– ಮೈಕ್ರೋ ಫೈನಾನ್ಸ್ ಕಂಪನಿಗೆ ಮೂಗುದಾರ ಹಾಕಲು ಮುಂದಾದ ಪೊಲೀಸರು
ಬೆಂಗಳೂರು: ಮೈಕ್ರೋ ಫೈನಾನ್ಸ್‌ಗಳ (Micro Finance) ವಿರುದ್ಧ ಸಮರ ಸಾರಲು ಪೊಲೀಸರು ಮುಂದಾಗಿದ್ದಾರೆ. ಮೈಕ್ರೋ ಫೈನಾನ್ಸರ್ಸ್ ಹಾವಳಿಗೆ ಕಡಿವಾಣ ಹಾಕಲು ಪೊಲೀಸರು ಹೊಸ ಗೈಡ್‌ಲೈನ್ ಹೊರಡಿಸಿದ್ದಾರೆ.
ಪೊಲೀಸ್ ಮಹಾನಿರ್ದೇಶಕರು, ಬೆಂಗಳೂರು ಕಮಿಷನರ್ ಹಾಗೂ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕಠಿಣ ಕ್ರಮದ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಮೈಕ್ರೋ ಫೈನಾನ್ಸರ್ಸ್ ಬಡವರ ರಕ್ತ ಹಿರುತ್ತಿದ್ದು, ಮರ್ಯಾದೆಗೆ ಅಂಜಿ ಹಲವರು ಊರು ಬಿಟ್ಟು ಹೋಗುತ್ತಿದ್ದಾರೆ. ಇನ್ನೂ ಕೆಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಹಾಗಾಗಿ, ಮೈಕ್ರೋ ಫೈನಾನ್ಸ್ ವಿರುದ್ಧ ಕ್ರಮಕೈಗೊಳ್ಳಲು ಸಂಬಂಧಪಟ್ಟ ಪೊಲೀಸರಿಗೆ ಹಿರಿಯ ಅಧಿಕಾರಿಗಳಿಂದ ಒಂದಷ್ಟು ಅಂಶಗಳನ್ನು ಒಳಗೊಂಡ ಹೊಸ ಗೈಡ್‌ಲೈನ್ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ಫೈನಾನ್ಸ್ ಕಿರುಕುಳ: 3 ವರ್ಷ ಜೈಲು, 1 ಲಕ್ಷದ ವರೆಗೆ ದಂಡ – ಗುರುವಾರ ಸರ್ಕಾರದಿಂದ ಸುಗ್ರೀವಾಜ್ಞೆ
ಮಾರ್ಗಸೂಚಿಯಲ್ಲೇನಿದೆ?
* ಸಾಲ ಪಡೆದವರ ಮನೆಯ ಮೇಲೆ ಗೋಡೆ ಬರಹ ಬರೆಯವುದನ್ನ ತಡೆಗಟ್ಟಬೇಕು
* ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಸಾಲ ಪಡೆದಿರೋ ಬಗ್ಗೆ ಗೋಡೆ ಬರಹ ಬರೆಯುವವರ ವಿರುದ್ಧ ಕ್ರಮ ವಹಿಸಬೇಕು
* ಅಕ್ರಮವಾಗಿ ಮೈಕ್ರೋ ಫೈನಾನ್ಸ್ ವ್ಯವಹಾರ ಮಾಡುತ್ತಿರುವ ಫೈನಾನ್ಸರ್ಸ್ ವಿರುದ್ಧ ಕಾನೂನು ಕ್ರಮ ಜರಗಿಸಬೇಕು
* ಫೈನಾನ್ಸರ್ಸ್ ಕಿರುಕುಳದಿಂದ ನೊಂದ ಜನರು ಪೊಲೀಸ್ ಠಾಣೆಗೆ ಬಂದರೆ ಪೊಲೀಸರು ಸ್ಪಂದಿಸಬೇಕು
* ಆರ್‌ಬಿಐ ಮಾರ್ಗಸೂಚಿ ಉಲ್ಲಂಘನೆ ಮಾಡಿ ಸಾಲ ನೀಡಿರುವಂತಹ ಕಂಪನಿಗಳ ಪಟ್ಟಿ ಮಾಡಿ ಅಗತ್ಯ ಕ್ರಮಕೈಗೊಳ್ಳಬೇಕು
* ಮೈಕ್ರೋ ಫೈನಾನ್ಸ್ ಕಂಪನಿಗಳ ಮುಖ್ಯಸ್ಥರ ಸಭೆ ಕರೆದು ಮಾತನಾಡಲು ಸಂಬಂಧಪಟ್ಟ ಎಸ್ಪಿಗಳಿಗೆ ಸೂಚನೆ
ಹೀಗೆ, ರಾಜ್ಯ ಸರ್ಕಾರದ ಮಟ್ಟದಲ್ಲಿ ಫೈನಾನ್ಸ್ ಕಂಪನಿಗಳ ವಿರುದ್ಧ ಕಾನೂನು ಕ್ರಮ ಜರಗಿಸುವ ಸೂಚನೆ ಕೊಡಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಬೆಂಗಳೂರು: ನಾಡಿದ್ದು ಗುರುವಾರ ಮೈಕ್ರೋ ಫೈನಾನ್ಸ್ (Micro Finance) ಬಿಲ್ ಸುಗ್ರೀವಾಜ್ಞೆ ಹೊರಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕ್ಯಾಬಿನೆಟ್ ಅಜೆಂಡಾದಲ್ಲಿ ಸುಗ್ರೀವಾಜ್ಞೆ ವಿಷಯ ಸೇರ್ಪಡೆ ಮಾಡಿದೆ. ಕಾನೂನು ಇಲಾಖೆಯಿಂದ ಕರ್ನಾಟಕ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಹಣ ಮತ್ತು ಲೇವಾದೇವಿ ನಿಯಂತ್ರಣ 2025ರ ಕರಡು ಬಿಲ್ ಸಿದ್ಧವಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಮೊದಲ ಆದ್ಯತಾ ವಿಷಯವಾಗಿ ಬಿಲ್ ಸುಗ್ರೀವಾಜ್ಞೆ ಕೈಗೆತ್ತಿಕೊಳ್ಳಲು ಸರ್ಕಾರ ನಿರ್ಧರಿಸಿದೆ.
ಈ ಮೊದಲೇ ‘ಪಬ್ಲಿಕ್ ಟಿವಿ’ ವರದಿ ಪ್ರಸಾರ ಮಾಡಿದಂತೆ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಗರಿಷ್ಠ 3 ವರ್ಷ ಜೈಲು, 1 ಲಕ್ಷದ ವರೆಗೆ ದಂಡ ವಿಧಿಸಲು ಕರಡು ಬಿಲ್‌ನಲ್ಲಿ ಕಾನೂನು ಅಡಕವಾಗಿದೆ. ಅಷ್ಟೇ ಅಲ್ಲದೆ ನೋಂದಣಿ ಪ್ರಾಧಿಕಾರದ ಮೂಲಕ ಮೈಕ್ರೋ ಫೈನಾನ್ಸ್ ಕಡ್ಡಾಯ ನೋಂದಣಿ ರೂಲ್ಸ್ ತರುತ್ತಿದ್ದು, ಆರ್‌ಬಿಐ ರೂಲ್ಸ್ ಪ್ರಕಾರ ಸಾಲಮಿತಿ, ಬಡ್ಡಿ ಮಿತಿಗಳನ್ನ ಪಾಲಿಸಬೇಕೆಂಬ ಷರತ್ತು ಸುಗ್ರೀವಾಜ್ಞೆಯಲ್ಲಿ ಇದೆ ಎನ್ನಲಾಗಿದೆ. ಸಾಲ ವಸೂಲಾತಿಗೂ ಕಠಿಣ ಷರತ್ತುಗಳನ್ನು ಹಾಕಲಾಗ್ತಿದ್ದು, ಕಿರುಕುಳಕ್ಕೆ ಮುಲಾಜಿಲ್ಲದೇ ಕ್ರಮಕ್ಕೆ ಸುಗ್ರೀವಾಜ್ಞೆ ತರಲಾಗ್ತಿದೆ. ಜ.30, ಗುರುವಾರ ಸುಗ್ರೀವಾಜ್ಞೆ ತರುತ್ತಿದ್ದು, ಕರಡು ಬಿಲ್ ಬಗ್ಗೆ ಚರ್ಚಿಸಿ ಕೆಲ ಸಣ್ಣಪುಟ್ಟ ಮಾರ್ಪಾಡುಗಳನ್ನೂ ಮಾಡುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಮೈಕ್ರೋ ಫೈನಾನ್ಸ್ ಬಿಲ್ ಸುಗ್ರೀವಾಜ್ಞೆಯಲ್ಲಿ ಏನಿರಬಹುದು?
* ಸಾಲಗಾರರಿಗೆ ಕಿರುಕುಳ ಕೊಟ್ಟರೆ ಮೂರು ವರ್ಷ ಜೈಲು
* ಒಂದು ಲಕ್ಷದ ವರೆಗೆ ದಂಡ ವಿಧಿಸಲು ಪ್ಲ್ಯಾನ್
* ಮಸೂದೆಯ ಪ್ರಕಾರ ಫೈನಾನ್ಸ್ ಕಂಪನಿ ಕಡ್ಡಾಯವಾಗಿ ನೋಂದಣಿ ಪ್ರಾಧಿಕಾರದ ಮೂಲಕ ನೋಂದಣಿ ಆಗಬೇಕು
* ಎರಡು ವರ್ಷಗಳ ಕಾಲ ಕಾರ್ಯ ನಿರ್ವಹಿಸಲು ಮಾತ್ರ ಅನುಮತಿ, ನವೀಕರಣ ಮುಗಿದ 60 ದಿನಗಳಲ್ಲಿ ಮರು ನವೀಕರಣ ಮಾಡಿಕೊಳ್ಳಲು ಅವಕಾಶ
* ಮೈಕ್ರೋ ಫೈನಾನ್ಸ್ ಕಂಪನಿಗಳು ಸರ್ಕಾರಕ್ಕೆ ಮುಚ್ಚಳಿಕೆ ಬರೆದುಕೊಡಬೇಕು
* ಒಬ್ಬ ಸಾಲಗಾರ ಎರಡು ಸಂಸ್ಥೆಗಳಿಂದ ಮಾತ್ರ ಸಾಲ ಪಡೆಯಬಹುದು
* ಒಬ್ಬ ಸಾಲಗಾರನಿಗೆ ಒಟ್ಟು ಸಾಲದ ಮೊತ್ತ ಎರಡು ಲಕ್ಷ ಮೀರುವಂತಿಲ್ಲ
* ಸಾಲಗರನ ಆದಾಯ ಗಮನಿಸಬೇಕು, ಕೆವೈಸಿ ಕಡ್ಡಾಯ
* ಆರ್‌ಬಿಐ ರೂಲ್ಸ್‌ಗಳನ್ನ ಕಡ್ಡಾಯವಾಗಿ ಪಾಲಿಸಬೇಕು
* ಬಡ್ಡಿ ದರದ ಸಹಿತ ಸಾಲದ ಮಂಜೂರಾತಿ ಕಾರ್ಡ್ ಅಥವಾ ಮಂಜೂರಾತಿ ಪತ್ರ ಕಡ್ಡಾಯ
* ಸಾಲ ವಸೂಲಾತಿ ನಿಯಮಗಳನ್ನ ಕಡ್ಡಾಯವಾಗಿ ಪಾಲಿಸಬೇಕು
ತುಮಕೂರು: ಮೈಕ್ರೋ ಫೈನಾನ್ಸ್‌ನಿಂದ (Micro Finance) ಸಾಲ ಪಡೆದಕ್ಕಿಂತ ಹೆಚ್ಚು ಬಡ್ಡಿಯನ್ನೇ (Interest) ಕಟ್ಟಿ ಹೃದಯಾಘಾತದಿಂದ (Heart Attack) ವ್ಯಕ್ತಿಯೊಬ್ಬರು ಸಾವಿಗೀಡಾದ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ.
ತುಮಕೂರು ನಗರದ ಲೇಬರ್ ಕಾಲೋನಿಯ ಸೈಯದ್ ಸಮಿವುಲ್ಲಾ ಸಾವಿಗಿಡಾದ ವ್ಯಕ್ತಿ. ಇವರು ಫೈಸ್ ಸ್ಟಾರ್ ಫೈನಾನ್ಸ್‌ನಿಂದ 2019ರಲ್ಲಿ 4.66 ಮನೆ ಸಾಲ ಪಡೆದಿದ್ದರು. 2024 ಮೇವರೆಗೆ ಬರೊಬ್ಬರಿ 7.20 ಲಕ್ಷ ಬಡ್ಡಿ ಕಟ್ಟಿದ್ದರು. ಆದರೆ ಅಸಲು ಹಾಗೆಯೇ ಉಳಿದಿತ್ತು. ಮತ್ತೆ ಅಸಲು ಕಟ್ಟುವಂತೆ ಫೈನಾನ್ಸ್‌ನವರು ಕಿರುಕುಳ ಕೊಡುತ್ತಿದ್ದರು. ಈ ಕಿರುಕುಳ ತಾಳಲಾರದೆ ಹೃದಯಾಘಾತದಿಂದ ಸಮೀವುಲ್ಲಾ ಮೇ ತಿಂಗಳಲ್ಲಿ ಸಾವಿಗೀಡಾಗಿದ್ದಾರೆ. ಇವರಿಗೆ ಸುಮಾರು 24.55 % ಬಡ್ಡಿ ಹಾಕಲಾಗಿತ್ತು. ಇದನ್ನೂ ಓದಿ: Kolar| ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತಾ ಸರ್ಕಾರಿ ಬಸ್ ಚಾಲನೆ – ವೀಡಿಯೋ ವೈರಲ್
ಈಗ ಫೈನಾನ್ಸ್‌ನವರು ಸಮೀವುಲ್ಲಾ ಮನೆಗೆ ಬಂದು ಅವರ ಪತ್ನಿ ಬಳಿ ಸಾಲ ಮರುಪಾವತಿ ಮಾಡುವಂತೆ ಕಿರುಕುಳ ನೀಡುತ್ತಿದ್ದಾರೆ. ಪತಿಯಂತೆ ನಾನೂ ಮಕ್ಕಳೊಂದಿಗೆ ಸಾಯಬೇಕಾಗುತ್ತದೆ ಎಂದು ಪತ್ನಿ ತಬಸಮ್ ಬಾನು ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ: ಮಂಗಳೂರು| ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ ಬೆಂಕಿ ಅವಘಡ
ಬೆಂಗಳೂರು: ಮೈಕ್ರೋ ಫೈನಾನ್ಸ್ ಕಿರುಕುಳ ತಪ್ಪಿಸಲು ಇನ್ನೊಂದು ವಾರದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಜೊತೆ ಸಭೆ ಮಾಡಿ ಎಚ್ಚರಿಕೆ ಕೊಡಬೇಕು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ (Krishna Byregowda) ಡಿಸಿ-ಎಸ್ಪಿಗಳಿಗೆ ಸೂಚನೆ ನೀಡಿದ್ದಾರೆ.
ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ಗೆ ಕಿರುಕುಳ ಕಡಿವಾಣ ಹಾಕಲು ಸಿಎಂ ಸೂಚನೆ ಕೊಟ್ಟಿದ್ದರು. ಹೀಗಾಗಿ ಈ ವಾರದಲ್ಲಿ ಡಿಸಿ, ಎಸ್ಪಿಗಳು ಫೈನಾನ್ಸ್ ಸಂಸ್ಥೆಗಳ ಜೊತೆ ಅವರ ಜೊತೆ ಸಭೆ ಮಾಡಬೇಕು ಎಂದು ತಿಳಿಸಿದ್ದರು. ಆರ್‌ಬಿಐ ನಿಯಮಗಳನ್ನು ಉಲ್ಲಂಘನೆ ಮಾಡದಂತೆ ಎಚ್ಚರ ಕೊಡಬೇಕು. ಅತಿರೇಕದ ಸಾಲ ಪಾವತಿ ಕ್ರಮ ತೆಗೆದುಕೊಂಡರೇ ಕೇಸ್ ದಾಖಲು ಮಾಡುವಂತೆ ಸೂಚನೆ ನೀಡಬೇಕು ಎಂದು ಹೇಳಿದರು.
ಫೈನಾನ್ಸ್ ಕಂಪನಿಗಳು ಯದ್ವಾತದ್ವಾ ಸಾಲ ಕೊಡುತ್ತಿದ್ದಾರೆ. 2 ಲಕ್ಷ ರೂ. ಮೇಲ್ಪಟ್ಟು ಸಾಲ ಕೊಡಬಾರದು. ಇದು ಆರ್‌ಬಿಐ ನಿಯಮ. ಬೇಜವಾಬ್ದಾರಿಯಾಗಿ ಸಾಲ ಕೊಡುವುದು ನಿಯಂತ್ರಣ ಮಾಡಬೇಕು ಎಂದು ಸೂಚನೆ ನೀಡಿದ್ದೇವೆ. ಆರ್‌ಬಿಐ ನಿಯಮ ಪಾಲನೆಗೆ ಫೈನಾನ್ಸ್ ಅವರಿಗೆ ಸೂಚನೆ ಕೊಡುವಂತೆ ತಿಳಿಸಲಾಗಿದೆ. ಆರ್‌ಬಿಐ ಅವರು ನಮಗೆ ಯಾವುದೇ ಅಧಿಕಾರ ಕೊಟ್ಟಿಲ್ಲ. ಹೀಗಾಗಿ ಇಂತಹ ಕಿರುಕುಳ ಕೊಡದಂತೆ ತಡೆಯಲು ಕ್ರಮಕ್ಕೆ ನಾವು ಮುಂದಾಗಿದ್ದೇವೆ. ಇದನ್ನು ಕಟ್ಟುನಿಟ್ಟಾಗಿ ಫೈನಾನ್ಸ್ ಅವರಿಗೆ ಸೂಚನೆ ಕೊಡಲು ತಿಳಿಸಲಾಗಿದೆ ಎಂದು ತಿಳಿಸಿದರು.ಇದನ್ನೂ ಓದಿ: MUDA Case | ಇಡಿ ಸಮನ್ಸ್‌ಗೆ ಹೈಕೋರ್ಟ್ ತಡೆ – ಸಿಎಂ ಪತ್ನಿ ಪಾರ್ವತಿಗೆ ತಾತ್ಕಾಲಿಕ ರಿಲೀಫ್
– ಸರ್ಕಾರ ಮಾಡಿದ ಪಾಪಕ್ಕೆ ಮೈಕ್ರೋ ಫೈನಾನ್ಸ್ ಹಾವಳಿ ಜಾಸ್ತಿಯಾಗಿದೆ ಎಂದ ವಿಪಕ್ಷ ನಾಯಕ
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಮಾಡಿದ ಪಾಪದಿಂದಾಗಿ ಜನರು ಮೈಕ್ರೋ ಫೈನಾನ್ಸ್‌ನಲ್ಲಿ ಸಾಲ ಪಡೆಯುತ್ತಿದ್ದಾರೆ. ಸರ್ಕಾರವೇ ಸಾಲ ನೀಡಿದ್ದರೆ ಜನರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ (R Ashok) ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಯೋಜನೆಗೆ 2022-23ರಲ್ಲಿ ಬಿಜೆಪಿ ಸರ್ಕಾರ 60 ಕೋಟಿ ರೂ. ಅನುದಾನ ನೀಡಿತ್ತು. 2024-25ರಲ್ಲಿ ಕಾಂಗ್ರೆಸ್ 40 ಕೋಟಿ ರೂ. ನೀಡಿದೆ. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸ್ವಯಂ ಉದ್ಯೋಗ ಯೋಜನೆಗೆ ಬಿಜೆಪಿ 100 ಕೋಟಿ ರೂ. ನೀಡಿದರೆ, ಕಾಂಗ್ರೆಸ್ 45 ಕೋಟಿ ರೂ. ನೀಡಿದೆ. ತಾಂಡಾ ಅಭಿವೃದ್ಧಿ ನಿಗಮದ ಸ್ವಯಂ ಉದ್ಯೋಗ ಯೋಜನೆಗೆ ಬಿಜೆಪಿ 110 ಕೋಟಿ ರೂ. ನೀಡಿದರೆ ಕಾಂಗ್ರೆಸ್ 60 ಕೋಟಿ ರೂ. ನೀಡಿದೆ. ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮಕ್ಕೆ ಬಿಜೆಪಿ 100 ಕೋಟಿ ರೂ. ನೀಡಿದರೆ, ಕಾಂಗ್ರೆಸ್ 50 ಕೋಟಿ ರೂ. ನೀಡಿದೆ. ಜೊತೆಗೆ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರದಿಂದ ಹಣ ಫ್ರೀಜ್ ಆಗಿದೆ. ನಿಗಮಗಳಿಗೆ 1,700 ಕೋಟಿ ರೂ. ನೀಡಬೇಕಿದ್ದು, 643 ಕೋಟಿ ರೂ. ನೀಡಲಾಗಿದೆ. ಅಂದರೆ ಎಲ್ಲ ನಿಗಮಗಳಿಗೆ ಒಟ್ಟು 1,055 ಕೋಟಿ ರೂ. ಕೊರತೆಯಾಗಿದೆ. ಈ ಹಣದಲ್ಲಿ ಜನರಿಗೆ ಸಾಲ ನೀಡಬಹುದಿತ್ತು. ಕೊರತೆಯಾದ ಹಣವನ್ನು ಸಾಲವಾಗಿ ಮೈಕ್ರೋ ಫೈನಾನ್ಸ್‌ಗಳು ನೀಡುತ್ತಿವೆ ಎಂದರು.ಇದನ್ನೂ ಓದಿ:BBK 11: ಗೆದ್ದ 50 ಲಕ್ಷದಲ್ಲಿ ಮನೆ ಕಟ್ಟಿಸ್ತೀನಿ, ಮದುವೆ ಆಗ್ತೀನಿ: ಹನುಮಂತ
ಪ್ರತಿ ಬಜೆಟ್‌ನಲ್ಲೂ ಅನುದಾನ ಶೇ.20ರಷ್ಟು ಹೆಚ್ಚಾಗಬೇಕು. 2022-23ರಲ್ಲಿ ಬಿಜೆಪಿ ಸರ್ಕಾರ ಕೃಷಿ ಇಲಾಖೆಗೆ 7,288 ಕೋಟಿ ರೂ. ನೀಡಿದರೆ, ಕಾಂಗ್ರೆಸ್ ಸರ್ಕಾರ 5,035 ಕೋಟಿ ರೂ. ನೀಡಿದೆ. ಅಂದರೆ 2,253 ಕೋಟಿ ರೂ. ಕೊರತೆಯಾಗಿದೆ. ಇದು ರೈತರ ಬದುಕಿನ ಮೇಲೆ ಪರಿಣಾಮ ಬೀರಿದೆ. ತೋಟಗಾರಿಕಾ ಇಲಾಖೆಗೆ ಬಿಜೆಪಿ 1,374 ಕೋಟಿ ರೂ. ನೀಡಿದರೆ, ಕಾಂಗ್ರೆಸ್ 1,207 ಕೋಟಿ ರೂ. ನೀಡಿದೆ. ಕೃಷಿ, ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ, ಸಹಕಾರಿ ಎಲ್ಲ ಸೇರಿ ಬಿಜೆಪಿ 15,383 ಕೋಟಿ ರೂ. ನೀಡಿದರೆ, ಕಾಂಗ್ರೆಸ್ 14,768 ಕೋಟಿ ರೂ. ನೀಡಿದೆ. ಇದರಿಂದ 614 ಕೋಟಿ ರೂ. ಕೊರತೆಯಾಗಿದೆ. ಕಂದಾಯ ಇಲಾಖೆಗೆ ಬಿಜೆಪಿ 1534 ಕೋಟಿ ರೂ. ನೀಡಿದರೆ, ಕಾಂಗ್ರೆಸ್‌ನಿಂದ 940 ಕೋಟಿ ರೂ. ನೀಡಲಾಗಿದೆ. 594 ಕೋಟಿ ರೂ. ಕೊರತೆಯಾಗಿದೆ. ಲೋಕೋಪಯೋಗಿ ಇಲಾಖೆಗೆ ಬಿಜೆಪಿ 12,410 ಕೋಟಿ ರೂ. ನೀಡಿದರೆ, ಕಾಂಗ್ರೆಸ್‌ನಿಂದ 9,699 ಕೋಟಿ ರೂ. ನೀಡಲಾಗಿದೆ. 2,710 ಕೋಟಿ ರೂ. ಕೊರತೆಯಾಗಿದೆ. ನೀರಾವರಿಗೆ ಬಿಜೆಪಿ 19,610 ಕೋಟಿ ರೂ. ನೀಡಿದರೆ, ಕಾಂಗ್ರೆಸ್ 16,834 ಕೋಟಿ ರೂ. ನೀಡಿದೆ. ಇದರಿಂದ 2755 ಕೋಟಿ ರೂ. ಕೊರತೆಯಾಗಿದೆ ಎಂದು ತಿಳಿಸಿದರು.
ಮೈಕ್ರೋ ಫೈನಾನ್ಸ್ ಮೀಟರ್ ಬಡ್ಡಿ ದಂಧೆಯಲ್ಲಿ ರೌಡಿಗಳು ಈವರೆಗೆ ಸುಮ್ಮನಿದ್ದರು. ಕಾಂಗ್ರೆಸ್ ಸರ್ಕಾರದಿಂದಾಗಿ ರೌಡಿಗಳಿಗೆ ಉದ್ಯೋಗ ಸಿಕ್ಕಿದೆ. ಬಡ ಜನರು ಸಾಲ ಮಾಡಿ ಮನೆ ಬಿಟ್ಟು ಹೊರಡಬೇಕಾಗಿದೆ. ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ಸಾಲ ನೀಡುತ್ತಿತ್ತು. ಈಗ ಕಾಂಗ್ರೆಸ್ ಸರ್ಕಾರ ನಿಗಮಗಳ ಮೂಲಕ ಸಾಲ ನೀಡದೆ, ಜನರು ಅನಿವಾರ್ಯವಾಗಿ ಮೈಕ್ರೋ ಫೈನಾನ್ಸ್‌ಗಳ ಮೊರೆ ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮೈಕ್ರೋ ಫೈನಾನ್ಸ್‌ನಲ್ಲಿ 10 ಜನರ ಗುಂಪು ರಚಿಸಿ, ಪ್ರತಿಯೊಬ್ಬರಿಗೂ 50 ಸಾವಿರ ರೂ. ಸಾಲ ನೀಡುತ್ತಾರೆ. ಒಬ್ಬರಿಗೆ ಉಳಿದವರು ಶೂರಿಟಿ ಕೊಡಬೇಕಾಗುತ್ತದೆ. ಪ್ರತಿ ತಿಂಗಳು ಅಧಿಕ ಬಡ್ಡಿ ಕಟ್ಟಬೇಕಾಗುತ್ತದೆ. 50 ಸಾವಿರ ರೂ. ಸಾಲ ಪಡೆದರೆ 67 ಸಾವಿರ ರೂ. ವಾಪಸ್ ನೀಡಬೇಕು .ಎರಡು ತಿಂಗಳು ಕಟ್ಟಲಿಲ್ಲವೆಂದರೆ ರೌಡಿಗಳು ಮನೆಗೆ ಹೋಗಿ ಗಲಾಟೆ ಮಾಡುತ್ತಾರೆ. ಅನೇಕ ಹಳ್ಳಿಗಳಲ್ಲಿ ಜನರು ಮನೆ ಬಿಟ್ಟು ವಲಸೆ ಹೋಗಿದ್ದಾರೆ. ಕೋಟೆ ಲೂಟಿಯಾದ ನಂತರ ಬಾಗಿಲು ಹಾಕಿದರು ಎಂಬಂತೆ, ಸಿಎಂ ಸಿದ್ದರಾಮಯ್ಯ ಈಗ ಹೊಸ ಕಾನೂನು ತರಲು ಮುಂದಾಗಿದ್ದಾರೆ. ನೋಟಿಸ್ ಕೊಡದೆ ಜನರನ್ನು ಮನೆಯಿಂದ ಹೊರಕ್ಕೆ ಕಳುಹಿಸಲಾಗಿದೆ. ಇಂತಹ ಸಮಯದಲ್ಲಿ ಪೊಲೀಸರು ಕ್ರಮ ಕೈಗೊಳ್ಳಬೇಕಿತ್ತು. ಆದರೆ ಪೊಲೀಸರು ಕೂಡ ಇದಕ್ಕೆ ಸಹಕಾರ ನೀಡಿದ್ದಾರೆ. ಕಂಟ್ರೋಲ್ ರೂಮ್ ರೂಪಿಸಿದರೂ ಅದರಿಂದ ಜನರಿಗೆ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಸಿದ್ದರಾಮಯ್ಯ ಸಾಲ ಮನ್ನಾ ಬಗ್ಗೆ ಹೇಳಿದ್ದರಿಂದ ಡಿಸಿಸಿ ಬ್ಯಾಂಕ್‌ಗಳಿಗೆ ನಷ್ಟವಾಗಿದೆ. ಸಾಲ ಪಡೆದವರು ಕಾಂಗ್ರೆಸ್ ಸರ್ಕಾರವನ್ನು ನಂಬಿಕೊಂಡು ಕೂತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾಂಗಲ್ಯ ಕಿತ್ತುಕೊಳ್ಳುತ್ತಾರೆಂದು ಪ್ರಧಾನಿ ಮೋದಿ ಹೇಳಿದ್ದು ಈಗ ನಿಜವಾಗಿದೆ. ಗೃಹಲಕ್ಷ್ಮಿಯ ಹಣ ಮಹಿಳೆಯರಿಗೆ ನಿಜವಾಗಿಯೂ ಸಿಕ್ಕಿದ್ದರೆ ಏಕೆ ಮೈಕ್ರೋ ಫೈನಾನ್ಸ್‌ಗೆ ಹೋಗುತ್ತಾರೆ ಎಂದು ಹೇಳಿದರು.ಇದನ್ನೂ ಓದಿ: ಎಲ್ಲದ್ದಕ್ಕೂ ಕೇಂದ್ರ ಎನ್ನುವುದಾದರೆ ನೀವೇನು ಕತ್ತೆ ಕಾಯ್ತಿದ್ದೀರಾ? – `ಕೈ’ ಸರ್ಕಾರದ ವಿರುದ್ಧ ಅಶೋಕ್ ಕಿಡಿ
ಯಾದಗಿರಿ: ಮೈಕ್ರೋ ಫೈನಾನ್ಸ್‌ನಿಂದ ಕಿರುಕುಳ ಸಂಬಂಧ ಮೊನ್ನೆ ಅಷ್ಟೇ ಸಿಎಂ ಜೊತೆಗೆ ಮೀಟಿಂಗ್ ಮಾಡಿದ್ದೇವೆ. ಕಿರುಕುಳ ಸಂಬಂಧ ಯಾವುದೇ ದೂರು ಬಂದರೂ ಅಂಥವರನ್ನ ತಕ್ಷಣ ಹಿಡಿದು ಒಳಗೆ ಹಾಕುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ (G.Parameshwar) ಹೇಳಿದರು.
ಯಾದಗಿರಿಯಲ್ಲಿ (Yadagiri) ನಗರ ಠಾಣಾ ಉದ್ಘಾಟನೆ ಬಳಿಕ ಸಚಿವರು ಮಾತನಾಡಿ, ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಎಂಬ ಕಂಪನಿಗಳು ಹುಟ್ಟಿಕೊಂಡಿವೆ. ಐವತ್ತು ಲಕ್ಷ ರೂ. ಕೊಟ್ಟು ಗೂಂಡಾಗಳನ್ನು ಬಿಟ್ಟು ಗಲಾಟೆ ಮಾಡಿ, ಸಾಲ ತೆಗೆದುಕೊಂಡವರ ಮರ್ಯಾದೆಯನ್ನು ಹರಾಜು ಹಾಕುತ್ತಿದ್ದಾರೆ. ಮೊನ್ನೆ ಅಷ್ಟೇ ನಾವು ಸಿದ್ದರಾಮಯ್ಯ ಅವರು ಈ ಬಗ್ಗೆ ಮೀಟಿಂಗ್ ಮಾಡಿದ್ದೇವೆ. ಕಿರುಕುಳ ನೀಡುವ ಸಿಬ್ಬಂದಿಯನ್ನು ತಕ್ಷಣ ಹಿಡಿದು ಒಳಗೆ ಹಾಕುವಂತೆ ಪೊಲೀಸರಿಗೆ ಸೂಚನೆ ಕೊಟ್ಟಿದ್ದೇವೆ. ಹೊಸದಾಗಿ ಕಾನೂನು ಮಾಡುವ ಅವಶ್ಯಕತೆ ಇದ್ದರೆ ಅದನ್ನು ಮಾಡುತ್ತೇವೆ. ಸಾಲಗಾರರು ದೂರು ಕೊಟ್ಟರೆ ಕಂಪ್ಲೆಂಟ್ ತೆಗೆದುಕೊಳ್ಳಿ, ಇಲ್ಲದಿದ್ದರೆ ನೀವೇ ಸುಮೋಟೋ ಕೇಸ್ ದಾಖಲಿಸಿಕೊಳ್ಳುವಂತೆ ಸೂಚನೆ ನೀಡಿದ್ದೇವೆ ಎಂದು ಹೇಳಿದರು.ಇದನ್ನೂ ಓದಿ: ಗೃಹ ಮಂಡಳಿ ಫ್ಲ್ಯಾಟ್ ಬೇಕಾ? – ಕೋಟಿ ಕೋಟಿ ಹಣ ಇರಬೇಕು!
ಬಳಿಕ ಸಿಎಂ ಪತ್ನಿ ಹಾಗೂ ಸಚಿವ ಬೈರತಿ ಸುರೇಶ್‌ಗೆ ಇಡಿ ನೋಟಿಸ್ ನೀಡಿದ ವಿಚಾರವಾಗಿ ಮಾತನಾಡಿದ ಸಚಿವರು, ಅದಕ್ಕೆ ತಕ್ಕ ಉತ್ತರ ಅವರು ಕೊಡ್ತಾರೆ. ಇಡಿ ನೋಟಿಸ್‌ಗೆ ಏನು ಉತ್ತರ ಬೇಕೋ ಅದನ್ನು ಕೊಡ್ತಾರೆ. ಇಡಿ ಅವರು ಅಪೇಕ್ಷೆ ಪಟ್ಟಂತೆ ಉತ್ತರ ಕೊಡುತ್ತಾರೆ ಎಂದು ಅಸಮಾಧಾನ ಹೊರಹಾಕಿದರು.
ಕೋರ್ಟ್ ಆದೇಶ ಮತ್ತು ಇಡಿ ನೋಟಿಸ್ ತನಿಖೆ ನಡೆಯುವಾಗ ನಾವು ಏನು ಹೇಳೋಕೆ ಆಗಲ್ಲ. ಸಬ್ ಜ್ಯೂಡಿಸ್ ಆಗುತ್ತೆ ಹೀಗಾಗಿ ನಾವು ಏನು ಹೇಳೋಕೆ ಆಗಲ್ಲ. ಕೆಪಿಸಿಸಿ ಅಧ್ಯಕ್ಷರು ಸೇರಿ ಎಲ್ಲರೂ ಮೊದಲೇ ರಾಜಕೀಯ ಪ್ರೇರಿತ ಅಂತ ಹೇಳಿದ್ದಾರೆ. ಮುಡಾ ಪ್ರಕರಣ ರಾಜಕೀಯ ಪ್ರೇರಿತ ಅಂತ ಮೊದಲಿಂದ ಹೇಳಿದ್ದೇವೆ. ಈಗಲೂ ಅದನ್ನೇ ಹೇಳುತ್ತಿದ್ದೇವೆ ಎಂದರು.
ಉಡುಪಿಯ ಶಾಲೆಗೆ ಬಾಂಬ್ ಬೆದರಿಕೆ ವಿಚಾರವಾಗಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಸಾವಿರಾರು ಶಾಲೆಗಳಿಗೆ ಬಾಂಬ್ ಬೆದರಿಕೆ ಬರುತ್ತಿದೆ. ಕರ್ನಾಟಕದಲ್ಲೂ ಬಾಂಬ್ ಬೆದರಿಕೆ ಬಂದಿದೆ. ಹಿಂದೆನೂ ಬಂದಿದೆ. ಈಗಲೂ ಬರ್ತಿದೆ ದಿನನಿತ್ಯವೂ ಬರುತ್ತದೆ ಎಂದು ಹೇಳಿದರು.
ನಾವು ಪರಿಶೀಲನೆ ಮಾಡುತ್ತೇವೆ. ಯಾವುದೋ ದೇಶದಲ್ಲಿ ಕುಳಿತುಕೊಂಡು ಪೋಸ್ಟಿಂಗ್ ಮಾಡಿರುತ್ತಾನೆ. ನಾವು ಬ್ಯಾಕ್ ಟ್ರಾಕ್ ಮಾಡಿ ಪತ್ತೆ ಹಚ್ಚುತ್ತೇವೆ. ನಮ್ಮಲ್ಲಿ ಸೈಬರ್ ಟಿಂ ಬಹಳ ಚೆನ್ನಾಗಿದೆ. ಇಡೀ ದೇಶದಲ್ಲಿ ಸೈಬರ್‌ನಲ್ಲಿ ಪರಿಣಿತರಿರೋದು ಕರ್ನಾಟಕದಲ್ಲಿ ಮಾತ್ರ. ವೆರಿಫೈ ಮಾಡಿದಾಗ ಬೇರೆಬೇರೆ ದೇಶದ ಪೋಸ್ಟಿಂಗ್ ಇರುತ್ತವೆ. ಅವರ ಅಡ್ರೇಸ್, ಅಕೌಂಟ್ ಯಾವುದು ನಮಗೆ ಸಿಗೋದಿಲ್ಲ. ಆದ್ದರಿಂದ ನಾವು ಇದನ್ನ ಗಂಭೀರವಾಗಿ ತೆಗೆದುಕೊಳ್ತೀವೆ. ಏಕೆಂದರೆ ಒಂದು ವೇಳೆ ಇದು ನಿಜಾನೇ ಆಗಿದ್ದರೆ ಏನು ಮಾಡೋದು. ಆದ್ದರಿಂದ ಇದನ್ನು ವೆರಿಫೈ ಮಾಡ್ತೇವೆ ಎಂದು ಭರವಸೆ ನೀಡಿದರು.ಇದನ್ನೂ ಓದಿ: ಶಿವಣ್ಣ ಗಟ್ಟಿಯಾಗಿ ವಾಪಸ್ ಬಂದಿದ್ದಾರೆ: ಡಾಲಿ ಧನಂಜಯ
ಮೈಸೂರು: ವಿಷದ ಮಾತ್ರೆಗಳನ್ನು ನುಂಗಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು (Nanjangud) ತಾಲೂಕಿನ ಅಂಬಳೆ ಗ್ರಾಮದಲ್ಲಿ ನಡೆದಿದೆ.
ಜಯಶೀಲಾ (53) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಈಕೆ ಐಐಎಫ್‌ಎಲ್, ಫೈವ್ ಸ್ಟಾರ್ ಮೈಕ್ರೋ ಫೈನಾನ್ಸ್‌ನಲ್ಲಿ (Micro Finance) ಮನೆ, ವ್ಯವಸಾಯ ಹಾಗೂ ಹಸು ಸಾಕಾಣಿಕೆಗಾಗಿ 5 ಲಕ್ಷ ಸಾಲ ಪಡೆದಿದ್ದರು. ಪ್ರತಿ ತಿಂಗಳು 20,000ಕ್ಕೂ ಹೆಚ್ಚು ಇಎಂಐ ಕಟ್ಟಬೇಕಾಗಿತ್ತು. ಸಾಲದಲ್ಲಿ ತೆಗೆದುಕೊಂಡಿದ್ದ ಹಸು ಕೂಡ ಇತ್ತೀಚೆಗೆ ಮೃತಪಟ್ಟಿತ್ತು. ಈ ಹಿನ್ನೆಲೆ ಜೀವನ ನಿರ್ವಹಣೆ ಮಾಡಲು ಸಾಧ್ಯವಾಗದ ಪರಿಸ್ಥಿತಿಗೆ ತಲುಪಿದ್ದರು. ಈ ಹಿನ್ನೆಲೆ ಸಮೀಪದ ಹುಲ್ಲಹಳ್ಳಿಗೆ ತೆರಳಿ ವಿಷದ ಮಾತ್ರೆಗಳನ್ನು ತಂದು ಜಮೀನಿನಲ್ಲಿ ನುಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: BBK 11 Finale| 50 ಲಕ್ಷದಲ್ಲಿ ಹನುಮಂತಗೆ ಎಷ್ಟು ಹಣ ಸಿಗುತ್ತೆ?
ಮೈಕ್ರೋ ಫೈನಾನ್ಸ್ (Micro Finance) ವ್ಯಾಪ್ತಿಯಲ್ಲಿ ಧರ್ಮಸ್ಥಳ ಸಂಘ ಬರಲ್ಲ. ಅವರು ಗ್ರಾಮೀಣ ಯೋಜನೆ ಅಂತ ಮಾಡಿಕೊಂಡಿದ್ದಾರೆ. ಸ್ವ-ಸಹಾಯ ಸಂಘ ಮಾಡಿ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಸ್ವ-ಸಹಾಯ ಸಂಘಗಳಿಗೆ ಅವರು ಸಾಲ ಕೊಡ್ತಾರೆ. ಧರ್ಮಸ್ಥಳದ ಹಣ ಅನ್ನುತ್ತಿದ್ದಂತೆ ಯಾರೂ ಸಹ ಉಳಿಸಿಕೊಳ್ಳಲ್ಲ. ಅವರು ಹೀಗೆ ಕಿರುಕುಳ ನೀಡಿದ್ದಾರೆ ಅಂತ ನಮಗೆ ಯಾವುದೇ ದೂರು ಬಂದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಹರಿಹರ ಶಾಸಕರಿಗೆ ತಲೆ ಕೆಟ್ಟಿರಬೇಕು – ಬಿ.ಪಿ ಹರೀಶ್ ವಿರುದ್ಧ ಎಸ್.ಎಸ್ ಮಲ್ಲಿಕಾರ್ಜುನ್ ಕಿಡಿ
ಇನ್ನೂ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ವಿಚಾರವಾಗಿ ಮಾತನಾಡಿ, ಹೀಗೆ ಕಿರುಕುಳ ಕೊಡೋರಿಗೆ ಕಠಿಣ ಶಿಕ್ಷೆ ಆಗಬೇಕು. ಹಾಸನ ಜಿಲ್ಲೆಯಲ್ಲೂ ಈ ಸಮಸ್ಯೆ ಸಾಕಷ್ಟಿದೆ. ಕೆಲ ಸಂಸ್ಥೆಗಳು ಆರ್‌ಬಿಐ ಅನುಮತಿ ಪಡೆದು ಫೈನಾನ್ಸ್ ನಡೆಸುತ್ತಾರೆ. ಮೈಕ್ರೋ ಫೈನಾನ್ಸ್ ಕಂಪನಿಗಳು ಜನರಿಗೆ ಕಿರುಕುಳ ಕೊಟ್ಟಾಗ ನಾವು ಕ್ರಮ ಕೈಗೊಳ್ಳಬಹುದು. ಹಾಗಾಗಿ ಸಿಎಂ ಸಭೆ ಮಾಡಿ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ಇಂತಹ ಕಿರುಕುಳ ತಡೆಗೆ ಹೊಸ ಕಾಯ್ದೆ ತರುವ ಬಗ್ಗೆಯೂ ಚರ್ಚೆ ಆಗಿದೆ. ಈ ಬಗ್ಗೆ ಮುಂದಿನ ಅಧಿವೇಶನದಲ್ಲಿ ಕಾಯ್ದೆ ಮಂಡನೆ ಆಗಲಿದೆ. ನಿನ್ನೆ ಸಿಎಂ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ಅದಕ್ಕಾಗಿ ನಿನ್ನೆ ರಜೆ ಇದ್ದರೂ ಸಿಎಂ ಅಧಿಕಾರಿಗಳು ಹಾಗೂ ಸಚಿವರೊಟ್ಟಿಗೆ ಸಭೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.
ಹಾಸನ: ಮುಡಾ ಪ್ರಕರಣ (MUDA Case) ಬಿಜೆಪಿಯ ಸೃಷ್ಟಿ ಅಷ್ಟೇ. ಸಿಎಂ ಆಗಿರೋರಿಗೆ ಮೂರ‍್ನಾಲ್ಕು ಸೈಟ್ ಯಾವ ಲೆಕ್ಕ ಹೇಳಿ ಅಂತ ಸಹಕಾರ ಸಚಿವ ಕೆ.ಎನ್ ರಾಜಣ್ಣ (KN Rajanna) ಹೇಳಿದ್ದಾರೆ.
ಯಾರು ದೂರು ಕೊಟ್ಟು ಹೇಳಿಕೆ ಕೊಡ್ತಿದ್ದಾರೋ ಅವರದ್ದೇ ಪಾತ್ರ ಇದ್ದಂತಿದೆ. ಇನ್ನು ಸ್ವಲ್ಪದಿನ, ಎಲ್ಲವೂ ಆಚೆ ಬರುತ್ತದೆ. ಯಾರದ್ದು ಎಷ್ಟು ಸೈಟು ಇದೆ, ಎಲ್ಲವೂ ಆಚೆ ಬರುತ್ತೆ. ಮುಡಾ ಇರಲಿ, ಬಿಡಿಎ ಇರಲಿ, ಎಲ್ಲೇ ಕಾನೂನು ಬಾಹಿರ ಚಟುವಟಿಕೆ ಆಗಿದ್ದರೂ ಶಿಕ್ಷೆ ಆಗಬೇಕು. ಸಾರ್ವಜನಿಕ ಆಸ್ತಿಯನ್ನು ಯಾರೇ ಲಪಟಾಯಿಸಿದ್ರೂ ಅದು ಮೋಸದ ಕೆಲಸ. ಹಾಗೆ ಮಾಡಿದವರಿಗೆ ಶಿಕ್ಷೆಯಾಗಬೇಕು ಅನ್ನುವವನು ಅಂತ ಸಚಿವರು ಹೇಳಿದ್ದಾರೆ.
ಇನ್ನೂ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ವಿಚಾರವಾಗಿ ಮಾತನಾಡಿ, ಹೀಗೆ ಕಿರುಕುಳ ಕೊಡೋರಿಗೆ ಕಠಿಣ ಶಿಕ್ಷೆ ಆಗಬೇಕು. ಹಾಸನ ಜಿಲ್ಲೆಯಲ್ಲೂ ಈ ಸಮಸ್ಯೆ ಸಾಕಷ್ಟಿದೆ. ಕೆಲ ಸಂಸ್ಥೆಗಳು ಆರ್‌ಬಿಐ ಅನುಮತಿ ಪಡೆದು ಫೈನಾನ್ಸ್ ನಡೆಸುತ್ತಾರೆ. ಮೈಕ್ರೋ ಫೈನಾನ್ಸ್ ಕಂಪನಿಗಳು ಜನರಿಗೆ ಕಿರುಕುಳ ಕೊಟ್ಟಾಗ ನಾವು ಕ್ರಮ ಕೈಗೊಳ್ಳಬಹುದು. ಹಾಗಾಗಿ ಸಿಎಂ ಸಭೆ ಮಾಡಿ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ಇಂತಹ ಕಿರುಕುಳ ತಡೆಗೆ ಹೊಸ ಕಾಯ್ದೆ ತರುವ ಬಗ್ಗೆಯೂ ಚರ್ಚೆ ಆಗಿದೆ. ಈ ಬಗ್ಗೆ ಮುಂದಿನ ಅಧಿವೇಶನದಲ್ಲಿ ಕಾಯ್ದೆ ಮಂಡನೆ ಆಗಲಿದೆ. ನಿನ್ನೆ ಸಿಎಂ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ಅದಕ್ಕಾಗಿ ನಿನ್ನೆ ರಜೆ ಇದ್ದರೂ ಸಿಎಂ ಅಧಿಕಾರಿಗಳು ಹಾಗೂ ಸಚಿವರೊಟ್ಟಿಗೆ ಸಭೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.
ದಾವಣಗೆರೆ: ರಾಜ್ಯದಲ್ಲಿ ದಿನೇದಿನೇ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ಹೆಚ್ಚಾಗುತ್ತಿದ್ದು, ಇದೀಗ ದಾವಣಗೆರೆಯಲ್ಲೂ (Davanagere) ಮಹಿಳೆಯೊಬ್ಬರಿಗೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ನೀಡುತ್ತಿರುವ ಬಗ್ಗೆ ಆರೋಪ ಕೇಳಿಬಂದಿದೆ.
ಚನ್ನಮ್ಮ ತಾಲೂಕಿನ ಕತ್ತಲಗೆರೆ ಗ್ರಾಮದ ರೇಣುಕಮ್ಮ ಎಂಬ ಮಹಿಳೆಗೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಸಾಲ ತೀರಿಸುವಂತೆ ಕಿರುಕುಳ ನೀಡುತ್ತಿರುವುದು ಕಂಡುಬಂದಿದೆ.ಇದನ್ನೂ ಓದಿ: ಶಿವಣ್ಣ ನಮ್ಮ ರಾಜ್ಯದ ಆಸ್ತಿ: ಕೃಷ್ಣ ಬೈರೇಗೌಡ
ಈ ಹಿಂದೆ ರೇಣುಕಮ್ಮ ಫೈನಾನ್ಸ್ ಕಂಪನಿ ಒಂದರಲ್ಲಿ ಸಾಲ ಮಾಡಿದ್ದರು. ನಂತರ ಫೈನಾನ್ಸ್ ಕಂಪನಿ ಸಿಬ್ಬಂದಿಯ ಕಿರುಕುಳಕ್ಕೆ ಬೇಸತ್ತು ಹಸು ಮಾರಿ ಸಾಲವನ್ನು ತೀರಿಸಿದ್ದರು. ಇದಾದ ಬಳಿಕ ಅನಾರೋಗ್ಯದ ಕಾರಣ ಆಸ್ಪತ್ರೆ ಖರ್ಚಿಗಾಗಿ ಮೈಕ್ರೋ ಫೈನಾನ್ಸ್ನಲ್ಲಿ ಮತ್ತೆ ಸಾಲ ಮಾಡಿದ್ದಾರೆ. ಇದೀಗ ಬಾಕಿ ಸಾಲ ಪಾವತಿ ಮಾಡುತ್ತಿದ್ದರೂ ಸಹ ಮೈಕ್ರೋ ಫೈನಾನ್ಸ್ ಸಿಬ್ಬಂದಿ ನಿತ್ಯ ಮಹಿಳೆಯ ಮನೆಗೆ ಬಂದು ಬೆದರಿಕೆ ಹಾಕಿ, ಸಾಲ ತೀರಿಸುವಂತೆ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ವೃದ್ಧ ದಂಪತಿಗಳು ಬೇಸತ್ತಿದ್ದಾರೆ.
ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾರ್ವಜನಿಕರಿಗೆ ಎದುರಾಗುತ್ತಿರುವ ಸಮಸ್ಯೆಗಳ ಕುರಿತಾಗಿ ನಿನ್ನೆ ಸಿಎಂ ಸಿದ್ದರಾಮಯ್ಯ ಅವರು ಉನ್ನತಮಟ್ಟದ ಸಭೆ ನಡೆಸಿ, ಹಲವು ಕ್ರಮಗಳನ್ನು ಕೈಗೊಂಡಿದ್ದರು. ಸಾಲಗಾರರ ಹಿತ ಕಾಪಾಡುವ ದೃಷ್ಟಿಯಿಂದ ಆದಷ್ಟು ಬೇಗ ಸುಗ್ರೀವಾಜ್ಞೆ ಮೂಲಕ ಹೊಸ ಕಾನೂನು ರಚನೆ ಮಾಡುವುದಾಗಿ ಘೋಷಣೆ ಮಾಡಿದ್ದರು.ಇದನ್ನೂ ಓದಿ: ಗಣರಾಜ್ಯೋತ್ಸವಕ್ಕೆ ಪಿವೋಟ್ ಚಿತ್ರದ ಸ್ನೀಕ್ ಪೀಕ್