Tag: micromax

  • ಮೈಕ್ರೋಮ್ಯಾಕ್ಸ್‌ನಿಂದ ಕಡಿಮೆ ಬೆಲೆಯ 2 ಫೋನ್‌ ಬಿಡುಗಡೆ- ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ಮೈಕ್ರೋಮ್ಯಾಕ್ಸ್‌ನಿಂದ ಕಡಿಮೆ ಬೆಲೆಯ 2 ಫೋನ್‌ ಬಿಡುಗಡೆ- ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ನವದೆಹಲಿ: ಮತ್ತೆ ಮೈಕ್ರೋಮ್ಯಾಕ್ಸ್‌ ಸ್ಮಾರ್ಟ್‌ ಫೋನ್‌ ಮಾರುಕಟ್ಟೆಗೆ ಎಂಟ್ರಿಕೊಟ್ಟಿದ್ದು, ಇನ್‌ ಸೀರಿಸ್‌ನಲ್ಲಿ ಎರಡು ಕಡಿಮೆ ಬೆಲೆಯ ಡ್ಯುಯಲ್‌ ಸಿಮ್‌ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

    ಮೈಕ್ರೋಮ್ಯಾಕ್ಸ್‌ ಇನ್‌ 1ಬಿ ಮತ್ತು ಮೈಕ್ರೋಮ್ಯಾಕ್ಸ್‌ ಇನ್‌ ನೋಟ್‌ 1 ಹೆಸರಿನಲ್ಲಿ ಫೋನ್‌ ಬಿಡುಗಡೆ ಮಾಡಿದೆ. ಎರಡು ಫೋನುಗಳು ಸ್ಟಾಕ್‌ ಆಂಡ್ರಾಯ್ಡ್‌ ನೊಂದಿಗೆ ಬಿಡುಗಡೆಯಾಗಿದೆ. ಹೀಗಾಗಿ ಆಂಡ್ರಾಯ್ಡ್‌ ಅಪ್‌ಡೇಟ್‌ ಬೇಗನೇ ಸಿಗಲಿದೆ. ಅಷ್ಟೇ ಅಲ್ಲದೇ ಬ್ಲೋಟ್‌ವೇರ್‌ ಅಥವಾ ಯೂಸರ್‌ ಇಂಟರ್‌ ಫೇಸ್‌ ಆಧಾರಿತ ಯಾವುದೇ ಅಪ್ಲಿಕೇಶನ್‌ಗಳನ್ನು ಈ ಫೋನಿಗೆ ನೀಡಿಲ್ಲ. ಸಾಧಾರಣವಾಗಿ ಕಡಿಮೆ ಬೆಲೆಯ ಫೋನಿನಲ್ಲಿ ಗ್ರಾಹಕರು ಬಳಕೆ ಮಾಡದೇ ಇರುವ ಆಪ್‌ಗಳು ಪ್ಲಿ ಲೋಡೆಡ್‌ ಆಗಿ ಇನ್‌ಸ್ಟಾಲ್‌ ಆಗಿರುತ್ತದೆ. ಆದರೆ ಈ ಫೋನಿನಲ್ಲಿ ಅನಗತ್ಯವಾಗಿರುವ ಬ್ಲೋಟ್‌ವೇರ್‌ ಆಪ್‌ಗಳು ಇಲ್ಲ ಎಂದು ಮೈಕ್ರೋಮ್ಯಾಕ್ಸ್‌ ಹೇಳಿದೆ.

    ಬೆಲೆ ಎಷ್ಟು?
    ಮೈಕ್ರೋಮ್ಯಾಕ್ಸ್‌ ಇನ್‌ 1ಬಿ ಎರಡು ಮಾದರಿಯಲ್ಲಿ ಬಿಡುಗಡೆಯಾಗಿದೆ. 2ಜಿಬಿ ರಾಮ್‌+ 32 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 6,999 ರೂ. ದರವನ್ನು ನಿಗದಿ ಮಾಡಿದೆ. 4ಜಿಬಿ ರಾಮ್‌+ 64 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 7,999 ರೂ. ದರವನ್ನು ನಿಗದಿ ಮಾಡಿದೆ.

    ಇನ್‌ ನೋಟ್‌ 1 ಫೋನ್‌ ಎರಡು ಮಾದರಿಯಲ್ಲಿ ಬಿಡುಗಡೆಯಾಗಿದೆ. 4ಜಿಬಿ ರಾಮ್‌ + 64 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 10,999 ರೂ., 4 ಜಿಬಿ ರಾಮ್‌ + 128 ಜಿಬಿ ಆಂತರಿಕ ಮಮೊರಿಯ ಫೋನಿಗೆ 12,999 ರೂ. ದರ ನಿಗದಿಯಾಗಿದೆ. ನ.24 ರ ನಂತರ ಮೈಕ್ರೋಮ್ಯಾಕ್ಸ್‌ ಅಥವಾ ಪ್ಲಿಪ್‌ಕಾರ್ಟ್‌ ವೆಬ್‌ಸೈಟಿಗೆ ಭೇಟಿ ನೀಡಿ ಫೋನ್‌ ಬುಕ್‌ ಮಾಡಬಹುದಾಗಿದೆ.

    ಇನ್‌ 1ಬಿ ಗುಣವೈಶಿಷ್ಟ್ಯಗಳು
    6.52 ಇಂಚಿನ ಎಲ್‌ಸಿಡಿ ಸ್ಕ್ರೀನ್‌(720*1560 ಪಿಕ್ಸೆಲ್‌, 264 ಪಿಪಿಐ), ಮೀಡಿಯಾ ಟೆಕ್‌ ಹೆಲಿಯೋ ಜಿ35 ಅಕ್ಟಾಕೋರ್‌ ಪ್ರೊಸೆಸರ್‌, ಪವರ್‌ ವಿಆರ್‌ ಜಿಇ8320 ಗ್ರಾಫಿಕ್ಸ್‌ ಪ್ರೊಸೆಸರ್‌ ನೀಡಲಾಗಿದೆ. 128 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ವನ್ನು ಹೊಂದಿದೆ.

    ಹಿಂದುಗಡೆ 13 ಎಂಪಿ (ವೈಡ್‌) ಕ್ಯಾಮೆರಾ, 2 ಎಂಪಿ (ಡೆಪ್ತ್‌) ಕ್ಯಾಮೆರಾ ಮುಂದುಗಡೆ 8 ಎಂಪಿ ಸಿಂಗಲ್‌ ಕ್ಯಾಮೆರಾ, ಫಿಂಗರ್‌ ಪ್ರಿಂಟ್‌ ಸೆನ್ಸರ್‌ ಇಲ್ಲ. 5000 ಎಂಎಎಚ್‌ ಬ್ಯಾಟರಿ ಹೊಂದಿದೆ.

    ಇನ್‌ ನೋಟ್‌ 1 ಗುಣವೈಶಿಷ್ಟ್ಯಗಳು
    6.67 ಇಂಚಿನ ಐಪಿಎಲ್‌ ಎಲ್‌ಸಿಡಿ ಸ್ಕ್ರೀನ್‌(1080*2400 ಪಿಕ್ಸೆಲ್‌, 395 ಪಿಪಿಐ), ಆಂಡ್ರಾಯ್ಡ್‌ 10, ಮೀಡಿಯಾ ಟೆಕ್‌ ಹೆಲಿಯೋ ಜಿ35 ಅಕ್ಟಾಕೋರ್‌ ಪ್ರೊಸೆಸರ್‌,ಮಾಲಿಜಿ52 ಎಂಸಿ2 ಗ್ರಾಫಿಕ್ಸ್‌ ಪ್ರೊಸೆಸರ್ 64 ಹೊಂದಿದೆ.

    48 ಎಂಪಿ (ವೈಡ್‌), 5 ಎಂಪಿ (ಅಲ್ಟ್ರಾ ವೈಡ್‌), 2 ಎಂಪಿ (ಮ್ಯಾಕ್ರೋ), 2 ಎಂಪಿ(ಡೆಪ್ತ್‌) ಕ್ಯಾಮೆರಾ ಹೊಂದಿದೆ. ಮುಂದುಗಡೆ 16 ಎಂಪಿ ಕ್ಯಾಮೆರಾ, ಫಿಂಗರ್‌ ಪ್ರಿಂಟ್‌ ಸೆನ್ಸರ್‌, 5000 ಎಂಎಎಚ್‌ ಬ್ಯಾಟರಿ ಹೊಂದಿದೆ.

     

  • ಮತ್ತೆ ಮಾರುಕಟ್ಟೆಗೆ ಬರಲಿದೆ ಮೈಕ್ರೋಮ್ಯಾಕ್ಸ್‌ ಫೋನ್‌ಗಳು

    ಮತ್ತೆ ಮಾರುಕಟ್ಟೆಗೆ ಬರಲಿದೆ ಮೈಕ್ರೋಮ್ಯಾಕ್ಸ್‌ ಫೋನ್‌ಗಳು

    ನವದೆಹಲಿ: 2ಜಿ, 3ಜಿ ಅವಧಿಯಲ್ಲಿ ದೇಶದಲ್ಲಿ ಮನೆ ಮಾತಾಗಿದ್ದ ಮೈಕ್ರೋಮ್ಯಾಕ್ಸ್‌ ಫೋನ್‌ಗಳು ಈಗ ಮತ್ತೆ ಮಾರುಕಟ್ಟೆಗೆ ಬರಲಿದೆ.

    ಹೌದು. ಸದ್ಯ ಮಾರುಕಟ್ಟೆಯಲ್ಲಿ ಚೀನಿ ಕಂಪನಿಗಳ ಫೋನುಗಳದ್ದೇ ಅಬ್ಬರ. ಆದರೆ ಈಗ ಆತ್ಮನಿರ್ಭರ್‌ ಭಾರತ್‌ ಅಡಿ ಮೈಕ್ರೋಮ್ಯಾಕ್ಸ್‌ ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿಕೊಡಲಿದೆ.

    ತನ್ನ ಟ್ವಿಟ್ಟರ್‌ ಹ್ಯಾಂಡಲ್‌ನಲ್ಲಿ ‘Back Soon’ ಎಂದು ಮೈಕ್ರೋಮ್ಯಾಕ್ಸ್‌ ಬರೆದಿದೆ. ಕಂಪನಿಯ ಸಹ ಸಂಸ್ಥಾಪಕ ರಾಹುಲ್‌ ಶರ್ಮಾ ಭಾರತ ಚೀನಾ ನಡುವಿನ ಉದ್ವಿಘ್ನ ಪರಿಸ್ಥಿತಿ ಸಮಯದಲ್ಲಿ ಮತ್ತೆ ಮಾರುಕಟ್ಟೆಗೆ ಫೋನ್‌ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

    2019ರಲ್ಲಿ iOne ನೋಟ್‌ ಹೆಸರಿನಲ್ಲಿ ಕಂಪನಿ ಫೋನ್‌ ಬಿಡುಗಡೆ ಮಾಡಿತ್ತು. ಈಗ ಮತ್ತಷ್ಟು ಫೋನ್‌ಗಳನ್ನು ಆತ್ಮನಿರ್ಭರ ಭಾರತ ಯೋಜನೆ ಅಡಿ ತಯಾರಿಸಿ ಕ್ಸಿಯೋಮಿ, ರಿಯಲ್‌ಮೀ, ಒಪ್ಪೋ, ವಿವೋ ಕಂಪನಿಗಳಿಗೆ ಸ್ಪರ್ಧೆ ನೀಡಲು ಮುಂದಾಗಿದೆ.

    ಭಾರತದ ಕಂಪನಿಗಳು ಸೋತಿದ್ದು ಎಲ್ಲಿ?
    ಭಾರತದಲ್ಲಿ 3ಜಿ ಜೊತೆಗೆ ಆಂಡ್ರಾಯ್ಡ್‌ ನಿಧಾನವಾಗಿ ಕ್ಲಿಕ್ ಆಗುತ್ತಿದ್ದಂತೆ ಡ್ಯುಯಲ್ ಸಿಮ್ ಫೋನ್‌ಗಳ ಬೇಡಿಕೆ ಜಾಸ್ತಿ ಆಗತೊಡಗಿತು. 3ಜಿ ಫೋನ್‌ಗಳು ಜನಪ್ರಿಯವಾಗುತ್ತಿದಂತೆ ಕ್ಯಾಮೆರಾ, ಸ್ಕ್ರೀನ್‌, ಬ್ಯಾಟರಿ, ಪ್ರೊಸೆಸರ್‌‌ಗಳ ಲೆಕ್ಕಾಚಾರ ಹಾಕಿ ಗ್ರಾಹಕರು ಫೋನ್ ಖರೀದಿಸಿಲು ಆರಂಭಿಸಿದರು. ಗ್ರಾಹಕರು ಈ ವಿಚಾರದ ಬಗ್ಗೆ ಗಮನ ನೀಡುತ್ತಿದ್ದಂತೆ ಭಾರತದ ಕಂಪನಿಗಳಿಗೆ ನಿಧಾನವಾಗಿ ಪೆಟ್ಟು ಬೀಳಲು ಆರಂಭವಾಯಿತು.

    ಭಾರತದ ಕಂಪನಿಗಳ ಗುಣ ವೈಶಿಷ್ಟ್ಯವೇ ಸರಿ ಇರಲಿಲ್ಲ. 5.5 ಇಂಚಿನ ಎಚ್‌ಡಿ ಸ್ಕ್ರೀನ್ ಕೊಟ್ಟರೆ ಬ್ಯಾಟರಿ ಜಾಸ್ತಿ ಕೊಡಬೇಕು. ಆದರೆ 2,800 ಎಎಂಎಚ್ ಬ್ಯಾಟರಿಯಲ್ಲಿ ಬಿಡುಗಡೆ ಆದರೆ ಏನು ಲಾಭ? ಭಾರತದಲ್ಲಿ ಮೊಬೈಲ್ ಮೂಲಕ ಫಿಲ್ಮ್ ನೋಡುವವರ ಸಂಖ್ಯೆ ಜಾಸ್ತಿ. ಇದು ಚೈನಾದ ಟೆಕ್‌ ಪರಿಣಿತರಿಗೆ ಚೆನ್ನಾಗಿ ಗೊತ್ತಿತ್ತು. ಹೀಗಾಗಿ ಬ್ಯಾಟರಿ ಜಾಸ್ತಿ ಇರುವ ಫೋನ್‌ ಬಿಡುಗಡೆ ಮಾಡತೊಡಗಿದರು.

    ಟೆಲಿಕಾಂ ಕಂಪನಿಗಳು 4ಜಿ ಸೇವೆ ವಿಸ್ತರಿಸುತ್ತಿದ್ದಂತೆ ದೇಶೀಯ ಫೋನ್‌ ಕಂಪನಿಗಳಿಗೆ ಬಲವಾದ ಹೊಡೆತ ಬೀಳಲು ಆರಂಭವಾಯಿತು. ಯಾಕೆಂದರೆ 3ಜಿ ತಂತ್ರಜ್ಞಾನಕ್ಕೆ ದೇಶಿ ಕಂಪನಿಗಳು ಕೋಟ್ಯಂತರ ರೂ.ಗಳನ್ನು ಹೂಡಿದ್ದವು. ದಿಢೀರ್‌ 4ಜಿ ಫೋನ್‌ಗಳನ್ನು ಮಾಡಲು ಸಾಧ್ಯವಾಗದ ಪರಿಣಾಮ ಮಾರುಕಟ್ಟೆಯಲ್ಲಿ ಹಿಂದಕ್ಕೆ ಹೋಯಿತು. ಪರಿಣಾಮ ಚೀನಾ ಕಂಪನಿಗಳ ಹಿಡಿತ ಸ್ಮಾರ್ಟ್‌ ಫೋನ್‌ ಮಾರುಕಟ್ಟೆಯಲ್ಲಿ ಹೆಚ್ಚಾಯಿತು.

  • ಭಾರತದಲ್ಲಿ ಕ್ಸಿಯೋಮಿಯೇ ನಂಬರ್ 1 ಬ್ರಾಂಡ್: ಯಾವ ಕಂಪನಿಯ ಮಾರುಕಟ್ಟೆ ಎಷ್ಟಿದೆ?

    ಭಾರತದಲ್ಲಿ ಕ್ಸಿಯೋಮಿಯೇ ನಂಬರ್ 1 ಬ್ರಾಂಡ್: ಯಾವ ಕಂಪನಿಯ ಮಾರುಕಟ್ಟೆ ಎಷ್ಟಿದೆ?

    ನವದೆಹಲಿ: ಬಜೆಟ್ ಗಾತ್ರದ ಸ್ಮಾರ್ಟ್ ಫೋನುಗಳ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಹೆಸರು ಮಾಡುತ್ತಿರುವ ಕ್ಸಿಯೋಮಿ ಭಾರತದ ಟಾಪ್ 5 ಸ್ಮಾರ್ಟ್ ಫೋನುಗಳಲ್ಲಿ ಮೊದಲನೇ ಸ್ಥಾನದಲ್ಲೇ ಮುಂದುವರಿದಿದೆ.

    ಇಂಟರ್‌ನ್ಯಾಷನಲ್‌ ಡಾಟಾ ಕಾರ್ಪೋರೇಷನ್(ಐಡಿಸಿ) ತನ್ನ ಮೂರನೇ ತ್ರೈಮಾಸಿಕ ವರದಿಯಲ್ಲಿ ಈ ಕುರಿತು ಮಾಹಿತಿ ಬಹಿರಂಗ ಪಡಿಸಿದೆ. ಕ್ಸಿಯೋಮಿ ತನ್ನ 2018ರ ತ್ರೈಮಾಸಿಕ ವರದಿಯಲ್ಲಿ ಶೇ.27ರಷ್ಟು ಶೇರನ್ನು ಹೊಂದುವ ಮೂಲಕ ಭಾರತದ ಟಾಪ್ 5 ಮೊಬೈಲ್ ಕಂಪನಿಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.

    ಯಾವ ಕಂಪನಿಯ ಪಾಲು ಎಷ್ಟು?
    ಕ್ಸಿಯೋಮಿ: 2018ರ ತ್ರೈಮಾಸಿಕ ವರದಿಗಳ ಪ್ರಕಾರ ಕ್ಸಿಯೋಮಿ ಶೇ.27ರಷ್ಟು ಶೇರನ್ನು ಹೊಂದುವುದರ ಮೂಲಕ ಭಾರತದಲ್ಲಿ ಅಧಿಪತ್ಯ ಸಾಧಿಸಿದೆ. ತನ್ನ ಆವೃತ್ತಿಗಳಾದ ರೆಡ್‍ಮಿ 5ಎ ಹಾಗೂ ರೆಡ್‍ಮಿ ನೋಟ್ 5 ಪ್ರೋ ಮುಖಾಂತರ ಈ ಸಾಧನೆಗೇರುವಲ್ಲಿ ಕ್ಸಿಯೋಮಿ ಯಶಸ್ವಿಯಾಗಿದೆ. ಈ ಅವಧಿಯಲ್ಲಿ 50 ಲಕ್ಷ ಫೋನುಗಳನ್ನು ಕ್ಸಿಯೋಮಿ ಮಾರಾಟ ಮಾಡಿದೆ. ಇದರಲ್ಲಿ ಶೇ.48.9ರಷ್ಟನ್ನು ಆನ್‍ಲೈನ್ ಮೂಲಕವೇ ವಹಿವಾಟು ನಡೆಸಿದೆ. ಅಲ್ಲದೇ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿಯೂ ಮಾರಾಟವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗುತ್ತಿದೆ. ಇದನ್ನೂ ಓದಿ: ಕ್ಸಿಯೋಮಿಯ ಮೂರು ಫೋನ್‍ಗಳ ಬೆಲೆ ದಿಢೀರ್ ಭಾರೀ ಇಳಿಕೆ

    ಸ್ಯಾಮಸಂಗ್: 2018ರ ತ್ರೈಮಾಸಿಕ ವರದಿಯಲ್ಲಿ 2ನೇ ಸ್ಥಾನವನ್ನು ಗಳಿಸುವಲ್ಲಿ ಸ್ಯಾಮಸಂಗ್ ಯಶಸ್ವಿಯಾಗಿದೆ. ಕಳೆದ ಮೂರು ತ್ರೈಮಾಸಿಕ ವರದಿಗಳ ಪ್ರಕಾರ ಚೀನಾದ ಕ್ಸಿಯೋಮಿ, ವಿವೊ ಹಾಗೂ ಒಪ್ಪೊದ ಹೊಡೆತದಿಂದಾಗಿ, ಭಾರತದ ಮಾರುಕಟ್ಟೆಯ ಹಿಡಿತವನ್ನು ಸಾಧಿಸಲು ವಿಫಲವಾಗಿತ್ತು. ತನ್ನ ನೂತನ ಗೆಲಾಕ್ಸಿ ಜೆ2, ಜೆ8, ಜೆ4 ಹಾಗೂ ಇತ್ತೀಚೆಗೆ ಬಿಡುಗಡೆಯಾದ ಆಂಡ್ರಾಯ್ಡ್ ಗೋ ಮಾದರಿಯ ಗೆಲಾಕ್ಸಿ ಜೆ 2 ಕೋರ್ ಸ್ಮಾರ್ಟ್ ಫೋನ್‍ಗಳ ಮುಖಾಂತರ 4.8ರಷ್ಟು ವಹಿವಾಟನ್ನು ವೃದ್ಧಿಸಿಕೊಂಡು ಶೇ.22.6ರಷ್ಟು ಮಾರುಕಟ್ಟೆಯನ್ನು ಗಳಿಸಿಕೊಂಡಿದೆ.

    ವಿವೋ: ಮೂರನೇ ಸ್ಥಾನದಲ್ಲಿರುವ ವಿವೋ ಒಟ್ಟಾರೆಯಾಗಿ 2018ರ ತ್ರೈಮಾಸಿಕ ವರದಿಗಳ ಪ್ರಕಾರ ಶೇ.10.6ರಷ್ಟು ಪಾಲನ್ನು ಭಾರತದಲ್ಲಿ ಸಾಧಿಸಿದೆ. 2017ಕ್ಕೆ ಹೋಲಿಸಿದರೆ ವಿವೋ ಶೇ.35.4ರಷ್ಟು ಪ್ರಾಬಲ್ಯ ಹೊಂದಿದೆ. ವಿವೋ ಹೊಸದಾಗಿ ಬಿಡುಗಡೆಮಾಡಿದ ವೈ 81 ಮತ್ತು ವೈ83 ಪ್ರೋ ಮಾದರಿಗಳಿಂದ ಹೆಚ್ಚಿನ ಮಾರುಕಟ್ಟೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೇ ತನ್ನ ವೈ71 ಹಾಗೂ ವಿ11 ಮತ್ತು ವಿ11 ಪ್ರೋ ಮಾದರಿಗಳು ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿತ್ತು. ವಿವೋ ಉತ್ತಮ ಪ್ರಚಾರ ಹಾಗೂ ಐಪಿಲ್ ನಂತಹ ಪಂದ್ಯಾವಳಿಗಳಿಗೆ ಪ್ರಾಯೋಜಕತ್ವವನ್ನು ಪಡೆಯುವ ಮೂಲಕ ಹೆಚ್ಚು ಗ್ರಾಹಕರನ್ನು ಸೆಳೆಯಲು ಸಫಲವಾಗಿತ್ತು.

    ಮೈಕ್ರೋಮ್ಯಾಕ್ಸ್: ಟಾಪ್ 5 ಸ್ಥಾನಗಳಲ್ಲೇ ಇರುತ್ತಿದ್ದ ಮೈಕ್ರೋಮ್ಯಾಕ್ಸ್ ಇತ್ತೀಚಿನ ದಿನಗಳಲ್ಲಿ 7ನೇ ಸ್ಥಾನಕ್ಕೆ ಕುಸಿದಿತ್ತು. ನಂತರ ಜಿಯೋ ಸಹಭಾಗಿತ್ವದೊಂದಿಗೆ ಛತ್ತೀಸಗಡ್ ರಾಜ್ಯದಲ್ಲಿ ದುರ್ಬಲ ಮಹಿಳಾ ಮತ್ತು ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ಸರಬರಾಜು ಮಾಡುವ ಟೆಂಡರ್ ಪಡೆದುಕೊಂಡು, ಮತ್ತೆ ಟಾಪ್ ನಾಲ್ಕನೇ ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. 2018ರ ತ್ರೈಮಾಸಿಕ ವರದಿಗಳ ಪ್ರಕಾರ ಮೈಕ್ರೋಮ್ಯಾಕ್ಸ್ ಶೇ.6.9ರಷ್ಟು ಮಾರುಕಟ್ಟೆಯನ್ನು ಹೊಂದಿದೆ. ಆದರೆ 2017ರ ತ್ರೈಮಾಸಿಕಕ್ಕೆ ಹೋಲಿಸಿದರೆ 2018ರಲ್ಲಿ ಶೇ. 77.3 ಬೆಳವಣಿಗೆ ಸಾಧಿಸಿದೆ.

    ಒಪ್ಪೋ: ಐದನೇ ಸ್ಥಾನ ಪಡೆದುಕೊಂಡಿರುವ ಒಪ್ಪೋ, ತನ್ನ 2018ರ ತ್ರೈಮಾಸಿಕ ವರದಿಯಲ್ಲಿ 6.7ರಷ್ಟು ಗಳಿಸುವ ಮೂಲಕ ಭಾರತದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. ಸರಿಯಾದ ಪ್ರಚಾರ ಕೈಗೊಳ್ಳದೇ ಇರುವುದು ಹಾಗೂ ಗ್ರಾಹಕರನ್ನು ಸೆಳೆಯುವಲ್ಲಿ ಒಪ್ಪೋ ವಿಫಲವಾಗಿದೆ. ಹೊಸದಾಗಿ ಬಿಡುಗಡೆಯಾದ ಎಫ್9 ಹಾಗೂ ಎಫ್9 ಪ್ರೋ ಸ್ಮಾರ್ಟ್ ಫೋನುಗಳು ಗ್ರಾಹಕರನ್ನು ವಿಫಲವಾಗಿದೆ. ತನ್ನ ಹೈ-ಎಂಡ್ ಮೊಬೈಲ್ ಆದ ಒಪ್ಪೋ-ಎಕ್ಸ್ ಅವತರಣೆಯ ಸಿದ್ಧತೆಯಲ್ಲಿ ತೊಡಗಿದ್ದರಿಂದ ಮಾರುಕಟ್ಟೆಯನ್ನು ಕಳೆದುಕೊಂಡಿದೆ ಎಂದು ಐಡಿಸಿ ತಿಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಜಸ್ಟ್ 2 ಸಾವಿರ ರೂ.ಗೆ ಗೂಗಲ್ ಒರಿಯೋ ಫೋನ್: ಏನಿದರ ವಿಶೇಷತೆ? ಕಡಿಮೆ ಬೆಲೆಗೆ ಈ ಫೋನ್ ಹೇಗೆ ಸಿಗುತ್ತೆ?

    ಜಸ್ಟ್ 2 ಸಾವಿರ ರೂ.ಗೆ ಗೂಗಲ್ ಒರಿಯೋ ಫೋನ್: ಏನಿದರ ವಿಶೇಷತೆ? ಕಡಿಮೆ ಬೆಲೆಗೆ ಈ ಫೋನ್ ಹೇಗೆ ಸಿಗುತ್ತೆ?

    ಬೆಂಗಳೂರು: ಗೂಗಲ್ ಸಹಭಾಗಿತ್ವದಲ್ಲಿ ದೇಶೀಯ ಫೋನ್ ತಯಾರಿಕಾ ಕಂಪೆನಿ ಮೈಕ್ರೋಮ್ಯಾಕ್ಸ್ ಅತಿ ಕಡಿಮೆ ಬೆಲೆಯಲ್ಲಿ ಅತ್ಯಾಧುನಿಕ ಸ್ಮಾರ್ಟ್ ಫೋನ್ ತಯಾರಿಸಿದ್ದು ಜನವರಿ 26 ರಂದು ಈ ಫೋನ್ ಬಿಡುಗಡೆಯಾಗುವ ಸಾಧ್ಯತೆ ಇದೆ.

    ಆಂಡ್ರಾಯ್ಡ್ ಓಒರಿಯೋ ಗೊ ಆಪರೇಟಿಂಗ್ ಸಿಸ್ಟಂ ಮೂಲಕ ಕಾರ್ಯನಿರ್ವಹಿಸುವ ವಿಶ್ವದ ಮೊದಲ ಫೋನ್ ಇದಾಗಿದ್ದು, ಈ ಸ್ಮಾರ್ಟ್‍ಫೋನ್ ಬೆಲೆ ಕೇವಲ 2 ಸಾವಿರ ರೂ. ಇರಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಫೋನ್ ವೋಲ್ಟ್ ಮತ್ತು 4ಜಿ ಟೆಕ್ನಾಲಜಿಗೆ ಸಪೋರ್ಟ್ ಮಾಡುತ್ತದೆ.

    ಗೂಗಲ್ ಮೈಕ್ರೋಮ್ಯಾಕ್ಸ್ ಅಲ್ಲದೇ ಲಾವಾ, ಕಾರ್ಬನ್, ಇಂಟೆಕ್ಸ್ ಜೊತೆಗೂಡಿ ಒರಿಯೋ ಗೋ ಫೋನ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

    ಒರಿಯೋ ಗೋ ಫೋನ್ ವಿಶೇಷತೆ ಏನು?
    ಆಪರೇಟಿಂಗ್ ಸಿಸ್ಟಂ ರನ್ ಆಗಲು ಫೋನ್ ಗಳಲ್ಲಿ ಇಂತಿಷ್ಟೆ ಪ್ರಮಾಣದ ರ‍್ಯಾಮ್, ಪ್ರೊಸೆಸರ್, ಆಂತರಿಕ ಮೆಮೊರಿ ಇರಬೇಕು ಎನ್ನುವ ನಿಯಮವಿದೆ. ಆದರೆ ಒರಿಯೋ ಗೋ ಫೋನ್ ಗಳಲ್ಲಿ ಕಡಿಮೆ ಮೆಮೊರಿ ಇದ್ದರೂ ಅಪ್ಲಿಕೇಶನ್ ಗಳು ರನ್ ಆಗುತ್ತದೆ. 512 ಎಂಬಿ ಆಂತರಿಕ ಮೆಮೊರಿ, 1ಜಿಬಿ ರಾಮ್ ಇದ್ದರೆ ಸಾಕಾಗುತ್ತದೆ. ಈ ಕಾರಣಕ್ಕಾಗಿ ಈ ಫೋನ್ ಗಳ ಬೆಲೆ ಮಾರುಕಟ್ಟೆಯಲ್ಲಿರುವ ಫೋನ್ ಗಳಿಗಿಂತ ಕಡಿಮೆ ಬೆಲೆಯಲ್ಲಿ ನಿಗದಿಯಾಗಿರುತ್ತದೆ. ಅಷ್ಟೇ ಅಲ್ಲದೇ ಗೂಗಲ್ ಆಂಡ್ರಾಯ್ಡ್ ಒನ್ ಮಾನದಂಡದಲ್ಲಿ ಫೋನ್ ಗಳ ಹಾರ್ಡ್‍ವೇರ್ ಇರಲಿದೆ.

    ಗೂಗಲ್ ಹೇಳುವಂತೆ ಆಂಡ್ರಾಯ್ಡ್ ಒರಿಯೋ ಗೋ ಆವೃತ್ತಿ ಆಪರೇಟಿಂಗ್ ಸಿಸ್ಟಂ, ಗೂಗಲ್ ಅಪ್ಲಿಕೇಶನ್ ಮತ್ತು ಪ್ಲೇ ಸ್ಟೋರ್ ಎನ್ನುವ ತತ್ವದ ಅಡಿ ಕಾರ್ಯನಿರ್ವಹಿಸುತ್ತದೆ. ಹೊಸ ಸಾಫ್ಟ್ ವೇರ್ ನಲ್ಲಿ ಅಪ್ಲಿಕೇಶನ್ ಒಂದು 15% ವೇಗವಾಗಿ ಕಾರ್ಯನಿರ್ವಹಿಸುತ್ತದೆ.

    ಈ ಆವೃತ್ತಿಗಾಗಿಯೇ ಗೂಗಲ್ ವಿಶೇಷ ಅಪ್ಲಿಕೇಶನ್ ರೂಪಿಸಿದೆ. ಗೂಗಲ್ ಗೋ, ಗೂಗಲ್ ಅಸಿಸ್ಟೆಂಟ್ ಗೋ, ಯೂ ಟ್ಯೂಬ್ ಗೋ, ಗೂಗಲ್ ಮ್ಯಾಪ್ಸ್ ಗೋ, ಜಿಮೇಲ್ ಗೋ, ಜಿ ಬೋರ್ಡ್, ಗೂಗಲ್ ಪ್ಲೇ, ಕ್ರೋಮ್, ಮತ್ತು ಫೈಲ್ಸ್ ಗೋ ಅಪ್‍ಗಳ ಗುಚ್ಛಗಳು ಈ ಫೋನಿನಲ್ಲಿ ಪ್ರಿ ಲೋಡೆಡ್ ಆಗಿರಲಿವೆ. ಈ ಎಲ್ಲ ಅಪ್ಲಿಕೇಶನ್ ಗಳು ಕಡಿಮೆ ಮೆಮರಿಯನ್ನು ಹೊಂದಿದ್ದು, ವಿಶೇಷವಾಗಿ ಗೂಗಲ್ ಗೋ 5 ಎಂಬಿಗಿಂತಲೂ ಕಡಿಮೆ ಇರಲಿದೆ.

     

    ಏನಿದು ಗೂಗಲ್ ಆಂಡ್ರಾಯ್ಡ್ ಒನ್?
    ಗೂಗಲ್ ಈ ಹಿಂದೆ ಏಷ್ಯಾ, ಆಫ್ರಿಕಾ ಖಂಡದಲ್ಲಿ ಮಾರುಕಟ್ಟೆ ವಿಸ್ತರಿಸಲು ಆಂಡ್ರಾಯ್ಡ್ ಓಎಸ್ ಆಧಾರಿತ ಆಂಡ್ರಾಯ್ಡ್ ಒನ್ ಫೋನ್‍ಗಳನ್ನು ಬಿಡುಗಡೆ ಮಾಡಿತ್ತು. ಈ ಫೋನ್‍ಗಳ ಬೆಲೆ ಕಡಿಮೆ ಇದ್ದು, ಗೂಗಲ್ ಮಾನದಂಡಕ್ಕೆ ಅನುಗುಣವಾಗಿ ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ಗಳನ್ನು ಹೊಂದಿದ ಫೋನ್‍ಗಳನ್ನು ಕಂಪೆನಿಗಳು ತಯಾರಿಸಬೇಕಾಗುತ್ತದೆ. ವಿಶ್ವದಲ್ಲೇ ಮೊದಲ ಬಾರಿಗೆ 2014ರಲ್ಲಿ ಭಾರತದಲ್ಲಿ ಆಂಡ್ರಾಯ್ಡ್ ಓನ್ ಫೋನ್‍ಗಳು ಬಿಡುಗಡೆಯಾಗಿತ್ತು. ಭಾರತದಲ್ಲಿ ಕಾರ್ಬನ್, ಮೈಕ್ರೋಮ್ಯಾಕ್ಸ್, ಸ್ಪೈಸ್ ಕಂಪೆನಿಗಳು ಆಂಡ್ರಾಯ್ಡ್ ಓನ್ ಅಡಿಯಲ್ಲಿ ಫೋನ್ ತಯಾರಿಸಿತ್ತು

    2017ರಜನವರಿಯಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಭಾರತಕ್ಕೆ ಬಂದಿದ್ದಾಗ ಕಡಿಮೆ ಬೆಲೆಯಲ್ಲಿ ಆಂಡ್ರಾಯ್ಡ್ ಫೋನ್ ತಯಾರಿಸಲಾಗುವುದು ಎಂದು ತಿಳಿಸಿದ್ದರು. ಭಾರತಕ್ಕೆ 30 ಡಾಲರ್(2 ಸಾವಿರ ರೂ.) ಬೆಲೆಯ ಆಂಡ್ರಾಯ್ಡ್ ಫೋನ್ ಅಗತ್ಯವಿದೆ ಎಂದು ಹೇಳಿದ್ದರು. ಇದಕ್ಕೆ ಪೂರಕ ಎಂಬಂತೆ ಈಗ ಮೈಕ್ರೋಮ್ಯಾಕ್ಸ್ ಜೊತೆಗೂಡಿ ಗೂಗಲ್ ಈ ಫೋನ್ ಬಿಡುಗಡೆ ಮಾಡಲು ಮುಂದಾಗಿದೆ.

     

  • ಜಿಯೋ, ಏರ್‍ಟೆಲ್ ಆಯ್ತು, ಈಗ 999 ರೂ.ಗೆ ವೊಡಾಫೋನ್ 4ಜಿ ಫೋನ್!

    ಜಿಯೋ, ಏರ್‍ಟೆಲ್ ಆಯ್ತು, ಈಗ 999 ರೂ.ಗೆ ವೊಡಾಫೋನ್ 4ಜಿ ಫೋನ್!

    ಮುಂಬೈ: ಟೆಲಿಕಾಂ ಕಂಪೆನಿಗಳ ಮಧ್ಯೆ ಕರೆ ದರ ಸಮರ, ಡೇಟಾ ಸಮರ ನಡೆದಿರುವುದು ನಿಮಗೆ ಗೊತ್ತೆ ಇದೆ. ಈಗ 4ಜಿ ಫೀಚರ್ ಫೋನ್ ಸಮರ ಆರಂಭವಾಗಿದೆ. ಜಿಯೋ ಮತ್ತು ಏರ್‍ಟೆಲ್ ಗೆ ಸ್ಪರ್ಧೆ ಎನ್ನುವುಂತೆ ಈಗ ವೊಡಾಫೋನ್ 999 ರೂ.ಗೆ ಫೋನ್ ಬಿಡುಗಡೆ ಮಾಡಲು ಮುಂದಾಗಿದೆ.

    ದೇಶೀಯ ಸ್ಮಾರ್ಟ್ ಫೋನ್ ತಯಾರಕಾ ಕಂಪೆನಿ ಮೈಕ್ರೋಮ್ಯಾಕ್ಸ್ ಜೊತೆಗೂಡಿ ವೊಡಾಫೋನ್ ಒಪ್ಪಂದ ಮಾಡಿಕೊಂಡಿದ್ದು, ನವೆಂಬರ್ ವೇಳೆಗೆ ‘ಭಾರತ್ -2 ಆಲ್ಟ್ರಾ’ ಹೆಸರಿನ ಫೋನ್ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

    999 ರೂ. ಹೇಗೆ ಸಿಗುತ್ತೆ?
    ಈ ಫೋನಿನ ಮೂಲ ಬೆಲೆ 2,899 ರೂ. ಆಗಿದ್ದು, ಆರಂಭಲ್ಲಿ ವೊಡಾಫೋನ್ ಹೊಸ ಗ್ರಾಹಕರು ಇಷ್ಟೇ ಮೊತ್ತವನ್ನು ನೀಡಿ ಫೋನ್ ಖರೀದಿಸಬೇಕು.

    ಖರೀದಿಸಿದ ಬಳಿಕ ಗ್ರಾಹಕರು ಪ್ರತಿ ತಿಂಗಳು 150 ರೂ. ರಿಚಾರ್ಜ್ ಮಾಡಬೇಕು. 36 ತಿಂಗಳು ಅಂದರೆ ಮೂರು ವರ್ಷಗಳ 150 ರೂ. ರಿಚಾರ್ಜ್ ಮಾಡಿದ ಬಳಿಕ ಹಣ ಗ್ರಾಹಕರಿಗೆ ವೊಡಾಫೋನಿನ M-Pesa ವ್ಯಾಲೆಟ್ ಮೂಲಕ ಪಾವತಿಯಾಗುತ್ತದೆ. ಮೊದಲ 18 ತಿಂಗಳ ಬಳಿಕ 900 ರೂ. ಕ್ಯಾಶ್ ಬ್ಯಾಕ್ ಆದರೆ 38 ತಿಂಗಳು ಮುಕ್ತಾಯವಾದ ಬಳಿಕ 1 ಸಾವಿರ ರೂ. ಗ್ರಾಹಕರ ವ್ಯಾಲೆಟ್ ಗೆ  ಹಣವನ್ನು ಕಳುಹಿಸುತ್ತದೆ.

    ಭಾರತ್ ಆಲ್ಟ್ರಾ ಗುಣವೈಶಿಷ್ಟ್ಯಗಳು:
    4 ಇಂಚಿನ WVGA  ಡಿಸ್ಲ್ಪೇ, 1.3GHz  ಕ್ವಾಡ್ ಕೋರ್ ಪ್ರೊಸೆಸರ್, 512 ಎಂಬಿ ರಾಮ್, 4ಜಿಬಿ ಆಂತರಿಕ ಮೆಮೊರಿ, ಹಿಂದುಗಡೆ 2ಎಂಪಿ ಕ್ಯಾಮೆರಾ, ಮುಂದುಗಡೆ 3 ಎಂಪಿ ಕ್ಯಾಮೆರಾ, ಮಾರ್ಶ್ ಮೆಲೋ ಓಎಸ್, 1300 ಎಂಎಎಚ್ ಬ್ಯಾಟರಿ ಹೊಂದಿದೆ.

    ಈ ಹಿಂದೆ ಜಿಯೋ 4ಜಿ ಫೋನ್ ಬಿಡುಗಡೆ ಮಾಡಿದ್ದರೆ, ಬಳಿಕ ಏರ್‍ಟೆಲ್ 1399 ರೂ.ಗೆ ಫೋನ್ ಬಿಡುಗಡೆ ಮಾಡಿತ್ತು. ಈ ಹಿಂದೆ ಬಿಎಸ್‍ಎನ್‍ಎಲ್ ಜೊತೆಗೂಡಿ ಮೈಕ್ರೋಮ್ಯಾಕ್ಸ್ ಭಾರತ್ 1 ಫೋನ್ ಬಿಡುಗಡೆ ಮಾಡಿತ್ತು.

     

  • ಮೈಕ್ರೋಮ್ಯಾಕ್ಸ್ ನಿಂದ ಡ್ಯುಯಲ್ ಕ್ಯಾಮೆರಾ, 4ಜಿಬಿ ರಾಮ್ ಫೋನ್ ಬಿಡುಗಡೆ: ಬೆಲೆ ಎಷ್ಟು? ವಿಶೇಷತೆ ಏನು?

    ಮೈಕ್ರೋಮ್ಯಾಕ್ಸ್ ನಿಂದ ಡ್ಯುಯಲ್ ಕ್ಯಾಮೆರಾ, 4ಜಿಬಿ ರಾಮ್ ಫೋನ್ ಬಿಡುಗಡೆ: ಬೆಲೆ ಎಷ್ಟು? ವಿಶೇಷತೆ ಏನು?

    ನವದೆಹಲಿ: ದೇಶೀಯ ಫೋನ್ ತಯಾರಿಕಾ ಕಂಪೆನಿ ಮೈಕ್ರೋಮ್ಯಾಕ್ಸ್ ಹಿಂದುಗಡೆ ಎರಡು ಕ್ಯಾಮೆರಾ ಹೊಂದಿರುವ ಡ್ಯುಯಲ್ 5 ಫೋನ್ ರಿಲೀಸ್ ಮಾಡಿದೆ.

    ಈ ಹೈಬ್ರಿಡ್ ಫೋನಿಗೆ 24,999 ರೂ. ನಿಗದಿ ಮಾಡಿದ್ದು, ಏಪ್ರಿಲ್ 10 ರಿಂದ ಫ್ಲಿಪ್‍ಕಾರ್ಟ್‍ನಲ್ಲಿ ಲಭ್ಯವಿರಲಿದೆ. ಅಷ್ಟೇ ಅಲ್ಲದೇ ಮೈಕ್ರೋಮ್ಯಾಕ್ಸ್ ಇ ಸ್ಟೋರ್ ಮತ್ತು ರಿಟೇಲ್ ಅಂಗಡಿಗಳಿಂದ ಖರೀದಿಸಬಹುದು.

    ಮೈಕ್ರೋಮ್ಯಾಕ್ಸ್ ಇದೇ ಮೊದಲ ಬಾರಿಗೆ ಫೋನಿಗೆ ಎರಡು ಕ್ಯಾಮೆರಾ ನೀಡಿದೆ. ಸೋನಿ ಕಂಪೆನಿಯ ಎರಡು 13 ಮೆಗಾ ಪಿಕ್ಸೆಲ್ ಐಎಂಎಕ್ಸ್ 258 ಸೆನ್ಸರ್ ಮೈಕ್ರೋಮ್ಯಾಕ್ಸ್ ಕ್ಯಾಮೆರಾದಲ್ಲಿದೆ. ಒಂದು ಸೆನ್ಸರ್ ಫೋಕಸ್ ಸೆರೆ ಹಿಡಿದರೆ, ಇನ್ನೊಂದು ಸೆನ್ಸರ್ ಡೆಪ್ತ್ ಮತ್ತು ಫೀಲ್ಡ್ ಸೆರೆಹಿಡಿಯುತ್ತದೆ. ಈ ಫೋನಿನಲ್ಲಿ 4ಕೆ ಯುಎಚ್‍ಡಿ ರೆಸಲ್ಯೂಶನ್‍ನಲ್ಲಿ ವಿಡಿಯೋ ಸೆರೆ ಹಿಡಿಯಬಹುದು.

    ಮುಂದುಗಡೆ 1.13 ಮೈಕ್ರಾನ್ ಪಿಕ್ಸೆಲ್ ಸೋನಿ ಐಎಂಎಕ್ಸ್258 ಸೆನ್ಸರ್ ಇರುವ 13 ಎಂಪಿ ಕ್ಯಾಮೆರಾ ನೀಡಿದೆ. ಮುಂದುಗಡೆ ಕ್ಯಾಮೆರಾದಲ್ಲಿ ಸ್ಮಾರ್ಟ್ ಬ್ಯೂಟಿ, ಮೋಡ್, ಗೆಸ್ಟರ್ ಕಂಟ್ರೋಲ್, ಮತ್ತು ಜಿಫ್ ವಿಡಿಯೋಗಳನ್ನು ಮಾಡಬಹುದು.

    ಫಿಂಗರ್ ಪ್ರಿಂಟ್ ಸೆನ್ಸರ್ ಒಳಗೊಂಡಿರುವ ಈ ಫೋನ್ ನಲ್ಲಿ ಪ್ರೈವೆಟ್ ಮೂಡ್ ಮತ್ತು ಪಬ್ಲಿಕ್ ಮೂಡ್ ಆಯ್ಕೆ ಇದೆ.

    ಈ ಫೋನಿಗೆ ಮೈಕ್ರೋಮ್ಯಾಕ್ಸ್ ‘ಸೇಫ್ ಸ್ವಿಚ್’ ವಿಶೇಷತೆ ಇದೆ. ಒಂದು ವೇಳೆ ಮೊಬೈಲ್ ಕಳೆದು ಹೋಗಿ 30 ನಿಮಿಷದ ಒಳಗಡೆ ಸರಿಯಾದ ಪಾಸ್ ವರ್ಡ್ ಹಾಕದಿದ್ದರೆ ಫೋನ್ ಆಟೋಮ್ಯಾಟಿಕ್ ಆಗಿ ಲಾಕ್ ಆಗುತ್ತದೆ. ಅಷ್ಟೇ ಅಲ್ಲದೇ ಒಂದು ವೇಳೆ ಸಿಮ್ ತೆಗೆದು 60 ನಿಮಿಷ ಬಳಿಕ ಸರಿಯಾದ ಪಾಸ್‍ವರ್ಡ್ ಹಾಕದೇ ಇದ್ದರೆ ಫೋನ್ ಫೋನ್ ಲಾಕ್ ಆಗುತ್ತದೆ.

    ಫೋನಿಗೆ 3,200 ಎಂಎಎಚ್ ಬ್ಯಾಟರಿ ನೀಡಿದ್ದು, ಕ್ವಿಕ್ ಚಾರ್ಜ್ ವಿಶೇಷತೆ ನೀಡಿದೆ. ಇದರಿಂದಾಗಿ ಕೇವಲ 45 ನಿಮಿಷದಲ್ಲಿ ಶೇ.95 ರಷ್ಟು ಬ್ಯಾಟರಿ ಚಾರ್ಜ್ ಆಗುತ್ತದೆ. ಅಲ್ಲದೇ 10 ನಿಮಿಷ ಚಾರ್ಜ್ ಮಾಡಿದರೆ 4 ಗಂಟೆ ಫೋನ್ ಬಳಕೆ ಮಾಡಬಹುದು ಎಂದು ಮೈಕ್ರೋ ಮ್ಯಾಕ್ಸ್ ತಿಳಿಸಿದೆ.

    ಮೈಕ್ರೋಮ್ಯಾಕ್ಸ್ ಡ್ಯುಯಲ್5 ಗುಣವೈಶಿಷ್ಟ್ಯಗಳು:

    ಬಾಡಿ ಮತ್ತು ಡಿಸ್ಪ್ಲೇ:
    ಡ್ಯುಯಲ್ ಹೈಬ್ರಿಡ್ ಸಿಮ್ ಸ್ಲಾಟ್( 2 ಸಿಮ್ ಅಥವಾ 1 ಸಿಮ್ + ಒಂದು ಮೆಮೊರಿ ಕಾರ್ಡ್), 164 ಗ್ರಾಂ ತೂಕ, 4ಜಿ ವೋಲ್ಟ್, 5.5 ಇಂಚಿನ ಅಮೋಲೆಡ್ ಫುಲ್ ಎಚ್‍ಡಿ ಸ್ಕ್ರೀನ್(1920*1980 ಪಿಕ್ಸೆಲ್), 401 ಪಿಪಿಐ, ಕಾರ್ನಿಂಗ್ ಗೊರಿಲ್ಲ ಗ್ಲಾಸ್

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ ಮಾರ್ಶ್ ಮೆಲೊ ಓಎಸ್, 128 ಜಿಬಿ ಆಂತರಿಕ ಮೆಮೊರಿ, 4 ಜಿಬಿ ರಾಮ್, ಎಸ್‍ಡಿ ಕಾರ್ಡ್ ಮೂಲಕ 128 ಜಿಬಿವರೆಗೆ ಮೆಮೊರಿ ವಿಸ್ತರಣೆ, ಕ್ವಾಲಕಂ ಸ್ನಾಪ್‍ಡ್ರಾಗನ್ 652 1.8 GHz ಅಕ್ಟಾಕೋರ್  ಪ್ರೊಸೆಸರ್

    ಕ್ಯಾಮೆರಾ
    ಹಿಂದುಗಡೆ 13 ಎಂಪಿ ಡ್ಯುಯಲ್ ಕ್ಯಾಮೆರಾ, F / 1.8 ಅಪಾರ್ಚರ್, 1.12um ಪಿಕ್ಸೆಲ್ ಸೈಜ್, 6 ಲೆನ್ಸ್ ಟೈಪ್ ಸ್ಟ್ರಕ್ಚರ್, ಕಲರ್ ಟೆಂಪರೇಚರ್ ಸೆನ್ಸರ್, ಡ್ಯುಯಲ್ ಎಲ್‍ಇಡಿ ಫ್ಯಾಶ್, ಮುಂದುಗಡೆ 13 ಎಂಪಿ ಕ್ಯಾಮೆರಾ ವನ್ನು ಹೊಂದಿದೆ.

    ಇತರೇ:
    3200 ಎಂಎಎಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ, 4ಜಿ ಎಲ್‍ಟಿಇ,3ಜಿ, 2ಜಿ ನೆಟ್‍ವರ್ಕ್, ಗ್ರಾವಿಟಿ, ಫಿಂಗರ್ ಪ್ರಿಂಟ್, ಡಿಜಿಟಲ್ ಕಂಪಾಸ್, ಲೈಟ್ ಸೆನ್ಸರ್.