Tag: MidTerm Elections

  • ಮಧ್ಯಂತರ ಚುನಾವಣೆಗೆ ಆಗ್ರಹ – ನನ್ನ ಮಹಾ ಸರ್ಕಾರವನ್ನು ಜನರೇ ಉರುಳಿಸಲಿ ಎಂದ ಉದ್ಧವ್ ಠಾಕ್ರೆ

    ಮಧ್ಯಂತರ ಚುನಾವಣೆಗೆ ಆಗ್ರಹ – ನನ್ನ ಮಹಾ ಸರ್ಕಾರವನ್ನು ಜನರೇ ಉರುಳಿಸಲಿ ಎಂದ ಉದ್ಧವ್ ಠಾಕ್ರೆ

    ಮುಂಬೈ: ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಸಬೇಕು. ನನ್ನ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಉರುಳಿಸಲು ಜನರಿಗೇ ಅವಕಾಶ ನೀಡಲಿ ಎಂದು ಶಿವಸೇನಾ ಮಾಜಿ ಸಿಎಂ ಉದ್ಧವ್ ಠಾಕ್ರೆ ಒತ್ತಾಯಿಸಿದ್ದಾರೆ.

    ಶಿವಸೇನೆಯ ಬಂಡಾಯ ನಾಯಕರೂ ಆದ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ ಕುರಿತು ತೀವ್ರ ಚರ್ಚೆ ನಡೆಯುತ್ತಿರುವಾಗಲೇ ಮಧ್ಯಂತರ ಚುನಾವಣೆಗೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ನನ್ನ `ಕಾಳಿ’ ಹಿಂದುತ್ವವನ್ನು ಕಿತ್ತೊಗೆಯುತ್ತಾಳೆ: ಲೀನಾ ಮಣಿಮೇಕಲೈ ಸ್ಫೋಟಕ ಹೇಳಿಕೆ

    ಈ ಕುರಿತು ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ 2019ರಲ್ಲಿ ಜನರು ಯಾವ ರೀತಿ ಘನತೆಯಿಂದ ಸರ್ಕಾರ ಬದಲಿಸಿದರೋ ಅದೇ ರೀತಿಯೇ ಈಗಲೂ ಆಗಲಿ. ಆದರೆ ವಿಶ್ವಾಸಘಾತಕವಾಗಿ ಸರ್ಕಾರ ಬದಲಾಗುವುದು ಬೇಡ. ನೀವು ಅವರ ಸಂಪರ್ಕದಲ್ಲಿ ಇದ್ದು, ನಿಮ್ಮದೇ ಪಕ್ಷಕ್ಕೆ ನಂಬಿಕೆ ದ್ರೋಹ ಮಾಡಿದ್ದೀರಿ ಎಂದು ಏಕನಾಥ್ ಶಿಂಧೆ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: 16 ವರ್ಷದ ಬಾಲಕಿ ಮೇಲೆ ಚಾಕು ಇರಿದು ಹಲ್ಲೆ – ಪೊಲೀಸರಿಗೆ ಮಹಿಳಾ ಆಯೋಗದಿಂದ ನೋಟಿಸ್

    ಜುಲೈ 11ರಂದು ಸುಪ್ರೀಂಕೋರ್ಟ್ ನೀಡಲಿರುವ ತೀರ್ಪು ಶಿವಸೇನಾದ ಭವಿಷ್ಯವನ್ನಷ್ಟೇ ಅಲ್ಲ, ದೇಶದ ಪ್ರಜಾಪ್ರಭುತ್ವದ ಭವಿಷ್ಯವನ್ನೂ ನಿರ್ಧರಿಸಲಿದೆ. ಸೇನಾದ ಬಂಡಾಯ ಶಾಸಕರ ಪೈಕಿ 16 ಶಾಸಕರ ಅನರ್ಹತೆ ಕೋರಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆಯ ತೀರ್ಪು ಅಂದು ಹೊರಬೀಳುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.

    Live Tv
    [brid partner=56869869 player=32851 video=960834 autoplay=true]