Tag: Midday meal

  • Ballari | ಬಿಸಿ ಊಟ ಸೇವಿಸಿ 45 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

    Ballari | ಬಿಸಿ ಊಟ ಸೇವಿಸಿ 45 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

    ಬಳ್ಳಾರಿ: ಬಿಸಿ ಊಟ ಸೇವಿಸಿ 45 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಬಳ್ಳಾರಿ (Ballari) ಜಿಲ್ಲೆ ಕಂಪ್ಲಿ (Kampli) ತಾಲೂಕಿನ ಮೆಟ್ರಿ ಹೊನ್ನಳಿ ಗ್ರಾಮದಲ್ಲಿ ನಡೆದಿದೆ.

    ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಧ್ಯಾಹ್ನ ಬಿಸಿ ಊಟ ಸೇವಿಸಿದ ಬಳಿಕ ವಿದಾರ್ಥಿಗಳಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಕಂಪ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಡುಗೆ ಸಿಬ್ಬಂದಿ ನಿರ್ಲಕ್ಷದಿಂದಲೇ ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಕೆಲ ಕೋರ್ಟ್‌ಗಳು ಬಿಜೆಪಿ ಹೇಳಿದಂತೆ ಕೇಳುತ್ತಿವೆ: ಯತೀಂದ್ರ ಸಿದ್ದರಾಮಯ್ಯ

    ತಹಶೀಲ್ದಾರ್ ಹಾಗೂ ತಾಲೂಕು ವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ್ದಾರೆ. ನಿರ್ಲಕ್ಷ್ಯ ತೋರಿದ ಅಡುಗೆ ಸಿಬ್ಬಂದಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದಾರೆ. ಇದನ್ನೂ ಓದಿ: ತುರ್ತು ವಿಚಾರಣೆಗೆ ಇ-ಮೇಲ್ ಮಾಡಿ, ಮೌಖಿಕ ಮನವಿ ನಡೆಯಲ್ಲ: ನೂತನ ಸಿಜೆಐ ಸಂಜೀವ್ ಖನ್ನಾ ಸೂಚನೆ

  • ಬಿಸಿಯೂಟ ಸೇವನೆ ಶಾಲಾ ಮಕ್ಕಳು ಅಸ್ವಸ್ಥ – ಆಸ್ಪತ್ರೆಗೆ ದಾಖಲು

    ಬಿಸಿಯೂಟ ಸೇವನೆ ಶಾಲಾ ಮಕ್ಕಳು ಅಸ್ವಸ್ಥ – ಆಸ್ಪತ್ರೆಗೆ ದಾಖಲು

    ಬಾಗಲಕೋಟೆ: ಬಿಸಿಯೂಟ ಸೇವಿಸಿ 20 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರನ್ನ ಬೆಳಗಲಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಸರ್ಕಾರಿ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಮಧ್ಯಾಹ್ನದ ಅನ್ನ-ಸಾಂಬರ್ ಬಿಸಿಯೂಟ ಸೇವಿಸಿದ್ರು. ಬಳಿಕ ಬಿಸಿಯೂಟ ಸೇವಿಸಿದ 20ಕ್ಕೂ ಹೆಚ್ಚು ಮಕ್ಕಳಿಗೆ ಹೊಟ್ಟೆನೋವು, ವಾಂತಿ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತ ಶಾಲಾ ಸಿಬ್ಬಂದಿ ಅಸ್ವಸ್ಥಗೊಂಡ ಮಕ್ಕಳನ್ನ ರನ್ನಬೆಳಗಲಿ ಗ್ರಾಮದ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು.

    ನಂತರ ಇನ್ನುಳಿದ ಮಕ್ಕಳಿಗೂ ಹೊಟ್ಟೆನೋವು ಕಾಣಿಕೊಂಡ ಪರಿಣಾಮ, ಬಿಸಿಯೂಟ ಸೇವಿಸಿದ 56 ಶಾಲಾ ಮಕ್ಕಳನ್ನೂ 108 ವಾಹನದ ಮೂಲಕ ಮುಧೋಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸದ್ಯ ಶಾಲೆಯ ಎಲ್ಲ ವಿದ್ಯಾರ್ಥಿಗಳನ್ನು ವೈದ್ಯರು ತಪಾಸಣೆ ಮಾಡಿದ್ದು ಯಾವುದೇ ಅಪಾಯ ಇಲ್ಲ ಎಂದು ಡಿಎಚ್‍ಓ ಅನಂತ್ ದೇಸಾಯಿ ಸ್ಪಷ್ಟಪಡಿಸಿದ್ದಾರೆ. ಆದರೆ ಬಿಯೂಟಕ್ಕೆ ಮಾಡಲಾಗಿದ್ದ ಸಾಂಬರ್ ಗೆ ಬಳಸಿದ ತರಾಕಾರಿಗಳು ಕೊಳೆತಿದ್ದು, ಸಾಂಬರ್ ನಲ್ಲಿ ಹಲ್ಲಿ ಬಿದ್ದು ಈ ಆವಾಂತರಕ್ಕೆ ಕಾರಣವಾಗಿದೆ ಎಂದು ಮಕ್ಕಳ ಪೋಷಕರು ಶಾಲಾ ಸಿಬ್ಬಂದಿಯ ಬೇಜವಾಬ್ದಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಅಲ್ಲದೇ ಇಂತಹ ಬೇಜವಾಬ್ದಾರಿ ಸಿಬ್ಬಂದಿಯ ಮೇಲೆ ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಆಗ್ರಹಿಸಿದರು. ಇತ್ತ ವೈದ್ಯರು ಆಹಾರದಲ್ಲಿ ಕಣ್ತಪ್ಪಿನಿಂದ ಏನೋ ಕಲಬೆರಿಕೆ ಯಾಗಿರೋದು ಮಕ್ಕಳು ಅಸ್ವಸ್ಥಗೊಳ್ಳಲು ಕಾರಣ ಎಂದು ಹೇಳಿದ್ದಾರೆ. ಸ್ಥಳಕ್ಕೆ ಡಿಡಿಪಿಐ ಹಾಗೂ ಮುಧೋಳ ತಹಶೀಲ್ದಾರ್ ಹಾಗೂ ಸಿಪಿಐ ಎಚ್ ಆರ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ವಿದ್ಯಾರ್ಥಿಗಳೊಂದಿಗೆ ಬಿಸಿಯೂಟ ಸೇವಿಸಿ ಪರಿಶೀಲಿಸಿದ ರಾಯಚೂರು ಎಸ್ಪಿ

    ವಿದ್ಯಾರ್ಥಿಗಳೊಂದಿಗೆ ಬಿಸಿಯೂಟ ಸೇವಿಸಿ ಪರಿಶೀಲಿಸಿದ ರಾಯಚೂರು ಎಸ್ಪಿ

    ರಾಯಚೂರು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ ವೇದಮೂರ್ತಿ ಸರ್ಕಾರಿ ಶಾಲೆಗೆ ದಿಢೀರ್ ಭೇಟಿನೀಡಿ ಪರಿಶೀಲನೆ ನಡೆಸಿ ಶಾಲಾ ಸಿಬ್ಬಂದಿಗೆ ಶಾಕ್ ನೀಡಿದ್ದಾರೆ.

    ರಾಯಚೂರು ನಗರದ ಪೊಲೀಸ್ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನ ಪರಿಶೀಲಿಸಿದರು. ಪೊಲೀಸ್ ಸಿಬ್ಬಂದಿ ಮಕ್ಕಳು ಹೆಚ್ಚಾಗಿ ಓದುವ ಶಾಲೆಯಲ್ಲಿನ ಆಹಾರ ಗುಣಮಟ್ಟದ ಬಗ್ಗೆ ಮಾಹಿತಿ ಪಡೆದರು.

    ಶಾಲೆಯಲ್ಲಿ ತಯಾರಾದ ಬಿಸಿಯೂಟದ ಗುಣಮಟ್ಟವನ್ನು ಪರೀಕ್ಷಿಸಿ ಬಳಿಕ ಮಕ್ಕಳೊಂದಿಗೆ ಸರತಿ ಸಾಲಿನಲ್ಲಿ ಕುಳಿತು ಬಿಸಿಯೂಟ ಸೇವಿಸಿದರು. ಶಾಲೆಯ ಮಕ್ಕಳೊಂದಿಗೆ ಮಾತನಾಡಿ ಶಾಲೆಯ ಬಗ್ಗೆ ಮತ್ತು ಸಮಸ್ಯೆ ಬಗ್ಗೆ ಮಾಹಿತಿ ಪಡೆದರು. ಕಷ್ಟಪಟ್ಟು ಚೆನ್ನಾಗಿ ಓದಿ ಶಾಲೆ ಹಾಗೂ ಜಿಲ್ಲೆಗೆ ಕೀರ್ತಿ ತನ್ನಿ ಎಂದು ಮಕ್ಕಳಿಗೆ ಕರೆ ನೀಡಿದರು.

  • ಬಿಸಿಯೂಟ ಸೇವಿಸಿದ್ದ 30 ಮಕ್ಕಳು ರಾತ್ರಿ ಅಸ್ವಸ್ಥ

    ಬಿಸಿಯೂಟ ಸೇವಿಸಿದ್ದ 30 ಮಕ್ಕಳು ರಾತ್ರಿ ಅಸ್ವಸ್ಥ

    ಬೆಳಗಾವಿ: ಬಿಸಿಯೂಟ ಸೇವಿಸಿದ್ದ ಮಕ್ಕಳು ರಾತ್ರಿ ಅಸ್ವಸ್ಥರಾದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಡಿ ನಾಗಲಾಪುರದಲ್ಲಿ ನಡೆದಿದೆ.

    ನಾಗಲಾಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ಮಕ್ಕಳು ಮಧ್ಯಾಹ್ನ ಬಿಸಿಯೂಟ ಸೇವಿಸಿದ್ದಾರೆ. ಶಾಲೆಯ ಅವಧಿ ಮುಗಿದ ನಂತರ ರಾತ್ರಿ ಮಕ್ಕಳಿಗೆ ವಾಂತಿ ಹಾಗೂ ಭೇದಿ ಆರಂಭವಾಗಿದೆ. ತಕ್ಷಣ ಕುಟುಂಬಸ್ಥರು ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ.

    ಬಿಸಿಯೂಟ ಸೇವಿಸಿ 30 ಮಕ್ಕಳು ಅಸ್ವಸ್ಥರಾಗಿದ್ದು, ಅವರನ್ನು ಹಿರೇಬಾಗೇವಾಡಿ ಆಸ್ಪತ್ರೆಗೆ ರವಾನಿಸಲಾಗಿದೆ. ಕಳೆದ ರಾತ್ರಿಯೇ ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಗೆ ಶಾಸಕ ಮಹಾಂತೇಶ ದೊಡ್ಡಗೌಡರ ಭೇಟಿ ನೀಡಿ ಮಕ್ಕಳ ಆರೋಗ್ಯವನ್ನು ವಿಚಾರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

    ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

    ಬಳ್ಳಾರಿ: ಶಾಲೆಯಲ್ಲಿ ನೀಡಿದ ಮಧ್ಯಾಹ್ನದ ಬಿಸಿಯೂಟ ಸೇವಿಸಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಗದ್ದಿಕೇರಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಪ್ರೌಢಶಾಲೆಯಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದು, ಮಧ್ಯಾಹ್ನ ಬಿಸಿಯೂಟ ಸೇವಿಸುತ್ತಿದಂತೆ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಕೂಡಲೇ ವಿದ್ಯಾಥಿಗಳನ್ನು ಸ್ಥಳೀಯ ಹಗರಿಬೊಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಸದ್ಯ ವಿದ್ಯಾರ್ಥಿಗಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

    ಶಾಲೆಯಲ್ಲಿಯೇ ತಯಾರಿಸಲಾಗಿದ್ದ ಊಟದಲ್ಲಿ ಹಲ್ಲಿ ಬಿದ್ದ ಕಾರಣ ಈ ಅವಘಡ ನಡೆದಿದೆ ಎಂಬ ಮಾಹಿತಿ ಲಭಿಸಿದೆ. ಯಾವುದೇ ಶಾಲೆಯಲ್ಲಿ ಬಿಸಿಯೂಟ ತಯಾರದ ಬಳಿಕ ಶಾಲೆ ಮುಖ್ಯ ಶಿಕ್ಷಕರು ಸೇವಿಸಿದ ಬಳಿಕ ವಿದ್ಯಾರ್ಥಿಗಳು ಸೇವನೆ ಮಾಡಬೇಕು. ಆದರೆ ನಿಯಮವನ್ನು ಶಿಕ್ಷಕರು ಪಾಲಿಸಿಲ್ಲ. ಒಂದೊಮ್ಮೆ ನಿಯಮ ಪಾಲನೆ ಮಾಡಿದ್ದಾರೆ ಇಷ್ಟು ಮಕ್ಕಳು ಆಸ್ವಸ್ಥರಾಗುವುದನ್ನು ತಪ್ಪಿಸುವ ಅವಕಾಶವಿತ್ತು ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಮ್ಮನ ಕೊಲೆ ಸೇಡಿಗೆ ಬಿಸಿಯೂಟಕ್ಕೆ ವಿಷ ಬೆರೆಸಿದ 7ನೇ ತರಗತಿ ವಿದ್ಯಾರ್ಥಿನಿ !

    ತಮ್ಮನ ಕೊಲೆ ಸೇಡಿಗೆ ಬಿಸಿಯೂಟಕ್ಕೆ ವಿಷ ಬೆರೆಸಿದ 7ನೇ ತರಗತಿ ವಿದ್ಯಾರ್ಥಿನಿ !

    ಲಕ್ನೋ: ತಮ್ಮನನ್ನು ಕೊಲೆ ಮಾಡಿದರು ಅಂತಾ 7ನೇ ತರಗತಿ ಬಾಲಕಿಯೊಬ್ಬಳು ಬಿಸಿಯೂಟದಲ್ಲಿ ವಿಷ ಬೆರೆಸಿ ಎಲ್ಲ ವಿದ್ಯಾರ್ಥಿಗಳನ್ನು ಕೊಲೆ ಮಾಡಲು ಹೋಗಿ ಸಿಕ್ಕಿಬಿದ್ದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಉತ್ತರ ಪ್ರದೇಶದ ಬಂಕಟ್ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಯಲ್ಲಿ ಪ್ರಕರಣ ನಡೆದಿದ್ದು, ಬಾಲಕಿ ಹಾಗೂ ಆಕೆಯ ತಾಯಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ನಡೆದದ್ದು ಏನು?
    ಇದೇ ಶಾಲೆಯಲ್ಲಿ ಬಾಲಕಿ 7ನೇ ತರಗತಿ ಹಾಗೂ ಆಕೆಯ ತಮ್ಮ 3ನೇ ತರಗತಿ ಓದುತ್ತಿದ್ದರು. 2018ರ ಏಪ್ರಿಲ್‍ನಲ್ಲಿ ಬಾಲಕಿಯ ತಮ್ಮನನ್ನು 5ನೇ ತರಗತಿ ವಿದ್ಯಾರ್ಥಿಯೊಬ್ಬ ಕೊಲೆ ಮಾಡಿದ್ದ. ಕೊಲೆ ಮಾಡಿದ್ದ ಆರೋಪಿ ಬಾಲಾಪರಾಧಿ ಕಾರಾಗೃಹದಲ್ಲಿ ಇದ್ದಾನೆ. ಆದರೆ ತಮ್ಮನ ಕೊಲೆಯಿಂದ ಮನನೊಂದ ಬಾಲಕಿ ಶಾಲೆಯ ಎಲ್ಲ ಮಕ್ಕಳ ಮೇಲೆ ದ್ವೇಷ ಸಾಧಿಸಲು ಕೊಲೆಗೆ ಯತ್ನಿಸಿದ್ದಾಳೆ ಎಂದು ವರದಿಯಾಗಿದೆ.

    ಮಂಗಳವಾರ ಶಾಲೆಯ ಬಿಸಿಯೂಟದ ಮನೆಯಿಂದ ಬಾಲಕಿ ಹೊರಬಂದಿದ್ದಳು. ಬಾಲಕಿಯ ಕೈಗಳಿಂದ ವಿಷದ ವಾಸನೆ ಬರುತ್ತಿದ್ದು, ಬೇಳೆ ಸಾರಿನ ಪಾತ್ರೆ ತೆರೆದಿದ್ದರಿಂದ ಶಂಕೆ ವ್ಯಕ್ತಪಡಿಸಿದ ಅಡುಗೆ ಸಹಾಯಕಿ ಶಾಲೆಯ ಪ್ರಾಚಾರ್ಯ ಭ್ರಿಗುನಾಥ್ ಪ್ರಸಾದ್ ಅವರಿಗೆ ದೂರು ನೀಡಿದ್ದರು. ಅದೃಷ್ಟವಶಾತ್ ಯಾವುದೇ ಮಕ್ಕಳು ಊಟ ಮಾಡದಿರಲಿಲ್ಲ. ಹೀಗಾಗಿ ಭಾರೀ ಅನಾಹುತ ತಪ್ಪಿದೆ.

    ವಿಷಯ ತಿಳಿಯುತ್ತಿದ್ದಂತೆ ಶಾಲೆಗೆ ಬಂದು ವಿದ್ಯಾರ್ಥಿಗಳ ಪೋಷಕರು ಹಾಗೂ ಸಾರ್ವಜನಿಕರು ಬಾಲಕಿ ಹಾಗೂ ಆಕೆಯ ತಾಯಿಯನ್ನು ಸುತ್ತುವರೆದು ಥಳಿಸಿ, ಕೂಡಿ ಹಾಕಿದ್ದರು. ಸ್ಥಳಕ್ಕೆ ಬಂದ ಪೊಲೀಸರು ತಾಯಿ ಹಾಗೂ ಬಾಲಕಿಯನ್ನು ವಶಕ್ಕೆ ಪಡೆದಿದ್ದಾರೆ. ಆಹಾರವನ್ನು ವಿಷ ಪರೀಕ್ಷೆಗೆ ಕಳುಹಿಸಲಾಗಿದ್ದು, ಮೂರು ದಿನಗಳ ನಂತರ ವರದಿ ಬರಲಿದ್ದು, ಅಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳಲು ಬರುವುದಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.

  • ಬಿಸಿಯೂಟ, ಶರತ್ ಮಡಿವಾಳ ಹತ್ಯೆ ಕುರಿತ ಆರೋಪಕ್ಕೆ ರಮಾನಾಥ ರೈ ಬೇಸರ

    ಬಿಸಿಯೂಟ, ಶರತ್ ಮಡಿವಾಳ ಹತ್ಯೆ ಕುರಿತ ಆರೋಪಕ್ಕೆ ರಮಾನಾಥ ರೈ ಬೇಸರ

    ಮಂಗಳೂರು: ಸರಕಾರಿ ಶಾಲೆಗಳಿಗೆ ಮಾತ್ರ ಬಿಸಿಯೂಟ ನೀಡುವುದು ನಿಯಮ ಎನ್ನುವ ಕಾರಣಕ್ಕೆ ಮಧ್ಯಾಹ್ನದ ಊಟವನ್ನು ನಿಲ್ಲಿಸಲಾಗಿತ್ತು. ಆದರೆ ಶಾಲೆಯ ಮಕ್ಕಳ ಅನ್ನ ಕಸಿದುಕೊಂಡ್ರು ಅಂತ ನನ್ನ ಮೇಲೆ ಗೂಬೆ ಕೂರಿಸಿದ್ರು ಅಂತ ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಶಾಲೆಗೆ ಮಧ್ಯಾಹ್ನದ ಬಿಸಿಯೂಟ, ಕೊಲ್ಲೂರು ಮೂಕಾಂಬಿಕೆ ದೇವಾಸ್ಥಾನದಿಂದ ಬರುತ್ತಿತ್ತು. ಆದ್ರೆ ಸರ್ಕಾರದ ನಿಯಮದಂತೆ ಅದನ್ನು ನಿಲ್ಲಿಸಲಾಗಿತ್ತು. ಆದ್ರೆ ಬಳಿಕ ನನ್ನ ಮೇಲೆಯೇ ಆರೋಪ ಮಾಡಲಾಗಿತ್ತು ಅಂತ ಅವರು ವಿಷಾದ ವ್ಯಕ್ತಪಡಿಸಿದ್ರು.

    ಶಿಕ್ಷಣ ಇಲಾಖೆಯಿಂದ ಬಿಸಿಯೂಟ ನೀಡುವ ವ್ಯವಸ್ಥೆ ಇದೆ. ಅದರೆ ಅಂದು ಬಿಸಿಯೂಟ ಕೊಡ್ತೀವಿ ಅಂದ್ರು ಬೇಡ ಎಂದಿದ್ದರು. ಹೀಗಿರುವಾಗ ಮಕ್ಕಳನ್ನು ಬೀದಿಯಲ್ಲಿ ನಿಲ್ಲಿಸಿ ನನ್ನ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಿದ್ದರು. ಆದರೆ ಈಗ ಅವರೇ ಬಿಸಿಯೂಟ ಕೇಳಿದ್ದಾರೆ. ಇಲಾಖೆ ಕೊಡ್ತಾ ಇದೆ. ಇದರ ಬಗ್ಗೆ ಈಗ್ಯಾಕೆ ಯಾರು ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

    ಇನ್ನು ಬಂಟ್ವಾಳದಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ವಿಚಾರದಲ್ಲಿ ಕೂಡ ಬಿಜೆಪಿಯವರು ಅಪಪ್ರಾಚಾರ ಮಾಡಿದರು. ಅದಕ್ಕಾಗಿ ಕಾನತ್ತೂರಿಗೆ ಹೋಗಿ ಬೇಡಿಕೊಂಡರೂ ತಮಾಷೆ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

  • ಬಿಸಿಯೂಟ ಕಳಪೆಯಾಗಿದೆ ಅಂದಿದ್ದ ವಿದ್ಯಾರ್ಥಿಗೆ ರಾಡ್‍ನಿಂದ ಹಲ್ಲೆಗೈದ ಪ್ರಾಂಶುಪಾಲೆ!

    ಬಿಸಿಯೂಟ ಕಳಪೆಯಾಗಿದೆ ಅಂದಿದ್ದ ವಿದ್ಯಾರ್ಥಿಗೆ ರಾಡ್‍ನಿಂದ ಹಲ್ಲೆಗೈದ ಪ್ರಾಂಶುಪಾಲೆ!

    (ಸಾಂದರ್ಭಿಕ ಚಿತ್ರ)

    ಡೆಹ್ರಾಡೂನ್: ಬಿಸಿಯೂಟದ ಗುಣಮಟ್ಟ ಕಳಪೆಯಾಗಿದೆ ಎಂದು ದೂರಿದ ವಿದ್ಯಾರ್ಥಿಯ ಮೇಲೆ ಪ್ರಾಂಶುಪಾಲೆ ಕಬ್ಬಿಣದ ರಾಡ್‍ನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಅಮಾನವೀಯ ಘಟನೆ ಉತ್ತರಾಖಂಡ್ ರಾಜ್ಯದಲ್ಲಿ ನಡೆದಿದೆ.

    ಡೆಹ್ರಾಡೂನ್ ಜಿಲ್ಲೆಯ ಓಲ್ಡ್ ದಲಾನ್‍ವಾಲಾ ಪ್ರದೇಶ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯ 5ನೇ ತರಗತಿಯ 11 ವರ್ಷದ ರಾಹುಲ್ ಹಲ್ಲೆಗೆ ಒಳಗಾದ ವಿದ್ಯಾರ್ಥಿಯಾಗಿದ್ದಾನೆ.

    ಸರ್ಕಾರಿ ಹಾಗೂ ಅನುದಾನಿತ ಶಾಲೆಯ ಮಕ್ಕಳಿಗೆ ಮಧ್ಯಾಹ್ನ ಊಟ ನೀಡಲಾಗುತ್ತದೆ. ಈ ಊಟದ ಗುಣಮಟ್ಟ ಕಳಪೆಯಾಗಿದೆ ಎಂದು ರಾಹುಲ್ ಪ್ರಾಂಶುಪಾಲೆ ನಸ್ರೀನ್ ಬಾನೋಗೆ ದೂರು ನೀಡಿದ್ದ. ಸಮಸ್ಯೆಯನ್ನು ಅರಿತು ಬಗೆಹರಿಸುವ ಬದಲು ಕೋಪಗೊಂಡ ಆರೋಪಿ ಬಾನೋ ಕಬ್ಬಿಣದ ರಾಡ್‍ನಿಂದ ವಿದ್ಯಾರ್ಥಿ ರಾಹುಲ್‍ಗೆ ಮನಬಂದಂತೆ ಥಳಿಸಿದ್ದಾಳೆ

    ಮಾರಣಾಂತಿಕ ಹಲ್ಲೆಯಿಂದಾಗಿ ರಕ್ತಸ್ರಾವ ಉಂಟಾಗಿ ರಾಹುಲ್ ಪ್ರಜ್ಞೆತಪ್ಪಿ ಬಿದ್ದಿದ್ದಾನೆ. ತಕ್ಷಣವೇ ಸ್ನೇಹಿತರು ಆತನ ಮನೆಗೆ ಎತ್ತಿಕೊಂಡು ಹೋಗಿದ್ದಾರೆ. ಆಘಾತಕ್ಕೆ ಒಳಗಾದ ಪೋಷಕರು ಮಗನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕ  ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

    ಬಾಲಕನ ತಂದೆ ಧರ್ಮೆಂದ್ರ ಅವರು ಆರೋಪಿಯಾಗಿರುವ ನಸ್ರೀನ್ ಬಾನೋ ವಿರುದ್ಧ ಪಾಸ್ವಾನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.