Tag: MIG 21

  • ಮಿಗ್ -21 ತ್ರಿವರ್ಣ ಧ್ವಜದ ಗೌರವ ಹೆಚ್ಚಿಸಿದೆ: ರಾಜನಾಥ್ ಸಿಂಗ್

    ಮಿಗ್ -21 ತ್ರಿವರ್ಣ ಧ್ವಜದ ಗೌರವ ಹೆಚ್ಚಿಸಿದೆ: ರಾಜನಾಥ್ ಸಿಂಗ್

    – ಇದು ಫೈಟರ್‌ಜೆಟ್ ಅಲ್ಲ, ನಮ್ಮ ಕುಟುಂಬದ ಸದಸ್ಯ
    – ಯುದ್ಧ ವಿಮಾನಕ್ಕೆ ಭಾವನಾತ್ಮಾಕ ವಿದಾಯ ಹೇಳಿದ ರಕ್ಷಣಾ ಸಚಿವ

    ಚಂಡೀಗಢ: ಭಾರತೀಯ ವಾಯುಸೇನೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿರುವ ಮಿಗ್-21 (MiG-21) ಯುದ್ಧ ವಿಮಾನ (Fighter Jet) ಹಲವಾರು ವೀರ ಕಾರ್ಯಗಳಿಗೆ ಸಾಕ್ಷಿಯಾಗಿದೆ. 1971ರ ಯುದ್ಧ, ಕಾರ್ಗಿಲ್ ಯುದ್ಧ, ಬಾಲಕೋಟ್ ವೈಮಾನಿಕ ದಾಳಿ ಮತ್ತು ಆಪರೇಷನ್ ಸಿಂಧೂರದಲ್ಲಿಯೂ ಸಹ ಫೈಟರ್ ಜೆಟ್ ನಿರ್ಣಾಯಕ ಪಾತ್ರ ವಹಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಹೇಳಿದರು.

    ಮಿಗ್-21 ಯುದ್ಧ ವಿಮಾನದ ವಿದಾಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಿಗ್ 21 ನಮ್ಮ ಸಶಸ್ತ್ರ ಪಡೆಗಳಿಗೆ ಅಗಾಧ ಶಕ್ತಿಯನ್ನು ಒದಗಿಸದ ಒಂದು ಕ್ಷಣವೂ ಇರಲಿಲ್ಲ. ಐತಿಹಾಸಿಕ ಕಾರ್ಯಾಚರಣೆಗಳು ನಡೆದಾಗಲೆಲ್ಲಾ, ಮಿಗ್ -21 ತ್ರಿವರ್ಣ ಧ್ವಜದ ಗೌರವವನ್ನು ಹೆಚ್ಚಿಸಿದೆ. ಆದ್ದರಿಂದ, ಈ ವಿದಾಯವು ನಮ್ಮ ಸಾಮೂಹಿಕ ನೆನಪುಗಳು, ನಮ್ಮ ರಾಷ್ಟ್ರೀಯ ಹೆಮ್ಮೆ ಮತ್ತು ಧೈರ್ಯ, ತ್ಯಾಗ ಮತ್ತು ಶ್ರೇಷ್ಠತೆಯ ಕಥೆಯನ್ನು ಬರೆದ ಆ ಪ್ರಯಾಣದ ಬಗ್ಗೆಯೂ ಆಗಿದೆ ಎಂದರು. ಇದನ್ನೂ ಓದಿ: ಬಿಹಾರ ಚುನಾವಣೆಗೂ ಮುನ್ನವೇ ಭರ್ಜರಿ ಗಿಫ್ಟ್‌ – 75 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಲಾ 10,000 ರೂ. ವರ್ಗಾವಣೆ

    ಮಿಗ್-21 ದೇಶದ ನೆನಪುಗಳು ಮತ್ತು ಭಾವನೆಗಳಲ್ಲಿ ಆಳವಾಗಿ ಹುದುಗಿದೆ. 1963ರಲ್ಲಿ ಸೇನೆಗೆ ಸೇರ್ಪಡೆಯಾದಾಗಿನಿಂದ ಈ ವಿಮಾನವು ಆರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದೆ. ನಮಗೆಲ್ಲರಿಗೂ ಇದು ಕೇವಲ ಫೈಟರ್ ಜೆಟ್ ಅಲ್ಲ, ಬದಲಾಗಿ ನಾವು ಆಳವಾದ ಬಾಂಧವ್ಯ ಹೊಂದಿರುವ ಕುಟುಂಬ ಸದಸ್ಯ. ಮಿಗ್-21 ನಮ್ಮ ವಿಶ್ವಾಸವನ್ನು ರೂಪಿಸಿದೆ, ನಮ್ಮ ಕಾರ್ಯತಂತ್ರವನ್ನು ಬಲಪಡಿಸಿದೆ ಮತ್ತು ಜಾಗತಿಕ ವೇದಿಕೆಯಲ್ಲಿ ನಮ್ಮನ್ನು ನಾವು ಸ್ಥಾಪಿಸಿಕೊಳ್ಳಲು ಸಹಾಯ ಮಾಡಿದೆ ಎಂದು ಶ್ಲಾಘಿಸಿದರು. ಇದನ್ನೂ ಓದಿ: MiG-21 Retires | 6 ದಶಗಳ ಸೇವೆಗೆ ವಿದಾಯ – ʻಹಾರುವ ಶವಪೆಟ್ಟಿಗೆʼ ಮಿಗ್‌-21ಗೆ ಗುಡ್‌ಬೈ ಹೇಳಿದ ಭಾರತ

  • ಕೊನೇ ಹಾರಾಟ ನಡೆಸಿದ MIG-21 – ʻಹಾರುವ ಶವಪೆಟ್ಟಿಗೆʼಗೆ ಸೆ.19ರಂದು ಬೀಳ್ಕೊಡುಗೆ!

    ಕೊನೇ ಹಾರಾಟ ನಡೆಸಿದ MIG-21 – ʻಹಾರುವ ಶವಪೆಟ್ಟಿಗೆʼಗೆ ಸೆ.19ರಂದು ಬೀಳ್ಕೊಡುಗೆ!

    ಬಿಕಾನೇ‌ರ್: 62 ವರ್ಷಗಳ ಕಾಲ ಭಾರತೀಯ ವಾಯುಪಡೆಗೆ ಶಕ್ತಿಯಾಗಿ ನಿಂತಿದ್ದ, ಬಳಿಕ ಹಾರುವ ಶವ ಪೆಟ್ಟಿಗೆ ಎಂದೇ ಕುಖ್ಯಾತಿ ಪಡೆದಿದ್ದ ಮಿಗ್-21 ಯುದ್ಧವಿಮಾನವು (MiG-21 Fighter Jet) ಸೋಮವಾರ ರಾಜಸ್ಥಾನದ (Rajastan) ಬಿಕಾನೇರ್‌ನಲ್ಲಿರುವ ನಾಲ್ ವಾಯುನೆಲೆಯಲ್ಲಿ ಕೊನೆಯ ಬಾರಿಗೆ ಹಾರಾಟ ನಡೆಸಿತು.

    ರಷ್ಯಾ (Russia) ಮೂಲದ ಈ ಯುದ್ಧವಿಮಾನವು 62 ವರ್ಷಗಳ ಕಾಲ ಸೇವೆ ಸಲ್ಲಿಸಿದೆ. ಸೆ.19 ರಂದು ಚಂಡೀಗಢದಲ್ಲಿ ಈ ಮಿಗ್‌-21 ಯುದ್ಧವಿಮಾನಕ್ಕೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಲಿದೆ. ಸಾಂಕೇತಿಕ ಬೀಳ್ಕೊಡುಗೆಯ ಭಾಗವಾಗಿ ಆ.18 ಮತ್ತು 19ರಂದು ಏರ್ ಚೀಫ್ ಮಾರ್ಷಲ್ ಎ.ಪಿ.ಸಿಂಗ್ (AP Singh) ಅವರು ಮಿಗ್-21 ವಿಮಾನದ ಹಾರಾಟ ನಡೆಸಿದರು. ಇದನ್ನೂ ಓದಿ: ಕಾಲ್ ಸೆಂಟರ್ ಮಾಡಿಕೊಂಡು ಅಮೆರಿಕದ ಪ್ರಜೆಗಳಿಗೆ 350 ಕೋಟಿ ರೂ. ವಂಚನೆ – ಮೂವರನ್ನು ಬಂಧಿಸಿದ ಸಿಬಿಐ

    ಬಳಿಕ ಮಾತನಾಡಿದ ಅವರು, ಮಿಗ್-21 ಅನ್ನು 1960ರ ದಶಕದಲ್ಲಿ ಸೇನೆಗೆ ನಿಯೋಜಿಸಲಾಗಿತ್ತು. ಸುಮಾರು 11,000 ಯುದ್ಧವಿಮಾನಗಳು 60ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸಿವೆ. ಇದು ಇತಿಹಾಸದಲ್ಲಿಯೇ ಅತಿ ಹೆಚ್ಚು ಉತ್ಪಾದನೆಯಾದ ಸೂಪರ್‌ಸಾನಿಕ್ ಯುದ್ಧವಿಮಾನ ಎಂಬ ಹೆಗ್ಗಳಿಕೆ ಪಾತ್ರವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಆ.27ರಿಂದ ಟ್ರಂಪ್ ಸುಂಕ ಜಾರಿ – ಮಂಗಳವಾರ ಮೋದಿ ನೇತೃತ್ವದಲ್ಲಿ ಹೈವೋಲ್ಟೇಜ್‌ ಸಭೆ ಸಾಧ್ಯತೆ

    ಮಿಗ್-21 ಯುದ್ಧವಿವಿಮಾನವು ವಾಯುಪಡೆಗೆ ಸಲ್ಲಿಸಿದ ಸೇವೆ ಅಗಾಧ. ಆದರೆ ಈ ಯುದ್ಧವಿಮಾನದ ತಂತ್ರಜ್ಞಾನದ ನಿರ್ವಹಣೆವು ಈಗ ಕಷ್ಟವಾಗಿದೆ. ನೂತನ ತಂತ್ರಜ್ಞಾನ ಒಳಗೊಂಡ ತೇಜಸ್, ರಪೇಲ್‌ಗಳನ್ನು ಅಳವಡಿಸಿಕೊಳ್ಳಲು ಇದು ಸರಿಯಾದ ಸಮಯ ಎಂದರು.

    ಐಎಎಫ್ ವಕ್ತಾರ ವಿಂಗ್ ಕಮಾಂಡರ್ ಜೈದೀಪ್ ಸಿಂಗ್ ಮಾತನಾಡಿ, ಮಿಗ್-21 ವಿಮಾನವು 1971 ಡಿ.14ರಲ್ಲಿ ಢಾಕಾದ ಗವರ್ನರ್ ನಿವಾಸದ ಮೇಲಿನ ದಾಳಿ ನಡೆದ ಸಂದರ್ಭದಲ್ಲಿ ಬಹುಮುಖ್ಯ ಪಾತ್ರ ವಹಿಸಿತ್ತು. ಯುದ್ಧದ ಮರುದಿನವೇ ಗವರ್ನರ್ ರಾಜೀನಾಮೆ ಸಲ್ಲಿಸಿದರು. ಬಳಿಕ ಪಾಕಿಸ್ತಾನ ಶರಣಾಗತಿಯಾಯಿತು ಎಂದು ಮೆಲುಕು ಹಾಕಿದರು.

  • ಯುದ್ಧ ಗೆದ್ದ ಆದ್ರೆ ‘ಹಾರುವ ಶವಪೆಟ್ಟಿಗೆ’ ಅಂತ ಕುಖ್ಯಾತಿ ಪಡೆದ ಮಿಗ್‌-21 ಫೈಟರ್‌ ಜೆಟ್‌ ಇತಿಹಾಸ ಗೊತ್ತಾ?

    ಯುದ್ಧ ಗೆದ್ದ ಆದ್ರೆ ‘ಹಾರುವ ಶವಪೆಟ್ಟಿಗೆ’ ಅಂತ ಕುಖ್ಯಾತಿ ಪಡೆದ ಮಿಗ್‌-21 ಫೈಟರ್‌ ಜೆಟ್‌ ಇತಿಹಾಸ ಗೊತ್ತಾ?

    – ತೆರೆಯ ಅಂಚಿಗೆ ಮಿಗ್‌-21; ಬೀಳ್ಕೊಡುಗೆ ನೀಡಲು ಭಾರತೀಯ ಸೇನೆ ಸಜ್ಜು

    ಯುದ್ಧಗಳಲ್ಲಿ ಪ್ರವೀಣ, ಎದುರಾಳಿಗಳಿಗೆ ಸಿಂಹಸ್ವಪ್ನ, ಭಾರತೀಯ ವಾಯುಸೇನೆಯಲ್ಲಿ ಸುದೀರ್ಘ 40ಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ‘ಮಿಗ್ 21’ ಯುದ್ಧ ವಿಮಾನ ಇನ್ನು ನೆನಪಷ್ಟೇ. 60 & 70ರ ದಶಕದಲ್ಲಿ ಈ ಫೈಟರ್ ಜೆಟ್‌ಗೆ ಸರಿಸಾಟಿಯೇ ಇರಲಿಲ್ಲ. ಹಲವು ಯುದ್ಧಗಳಲ್ಲಿ ಭಾರತಕ್ಕೆ ವಿಜಯಮಾಲೆ ತಂದುಕೊಟ್ಟಿದೆ. ಇಷ್ಟೆಲ್ಲಾ ಸಾಮರ್ಥ್ಯ ಹೊಂದಿದ್ದ ಮಿಗ್ 21 (MIG 21) ‘ಹಾರುವ ಶವಪೆಟ್ಟಿಗೆ’ ಎಂಬ ಕುಖ್ಯಾತಿಯನ್ನೂ ಗಳಿಸಿತ್ತು. ಹಲವು ಪೈಲಟ್‌ಗಳ ಸಾವಿಗೆ ಕಾರಣವಾಗಿತ್ತು. ತನ್ನ ಸಾಮರ್ಥ್ಯ, ತಂತ್ರಜ್ಞಾನದ ಕಾರಣ ಇಲ್ಲಿವರೆಗೂ ಇದ್ದು ಯುದ್ಧದಲ್ಲಿ ಇದ್ದು ತನ್ನದೇ ಆದ ಕೊಡುಗೆ ನೀಡಿದೆ. ಈಗ ಇತಿಹಾಸದ ಪುಟ ಸೇರಲು ಸಜ್ಜಾಗಿದೆ.

    ಏನಿದು ಮಿಗ್ 21 ಯುದ್ಧ ವಿಮಾನ? ಇದರ ಇತಿಹಾಸ ಏನು? ಯುದ್ಧಗಳಲ್ಲಿ ಇದರ ಸಾಮರ್ಥ್ಯ ಹೇಗಿತ್ತು? ಹಾರುವ ಶವಪೆಟ್ಟಿಗೆ (Flying Coffin) ಅನ್ನೋ ಕುಖ್ಯಾತಿ ಯಾಕೆ? ಈಗ ನಿವೃತ್ತಿ ಹಂತಕ್ಕೆ ಬಂದಿರೋದ್ಯಾಕೆ? ಮೊದಲಾದ ಪ್ರಶ್ನೆಗಳಿಗೆ ಇಲ್ಲಿದೆ ವಿವರ. ಇದನ್ನೂ ಓದಿ: MIG-21 ಫೈಟರ್‌ ಜೆಟ್‌ ಹಾರಾಟ ಬಂದ್ – IAF ಮಹತ್ವದ ನಿರ್ಧಾರ

    ಗುಡ್‌ಬೈ ಮಿಗ್ 21
    ಭಾರತೀಯ ವಾಯುಪಡೆಯ ಮಿಗ್-21ಗೆ ಈಗ ನಿವೃತ್ತಿ ಸಮಯ. ಭಾರತ ಯುದ್ಧಗಳನ್ನು ಗೆಲ್ಲಲು ಸಹಾಯ ಮಾಡಿದ್ದರೂ, ಹಲವಾರು ಮಾರಕ ಅಪಘಾತಗಳಿಂದಾಗಿ ‘ಹಾರುವ ಶವಪೆಟ್ಟಿಗೆ’ ಎಂಬ ಕುಖ್ಯಾತಿಯನ್ನೂ ಹೊಂದಿತ್ತು. ರಷ್ಯಾ ಮೂಲದ ಮಿಗ್-21 ಯುದ್ಧ ವಿಮಾನಗಳನ್ನು ಈ ವರ್ಷದ ಸೆಪ್ಟೆಂಬರ್‌ನಲ್ಲಿ ಸೇವೆಯಿಂದ ಕೈಬಿಡಲಾಗುವುದು. ಭಾರತೀಯ ವಾಯುಪಡೆಯು ಸೆಪ್ಟೆಂಬರ್ 19 ರಂದು ಚಂಡೀಗಢ ವಾಯುನೆಲೆಯಲ್ಲಿ ರಷ್ಯಾ ಮೂಲದ ಮಿಗ್ -21 ಯುದ್ಧ ವಿಮಾನಕ್ಕೆ ಅದ್ದೂರಿಯಾಗಿ ಬೀಳ್ಕೊಡುಗೆ ನೀಡಲಿದೆ.

    ಏನಿದು ಮಿಗ್ 21 ಯುದ್ಧ ವಿಮಾನ?
    ಭಾರತೀಯ ವಾಯುಪಡೆ (ಐಎಎಫ್) ಹಾರಿಸುವ ಆರು ಯುದ್ಧ ವಿಮಾನಗಳಲ್ಲಿ ಮಿಗ್-21 ವಿಮಾನಗಳು ಸೇರಿವೆ. ಬಹಳ ಹಿಂದಿನಿಂದಲೂ ಐಎಎಫ್‌ನ ಬೆನ್ನೆಲುಬಾಗಿವೆ. ಮಿಗ್-21 ವಿಮಾನಗಳು ಒಂದೇ ಎಂಜಿನ್, ಒಂದೇ ಆಸನದ ಬಹುಪಾತ್ರದ ಯುದ್ಧ ವಿಮಾನ. ಅವುಗಳನ್ನು ಮೊದಲು 1963 ರಲ್ಲಿ ಇಂಟರ್‌ಸೆಪ್ಟರ್ ವಿಮಾನವಾಗಿ ಸೇರಿಸಿಕೊಳ್ಳಲಾಯಿತು. ನಂತರದ ವರ್ಷಗಳಲ್ಲಿ ಯುದ್ಧ ವಿಮಾನವು ಪ್ರಮುಖ ಪಾತ್ರಗಳನ್ನು ನಿರ್ವಹಿಸುವುದಕ್ಕಾಗಿ ಹಲವು ಬಾರಿ ಪರಿಷ್ಕರಿಸಲಾಯಿತು.

    ಭಾರತವು ಟೈಪ್-77, ಟೈಪ್-96 ಮತ್ತು ಬಿಐಎಸ್‌ನಂತಹ ವಿವಿಧ ಶ್ರೇಣಿಯ 800 ಕ್ಕೂ ಹೆಚ್ಚು ಮಿಗ್-21 ವಿಮಾನಗಳನ್ನು ಖರೀದಿಸಿದೆ. ಅವುಗಳಲ್ಲಿ ಇತ್ತೀಚಿನದು ಮಿಗ್-21 ಬೈಸನ್, ಇದು ಸುಧಾರಿತ ಕ್ಷಿಪಣಿಗಳು, ರಾಡಾರ್‌ಗಳು ಮತ್ತು ಉತ್ತಮ ಏವಿಯಾನಿಕ್ಸ್ ಹೊಂದಿರುವ ನವೀಕರಿಸಿದ ವಿಮಾನವಾಗಿದೆ. ಐಎಎಫ್‌ನೊಂದಿಗೆ 100 ಕ್ಕೂ ಹೆಚ್ಚು ಮಿಗ್-21 ವಿಮಾನಗಳನ್ನು 2006 ರಿಂದ ಬೈಸನ್‌ಗೆ ಉನ್ನತೀಕರಿಸಲಾಗಿದೆ. ಭಾರತ ನಡೆಸಿದ ಹಲವಾರು ಯುದ್ಧಗಳಲ್ಲಿ ಈ ವಿಮಾನಗಳು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿವೆ. ಇದನ್ನೂ ಓದಿ: ಪಾಕಿನ F-16 ಯುದ್ಧ ವಿಮಾನವನ್ನು ಭಾರತ ಹೊಡೆದು ಹಾಕಿದ್ಯಾ?

    ಪಾಕ್ ಫೈಟರ್ ಜೆಟ್ ಹೊಡೆದುರುಳಿಸಿತ್ತು ಮಿಗ್ 21
    1971 ರ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಮಿಗ್-21 ಗಳು (ಟೈಪ್ 77 ಶ್ರೇಣಿ) ಭಾರತ ಮೇಲುಗೈ ಸಾಧಿಸಲು ಪ್ರಮುಖ ಪಾತ್ರ ವಹಿಸಿದ್ದವು. 1965 ರ ಯುದ್ಧ ಮತ್ತು 1999 ರ ಪಾಕಿಸ್ತಾನದೊಂದಿಗಿನ ಕಾರ್ಗಿಲ್ ಸಂಘರ್ಷದಲ್ಲಿ ಈ ಫೈಟರ್ ಜೆಟ್ ಐಎಎಫ್‌ನ ಪ್ರಮುಖ ಭಾಗವಾಗಿತ್ತು. 2019 ರಲ್ಲಿ ಶ್ರೀನಗರ ಮೂಲದ 51ನೇ ಸಂಖ್ಯೆಯ ಸ್ಕ್ವಾಡ್ರನ್‌ನ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್ (ಆಗ ವಿಂಗ್ ಕಮಾಂಡರ್ ಆಗಿದ್ದರು) ಮಿಗ್ -21 ಬೈಸನ್ ಅನ್ನು ಹಾರಿಸುತ್ತಿದ್ದಾಗ, ಪಾಕಿಸ್ತಾನ ವಾಯುಪಡೆಯ ಎಫ್-16 ವಿಮಾನವನ್ನು ಹೊಡೆದುರುಳಿಸಿದ್ದರು.

    ಭಾರತವು ಮಿಗ್-21 ಫೈಟರ್ ಜೆಟ್‌ಗಳ ಅತಿದೊಡ್ಡ ನಿರ್ವಾಹಕ ರಾಷ್ಟ್ರವಾಗಿದೆ. ಮಿಗ್-21 ಎಲ್ಲಾ ಬಗೆಯ ಹವಾಮಾನಗಳಲ್ಲೂ ಸಮರ್ಥವಾಗಿ ಕಾರ್ಯನಿರ್ವಹಿಸುತ್ತದೆ. 1971ರ ಯುದ್ಧದ ಸಂದರ್ಭದಲ್ಲಿ ಪಾಕ್ ವಾಯುನೆಲೆ ಮೇಲೆ 500 ಕೆಜಿ ಭಾರದ ಬಾಂಬ್‌ನ ಸುರಿಮಳೆಗೈದು ಮಿಗ್-21 ಪ್ರಮುಖ ಪಾತ್ರ ವಹಿಸಿತ್ತು.

    ಹಾರುವ ಶವಪೆಟ್ಟಿಗೆ ಕುಖ್ಯಾತಿ ಯಾಕೆ?
    ಕಳೆದ 60 ವರ್ಷಗಳಲ್ಲಿ 500 ಕ್ಕೂ ಹೆಚ್ಚು ಮಿಗ್-21 ವಿಮಾನಗಳು ಅಪಘಾತಕ್ಕೀಡಾಗಿದ್ದು, 170 ಕ್ಕೂ ಹೆಚ್ಚು ಪೈಲಟ್‌ಗಳು ಸಾವನ್ನಪ್ಪಿದ್ದಾರೆ. 2010 ರಿಂದ 20 ಕ್ಕೂ ಹೆಚ್ಚು ವಿಮಾನಗಳು ಅಪಘಾತಕ್ಕೀಡಾಗಿವೆ. 1963 ರಲ್ಲಿ ಫೈಟರ್ ಜೆಟ್ ಸೇರ್ಪಡೆಯ ಮೊದಲ ವರ್ಷದಲ್ಲೇ ಸೋವಿಯತ್ ಯುಗದ ಎರಡು ವಿಮಾನಗಳು ಅಪಘಾತಕ್ಕೀಡಾಗಿದ್ದವು. 2023ರ ಮೇ ತಿಂಗಳಲ್ಲಿ IAFನ ಮಿಗ್‌-21 ಫೈಟರ್ ಜೆಟ್ ರಾಜಸ್ಥಾನದ ಸೂರತ್‌ಗಢ ಬಳಿ ನಿಯಮಿತ ಕಾರ್ಯಾಚರಣೆಯ ತರಬೇತಿ ಹಾರಾಟದಲ್ಲಿದ್ದಾಗ ಅಪಘಾತಕ್ಕೀಡಾಯಿತು. ಪೈಲಟ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದರೂ, ವಿಮಾನದ ಅವಶೇಷಗಳು ರಾಜ್ಯದ ಹನುಮಾನ್‌ಗಢ ಜಿಲ್ಲೆಯ ಬಹ್ಲೋಲ್ ನಗರದಲ್ಲಿರುವ ಮನೆಯ ಮೇಲೆ ಬಿದ್ದು ಮೂವರು ನಾಗರಿಕರು ಸಾವನ್ನಪ್ಪಿದರು.

    2022ರ ಜುಲೈನಲ್ಲಿ ತರಬೇತಿ ನಡೆಸುತ್ತಿದ್ದ ಯುದ್ಧ ವಿಮಾನ ಅಪಘಾತಕ್ಕೀಡಾಗಿ, ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದರು. 2021 ರಲ್ಲಿ ಐದು MiG-21 ಬೈಸನ್ ಅಪಘಾತಗಳು ಮೂವರು ಪೈಲಟ್‌ಗಳನ್ನು ಬಲಿ ತೆಗೆದುಕೊಂಡವು. ಅಪಘಾತಗಳಿಗೆ ಹಲವಾರು ಕಾರಣಗಳಿವೆ. ತಾಂತ್ರಿಕ ದೋಷಗಳು, ಮಾನವ ದೋಷ, ಪಕ್ಷಿ ಡಿಕ್ಕಿ ಅಥವಾ ಕೆಲವು ಸಂದರ್ಭಗಳಲ್ಲಿ ಪೈಲಟ್‌ಗಳ ಅಚಾತುರ್ಯದ ಕಾರ್ಯಗಳು ಪ್ರಮುಖ ಕಾರಣವಾಗಿವೆ.

    ವಿಮಾನವನ್ನು ಹಂತ ಹಂತವಾಗಿ ತೆಗೆದುಹಾಕುವ ಯೋಜನೆ ಏನು?
    ಐಎಎಫ್‌ನಲ್ಲಿ ಪ್ರಸ್ತುತ ಮೂರು ಮಿಗ್-21 ವಿಮಾನಗಳ ಸ್ಕ್ವಾಡ್ರನ್‌ಗಳು ಸೇವೆಯಲ್ಲಿವೆ. ಪ್ರತಿ ಸ್ಕ್ವಾಡ್ರನ್ ಒಂದು ಅಥವಾ ಎರಡು ತರಬೇತುದಾರ ಆವೃತ್ತಿಗಳನ್ನು ಹೊರತುಪಡಿಸಿ 16-18 ವಿಮಾನಗಳನ್ನು ಒಳಗೊಂಡಿದೆ. 2022ರ ಸೆಪ್ಟೆಂಬರ್‌ನಲ್ಲಿ ಶ್ರೀನಗರ ಮೂಲದ ನಂ 51 ಸ್ಕ್ವಾಡ್ರನ್ ಅನ್ನು ನಿವೃತ್ತಿಗೊಳಿಸಲಾಯಿತು. ಮೂರು ಮಿಗ್-21 ಬೈಸನ್ ಸ್ಕ್ವಾಡ್ರನ್‌ಗಳನ್ನು ಈಗ ಹಂತ ಹಂತವಾಗಿ ಸೇವೆಯಲ್ಲಿ ಬಿಡುಗಡೆಗೊಳಿಸಲು ಯೋಜಿಸಲಾಗಿದೆ. ಇದನ್ನೂ ಓದಿ: ಪಾಕ್‌ ವಶದಲ್ಲಿದ್ದ ‘ಸಿಂಗಂ’ ವಿಂಗ್‌ ಕಮಾಂಡರ್‌ ತಾಯ್ನಾಡಿಗೆ ವಾಪಸ್‌ – ಭಾರತದ ಗೆಲುವಿಗೆ 5ರ ಸಂಭ್ರಮ

    ಐಎಎಫ್ ಮಿಗ್ 21 ವಿಮಾಗಳನ್ನು ಮುಂದುವರಿಸಿದ್ದೇಕೆ?
    ಐಎಎಫ್‌ನ ಸ್ಕ್ವಾಡ್ರನ್ ಬಲವು 42 ಆಗಿದೆ. ಯುದ್ಧ ವಿಮಾನಗಳನ್ನು ಮೊದಲೇ ಹೊರಹಾಕುವುದರಿಂದ ಐಎಎಫ್‌ನ ಫೈಟರ್ ಸ್ಕ್ವಾಡ್ರನ್ ಬಲವು ಅಪಾಯಕಾರಿಯಾಗಿ ಕಡಿಮೆಯಾಗುತ್ತದೆ. ‘ಈ ಫೈಟರ್ ಜೆಟ್ ಹಾರಾಟದ ಸಮಯ ಮತ್ತು ಸೇವೆಯಲ್ಲಿರುವ ವರ್ಷಗಳನ್ನು ಮುಖ್ಯವಾಗಿಟ್ಟುಕೊಂಡು ನೋಡುವುದಾದರೆ ಕಳಪೆ ಸುರಕ್ಷತಾ ದಾಖಲೆ ಹೊಂದಿಲ್ಲ’ ಎಂದು ಹಿರಿಯ ಐಎಎಫ್ ಅಧಿಕಾರಿಗಳು ತಿಳಿಸಿದ್ದಾರೆ.

    ಮಿಗ್ 21 ಸೇರ್ಪಡೆ ಇತಿಹಾಸವೇನು?
    1963 ರಲ್ಲಿ ಐಎಎಫ್‌ನಲ್ಲಿ ಸೂಪರ್‌ಸಾನಿಕ್ ವಿಮಾನವನ್ನು ಸೇರಿಸುವುದು ತುರ್ತು ಅಗತ್ಯವಾಗಿತ್ತು. 1962 ರ ಚೀನಾದೊಂದಿಗಿನ ಯುದ್ಧ ಮತ್ತು ಪಾಕಿಸ್ತಾನದೊಂದಿಗಿನ ಉದ್ವಿಗ್ನತೆ ಸಂದರ್ಭದಲ್ಲಿ ಯುಎಸ್‌ಎ ತನ್ನ ಹೊಸ ವಿಮಾನಗಳಲ್ಲಿ ಒಂದಾದ ಎಫ್-104 ಸ್ಟಾರ್‌ಫೈಟರ್ ಅನ್ನು ಪಾಕಿಸ್ತಾನಕ್ಕೆ ಪೂರೈಸಿತ್ತು. ಈ ಬೆಳವಣಿಗೆ ಭಾರತದಲ್ಲಿ ಆತಂಕ ಮೂಡಿಸಿತ್ತು.

    ಐಎಎಫ್ ಕೂಡ ಎಫ್-104 ವಿಮಾನಗಳನ್ನು ಬಯಸಿತ್ತು. ಆದರೆ, ಭಾರತ ಮತ್ತು ಪಾಕಿಸ್ತಾನದ ನಡುವೆ ಸಮತೋಲನ ಕಾಯ್ದುಕೊಳ್ಳುವ ಸಲುವಾಗಿ ಅವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪೂರೈಸಲು ಯುಎಸ್ ಹೆಚ್ಚು ಆಸಕ್ತಿ ತೋರಲಿಲ್ಲ. ನಂತರ ರಷ್ಯಾದಿಂದ ಮಿಗ್-21 ಫೈಟರ್ ಜೆಟ್ ತರಿಸಿಕೊಳ್ಳಲಾಯಿತು. ಮೊದಲ ಆರು ಮಿಗ್-21 ವಿಮಾನಗಳು 1963ರ ಏಪ್ರಿಲ್‌ನಲ್ಲಿ ಚಂಡೀಗಢಕ್ಕೆ ಆಗಮಿಸಿದವು. ಪೈಲಟ್‌ಗಳು ಪರೀಕ್ಷಾರ್ಥ ಹಾರಾಟ ನಡೆಸಿದರು. ಇದನ್ನೂ ಓದಿ: ಥೈಲ್ಯಾಂಡ್‌ನಲ್ಲಿ ಶೂಟಿಂಗ್‌ ಮುಗಿಸಿ ಬೆಂಗಳೂರಿಗೆ ನಟ ದರ್ಶನ್ ವಾಪಸ್

    ವಿವಾದ ಏನು?
    2001 ರಲ್ಲಿ ಸೂರತ್‌ಗಢದಲ್ಲಿ ಸಂಭವಿಸಿದ ಮಿಗ್-21 ಅಪಘಾತದಲ್ಲಿ ಟೇಕಾಫ್ ಆದ ಸ್ವಲ್ಪ ಸಮಯದ ನಂತರ ಫ್ಲೈಟ್ ಲೆಫ್ಟಿನೆಂಟ್ ಅಭಿಜಿತ್ ಗಾಡ್ಗಿಲ್ ಸಾವನ್ನಪ್ಪಿದರು. ಪೈಲಟ್‌ನ ತಾಯಿ ಕವಿತಾ ಗಾಡ್ಗಿಲ್ ಅವರು, ವಿಮಾನದಲ್ಲಿ ತಾಂತ್ರಿಕ ದೋಷಗಳಿವೆ. ಆದರೆ, ಅಪಘಾತಕ್ಕೆ ನನ್ನ ಮಗನನ್ನು ತಪ್ಪಾಗಿ ದೂಷಿಸಲಾಗುತ್ತಿದೆ ಎಂದು ಹೇಳಿದಾಗ ವಿವಾದ ಉಂಟಾಯಿತು. ಐಎಎಫ್‌ನ ಆಗಿನ ಇನ್ಸ್ಪೆಕ್ಟರ್ ಜನರಲ್ ಆಫ್ ಫ್ಲೈಟ್ ಸೇಫ್ಟಿ ಆಗಿದ್ದ ಏರ್ ಮಾರ್ಷಲ್ ಅಶೋಕ್ ಗೋಯಲ್ ಪತ್ರ ಬರೆದು, ನಿಮ್ಮ ಹೇಳಿಕೆಗಳಿಂದ ಐಎಎಫ್‌ನ ಸ್ಥೈರ್ಯ ಕುಗ್ಗುತ್ತದೆ ಎಂದಿದ್ದರು.

  • ಮಿಗ್-21 ಯುದ್ಧ ವಿಮಾನದ 62 ವರ್ಷಗಳ ಸೇವೆಗೆ ವಿದಾಯ – ಸೆ. 19ರಂದು ಬೀಳ್ಕೊಡುಗೆ ಸಮಾರಂಭ

    ಮಿಗ್-21 ಯುದ್ಧ ವಿಮಾನದ 62 ವರ್ಷಗಳ ಸೇವೆಗೆ ವಿದಾಯ – ಸೆ. 19ರಂದು ಬೀಳ್ಕೊಡುಗೆ ಸಮಾರಂಭ

    ನವದೆಹಲಿ: ಭಾರತೀಯ ವಾಯುಸೇನೆಯ ಐತಿಹಾಸಿಕ ಯುದ್ಧ ವಿಮಾನ ಮಿಗ್-21, 62 ವರ್ಷಗಳ ತನ್ನ ಶೌರ್ಯದ ಸೇವೆಯನ್ನು ಮುಗಿಸಲಿದೆ. ಸೆಪ್ಟೆಂಬರ್ 19ರಂದು ಕೊನೆಯ ಜೆಟ್‌ಗೆ ಚಂಡೀಗಢ ವಾಯುನೆಲೆಯಲ್ಲಿ 23 ಸ್ಕ್ವಾಡ್ರನ್ (ಪ್ಯಾಂಥರ್ಸ್) ಔಪಚಾರಿಕ ಬೀಳ್ಕೊಡುಗೆ ನೀಡಲಿದೆ.

    ಸೋವಿಯತ್ ನಿರ್ಮಿತ ಈ ವಿಮಾನವು 1963ರಲ್ಲಿ ಭಾರತೀಯ ವಾಯುಸೇನೆಗೆ ಸೇರ್ಪಡೆಯಾಯಿತು. ಬಳಿಕ ದೇಶದ ವೈಮಾನಿಕ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಿದೆ. 1965 ಮತ್ತು 1971ರ ಭಾರತ-ಪಾಕಿಸ್ತಾನ ಯುದ್ಧಗಳು, 1999ರ ಕಾರ್ಗಿಲ್ ಯುದ್ಧ, 2019ರ ಬಾಲಕೋಟ್ ದಾಳಿಗಳು ಮತ್ತು ಆಪರೇಷನ್ ಸಿಂಧೂರದಲ್ಲಿ ಪ್ರಮುಖ ಪಾತ್ರವಹಿಸಿದೆ. ಇದನ್ನೂ ಓದಿ: ಅಹಮದಾಬಾದ್ ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ – ಪೊಲೀಸರು, ಬಾಂಬ್ ನಿಷ್ಕ್ರಿಯ ದಳದಿಂದ ಶೋಧ

    ಸಾಕಷ್ಟು ಸಾಧನೆಯ ನಡುವೆಯೂ ಇತ್ತೀಚಿನ ವರ್ಷಗಳಲ್ಲಿ ಈ ವಿಮಾನವು ಆಗಾಗ ಅಪಘಾತಕ್ಕೀಡಾಗಿತ್ತು. 400ಕ್ಕೂ ಹೆಚ್ಚು ಅಪಘಾತಗಳು ಮತ್ತು ಗಮನಾರ್ಹ ಪೈಲಟ್ ಸಾವು-ನೋವುಗಳು ಇದರಲ್ಲಿ ಸಂಭವಿಸಿವೆ. ಹೀಗಾಗಿ ಇದಕ್ಕೆ `ಹಾರುವ ಶವಪೆಟ್ಟಿಗೆ’ ಎಂದು ಕರೆಯಲಾಗುತ್ತಿತ್ತು. ಇದನ್ನೂ ಓದಿ: ಉಪರಾಷ್ಟ್ರಪತಿ ಜಗದೀಪ್ ಧನಕರ್ ರಾಜೀನಾಮೆ ಅಂಗೀಕರಿಸಿದ ದ್ರೌಪದಿ ಮುರ್ಮು

    ತಾಂತ್ರಿಕವಾಗಿ ಹಳೆಯದಾದ ಮಿಗ್-21 ವಿಮಾನಗಳು ಆಧುನಿಕ ಯುದ್ಧದ ಅಗತ್ಯಗಳಿಗೆ ಸರಿ ಹೊಂದಿರುವುದರಿಂದ, ಭಾರತೀಯ ವಾಯುಸೇನೆಯು ತೇಜಸ್ ಮತ್ತು ರಫೇಲ್‌ನಂತಹ ಆಧುನಿಕ ಯುದ್ಧ ವಿಮಾನಗಳನ್ನು ಸೇರಿಸಿಕೊಳ್ಳುತ್ತಿದೆ.

    ಭಾರತೀಯ ವಾಯುಸೇನೆಯು ತೇಜಸ್ ಎಂಕೆ-1ಎ, ರಫೇಲ್, ಮತ್ತು ಸುಖೋಯ್ ಸು-30 ಎಂಕೆಐ ವಿಮಾನಗಳೊಂದಿಗೆ ತನ್ನ ಶಕ್ತಿಯನ್ನು ಬಲಪಡಿಸುತ್ತಿದೆ. ಇದರ ಜೊತೆಗೆ, ಸ್ವದೇಶಿ ಎಎಂಸಿಎ (ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್) ಯೋಜನೆಯು ಭವಿಷ್ಯದ ಯುದ್ಧ ವಿಮಾನಗಳಿಗೆ ದಾರಿ ಮಾಡಿಕೊಡಲಿದೆ.

  • ಭಾರತೀಯ ವಾಯುಪಡೆಯ ವಿಮಾನ ಪತನ – ಇಬ್ಬರು ಪೈಲಟ್ ದುರ್ಮರಣ

    ಭಾರತೀಯ ವಾಯುಪಡೆಯ ವಿಮಾನ ಪತನ – ಇಬ್ಬರು ಪೈಲಟ್ ದುರ್ಮರಣ

    ಜೈಪುರ: ರಾಜಾಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ (IAF) ವಿಮಾನ ಪತನಗೊಂಡಿದ್ದು, ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ.

    ಇದು IAFನ ಮಿಗ್-21 ವಿಮಾನವಾಗಿದ್ದು, ಜಿಲ್ಲೆಯ ಬೇಟೂದಲ್ಲಿನ ಭೀಮಡಾ ಗ್ರಾಮದ ಬಳಿ ಅಪಘಾತಕ್ಕೀಡಾಗಿದೆ. ಬಾರ್ಮರ್ ಜಿಲ್ಲೆಯ ಗ್ರಾಮದಲ್ಲಿ ಅಲ್ಲಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ಲೋಕ್ ಬಂಡು ತಿಳಿಸಿರುವುದಾಗಿ ಸುದ್ದಿಸಂಸ್ಥೆ ವರದಿ ಮಾಡಿದೆ. ಇದನ್ನೂ ಓದಿ: ಪ್ರವೀಣ್‌ ಹತ್ಯೆ ಬೆನ್ನಲ್ಲೇ ಮಂಗಳೂರಲ್ಲಿ ಮತ್ತೊಬ್ಬ ಯುವಕನ ಬರ್ಬರ ಹತ್ಯೆ

    ಸದ್ಯ ವಿಮಾನ ಪತನಗೊಂಡಿರುವ ಬಗ್ಗೆ ಐಎಎಫ್‌ನಿಂದ ಯಾವುದೇ ಅಧಿಕೃತ ಮಾಹಿತಿಗಳೂ ಲಭ್ಯವಾಗಿಲ್ಲ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಐಎಎಫ್ ಮುಖ್ಯಸ್ಥರೊಂದಿಗೆ ಮಾತನಾಡಿ ಅಪಘಾತದ ಬಗ್ಗೆ ವಿಚಾರಿಸುತ್ತಿದ್ದಾರೆ ಎಂದು ಐಎಎಫ್ ಮುಖ್ಯಸ್ಥರು ತಿಳಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮಹಮ್ಮದ್ ಫಾಜಿಲ್ ಬರ್ಬರ ಹತ್ಯೆ- ಮಂಗಳೂರಿನ ಬಜ್ಬೆ, ಪಣಂಬೂರು, ಸುರತ್ಕಲ್, ಮುಲ್ಕಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ

    ಐಎಫ್‌ಎಸ್ 1963ರಲ್ಲಿ `MiG-21‘ ಅನ್ನು ಪಡೆದುಕೊಂಡಿತು. ಇದು ತನ್ನ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಲು ಸೋವಿಯತ್ ಮೂಲದ ಸೂಪರ್‌ಸಾನಿಕ್ ಫೈಟರ್‌ಗಳ 874 ರೂಪಾಂತರಗಳನ್ನು ಹಂತಹಂತವಾಗಿ ಸೇರಿಸಿತು. ಆದರೆ ಕಳೆದ 6 ದಶಕಗಳಲ್ಲಿ ನಡೆದ 400ಕ್ಕೂ ಹೆಚ್ಚು `MiG-21‘ನ ಅಪಘಾತಗಳಲ್ಲಿ 200 ಪೈಲಟ್‌ಗಳು ಜೀವ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ರಾಜಸ್ಥಾನದಲ್ಲಿ ಮಿಗ್-21 ವಿಮಾನ ಪತನ – ಪೈಲಟ್‍ ಹುತಾತ್ಮ

    ರಾಜಸ್ಥಾನದಲ್ಲಿ ಮಿಗ್-21 ವಿಮಾನ ಪತನ – ಪೈಲಟ್‍ ಹುತಾತ್ಮ

    ಜೈಪುರ: ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಭಾರತೀಯ ವಾಯು ಸೇನೆಯ ಮಿಗ್-21 ವಿಮಾನ ಇಂದು ಸಂಜೆ ಪತನಗೊಂಡಿದೆ.

    ಮಿಗ್-21 ವಿಮಾನ ಪತನದ ಬಗ್ಗೆ ಸ್ಥಳೀಯ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿರುವ ಜೈಸಲ್ಮೇರ್‍ನ ಎಸ್‍ಪಿ ಅಜಯ್ ಸಿಂಗ್, ನಮಗೆ ಇಂದು ಸಂಜೆ ಭಾರತೀಯ ಸೇನೆಯ ಮಿಗ್-21 ವಿಮಾನ ಮರುಭೂಮಿ ರಾಷ್ಟ್ರೀಯ ಉದ್ಯಾನವನ (DNP) ಬಳಿ ಪತನ ಆಗಿರುವ ಬಗ್ಗೆ ಮಾಹಿತಿ ಬಂದಿದೆ. ನಾವು ವಿಮಾನ ಪತನಗೊಂಡ ಸ್ಥಳಕ್ಕೆ ತೆರಳುತ್ತಿದ್ದೇವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: 44 ವರ್ಷ ಹಳೆಯ ಕಾರನ್ನು ಯಾರೂ ಬಳಸಲಾರರು – ಮಿಗ್ ಬಳಕೆ ಕುರಿತು ಧನೋವಾ ಮಾತು

    ವಿಮಾನ ಪತನಗೊಂಡಿರುವುದನ್ನು ಮೊದಲು ಅರಣ್ಯ ಅಧಿಕಾರಿಗಳು ನೋಡಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಅಜಯ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ವಾಯು ಸೇನೆ ಪೈಲಟ್ ಹುತಾತ್ಮರಾಗಿರುವ ಬಗ್ಗೆ ಟ್ವಿಟ್ಟರ್‌ನಲ್ಲಿ ಟ್ವೀಟ್‌ ಮಾಡಿದೆ.

    ರಷ್ಯಾದ ಮಿಕೋಯಾನ್ ಗುರೇವಿಚ್(ಮಿಗ್) 21 ಬೈಸನ್ 1959 ರಲ್ಲಿ ತಯಾರಾಗಿದ್ದು, 1963 ರಲ್ಲಿ ಮಿಗ್ 21 ವಿವಿಧ ಆವೃತ್ತಿ ಒಟ್ಟು 874 ವಿಮಾನಗಳು ಭಾರತದ ವಾಯುಸೇನೆಗೆ ಸೇರ್ಪಡೆಯಾಗಿತ್ತು. 1971 ರಲ್ಲಿ ಬಾಂಗ್ಲಾ ಕದನದ ವೇಳೆ ಪ್ರಮುಖ ಪಾತ್ರವಾಹಿಸಿದ್ದ ಮಿಗ್ ಪಾಕಿಸ್ತಾನ 9 ವಿಮಾನಗಳನ್ನು ಹೊಡೆದು ಹಾಕಿತ್ತು. ಉಳಿದ ಯುದ್ಧ ವಿಮಾನಗಳಿಗೆ ಹೋಲಿಸಿದರೆ ಈ ವಿಮಾನಗಳ ಸಾಮರ್ಥ್ಯ ಕಡಿಮೆ ಎಂದು ಗೊತ್ತಾದ ಬಳಿಕ 1990 ರಲ್ಲಿ ಇವುಗಳನ್ನು ಮೇಲ್ದರ್ಜೆಗೆ ಏರಿಸಲಾಗಿತ್ತು. ಇದನ್ನೂ ಓದಿ: ಯೋಧರ ನಾಡಿಗೆ ಬಂದ ಮಿಗ್-21 ಯುದ್ಧ ವಿಮಾನ

    ಸದ್ಯ ಭಾರತದಲ್ಲಿ ಈಗ 100ಕ್ಕೂ ಅಧಿಕ ಮಿಗ್ ವಿಮಾನಗಳಿವೆ. ಖರೀದಿಸಿದ ಪೈಕಿ 500ಕ್ಕೂ ಹೆಚ್ಚು ವಿಮಾನಗಳು ಪತನಗೊಂಡಿದೆ. ಹೀಗಾಗಿ ವಾಯುಪಡೆಯಲ್ಲಿ ಈ ವಿಮಾನಗಳು ಹಾರುವ ಶವಪೆಟ್ಟಿಗೆ ಎಂದೇ ಕುಖ್ಯಾತಿ ಪಡೆದಿವೆ. ಹಾರಾಟದ ಸಮಯದಲ್ಲಿ ಎಂಜಿನ್ ವೈಫಲ್ಯಗೊಂಡು ಪತನದ ಸೂಚನೆ ಸಿಕ್ಕಿದ ಕೂಡಲೇ ಹಲವು ಪೈಲಟ್ ಗಳು ಎಜೆಕ್ಟ್ ಆಗದೇ ವಿಮಾನವನ್ನು ಜನವಸತಿ ಇಲ್ಲದ ಕಡೆಗೆ ತಿರುಗಿಸಿ ಪ್ರಾಣಬಿಟ್ಟಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ಭೀತಿ – ಉತ್ತರ ಪ್ರದೇಶದಲ್ಲಿ ನಾಳೆಯಿಂದ ನೈಟ್ ಕರ್ಫ್ಯೂ ಜಾರಿ

    “ಹಾರುವ ಶವಪೆಟ್ಟಿಗೆ” ಎಂಬ ಕುಖ್ಯಾತಿ, ಎಫ್ 16 ಮುಂದೆ ಏನು ಅಲ್ಲ ಎಂದು ಭಾವಿಸಿದ್ದರೂ ಅಭಿನಂದನ್ ಈ ವಿಮಾನ ಮೂಲಕವೇ ಪಾಕ್ ಸೇನೆಯನ್ನು ಹಿಮ್ಮೆಟ್ಟಿಸಿ ಒಂದು ವಿಮಾನವನ್ನು ಉರುಳಿಸಿದ್ದರು. 2016 ರಲ್ಲಿ 110 ಮಿಗ್ 21 ಜೆಟ್ ವಿಮಾನಗಳನ್ನು ಮೇಲ್ದರ್ಜೆಗೆ ಏರಿಸಲಾಗಿತ್ತು. ಈ ಸಂದರ್ಭದಲ್ಲಿ ಮಲ್ಟಿ ಮೋಡ್ ರೇಡಾರ್, ಉತ್ತಮ ಏವಿಯಾನಿಕ್ಸ್, ಸಂವಹನ ವ್ಯವಸ್ಥೆಯನ್ನು ನೀಡಲಾಗಿತ್ತು.

  • ಯೋಧರ ನಾಡಿಗೆ ಬಂದ ಮಿಗ್-21 ಯುದ್ಧ ವಿಮಾನ

    ಯೋಧರ ನಾಡಿಗೆ ಬಂದ ಮಿಗ್-21 ಯುದ್ಧ ವಿಮಾನ

    ಮಡಿಕೇರಿ: ಆಧುನಿಕ ಯುಗದ ವೀರ ಸೇನಾನಿ ಜನರಲ್ ತಿಮ್ಮಯ್ಯ ಹುಟ್ಟಿ ಬೆಳೆದ ಸನ್ನಿಸೈಡ್ ನಿವಾಸ, ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಮತ್ತೊಂದು ಆಕರ್ಷಣೆಯಾಗಿ ಮಿಗ್-21 ವಿಮಾನ ಮ್ಯೂಸಿಯಂಗೆ ಬಂದಿದೆ.

    ಸದ್ಯ ಮಡಿಕೇರಿಗೆ ತರಲಾಗಿರುವ ಮಿಗ್-21 ಯುದ್ಧ ವಿಮಾನ 1971ನೇ ಯುದ್ಧದಲ್ಲಿ ದೊಡ್ಡಪಾತ್ರ ವಹಿಸಿದೆ. 15 ವರ್ಷಗಳ ಹಿಂದೆಯೇ ಈ ವಿಮಾನವನ್ನು ಸೇವೆಯಿಂದ ಹೊರಗಿಡಲಾಗಿತ್ತು. ಆಗಿನ ಸಮಯದಲ್ಲಿ ಈ ವಿಮಾನ 40-45 ಲಕ್ಷ ರೂ. ಬೆಲೆಯನ್ನು ಹೊಂದಿತ್ತು. ಮಡಿಕೇರಿ ನಗರದಲ್ಲಿ ತಿಮ್ಮಯ್ಯ ಮ್ಯೂಸಿಯಂನಲ್ಲಿ ಕೆಲಸಗಳು ನಡೆಯುತ್ತಿದ್ದು, ನಂದಾ ಕಾರ್ಯಪ್ಪ ಅವರು ವಿಮಾನಕ್ಕಾಗಿ ಹಲವು ಬಾರಿ ಸೇನೆಗೆ ಮನವಿ ಸಲ್ಲಿಸಿದ್ದರು.

    ಇವರ ಪ್ರಯತ್ನದ ಫಲವಾಗಿ ಕಳೆದ ಜನವರಿ 11 ರಂದು ಮಿಗ್-21 ವಿಮಾನ ತಿಮ್ಮಯ್ಯ ಮ್ಯೂಸಿಯಂ ಸೇರಿತ್ತು. ಆದರೆ ಅದರ ಜೋಡಣೆ ಮಾತ್ರ ಅಗಿರಲ್ಲಿಲ್ಲ. ಅಲಹಾಬಾದ್‍ನಿಂದ ಟ್ರಕ್‍ನಲ್ಲಿ ಬಂದಿರುವ ಮಿಗ್-21 ವಿಮಾನ ಬಿಡಿ ಬಿಡಿಯಾಗಿತ್ತು. ಏರ್ಫೋರ್ಸ್ ಗ್ರೌಂಡ್ ಇಂಜಿನಿಯರ್ ಗಳು ಮಿಗ್-21ನ್ನು ಜೋಡಿಸುವ ಕಾರ್ಯವನ್ನು ಮಾಡಿದ್ದಾರೆ.

    ಈ ವಿಮಾನ 1965 ಹಾಗೂ 1971 ಯುದ್ಧದಲ್ಲಿ ಪ್ರಮುಖ ಪಾತ್ರವಹಿಸಿತ್ತು. ಆಕಾಶದಲ್ಲಿ ಮಿಂಚಿನ ವೇಗದಲ್ಲಿ ಹಾರುವ ಸಾಮರ್ಥ್ಯವಿರುವ ಜೆಟ್, ಶ್ರತುಗಳ ಹುಟ್ಟಡಗಿಸಿತ್ತು. ಕಾರ್ಗಿಲ್ ಕದನದಲ್ಲೂ ಮಿಗ್-21 ತನ್ನ ಸಾಮರ್ಥ್ಯ ತೋರುವ ಜತೆಗೆ ವಾಯು ಸೇನೆಯ ಶಕ್ತಿಯಾಗಿತ್ತು. ದಶಕದ ಹಿಂದೆ ಮಿಗ್-21 ಎಂಬ ಈ ಬಾಹುಬಲಿ ತನ್ನ ಹಾರಾಟವನ್ನು ನಿಲ್ಲಿಸಿತ್ತು. ಇದರ ಜೊತೆಗಿದ್ದ ಇತರೆ ವಿಮಾನಗಳು ಕಳೆದ ಡಿಸೆಂಬರ್ ನಲ್ಲಿ ಹಾರಾಟ ನಿಲ್ಲಿಸಿವೆ.

    ಕಳೆದ ವರ್ಷ ನಮ್ಮ ಹೆಮ್ಮೆಯ ಯೋಧ ವಿಂಗ್ ಕಮಾಂಡರ್ ಅಭಿನಂದನ್ ಪಾಕಿಸ್ತಾನದ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಎಲ್ಲರಿಗೂ ಗೊತ್ತೇ ಇದೆ. ಅವರು ಕೂಡಾ ಮಿಗ್-21ನ ಅಪ್ಡೇಟೆಡ್ ಜೆಟ್ ಮಿಗ್-21 ಬೈಸನ್ ಅನ್ನು ಬಳಸಿದ್ದರು. ಈಗ ಮಡಿಕೇರಿಗೆ ಬಂದ ವಿಮಾನವನ್ನು ಜೋಡಣೆ ಮಾಡಿ ಕ್ರೇನ್ ನೆರವಿನಿಂದ ವೀಕ್ಷಣೆಗೆ ಅನುಕೂಲ ಆಗುವಂತೆ ನಿಲ್ಲಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಯುದ್ಧ ವಿಮಾನ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿದೆ.

  • ಮತ್ತೊಂದು ಮಿಗ್ ವಿಮಾನ ಪತನ – ಇಬ್ಬರು ಪೈಲಟ್ ಪ್ರಾಣಾಪಾಯದಿಂದ ಪಾರು

    ಮತ್ತೊಂದು ಮಿಗ್ ವಿಮಾನ ಪತನ – ಇಬ್ಬರು ಪೈಲಟ್ ಪ್ರಾಣಾಪಾಯದಿಂದ ಪಾರು

    ಗ್ವಾಲಿಯಾರ್: ಭಾರತೀಯ ವಾಯು ಸೇನೆಯ ತರಬೇತಿ ನಿರತ ಮಿಗ್ 21 ವಿಮಾನ ಮಧ್ಯಪ್ರದೇಶದ ಗ್ವಾಲಿಯಾರ್‌ನಲ್ಲಿ ಪತನಗೊಂಡಿದೆ.

    ಪತನಗೊಳ್ಳುತ್ತಿದ್ದಂತೆ ಗ್ರೂಪ್ ಕ್ಯಾಪ್ಟನ್ ಮತ್ತು ಸ್ಕ್ವಾಡ್ರನ್‌ ಲೀಡರ್ ವಿಮಾನದಿಂದ ಹೊರಕ್ಕೆ ಜಿಗಿದು ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ಬೆಳಗ್ಗೆ 10 ಗಂಟೆಯ ವೇಳೆ ವಿಮಾನ ಖಾಲಿ ಜಾಗದಲ್ಲಿ ಬಿದ್ದಿರುವುದಾಗಿ ವರದಿಯಾಗಿದೆ. ಈ ವರ್ಷದ ಮಾರ್ಚ್ 31 ರಂದು ರಾಜಸ್ಥಾನದ ಬಾರ್ಮರ್ ವಾಯುನೆಲೆಯಲ್ಲಿ ಮಿಗ್ ವಿಮಾನ ಪತನಗೊಂಡಿತ್ತು.

    ರಷ್ಯಾದ ಮಿಕೋಯಾನ್ ಗುರೇವಿಚ್(ಮಿಗ್) 21 ಬೈಸನ್ 1959 ರಲ್ಲಿ ತಯಾರಾಗಿದ್ದು, 1963 ರಲ್ಲಿ ಮಿಗ್ 21 ವಿವಿಧ ಆವೃತ್ತಿ ಒಟ್ಟು  874 ವಿಮಾನಗಳು ಭಾರತದ ವಾಯುಸೇನೆಗೆ ಸೇರ್ಪಡೆಯಾಗಿತ್ತು. 1971 ರಲ್ಲಿ ಬಾಂಗ್ಲಾ ಕದನದ ವೇಳೆ ಪ್ರಮುಖ ಪಾತ್ರವಾಹಿಸಿದ್ದ ಮಿಗ್ ಪಾಕಿಸ್ತಾನ 9 ವಿಮಾನಗಳನ್ನು ಹೊಡೆದು ಹಾಕಿತ್ತು. ಉಳಿದ ಯುದ್ಧ ವಿಮಾನಗಳಿಗೆ ಹೋಲಿಸಿದರೆ ಈ ವಿಮಾನಗಳ ಸಾಮರ್ಥ್ಯ ಕಡಿಮೆ ಎಂದು ಗೊತ್ತಾದ ಬಳಿಕ 1990 ರಲ್ಲಿ ಇವುಗಳನ್ನು ಮೇಲ್ದರ್ಜೆಗೆ ಏರಿಸಲಾಗಿತ್ತು. ಇದನ್ನೂ ಓದಿ: 44 ವರ್ಷ ಹಳೆಯ ಕಾರನ್ನು ಯಾರೂ ಬಳಸಲಾರರು – ಮಿಗ್ ಬಳಕೆ ಕುರಿತು ಧನೋವಾ ಮಾತು

    ಸದ್ಯ ಭಾರತದಲ್ಲಿ ಈಗ 100ಕ್ಕೂ ಅಧಿಕ ಮಿಗ್ ವಿಮಾನಗಳಿವೆ. ಖರೀದಿಸಿದ ಪೈಕಿ 500ಕ್ಕೂ ಹೆಚ್ಚು ವಿಮಾನಗಳು ಪತನಗೊಂಡಿದೆ. ಹೀಗಾಗಿ ವಾಯುಪಡೆಯಲ್ಲಿ ಈ ವಿಮಾನಗಳು ಹಾರುವ ಶವಪೆಟ್ಟಿಗೆ ಎಂದೇ ಕುಖ್ಯಾತಿ ಪಡೆದಿವೆ. ಹಾರಾಟದ ಸಮಯದಲ್ಲಿ ಎಂಜಿನ್ ವೈಫಲ್ಯಗೊಂಡು ಪತನದ ಸೂಚನೆ ಸಿಕ್ಕಿದ ಕೂಡಲೇ ಹಲವು ಪೈಲಟ್ ಗಳು ಎಜೆಕ್ಟ್ ಆಗದೇ ವಿಮಾನವನ್ನು ಜನವಸತಿ ಇಲ್ಲದ ಕಡೆಗೆ ತಿರುಗಿಸಿ ಪ್ರಾಣಬಿಟ್ಟಿದ್ದಾರೆ.

    ಹಾರುವ ಶವಪೆಟ್ಟಿಗೆ ಎಂಬ ಕುಖ್ಯಾತಿ, ಎಫ್ 16 ಮುಂದೆ ಏನು ಅಲ್ಲ ಎಂದು ಭಾವಿಸಿದ್ದರೂ ಅಭಿನಂದನ್ ಈ ವಿಮಾನ ಮೂಲಕವೇ ಪಾಕ್ ಸೇನೆಯನ್ನು ಹಿಮ್ಮೆಟ್ಟಿಸಿ ಒಂದು ವಿಮಾನವನ್ನು ಉರುಳಿಸಿದ್ದರು. 2016 ರಲ್ಲಿ 110 ಮಿಗ್ 21 ಜೆಟ್ ವಿಮಾನಗಳನ್ನು ಮೇಲ್ದರ್ಜೆಗೆ ಏರಿಸಲಾಗಿತ್ತು. ಈ ಸಂದರ್ಭದಲ್ಲಿ ಮಲ್ಟಿ ಮೋಡ್ ರೇಡಾರ್, ಉತ್ತಮ ಏವಿಯಾನಿಕ್ಸ್, ಸಂವಹನ ವ್ಯವಸ್ಥೆಯನ್ನು ನೀಡಲಾಗಿತ್ತು. ಇದನ್ನೂ ಓದಿ: ಆರ್ 73 ಸೆಲೆಕ್ಟ್ ಮಾಡಿದ್ದೇನೆ : ಅಭಿನಂದನ್ ಕೊನೆಯ ರೇಡಿಯೋ ಸಂದೇಶ – ಡಾಗ್ ಫೈಟ್ ಹೇಗೆ ನಡೆಯಿತು?

  • ನಿಮ್ಮ ಕುಟುಂಬಕ್ಕಾಗಿ ಸೆಲ್ಫಿ – ಅಭಿನಂದನ್ ಜೊತೆ ಫೋಟೋ ಕ್ಲಿಕ್ಕಿಸಲು ಮುಗಿಬಿದ್ದ ಸಹೋದ್ಯೋಗಿಗಳು

    ನಿಮ್ಮ ಕುಟುಂಬಕ್ಕಾಗಿ ಸೆಲ್ಫಿ – ಅಭಿನಂದನ್ ಜೊತೆ ಫೋಟೋ ಕ್ಲಿಕ್ಕಿಸಲು ಮುಗಿಬಿದ್ದ ಸಹೋದ್ಯೋಗಿಗಳು

    ಶ್ರೀನಗರ: ಪಾಕಿಸ್ತಾನದಿಂದ ಬಿಡುಗಡೆಯಾದ ಬಳಿಕ ಟೈಗರ್ ಅಭಿನಂದನ್ ಹೇಗಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಯಾಕೆಂದರೆ ಇದುವರೆಗೆ ಅವರ ಒಂದೇ ಒಂದು ವೀಡಿಯೋ ರಿಲೀಸ್ ಆಗಿರಲಿಲ್ಲ. ಈಗ ಅಭಿನಂದನ್ ಅವರ ಮೊದಲ ವೀಡಿಯೋ ರಿಲೀಸ್ ಆಗಿದೆ.

    ಎಫ್ 16 ವಿಮಾನವನ್ನು ಹೊಡೆದು ಹಾಕಿ ಪಾಕ್ ಕಸ್ಟಡಿಯಲ್ಲಿದ್ದ ಅಭಿನಂದನ್ ಶ್ರೀನಗರದಲ್ಲಿ ತಮ್ಮ ಸಹೋದ್ಯೋಗಿಗಳನ್ನು ಭೇಟಿಯಾಗಿದ್ದಾರೆ. ಈ ವೇಳೆ ವಾಯು ಸೇನೆಯ ಸೈನಿಕರನ್ನು ಉದ್ದೇಶಿಸಿ ಮಾತನಾಡಿದರು. ಇದಾದ ಬಳಿಕ ಸಹೋದ್ಯೋಗಿಗಳು ಅಭಿನಂದನ್ ಜೊತೆ ಸೆಲ್ಫಿ ಕ್ಲಿಕ್ಕಿಸಲು ಮುಗಿಬಿದ್ದಿದ್ದಾರೆ.

    ಈ ವೇಳೆ ಅಭಿನಂದನ್, ನನ್ನ ಬಿಡುಗಡೆಗಾಗಿ ಪ್ರಾರ್ಥನೆ ಮಾಡಿದ ನಿಮಗೆ ಮತ್ತು ನಿಮ್ಮ ಕುಟುಂಬಸ್ಥರಿಗೆ ನನ್ನ ಧನ್ಯವಾದ, ನಾನು ನಿಮ್ಮ ಕುಟುಂಬಕ್ಕಾಗಿ ಪೋಸ್ ಕೊಡುತ್ತಿದ್ದೇನೆ ಎಂದು ಪ್ರೀತಿಯಿಂದ ಹೇಳಿದ್ದಾರೆ. ಏಪ್ರಿಲ್ ಕೊನೆಯ ವಾರದಲ್ಲಿ ಅಭಿನಂದನ್ ಜೊತೆಗೆ ಫೋಟೋಗಳನ್ನು ಕ್ಲಿಕ್ಕಿಸಿದ್ದು, ಈಗ ವಿಡಿಯೋ ವೈರಲ್ ಆಗಿದೆ.

    ಅಭಿನಂದನ್ ವರ್ಧಮಾನ್ ಅವರು ಶ್ರೀನಗರದಲ್ಲಿರುವ ವಾಯುನೆಲೆಯಲ್ಲಿ ಕರ್ತವ್ಯದಲ್ಲಿದ್ದರು. ಆದರೆ ಅವರಿಗೆ ಜೈಶ್ ಉಗ್ರರ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಅವರನ್ನು ಶ್ರೀನಗರದಿಂದ ಈಗ ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ.

    ಫೆ.27 ರಂದು ಮಿಗ್ 21 ವಿಮಾನದಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕ ಬಿದ್ದಿದ್ದ ಅಭಿನಂದನ್ 58 ಗಂಟೆಗಳ ಬಳಿಕ ಬಿಡುಗಡೆಯಾಗಿದ್ದರು. ಡಿ ಬ್ರೀಫಿಂಗ್ ಆದ ಬಳಿಕ ಅಭಿನಂದನ್ ಅವರಿಗೆ 4 ವಾರಗಳ ಆನಾರೋಗ್ಯದ ರಜೆ ಮೇಲೆ ಮನೆಗೆ ತೆರಳುವಂತೆ ಸಲಹೆ ನೀಡಲಾಗಿತ್ತು. ಆದರೆ ಅಭಿನಂದನ್ ಚೆನ್ನೈನಲ್ಲಿರುವ ಮನೆಗೆ ತೆರಳದೇ ಶ್ರೀನಗರದ ವಾಯುನೆಲೆಗೆ ಮರಳಿದ್ದರು. ಭಾರತಕ್ಕೆ ಮರಳಿದ ನಂತರ ವೈದ್ಯಕೀಯ ಚಿಕಿತ್ಸೆ, ವಾಯು ಸೇನೆಯ ವಿಚಾರಣೆಯ ನಂತರ ರಜೆಗೆ ತೆರಳುವಂತೆ ಸಲಹೆ ನೀಡಲಾಗಿತ್ತು. ಆದರೆ ಅಭಿನಂದನ್ ಮನೆಗೆ ತೆರಳದೇ ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

    ಫೆ.14 ರಂದು ಪುಲ್ವಾಮಾದಲ್ಲಿ ನಡೆದ ದಾಳಿಯನ್ನು ಜೈಷ್-ಎ-ಮೊಹಮ್ಮದ್ ಸಂಘಟನೆ ಹೊಣೆ ಹೊತ್ತುಕೊಂಡ ಬಳಿಕ ಭಾರತ ಪಾಕಿಸ್ತಾನದ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಏರ್ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಪರಿಣಾಮ ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರ ಬೆನ್ನಲ್ಲೇ ಭಾರತ ನೆಲವನ್ನು ಪ್ರವೇಶಿಸಿದ್ದ ಪಾಕ್ ಯುದ್ಧ ವಿಮಾನಗಳು ದಾಳಿ ನಡೆಸಲು ವಿಫಲವಾಗಿ ಹಿಂದಿರುಗಿತ್ತು. ಈ ಸಂದರ್ಭದಲ್ಲಿ ಪಾಕಿಸ್ತಾನ ಎಫ್ 16 ವಿಮಾನವನ್ನು ಚೇಸ್ ಮಾಡುತ್ತಿದ್ದಾಗ ಮಿಗ್ ವಿಮಾನ ಪತನಗೊಂಡು ಅಭಿನಂದನ್ ಪ್ಯಾರಾಚೂಟ್ ಸಹಾಯದಿಂದ ಧುಮುಕಿದ್ದರು.

    ಪಾಕ್ ಅಕ್ರಮಿತ ಪ್ರದೇಶದಲ್ಲಿ ಬಿದ್ದ ವೇಳೆ ಅಭಿನಂದನ್ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ ಪರಿಣಾಮ ಗಾಯಗೊಂಡಿದ್ದರು. ಅದಕ್ಕೂ ಮುನ್ನವೇ ಸೇನೆಗೆ ಸಂಬಂಧಿಸಿದ್ದ ಮುಖ್ಯ ದಾಖಲೆಗಳು ಪಾಕಿಸ್ತಾನದ ಸೇನೆಗೆ ಸಿಗದಂತೆ ಮಾಡಿ ನಾಶ ಪಡಿಸಿದ್ದರು. ಅಲ್ಲದೇ ಕೆಲ ದಾಖಲೆಗಳನ್ನು ತಾವೇ ನುಂಗಿಹಾಕಿದ್ದರು. ಪಾಕಿಸ್ತಾನದಿಂದ ವಾಪಸ್ ಆದ ಬಳಿಕ ಮಾರ್ಚ್ 2 ರಂದು ಅಭಿನಂದನ್ ಅವರನ್ನು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಆಗಿದ್ದರು. ಆ ಬಳಿಕ ದೆಹಲಿಯ ಸೇನೆಯ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದರು.

  • ಎಫ್-16 ಹೊಡೆದು ಹಾಕಿದ್ದು ನಿಜ – ವಾಯುಸೇನೆಯಿಂದ ಸಾಕ್ಷ್ಯ ಬಿಡುಗಡೆ

    ಎಫ್-16 ಹೊಡೆದು ಹಾಕಿದ್ದು ನಿಜ – ವಾಯುಸೇನೆಯಿಂದ ಸಾಕ್ಷ್ಯ ಬಿಡುಗಡೆ

    ನವದೆಹಲಿ: ವಿದೇಶಿ ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಯನ್ನು ನಂಬಿ ಭಾರತ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದ್ದ ಮಂದಿಗೆ ಭಾರತೀಯ ವಾಯುಸೇನೆ ಸಾಕ್ಷ್ಯವನ್ನು ಬಿಡುಗಡೆ ಮಾಡುವ ಮೂಲಕ ಕಪಾಳ ಮೋಕ್ಷ ಮಾಡಿದೆ.

    ಏರ್ ವೈಸ್ ಮಾರ್ಷಲ್ ಆರ್‍ಜಿಕೆ ಕಪೂರ್ ಅವರು ಸುದ್ದಿಗೋಷ್ಠಿ ನಡೆಸಿ, ಫಾಲ್ಕಾನ್ ಏರ್‌ಬಾರ್ನ್ ವಾರ್ನಿಂಗ್ ಆಂಡ್ ಕಂಟ್ರೋಲ್ ಸಿಸ್ಟಂ(ಅವಾಕ್ಸ್) ಸೆರೆ ಹಿಡಿದ ರಾಡಾರ್ ಚಿತ್ರಣವನ್ನು ಬಿಡುಗಡೆ ಮಾಡಿದ್ದಾರೆ.

    ಈ ವೇಳೆ ಪಾಕಿಸ್ತಾನ ಭಾರತದ ಮೇಲೆ ವಾಯು ದಾಳಿ ನಡೆಸಲು ಜೆ – 17 ಮತ್ತು ಎಫ್-16 ವಿಮಾನವನ್ನು ಬಳಸಿದೆ. ಈ ವೇಳೆ ಅಭಿನಂದನ್ ಮಿಗ್ 21 ಮೂಲಕ ಡಾಗ್ ಫೈಟ್ ಮಾಡಿ ಎಫ್ 16 ವಿಮಾನವನ್ನು ಹೊಡೆದು ಉರುಳಿಸಿದ್ದಾರೆ. ಈ ಡಾಗ್ ಫೈಟ್ ನಲ್ಲಿ ಮಿಗ್-21 ಮತ್ತು ಎಫ್-16 ವಿಮಾನ ಪತನಗೊಂಡಿರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಸ್ಪಷ್ಟಪಡಿಸಿದರು.

    ಸುದ್ದಿಗೋಷ್ಠಿಯಲ್ಲಿ ನಮ್ಮ ಜೊತೆ ಮತ್ತಷ್ಟು ಗೌಪ್ಯ ಮಾಹಿತಿಗಳು ಇದ್ದು, ಈ ಮಾಹಿತಿಗಳನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

    ಏನಿದು ವಿವಾದ?
    ಫೆ.27 ರಂದು ಸಂಜೆ ಭಾರತದ ವಾಯುಸೇನೆಯ ಅಧಿಕಾರಿಗಳು ಪಾಕಿಸ್ತಾನದ ಎಫ್ 16 ವಿಮಾನವನ್ನು ಹೊಡೆದು ಹಾಕಿದೆ. ಈ ಸಂಬಂಧ ಎಎಮ್-ಆರ್ ಎಎಎಮ್ ಕ್ಷಿಪಣಿ ಭಾಗವನ್ನು ಸಾಕ್ಷ್ಯವಾಗಿ ತಿಳಿಸಿದ್ದರು.

    ಭಾರತ ಸಾಕ್ಷ್ಯವನ್ನು ನೀಡಿದ್ದರೂ ಪಾಕಿಸ್ತಾನ ಯಾವುದೇ ಎಫ್ 16 ವಿಮಾನವನ್ನು ಹೊಡೆದು ಹಾಕಿಲ್ಲ ಎಂದು ಹೇಳಿತ್ತು. ಇದರ ಬೆನ್ನಲ್ಲೇ ಅಮೆರಿಕದ ಫಾರಿನ್ ಪಾಲಿಸಿ ಅಮೆರಿಕ ನೀಡಿದ ಎಲ್ಲ ಎಫ್ 16 ವಿಮಾನಗಳು ಈಗಲೂ ಪಾಕಿಸ್ತಾನದಲ್ಲಿದೆ. ಭಾರತ ಯಾವುದೇ ಎಫ್ 16 ವಿಮಾನವನ್ನು ಹೊಡೆದು ಹಾಕಿಲ್ಲ ಎಂದು ಅಮೆರಿಕ ರಕ್ಷಣಾ ಅಧಿಕಾರಿಗಳ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿತ್ತು.

    ಈ ವರದಿ ಪ್ರಕಟವಾದ ಬೆನ್ನಲ್ಲೇ ಕೆಲ ವ್ಯಕ್ತಿಗಳು ಭಾರತ ಸರ್ಕಾರ ಸುಳ್ಳು ಹೇಳುತ್ತಿದೆ. ಪ್ರಚಾರಕ್ಕಾಗಿ ಮಿಗ್ 21 ವಿಮಾನ ಎಫ್ 16 ವಿಮಾನವನ್ನು ಹೊಡೆದು ಹಾಕಿದೆ ಎಂದು ಹೇಳುತ್ತಿದೆ ಎಂದು ಆರೋಪಿಸಿದ್ದರು.

    ಫಾರಿನ್ ಪಾಲಿಸಿ ವರದಿಗೆ ಪ್ರತಿಕ್ರಿಯಿಸಿದ್ದ ಪಾಕಿಸ್ತಾನ ಸೇನೆಯ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ಟ್ವೀಟ್ ಮಾಡಿ, ಸತ್ಯಕ್ಕೆ ಯಾವಾಗಲೂ ಜಯವಿದೆ. ಭಾರತಕ್ಕೆ ಇದೀಗ ಸತ್ಯ ಹೇಳುವ ಸಮಯ ಬಂದಿದೆ. ಪಾಕಿಸ್ತಾನ ಹೊಡೆದುರುಳಿಸಿದ ಯುದ್ಧ ವಿಮಾನ ಸೇರಿದಂತೆ ತಮ್ಮ ಕಡೆಯಲ್ಲಿ ಆದ ಸಾವು ನೋವು, ನಷ್ಟಗಳ ಬಗ್ಗೆ ಭಾರತ ನಿಜ ಹೇಳಬೇಕಿದೆ. ಆಕ್ರಮಿತ ಕಾಶ್ಮೀರ ಭಾಗದಲ್ಲಿ ನಡೆಯುವ ಹಿಂಸಾಚಾರದ ಬಗ್ಗೆ ಭಾರತ ಆತ್ಮಾವಲೋಕನ ಮಾಡಿಕೊಳ್ಳಬೇಕು ಆ ಭಾಗದಲ್ಲಿ ಶಾಂತಿ, ಪ್ರಗತಿ ನೆಲೆಸಬೇಕಿದೆ ಎಂದು ಹೇಳಿದ್ದರು.