Tag: Mike

  • ಆಜಾನ್ ವಿರುದ್ಧ ಮತ್ತೆ ಸಮರ – 23ರಂದು ರಾಜ್ಯಾದ್ಯಂತ ಹೋರಾಟಕ್ಕೆ ಶ್ರೀರಾಮಸೇನೆ ಕರೆ

    ಆಜಾನ್ ವಿರುದ್ಧ ಮತ್ತೆ ಸಮರ – 23ರಂದು ರಾಜ್ಯಾದ್ಯಂತ ಹೋರಾಟಕ್ಕೆ ಶ್ರೀರಾಮಸೇನೆ ಕರೆ

    ಕಲಬುರಗಿ: ರಾಜ್ಯದಲ್ಲಿ ಸ್ವಲ್ಪ ದಿನ ಬಿಡುವು ನೀಡಿದ್ದ ಆಜಾನ್ ಯುದ್ಧ ಮತ್ತೆ ಸದ್ದು ಮಾಡ್ತಿದೆ. ಮಸೀದಿಗಳು ಧ್ವನಿ ವರ್ಧಕಗಳ ನಿಯಮ ಉಲ್ಲಂಘನೆ ಮಾಡುತ್ತಿದ್ದರೂ ಅವುಗಳ ವಿರುದ್ಧ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಆಜಾನ್ ವಿರುದ್ಧ ಹಿಂದೂ ಸಂಘಟನೆಗಳು ಹೋರಾಟಕ್ಕೆ ನಿರ್ಧರಿಸಿವೆ.

    ಮಸೀದಿ ಧ್ವನಿವರ್ಧಕ ವಿರುದ್ಧ ಆಗಸ್ಟ್ 23ರಂದು, ರಾಜ್ಯಾದ್ಯಂತ ಶ್ರೀರಾಮಸೇನೆ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ಎಲ್ಲಾ ಜಿಲ್ಲೆಯ ಎಸ್‌ಪಿ ಕಚೇರಿಗಳ ಎದುರು ಪ್ರತಿಭಟನೆ ಮಾಡೋದಾಗಿ ಶ್ರೀರಾಮಸೇನೆ ಕರೆ ನೀಡಿದೆ. ಇದನ್ನೂ ಓದಿ: ಇಂಡಿಗೋ ವಿಮಾನದಲ್ಲಿ ಹೊಗೆ ಎಚ್ಚರಿಕೆ – ಕೋಲ್ಕತ್ತಾದಲ್ಲಿ ಲ್ಯಾಂಡಿಂಗ್

    loudspeakers

    ಈ ಕುರಿತು ಮಾತನಾಡಿರುವ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಅವರು, ರಾಜ್ಯದ ಅನೇಕ ಮಸೀದಿಗಳಲ್ಲಿ ಇನ್ನೂ ಅನಧಿಕೃತವಾಗಿ ಆಜಾನ್ ಕೂಗಲು ಮೈಕ್‌ಗಳನ್ನು ಬಳಸಲಾಗುತ್ತಿದೆ. ಸರ್ಕಾರದ ಸುತ್ತೋಲೆಯಂತೆ ಕಡಿಮೆ ಡೆಸಿಬಲ್ ಬಳಸುತ್ತಿಲ್ಲ. ಹೀಗಾಗಿ ಆಗಸ್ಟ್ 23 ರಂದು ಹೋರಾಟದ ಜೊತೆಗೆ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಗ್ನಿಪಥ್ ಪ್ರತಿಭಟನೆಯಲ್ಲಿ ಮೈಕ್ ಭಾಷಣಕ್ಕೆ ಬ್ರೇಕ್ ಹಾಕಿದ ಪೊಲೀಸರು

    ಅಗ್ನಿಪಥ್ ಪ್ರತಿಭಟನೆಯಲ್ಲಿ ಮೈಕ್ ಭಾಷಣಕ್ಕೆ ಬ್ರೇಕ್ ಹಾಕಿದ ಪೊಲೀಸರು

    ಬೀದರ್: ಅಗ್ನಿಪಥ್ ಯೋಜನೆ ವಿರೋಧಿಸಿ ಬೀದರ್‌ನಲ್ಲಿ ಇಂದು ಕಾಂಗ್ರೆಸ್‍ನಿಂದ ಬೃಹತ್ ಧರಣಿ ಸತ್ಯಾಗ್ರಹ ಮಾಡಲಾಗಿತ್ತು. ಧರಣಿ ಸತ್ಯಾಗ್ರಹದ ವೇದಿಕೆಯ ಮೈಕ್ ಭಾಷಣಕ್ಕೆ ಪೊಲೀಸ್ ಇಲಾಖೆ ಅನುಮತಿ ನೀಡದೆ ಬ್ರೇಕ್ ಹಾಕಿದೆ.

    ಸತ್ಯಾಗ್ರಹದಲ್ಲಿ ಕಾಂಗ್ರೆಸ್ ಮುಖಂಡರು ಮೈಕ್‍ನಲ್ಲಿ ಭಾಷಣ ಮಾಡುತ್ತಿದ್ದು, ಈ ವೇಳೆ ಸ್ಥಳಕ್ಕೆ ಬಂದ ಡಿವೈಎಸ್‍ಪಿ ಸತೀಶ್ ಮೈಕ್ ಭಾಷಣಕ್ಕೆ ಬ್ರೇಕ್ ಹಾಕಿದರು. ಡಿವೈಎಸ್‍ಪಿ ಬ್ರೇಕ್ ಹಾಕುತ್ತಿದಂತೆ ಕಾಂಗ್ರೆಸ್ ಮುಖಂಡರು ಮೈಕ್ ಭಾಷಣ ನಿಲ್ಲಿಸಿ, ಸ್ಥಳದಲ್ಲಿದ್ದ ಮೈಕ್ ಹೊತ್ತ ಆಟೋ ಅಲ್ಲಿಂದ ಕಣ್ಮರೆಯಾಯಿತು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಇರೋದು ಮೂರಾಬಟ್ಟೆ ಸರ್ಕಾರ: ಕಾರಜೋಳ

    ಅಗ್ನಿಪಥ್ ಯೋಜನೆ ವಿರೋಧಿಸಿ ಮಾಜಿ ಸಚಿವ ರಹೀಂಖಾನ್ ನೇತೃತ್ವದಲ್ಲಿ ಬೀದರ್‌ನಲ್ಲಿ ಧರಣಿ ಸತ್ಯಾಗ್ರಹ ಮಾಡಿದ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಭಾಲ್ಕಿಯಲ್ಲೂ ಪ್ರತಿಭಟನೆ ಮಾಡಲಾಯಿತು.

    ಕಾಂಗ್ರೆಸ್ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಅಗ್ನಿಪಥ್ ಯೋಜನೆ ವಿರೋಧಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ರು. ಟ್ರೈನಿಂಗ್ ಮಾಡಿ ಬಂದ ಮೇಲೆ ಯುವಕರಿಗೆ ವಾಚ್ ಮ್ಯಾನ್ ಕೆಲಸ ಕೊಡುತ್ತೇವೆ ಎಂದು ಬಿಜೆಪಿ ಹೇಳುತ್ತಿದೆ.

    ಮಿಲಿಟರಿ ಎಂದರೆ ದೇಶದಲ್ಲಿ ಗೌರವವಿದೆ. ಹಿಗಾಗೀ ಅಗ್ನಿಪಥ್ ಯೋಜನೆಯನ್ನು ಈ ಕೂಡಲೇ ಕೇಂದ್ರ ಸರ್ಕಾರ ವಾಪಸ್ ಪಡೆಯಬೇಕು ಎಂದು ರಹೀಂಖಾನ್ ಅವರು ಆಗ್ರಹಿಸಿದರು. ಇದನ್ನೂ ಓದಿ: ಶಿವ ಪೂಜೆಗೆ ಹೋದ ರೌಡಿಯ ಬರ್ಬರ ಹತ್ಯೆ

    Live Tv

  • ಮಸೀದಿಗಳ ಮೈಕ್ ತೆರವಿಗೆ ನಾಳೆಯೇ ಡೆಡ್‍ಲೈನ್ – ದೇಗುಲಗಳಲ್ಲಿ 3 ಬಾರಿ ಮಂತ್ರ ಘೋಷ

    ಮಸೀದಿಗಳ ಮೈಕ್ ತೆರವಿಗೆ ನಾಳೆಯೇ ಡೆಡ್‍ಲೈನ್ – ದೇಗುಲಗಳಲ್ಲಿ 3 ಬಾರಿ ಮಂತ್ರ ಘೋಷ

    ಬೆಂಗಳೂರು: ಹಿಜಬ್, ಹಲಾಲ್, ವ್ಯಾಪಾರ ಬ್ಯಾನ್ ಬಳಿಕ ರಾಜ್ಯದಲ್ಲಿ ಆಜಾನ್ ಗಲಾಟೆ ತಾರಕಕ್ಕೇರಿದೆ. ಆಜಾನ್ ಕೂಗಿಗೆ ಟಾಂಗ್ ನೀಡುವ ನಿಟ್ಟಿನಲ್ಲಿ ನಾಳೆಯಿಂದ ಬೆಳಗ್ಗೆ 5 ಹಿಂದೂ ದೇವಾಲಯಗಳಲ್ಲಿ, ಮಠಗಳಲ್ಲಿ ಹನುಮಾನ್ ಚಾಲೀಸಾ, ಭಜನೆ ಹಾಗೂ ಸುಪ್ರಭಾತವನ್ನು, ಮೈಕ್ ಮೂಲಕ ಪಠಿಸುವ ಆಂದೋಲನಕ್ಕೆ ಶ್ರೀರಾಮ ಸೇನೆ ಮುಂದಾಗಿದೆ. ಈ ಅಭಿಯಾನಕ್ಕೆ ಕೈಜೋಡಿಸುವಂತೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಮನವಿ ಮಾಡುತ್ತಿದ್ದಾರೆ.

    ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯ ಪ್ರಮುಖ ದೇವಸ್ಥಾನ ಮತ್ತು ಮಠಗಳಿಗೆ ಭೇಟಿ ನೀಡಿದ ಶ್ರೀರಾಮಸೇನೆ ಸದಸ್ಯರು ಬೆಳಗ್ಗಿನ ಜಾವ ದೇವಸ್ಥಾನ ಮತ್ತು ಮಠದ ಮೈಕ್‍ನಲ್ಲಿ ಸುಪ್ರಭಾತ, ಹನುಮಾನ್ ಚಾಲೀಸಾ, ಭಕ್ತಿಗೀತೆಗಳನ್ನು ಹಾಕುವಂತೆ ಮನವಿ ಪತ್ರ ನೀಡುತ್ತಿದ್ದಾರೆ. ಹಾಸನದಲ್ಲೂ ಅಭಿಯಾನಕ್ಕೆ ಕೈ ಜೋಡಿಸಲಿದ್ದು, ಪ್ರತಿನಿತ್ಯ ಮೈಕ್ ಮೂಲಕ ಭಜನೆ ಮಾಡುವುದಾಗಿ ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಜಾನೆಕೆರೆ ಹೇಮಂತ್ ತಿಳಿಸಿದರು. ಇದನ್ನೂ ಓದಿ: ಪಬ್ಲಿಕ್ ಟಿವಿಯ ನಮ್ಮ ಮನೆ ಎಕ್ಸ್‌ಪೋಗೆ ಸಖತ್ ಸ್ಪಂದನೆ – ಇಂದೇ ಕಡೇ ದಿನ, ತಪ್ಪದೇ ಬನ್ನಿ

    ಇತ್ತ ಆಜಾನ್ ವಿರುದ್ಧ ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸಾ ಹಾಗೂ ಭಕ್ತಿಗೀತೆ ಮೊಳಗಿಸುವ ಅಭಿಯಾನಕ್ಕೆ ಧಾರವಾಡದಲ್ಲಿ ಬೆಂಬಲ ವ್ಯಕ್ತವಾಗಿದೆ. ಧಾರವಾಡ ನಗರದ ಲೈನ್ ಬಜಾರ್ ಹನುಮಾನ್ ದೇವಸ್ಥಾನ, ನಗರದ ತುಳಜಾ ಭವಾನಿ ದೇವಸ್ಥಾನ, ಶಿವಾಲಯ, ದತ್ತಾತ್ರೇಯ ದೇವಸ್ಥಾನ ಸೇರಿ ಹಲವು ದೇವಸ್ಥಾನ ಕಮಿಟಿಯವರು ನಿರ್ಧರಿಸಿದ್ದಾರೆ.

    ಉಡುಪಿಯಲ್ಲೂ ಆಜಾನ್ ವರ್ಸಸ್ ಹನುಮಾನ್ ಚಾಲೀಸಾಗೆ ಬೆಂಬಲ ಸೂಚಿಸಲಾಗಿದೆ. ಒಟ್ಟಿನಲ್ಲಿ ನಾಳೆಯಿಂದ ಮೈಕ್ ವರ್ಸಸ್ ಹನುಮಾನ್ ಚಾಲೀಸಾ ದಂಗಲ್ ಜೋರಾಗಲಿದ್ದು, ಮತ್ತೊಂದು ಆಯಾಮದಲ್ಲಿ ಧರ್ಮ ಸಂಘರ್ಷಕ್ಕೆ ನಾಂದಿ ಹಾಡಲಿದೆ.

  • ಮೈಕ್ ತೆಗೆಸದಿದ್ದರೆ, ನಾವೂ ಬೆಳಗ್ಗೆ 5ಕ್ಕೆ ಮಂದಿರಗಳಲ್ಲಿ ಈಶ್ವರನ ಭಜನೆ, ಓಂಕಾರ ಹಾಕಿಸುತ್ತೇವೆ: ಮುತಾಲಿಕ್

    ಮೈಕ್ ತೆಗೆಸದಿದ್ದರೆ, ನಾವೂ ಬೆಳಗ್ಗೆ 5ಕ್ಕೆ ಮಂದಿರಗಳಲ್ಲಿ ಈಶ್ವರನ ಭಜನೆ, ಓಂಕಾರ ಹಾಕಿಸುತ್ತೇವೆ: ಮುತಾಲಿಕ್

    ಧಾರವಾಡ: ಮಸೀದಿಗಳಲ್ಲಿ ಹಾಕಿರುವ ಧ್ವನಿವರ್ಧಕ ತೆಗೆಯದಿದ್ದರೆ ನಾವೂ ಬೆಳಗ್ಗೆ 5ಕ್ಕೆ ಮಂದಿರಗಳಲ್ಲಿ ಈಶ್ವರನ ಭಜನೆ, ಓಂಕಾರ ಹಾಕಿಸುತ್ತೇವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

    6 ತಿಂಗಳ ಹಿಂದೆ ನಮ್ಮ ಸಂಘಟನೆಯೂ ಮೈಕ್ ಬಗ್ಗೆ ಮನವಿ ಮಾಡಿತ್ತು. ಸುಪ್ರೀಂಕೋರ್ಟ್ ತೀರ್ಪಿನ ಆಧಾರದ ಮೇಲೆ ನಡೆದುಕೊಳ್ಳಲು ಕೇಳಿದ್ದೇವೆ. ಬೆಳಗ್ಗೆ 5 ಗಂಟೆಗೆ ಲೌಡ್ ಸ್ಪೀಕರ್ ಹಾಕುವುದನ್ನು ತಡೆಯಲು ಮನವಿ ಮಾಡಿದ್ದೆವು. ಮೊದಲು ತಹಸೀಲ್ದಾರರಿಗೆ ಮನವಿ ಮಾಡಿದ್ದೆವು. ಆದರೆ ಎಲ್ಲಿಯೂ ತಹಸೀಲ್ದಾರರು ಕ್ರಮ ಕೈಗೊಳ್ಳಲಿಲ್ಲ. ಧ್ವನಿ ಮಾಲಿನ್ಯ ಆಗುತ್ತಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಗೂ ಮನವಿ ಮಾಡಿದ್ದೆವು. ಆದರೂ ಪ್ರಯೋಜನವಾಗಲಿಲ್ಲ ಎಂದರು. ಇದನ್ನೂ ಓದಿ: ಅಲ್ಲಾಹು ಅಕ್ಬರ್ ಎಂದು ಕೂಗುತ್ತ ಗೋರಖ್‍ನಾಥ ದೇವಾಲಯ ಪ್ರವೇಶಿಸಲು ಯತ್ನಿಸಿದ್ದ ಯುವಕ ಬಂಧನ

    ಇದೀಗ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುತ್ತೇವೆ. ಕೊನೆಯ ಎಚ್ಚರಿಕೆಯಾಗಿ ಮನವಿ ಸಲ್ಲಿಸುತ್ತಿದ್ದೇವೆ. ಕೋರ್ಟ್ ಆದೇಶ ಪಾಲಿಸಲು ಮುಸ್ಲಿಂ ಸಮಾಜಕ್ಕೆ ಸರ್ಕಾರ ಹೇಳಬೇಕು. ಅವರ ಪ್ರಾರ್ಥನೆಗೆ ನಮ್ಮ ವಿರೋಧ ಇಲ್ಲ. ಆದರೆ ಧ್ವನಿವರ್ಧಕಗಳ ಬಳಕೆಗೆ ವಿರೋಧ ಇದೆ. ಇದರಿಂದ ಸಾಕಷ್ಟು ಜನರಿಗೆ ತೊಂದರೆಯಾಗುತ್ತಿದೆ ಎಂದರು.

    ಇದರ ಬಗ್ಗೆ ಕೋರ್ಟ್ ಆದೇಶವಿದ್ದರೂ ಅವರು ಪಾಲಿಸುತ್ತಿಲ್ಲ. ಇದರಿಂದ ಲಕ್ಷಾಂತರ ಜನರಿಗೆ ತೊಂದರೆಯಾಗಿದೆ. ರಾತ್ರಿ 10ರಿಂದ ಬೆಳಗ್ಗೆ 6 ಗಂಟೆ ವರೆಗೆ ಧ್ವನಿ ವರ್ಧಕ ಬಳಸುವಂತಿಲ್ಲ. ಕೋರ್ಟ್ ಇದನ್ನು ಸ್ಪಷ್ಟವಾಗಿ ಹೇಳಿದೆ. ನಿಶಬ್ಧ ವಲಯ ಎಂದು ಸರ್ಕಾರ ಗುರುತಿಸಿದ ಜಾಗದಲ್ಲೂ ಕೋರ್ಟ್ ಆದೇಶ ಪಾಲನೆಯಾಗುತ್ತಿಲ್ಲ ಎಂದರು. ಇದನ್ನೂ ಓದಿ: ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧ: ವಕ್ಫ್ ಮಂಡಳಿಯ ಸುತ್ತೋಲೆಯಲ್ಲಿ ಏನಿದೆ? ಸುಪ್ರೀಂ ಕೋರ್ಟ್ ಹೇಳಿದ್ದೇನು?

    ಈಗ ಮಹಾರಾಷ್ಟ್ರದಲ್ಲಿ ರಾಜ್ ಠಾಕ್ರೆ ಧ್ವನಿ ಎತ್ತಿದ್ದಾರೆ. ಇದಕ್ಕೆ ನಾವು ಬೆಂಬಲ ಕೊಡುತ್ತೇವೆ. ಸರ್ಕಾರ ಈ ಲೌಡ್‌ಸ್ಪೀಕರ್ ನಿಲ್ಲಿಸಬೇಕು. ಮಸೀದಿಯಲ್ಲಿ ಮೈಕ್ ನಿಲ್ಲಿಸಲಾಗದ ಸರ್ಕಾರ ಹೇಡಿ ಸರ್ಕಾರ. ನಾವೂ ಇನ್ನು ಬೆಳಗ್ಗೆ 5 ಗಂಟೆಗೆ ಮಂದಿರ, ಮಠಗಳಲ್ಲಿ ಮೈಕ್ ಅಳವಡಿಸಿ ರಾಮ, ಈಶ್ವರನ ಭಜನೆ, ಓಂಕಾರ ಹಾಕುತ್ತೇವೆ ಎಂದರು.

  • ಮಾತುಗಾರ ಮಂಜು ಬಾಯಿಗೆ ಪ್ಲಾಸ್ಟರ್ ಹಾಕಿದ ಬಿಗ್‍ಬಾಸ್!

    ಮಾತುಗಾರ ಮಂಜು ಬಾಯಿಗೆ ಪ್ಲಾಸ್ಟರ್ ಹಾಕಿದ ಬಿಗ್‍ಬಾಸ್!

    ಮಾತು ಬಲ್ಲವನಿಗೆ ಜಗಳವಿಲ್ಲ, ಊಟಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಮಾತನ್ನು ನಾವೆಲ್ಲ ಕೇಳಿರಬಹುದು. ಹಾಗೆಯೇ ಬಿಗ್‍ಬಾಸ್ ಮನೆಯಲ್ಲಿ ಹೆಚ್ಚಾಗಿ ಯಾರು ಮಾತನಾಡುತ್ತಾರೆ ಎಂದು ಕೇಳಿದರೆ ಅದು ಮಂಜು ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಸದ್ಯ ಬಿಗ್‍ಬಾಸ್.. ದೊಡ್ಮನೆ ಸದಸ್ಯರಿಗೆ ಮಾತುಗಾರ ಎಂಬ ಚಟುವಟಿಕೆಯೊಂದನ್ನು ನೀಡಿದ್ದರು. ಅದರ ಅನುಸಾರ ಮನೆಯ ಎಲ್ಲ ಸದಸ್ಯರು ಇಡೀ ಮನೆಯಲ್ಲಿ ಹೆಚ್ಚಾಗಿ ಮಾತನಾಡುವ ಸದಸ್ಯರನ್ನು ಆರಿಸಿ ಪ್ಲಾಸ್ಟರ್ ಬ್ಯಾಡ್ಜ್‍ನನ್ನು ನೀಡಬೇಕು ಹಾಗೂ ಅತೀ ಕಡಿಮೆ ಮಾತನಾಡುವ ಸದಸ್ಯರಿಗೆ ಮೈಕ್ ಬ್ಯಾಡ್ಜ್ ನನ್ನು ನೀಡಬೇಕು ಎಂದು ಸೂಚಿಸಿದ್ದರು.

    ಈ ಚಟುವಟಿಕೆ ಆರಂಭಿಸಿದ ನಿಧಿ, ಮಂಜು ಮಾತೆಂದರೆ ನನಗೆ ಬಹಳ ಇಷ್ಟ. ಆದರೆ ಒಮ್ಮೊಮ್ಮೆ ಅವರ ಮಾತು ನನಗೆ ತಲೆನೋವು ಬರಿಸುತ್ತದೆ ಅಂತಾರೆ. ಇನ್ನು ನೋವಿಗೆ ಸ್ಪಂದಿಸುವ ಹಾಗೂ ಎಲ್ಲರನ್ನು ಮಾತಿನ ಮೂಲಕ ಆಕರ್ಷಿಸುವ ವ್ಯಕ್ತಿ ಮಂಜು ಎಂದು ಶಂಕರ್ ಹೇಳುತ್ತಾರೆ. ನಂತರ ಪ್ರಶಾಂತ್ ಸಂಬರ್ಗಿ ಮಾತು ಬೆಳ್ಳಿ, ಮೌನ ಚಿನ್ನ ಆದರೆ ಮಾತು ಹೆಚ್ಚಾದರೆ ಗಾರ್ಬೆಜ್ ಎಂದು ಹೇಳಿ ಪ್ಲಾಸ್ಟರ್ ನೀಡುತ್ತಾರೆ. ಮಂಜು ಮಾತನಾಡುವಾಗ ಸ್ವಲ್ಪ ವಾಲ್ಯೂಮ್ ಕಡಿಮೆ ಮಾಡಿಕೊಂಡರೆ ಒಳ್ಳೆಯದು ಅಂತ ಶಮಂತ್ ಹೇಳಿದರೆ, ಅರವಿಂದ್.. ನಿದ್ರೆಯ ಗೋರಕೆಯಲ್ಲಿ ಮಾತನಾಡುವ ವ್ಯಕ್ತಿ ಅಂದರೆ ಅದು ಮಂಜು ಅಂತ ಸೂಚಿಸುತ್ತಾರೆ. ಹೀಗೆ ವೈಷ್ಣವಿ ಸೇರಿದಂತೆ ಮನೆಯ ಬಹುತೇಕ ಮಂದಿ ಮಂಜುರನ್ನು ಮಾತುಗಾರ ಎಂದು ಸೂಚಿಸಿ ಪ್ಲಾಸ್ಟರ್ ನೀಡುತ್ತಾರೆ.

    ಮನೆಯಲ್ಲಿ ಕಡಿಮೆ ಮಾತನಾಡುವ ವ್ಯಕ್ತಿ ಎಂದರೆ ವೈಷ್ಣವಿ ಅವರು ಹೆಚ್ಚಾಗಿ ಮಾತನಾಡಬೇಕು ಎಂದು ದಿವ್ಯಾ ಸುರೇಶ್, ಶಂಕರ್, ಶಮಂತ್, ಶುಭ ಹೀಗೆ ಮನೆಯ ಹೆಚ್ಚಿನ ಮಂದಿ ಸೂಚಿಸುತ್ತಾರೆ.

    ಹೀಗೆ ಮನೆಯಲ್ಲಿ ಹೆಚ್ಚು ಮಾತನಾಡುವ ಸದಸ್ಯ ಮಂಜುಗೆ ಪ್ಲಾಸ್ಟರ್ ಬ್ಯಾಡ್ಜ್ ದೊರೆತ ಹಿನ್ನೆಲೆ ನಿನ್ನೆ ಬಿಗ್‍ಬಾಸ್ ತಮ್ಮ ಮುಂದಿನ ಆದೇಶದವರೆಗೂ ಮಂಜು ಮಾತನಾಡುವಂತಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ ತಾವು ಏನೇ ಮಾತನಾಡಬೇಕದರೂ ನೇರವಾಗಿ ಮಾತನಾಡದೇ ವೈಷ್ಣವಿ ಮೂಲಕವೇ ಮಾತನಾಡಬೇಕೆಂದು ಹೇಳಿದರು. ಜೊತೆಗೆ ವೈಷ್ಣವಿಯೊಂದಿಗೆ ಕೂಡ ಪದ ಬಳಕೆ ಮಾಡದೇ ಸನ್ನೆ, ಮೂಕ ಅಭಿನಯ, ನಟನೆಯೊಂದಿಗೆ ಅರ್ಥಮಾಡಿಸಬೇಕು ಎಂದು ತಿಳಿಸಿದರು. ಇದನ್ನು ಕೇಳಿದ ಮನೆಯ ಸದಸ್ಯರು ಹೊಟ್ಟೆ ಬಿರಿಯುಷ್ಟು ನಗುತ್ತಾ ಎಂಜಾಯ್ ಮಾಡಿದರು.

    ಒಟ್ಟಾರೆ ಪಟಾಕಿಯಂತೆ ಯಾವಾಗಲೂ ಮಾತನಾಡುತ್ತಿದ್ದ ಮಂಜು ಬಾಯಿಗೆ ಬಿಗ್‍ಬಾಸ್ ಬೀಗ ಹಾಕಿದ್ದಾರೆ ಎಂದರೆ ತಪ್ಪಾಗಲಾರದು.

  • ನಳಿನ್ ಕುಮಾರ್ ಕಟೀಲ್ ಮತ್ತು ಮೈಕ್ ಮಹಿಮೆ!

    ನಳಿನ್ ಕುಮಾರ್ ಕಟೀಲ್ ಮತ್ತು ಮೈಕ್ ಮಹಿಮೆ!

    ಬೆಂಗಳೂರು: ಮೈಕ್‍ಗೂ ನಳಿನ್ ಕುಮಾರ್ ಕಟೀಲ್‍ಗೂ ಏನೋ ಒಂಥರಾ ಅಟ್ಯಾಚ್ಮೆಂಟ್ ಅನ್ಸುತ್ತೆ. ಆಗಾಗ್ಗೆ ಮೈಕ್ ವಿಚಾರಕ್ಕೆ ಕಟೀಲ್ ಸ್ವಲ್ಪ ಗಮನ ಸೆಳೆಯುತ್ತಾರೆ. ಇಂದು ಬೆಂಗಳೂರಿನಲ್ಲೂ ಮೈಕ್ ವಿಚಾರಕ್ಕೆ ಕಟೀಲ್ ಎಲ್ಲರ ನಗುವಿಗೆ ಕಾರಣಕರ್ತರಾದ್ರು. ಬೆಂಗಳೂರಲ್ಲಿ ನಡೆದ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮೈಕ್ ಹಿಡಿದ ಕಟೀಲ್ ಹೇಳಿದ್ದನ್ನು ಕೇಳಿದ್ರೆ ನಗು ಉಕ್ಕಿಬಾರದೇ ಇರದು.

    ಬಸವನಗುಡಿಯ ಮರಾಠ ಭವನದಲ್ಲಿ ಬೆಂಗಳೂರು ನಗರ ಜಿಲ್ಲೆಯ ದಕ್ಷಿಣ ಭಾಗದ ಜಿಲ್ಲಾಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭ ಇತ್ತು. ಸಮಾರಂಭದಲ್ಲಿ ಭಾಗವಹಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಲು ಪೋಡಿಯಂ ಮುಂದೆ ಬಂದು ನಿಂತ್ರು. ಪೋಡಿಯಂನಲ್ಲಿದ್ದ ಮೈಕ್ ಆಗಾಗ್ಗೆ ಕೆಳಭಾಗಕ್ಕೆ ಬಾಗುತ್ತಿತ್ತು. ಅದನ್ನ ಮತ್ತೆ ಮತ್ತೆ ಮೇಲೆತ್ತಲು ಪ್ರಯತ್ನಿಸಿದ ಕಟೀಲ್ ವೇದಿಕೆ ಮೇಲಿದ್ದವರನ್ನ ನೋಡಿ ನಕ್ಕರು. ಅದೇಕೋ ಈ ಮೈಕ್ ಸ್ವಲ್ಪ ನನ್ನ ಥರಾನೇ ಅಂತ ಹೇಳಿದ್ದೆ ತಡ, ಇಡೀ ಸಭೆ ನಗೆಗಡಲಿಲ್ಲ ತೇಲಿತ್ತು.

    ಅಂದಹಾಗೆ ಕಟೀಲ್ ಮತ್ತು ಮೈಕ್ ನಡುವಿನ ಅಟ್ಯಾಚ್ಮೆಂಟ್ ಇಂದು ಹೊಸದೇನಲ್ಲ. 2019ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿಯೂ ಕಟೀಲ್ ಮೈಕ್ ಹಿಡಿದು ಮತ ಕೇಳಿದ್ದರು. ಮೈಕನ್ನೇ ನಿಮ್ಮ ಕಾಲು ಅಂತ ತಿಳಿದುಕೊಂಡು ನಮಸ್ಕರಿಸುತ್ತೇನೆ, ನನಗೆ ಮತ ಹಾಕಿ ಎಂದು ಪ್ರಚಾರ ಮಾಡಿದ್ದರು. ಇದು ಅವತ್ತಿನ ಮಟ್ಟಿಗೆ ದೊಡ್ಡ ಮಟ್ಟದ ಟ್ರೋಲ್ ಆಗಿತ್ತು.

  • ಭಾಷಣ ಆರಂಭಕ್ಕೂ ಮುನ್ನ ಅರೆಕ್ಷಣ ಬೆಚ್ಚಿ ಬಿದ್ದ ರಾಹುಲ್ ಗಾಂಧಿ

    ಭಾಷಣ ಆರಂಭಕ್ಕೂ ಮುನ್ನ ಅರೆಕ್ಷಣ ಬೆಚ್ಚಿ ಬಿದ್ದ ರಾಹುಲ್ ಗಾಂಧಿ

    ಚಿಕ್ಕಬಳ್ಳಾಪುರ: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಭಾಷಣ ಆರಂಭಕ್ಕೂ ಮುನ್ನ ಅರೆಕ್ಷಣ ಬೆಚ್ಚಿಬಿದ್ದಿದ್ದಾರೆ.

    ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರಕ್ಕಾಗಿ ರಾಹುಲ್ ಗಾಂಧಿ ಅವರು ಜಿಲ್ಲೆಯ ಗೌರಿಬಿದನೂರು ಪಟ್ಟಣಕ್ಕೆ ಬಂದಿದ್ದರು. ನಗರದ ಗಾಂಧಿ ವೃತ್ತದಲ್ಲಿ ಸಮಾವೇಶದಲ್ಲಿ ರಾಹುಲ್ ಗಾಂಧಿ ಭಾಷಣ ಮಾಡುವಾಗ ಧ್ವನಿವರ್ಧಕದ ಕರ್ಕಶ ಶಬ್ದಕ್ಕೆ ಅರೆಕ್ಷಣ ಬೆಚ್ಚಿಬಿದ್ದಾರೆ.

    ರಾಹುಲ್ ಗಾಂಧಿ ಭಾಷಣ ಆರಂಭಿಸುವಾಗ ಮೈಕ್ ಕೈಕೊಟ್ಟಿದೆ. ನಂತರ ಧ್ವನಿವರ್ಧಕದಿಂದ ದಿಢೀರ್ ಬಂದ ಕರ್ಕಶ ಶಬ್ದದಿಂದ ಅವರು ಅರೆಕ್ಷಣ ಬೆಚ್ಚಿದ್ದಾರೆ. ಕರ್ಕಶ ಧ್ವನಿ ನಿಂತ ನಂತರ ರಾಹುಲ್ ಗಾಂಧಿ ನಗುಮುಖದಿಂದ ನಮಸ್ಕಾರ ಎಂದು ಭಾಷಣ ಆರಂಭಿಸಿದ್ದಾರೆ.

    ರಾಹುಲ್ ಗಾಂಧಿ ಇಂದು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ಪಟ್ಟಣದಲ್ಲಿ ರೋಡ್ ಶೋ ನಡೆಸಿದರು. ಕಾಂಗ್ರೆಸ್ ಅಭ್ಯರ್ಥಿ ಎನ್.ಎಚ್ ಶಿವಶಂಕರರೆಡ್ಡಿ ಪರವಾಗಿ ರೋಡ್ ಶೋ ನಡೆಸಿದ್ದು, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಸಂಸದ ಮೊಯಿಲಿ ರಾಹುಲ್ ಗಾಂಧಿಗೆ ಸಾಥ್ ನೀಡಿದರು. ಬಸವಣ್ಣನವರ ವಚನದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ನುಡಿದಂತೆ ನಡೆದ ಸರ್ಕಾರ ಎಂದು ಹೊಗಳಿದರು.

  • ಕದ್ರಿ ದೇವಸ್ಥಾನದ ಧ್ವನಿವರ್ಧಕದಲ್ಲಿ ಶ್ಲೋಕ ನಿಲ್ಲಿಸಲು ಸಿದ್ಧತೆ- ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ

    ಕದ್ರಿ ದೇವಸ್ಥಾನದ ಧ್ವನಿವರ್ಧಕದಲ್ಲಿ ಶ್ಲೋಕ ನಿಲ್ಲಿಸಲು ಸಿದ್ಧತೆ- ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ

    ಮಂಗಳೂರು: ಅನ್ಯಧರ್ಮೀಯರೊಬ್ಬರ ಮನವಿ ಮೇರೆಗೆ ಮಂಗಳೂರಿನ ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಧ್ವನಿವರ್ಧಕದಲ್ಲಿ ಹಾಕುವ ಶ್ಲೋಕವನ್ನು ನಿಲ್ಲಿಸಲು ಸಿದ್ಧತೆ ನಡೆಸುತ್ತಿರೋದು ಬೆಳಕಿಗೆ ಬಂದಿದೆ.

    ನಗರದ ಕದ್ರಿ ದೇವಸ್ಥಾನದಲ್ಲಿ ವಿಶೇಷ ದಿನಗಳಲ್ಲಿ ಶ್ಲೋಕ ಮತ್ತು ಭಕ್ತಿಗೀತೆಗಳನ್ನು ಹಾಕುತ್ತಿದ್ದು, ಇದರಿಂದ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ನಿವಾಸಿ ಬ್ಲೇನಿ ಡಿಸೋಜಾ ಮಂಗಳೂರು ಮೇಯರ್ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಿಗೆ ಮನವಿ ಮಾಡಿದ್ದಾರೆ. ದೇವಸ್ಥಾನದ ಧ್ವನಿವರ್ಧಕದಿಂದ ಸ್ಥಳೀಯ ಫ್ಲ್ಯಾಟ್ ಗಳಲ್ಲಿ ನೆಲೆಸುವವರಿಗೆ ತೊಂದರೆಯಾಗುತ್ತಿದ್ದು, ದೇವಸ್ಥಾನದ ಒಳಭಾಗಕ್ಕೆ ಕೇಳಿಸುವಂತೆ ಮಾತ್ರ ಹಾಕಲು ಮನವಿ ಮಾಡಿದ್ದಾರೆ ಎನ್ನಲಾಗಿದೆ.

    ಆರು ತಿಂಗಳ ಹಿಂದೆ ಬ್ಲೇನಿ ಡಿಸೋಜಾ ಸೇರಿದಂತೆ ಕೆಲವರು ಸಲ್ಲಿಸಿದ್ದ ಮನವಿಗೆ ಇದೀಗ ಮುಜರಾಯಿ ಇಲಾಖೆಯಿಂದ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗೆ ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ಇದು ಹಿಂದೂ ಸಂಘಟನೆಗಳನ್ನು ಕೆರಳಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

    ಜನರ ಶ್ರದ್ಧಾ ಭಕ್ತಿಯ ಕೇಂದ್ರವಾದ ಕದ್ರಿಯ ದೇವಸ್ಥಾನದಲ್ಲಿ ಹಾಕುವ ಶ್ಲೋಕ, ಭಕ್ತಿಗೀತೆಗಳಿಗೆ ಕಡಿವಾಣ ಹಾಕುವ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದೆ. ಅನ್ಯಧರ್ಮೀಯರ ಮನವಿಗೆ ಸ್ಪಂದಿಸಿ ಧ್ವನಿವರ್ಧಕದಲ್ಲಿ ಹಾಕುವ ಭಕ್ತಿ ಗೀತೆಗಳನ್ನು ನಿಲ್ಲಿಸಿದ್ರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದೆ. ಮಾತ್ರವಲ್ಲ ಚರ್ಚ್, ಮಸೀದಿಗಳಲ್ಲಿ ಹಾಕುವ ಧ್ವನಿವರ್ಧಕಗಳಿಗೂ ಕಡಿವಾಣ ಹಾಕಿ ಎಂಬ ಆಗ್ರಹ ಸಾಮಾಜಿಕ ಜಾಲತಣಗಳಲ್ಲಿ ಆರಂಭಗೊಂಡಿದೆ.

  • ಮೈಕ್ ಎಂದುಕೊಂಡು ಟಾರ್ಚ್ ಹಿಡಿದು ಮಮತಾ ಭಾಷಣ – ವಿಡಿಯೋ ವೈರಲ್

    ಮೈಕ್ ಎಂದುಕೊಂಡು ಟಾರ್ಚ್ ಹಿಡಿದು ಮಮತಾ ಭಾಷಣ – ವಿಡಿಯೋ ವೈರಲ್

    ಕೊಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೈಕ್ ಬದಲು ಟಾರ್ಚ್ ಹಿಡಿದುಕೊಂಡು ಭಾಷಣ ಮಾಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡುವಾಗ ಈ ಎಡವಟ್ಟಾಗಿದ್ದು, ಮೈಕ್ ಎಂದು ಟಾರ್ಚ್ ಹಿಡಿದು ಸುಮಾರು 16 ಸೆಕೆಂಡ್ ಮಮತಾ ಮಾತನಾಡಿದ್ದಾರೆ.

    ಆಗಿದ್ದು ಏನು?
    ಟಿಎಂಸಿ ಕಾರ್ಯಕ್ರಮದಲ್ಲಿ ಮಮತಾ ಬ್ಯಾನರ್ಜಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ cordless mic ಬಳಸಲಾಗುತಿತ್ತು. ಮಮತಾ ಭಾಷಣ ಮಾಡುವುದಕ್ಕೂ ಮೊದಲು ಅವರ ಸಹಾಯಕರು ಟಾರ್ಚ್ ಹಿಡಿದು ನಿಂತಿದ್ದರು. ತಮ್ಮ ಭಾಷಣದ ಸರದಿ ಬಂದಾಗ ಮಮತಾ ನೇರವಾಗಿ ಸಹಾಯಕರ ಬಳಿ ತೆರಳಿ ಟಾರ್ಚ್ ಪಡೆದು ಮಾತನಾಡಲು ಆರಂಭಿಸಿದ್ದಾರೆ.

    ಈ ಸಂದರ್ಭದಲ್ಲಿ ಅವರ ಮುಖದ ಮೇಲೆ ಟಾರ್ಚ್ ಬೆಳಕು ಬಿದ್ದಿದೆ. ಮಮತಾರ ಈ ಎಡವಟ್ಟನ್ನು ನೋಡಿದ ಕೂಡಲೇ ನಂತರ ಬೇರೊಬ್ಬ ವ್ಯಕ್ತಿ ಟಾರ್ಚ್ ವಾಪಸ್ ಪಡೆದುಕೊಂಡು ಮೈಕ್ ಕೊಟ್ಟಿದ್ದಾರೆ. ಬಳಿಕ ಮಮತಾ ಭಾಷಣ ಮುಂದುವರಿಸಿದ್ದಾರೆ.

    https://www.youtube.com/watch?v=wQP125OWayE