Tag: michael ajay

  • ಕ್ಯಾಪ್ಟನ್ ಸ್ಥಾನಕ್ಕೆ ಬೆಲೆ ಕೊಡದ ವಿನಯ್, ಮೈಕಲ್‌ಗೆ ಬೆಂಡೆತ್ತಿದ ಕಿಚ್ಚ

    ಕ್ಯಾಪ್ಟನ್ ಸ್ಥಾನಕ್ಕೆ ಬೆಲೆ ಕೊಡದ ವಿನಯ್, ಮೈಕಲ್‌ಗೆ ಬೆಂಡೆತ್ತಿದ ಕಿಚ್ಚ

    ಬಿಗ್ ಬಾಸ್ ಮನೆಯ (Bigg Boss) ಆಟ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇದೀಗ 90 ದಿನ ಕಳೆದು ಮುನ್ನುಗ್ಗತ್ತಿದೆ. ಇದರ ನಡುವೆ ಮೈಕಲ್ ಸಿಡುಕು ವರ್ತನೆಗೆ ಸುದೀಪ್ ಖಡಕ್ ಆಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಕ್ಯಾಪ್ಟನ್ ಸ್ಥಾನಕ್ಕೆ ಗೌರವ ನೀಡದ ಮೈಕಲ್‌ಗೆ (Michael) ಸುದೀಪ್ (Sudeep)  ಬೆಂಡೆತ್ತಿದ್ದಾರೆ.

    ಬಿಗ್ ಬಾಸ್ ಮನೆಗೆ ಕಾಲಿಟ್ಟಾಗ ಮೈಕಲ್‌ಗೆ ಅಷ್ಟಾಗಿ ಕನ್ನಡ ಬರುತ್ತಿಲ್ಲ. ಇಲ್ಲಿಗೆ ಬಂದ್ಮೇಲೆಯೇ ಅವರ ಕನ್ನಡ ಸಾಕಷ್ಟು ಇಂಪ್ರೂವ್ ಆಗಿತ್ತು. ಕನ್ನಡದ ಮಣ್ಣಿನ ಮಗ ಎಂದೇ ಮೈಕಲ್ ಬಿಂಬಿತರಾದರು. ಬಿಗ್ ಮನೆಗೆ ಬಂದ ಮೊದಲ 6 ವಾರದಲ್ಲಿ ಅವರ ಆಟ, ಮಾತು, ನಡೆ- ನುಡಿ ಎಲ್ಲವೂ ಪ್ರೇಕ್ಷಕರ ಗಮನ ಸೆಳೆದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅವರ ಮಾತಿನ ವೈಖರಿಯೇ ಬದಲಾಗಿದೆ. ಅದರಲ್ಲೂ ಮನೆಯ ಕ್ಯಾಪ್ಟನ್‌ಗೆ ಮೈಕಲ್ ಉಲ್ಟಾ ಮಾತನಾಡುತ್ತಾರೆ.

    ವಾರಾಂತ್ಯದ ಮಾತುಕತೆಯಲ್ಲಿ ಸಂಗೀತಾ (Sangeetha Sringeri) ಅವರ ಕ್ಯಾಪ್ಟನ್ಸಿ ಯಾರಿಗೆ ಇಷ್ಟ ಆಯಿತು, ಯಾರಿಗೆ ಇಷ್ಟ ಆಗಿಲ್ಲ ಎಂದು ಸುದೀಪ್ ಕೇಳಿದರು. ಇಷ್ಟ ಆಗಿಲ್ಲ ಎನ್ನುವುದಕ್ಕೆ ಕಾರ್ತಿಕ್- ಪ್ರತಾಪ್ ಕೈ ಎತ್ತಿದರು. ಇಷ್ಟ ಆಗುತ್ತಿದೆ ಎನ್ನುವುದಕ್ಕೆ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಕೈ ಎತ್ತಿದರು. ವಿನಯ್, ನಮ್ರತಾ, ಮೈಕಲ್ ಮೊದಲಾದವರು ಸುಮ್ಮನೆ ಇದ್ದರು. ಈ ಬಗ್ಗೆ ಕೇಳಿದ್ದಕ್ಕೆ ಮೈಕಲ್ ಉಲ್ಟಾ ಮಾತನಾಡಿದರು. ಇದನ್ನೂ ಓದಿ:ಜಾಹ್ನವಿಯಲ್ಲಿ ಹುಡುಗರು ಮೊದಲು ನೋಡೋದೇನು? : ಬೋಲ್ಡ್ ಉತ್ತರ ಕೊಟ್ಟ ನಟಿ

    ಸಂಗೀತಾ ಕ್ಯಾಪ್ಟನ್ಸಿ ಏನೂ ಬದಲಾವಣೆ ತರುತ್ತಿಲ್ಲ. ಹೀಗಿರುವಾಗ ಹೇಳೋದು ಏನು ಎಂದು ಮೈಕಲ್ ಪ್ರಶ್ನೆ ಮಾಡಿದರು. ಇದು ಸುದೀಪ್‌ಗೆ ಕೋಪ ತರಿಸಿತ್ತು. ಒಂದು ರೇಟಿಂಗ್ ಅಥವಾ ವೋಟಿಂಗ್ ಬರುತ್ತದೆ. ಅದಕ್ಕೆ ಉತ್ತರಿಸಿದ್ರೆ ಮಾತಾಡೋಣ. ಜಡ ಹಿಡಿದ ದೇಹ ಭಾಷೆ ಬೇಡ. ಸುಮ್ನೆ ಒಂದು ಹಿಂಟ್ ಕೊಡ್ತೀನಿ. ಇದೆಲ್ಲ ನನ್ನತ್ರ ಬೇಡ. ನಾನು ಸರಿ ಇಲ್ಲ. ಪ್ರೀತಿಯಿಂದ ಮಾತನಾಡಿದ್ರೆ ಮಾತನಾಡುವುದಕ್ಕೆ ಬರುತ್ತದೆ. ನನ್ನ ವ್ಯಕ್ತಿತ್ವ ಟೆಸ್ಟ್ ಮಾಡಬೇಡಿ ಎಂದು ಮೈಕಲ್‌ಗೆ ಸಖತ್ ಆಗಿಯೇ ಕಿಚ್ಚ ಬೆಂಡೆತ್ತಿದ್ದಾರೆ.

    ಸುದೀಪ್ ಅವರಿಗೆ ಬಿಗ್ ಬಾಸ್ ಶೋ ಇಷ್ಟ. ಈ ಕಾರಣಕ್ಕೆ ಅವರು ಸಿನಿಮಾ ಕೆಲಸಗಳ ಮಧ್ಯೆ ಪ್ರತಿ ವಾರ ಬಿಡುವು ಮಾಡಿಕೊಂಡು ಅದರ ನಿರೂಪಣೆ ಮಾಡೋಕೆ ಬರುತ್ತಾರೆ. ಈ ಶೋ ನಂಬಿಕೊಂಡು ನಾನಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಬಿಗ್ ಬಾಸ್ ಬಿಟ್ಟು ನನಗೆ ಹೊರಗೊಂದು ಜೀವನ ಇದೆ. ಕನ್ನಡಕ ಹಾಕಿಕೊಂಡು ಮಾತಾಡೋದು ಮಾತ್ರ ಅಲ್ಲ. ಇದೆಲ್ಲ ಅಲ್ಲಿಯರವರತ್ರ ಇಟ್ಕೊಳ್ಳಿ. ಇದನ್ನು ನಾನು ಸಿಟ್ಟಿನಿಂದ ಹೇಳುತ್ತಿಲ್ಲ. ಪ್ರೀತಿ ಹಾಗೂ ಗೌರವದಿಂದ ಹೇಳ್ತಾ ಇದೀನಿ. ಬಿಗ್ ಬಾಸ್ ಮನಸ್ಸಿಗೆ ಹತ್ತಿರವಾದ ಶೋ. ಹಾಗಂತ ನನ್ನ ವ್ಯಕ್ತಿತ್ವ ಪರೀಕ್ಷೆ ಮಾಡಬಾರದು. ಕೂರಿಸಿಕೊಂಡು ಮಾತಾಡ್ತಾ ಇದೀನಿ. ಅಲ್ಲಿಂದ ಗೌರವ ಆರಂಭ ಆಗುತ್ತದೆ ಎಂದರು.

    ಬಳಿಕ ಕ್ಯಾಪ್ಟನ್ಸಿ ಸ್ಥಾನಕ್ಕೆ ಬೆಲೆ ಕೊಡದ ವಿನಯ್ (Vinay Gowda) ಸಮರ್ಥನೆಗೆ ಕಿಚ್ಚ ಸುದೀಪ್, ನಾನು ಸುಮ್ಮನೆ ಈ ವೇದಿಕೆ ಮೇಲೆ ನಿಂತಿಲ್ಲ ಅಂತ್ಹೇಳಿ ತಿರುಗೇಟು ಕೊಟ್ಟರು. ನಿಮ್ಮ ಅಭಿಪ್ರಾಯವನ್ನ ನನಗೆ ಹೇಗೆ ಹೇಳಿದ್ರೋ, ಅದೇ ರೀತಿ ತನಿಷಾಗೆ ವ್ಯಕ್ತಪಡಿಸಿದ್ರಾ? ಎಂದು ಕಿಚ್ಚ ಸುದೀಪ್ ಕೇಳಿದಾಗ, ಇಲ್ಲ. ಅದು ನನ್ನ ತಪ್ಪು ಎಂದು ವಿನಯ್ ಒಪ್ಪಿಕೊಂಡರು. ಅದಕ್ಕೆ, ಈಗೋ ಫಾಲ್ಸ್ ಆಟಿಟ್ಯೂಡ್ ಹೊರಗೆ ಬರೋದು ಆಗಲೇ ಅಲ್ವಾ? ನಿಮ್ಮನ್ನ ನೋಡಿ ಮೈಕಲ್ ಕೂಡ ಶುರು ಮಾಡಿಕೊಂಡರು. ಈ ಮನೆಯಲ್ಲಿ ಕ್ಯಾಪ್ಟನ್‌ಶಿಪ್‌ಗೆ ಏನಿದೆ ಬೆಲೆ? ಒದ್ದಾಡಿ ಒದ್ದಾಡಿ ಆ ಬೀಗ ತೆಗೆಸಿದ್ರಿ ಎಂದು ಹೇಳಿ ವಿನಯ್‌ಗೆ ಕಿಚ್ಚ ಸುದೀಪ್ ಕಿವಿ ಹಿಂಡಿದರು. ಈ ಮೂಲಕ ವಿನಯ್ ಮತ್ತು ಮೈಕಲ್ ಇಬ್ಬರಿಗೂ ಸುದೀಪ್ ಖಡಕ್ ಕ್ಲಾಸ್ ತೆಗೆದುಕೊಂಡರು.

  • ಕ್ಯಾಪ್ಟನ್‌ ಮಾತು ಕೇಳದ ಮೈಕಲ್‌- ವೀಕೆಂಡ್‌ನಲ್ಲಿದ್ಯಾ ಮಾರಿಹಬ್ಬ?

    ಕ್ಯಾಪ್ಟನ್‌ ಮಾತು ಕೇಳದ ಮೈಕಲ್‌- ವೀಕೆಂಡ್‌ನಲ್ಲಿದ್ಯಾ ಮಾರಿಹಬ್ಬ?

    ಬಿಗ್ ಬಾಸ್ ಮನೆಗೆ (Bigg Boss Kannada 10)  ಕಾಲಿಟ್ಟಾಗ ಮೈಕಲ್ ಅಜಯ್‌ಗೆ (Michael Ajay) ಸರಿಯಾಗಿ ಕನ್ನಡ ಬರುತ್ತಿರಲಿಲ್ಲ. ದೊಡ್ಮನೆಗೆ ಬಂದ ಮೇಲೆಯೇ ಮೈಕಲ್ ಕನ್ನಡ ಕಲಿತು ಕನ್ನಡಿಗರ ಮೆಚ್ಚುಗೆಗೆ ಪಾತ್ರರಾದರು. ಮೈಕಲ್ ನಡೆಗೆ ಕನ್ನಡದ ಮಣ್ಣಿನ ಮಗ ಎಂದೇ ಹೈಲೆಟ್‌ ಆದರು. ಆದರೆ ಈಗ ಮೈಕಲ್ ವರ್ತನೆ ಬದಲಾಗಿದೆ. ಎಲ್ಲದ್ದಕ್ಕೂ ಡೋಂಟ್ ಕೇರ್ ಅನ್ನುವ ಗುಣ ಅವರದ್ದಾಗಿದೆ. ಬಿಗ್ ಬಾಸ್ ರೂಲ್ಸ್ ವಿರುದ್ಧ ಮೈಕಲ್ ನಡೆದುಕೊಂಡಿದ್ದಾರೆ. ಪ್ರಶ್ನಿಸಿದ ಕ್ಯಾಪ್ಟನ್ ತನಿಷಾ (Tanisha Kuppanda) ಜೊತೆ ವಾಗ್ವಾದ ಮಾಡಿದ್ದಾರೆ. ಇದನ್ನೂ ಓದಿ:ನಿಮ್ಮ ಬದುಕಲ್ಲಿ ಹೊಸ ವ್ಯಕ್ತಿಯ ಆಗಮನ- ನಮ್ರತಾಗೆ ಗುರೂಜಿ ಭವಿಷ್ಯ

    ಬಿಗ್ ಬಾಸ್ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ಮೈಕಲ್- ವಿನಯ್‌ಗೆ ಶಿಕ್ಷೆ ನೀಡಲು ಮುಂದಾ ತನಿಷಾ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ. ಹೊರಗೆ ಕುಳಿತು ವಿನಯ್ ಗೌಡ- ಮೈಕಲ್ ನಿದ್ರಿಸುತ್ತಿದ್ದರು. ಈ ಕಾರಣಕ್ಕೆ ಬಿಗ್ ಬಾಸ್ ನಾಯಿ ಬೊಗಳುವ ಸೌಂಡ್ ಹಾಕಿದರು. ಈ ವಾರದ ಕ್ಯಾಪ್ಟನ್ ತನಿಷಾ ಅವರು ಶಿಕ್ಷೆ ನೀಡಲು ಬಂದರು. ನಿದ್ದೆ ಮಾಡಿದ್ದಕ್ಕೆ ಮೂರು ಬಾರಿ ಸ್ವಿಮಿಂಗ್ ಪೂಲ್‌ನಲ್ಲಿ ಮುಳುಗೆದ್ದು ಬನ್ನಿ ಎಂದರು. ಇದಕ್ಕೆ ಮೈಕಲ್ ಹಾಗೂ ವಿನಯ್ ಮಾಡಲ್ಲ ಹೋಗು ಎಂದರು. ಕ್ಯಾಪ್ಟನ್ ಆದಾಗ ನೇರವಾಗಿ ನಾಮಿನೇಟ್ ಮಾಡುವ ಅವಕಾಶ ಸಿಗುತ್ತದೆ. ಆಗ ನನ್ನ ನಾಮಿನೇಟ್ ಮಾಡಿ ಎಂದು ದುರಹಂಕಾರ ಮೈಕಲ್ ತೋರಿದರು. ಇನ್ನೊಂದು ಸ್ವಲ್ಪ ಹೊತ್ತು ಮಲಗಿ ಮನೆಯ ಪರಿಸ್ಥಿತಿಯನ್ನು ಹಾಳು ಮಾಡೋಣ ಎಂದು ದರ್ಪದಿಂದ ಹೇಳಿಕೊಂಡರು ಮೈಕಲ್.

    ಅಡುಗೆ ಮಾಡಲು ಪಾತ್ರೆಗಳನ್ನು ತೊಳೆದಿರಲಿಲ್ಲ. ಇದನ್ನು ಮಾಡುವ ಕೆಲಸ ಮೈಕಲ್ ಅವರದ್ದಾಗಿತ್ತು. ಆದರೆ, ತನಿಷಾ ಅವರು ಪದೇ ಪದೇ ಬಂದು ಮನವಿ ಮಾಡಿಕೊಂಡರೂ ಪಾತ್ರೆ ತೊಳೆಯಲು ಅವರು ಮುಂದಾಗಲೇ ಇಲ್ಲ. ಕೊನೆಗೂ ಅವರು ಸಿಂಕ್ ಬಳಿ ಬಂದು ನಿಧಾನಕ್ಕೆ ಪಾತ್ರೆ ತೊಳೆಯಲು ಆರಂಭಿಸಿದರು. ನನ್ನಿಷ್ಟ ಬಂದಾಗ ಮಾಡ್ತೀನಿ. ಇದೆಲ್ಲ ಮಾಡಬೇಕು ಎಂದು ಎಲ್ಲಿ ಬರೆದಿದೆ. ನನಗೆ ಮಾಡೋಕೆ ಇಷ್ಟವೇ ಇಲ್ಲ ಎಂದರು ಮೈಕಲ್. ಮಲಗಿದ್ದಕ್ಕೆ ನಿಮಗೆ ಶಿಕ್ಷೆ ನೀಡಿದೆ. ಅದನ್ನು ಮಾಡದೇ ನೀವು ದುರಹಂಕಾರ ತೋರಿಸಿದಿರಿ. ಅದಕ್ಕೆ ನಾನೇನು ಮಾಡೋಕೆ ಆಗಲ್ಲ. ನೀವು ನಿದ್ದೆ ಮಾಡ್ತಾ ಇದ್ರೆ ಇನ್ನಷ್ಟು ನಿದ್ದೆ ಮಾಡಿ ಎಂದು ಹೇಳಬೇಕಾ ಎಂದು ತನಿಷಾ ಪ್ರಶ್ನಿಸಿದರು.

    ಅದಕ್ಕೆ ಮೈಕಲ್ ತಿರುಗಿ ಮಾತನಾಡಿದ್ದರು. ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಮೂರು ಬಾಲ್ ಹಾಕಿದೀಯಾ ಅಷ್ಟೇ. ನೀನು ದೊಡ್ಡ ಸಾಧನೆ ಮಾಡಿಲ್ಲ. ನಿನ್ನ ಧ್ವನಿಯನ್ನು ಕೇಳಿ ಮೊದಲಿನಿಂದಲೂ ಇರಿಟೇಷನ್ ಆಗುತ್ತಿದೆ ಎಂದು ಮೈಕಲ್ ಸಿಟ್ಟಲ್ಲೇ ಹೇಳಿದರು.

    ಈ ಹಿಂದೆ ವಾರಾಂತ್ಯದ ಮಾತುಕತೆಯಲ್ಲಿ ಕ್ಯಾಪ್ಟನ್‌ಗೆ ಗೌರವ ನೀಡಬೇಕು ಎಂದು ಸುದೀಪ್ (Sudeep) ಈ ಮೊದಲೇ ಹೇಳಿದ್ದರು. ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಸೂಚಿಸಿದ್ದರು. ಆದರೆ, ಮೈಕಲ್ ಹಾಗೂ ವಿನಯ್ ಇಬ್ಬರೂ ಇದನ್ನು ಫಾಲೋ ಮಾಡಿಲ್ಲ. ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಅವರು ಇಬ್ಬರಿಗೂ ಖಡಕ್ ಆಗಿ ಕ್ಲಾಸ್ ತೆಗೆದುಕೊಳ್ಳುವ ಸಾಧ್ಯತೆ ಇದೆ. ಎಲ್ಲದ್ದಕ್ಕೂ ವಾರಾಂತ್ಯದಲ್ಲಿ ಉತ್ತರ ಸಿಗಲಿದೆ.

  • ದೊಡ್ಮನೆಯಲ್ಲಿ ಕನ್ನಡ ಕಲರವ- ಮನೆಮಂದಿಗೆ ಮೈಕಲ್‌ ಕನ್ನಡ ಪಾಠ

    ದೊಡ್ಮನೆಯಲ್ಲಿ ಕನ್ನಡ ಕಲರವ- ಮನೆಮಂದಿಗೆ ಮೈಕಲ್‌ ಕನ್ನಡ ಪಾಠ

    ‘ಮನೆಯೇ ಮೊದಲ ಪಾಠಶಾಲೆ’ ಎಂಬ ಮಾತು ಬಿಗ್‌ಬಾಸ್ ಮನೆಯಲ್ಲಿ (Bigg Boss Kannada 10) ಅಕ್ಷರಶಃ ಸತ್ಯವಾಗುತ್ತಿದೆ. ಬಿಗ್‌ಬಾಸ್ ಮನೆಯಲ್ಲಿ ಪ್ರಾಥಮಿಕ ಶಾಲೆ ಪ್ರಾರಂಭವಾಗಿದೆ. ಹಾಗಾದ್ರೆ ವಿದ್ಯಾರ್ಥಿಗಳು ಯಾರು? ಕಳೆದ ವಾರ ರಕ್ಕಸರ ಹಾಗೆ ಕಿತ್ತಾಡಿದ್ದವರೇ ಈ ವಾರ ಪುಟ್ಟ ಮಕ್ಕಳಾಗಿ ಶಾಲೆಗೆ ಸೇರಿಕೊಂಡಿದ್ದಾರೆ. ಒಬ್ಬರ ಕೈಗೆ ಇನ್ನೊಬ್ಬರು ಕಚ್ಚುತ್ತ, ಒಬ್ಬರ ಬಗ್ಗೆ ಇನ್ನೊಬ್ಬರು ದೂರು ಹೇಳುತ್ತ, ಎಲ್ಲರ ಜೊತೆ ಸೇರಿ ಒಟ್ಟಿಗೆ ಪ್ರಾರ್ಥನೆ ಮಾಡುತ್ತ ಕೋಲಾಹಲವೆದ್ದಿದ್ದ ಮನೆಯಲ್ಲಿ ಕಲರವ ಉಂಟುಮಾಡುತ್ತಿದ್ದಾರೆ. ಕ್ರೌರ್ಯ ಮೆರೆದಾಡಿದ್ದ ಜಾಗದಲ್ಲಿ ಮುಗ್ಧತೆ ಅರಳುತ್ತಿದೆ. ಜಿಯೋ ಸಿನಿಮಾದಲ್ಲಿ ಪ್ರೋಮೋ ರಿಲೀಸ್ ಆಗಿದೆ.

    ಈ ವಾರದ ಟಾಸ್ಕ್‌ನಲ್ಲಿ ಬಿಗ್‌ಬಾಸ್ ಮನೆಯ (Bigg Boss Kannada) ಎಲ್ಲ ಸದಸ್ಯರನ್ನು ಬಾಲ್ಯಕ್ಕೆ ಕರೆದೊಯ್ಯುತ್ತಿದ್ದಾರೆ. ಎಲ್ಲ ಸ್ಪರ್ಧಿಗಳೂ ಪ್ರಾಥಮಿಕ ಶಾಲೆಯ ಸಮವಸ್ತ್ರ ತೊಟ್ಟು ಅಕ್ಷರಶಃ ಮಕ್ಕಳೇ ಆಗಿಬಿಟ್ಟಿದ್ದಾರೆ. ಒಬ್ಬೊಬ್ಬರೂ ಇನ್ನೊಬ್ಬರ ಚೇಷ್ಟೆಗಳನ್ನು ನೋಡಿ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ. ಈ ವಾರವಿಡೀ ಮಕ್ಕಳಾಟದ ಮನರಂಜನೆ ಭರಪೂರ ಸಿಗಲಿದೆ. ಇದನ್ನೂ ಓದಿ:‘ಹಾಯ್ ನಾನ್ನ’ ಮೆಚ್ಚಿಕೊಂಡ ಶಿವರಾಜ್ ಕುಮಾರ್

    ವ್ಯಕ್ತಿತ್ವ ವಿಕಸದ ಪಾಠಗಳನ್ನು ಕೇಳಿದ ಮೇಲೆ ಭಾಷೆಯ ಪಾಠವೂ ಬೇಕಲ್ಲವೇ? ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಪಾಠ ಮಾಡಿಲ್ಲವೆಂದರೆ ಹೇಗೆ? ಕನ್ನಡ ಕಲಿಸಲು ಬಂದ ಮೇಷ್ಟ್ರು ಯಾರು ಗೊತ್ತೆ? ವಿದೇಶದಿಂದ ಬಂದಿರುವ ಮೈಕಲ್, ಕೋಟು ತೊಟ್ಟು ಕನ್ನಡ ತರಗತಿ ಮಾಡಲು ಸಜ್ಜಾಗಿದ್ದಾರೆ.

    ವಿದೇಶದಿಂದ ಬಂದಿದೀನಿ. ಕನ್ನಡ ಭಾಷೆಯ ಮೇಲೆ ನನಗೆ ಪ್ರೀತಿ ಆಯ್ತು. ಈಗ ಪಂಡಿತ ಆಗಲು ಯತ್ನಿಸುತ್ತಿದ್ದೇನೆ ಎಂದಿದ್ದಾರೆ ಮೈಕಲ್ (Michael Ajay) ಮೇಷ್ಟ್ರು. ಅಷ್ಟೇ ಅಲ್ಲ, ಪುಂಡ ಹುಡುಗ ಕಾರ್ತಿಕ್‌ಗೆ (Karthik Mahesh), ಆಂಗ್ಲ ಭಾಷೆ ಬಳಕೆ ಮಾಡಿದರೆ ಶಿಕ್ಷೆ ಕೊಡ್ತೀನಿ ಎಂದು ಎಚ್ಚರಿಕೆ ಬೇರೆ ನೀಡಿದ್ದಾರೆ. ಎಲ್ಲಾದರೂ ಇರು ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು ಎಂದು ಮೈಕಲ್ ಹೇಳುತ್ತಿದ್ದರೆ ವಿದ್ಯಾರ್ಥಿಗಳ ಬಾಯಲ್ಲಿ ಕನ್ನಡ ರೋಮಾಂಚನವೀ ಕನ್ನಡ ಎಂಬ ಹಾಡು ತಂತಾನೆಯೇ ಹೊಮ್ಮಿದೆ. ಈ ಕನ್ನಡ ಕ್ಲಾಸ್ ಅನ್ನು ನೋಡಿದ ಎಲ್ಲರಿಗೂ ರೋಮಾಂಚನ ಹುಟ್ಟಿಸುವುದಂತೂ ಖಂಡಿತ.

  • Bigg Boss: ‘ಗೆಲ್ಲೋ ಕುದುರೆ’ ವಿನಯ್ ಎಂದ ನೀತುಗೆ ಮೈಕಲ್ ಠಕ್ಕರ್

    Bigg Boss: ‘ಗೆಲ್ಲೋ ಕುದುರೆ’ ವಿನಯ್ ಎಂದ ನೀತುಗೆ ಮೈಕಲ್ ಠಕ್ಕರ್

    ದೊಡ್ಮನೆಯ ಅಸಲಿ ಆಟ ಈಗ ಶುರುವಾಗಿದೆ. ಕಿಚ್ಚನ ಕ್ಲಾಸ್ ಬಳಿಕ ಎಲ್ಲಾ ಸ್ಪರ್ಧಿಗಳು ಎಚ್ಚೆತ್ತು ಆಟವಾಡುತ್ತಿದ್ದಾರೆ. ಇದೀಗ ಗೆಲ್ಲೋ ಕುದುರೆ ವಿನಯ್ ಎಂದು ಬೆಟ್ಟು ತೋರಿಸಿದ ನೀತುಗೆ (Neethu Vanajakshi) ಮೈಕಲ್ ಠಕ್ಕರ್ ಕೊಟ್ಟಿದ್ದಾರೆ. ಇದನ್ನೂ ಓದಿ:ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಾಂಗ್ ಲೀಕ್: ಕೇಡಿಗಳ ಅರೆಸ್ಟ್

    ಟಾಸ್ಕ್‌ವೊಂದರಲ್ಲಿ ಒಂದಿಷ್ಟು ಪದಗಳನ್ನ ಸ್ಪರ್ಧಿಗಳಿಗೆ ನೀಡಿದ್ದರು. ಆ ಪದದ ಅನುಸಾರ ಸ್ಪರ್ಧಿಗಳನ್ನ ಅತೀ ಹೆಚ್ಚು ಮತ್ತು ಅತೀ ಕಡಿಮೆ ಅದನ್ನ ಹೈಲೆಟ್ ಮಾಡಿ ನಿಲ್ಲಿಸಬೇಕಿತ್ತು. ಅದರಂತೆ ನೀತು ವನಜಾಕ್ಷಿ ಅವರಿಗೆ ‘ಗೆಲ್ಲೋ ಕುದುರೆ’ ಎಂಬ ಪದ ಸಿಕ್ಕಿತ್ತು. ಈ ಅನುಸಾರ ನೀತು, ಮೊದಲ ಸ್ಥಾನದಲ್ಲಿ ವಿನಯ್ (Vinay Gowda) ನಿಲ್ಲಿಸಿದ್ದರೆ, ಕಡೆಯ ಸ್ಥಾನದಲ್ಲಿ ಇಶಾನಿಯನ್ನು ನಿಲ್ಲಿಸಿದ್ದರು.

    ನೀತು ನಿರ್ಣಯಕ್ಕೆ ಮೈಕಲ್, ಕಾರ್ತಿಕ್ (Karthika Mahesh) ಸೇರಿದಂತೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಗೆಲ್ಲೋ ಕುದುರೆ ಪಟ್ಟಿಯಲ್ಲಿ ವಿನಯ್ ಗೌಡ ಒಬ್ಬರೇ ಓಡ್ತಿರೋದು ಅಂತ ಹೇಳಿದ್ದಕ್ಕಾಗಿ ನೀತುಗೆ ಠಕ್ಕರ್ ನೀಡಿದ ಮೈಕೆಲ್, ನೀವೀಗ ಹೇಳಿದ್ದೀರಿ, ಒಂದೇ ಒಂದು ಗೆಲ್ಲೋ ಕುದುರೆ ಆಟ ಆಡ್ತಾ ಇದೆ ಅಂತ. ಹಾಗಾದರೆ, ನೀವು ನಿಮ್ಮನ್ನೇ ಕನ್ಸಿಡರ್ ಮಾಡಿಕೊಂಡಿಲ್ಲ ಅಂತ ಅರ್ಥ. ಅಂದರೆ ನೀವಿಲ್ಲಿ ಸುಮ್ನೇ ಇದ್ದೀರಿ. ಸುಮ್ನೇ ಇರೋದಾದ್ರೆ ನೀವ್ಯಾಕೆ ಬಿಗ್ ಬಾಸ್‌ನಲ್ಲಿ ಯಾಕೆ ಇದ್ದೀರಾ? ಗೊಂದಲದಲ್ಲಿ ಇದ್ದೀರಾ ಅಂತೆಲ್ಲ ಕೇಳಿದರು. ಈ ಮಾತು ಕೇಳಿದ ನೀತು, ಸಮರ್ಥನೆ ಕೊಡೋದ್ರಲ್ಲಿ ಸೋತರು. ಮೈಕೆಲ್ ಮಾತಿಗೆ ಬೆಂಬಲಿಸುತ್ತ ಮನೆಮಂದಿ ನಕ್ಕರು. ಸದಾ ಕನ್ಫೂಷನ್‌ನಲ್ಲಿರೋ ನೀತು, ಮೈಕಲ್ ಈ ಮೂಲಕ ಕ್ಲಾಸ್ ತೆಗೆದುಕೊಂಡರು.

    ಸ್ನೇಕ್ ಶ್ಯಾಮ್, ಗೌರೀಶ್, ರಕ್ಷಕ್ ಬುಲೆಟ್ ಅವರು ಎಲಿಮಿನೇಟ್ ಆಗಿ ಈಗಾಗಲೇ ಬಿಗ್ ಬಾಸ್ ಮನೆಯಿಂದ (Bigg Boss House) ಹೊರಬಂದಿದ್ದಾರೆ. 5ನೇ ವಾರಕ್ಕೆ ಯಾರು ಎಲಿಮಿನೇಟ್ ಆಗುತ್ತಾರೆ ಕಾದುನೋಡಬೇಕಿದೆ.