ಸಿಡ್ನಿ: ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಮತ್ತು ನನ್ನ ನಡುವಿನ ಸ್ನೇಹ ಕೆಡಲು ಐಪಿಎಲ್ ಪ್ರಮುಖ ಕಾರಣ ಎಂದು ಆಸ್ಟ್ರೇಲಿಯಾದ ಮಾಜಿ ಆಲ್‍ರೌಂಡರ್ ಆಟಗಾರ ಆಂಡ್ರ್ಯೂ ಸೈಮಂಡ್ಸ್ ಆರೋಪಿಸಿದ್ದಾರೆ.
ಬ್ರೆಟ್ ಲೀ ಪಾಡ್‍ಕ್ಯಾಸ್ಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2008ರಲ್ಲಿ ಐಪಿಎಲ್ ಪ್ರಾರಂಭಗೊಂಡಾಗ ಡೆಕ್ಕನ್ ಚಾರ್ಜರ್ಸ್ ತಂಡ ನನ್ನನ್ನು 5.4 ಕೋಟಿ ರೂ. ನೀಡಿ ಖರೀದಿಸಿತು. ಆದರೆ ಮೈಕಲ್ ಕಾರ್ಕ್ ಅನ್‍ಸೋಲ್ಡ್ ಆಟಗಾರನಾಗಿದ್ದರು. ಇದರಿಂದ ರಾಷ್ಟ್ರೀಯ ತಂಡಕ್ಕೆ ಆಡಲು ಮುಂದಾದಾಗ ಮೈಕಲ್ ಕಾರ್ಕ್‍ಗೆ ನನ್ನ ಮೇಲೆ ಅಸೂಯೆ ಹುಟ್ಟಿಕೊಂಡು ನಮ್ಮಿಬ್ಬರ ಸ್ನೇಹ ಮುರಿದು ಬಿತ್ತು ಇದಕ್ಕೆಲ್ಲ ಕಾರಣ ಐಪಿಎಲ್‍ನ ಹಣ ಎಂದು ದೂರಿದ್ದಾರೆ. ಇದನ್ನೂ ಓದಿ: ಹೈದರಾಬಾದ್ ಹಾರಾಟ – ಹೋರಾಟವಿಲ್ಲದೆ ಸೋತ ಆರ್‌ಸಿಬಿ
ರಾಷ್ಟ್ರೀಯ ತಂಡದಲ್ಲಿದ್ದಾಗ ಕಾರ್ಕ್ ಮತ್ತು ನಾನು ಉತ್ತಮ ಸ್ನೇಹಿತರಾಗಿದ್ದೇವು. 2008ರ ಬಳಿಕ ನಮ್ಮ ಸ್ನೇಹದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಆ ಬಳಿಕ ರಾಷ್ಟ್ರೀಯ ತಂಡಕ್ಕಾಗಿ ಒಟ್ಟಿಗೆ ಆಡುವಾಗ ನಮ್ಮಿಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ ಎಂದಿದ್ದಾರೆ. ಇದನ್ನೂ ಓದಿ: ನೋ ಬಾಲ್ ವಿವಾದದ ನಡುವೆ ಕುಲ್ಚಾ ಜೋಡಿಯ ಕೀಟ್ಲೆ
2015ರಲ್ಲಿ ಸೈಮಂಡ್ಸ್, ಕಾರ್ಕ್ ನಾಯಕತ್ವದ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದರು. ಕಾರ್ಕ್, ಸೈಮಂಡ್ಸ್ ಕುಡಿದು ಮೈದಾನಕ್ಕಿಳಿಯುತ್ತಾರೆ ಎಂಬ ಆಪಾದನೆ ಹೊರಿಸಿದ್ದರು. ಬಳಿಕ ಸೈಮಂಡ್ಸ್ 2012ರಲ್ಲಿ ಮತ್ತು ಕಾರ್ಕ್ 2015ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದರು.
ಸಿಡ್ನಿ: ನಮ್ಮ ಆಟಗಾರರು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಸ್ಲೆಡ್ಜಿಂಗ್ ಮಾಡಲು ಹೆದರುತ್ತಾರೆ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ಮೈಕೆಲ್ ಕ್ಲಾರ್ಕ್ ಹೇಳಿದ್ದಾರೆ.
ಆಸ್ಟ್ರೇಲಿಯಾದ ಕ್ರಿಕೆಟಿಗರು ಮೈದಾನದಲ್ಲಿ ಅತ್ಯುತ್ತಮ ಸ್ಲೆಡ್ಜರ್‍ಗಳು. ಟೀಂ ಇಂಡಿಯಾ ಮಾಜಿ ಆಟಗಾರರಾದ ರಾಹುಲ್ ದ್ರಾವಿಡ್ ಅಥವಾ ಸಚಿನ್ ತೆಂಡೂಲ್ಕರ್ ಅವರಂತಹ ಶಾಂತ ಸ್ವಭಾವದ ಅನೇಕ ಕ್ರಿಕೆಟಿಗರು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಆಟಗಾರರ ಸ್ಲೆಡ್ಜಿಂಗ್‍ಗೆ ತಮ್ಮ ಶಾಂತತೆಯನ್ನು ಕಳೆದುಕೊಂಡ ಪ್ರಸಂಗಗಳಿವೆ. ಆದರೆ ಈಗ ಆಸ್ಟ್ರೇಲಿಯಾ ಆಟಗಾರರು ಟೀಂ ಇಂಡಿಯಾ ಆಟಗಾರರ ವಿರುದ್ಧ ಸ್ಲೆಡ್ಜಿಂಗ್ ಮಾಡಲು ಹಿಂದೇಟು ಆಗುತ್ತಿದ್ದಾರೆ ಎಂದು ಮೈಕಲ್ ಕ್ಲಾರ್ಕ್ ಅಭಿಪ್ರಾಯ ಪಟ್ಟಿದ್ದಾರೆ.
ಸಂದರ್ಶವೊಂದರಲ್ಲಿ ಮಾತನಾಡಿದ ಅವರು, ಕ್ರಿಕೆಟ್ ಆರ್ಥಿಕ ವಿಷಯಗಳಲ್ಲಿ ಭಾರತ (ಬಿಸಿಸಿಐ) ಎಷ್ಟು ಪ್ರಬಲವಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಅದು ಅಂತರರಾಷ್ಟ್ರೀಯ ಕ್ರಿಕೆಟ್ ಆಗಿರಲಿ ಅಥವಾ ಐಪಿಎಲ್ ಆಗಿರಲಿ. ಎಲ್ಲ ಕ್ಷೇತ್ರದಲ್ಲೂ ಭಾರತ ಪ್ರಬಲವಾಗಿದೆ. ಹೀಗಾಗಿ ಐಪಿಎಲ್ ಒಪ್ಪಂದವನ್ನು ಉಳಿಸಿಕೊಳ್ಳಲು ಆಸ್ಟ್ರೇಲಿಯಾದ ಆಟಗಾರರು ಭಾರತೀಯ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಸ್ಲೆಡ್ಜಿಂಗ್ ಮಾಡಲು ಭಯಪಡುತ್ತಿದ್ದಾರೆ ಎಂದು ದೂರಿದ್ದಾರೆ.
2018-19ರಲ್ಲಿ ನಡೆದ ಸರಣಿಯನ್ನು ಉಲ್ಲೇಖಿಸಿದ ಕ್ಲಾರ್ಕ್, ನಮ್ಮ ಆಟಗಾರರು ಕೊಹ್ಲಿ ಮತ್ತು ಉಳಿದ ಭಾರತೀಯ ಆಟಗಾರರಿಗೆ ಸ್ವಲ್ಪ ಭಯಭೀತರಾಗಿದ್ದರು. ಏಕೆಂದರೆ ಅವರು 2019ರ ಏಪ್ರಿಲ್‍ನಲ್ಲಿ ಅವರೊಂದಿಗೆ ಐಪಿಎಲ್ ಆಡಬೇಕಾಗಿತ್ತು. ಆದ್ದರಿಂದ ನಮ್ಮ ಕ್ರಿಕೆಟಿಗರು ಸ್ಲೆಡ್ಜಿಂಗ್‍ಗೆ ಹೆದರುತ್ತಿದ್ದರು. ಭಾರತದ ಆಟಗಾರರ ವಿರುದ್ಧ ಹೆಚ್ಚು ಸ್ಲೆಡ್ಜಿಂಗ್ ಮಾಡಿದರೆ ಐಪಿಎಲ್‍ನಲ್ಲಿ ಕೋಟ್ಯಂತರ ರೂಪಾಯಿಗಳ ಒಪ್ಪಂದವನ್ನು ಕಳೆದುಕೊಳ್ಳಬಹುದು ಅಂತ ಆಸ್ಟ್ರೇಲಿಯಾದ ಆಟಗಾರರು ಆತಂಕದಲ್ಲಿದ್ದರು ಎಂದು ಕ್ಲಾರ್ಕ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕ್ರಮವಾಗಿ ಐಪಿಎಲ್‍ನಲ್ಲಿ ಬೆಂಗಳೂರು ಮತ್ತು ಮುಂಬೈ ತಂಡಗಳ ನಾಯಕರಾಗಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ತಂಡವನ್ನು ಆಯ್ಕೆ ಮಾಡುವಲ್ಲಿ ಅವರಿಗೆ ಪ್ರಮುಖ ಪಾತ್ರ ಇರುತ್ತದೆ. ಅದಕ್ಕಾಗಿಯೇ ಆಸೀಸ್ ಆಟಗಾರರು ಕೊಹ್ಲಿಯನ್ನು ಸ್ಲೆಡ್ಜಿಂಗ್ ಮಾಡುವುದಿಲ್ಲ ಅಂತ ನಾನು ಭಾವಿಸುತ್ತೇನೆ ಎಂದು ಕ್ಲಾರ್ಕ್ ತಿಳಿಸಿದ್ದಾರೆ.
2018-19ರಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದ ಕೈಗೊಂಡಿತ್ತು. ಈ ವೇಳೆ ಭಾರತೀಯ ತಂಡವು 4 ಟೆಸ್ಟ್ ಸರಣಿಯಲ್ಲಿ ಆತಿಥೇಯರನ್ನು 2-1ರಿಂದ ಸೋಲಿಸಿತ್ತು. ಇದು ಆಸ್ಟ್ರೇಲಿಯಾದ ನೆಲದಲ್ಲಿ ಏಷ್ಯಾದ ದೇಶಗಳ ಮೊದಲ ಟೆಸ್ಟ್ ಸರಣಿಯ ಗೆಲುವು ಆಗಿದೆ.
2008ರಲ್ಲಿ ಪ್ರಾರಂಭವಾದ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರತಿವರ್ಷ ಮಾರ್ಚ್- ಮೇ ತಿಂಗಳ ಮಧ್ಯದಲ್ಲಿ ಟೂರ್ನಿ ನಡೆಯುತ್ತದೆ. ಎಂಟು ತಂಡಗಳು ಭಾರತದ ಎಂಟು ವಿವಿಧ ನಗರಗಳನ್ನು ಪ್ರತಿನಿಧಿಸುತ್ತವೆ.
ಭಾರತ ಮತ್ತು ಆಸ್ಟ್ರೇಲಿಯಾ ಈ ಹಿಂದೆ ಅನೇಕ ಆನ್-ಫೀಲ್ಡ್ ಸ್ಲೆಡ್ಜಿಂಗ್ ಜಗಳಗಳಿಗೆ ಸಾಕ್ಷಿಯಾಗಿವೆ. 2008ರಲ್ಲಿ ‘ಮಂಕಿ ಗೇಟ್’ ಘಟನೆಯನ್ನು ಮರೆಯುವಂತಿಲ್ಲ. ಸಿಡ್ನಿಯಲ್ಲಿ ನಡೆಸಿದ್ದ ಟೆಸ್ಟ್ ಪಂದ್ಯವೊಂದರಲ್ಲಿ ಭಾರತದ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಆಸ್ಟ್ರೇಲಿಯಾದ ಆಲ್‍ರೌಂಡರ್ ಆಂಡ್ರ್ಯೂ ಸೈಮಂಡ್ಸ್ ಅವರನ್ನು ಹಲವು ಬಾರಿ ಮಂಕಿ ಎಂದು ಕರೆದಿದ್ದರು ಎಂಬ ಆರೋಪ ಕೇಳಿಬಂದಿತ್ತು. ಇದಕ್ಕಾಗಿ ಹರ್ಭಜನ್ ಸಿಂಗ್ ವಿರುದ್ಧ ಐಸಿಸಿ ಮೂರು ಪಂದ್ಯಗಳ ನಿಷೇಧ ಹೇರಿತ್ತು.
ಬೆಂಗಳೂರು: ಎರಡನೇ ಟೆಸ್ಟ್ ಆಡಲು ನಗರಕ್ಕೆ ಬಂದ ಆಸ್ಟ್ರೇಲಿಯಾದ ಮೈಕಲ್ ಕ್ಲಾರ್ಕ್ ನಗರದಲ್ಲಿ ರಿಕ್ಷಾ ಓಡಿಸಿದ್ದಾರೆ.
ಈ ಸಂಬಂಧ ಇನ್‍ಸ್ಟಾಗ್ರಾಂನಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡಿರುವ ಕ್ಲಾರ್ಕ್ ನಾನು ಟಕ್ ಟಕ್ ಓಡಿಸುವ ಕಲೆಯನ್ನು ಕಲಿತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಪುಣೆಯಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯಲ್ಲಿ ಆಸ್ಟ್ರೇಲಿಯಾ 333 ರನ್‍ಗಳಿಂದ ಗೆದ್ದುಕೊಂಡಿತ್ತು. ಎರಡನೇ ಟೆಸ್ಟ್ ಪಂದ್ಯ ಮಾರ್ಚ್ 4ರಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ.