Tag: MIG

  • ಬೆಂಗ್ಳೂರಿನ ವಿಡಿಯೋ ತೋರಿಸಿ ಭಾರತದ ವಿಮಾನ ಹೊಡೆದಿದ್ದೇವೆ ಎಂದು ಪಾಕ್ ಬೊಗಳೆ!

    ಬೆಂಗ್ಳೂರಿನ ವಿಡಿಯೋ ತೋರಿಸಿ ಭಾರತದ ವಿಮಾನ ಹೊಡೆದಿದ್ದೇವೆ ಎಂದು ಪಾಕ್ ಬೊಗಳೆ!

    ಬೆಂಗಳೂರು: 2016ರಲ್ಲಿ ಜೋಧ್‍ಪುರ್ ನಲ್ಲಿ ಪತನವಾಗಿದ್ದ ಮಿಗ್ ವಿಮಾನದ ದೃಶ್ಯ ಬಳಸಿ ಇಂದು ನಾವು ಬುದ್ಗಾಮ್‍ನಲ್ಲಿ ಭಾರತದ ಎರಡು ಯುದ್ಧ ವಿಮಾನ ಹೊಡೆದುರಳಿಸಿದೆ ಎಂದು ಪಾಕಿಸ್ತಾನ ಸುಳ್ಳು ಹೇಳುತ್ತಿದೆ.

    ಪಾಕ್ ಮಾಧ್ಯಮಗಳು ಹಳೆಯ ವಿಡಿಯೋವನ್ನು ಪ್ರಸಾರ ಮಾಡಿ ಭಾರತದ ವಿಮಾನಗಳನ್ನು ನಾವು ಹೊಡೆದಿದ್ದೇವೆ ಎಂದು ಸುಳ್ಳು ಸುದ್ದಿಯನ್ನು ಪ್ರಸಾರ ಮಾಡುತ್ತಿವೆ.

    ಇದರ ಜೊತೆಯಲ್ಲೇ ಬೆಂಗಳೂರಿನ ಏರ್ ಶೋ ಪೂರ್ವಭಾವಿಯಾಗಿ ಯಲಹಂಕದಲ್ಲಿ ಪತನಗೊಂಡಿದ್ದ ಸೂರ್ಯಕಿರಣ್ ವಿಮಾನದ ಪೈಲಟ್ ಅವರನ್ನು ಸ್ಥಳೀಯರು ರಕ್ಷಿಸುತ್ತಿರುವ ವಿಡಿಯೋಗಳನ್ನು ಪಾಕ್ ಜನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ.

    ಇಂದು ಬೆಳಗ್ಗೆ ಬುದ್ಗಾಮ್‍ನ ನಸಲಾಪುರದಲ್ಲಿ ಗಸ್ತು ತಿರುಗುವ ವೇಳೆ ಮಿಗ್ ಹೆಲಿಕಾಪ್ಟರ್ ಪತನಗೊಂಡಿತ್ತು. ಆದರೆ ಪಾಕಿಸ್ತಾನ 2016ರಲ್ಲಿ ಪತನಗೊಂಡ ಹಳೆ ವಿಡಿಯೋವನ್ನು ಪ್ಲೇ ಮಾಡಿ ನಾವು ಭಾರತದ ಯುದ್ಧ ವಿಮಾನ ಹೊಡೆದುರಳಿಸಿದ್ದೇವೆ ಎಂದು ಬಿಲ್ಡಪ್ ತೆಗೆದುಕೊಳ್ಳುತ್ತಿದ್ದಾರೆ.

    ಪಾಕಿಸ್ತಾನದ ಸೇನಾ ವಕ್ತಾರ ಮೇಜರ್ ಜನರರಲ್ ಅಸಿಫ್ ಗಫೂರ್ ತಮ್ಮ ಟ್ವಿಟ್ಟರಿನಲ್ಲಿ, “ಗಡಿ ನಿಯಂತ್ರಣ ರೇಖೆಯನ್ನು ಕ್ರಾಸ್ ಮಾಡಿದ್ದರಿಂದ ಭಾರತದ ವಾಯುಪಡೆಯ ಎರಡು ಯುದ್ಧ ವಿಮಾನಗಳನ್ನು ಪಾಕಿಸ್ತಾನದ ವಾಯುಸೇನೆ ಹೊಡೆದುರಳಿಸಿದೆ” ಎಂದು ಟ್ವೀಟ್ ಮಾಡಿ ಹೇಳಿಕೆ ನೀಡಿದ್ದರು.

    ಬೆಂಗಳೂರಿನಲ್ಲಿ ಏರ್ ಶೋ ಅಭ್ಯಾಸದ ವೇಳೆ ಎರಡು ಸೂರ್ಯಕಿರಣ ಪತನಗೊಂಡಿತ್ತು. ಈ ವೇಳೆ ಪ್ಯಾರಾಚೂಟ್‍ನಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಪೈಲೆಟ್‍ನನ್ನು ಸ್ಥಳೀಯರು ಅವರನ್ನು ಸಹಾಯ ಮಾಡಿದ್ದರು.

    ಈ ವಿಡಿಯೋವನ್ನು ಪಾಕಿಸ್ತಾನದವರು ಬಳಸಿಕೊಂಡು, “ನಮ್ಮ ಪಾಕಿಸ್ತಾನ ಸೇನೆ ಭಾರತದ ಪೈಲಟ್ ನನ್ನು ಸೆರೆ ಹಿಡಿದು ಈ ರೀತಿ ನೋಡಿಕೊಂಡಿದ್ದಾರೆ. ನಮ್ಮ ಪಾಕಿಸ್ತಾನದ ಸೈನ್ಯಕ್ಕೆ ಸೆಲ್ಯೂಟ್” ಎಂದು ಟ್ವೀಟ್ ಮಾಡಿದ್ದಾರೆ.

    https://twitter.com/ShiiteSMTeam/status/1100660609379643392

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv