Tag: Michael Jackson

  • ಮೈಕಲ್ ಜಾಕ್ಸನ್ ಬಯೋಪಿಕ್ ನಿರ್ದೇಶನದ ಬಗ್ಗೆ ಕನಸು ಬಿಚ್ಚಿಟ್ಟ ಸಂದೀಪ್‌ ರೆಡ್ಡಿ ವಂಗಾ

    ಮೈಕಲ್ ಜಾಕ್ಸನ್ ಬಯೋಪಿಕ್ ನಿರ್ದೇಶನದ ಬಗ್ಗೆ ಕನಸು ಬಿಚ್ಚಿಟ್ಟ ಸಂದೀಪ್‌ ರೆಡ್ಡಿ ವಂಗಾ

    ರ್ಜುನ್ ರೆಡ್ಡಿ, ಅನಿಮಲ್ (Animal) ಸಿನಿಮಾಗಳ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಸದ್ಯ ಪ್ರಭಾಸ್ (Prabhas) ನಟನೆಯ ‘ಸ್ಪಿರಿಟ್’ ಸಿನಿಮಾ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಮೈಕಲ್ ಜಾಕ್ಸನ್ (Michael Jackson) ಜೀವನವನ್ನು ಸಿನಿಮಾ ರೂಪದಲ್ಲಿ ತೋರಿಸಲು ಆಸಕ್ತಿ ತೋರಿದ್ದಾರೆ. ಈ ಬಗ್ಗೆ ನಿರ್ದೇಶಕ ಓಪನ್ ಆಗಿ ಮಾತನಾಡಿದ್ದಾರೆ.

    ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಅವರ ಕಥೆ ಮತ್ತು ನಿರ್ದೇಶನಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ ಅವರ ಸಿನಿಮಾಗಳು ಕಾಂಟ್ರವರ್ಸಿ ಮೂಲಕ ಕೂಡ ಸದ್ದು ಮಾಡಿದೆ. ಈಗ ಸಂದರ್ಶನವೊಂದರಲ್ಲಿ ಮೈಕಲ್ ಜಾಕ್ಸನ್ ಬಯೋಪಿಕ್ ಸಿನಿಮಾ ಮಾಡಿ ತೋರಿಸಬೇಕು ಎಂಬ ಆಸೆಯಿದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಡಾಲಿ ಧನಂಜಯ್ ಈಗ ‘ಕೋಟಿ’ ಸರದಾರ

    ಮೈಕಲ್ ಜಾಕ್ಸನ್ ಪಾತ್ರವನ್ನು ಯಾರು ಮಾಡ್ತಾರೆ ಎಂಬುದೇ ಪ್ರಶ್ನೆ. ಸೂಕ್ತವಾದ ನಟ ಸಿಕ್ಕರೆ ಸಿನಿಮಾ ಮಾಡಬಹುದು. ಮೈಕಲ್ ಜಾಕ್ಸನ್ ಅವರ ಜೀವನ ತುಂಬಾ ರೋಚಕವಾಗಿದೆ. ಅವರ ಬಾಲ್ಯದ ದಿನಗಳು, ಮೈ ಬಣ್ಣ ಬದಲಾಯಿಸಿಕೊಂಡಿದ್ದು ಅದೆಲ್ಲವೂ ಒಂದು ದೊಡ್ಡ ಜರ್ನಿಯಾಗಿದೆ. ಆ ಸಿನಿಮಾ ಮಾಡಿದರೆ ಎಲ್ಲರೂ ಟಿಕೆಟ್ ಖರೀದಿಸುತ್ತಾರೆ. ಯಾರೇ ನಿರ್ದೇಶನ ಮಾಡಿದರೂ ನಾನು ಕೂಡ ಟಿಕೆಟ್ ಖರೀದಿಸಿ ಸಿನಿಮಾ ನೋಡುತ್ತೇನೆ. ಯಾಕೆಂದ್ರೆ ನಾನು ಕೂಡ ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು ಎಂದು ಸಂದೀಪ್ ರೆಡ್ಡಿ ವಂಗಾ ಹೇಳಿದ್ದಾರೆ.

    ‘ಅನಿಮಲ್’ ಸಿನಿಮಾ ಯಶಸ್ವಿಯಾಗಿದೆ. ಅನಿಮಲ್ ಪಾರ್ಕ್ ಮತ್ತು ಸ್ಪಿರಿಟ್ 2 ಚಿತ್ರಗಳು ಅವರ ಕೈಯಲ್ಲಿದೆ. ಅದಕ್ಕಾಗಿ ತೆರೆಮರೆಯಲ್ಲಿ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ. ಸದ್ಯದಲ್ಲೇ ಹೆಚ್ಚಿನ ಮಾಹಿತಿ ಸಿಗಲಿದೆ.

  • ಆ ಒಂದು ಕ್ಯಾಸೆಟ್‌ನಿಂದ ಪ್ರಭುದೇವ ಭವಿಷ್ಯ ಬದಲಾಯಿಸಿತು

    ಆ ಒಂದು ಕ್ಯಾಸೆಟ್‌ನಿಂದ ಪ್ರಭುದೇವ ಭವಿಷ್ಯ ಬದಲಾಯಿಸಿತು

    ಸಾಧಕನ ಸಾಧನೆಯ ಕಥೆ ಹೇಳುವ ಜನಪ್ರಿಯ Weekend with Ramesh 5 ಶೋನಲ್ಲಿ ತಮ್ಮ ಬದಕು ಬದಲಾದ ಕಥೆಯನ್ನ ಹೇಳಿದ್ದಾರೆ. ಪ್ರಭುದೇವ (Prabhudeva) ಕೈಗೆ ಸಿಕ್ಕ ಆ ಒಂದು ಕ್ಯಾಸೆಟ್‌ನಿಂದ ಅವರ ಭವಿಷ್ಯ ಬದಲಾಗಿದ್ದು, ಹೇಗೆ? ಎಂದು ಹೇಳಿದ್ದಾರೆ.

    ಬಾಲ್ಯದಿಂದಲೇ ನೃತ್ಯ ರಂಗದಲ್ಲಿ ಪ್ರಭುದೇವಗೆ ಒಲವಿತ್ತು. ಹಾಗಾಗಿ ಭರತನಾಟ್ಯ ಸೇರಿದಂತೆ ಹಲವು ಶೈಲಿಯ ನೃತ್ಯವನ್ನ ನಟ ಕರಗತ ಮಾಡಿಕೊಂಡರು. ತಂದೆಯ ಹಾದಿಯಲ್ಲಿಯೇ ಪ್ರಭುದೇವ ಸಾಗಿದ್ದರು. ಪ್ರಭುದೇವ ನೃತ್ಯ ಕಲಿಯುವಾಗ ಅವರಿಗೆ ಥ್ರಿಲ್ಲರ್ ಹೆಸರಿನ ಕ್ಯಾಸೆಟ್ ಸಿಕ್ಕಿತ್ತು. ವಿಶ್ವಪ್ರಸಿದ್ಧ ಡ್ಯಾನ್ಸರ್ ಮೈಕಲ್ ಜಾಕ್ಸನ್ ಅವರ 1982ರ ಸೂಪರ್ ಹಿಟ್ ಆಲ್ಬಂ ಥ್ರಿಲ್ಲರ್. ಬೀಟ್ ಇಟ್ ಸೇರಿದಂತೆ ಹಲವು ಹಾಡುಗಳು ಆ ಆಲ್ಬಂನಲ್ಲಿದ್ದವು. ಪ್ರಭುದೇವ ಅವರು ಆ ಆಲ್ಬಂನ ವಿಸಿಆರ್ ಕ್ಯಾಸೆಟ್ ಅನ್ನು ತೆಗೆದುಕೊಂಡು ಅದನ್ನು ನೋಡಲು ವಿಸಿಆರ್ ಅನ್ನು ಬಾಡಿಗೆ ತಂದಿದ್ದರಂತೆ. ಆ ಕ್ಯಾಸೆಟ್ ನೋಡುತ್ತಲೇ ನನಗೆ ರೋಮಾಂಚನವಾಗಿ ಬಿಟ್ಟಿತು. ನಾನು ಹೊಸದೇನನ್ನೋ ನೋಡಿದೆ. ಅಲ್ಲಿಯವರೆಗೆ ನಾನು ಆ ರೀತಿಯ ಡ್ಯಾನ್ಸ್ ನೋಡಿರಲೇ ಇಲ್ಲ. ಮೈಕಲ್ ಜಾಕ್ಸನ್ ಡ್ಯಾನ್ಸ್ ಮಾಡಿದ ರೀತಿ ನನ್ನನ್ನು ಬೆರಗಾಗಿಸಿತು ಎಂದು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: `ನಾಟು ನಾಟು’ ಹಾಡಿಗೆ ಹೆಜ್ಜೆ ಹಾಕಿದ ಆಲಿಯಾ ಭಟ್- ರಶ್ಮಿಕಾ ಮಂದಣ್ಣ

    ಅಂದು ಮೈಕಲ್ ಜಾಕ್ಸನ್‌ರ ಥ್ರಿಲ್ಲರ್ ನೋಡಿದ ಬಳಿಕ ಆ ಮಾದರಿಯ ಡ್ಯಾನ್ಸ್ ನನ್ನನ್ನು ಕಾಡಲು ಆರಂಭಿಸಿತು. ನಾನು ಎಲ್ಲಿದ್ದರು ಏನು ಮಾಡುತ್ತಿದ್ದರೂ ಡ್ಯಾನ್ಸ್ ಮಾಡಲು ಆರಂಭಿಸಿದೆ. ಒಂದು ರೀತಿ ಹುಚ್ಚನಾಗಿಬಿಟ್ಟಿದ್ದೆ, ನೃತ್ಯ ಕಲಿಯುವಾಗಲು ಮಧ್ಯದಲ್ಲಿ ಒಂದೊಂದು ಬ್ರೇಕ್ ಡ್ಯಾನ್ಸ್ ಸ್ಟೆಪ್ಸ್ ಸೇರಿಸಿಬಿಡುತ್ತಿದ್ದ, ನನ್ನ ಗುರುಗಳು ನನ್ನನ್ನು ಬೈಯ್ಯುತ್ತಿದ್ದರೂ ಆದರೂ ಆ ಅಭ್ಯಾಸ ನನ್ನಿಂದ ಹೋಗುತ್ತಿರಲಿಲ್ಲ ಎಂದ ಪ್ರಭುದೇವ, ಮೈಕಲ್ ಜಾಕ್ಸನ್ ನನ್ನ ಮೇಲೆ ಬೀರಿದ ಪ್ರಭಾವ ಬಹಳ ದೊಡ್ಡದು ಎಂದು ಪ್ರಭುದೇವ ಸ್ಮರಿಸಿದರು.

    ಶೋನಲ್ಲಿ ಹಲವು ಬಾರಿ ಅವರು ಮೈಕಲ್ ಜಾಕ್ಸನ್ ಅವರನ್ನು ನೆನಪು ಮಾಡಿಕೊಂಡರು ಪ್ರಭುದೇವ. ಮೈಕಲ್ ಜಾಕ್ಸನ್ (Michael Jackson) ಒಮ್ಮೆ ಮುಂಬೈಗೆ ಬಂದಾಗ ನಿರ್ಮಾಪಕರೊಬ್ಬರ ಸಹಾಯದಿಂದ ತಾವು ಅವರನ್ನು ಭೇಟಿಯಾಗಿದ್ದಾಗಿಯೂ, ಅಂದು ಅವರು ನನಗೆ ಏನೋ ಹೇಳಿದರು ಆದರೆ ಅದು ನನಗೆ ನೆನಪಿಲ್ಲ ಏಕೆಂದರೆ ಅವರನ್ನು ನೋಡಿ ನಾನು ಶಾಕ್‌ನಲ್ಲಿದ್ದೆ ಅವರನ್ನೇ ನೋಡುತ್ತಿದ್ದೆ ಎಂದಿದ್ದಾರೆ. ಶೋನ ಕೊನೆಯಲ್ಲಿ ನಿಮ್ಮ ಈ ಸಾಧನೆಗೆ ಮುಖ್ಯ ಕಾರಣಕರ್ತರು ಯಾರೆಂದಾಗ ತಮಗೆ ನೃತ್ಯ ಹೇಳಿಕೊಟ್ಟ ಧರ್ಮರಾಜ್ ಮಾಸ್ಟರ್, ಲಕ್ಷ್ಮಿನಾರಾಯಣ ಮಾಸ್ಟರ್ ಎಂದ ಪ್ರಭುದೇವ, ಮೈಕಲ್ ಜಾಕ್ಸನ್ ಸಹ ತಮಗೆ ಗುರುವೇ ಎಂದು  ಪ್ರಭುದೇವ ಮಾತನಾಡಿದ್ದಾರೆ.

  • ತೆರೆಗೆ ಬರಲಿದೆ ಡ್ಯಾನ್ಸ್ ಕಿಂಗ್ ಮೈಕಲ್ ಜಾಕ್ಸನ್ ಜೀವನ ಚರಿತ್ರೆ

    ತೆರೆಗೆ ಬರಲಿದೆ ಡ್ಯಾನ್ಸ್ ಕಿಂಗ್ ಮೈಕಲ್ ಜಾಕ್ಸನ್ ಜೀವನ ಚರಿತ್ರೆ

    ಡ್ಯಾನ್ಸ್ ಜಗತ್ತಿನ ಮಹಾಗುರು ಪಾಪ್ ಕಿಂಗ್ ಮೈಕಲ್ ಜಾಕ್ಸನ್ (Michael Jackson) ಜೀವನದ ಕಥೆಯನ್ನ ತೆರೆಗೆ ತರಲು ತಯಾರಿ ನಡೆಯುತ್ತಿದೆ. ತಮ್ಮ ಅದ್ಭುತ ಡ್ಯಾನ್ಸ್‌ನಿಂದ ಪ್ರೇಕ್ಷಕರಿಂದ ರಂಜಿಸಿದ್ದ ಡ್ಯಾನ್ಸ್ ಕಿಂಗ್ ಕಥೆ ಈಗ ಬಯೋಪಿಕ್ (Biopic) ಆಗುತ್ತಿದೆ.

    ಡ್ಯಾನ್ಸ್ ರಂಗದಲ್ಲಿ ಏನಾದರೂ ಸಾಧಿಸಬೇಕು ಎಂದು ಛಲ ಇಟ್ಟುಕೊಂಡವರಿಗೆ ಮೈಕಲ್ ಜಾಕ್ಸನ್ ಸಾಧನೆ ತಾಜಾ ಉದಾಹರಣೆ. ಮೈಕಲ್ ಜಾಕ್ಸನ್ ಎದುರಿಸಿದ ಸವಾಲುಗಳು, ಬೆಳೆದು ಬಂದ ದಾರಿ ಹೇಗಿತ್ತು ಎಂಬುದನ್ನ ತಿಳಿಸಿಕೊಡಲು  ಸಿನಿಮಾ ರೂಪದಲ್ಲಿ ತಯಾರಿ ನಡೆಯುತ್ತಿದೆ. ಇದನ್ನೂ ಓದಿ: ಸಾನ್ಯಾ ಅಯ್ಯರ್ ವಿವಾದ : ಕಂಬಳ ಸಮಿತಿಯಿಂದ ದೇವರ ಬಳಿ ದೂರು

    ಡ್ಯಾನ್ಸ್ ಲೋಕದ ದಂತಕತೆ ಮೈಕಲ್ ಜಾಕ್ಸನ್ ಅವರ ಬಯೋಪಿಕ್ ರೆಡಿಯಾಗುತ್ತಿದೆ. ಮೈಕಲ್ ಅವರ ಪಾತ್ರಕ್ಕೆ ಅವರ ಸಹೋದರ ಸಂಬಂಧಿ ಜಾಫರ್ ಜಾಕ್ಸನ್ (Jaafar Jackson) ನಟಿಸುತ್ತಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಅವರೇ ಅನೌನ್ಸ್ ಮಾಡಿದ್ದಾರೆ. ಆಂಟೊಯಿನ್ ಪುಕ್ವಾ ಈ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ. `ಕಿಂಗ್ ಆಫ್ ಪಾಪ್’ (King Of Pop) ಟೈಟಲ್‌ನಲ್ಲಿ ಸಿನಿಮಾ ಮೂಡಿ ಬರಲಿದೆ.

     

    View this post on Instagram

     

    A post shared by Jaafar Jackson (@jaafarjackson)

    ಇನ್ನೂ 26 ವರ್ಷದ ಜಾಫರ್ ಜಾಕ್ಸನ್ ಅವರು ಮೈಕಲ್ ಜಾಕ್ಸನ್ ಪಾತ್ರಕ್ಕೆ ಜೀವತುಂಬಲಿದ್ದಾರೆ. ನನ್ನ ಅಂಕಲ್ ಅವರ ಜೀವನ ಕಥೆಯನ್ನು ತೆರೆಗೆ ತರಲು ಉತ್ಸುಕನಾಗಿದ್ದೇನೆ. ಅಷ್ಟೇ ಗೌರವವಿದೆ. ಶೀಘ್ರದಲ್ಲಿಯೇ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಜಾಫರ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೈಕಲ್ ಜಾಕ್ಸನ್ ಮಾಜಿ ಪತ್ನಿ ಗಾಯಕಿ ಲೀಸಾ ನಿಧನ

    ಮೈಕಲ್ ಜಾಕ್ಸನ್ ಮಾಜಿ ಪತ್ನಿ ಗಾಯಕಿ ಲೀಸಾ ನಿಧನ

    ಸಂಗೀತ ಲೋಕದ ಖ್ಯಾತ ಗಾಯಕಿ ಎಲ್ವಿಸ್ ಪ್ರೆಸ್ಲಿ ಪುತ್ರಿ ಲೀಸಾ (Lisa Marie Presley) ಜನವರಿ 12ರಂದು ನಿಧನರಾಗಿದ್ದಾರೆ. ಮೈಕಲ್‌ ಜಾಕ್ಸನ್‌ ಮಾಜಿ ಪತ್ನಿ ಗಾಯಕಿ ಲೀಸಾ ಮೇರಿ ಪ್ರೆಸ್ಲಿ ಹೃದಯಾಘಾತದಿಂದ (Death) ಮೃತಪಟ್ಟಿದ್ದಾರೆ. 54ನೇ ವಯಸ್ಸಿಗೆ ಲೀಸಾ ಇಹಲೋಕ ತ್ಯಜಿಸಿದ್ದಾರೆ.

    ಮೈಕಲ್‌ ಜಾಕ್ಸನ್‌ ಮಾಜಿ ಪತ್ನಿ ಲೀಸಾ ಅವರು ಲಾಸ್ ಏಂಜಲೀಸ್‌ನ ಮನೆಯಲ್ಲಿದ್ದರು. ಈ ವೇಳೆ ಅವರಿಗೆ ಹೃದಯಾಘಾತ (Heart Attack) ಆಗಿದೆ. ತಕ್ಷಣಕ್ಕೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಯಾವುದೇ ಪ್ರಯೋಜನ ಆಗಿಲ್ಲ. ಲೀಸಾ ಅವರ ಮರಣ, ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.

    1968ರಲ್ಲಿ ಲೀಸಾ ಅವರು ಜನಿಸಿದರು. ಅವರು ಜನಿಸಿದ ಕೆಲವೇ ವರ್ಷಗಳಲ್ಲಿ ತಂದೆ ಎಲ್ವಿಸ್ ನಿಧನರಾದರು. 2023ರಲ್ಲಿ ಲೀಸಾ ಸಂಗೀತ ಲೋಕಕ್ಕೆ ಕಾಲಿಟ್ಟರು. ಲೀಸಾ ಅವರು ಹಾಡಿರುವ ಸಾಕಷ್ಟು ಆಲ್ಬಂ ಸೂಪರ್ ಹಿಟ್ ಆಗಿದೆ. ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿಗಳ ಸಮಾಗಮ: ವೈಷ್ಣವಿ ಜೊತೆ ದಿವ್ಯಾ- ಅರವಿಂದ್ ಕೆ.ಪಿ ಜೋಡಿ

    ಇನ್ನೂ ಲೀಸಾ ನಾಲ್ಕು ಬಾರಿ ಮದುವೆ ಆಗಿದ್ದರು. 1988ರಲ್ಲಿ ಡ್ಯಾನಿಯನ್ನು ಮದುವೆ ಆದರು. 1994ರಲ್ಲಿ ಇವರ ವಿಚ್ಛೇದನ ಆಯಿತು. ಅದಾದ ಕೇವಲ 20 ದಿನಕ್ಕೆ ಮೈಕಲ್ ಜಾಕ್ಸನ್ ಅವರನ್ನು ಲೀಸಾ ಮದುವೆ ಆದರು ಇವರು ಎರಡು ವರ್ಷ ಸಂಸಾರ ನಡೆಸಿದರು. ನಿಕೋಲಸ್ ಕೇಜ್ (2002-2004), ಮೈಕಲ್ ಲಾಕ್‌ವುಡ್ (2006-2021) ಜೊತೆ ಲೀಸಾ ಸಂಸಾರ ನಡೆಸಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಡ್ರಗ್ಸ್ ಖರೀದಿಗೆ ಫೇಕ್ ಐಡಿ ಬಳಸುತ್ತಿದ್ದ ಮೈಕಲ್ ಜಾಕ್ಸನ್

    ಡ್ರಗ್ಸ್ ಖರೀದಿಗೆ ಫೇಕ್ ಐಡಿ ಬಳಸುತ್ತಿದ್ದ ಮೈಕಲ್ ಜಾಕ್ಸನ್

    ಮೆರಿಕನ್ ಸಿಂಗರ್ ಮತ್ತು ಡ್ಯಾನ್ಸರ್ ಮೈಕಲ್ ಜಾಕ್ಸನ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಮೈಕಲ್ ಜಾಕ್ಸನ್ ಅವರು ಡ್ರಗ್ಸ್ ವ್ಯಸನಿಯಾಗಿದ್ದರು. ಇದೀಗ ಈ ಕುರಿತು ಅಚ್ಚರಿಯ ವಿಚಾರವೊಂದು ಹೊರ ಬಿದ್ದಿದೆ. ಡ್ರಗ್ಸ್ ಖರೀದಿಸಲು 19 ಫೇಕ್ ಐಡಿಗಳನ್ನ ಮೈಕಲ್ ಜಾಕ್ಸನ್ ಬಳಸುತ್ತಿದ್ದರಂತೆ. ಟಿಎಂಝಡ್‌ ಟ್ಯಾಬ್ಲಾಯ್ಡ್‌ ವೆಬ್‌ಸೈಟ್‌ ಈ ಕುರಿತು ಮಾಹಿತಿ ಬಹಿರಂಗಪಡಿಸಿದೆ.

    ಪಾಪ್ ಸಿಂಗರ್ ಮತ್ತು ಡ್ಯಾನ್ಸರ್ ಆಗಿ ಗುರುತಿಸಿಕೊಂಡಿದ್ದ ಮೈಕಲ್ ಜಾಕ್ಸನ್ 2009ರಲ್ಲಿ ಹೃದಯ ಸ್ತಂಭನದಿಂದ ನಿಧನರಾಗಿದ್ದರು. ಮೈಕಲ್ ಜಾಕ್ಸನ್ ಕುರಿತು ಇದೀಗ ಕುತೂಹಲಕಾರಿ ವಿಚಾರವೊಂದು ಹೊರಬಿದ್ದಿದೆ. ಮೈಕಲ್ ಜಾಕ್ಸನ್ ನಿಧನರಾಗಿದ್ದರು ಕೂಡ ಅವರ ಮೇಲಿರುವ ಕ್ರೇಜ್ ಕಡಿಮೆಯಾಗಿಲ್ಲ. ಇದನ್ನೂ ಓದಿ:‘ಜೊತೆ ಜೊತೆಯಲಿ’ ಸೀರಿಯಲ್ ಗೆ ನಟ ಹರೀಶ್ ರಾಜ್ ಅಧಿಕೃತ ಎಂಟ್ರಿ: ಪ್ರೊಮೋ ರಿಲೀಸ್

    ಮೈಕಲ್ ಜಾಕ್ಸನ್ ಅವರು ಡ್ರಗ್ಸ್‌ಗೆ ಭಾರೀ ಅಡಿಕ್ಟ್ ಆಗಿದ್ದರಂತೆ. ಇನ್ನು ಡ್ರಗ್ಸ್ ಖರೀದಿಸಲು 19 ಫೇಕ್ ಐಡಿಗಳನ್ನ ಬಳಸುತ್ತಿದ್ದರಂತೆ. ಈ ಕುರಿತು ಹೊಸ ಸಾಕ್ಷ್ಯ ಚಿತ್ರದಲ್ಲಿ ರಿವೀಲ್ ಮಾಡಿದ್ದಾರೆ. ಸದ್ಯ ನೆಚ್ಚಿನ ನಟನ ಬಗ್ಗೆ ಈ ಸುದ್ದಿ ಕೇಳಿ, ಫ್ಯಾನ್ಸ್‌ ಶಾಕ್‌ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೀದಿ ಹುಡುಗನ ಡ್ಯಾನ್ಸ್ ಗೆ ವಿಸ್ಮಯಗೊಂಡ ನೆಟ್ಟಿಗರು – ವೀಡಿಯೋ ವೈರಲ್

    ಬೀದಿ ಹುಡುಗನ ಡ್ಯಾನ್ಸ್ ಗೆ ವಿಸ್ಮಯಗೊಂಡ ನೆಟ್ಟಿಗರು – ವೀಡಿಯೋ ವೈರಲ್

    ನವದೆಹಲಿ: ಬೀದಿಯಲ್ಲಿ ಹುಡುಗನೊಬ್ಬ ನೃತ್ಯ ಮಾಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ವೀಕ್ಷಕರ ಗಮನ ಸೆಳೆಯುತ್ತಿದೆ.

    ಮೈಕೆಲ್ ಜಾಕ್ಸನ್ ಅವರ ಜನಪ್ರಿಯ ಹಾಡಿಗೆ ಬೀದಿಯಲ್ಲಿ ಹುಡುಗನೊಬ್ಬ ನೃತ್ಯ ಮಾಡುತ್ತಿರುವ ವೀಡಿಯೋವನ್ನು ಕಾವೇರಿ ರನ್ನವವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋ ವೇಗವಾಗಿ ವೈರಲ್ ಆಗುತ್ತಿದ್ದು, ನೆಟ್ಟಿಗರನ್ನು ಸಾಕಷ್ಟು ಗಮನ ಸೆಳೆದಿದೆ. ಈ ವೀಡಿಯೋ ನೊಡಿದವರಂತು ವಿಸ್ಮಯಗೊಳ್ಳುತ್ತಾರೆ. ಇದನ್ನೂ ಓದಿ: ಸಿಪಿ ಯೋಗೇಶ್ವರ್ ಪುತ್ರಿಗೆ ಕಾನೂನು ಕಂಟಕ

    ಮೈಕೆಲ್ ಜಾಕ್ಸನ್ ಅವರ ಡೇಂಜರಸ್ ಹಾಡಿಗೆ ಈ ಯುವಕ ಹೆಜ್ಜೆಯಾಕಿದ್ದು, ಹಾಡು ಪ್ಲೇ ಆಗುತ್ತಿದ್ದಂತೆ ಮೈಕೆಲ್ ಡ್ಯಾನ್ಸ್ ಮಾಡಿದ ರೀತಿಗೆ ಅನುಸರಿಸುತ್ತಿರುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದು. ಈ ವೀಡಿಯೋವನ್ನು ಟ್ವೀಟ್ ಮಾಡಿದ ಕಾವೇರಿ, ಇವನ ಮೈಯಲ್ಲಿ ಮೈಕಲ್ ಅವರ ಭೂತವು ಸೇರಿಕೊಂಡಿದೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ಗಾಂಧಿ ಜಯಂತಿ ವಿಶೇಷ – ವಿಜಯಪುರದ ಗ್ರಾಮ ಸಭೆ ವೀಕ್ಷಣೆ ಮಾಡಲಿದ್ದಾರೆ ಮೋದಿ

    ಪಾಪ್ ಕಿಂಗ್ ಮೈಕೆಲ್ ಜಾಕ್ಸನ್ ಅವರ ಡೇಂಜರಸ್ ಹಾಡು ಹೆಚ್ಚು ಮಾರಾಟವಾದ ಆಲ್ಬಂಗಳಲ್ಲಿ ಒಂದಾಗಿದೆ. ಇದು 1991 ರಲ್ಲಿ ಬಿಡುಗಡೆಯಾಗಿತ್ತು.

  • ಮೈಕಲ್ ಜಾಕ್ಸನ್ ಮೂನ್‍ವಾಕ್ ಸ್ಟೆಪ್ ಹಾಕಿ ರಂಜಿಸಿದ ಕ್ರಿಸ್ ಗೇಲ್

    ಮೈಕಲ್ ಜಾಕ್ಸನ್ ಮೂನ್‍ವಾಕ್ ಸ್ಟೆಪ್ ಹಾಕಿ ರಂಜಿಸಿದ ಕ್ರಿಸ್ ಗೇಲ್

    ಚೆನ್ನೈ: ಕ್ರಿಕೆಟ್ ಪ್ರಿಯರು ಎದುರುನೋಡುತ್ತಿರುವ ಬಹು ನಿರೀಕ್ಷಿತ ಐಪಿಎಲ್ 14ನೇ ಆವೃತ್ತಿಗೆ ಇನ್ನು ಕೇವಲ 2 ದಿನ ಮಾತ್ರ ಬಾಕಿ ಉಳಿದಿದೆ. ಈಗಾಗಲೇ ಎಲ್ಲಾ 8 ತಂಡದ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ಹಾಗೆ ತಂಡಕ್ಕಾಗಿ ಆಡಲು ಬಂದಿರುವ ವಿದೇಶಿ ಆಟಗಾರರು ಕ್ವಾರಂಟೈನ್ ಮುಗಿಸಿ ಮೈದಾನಕ್ಕೆ ಇಳಿಯಲು ಸಿದ್ಧರಾಗಿದ್ದಾರೆ. ಈ ನಡುವೆ ಪಂಜಾಬ್ ತಂಡದ ದೈತ್ಯ ಬ್ಯಾಟ್ಸ್ ಮ್ಯಾನ್ ಯುನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ತಮ್ಮ ಕ್ವಾರಂಟೈನ್ ಅವಧಿ ಮುಗಿದ ಸಂಭ್ರಮಕ್ಕೆ ಮೈಕಲ್ ಜಾಕ್ಸನ್ ಅವರಂತೆ ಡ್ಯಾನ್ಸ್ ಮಾಡಿ ರಂಜಿಸಿದ್ದಾರೆ.

    ಪಂಜಾಬ್ ತಂಡದೊಂದಿಗೆ ಸೇರಿಕೊಂಡು ಕ್ವಾರಂಟೈನ್ ಅವಧಿಯನ್ನು ಮುಗಿಸಿರುವ ಗೇಲ್ ತಮ್ಮದೇ ಸ್ಟೈಲ್‍ನಲ್ಲಿ ಈ ಸಂಭ್ರವನ್ನು ಅಚರಿಸಿದ್ದಾರೆ ಎಂದು ಪಂಜಾಬ್ ಫ್ರಾಂಚೈಸ್ ಟ್ವಿಟ್ಟರ್‍ ನಲ್ಲಿ ಬರೆದುಕೊಂಡಿದೆ.

    ಕ್ವಾರಂಟೈನ್ ಅವಧಿ ಮುಗಿದಿದೆ. ಇದೀಗ ಹೊರಬರುತ್ತಿದ್ದಾರೆ ನಿಮ್ಮೆಲ್ಲರ ಅಚ್ಚುಮೆಚ್ಚಿನ ಕ್ರಿಸ್ ಗೇಲ್ ಎಂದು ಡ್ಯಾನ್ಸ್ ಮಾಡುತ್ತಿರುವ ಗೇಲ್ ಅವರ ವೀಡಿಯೋ ಒಂದನ್ನು ಫ್ರಾಂಚೈಸ್ ಟ್ವೀಟ್ ಮಾಡಿದೆ ಈ ವೀಡಿಯೋದಲ್ಲಿ ಗೇಲ್ ಡ್ಯಾನ್ಸ್ ಮಾಸ್ಟರ್ ಮೈಕಲ್ ಜಾಕ್ಸನ್ ಅವರಂತೆ ಮೂನ್‍ವಾಕ್ ಮಾಡುತ್ತಿದ್ದು ಇದನ್ನು ಗಮನಿಸಿರುವ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

    ದೇಶದಾದ್ಯಂತ ಹಲವು ಅಭಿಮಾನಿಗಳನ್ನು ಹೊಂದಿರುವ ಗೇಲ್ ತಮ್ಮ ಸ್ಪೋಟಕ ಆಟದ ಮೂಲಕ ಬಿಗ್ ಸಿಕ್ಸರ್ ಹೊಡೆಯುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಕಳೆದ ಬಾರಿಯ ಐಪಿಎಲ್‍ನಲ್ಲಿ ಪಂಜಾಬ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿಯದೆ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು.

    14 ಆವೃತ್ತಿಗಳಲ್ಲಿ ಒಮ್ಮೆಯೂ ಪ್ರಶಸ್ತಿಯನ್ನು ಎತ್ತಿಹಿಡಿಯದ ಪಂಜಾಬ್ ತಂಡ ಈ ಬಾರಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದು, ಇದರಲ್ಲಿ ಗೇಲ್ ಅವರ ಆಟ ಕೂಡ ಪ್ರಮುಖವಾಗಿದೆ ಈ ಬಾರಿ ಆಸ್ಟ್ರೇಲಿಯಾದ ಬೌಲರ್ ರಿಲೆ ಮೆರೆಡಿತ್, ರಿಚಡ್ರ್ಸಸನ್ ಮತ್ತು ಟಿ20 ಕ್ರಿಕೆಟ್‍ನ ನಂಬರ್ 1 ಬ್ಯಾಟ್ಸ್ ಮ್ಯಾನ್ ಡೇವಿಡ್ ಮಲಾನ್ ಕೂಡ ತಂಡದಲ್ಲಿದ್ದಾರೆ. ಹಾಗಾಗಿ ಈ ಬಾರಿ ಪಂಜಾಬ್ ತಂಡ ಬಲಿಷ್ಠವಾಗಿದೆ.

    ಪಂಜಾಬ್ ತಂಡ ತನ್ನ ಮೊದಲ ಪಂದ್ಯವನ್ನು ಏಪ್ರಿಲ್ 12 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧವಾಗಿ ಆಡಲಿದೆ. ಈ ಬಾರಿ ಪಂಜಾಬ್ ತಂಡದ ಯಾವ ರೀತಿ ಉಳಿದ ತಂಡಗಳಿಗೆ ಟಕ್ಕರು ನೀಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.