೇಗೆ ತೋರಿಸಲಾಗಿದೆ? ಚಿತ್ರಕಥೆ ಹೇಗೆ ಮೂಡಿಬರುತ್ತೆ ಕಾದು ನೋಡಬೇಕು. ಇನ್ನೂ ಇವರು ಕ್ಲೈಮ್ಯಾಕ್ಸ್ ಗಿಂತಲೂ ಮುನ್ನ ಬರುತ್ತಾರೆ ಎಂದು ಚಿತ್ರತಂಡ ತಿಳಿಸಿದೆ. ಮೈಕ್ ಅವರ ಅತಿಥಿ ಪಾತ್ರಕ್ಕೆ ವಿಜಯ್ ಗಿಂತಲೂ ಹೆಚ್ಚು ಸಂಭವಾನೆಯನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ. ಈ ಚಿತ್ರಕ್ಕೆ ಪುರಿ ಜಗನ್ನಾಥ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದನ್ನೂ ಓದಿ: RSS ಬಗ್ಗೆ ಮಾತನಾಡಿದರೆ ವೋಟು ಬರಲ್ಲ: ಪ್ರೀತಂಗೌಡ ವ್ಯಂಗ್ಯ

  • ನಾಯಕ ದೇವರಕೊಂಡಗಿಂತಲೂ ದುಬಾರಿ ಸಂಭಾವನೆ ಪಡೆಯಲಿದ್ದಾರೆ ಮೈಕ್ ಟೈಸನ್

    ನಾಯಕ ದೇವರಕೊಂಡಗಿಂತಲೂ ದುಬಾರಿ ಸಂಭಾವನೆ ಪಡೆಯಲಿದ್ದಾರೆ ಮೈಕ್ ಟೈಸನ್

    ಹೈದರಾಬಾದ್: ಟಾಲಿವುಡ್ ಬಹುನಿರೀಕ್ಷಿತ ಲೈಗರ್ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಬಾಕ್ಸಿಂಗ್ ಲೆಜೆಂಡ್ ಮೈಕ್ ಟೈಸನ್ ಸಂಭಾವನೆ ನಟ ವಿಜಯ್ ದೇವರಕೊಂಡಗಿಂತ ದುಬಾರಿ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ.

    ನಟ ವಿಜಯ್ ದೇವರಕೊಂಡ ಅಭಿನಯಿಸುತ್ತಿರುವ ಲೈಗರ್ ಸಿನಿಮಾದಲ್ಲಿ ಗಾಡ್ ಆಫ್ ದಿ ಬಾಕ್ಸಿಂಗ್ ಎಂದೇ ಖ್ಯಾತಿ ಪಡೆದಿರುವ ಅಮೆರಿಕಾದ ಮೈಕ್ ಟೈಸನ್ ಅಭಿನಯಿಸಲಿದ್ದಾರೆ ಎಂಬ ವಿಚಾರವನ್ನು ಚಿತ್ರತಂಡ ಇತ್ತೀಚೆಗಷ್ಟೇ ರಿವೀಲ್ ಮಾಡಿತ್ತು. ಇದನ್ನೂ ಓದಿ: ಫಸ್ಟ್ ಟೈಂ ಭಾರತೀಯ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಮೈಕ್ ಟೈಸನ್

    ಚಿತ್ರದ ಅತಿಥಿ ಪಾತ್ರವೊಂದರಲ್ಲಿ ಮೈಕ್ ಟೈಸನ್, ಕ್ಲೈಮ್ಯಾಕ್ಸ್‍ಗಿಂತಲೂ ಬರುವ ಚಿಕ್ಕ ದೃಶ್ಯದಲ್ಲಿ ಕಾಣಿಸಿಕೊಳ್ಳಲಿದ್ದು, ಈ ದೃಶ್ಯದಲ್ಲಿ ಅಭಿನಯಿಸಲು ದುಬಾರಿ ಸಂಭಾವನೆ ಪಡೆಯಲಿದ್ದಾರೆ. ಅದು ಲೈಗರ್ ಸಿನಿಮಾ ನಟ ವಿಜಯ್ ದೇವರಕೊಂಡ ಪಡೆಯವ ಸಂಭಾವನೆಗಿಂತಲೂ ಹೆಚ್ಚು ಎಂಬ ವಿಚಾರ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿಯನ್ನು ಚಿತ್ರತಂಡ ಬಹಿರಂಗಗೊಳಿಸಿಲ್ಲ.

     

    View this post on Instagram

     

    A post shared by Vijay Deverakonda (@thedeverakonda)

    ಮೈಕ್ ಟೈಸನ್‍ಗೆ ಹೆಚ್ಚು ಸಂಭಾವನೆ ನೀಡುವುದರಿಂದ ಯಾವುದೇ ನಷ್ಟವಿಲ್ಲ. ಸಾಕಷ್ಟು ಸಂಖ್ಯೆಯಲ್ಲಿ ಅವರಿಗೆ ವಿದೇಶದಲ್ಲೂ ಅಭಿಮಾನಿಗಳು ಇರುವ ಕಾರಣ ಸಿನಿಮಾ ಕಲೆಕ್ಷನ್ ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿದೆ ಚಿತ್ರತಂಡ. ಈ ಚಿತ್ರಕ್ಕೆ ಪುರಿ ಜಗನ್ನಾಥ್, ಕರಣ್ ಜೋಹರ್, ಚಾರ್ಮಿ ಕೌರ್, ಅಪೂರ್ವ ಮೆಹ್ತಾ, ಹೀರೂ ಯಶ್ ಜೋಹರ್ ಒಟ್ಟಾಗಿ ಸೇರಿಕೊಂಡು ಬಂಡವಾಳ ಹೂಡಿದ್ದಾರೆ. ಇದನ್ನೂ ಓದಿ: ಫಸ್ಟ್ ಟೈಂ ಭಾರತೀಯ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಮೈಕ್ ಟೈಸನ್

     

    View this post on Instagram

     

    A post shared by Vijay Deverakonda (@thedeverakonda)

    ಸೋಮವಾರವಷ್ಟೇ ವಿಜಯ್ ದೇವರಕೊಂಡ ತಮ್ಮ ಟ್ವಿಟ್ಟರ್ ನಲ್ಲಿ ಮೈಕ್ ಟೈಸನ್ ಲೈಗರ್ ಸಿನಿಮಾದಲ್ಲಿ ಅಭಿನಯಿಸುತ್ತಿರುವ ವಿಚಾರವನ್ನು ಶೇರ್ ಮಾಡಿಕೊಂಡಿದ್ದು, ನಿಮಗೆ ಭರವಸೆಯನ್ನು ನೀಡಿದ್ದೆವು. ಅದರಂತೆ ಇಂದು ನಾವು ಪ್ರಾರಂಭಿಸಿದ್ದೇವೆ. ಭಾರತೀಯ ಪರದೆಯಲ್ಲಿ ಮೊದಲ ‘ಲೈಗರ್’ ಸಿನಿಮಾದಲ್ಲಿ ಗಾಡ್ ಆಫ್ ಬಾಕ್ಸಿಂಗ್, ದಿ ಲೆಜೆಂಡ್, ದಿ ಬೀಸ್ಟ್, ದಿ ಗ್ರೇಟೆಸ್ಟ್ ಆಲ್ ಟೈಮ್ ಐರನ್ ‘ಮೈಕ್ ಟೈಸನ್’ ಎಂದು ಬರೆದು ಟ್ವೀಟ್ ಮಾಡುವ ಮೂಲಕ ಗಾಡ್ ಆಫ್ ಬಾಕ್ಸಿಂಗ್ ನನ್ನು ಭಾರತೀಯ ಪರದೆಯ ಮೇಲೆ ತರುತ್ತಿದ್ದೇವೆ ಎಂದು ಬರೆದುಕೊಂಡಿದ್ದರು.

  • ಫಸ್ಟ್ ಟೈಂ ಭಾರತೀಯ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಮೈಕ್ ಟೈಸನ್

    ಫಸ್ಟ್ ಟೈಂ ಭಾರತೀಯ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಮೈಕ್ ಟೈಸನ್

    ಚೆನ್ನೈ: ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರ ಸಿನಿಮಾಗೆ ಅಮೆರಿಕನ್ ಮಾಜಿ ಬಾಕ್ಸರ್ ಮೈಕ್ ಟೈಸನ್ ಅಭಿನಯಿಸುವುದರ ಮೂಲಕ ಭಾರತೀಯ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.

    ಐರನ್ ಮೈಕ್ ಅಥವಾ ಕಿಡ್ ಡೈನಮೈಟ್ ಎಂದೇ ಪ್ರಸಿದ್ಧಿ ಹೊಂದಿರುವ ಮೈಕ್ ಟೈಸನ್ ಟಾಲಿವುಡ್ ಸಿನಿಮಾದಲ್ಲಿ ನಟಿಸಲಿದ್ದಾರೆ. ಅದರಲ್ಲಿಯೂ ವಿಜಯ್ ದೇವರಕೊಂಡ ಅವರ ‘ಲೈಗರ್’ ಸಿನಿಮಾದಲ್ಲಿ ಎಂಬುದು ವಿಶೇಷವಾಗಿದೆ.

    ಈ ಕುರಿತು ವಿಜಯ್ ತಮ್ಮ ಟ್ವಿಟ್ಟರ್ ನಲ್ಲಿ, ನಿಮಗೆ ಭರವಸೆಯನ್ನು ನೀಡಿದ್ದೆವು. ಅದರಂತೆ ಇಂದು ನಾವು ಪ್ರಾರಂಭಿಸಿದ್ದೇವೆ. ಭಾರತೀಯ ಪರದೆಯಲ್ಲಿ ಮೊದಲ ‘ಲೈಗರ್’ ಸಿನಿಮಾದಲ್ಲಿ ಗಾಡ್ ಆಫ್ ಬಾಕ್ಸಿಂಗ್, ದಿ ಲೆಜೆಂಡ್, ದಿ ಬೀಸ್ಟ್, ದಿ ಗ್ರೇಟೆಸ್ಟ್ ಆಲ್ ಟೈಮ್ ಐರನ್ ಮೈಕ್ ಟೈಸನ್’ ಎಂದು ಬರೆದು ಟ್ವೀಟ್ ಮಾಡುವ ಮೂಲಕ ಗಾಡ್ ಆಫ್ ಬಾಕ್ಸಿಂಗ್ ನನ್ನು ಭಾರತೀಯ ಪರದೆಯ ಮೇಲೆ ತರುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮದುವೆಗೆ ಸ್ಥಳ ಹುಡುಕುತ್ತ ಜೈಪುರಗೆ ಬಂದ್ರು ಲವ್ ಬರ್ಡ್ಸ್

    ಈ ಸುದ್ದಿ ತಿಳಿದ ಅವರ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಅದು ಅಲ್ಲದೇ ವಿಜಯ್ ಈ ಸಿನಿಮಾದಲ್ಲಿ ಎಂಎಂಎ ಫೈಟರ್ ಆಗಿ ಕಾಣಿಸಿಕೊಳ್ಳುತ್ತಿದ್ದು., ಇದರಲ್ಲಿ ಮೈಕ್ ಯಾವ ರೀತಿಯ ಪಾತ್ರದಲ್ಲಿ ನಟಿಸುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

    ಪ್ರಸ್ತುತ ‘ಲೈಗರ್’ ಚಿತ್ರೀಕರಣ ಗೋವಾದಲ್ಲಿ ನಡೆಯುತ್ತಿದೆ. ಈ ಸಿನಿಮಾದ 65% ಚಿತ್ರೀಕರಣ ಮುಗಿದಿದೆ ಎಂದು ತಂಡ ತಿಳಿಸಿದೆ. ಈ ಚಿತ್ರವನ್ನು ಓಟಿಟಿಯಲ್ಲಿ ಬಿಡುತ್ತಾರೆ ಎಂದು ಕೆಲವರು ಊಹೆಗಳನ್ನು ಮಾಡಿದ್ದರು. ಅದಕ್ಕೆ ಚಿತ್ರತಂಡ ನಮ್ಮ ಸಿನಿಮಾ ಚಿತ್ರಮಂದಿರದಲ್ಲೇ ಬಿಡುಗಡೆಯಾಗುತ್ತೆ ಎಂದು ಹೇಳುವ ಮೂಲಕ ಎಲ್ಲದಕ್ಕೂ ತೆರೆ ಎಳೆದಿದ್ದರು. ಇದನ್ನೂ ಓದಿ:   ಒಳ ಉಡುಪು ಜಾಹೀರಾತಿನಲ್ಲಿ ಅಭಿನಯ – ಟ್ರೋಲ್ ಕೆಂಗಣ್ಣಿಗೆ ಗುರಿಯಾದ ರಶ್ಮಿಕಾ ಮಂದಣ್ಣ

    ಈ ಚಿತ್ರ ಹಿಂದಿ ಮತ್ತು ತೆಲುಗು ಸೇರಿದಂತೆ 5 ಭಾಷೆಗಳಲ್ಲಿ ತೆರೆ ಕಾಣಲಿದೆ. ರಮ್ಯಾ ಕೃಷ್ಣನ್, ಮಕರಂದ್ ದೇಶಪಾಂಡೆ ಮತ್ತು ರೋನಿತ್ ರಾಯ್ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಆಕ್ಷನ್ ಕಟ್ ಹೇಳುತ್ತಿದ್ದು, ತೆಲುಗಿನ ನಟಿ ಚಾರ್ಮಿ, ಕರಣ್ ಜೋಹರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

  • ಐ ಆ್ಯಮ್ ಬ್ಯಾಕ್- 53ರ ‘ಯುವಕ’ ಟೈಸನ್

    ಐ ಆ್ಯಮ್ ಬ್ಯಾಕ್- 53ರ ‘ಯುವಕ’ ಟೈಸನ್

    ವಾಷಿಂಗ್ಟನ್: 80ರ ದಶಕದಲ್ಲಿ ಬಾಕ್ಸಿಂಗ್ ಜಗತ್ತನ್ನು ಆಳಿದ ಬಾಕ್ಸಿಂಗ್ ದಂತಕಥೆ ಮೈಕ್ ಟೈಸನ್ 15 ವರ್ಷಗಳ ನಂತರ ಅಖಾಡಕ್ಕೆ ಮರಳಲಿದ್ದಾರೆ.

    ಮೈಕ್ ಟೈಸನ್ ಅವರು ದೇಣಿಗೆ ನೀಡುವುದಕ್ಕಾಗಿ ಕೆಲವು ಪಂದ್ಯಗಳನ್ನು ಆಡಲಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಬಾಕ್ಸಿಂಗ್ ಅಭ್ಯಾಸದ ವಿಡಿಯೋ ಹಂಚಿಕೊಂಡು, ‘ಐ ಆ್ಯಮ್ ಬ್ಯಾಕ್’ ಎಂದು ಹೇಳಿದ್ದಾರೆ.

    ವಿಡಿಯೋದಲ್ಲಿ ಟೈಸನ್ ಅವರ ಪಂಚಿಂಗ್ ಸ್ಟೈಲ್, ಬಿರುಸಿನ ಹೊಡೆತಗಳನ್ನು ಕಾಣಬಹುದಾಗಿದೆ. ಟೈಸನ್ ಶಕ್ತಿ ಮತ್ತು ವೇಗವನ್ನು ನೋಡಿದರೆ ಅವರು ಇನ್ನೂ ಡಬ್ಲ್ಯೂಬಿಎ, ಡಬ್ಲ್ಯೂಬಿಸಿ ಮತ್ತು ಐಬಿಎಫ್ ಪ್ರಶಸ್ತಿಗಳನ್ನು ಗೆಲ್ಲಲು ಅಭ್ಯಾಸ ಮಾಡುತ್ತಿದ್ದಾರೆ ಎನ್ನುವಂತಿದೆ.

    53 ವರ್ಷದ ಟೈಸನ್ ಅವರು ಚಾರಿಟಿಗಾಗಿ ಹಣವನ್ನು ಠೇವಣಿ ನೀಡಲು ಬಯಸಿದ್ದಾರೆ. ಈ ಹಣದಿಂದ ಮನೆಯಿಲ್ಲದವರಿಗೆ ಮನೆಗಳನ್ನು ನಿರ್ಮಿಸಲು, ಬಡವರಿಗೆ ಸಹಾಯ ಮಾಡಲು ಟೈಸನ್ ಮುಂದಾಗಿದ್ದಾರೆ. ಹೀಗಾಗಿ ಅವರು ಮುಂದಿನ ಪಂದ್ಯಕ್ಕಾಗಿ ನಿರಂತರ ಅಭ್ಯಾಸ ನಡೆಸಿದ್ದಾರೆ. ಟೈಸನ್ ಕೊನೆಯ ಬಾರಿಗೆ ಕೆವಿನ್ ಮೆಕ್‍ಬ್ರೈಡ್ ವಿರುದ್ಧ 2005 ರಲ್ಲಿ ಆಡಿದ್ದರು. ಅವರು ತಮ್ಮ 20 ವರ್ಷಗಳ ವೃತ್ತಿಜೀವನವನ್ನು ಸೋಲಿನೊಂದಿಗೆ ನಿಲ್ಲಿಸಿದ್ದರು. ಈ ಮತ್ತೆ ಕಮ್‍ಬ್ಯಾಕ್ ಮಾಡುತ್ತಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ.

    https://www.instagram.com/p/CADjPgOl_Nw/

    ಟೈಸನ್ 50 ಪಂದ್ಯಗಳನ್ನು 44 ಪಂದ್ಯಗಳಲ್ಲಿ ಗೆದ್ದಿದ್ದಾರೆ. ಅವರನ್ನು ಆಲ್ ಟೈಮ್ ಗ್ರೇಟ್ ಬಾಕ್ಸರ್ ಎಂದು ಕರೆಯಲಾಗುತ್ತದೆ. ಟೈಸನ್ 1986ರಲ್ಲಿ ಅಂದ್ರೆ ತಮ್ಮ 20ನೇ ವಯಸ್ಸಿನಲ್ಲಿ ಟ್ರೆವರ್ ಬೆಬೆರಿಚ್ ಅವರ ದಾಖಲೆಯನ್ನು ಮುರಿದು ವಿಶ್ವದ ಅತ್ಯಂತ ಕಿರಿಯ ಹೆವಿವೇಯ್ಟ್ ಚಾಂಪಿಯನ್ ಎನಿಸಿಕೊಂಡಿದ್ದರು. ಈ ದಾಖಲೆ ಇಂದಿಗೂ ಅವರ ಹೆಸರಿನಲ್ಲೇ ಇದೆ.

  • ಮೈಕ್ ಟೈಸನ್‍ರಿಂದ ಬಾಕ್ಸಿಂಗ್ ಕಲಿಯುತ್ತಿದ್ದಾರೆ ಟೆನ್ನಿಸ್ ತಾರೆ ಸೆರೆನಾ

    ಮೈಕ್ ಟೈಸನ್‍ರಿಂದ ಬಾಕ್ಸಿಂಗ್ ಕಲಿಯುತ್ತಿದ್ದಾರೆ ಟೆನ್ನಿಸ್ ತಾರೆ ಸೆರೆನಾ

    ವಾಷಿಂಗ್ಟನ್: ಟೆನ್ನಿಸ್ ತಾರೆ ಸೆರೆನಾ ವಿಲಿಯಮ್ಸ್ ಜನವರಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲ್ಯಾಮ್‍ಗೆ ಭರ್ಜರಿ ಅಭ್ಯಾಸ ಪ್ರಾರಂಭಿಸಿದ್ದಾರೆ. ಈ ಮಧ್ಯೆ ಅವರು ಅಮೆರಿಕದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್ ಅವರಿಂದ ಬಾಕ್ಸಿಂಗ್ ಕಲಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಅಮೆರಿಕದ ಟೆನ್ನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ವಿವಿಧ ಓಪನ್ ಗ್ರ್ಯಾಂಡ್ ಸ್ಲ್ಯಾಮ್‍ನಲ್ಲಿ ಏಳು ಬಾರಿ ಚಾಂಪಿಯನ್ ಆಗಿದ್ದಾರೆ. ಮುಂದಿನ ವರ್ಷ ಜನವರಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಓಪನ್ ಟೆನ್ನಿಸ್‍ನಲ್ಲಿ ಗೆಲುವು ಸಾಧಿಸಲು ಸಿದ್ಧತೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಅವರಿಗೆ ಪ್ಯಾಟ್ರಿಕ್ ಮೊರಾಟೊಗ್ಲೊ ತರಬೇತಿ ನೀಡುತ್ತಿದ್ದಾರೆ.

    https://twitter.com/MikeTyson/status/1207466348940410880

    ಸೆರೆನಾ ವಿಲಿಯಮ್ಸ್ ಅವರನ್ನು ಈ ಬಾರಿ ವಿಭಿನ್ನವಾಗಿ ಸಿದ್ಧಪಡಿಸುತ್ತಿರುವ ಪ್ಯಾಟ್ರಿಕ್ ಮೊರಾಟೊಗ್ಲೊ, ಬಾಕ್ಸಿಂಗ್ ಕೂಡ ಕಲಿಸುತ್ತಿದ್ದಾರೆ. ಸೆರೆನಾ ಅಮೆರಿಕದ ಶ್ರೇಷ್ಠ ಬಾಕ್ಸರ್ ಮೈಕ್ ಟೈಸನ್ ಅವರೊಂದಿಗೆ ಬಾಕ್ಸಿಂಗ್ ತರಬೇತಿ ಪಡೆದಿದ್ದಾರೆ.

    ಸಾಂಪ್ರದಾಯಿಕ ತರಬೇತಿ ನೀಡಲು ನನಗೆ ಇಷ್ಟವಿಲ್ಲ. ಆದ್ದರಿಂದ ಆಟಗಾರರಿಗಾಗಿ ವಿಶೇಷ ರೀತಿಯಲ್ಲಿ ತರಬೇತಿ ನೀಡುತ್ತಿರುವೆ. ಇದರಲ್ಲಿ ಹಿರಿಯ ಆಟಗಾರರಲ್ಲದೆ ಯುವಕರು ಇದ್ದಾರೆ. ಬಾಕ್ಸಿಂಗ್ ಅಷ್ಟೇ ಅಲ್ಲದೆ ಮನರಂಜನೆ ನೀಡಲಾಗುತ್ತಿದೆ. ಜೊತೆಗೆ ವಿಶ್ವದ ಕ್ರೀಡಾ ದಿಗ್ಗಜರನ್ನು ಕರೆಸಿ ಆಟಗಾರರಿಗೆ ಪ್ರೇರಣೆ ನೀಡಲಾಗುತ್ತಿದೆ ಎಂದು ಪ್ಯಾಟ್ರಿಕ್ ಮೊರಾಟೊಗ್ಲೊ ತಿಳಿಸಿದ್ದಾರೆ.

    ಸೆರೆನಾ ಅತ್ಯಂತ ಯಶಸ್ವಿ ಓಪನ್ ಗ್ರ್ಯಾಂಡ್ ಸ್ಲ್ಯಾಮ್ ಆಟಗಾರ್ತಿ ಆಗಿದ್ದಾರೆ. ಸೆರೆನಾ ಈವರೆಗೂ 7 ಬಾರಿ ಓಪನ್ ಗ್ರ್ಯಾಂಡ್ ಸ್ಲ್ಯಾಮ್‍ನಲ್ಲಿ ಚಾಂಪಿಯನ್ ಆಗಿದ್ದಾರೆ. 2019 ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್ ಸ್ಲ್ಯಾಮ್‍ನಲ್ಲಿ ನವೋಮಿ ಒಸಾಕಾ ಅವರು ಪೆಟ್ರಾ ಕ್ವಿಟೋವಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದರು.