Tag: Mia Khalifa

  • ಅಮೆರಿಕ ಸೇನೆ ವಿರುದ್ಧ ಮಿಯಾ ಕಲಿಫಾ ಅಪಹಾಸ್ಯ; ಮಾಜಿ ನೀಲಿ ತಾರೆಗೆ ನೆಟ್ಟಿಗರಿಂದ ಫುಲ್‌ ಕ್ಲಾಸ್‌

    ಅಮೆರಿಕ ಸೇನೆ ವಿರುದ್ಧ ಮಿಯಾ ಕಲಿಫಾ ಅಪಹಾಸ್ಯ; ಮಾಜಿ ನೀಲಿ ತಾರೆಗೆ ನೆಟ್ಟಿಗರಿಂದ ಫುಲ್‌ ಕ್ಲಾಸ್‌

    ಬೈರೂತ್‌: ಇತ್ತೀಚೆಗಷ್ಟೇ ಪ್ಯಾಲೆಸ್ತೀನ್‌ (Palestin) ಪರ ಬ್ಯಾಟ್‌ ಬೀಸಿದ್ದ ಮಾಜಿ ನೀಲಿ ತಾರೆ ಮಿಯಾ ಕಲಿಫಾ (Mia Khalifa) ಅವರು ಇದೀಗ ಅಮೆರಿಕ ಸೇನೆಯನ್ನ ಗುರಿಯಾಗಿಸಿ ಟೀಕಿಸಿದ್ದಾರೆ.

    ಮಾಜಿ ನೀಲಿ ತಾರೆ ಈ ಹಿಂದೆಯೂ ಸಾಕಷ್ಟು ಬಾರಿ ಪ್ಯಾಲೆಸ್ತೀನ್‌ ಪರವಾಗಿ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಇದೀಗ ಅಮೆರಿಕದಲ್ಲಿ (USA) ನೆಲೆಸಿದ್ದರೂ ಸೇನೆಯ ವಿರುದ್ಧ ವ್ಯಂಗ್ಯವಾಡಿದ್ದಾರೆ. ತಮ್ಮ ಎಕ್ಸ್‌ ಖಾತೆಯಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿರುವ ಮಿಯಾ ಕಲೀಫಾ ಅಮೆರಿಕ ಸೇನೆಯನ್ನು ಅಣುಕಿಸಿ, ಸೋಶಿಯಲ್‌ ಮೀಡಿಯಾದಲ್ಲಿ ಟೀಕೆಗೆ ಗುರಿಯಾಗಿದ್ದಾರೆ. ಇದನ್ನೂ ಓದಿ: ಭಾರತದ ಜೊತೆ ಚೇಷ್ಟೆ – ಶೀಘ್ರವೇ ಜಸ್ಟಿನ್‌ ಟ್ರುಡೋ ರಾಜೀನಾಮೆ?

    ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ವೀಡಿಯೋನಲ್ಲಿ, ಇಸ್ರೇಲ್‌, ಲೆಬನಾನ್‌ (Lebanon), ಗಾಜಾದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಉಲ್ಲೇಖಿಸಿ ಅಮೆರಿಕ ಸೇನೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಮನೆಯಲ್ಲಿ ಕುಳಿತು ತಮಗೆ ಸೇರದ ಮಣ್ಣಿನಲ್ಲಿ, ತಮ್ಮ ಬಗ್ಗೆ ಕಾಳಜಿ ವಹಿಸದ ದೇಶಕ್ಕಾಗಿ ಯುದ್ಧ ಮಾಡುವ ಪ್ರತಿಯೊಬ್ಬರಿಗೂ ಶುಭೋದಯ ಎಂದಿದ್ದಾರೆ.

    ನೀವು ಅಲ್ಲಿಗೆ ಹೋಗಿ ಯುದ್ಧ ಮಾಡಿದ್ದೀರಿ, ಮತ್ತೆ ನಿಮ್ಮ ದೇಶಕ್ಕೆ ಹಿಂತಿರುಗಿ, ಆಗ ಯುನೈಟೆಡ್‌ ಸ್ಟೇಟ್ಸ್‌ ನಿಮ್ಮ ಬಗ್ಗೆ ಎಷ್ಟು ಕಾಳಜಿ ವಹಿಸುತ್ತದೆ ಎಂದು ನೋಡಿ ಎಂದು ಮಕ್ಕಳ ದನಿಯಲ್ಲಿ ಅಪಹಾಸ್ಯ ಮಾಡಿದ್ದಾರೆ. ಅಲ್ಲದೇ ಓಹ್‌.. ನಾನು ತುಂಬಾ ದುಃಖಿತಳಾಗಿದ್ದೇನೆ ಎಂದು ಅಪಹಾಸ್ಯ ಮಾಡಿದ್ದಾರೆ. ಇದನ್ನೂ ಓದಿ: 5 ವರ್ಷಗಳ ಬಳಿಕ ಮುಖಾಮುಖಿ; ರಷ್ಯಾದಲ್ಲಿ ಮೋದಿ-ಜಿನ್‌ಪಿಂಗ್ ನಡ್ವೆ ದ್ವಿಪಕ್ಷೀಯ ಮಾತುಕತೆ

    ಕಳೆದ ವರ್ಷ ಇಸ್ರೇಲ್‌-ಹಮಾಸ್‌ ಯುದ್ಧದ ಸಂದರ್ಭದಲ್ಲಿ ಮಿಯಾ ಕಲಿಫಾ ಪ್ಯಾಲೆಸ್ತೀನ್ ಪರವಾಗಿ ಮಾತನಾಡಿದ್ದು, ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಜೊತೆಗೆ ಮಿಯಾ ಅವರನ್ನು ಕೆಲಸದಿಂದಲೂ ವಜಾ ಮಾಡಲಾಗಿತ್ತು. ಮಿಯಾ ಅಮೆರಿಕಾದಲ್ಲಿ ವಾಸವಿದ್ದು, ಅಲ್ಲಿ ಖಾಸಗಿ ಕಂಪನಿಯ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು.

    ಇದಕ್ಕೂ ಮುನ್ನ ಮಿಯಾ ಕಲಿಫಾ ನೀಲಿಚಿತ್ರವೊಂದರಲ್ಲಿ ಹಿಜಬ್‌ ಧರಿಸಿದ್ದಕ್ಕಾಗಿ ಐಎಸ್‌ಐಎಸ್‌ನಿಂದ ಬೆದರಿಕೆಗಳು ಬಂದಿತ್ತು. ಆ ಬಳಿಕ ಇಸ್ರೇಲ್‌ ವರ್ಣಭೇದ ನೀತಿ ಹೊಂದಿರುವ ದೇಶ ಎಂದು ಹೇಳಿ ಟೀಕೆಗೆ ಗುರಿಯಾಗಿದ್ದರು. ಇದನ್ನೂ ಓದಿ: ಏರೋಸ್ಪೇಸ್‌ ಕಚೇರಿ ದಾಳಿಗೆ ಪ್ರತೀಕಾರ – ಇರಾಕ್‌, ಸಿರಿಯಾದಲ್ಲಿರುವ ಉಗ್ರರ ನೆಲೆ ಮೇಲೆ ಟರ್ಕಿ ಏರ್‌ಸ್ಟ್ರೈಕ್‌

  • ಧಾರ್ಮಿಕ ಕಾರ್ಯಕ್ರಮದ ಫ್ಲೆಕ್ಸ್‌ನಲ್ಲಿ ಮಾಜಿ ನೀಲಿ ತಾರೆ ಮಿಯಾ ಖಲೀಫಾ ಫೋಟೋ – ಮುಂದೇನಾಯ್ತು?

    ಧಾರ್ಮಿಕ ಕಾರ್ಯಕ್ರಮದ ಫ್ಲೆಕ್ಸ್‌ನಲ್ಲಿ ಮಾಜಿ ನೀಲಿ ತಾರೆ ಮಿಯಾ ಖಲೀಫಾ ಫೋಟೋ – ಮುಂದೇನಾಯ್ತು?

    ಚೆನ್ನೈ: ತಮಿಳುನಾಡಿನ ಧಾರ್ಮಿಕ ಕಾರ್ಯಕ್ರಮದ ಫ್ಲೆಕ್ಸ್‌ವೊಂದರಲ್ಲಿ ಮಾಜಿ ನೀಲಿ ತಾರೆ ಮಿಯಾ ಖಲೀಫಾ (Mia Khalifa) ಅವರ ಫೋಟೋ ಕಾಣಿಸಿಕೊಂಡಿದ್ದು, ಭಾರೀ ಆಕ್ಷೇಪ ವ್ಯಕ್ತವಾದ ಬಳಿಕ ಫ್ಲೆಕ್ಸನ್ನು (Religious Hoarding) ತೆರವುಗೊಳಿಸಲಾಗಿದೆ.

    ತಮಿಳುನಾಡಿನ (Tamil Nadu) ಕೊರುವಿಮಲೈನಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಸಂಬಂಧಿಸಿದ ಫ್ಲೆಕ್ಸ್‌ವೊಂದರಲ್ಲಿ ಲೆಬನಾನ್‌ ಮೂಲದ ಮಾಜಿ ನೀಲಿ ತಾರೆ ಮಿಯಾ ಖಲೀಫಾ ಅವರ ಫೋಟೋ ಬಳಸಲಾಗಿತ್ತು. ಈ‌ ಫ್ಲೆಕ್ಸ್‌ನ ವೀಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಡಲಾಗಿತ್ತು. ಭಾರೀ ಆಕ್ಷೇಪಗಳು ಕೇಳಿಬಂದ ಮಗರಾಲ್ ಠಾಣೆಯ ಪೊಲೀಸರು ಫ್ಲೆಕ್ಸ್‌ ಅನ್ನು ತೆರವುಗೊಳಿಸಿದ್ದಾರೆ. ಅಲ್ಲದೇ ಅಭಾಸಕ್ಕೆ ಕಾರಣವಾದ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿಯೂ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಮುಂದೊಂದು ದಿನ ಮೋದಿ ನಿವಾಸಕ್ಕೆ ಜನ ನುಗ್ಗುತ್ತಾರೆ: ನಾಲಗೆ ಹರಿಬಿಟ್ಟ ಕೈ ಹಿರಿಯ ನಾಯಕ

    ಈ ಹಿಂದೆ ಇಸ್ರೇಲ್‌-ಹಮಾಸ್‌ ಯುದ್ಧದ ಸಂದರ್ಭದಲ್ಲೂ ಮಿಯಾ ಖಲೀಫಾ ಸುದ್ದಿಯಾಗಿದ್ದರು. ಇಸ್ರೇಲ್ ವಿರುದ್ಧ ಸರಣಿ ಪೋಸ್ಟ್ ಮಾಡಿದ್ದರು. ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಅವರು ಪ್ಯಾಲೆಸ್ತೀನ್ ಪರವಾಗಿ ಸಾಕಷ್ಟು ಪೋಸ್ಟ್‌ಗಳನ್ನ ಹಂಚಿಕೊಂಡು, ತಾವು ಪ್ಯಾಲೆಸ್ತೀನ್ ಪರವಾಗಿ ನಿಂತಿರುವುದಾಗಿ ಹೇಳಿಕೊಂಡಿದ್ದರು. ಮಿಯಾ ಪೋಸ್ಟ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸದ್ದು ಮಾಡಿತ್ತು. ಇದರಿಂದಾಗಿ ಮಿಯಾ ಅವರನ್ನ ಖಾಸಗಿ ಕಂಪನಿ ಕೆಲಸದಿಂದಲೇ ವಜಾಗೊಳಿಸಿತ್ತು. ಇದನ್ನೂ ಓದಿ: 20 ಲಕ್ಷ ಲಂಚ ಪಡೆಯುವಾಗ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಇ.ಡಿ ಅಧಿಕಾರಿ

    ಇದಕ್ಕೂ ಮುನ್ನ ಮಿಯಾ ಖಲೀಫಾ, ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss Hindi) ಕಾರ್ಯಕ್ರಮಕ್ಕೆ ಬರಲಿದ್ದಾರೆ ಎಂದು ಸುದ್ದಿಯಾಗಿತ್ತು. ಇದನ್ನೂ ಓದಿ: Wayanad landslides | ಸಂತ್ರಸ್ತರಿಗೆ 15 ಕೋಟಿ, 300 ಮನೆ ನೆರವು ನೀಡಲು ಮುಂದಾದ ಬೆಂಗ್ಳೂರು ಮೂಲದ ಆರೋಪಿ

  • ನೀಲಿತಾರೆಗೆ ಹೋಲಿಸಿ ಟ್ರೋಲ್ : ಪ್ರಧಾನಿ ಮೊರೆ ಹೋದ ಗಾಯಕಿ ನೇಹಾ

    ನೀಲಿತಾರೆಗೆ ಹೋಲಿಸಿ ಟ್ರೋಲ್ : ಪ್ರಧಾನಿ ಮೊರೆ ಹೋದ ಗಾಯಕಿ ನೇಹಾ

    ತ್ತರ ಪ್ರದೇಶದ ಪ್ರಸಿದ್ಧ ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್ (Neha Singh Rathore), ಪ್ರಧಾನಿ ಮೋದಿ ಸೇರಿದಂತೆ ಹಲವರಿಗೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ಮಹಿಳಾ ಆಯೋಗ, ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ತಮ್ಮ ಮೇಲೆ ಆಗುತ್ತಿರುವ ಶೋಷನೆಯನ್ನು ಹೇಳಿಕೊಂಡಿದ್ದಾರೆ.

    ಗಾಯಕಿ ನೇಹಾ ಅವರನ್ನು ನೀಲಿತಾರೆ ಮಿಯಾ ಖಲೀಫಾಗೆ (Mia Khalifa) ಹೋಲಿಸಿ ಟ್ರೋಲ್ ಮಾಡಲಾಗುತ್ತಿದೆ. ಅನೇಕರು ಅದನ್ನು ಹಂಚಿಕೊಂಡಿದ್ದಾರೆ. ನೇಹಾ ಮತ್ತು ಮಿಯಾ ನೋಡೋಕೆ ಒಂದೇ ತರಹ ಇದ್ದಾರೆ ಎನ್ನುವ ಕಾರಣಕ್ಕಾಗಿ ಟ್ರೋಲ್ ಮಾಡಲಾಗುತ್ತಿದೆ ಅಂತೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಅವರು ಕೇಳಿಕೊಂಡಿದ್ದಾರೆ.

     

    ಕಂಗನಾ ರಣಾವತ್ ಅವರಿಗೆ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಅವರು ಅವಮಾನಿಸಿದ್ದರು. ಇದನ್ನು ಮಹಿಳಾ ಆಯೋಗ ಗಂಭೀರವಾಗಿ ತೆಗೆದುಕೊಂಡಿದೆ ಎಂದು ಪ್ರತಿಕ್ರಿಯೆ ನೀಡಿತ್ತು. ಹಾಗಾಗಿ ಮಹಿಳಾ ಆಯೋಗ ಮತ್ತು ಕೇಂದ್ರ ಸರಕಾರ ಕೇವಲ ಕಂಗನಾ ಅವರನ್ನು ಮಾತ್ರ ಮಹಿಳೆ ಎಂದು ಪರಿಗಣಿಸಿದ್ಯಾ? ಅಥವಾ ನಮ್ಮಂಥವರಿಗೆ ನ್ಯಾಯ ಕೊಡುತ್ತಾ ಎಂದು ಅವರು ಕೇಳಿದ್ದಾರೆ.

  • ಪ್ಯಾಲೆಸ್ತೀನ್ ಪರ ಬ್ಯಾಟಿಂಗ್ ಮಾಡಿದಕ್ಕೆ ಮಿಯಾಗೆ ಕೆಲಸ ಹೋಯ್ತು

    ಪ್ಯಾಲೆಸ್ತೀನ್ ಪರ ಬ್ಯಾಟಿಂಗ್ ಮಾಡಿದಕ್ಕೆ ಮಿಯಾಗೆ ಕೆಲಸ ಹೋಯ್ತು

    ಮಾಜಿ ನೀಲಿ ತಾರೆ ಮಿಯಾ ಖಲೀಫಾ (Mia Khalifa) ಇಸ್ರೇಲ್ (Israel) ವಿರುದ್ಧ ಸರಣಿ ಪೋಸ್ಟ್ ಗಳನ್ನು ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರು ಪ್ಯಾಲೆಸ್ತೀನ್ (Palestine) ಪರವಾಗಿ ಸಾಕಷ್ಟು ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ತಾವು ಪ್ಯಾಲೆಸ್ತೀನ್ ಪರವಾಗಿ ನಿಂತಿರುವುದಾಗಿ ಅವರು ತಿಳಿಸಿದ್ದಾರೆ.

    ಇಸ್ರೇಲ್ ನ ಮೇಲೆ ಹಮಾಸ್ ದೊಡ್ಡ ಮಟ್ಟದಲ್ಲಿ  ದಾಳಿ ಮಾಡಿದೆ. ಲೆಬನಾನ್ ಮೂಲದ ಈ ತಾರೆ ಪ್ಯಾಲೆಸ್ತೀನ್ ಪರವಾಗಿ ನಿಂತಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಜೊತೆಗೆ ಮಿಯಾ ಅವರನ್ನು ಕೆಲಸದಿಂದಲೂ ವಜಾ ಮಾಡಲಾಗಿದೆ. ಸದ್ಯ ಮಿಯಾ ಅಮೆರಿಕಾದಲ್ಲಿ ವಾಸವಿದ್ದು, ಅಲ್ಲಿ ಖಾಸಗಿ ಕಂಪನಿಯ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು.

     

    ಇಸ್ರೇಲ್ ಕುತಂತ್ರಗಳ ಬಗ್ಗೆಯೂ ಅವರು ಮಾತನಾಡಿದ್ದು, ಇತಿಹಾಸವನ್ನು ನೆನಪಿಸುವಂತಹ ಬರಹಗಳನ್ನು ಮಿಯಾ ಖಲೀಫಾ ಪೋಸ್ಟ್ ಮಾಡಿದ್ದಾರೆ. ಪ್ಯಾಲೆಸ್ತೀನ್ ಪರವಾಗಿ ತಾವು ನಿಲ್ಲಲು ಕಾರಣವನ್ನೂ ಅವರು ನೀಡಿದ್ದಾರೆ. ಮಿಯಾ ಪೋಸ್ಟ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸದ್ದು ಮಾಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಮಾಜಿ ‘ನೀಲಿ’ತಾರೆ ಮಿಯಾ ಖಲೀಫಾ

    ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಮಾಜಿ ‘ನೀಲಿ’ತಾರೆ ಮಿಯಾ ಖಲೀಫಾ

    ನೀಲಿ ಸಿನಿಮಾಗಳ ಮಾಜಿ ತಾರೆ ಮಿಯಾ ಖಲೀಫಾ (Mia Khalifa) ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಲ್ಮಾನ್ ಖಾನ್ ನಡೆಸಿಕೊಡಲಿರುವ ಬಿಗ್ ಬಾಸ್ ಓಟಿಟಿ ಸೀಸನ್ 2ರಲ್ಲಿ (Bigg Boss OTT 2) ಮಿಯಾ ಭಾಗಿಯಾಗಲಿದ್ದಾರೆ ಎಂದು ಬಿ ಟೌನ್ ಮಾತಾಡಿಕೊಳ್ಳುತ್ತಿದೆ. ಬಿಗ್ ಬಾಸ್ ಮನೆ ಪ್ರವೇಶ ಮಾಡಲು ಕ್ಷಣಗಣನೆ ಶುರುವಾಗಿದ್ದು, ಮಿಯಾ ಪ್ರವೇಶಿಸಿದರೆ ಮನೆಯ ವಾತಾವರಣ ಹೇಗೆಲ್ಲ ಇರಲಿದೆ ಎನ್ನುವ ಕುರಿತು ಕುತೂಹಲ ಮೂಡಿದೆ.

    ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss Hindi)) ಕಾರ್ಯಕ್ರಮಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಮೊದಲ ಬಿಗ್ ಬಾಸ್ ಒಟಿಟಿ ಯಶಸ್ವಿಯಾಗಿತ್ತು. ಈಗ 2ನೇ ಸೀಸನ್ ಬಿಗ್ ಬಾಸ್ ಒಟಿಟಿ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ಇದನ್ನೂ ಓದಿ:‘ದೇವರ ಆಟ ಬಲ್ಲವರಾರು’ ಎನ್ನುತ್ತಾ 3 ವರ್ಷಗಳ ನಂತರ ಬಣ್ಣ ಹಚ್ಚಿದ ಸಿಂಧೂ ಲೋಕನಾಥ

    ಸಲ್ಮಾನ್ ಖಾನ್ (Salman Khan) ನಿರೂಪಣೆಯ ಬಿಗ್ ಬಾಸ್ ಒಟಿಟಿ ಕಾರ್ಯಕ್ರಮದ ಫಸ್ಟ್ ಪ್ರೋಮೋ ರಿವೀಲ್ ಆಗಿದೆ. ಸಲ್ಲು ಭಾಯ್ ಎಂಟ್ರಿಗೆ ಫ್ಯಾನ್ಸ್ ಬೋಲ್ಡ್ ಆಗಿದ್ದಾರೆ. ಇಂದಿನಿಂದ ಒಟಿಟಿ ಬಿಗ್ ಬಾಸ್ ಶುರುವಾಗಲಿದೆ. ಜಿಯೋ ಸಿನಿಮಾ ವೇದಿಕೆಯಲ್ಲಿ ಲೈವ್ ಸ್ಟ್ರೀಮ್ ಆಗಲಿದೆ.

    ಮೊದಲ ಸೀಸನ್ ಬಿಗ್ ಬಾಸ್ ಒಟಿಟಿಯನ್ನ ಕರಣ್ ಜೋಹರ್ ನಿರೂಪಣೆ ಮಾಡಿದ್ದರು. ಆದರೆ 2ನೇ ಸೀಸನ್‌ನ ಸಲ್ಮಾನ್ ಖಾನ್ ನಿರೂಪಣೆ ಮಾಡುವ ಬಗ್ಗೆ ಅಧಿಕೃತ ಅಪ್‌ಡೇಟ್ ಹೊರಬಿದ್ದಿದೆ. ಜೊತೆಗೆ ಸಲ್ಮಾನ್ ಈ ಸೀಸನ್ ಹೇಗಿರಲಿದೆ ಎನ್ನುವ ಕುರಿತು ಮಾತನಾಡಿದ್ದಾರೆ.

     

    ಕಳೆದ ಸೀಸನ್‌ನಲ್ಲಿ ದಿವ್ಯಾ ಅಗರ್‌ವಾಲ್ ವಿನ್ನರ್ ಆಗಿದ್ದರು. ಉರ್ಫಿ ಜಾವೇದ್, ನಿಶಾಂತ್ ಭಟ್, ಶಮಿತಾ, ಪ್ರತೀಕ್, ನೇಹಾ ಸೇರಿದಂತೆ ಹಲವು ಸ್ಪರ್ಧಿಗಳು ಭಾಗವಹಿಸಿದ್ದರು. ಬಿಗ್ ಬಾಸ್ 2ನೇ ಸೀಸನ್‌ನಲ್ಲಿ ಯಾರೆಲ್ಲಾ ಇರುತ್ತಾರೆ ಎಂಬುದಕ್ಕೆ ಕಾದುನೋಡಬೇಕಿದೆ.

  • ಆಭರಣ ಧರಿಸಿ ಮಿಯಾ ಖಲೀಫಾ ಹಾಟ್ ಫೋಟೋಶೂಟ್

    ಆಭರಣ ಧರಿಸಿ ಮಿಯಾ ಖಲೀಫಾ ಹಾಟ್ ಫೋಟೋಶೂಟ್

    ಮುಂಬೈ: ಮಾದಕ ಮೈಮಾಟ ಮತ್ತು ವಿಭಿನ್ನ ಬಂಗಿಯ ಫೋಟೋಶೂಟ್ ಮೂಲಕ ಯುವಕರ ನಿದ್ದೆ ಕದಿಯುವ ಕೆಲಸಗಳನ್ನು ನಟಿಮಣಿಯರು, ಮಾಡೆಲ್‍ಗಳು ಆಗಾಗ ಮಾಡುತ್ತಿರುತ್ತಾರೆ. ಅದರಂತೆ ಇದೀಗ ನೀಲಿ ಚಿತ್ರತಾರೆಯಾಗಿ ಗುರುತಿಸಿಕೊಂಡಿದ್ದ ಮಿಯಾ ಖಲೀಫಾ ಅರೆ ನಗ್ನವಾಗಿ ಪೋಸು ನೀಡಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Mia K. (@miakhalifa)

    ನೀಲಿ ಚಿತ್ರತಾರೆಯಾಗಿ ಮೆರೆದು ಬಳಿಕ ಆ ಕ್ಷೇತ್ರದಿಂದ ಹೊರಬಂದಿರುವ ಖಲೀಫಾ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಕೆಲವು ವಿಚಾರಗಳಿಗೆ ಸುದ್ದಿಯಾಗುತ್ತಿರುತ್ತಾರೆ. ಇದೀಗ ಆಭರಣಗಳಿಂದ ಮೈಮುಚ್ಚಿಕೊಂಡು ಫೋಟೋಶೂಟ್ ಮಾಡಿಸಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಕಾರಲ್ಲಿ ಕೂತ್ಕೊಂಡೇ ಕೋವಿಡ್ ಲಸಿಕೆ ಹಾಕಿಸ್ಕೊಳ್ಳಿ- ಬೆಂಗಳೂರಿಗೂ ಬಂತು ಡ್ರೈವ್ ಥ್ರೂ ವ್ಯಾಕ್ಸಿನೇಷನ್

     

    View this post on Instagram

     

    A post shared by Mia K. (@miakhalifa)

    ಮೈಮೇಲೆ ಹರಳಿನಿಂದ ಕೂಡಿದ ಆಭರಣ ತೊಟ್ಟಿರುವ ಮಿಯಾ ಖಲೀಫಾ ಈ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಅಪ್ಲೋಡ್ ಮಾಡಿದ್ದಾರೆ. ವಿಭಿನ್ನವಾದ ಫೋಟೋಶೂಟ್ ಕಂಡು ಆಕೆಯ ಅಭಿಮಾನಿಗಳು ಫಿದಾ ಆಗಿದ್ದಾರೆ. 18ಲಕ್ಷಕ್ಕೂ ಅಧಿಕ ಮಂದಿ ಲೈಕ್ಸ್ ಕೊಟ್ಟಿದ್ದು, ನೆಟ್ಟಿಗರು ವಿಭಿನ್ನವಾಗಿ ಕಮೆಂಟ್ ಮಾಡಿದ್ದಾರೆ.

     

    View this post on Instagram

     

    A post shared by Mia K. (@miakhalifa)

    ಮಾಡೆಲ್‍ಗಳು ಸಾಮಾಜಿಕ ಜಾಲತಾದಲ್ಲಿ ಸದಾ ಆ್ಯಕ್ಟೀವ್ ಆಗಿ ಚರ್ಚೆಯಲ್ಲಿರುತ್ತಾರೆ. ಅದಕ್ಕೆ ತಕ್ಕಂತೆ ಮಿಯಾ ಕೂಡ ಮಾದಕ ಫೋಟೋ ಹಂಚಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ. ಮಿಯಾ ಖಲೀಪಾ ಫೋಟೋವನ್ನು ಪಡ್ಡೆ ಹುಡುಗರು ಮೆಚ್ಚಿಕೊಂಡಿದ್ದಾರೆ.

  • ಕಾಲೇಜ್ ಮೆರಿಟ್ ಲಿಸ್ಟ್ – ಸನ್ನಿ ಲಿಯೋನ್, ಮಿಯಾ ಖಲೀಫಾ ಟಾಪರ್

    ಕಾಲೇಜ್ ಮೆರಿಟ್ ಲಿಸ್ಟ್ – ಸನ್ನಿ ಲಿಯೋನ್, ಮಿಯಾ ಖಲೀಫಾ ಟಾಪರ್

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕಾಲೇಜಿನ ಮೆರಿಟ್ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಮಾಜಿ ನೀಲಿ ಚಿತ್ರಗಳ ನಟಿ ಸನ್ನಿ ಲಿಯೋನ್ ಮತ್ತು ಮಿಯಾ ಖಲೀಫಾ ಅವರ ಹೆಸರು ಕಾಣಿಸಿಕೊಂಡಿದೆ.

    ಪಶ್ಚಿಮ ಬಂಗಾಳದ ಬಾರತಸ್ ಸರ್ಕಾರಿ ಕಾಲೇಜಿನಲ್ಲಿ ಶನಿವಾರ ಇಂಗ್ಲಿಷ್ ಆನರ್ಸ್ ವಿದ್ಯಾರ್ಥಿಗಳ ಮೆರಿಟ್ ಲಿಸ್ಟ್ ಅನ್ನು ಘೋಷಣೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಸನ್ನಿ ಲಿಯೋನ್ ಅವರ ಹೆಸರು ನೋಂದಣಿ ಸಂಖ್ಯೆ ಸಮೇತ ಟಾಪ್ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಈ ವಿಚಾರವಾಗಿ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಕಾಲೇಜು ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದೆ.

    ಇನ್ನೊಂದು ಮುಜುಗರದ ಸಂಗತಿಯೆಂದರೆ ಈ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನದಲ್ಲಿ, ನೀಲಿ ಚಿತ್ರಗಳ ತಾರೆ ಮಿಯಾ ಖಲೀಫಾ ಮತ್ತು ಡ್ಯಾನಿ ಡೇನಿಯಲ್ ಅವರ ಹೆಸರು ಕಾಣಿಸಿಕೊಂಡಿದೆ. ಇವರ ನಂತರ ಮೂರನೇ ಸ್ಥಾನದಲ್ಲಿ ಸನ್ನಿ ಕಾಣಿಸಿಕೊಂಡಿದ್ದಾರೆ. ಇದರ ಬಗ್ಗೆ ಪ್ರತ್ಯೇಕವಾಗಿ ಇನ್ನೊಂದು ದೂರು ನೀಡಿರುವ ತೃಣಮೂಲ ಛತ್ರ ಪರಿಷತ್ ನಡೆಸುತ್ತಿರುವ ಕಾಲೇಜು ವಿದ್ಯಾರ್ಥಿ ಸಂಘವು ಶಿಕ್ಷಣ ಸಂಸ್ಥೆಯ ಬಗ್ಗೆ ಅಪಪ್ರಚಾರ ಮಾಡಲು ಪಟ್ಟಭದ್ರ ಹಿತಾಸಕ್ತಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ಆರೋಪಿಸಿವೆ.

    ಇದಕ್ಕೂ ಮುನ್ನಾ ಶುಕ್ರವಾರ ಪಶ್ಚಿಮ ಬಂಗಾಳದ, ದಕ್ಷಿಣ 24 ಪರಗಣ ಜಿಲ್ಲೆಯ ಬಡ್ಜ್ ಬಡ್ಜ್ ಕಾಲೇಜಿನಲ್ಲಿ ಇಂಗ್ಲಿಷ್‍ನಲ್ಲಿ ಬಿಎ (ಆನರ್ಸ್)ಗೆ ಆಯ್ಕೆಯಾದ 157 ಅಭ್ಯರ್ಥಿಗಳ ಪಟ್ಟಿಯಲ್ಲೂ ಕೂಡ ಸನ್ನಿ ಲಿಯೋನ್ ಹೆಸರು ಕಂಡ ಬಂದಿತ್ತು. ಈ ಕಾಲೇಜಿನ ಪಟ್ಟಿಯಲ್ಲಿ ಸನ್ನಿ ಹೆಸರು 151ನೇ ಸ್ಥಾನದಲ್ಲಿತ್ತು. ಆದರೆ ಶನಿವಾರ ಮೊದಲ ಮೂರನೇ ಸ್ಥಾನದಲ್ಲಿ ನೀಲಿ ಚಿತ್ರದ ನಟ-ನಟಿಯ ಹೆಸರು ಇರುವ ಕಾಲೇಜು ಅಡಳಿತಕ್ಕೆ ಮುಜುಗರವನ್ನುಂಟು ಮಾಡಿದೆ.

    ಗುರುವಾರ ಕೋಲ್ಕತ್ತಾ ನಗರದಲ್ಲಿರುವ ಅಸುತೋಷ್ ಕಾಲೇಜಿನಲ್ಲೂ ಕೂಡ ಮೆರಿಟ್ ಲಿಸ್ಟ್ ಬಿಡುಗಡೆ ಮಾಡಿತ್ತು. ಇದರಲ್ಲೂ ಕೂಡ ಸನ್ನಿ ಲಿಯೋನ್ ಹೆಸರು ಕಾಣಿಸಿಕೊಂಡಿತ್ತು. ಈ ವಿಚಾರವಾಗಿ ಕಾಲೇಜು ಆಡಳಿತ ಮಂಡಳಿ ಲಾಲ್‍ಬಜಾರ್ ನಲ್ಲಿರುವ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿತ್ತು. ಜೊತೆಗೆ ಆಂತರಿಕ ತನಿಖೆಯು ನಡೆಯಬೇಕು ಎಂದು ಕಾಲೇಜಿನ ಅಧಿಕಾರಿಯೊಬ್ಬರು ಪೊಲೀಸರಿಗೆ ಒತ್ತಾಯ ಮಾಡಿದ್ದರು.

    ಕೊರೊನಾ ವೈರಸ್ ಕಾರಣದಿಂದ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ, ಈ ವರ್ಷ ಪದವಿಪೂರ್ವ ಕೋರ್ಸ್‍ಗಳಿಗೆ ಪ್ರವೇಶಾತಿ ಸಂಪೂರ್ಣವಾಗಿ ಆನ್‍ಲೈನ್ ಆಗಿರುತ್ತದೆ. ಜೊತೆಗೆ ಯಾವುದೇ ಸಂಸ್ಕರಣಾ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದು ಘೋಷಣೆ ಮಾಡಿತ್ತು. ಕೆಲವರು ಇದನ್ನು ದರುಪಯೋಗಪಡಿಸಿಕೊಳ್ಳುತ್ತಿದ್ದಾರೆ.

  • ಬಸ್ ಮೇಲೆಲ್ಲಾ ನೀಲಿ ಚಿತ್ರಗಳ ತಾರೆಯರ ಫೋಟೋ!

    ಬಸ್ ಮೇಲೆಲ್ಲಾ ನೀಲಿ ಚಿತ್ರಗಳ ತಾರೆಯರ ಫೋಟೋ!

    ತಿರುವನಂತಪುರ: ಸಾಮಾನ್ಯವಾಗಿ ಜನರು ತಮ್ಮ ಬಸ್ ಅಥವಾ ವಾಹನದ ಮೇಲೆ ತಮ್ಮ ನೆಚ್ಚಿನ ನಟ-ನಟಿ ಮತ್ತು ದೇವರ ಫೋಟೋವನ್ನು ಹಾಕಿಸುತ್ತಾರೆ. ಆದರೆ ಇಲ್ಲೊಬ್ಬ ಬಸ್ ಮಾಲೀಕ ತನ್ನ ಬಸ್ ಮೇಲೆ ನೀಲಿ ಸಿನಿಮಾಗಳ ತಾರೆಯರ ಫೋಟೋಗಳನ್ನು ಹಾಕಿಸಿದ್ದಾರೆ.

    ಕೇರಳದ ಚಿಕ್ಕೋಸ್ ಎಂಬ ಖಾಸಗಿ ಬಸ್ ಮಾಲೀಕರೊಬ್ಬರು ಈ ರೀತಿ ನೀಲಿ ಚಿತ್ರಗಳ ತಾರೆಯರ ಫೋಟೋಗಳನ್ನು ಪೇಂಟ್ ಮಾಡಿಸಿದ್ದಾರೆ. ನೀಲಿ ಚಿತ್ರ ತಾರೆಯರಾದ ಸನ್ನಿ ಲಿಯೋನ್, ಮಿಯಾ ಖಲೀಫಾ, ಜೊನಿ ಸಿನ್ಸ್, ಜೊರ್ಡಿ ಎಲ್ ನಿನಿ ಮತ್ತು ಕಾಟ್ರ್ನಿ ಕೇನ್ ತಾರೆಯರ ಚಿತ್ರಗಳನ್ನು ಪೇಂಟ್ ಮಾಡಿಸಿದ್ದಾರೆ.

    ಪ್ರಯಾಣಿಕರನ್ನು ಆಕರ್ಷಿಸುವ ಸಲುವಾಗಿ ಬಸ್ ಮೇಲೆ ಈ ರೀತಿಯ ಫೋಟೋ ಹಾಕಿಸಿದ್ದಾರೆ. ಈ ರೀತಿ ಆಕರ್ಷಕವಾಗಿರುವ ಬಸ್ ಫೋಟೋವನ್ನು ಟ್ವೀಟ್ಟರ್ ನಲ್ಲಿ `ಕೇರಳದ  ಈ ಬಸ್ಸಿನಲ್ಲಿ ನಿಮಗೆ ಗಂಭೀರವಾಗಿ ಇರಲು ಸಾಧ್ಯವಿಲ್ಲ’ ಎಂದು ಬರೆದು ಟ್ವಿಟ್ಟಿಗರೊಬ್ಬರು ಪೋಸ್ಟ್ ಮಾಡಿದ್ದಾರೆ.

    ಬಸ್ ಮೇಲೆ ಮಾತ್ರವಲ್ಲದೇ ಬಸ್ ಒಳಗೆ ಕೂಡ ಡಿಜೆ ಸೌಂಡ್ ಸಿಸ್ಟಮ್ ಗಳು ಮತ್ತು ಲೇಸರ್ ಲೈಟಿಂಗ್ ಗಳನ್ನು ಅಳವಡಿಸಿದ್ದಾರೆ. ಈ ಬಸ್ ಸಿದ್ಧಪಡಿಸಲು ಸುಮಾರು 4ರಿಂದ 5 ಲಕ್ಷ ರೂ. ಖರ್ಚಾಗಿದ್ದು, ಈ ರೀತಿಯ 8 ಬಸ್ಸುಗಳನ್ನು ಚಿಕ್ಕೋಸ್ ಹೊಂದಿದೆ” ಎಂದು ಬಸ್ ಪ್ರಯಾಣಿಕರು ಹೇಳಿದ್ದಾರೆ.

    ಈ ಬಸ್ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಟ್ವೀಟ್ ನಲ್ಲಿ ಈ ಪೋಸ್ಟ್ ಹಾಕುತ್ತಿದ್ದಂತೆ ಅನೇಕ ಟ್ವಿಟ್ಟಿಗರು ಪರ- ವಿರೋಧವಾದ ರೀಟ್ವೀಟ್ ಮಾಡಿದ್ದಾರೆ. ಕೆಲವು ಬೇರೆ ಬೇರೆ ರೀತಿ ಪೇಂಟ್ ಮಾಡಿಸಿರುವ ಬಸ್ ಗಳ ಫೋಟೋ ಹಾಕಿ ಪ್ರತಿಕ್ರಿಯಿಸಿದ್ದಾರೆ.

    ಚಿಕ್ಕೋಸ್ ಟೂರ್ಸ್ ಆಂಡ್ ಟ್ರಾವೆಲ್ಸ್ ಹೆಸರಿನಲ್ಲಿರುವ ಸಂಸ್ಥೆ ತನ್ನದೇ ಆದ ಯೂ ಟ್ಯೂಬ್ ಖಾತೆಯನ್ನು ಹೊಂದಿದ್ದು, ಬಸ್ ವಿಡಿಯೋಗಳನ್ನು ಅಪ್ಲೋಡ್ ಮಾಡಿಕೊಂಡಿದೆ.