Tag: Micronesia

  • ಸಮುದ್ರಕ್ಕೆ ನುಗ್ಗಿತ್ತು 47 ಪ್ರಯಾಣಿಕರಿದ್ದ ವಿಮಾನ!- ವಿಡಿಯೋ ನೋಡಿ

    ಸಮುದ್ರಕ್ಕೆ ನುಗ್ಗಿತ್ತು 47 ಪ್ರಯಾಣಿಕರಿದ್ದ ವಿಮಾನ!- ವಿಡಿಯೋ ನೋಡಿ

    ಪಲಿಕಿರ್: ತಾಂತ್ರಿಕ ದೋಷದಿಂದಾಗಿ 47 ಜನರಿದ್ದ ಪ್ರಯಾಣಿಕ ವಿಮಾನವೊಂದು ರನ್ ವೇಯಿಂದ ಮುನ್ನುಗ್ಗಿ ಸಮುದ್ರಕ್ಕೆ ಬಿದ್ದಿರುವ ಘಟನೆ ದಕ್ಷಿಣ ಪೆಸಿಫಿಕ್ ಸಾಗರದ ದ್ವೀಪ ರಾಷ್ಟ್ರವಾದ ಮೈಕ್ರೋನೇಷ್ಯಾದ ಛುಕ್ ಪ್ರದೇಶದಲ್ಲಿ ನಡೆದಿದೆ.

    ಕಳೆದ ಶುಕ್ರವಾರ ತಾಂತ್ರಿಕ ದೋಷದಿಂದಾಗಿ ಬೋಯಿಂಗ್ 737 ವಿಮಾನವು, ನಿಲ್ದಾಣದ ರನ್ ವೇ ನಿಂದ ಮುನ್ನುಗ್ಗಿ ಸಮುದ್ರಕ್ಕೆ ಬಿದ್ದಿದೆ. ಕೂಡಲೇ ವಿಮಾನ ನಿಲ್ದಾಣ ಸಿಬ್ಬಂದಿ ಹಾಗೂ ರಕ್ಷಣಾ ಪಡೆಗಳು ವಿಮಾನದಲ್ಲಿದ್ದ ಎಲ್ಲಾ 47 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಅಲ್ಲದೇ ವಿಮಾನ ಸಮುದ್ರಕ್ಕೆ ನುಗ್ಗುತ್ತಲೇ ಕೆಲವು ಪ್ರಯಾಣಿಕರು ವಿಮಾನದ ತುರ್ತು ಬಾಗಿಲನ್ನು ತೆರೆದು, ಸಮುದ್ರದಲ್ಲಿ ಈಜಿ ದಡ ಸೇರುವ ಮೂಲಕ ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ.

    ಅಪಘಾತವಾದ ಬೋಯಿಂಗ್ 737 ವಿಮಾನವು ಪಪುವಾ ನ್ಯೂಗಿನಿಯಾ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾದ `ಏರ್ ನ್ಯೂಗಿನಿ’ಗೆ ಸೇರಿದ್ದಾಗಿದೆ. ವಿಮಾನದಲ್ಲಿ 36 ಪ್ರಯಾಣಿಕರು ಹಾಗೂ 11 ಮಂದಿ ಸಿಬ್ಬಂದಿಯಿದ್ದರು. ವಿಮಾನವು ವೆನೋ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ವೇಳೆ, ತಾಂತ್ರಿಕ ದೋಷದಿಂದ ನಿಯಂತ್ರಣಕ್ಕೆ ಬಾರದೆ ರನ್ ವೇ ದಾಟಿ ಸಮುದ್ರದ ಕಡೆ ನುಗ್ಗಿದೆ.

    ಘಟನೆ ಸಂಬಂಧ ಏರ್ ನ್ಯೂಗಿನಿಯಾ ವಿಮಾನಯಾನ ಸಂಸ್ಥೆ ತನಿಖೆ ಕೈಗೊಂಡಿದೆ. ಅಲ್ಲದೇ ವೆನೋ ವಿಮಾನದ ಸುತ್ತಮುತ್ತ ಭಾರೀ ಮಳೆ ಬಿದ್ದ ಹಿನ್ನೆಲೆಯಲ್ಲಿ ಪೈಲೆಟ್‍ಗಳು ರನ್‍ವೇ ಅನ್ನು ಗುರುತಿಸುವಲ್ಲಿ ವಿಫಲರಾಗಿದ್ದೇ ಅವಘಡಕ್ಕೆ ಕಾರಣ ಎಂಬುದಾಗಿ ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ.

    https://twitter.com/burebasgal/status/1045486053040091136

    ವಿಮಾನ ಸಮುದ್ರಕ್ಕೆ ಬಿದ್ದು, ಅರ್ಧ ಮುಳುಗಿದ್ದರೂ ನಮಗೆ ವಿಮಾನ ಮುಳುಗುತ್ತಿರುವ ವಿಚಾರ ಗೊತ್ತೆ ಆಗಿರಲಿಲ್ಲ. ರಕ್ಷಣಾ ಸಿಬ್ಬಂದಿಯವರು ಸ್ಥಳಕ್ಕೆ ಬಂದಾಗ ನಮಗೆ ವಿಮಾನ ಅವಘಡ ಸಂಭವಿಸಿರುವ ಬಗ್ಗೆ ತಿಳಿಯಿತು ಎಂದು ಭಾರೀ ದುರಂತದಿಂದ ಪಾರಾದ ಪ್ರಯಾಣಿಕರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv