Tag: micro-containment zone

  • ಬೆಂಗಳೂರಿನ 32 ಕಡೆ ಕೊರೊನಾ ಸ್ಫೋಟ

    ಬೆಂಗಳೂರಿನ 32 ಕಡೆ ಕೊರೊನಾ ಸ್ಫೋಟ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮೂರನೇ ಅಲೆಯ ಆಂತಕ ಹೆಚ್ಚಾಗುತ್ತಿದ್ದು, ಬೆಂಗಳೂರಿನ 32 ಕಡೆ ಮಹಾಮಾರಿ ಸ್ಫೋಟಗೊಂಡಿದೆ.

    ಮೂರನೇ ಅಲೆಯನ್ನ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಕ್ರಮಗಳನ್ನ ಜಾರಿಗೆ ತರುತ್ತಿದೆ. ಬೆಂಗಳೂರಿನಲ್ಲಿ ಲಾಕ್‍ಡೌನ್ ಸಡಿಲಿಕೆ ಬಳಿಕ ಕಡಿಮೆಯಾಗಿದ್ದ ಸೋಂಕಿತರ ಸಂಖ್ಯೆ ಈಗ ಮತ್ತೆ ಏರಿಕೆ ಕಾಣಿಸುತ್ತಿದೆ. ಮಹಾಮಾರಿಯ ನಿಯಂತ್ರಣಕ್ಕಾಗಿ ಬಿಬಿಎಂಪಿ ಕಂಟೈನ್‍ಮೆಂಟ್ ಝೋನ್ ಗಳನ್ನ ಮಾಡುತ್ತಿದೆ. ಬೆಂಗಳೂರಿನ ಎಂಟು ವಿಭಾಗದ ಒಟ್ಟು 32 ಏರಿಯಾದಲ್ಲಿ ಮೈಕ್ರೋ ಕಂಟೈನ್‍ಮೆಂಟ್ ಝೋನ್ ಗಳನ್ನ ಮಾಡಲಾಗದೆ. ಬರೋಬ್ಬರಿ 32 ಮೈಕ್ರೋ ಕಂಟೈನ್‍ಮೆಂಟ್ ಝೋನ್ ಗುರುತಿಸಿರೋ ಬಿಬಿಎಂಪಿ ಮನೆಗಳಿಗೆ ರೆಡ್ ಟೆಪ್ ಹಾಕುವ ಮೂಲಕ ಸೀಲ್ ಮಾಡುತ್ತಿದ್ದಾರೆ. ಮೂರಕ್ಕೂ ಹೆಚ್ಚು ಕೇಸ್‍ಗಳಿರುವ ಸ್ಥಳವನ್ನು ಮೈಕ್ರೋ ಕಂಟೈನ್‍ಮೆಂಟ್ ಝೋನ್ ಮಾಡಲಾಗುತ್ತದೆ.

    ಮೈಕ್ರೋ ಕಂಟೈನ್‍ಮೆಂಟ್ ಝೋನ್
    1. ಬೊಮ್ಮನಹಳ್ಳಿ ವಲಯ: ಸಿಂಗಸಂದ್ರ, ಯಲಚೇನಹಳ್ಳಿ, ಬೇಗೂರು, ಅರೆಕೆರೆ
    2. ಪೂರ್ವ ವಲಯ: ಬಾಣಸವಾಡಿ, ಲಿಂಗರಾಜಪುರ, ಜೋಗುಪಾಳ್ಯ, ಮನೋರಾಯನಪಾಳ್ಯ
    3. ಮಹದೇವಪುರ ವಲಯ: ವಿಜ್ಞಾನ ನಗರ, ಹೂಡಿ, ಗರುಡಾಚಾರಪಾಳ್ಯ, ರಾಮಮೂರ್ತಿ ನಗರ
    4. ಆರ್.ಆರ್.ನಗರ ವಲಯ: ಹೆಮ್ಮಿಗೆಪುರ, ಲಗ್ಗೆರೆ, ಆರ್.ಆರ್.ನಗರ, ಉಲ್ಲಾಳ ಇದನ್ನೂ ಓದಿ: ಹೊಸ ಸ್ವರೂಪ ಪಡೆದ ಕೊರೊನಾ-ಕಣ್ಣೀರಿನಿಂದಲೂ ಸೋಂಕು ಹಬ್ಬುತ್ತೆ, ಎಚ್ಚರ..!

    5. ದಕ್ಷಿಣ ವಲಯ: ಕೋರಮಂಗಲ, ವಿಜಯನಗರ, ಗಿರಿನಗರ, ಗಣೇಶ್ ಮಂದಿರ, ಬಸವನಗುಡಿ
    6. ಪಶ್ಚಿಮ ವಲಯ: ಅರಮನೆ ನಗರ, ಮಾರಪ್ಪನಪಾಳ್ಯ, ಬಸವೇಶ್ವರ ನಗರ, ರಾಜ್ ಮಹಲ್ ಗುಟ್ಟಹಳ್ಳಿ
    7. ಯಲಹಂಕ ವಲಯ: ಕುವೆಂಪು ನಗರ, ಕೆಂಪೇಗೌಡ ನಗರ, ದೊಡ್ಡಬೊಮ್ಮಸಂದ್ರ
    8. ದಾಸರಹಳ್ಳಿ ವಲಯ: ಅಬ್ಬಿಗೆರೆ, ನೆಲಮಹೇಶ್ವರಿ ನಗರ ಇದನ್ನೂ ಓದಿ: ಕೊರೊನಾ ವೈರಸ್ ಲೀಕ್ ಆಗಿದ್ದು ಚೀನಾದ ಲ್ಯಾಬ್‍ನಿಂದಲೇ-ಯುಎಸ್ ರಿಪಬ್ಲಿಕನ್ ವರದಿ

  • ಗ್ರಾಮಮಟ್ಟದಲ್ಲಿ ಕೋವಿಡ್ ನಿಯಂತ್ರಣಕ್ಕೆ ಮೈಕ್ರೋ ಕಂಟೇನ್ಮೆಂಟ್ ಜೋನ್ ನಿರ್ಮಾಣ – ಬೊಮ್ಮಾಯಿ

    ಗ್ರಾಮಮಟ್ಟದಲ್ಲಿ ಕೋವಿಡ್ ನಿಯಂತ್ರಣಕ್ಕೆ ಮೈಕ್ರೋ ಕಂಟೇನ್ಮೆಂಟ್ ಜೋನ್ ನಿರ್ಮಾಣ – ಬೊಮ್ಮಾಯಿ

    – ಸರ್ಕಾರದ ಗಮನ ಈಗ ಗ್ರಾಮೀಣದ ಕಡೆಗೆ

    ಬೆಂಗಳೂರು: ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಾಗಿರುವ ಗ್ರಾಮಾಂತರ ಪ್ರದೇಶದಲ್ಲಿ ಮೈಕ್ರೋ ಕಂಟೇನ್ಮೆಂಟ್ ವಲಯ ನಿರ್ಮಾಣ ಮಾಡುವ ಮೂಲಕ ಕೋವಿಡ್ ಹರಡುವುದನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ತನ್ನ ಸಂಪೂರ್ಣ ಗಮನವನ್ನು ಗ್ರಾಮೀಣ ಭಾಗದೆಡೆ ಮೀಸಲಿರಿಸಲು ನಿರ್ಧರಿಸಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಮಂಗಳವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೈಕ್ರೋ ಕಂಟೇನ್ಮೆಂಟ್ ವಲಯ ಸ್ಥಾಪಿಸುವ ಜವಾಬ್ದಾರಿಯನ್ನು ಪಿಡಿಓ, ತಾಲೂಕು ಆರೋಗ್ಯ ಅಧಿಕಾರಿ ಮತ್ತು ಪೊಲೀಸರಿಗೆ ವಹಿಸಲಾಗಿದೆ ಎಂದರು.

    ಕೋವಿಡ್ ಸೋಂಕಿತರು ಯಾವ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೋ ಆ ಗ್ರಾಮಗಳಲ್ಲಿ ಮೈಕ್ರೋ ಕಂಟೇನ್ಮೆಂಟ್ ಜೋನ್‍ಗಳನ್ನು ನಿರ್ಮಿಸಲಾಗುವುದು. ಈ ರೀತಿ ಜೋನ್ ನಿರ್ಮಿಸದ ಹೊರತು ಕೋವಿಡ್ ಹರಡುವುದನ್ನು ನಿಲ್ಲಿಸಲು ಗ್ರಾಮಾಂತರ ಪ್ರದೇಶದಲ್ಲಿ ಅಸಾಧ್ಯ. ಹೀಗಾಗಿ ಈ ಜೋನ್‍ಗಳಿಗೆ ಭೇಟಿ ನೀಡಿ ಸೋಂಕಿತರ ಆರೋಗ್ಯ ತಪಾಸಣೆ ನಡೆಸುವಂತೆ ವೈದ್ಯರಿಗೆ ಆದೇಶ ನೀಡಲಾಗಿದೆ. ಸೋಂಕಿತರಿಗೆ ವಿಟಮಿನ್-ಸಿ, ಜಿಂಕ್ ಸೇರಿದಂತೆ ಕೋವಿಡ್‍ಗೆ ನೀಡಲಾಗುವ ಎಲ್ಲಾ ಔಷದೋಪಚಾರವನ್ನು ನೀಡಲಾಗುವುದು. ಪ್ರಾಥಮಿಕ ಮಾಹಿತಿಯನ್ನು ಕಡ್ಡಾಯವಾಗಿ ಆರ್‌ಟಿಪಿಸಿಆರ್ ಮತ್ತು RAT ಟೆಸ್ಟಿಂಗ್ ಒಳಪಡಿಸಲಾಗುವುದು ಎಂದು ಹೇಳಿದರು.

    ಸಿಎಂ ವಿಡಿಯೋ ಕಾನ್ಫರೆನ್ಸ್: ಕೋವಿಡ್ ಹೆಚ್ಚಾಗಿ ಕಾಣಿಸಿಕೊಂಡಿರುವ ರಾಜ್ಯದ ಆಯ್ದ ಕೆಲ ಗ್ರಾಮಪಂಚಾಯಿತಿಗಳ ಜೊತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬುದುವಾರ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ಅದರೊಂದಿಗೆ ಗ್ರಾಮಾಂತರ ಪ್ರದೇಶದಲ್ಲಿನ ಕೋವಿಡ್ ಪರಿಸ್ಥಿತಿಯನ್ನು ಸಿಎಂ ಅವಲೋಕನ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

    ಬ್ಲಾಕ್ ಫಂಗಸ್‍ಗೆ 1,000 ಇಂಜೆಕ್ಷನ್: ರಾಜ್ಯದಲ್ಲಿ ಬ್ಲಾಕ್ ಫಂಗಸ್ ಸೋಂಕು ಹರಡುತ್ತಿದೆ. ಇದರ ನಿವಾರಣೆಗೆ ಕೇಂದ್ರ ರಾಸಾಯನಿಕ ಸಚಿವ ಡಿವಿ ಸದಾನಂದ ಗೌಡರು 1,000ಕ್ಕೂ ಹೆಚ್ಚು ಇಂಜೆಕ್ಷನ್ ವಿತರಣೆ ಮಾಡುವ ಭರವಸೆ ನೀಡಿದ್ದಾರೆ. ಬೆಂಗಳೂರು, ಧಾರವಾಡ ಸೇರಿದಂತೆ ಯಾವ ಜಿಲ್ಲೆಯಲ್ಲಿ ಬ್ಲಾಕ್ ಫಂಗಸ್ ಹರಡುತಿದೆಯೋ ಅಲ್ಲಿ ಈ ಚಿಕಿತ್ಸೆಗೆ ವಿಶೇಷವಾದ ವಾರ್ಡ್ ನಿರ್ಮಾಣ ಮಾಡುವಂತೆ ಸೂಚನೆ ನೀಡಲಾಗಿದೆ. ಅದರ ಜೊತೆಗೆ ಮಕ್ಕಳಿಗೆ ಚಿಕಿತ್ಸೆ ನೀಡಲು ಜಿಲ್ಲಾಮಟ್ಟದಲ್ಲಿ ಮಕ್ಕಳ ವಿಶೇಷ ವಾರ್ಡ್ ಹಾಗೂ ಅದರ ಜೊತೆಗೆ ಐಸಿಯು ಚಿಕಿತ್ಸಾ ಸೌಲಭ್ಯವನ್ನು ವ್ಯವಸ್ಥೆ ಮಾಡುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

    ಇಂದು ಸಂಜೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೋವಿಡ್ ನಿರ್ವಹಣೆ ಉಸ್ತುವಾರಿ ಜವಾಬ್ದಾರಿ ನೀಡಿರುವ ಸಚಿವರು ಸಭೆ ಕರೆದಿದ್ದಾರೆ. ರಾಜ್ಯದಲ್ಲಿನ ಕೋವಿಡ್ ಸ್ಥಿತಿಗತಿ ಬ್ಲಾಕ್ ಫಂಗಸ್ ಹರಡುವ ಕುರಿತು ಚರ್ಚೆಯಾಗಲಿದೆ ಎಂದು ಹೇಳಿದರು.