Tag: Mharashtra

  • ಉದಯನಿಧಿ ಸ್ಟಾಲಿನ್ ವಿರುದ್ಧ ಮುಂಬೈನಲ್ಲಿ ಎಫ್‌ಐಆರ್ ದಾಖಲು

    ಉದಯನಿಧಿ ಸ್ಟಾಲಿನ್ ವಿರುದ್ಧ ಮುಂಬೈನಲ್ಲಿ ಎಫ್‌ಐಆರ್ ದಾಖಲು

    ಮುಂಬೈ: ಡಿಎಂಕೆ ನಾಯಕ ಮತ್ತು ತಮಿಳುನಾಡು (Tamil Nadu) ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರ ಸನಾತನ ಧರ್ಮದ (Sanatana Dharma) ಹೇಳಿಕೆ ಎಲ್ಲೆಡೆ ಆಕ್ರೋಶಕ್ಕೆ ಗುರಿಯಾಗಿರುವ ಬೆನ್ನಲ್ಲೇ ಅವರ ವಿರುದ್ಧ ಮಹಾರಾಷ್ಟ್ರದಲ್ಲಿ (Maharashtra) ಎಫ್‌ಐಆರ್ (FIR) ದಾಖಲಿಸಲಾಗಿದೆ.

    ಮುಂಬೈನ (Mumbai) ಮೀರಾ ರೋಡ್ ಪೊಲೀಸರು ಐಪಿಸಿ ಸೆಕ್ಷನ್ 153 (ಎ) ಮತ್ತು 295 (ಎ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಉದಯನಿಧಿ ವಿರುದ್ಧ ವಿಶ್ವ ಹಿಂದೂ ಪರಿಷತ್ (VHP) ಮೀರಾ ರೋಡ್ ಠಾಣೆಗೆ ದೂರು ನೀಡಿದ ಹಿನ್ನೆಲೆ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಕೋಝಿಕ್ಕೋಡ್‌ನಲ್ಲಿ ಮೃತಪಟ್ಟ ವ್ಯಕ್ತಿಗೆ ನಿಫಾ ವೈರಸ್‌ ದೃಢ

    ಮಂಗಳವಾರ ಮುಂಜಾನೆ ತಮಿಳುನಾಡಿನ ಬಿಜೆಪಿ ನಿಯೋಗವು ಸನಾತನ ಧರ್ಮದ ವಿರುದ್ಧ ಸ್ಟಾಲಿನ್ ಹೇಳಿಕೆ ಕುರಿತು ಎಫ್‌ಐಆರ್ ದಾಖಲಿಸಬೇಕೆಂದು ಒತ್ತಾಯಿಸಿ ರಾಜ್ಯ ಪೊಲೀಸರಿಗೆ ಮನವಿ ಪತ್ರ ನೀಡಿದೆ. ಇದನ್ನೂ ಓದಿ: ಇನ್ಮುಂದೆ ಚುನಾವಣಾ ಸಿಬ್ಬಂದಿಗೆ ಬೂತಲ್ಲೇ ಅಂಚೆ ಮತದಾನ ಕಡ್ಡಾಯ

    ಸೆಪ್ಟೆಂಬರ್ 2ರಂದು ಚೆನ್ನೈನಲ್ಲಿ ತಮಿಳುನಾಡು ಪ್ರಗತಿಪರ ಲೇಖಕರು ಮತ್ತು ಕಲಾವಿದರ ಸಂಘವನ್ನು ಉದ್ದೇಶಿಸಿ ಮಾತನಾಡುವ ಸಂದರ್ಭ ಸ್ಟಾಲಿನ್ ಸನಾತನ ಧರ್ಮವನ್ನು ಕೊರೊನಾ ವೈರಸ್, ಮಲೇರಿಯಾ ಹಾಗೂ ಡೆಂಗ್ಯೂ ರೋಗಕ್ಕೆ ಹೋಲಿಸಿ ಮಾತನಾಡಿದ್ದರು. ಇವರ ಈ ವಿವಾದಾತ್ಮಕ ಹೇಳಿಕೆಗೆ ದೇಶವ್ಯಾಪಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: One Nation One Election: ಸಂವಿಧಾನದ 5 ಆರ್ಟಿಕಲ್‌ಗಳಿಗೆ ಮಾಡಬೇಕಾಗುತ್ತೆ ತಿದ್ದುಪಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಹಾರಾಷ್ಟ್ರ ವಿರುದ್ಧ ಕರ್ನಾಟಕ ಸಂಚು ನಡೆಸ್ತಿದೆ- ಸಂಸತ್‍ನಲ್ಲಿಯೂ ಕ್ಯಾತೆ ತೆಗೆದ ಎನ್‍ಸಿಪಿ ಸಂಸದೆ

    ಮಹಾರಾಷ್ಟ್ರ ವಿರುದ್ಧ ಕರ್ನಾಟಕ ಸಂಚು ನಡೆಸ್ತಿದೆ- ಸಂಸತ್‍ನಲ್ಲಿಯೂ ಕ್ಯಾತೆ ತೆಗೆದ ಎನ್‍ಸಿಪಿ ಸಂಸದೆ

    ನವದೆಹಲಿ: ಮಹಾರಾಷ್ಟ್ರ ವಿರುದ್ಧ ಕರ್ನಾಟಕ (Karnataka) ಸಂಚು ನಡೆಸ್ತಿದೆ. ಮಹಾರಾಷ್ಟ್ರದ (Maharashtra) ಸಮಗ್ರತೆಗೆ ಧಕ್ಕೆ ತರುವಂತಹ ಹೇಳಿಕೆಯನ್ನು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡುತ್ತಿದ್ದಾರೆ ಎಂದು ಎನ್‍ಸಿಪಿ ಸಂಸದೆ ಸುಪ್ರಿಯಾ ಸುಳೆ (Supriya Sule) ಮೊದಲ ದಿನವೇ ಸಂಸತ್‍ನಲ್ಲಿ (Lokasabha) ಗುಡುಗಿದ್ದಾರೆ.

    ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ಪದೇಪದೇ ಬಾಲ ಬಿಚ್ಚುತ್ತಿದೆ. ಹಿರೇಬಾಗೇವಾಡಿ ಘಟನೆ ಬಗ್ಗೆ ಕೇಂದ್ರಕ್ಕೆ ಫಡ್ನಾವೀಸ್ ದೂರು ಕೊಟ್ಟಿದ್ದಾರೆ. ಎಂಎನ್‍ಎಸ್ ಮತ್ತು ಶಿವಸೇನೆಯವರು ಪುಂಡಾಟ ಮೆರೆಯುತ್ತಿದ್ದಾರೆ. ಇನ್ನು, ದಾಳಿ ನಿಲ್ಲಿಸದಿದ್ರೆ ಪರಿಣಾಮ ನೆಟ್ಟಗಿರಲ್ಲ ಎಂದು ಕರ್ನಾಟಕಕ್ಕೆ ಶರದ್ ಪವಾರ್ ವಾರ್ನಿಂಗ್ ನೀಡುತ್ತಿದ್ದಾರೆ. ಇದೀಗ ಮೊದಲ ದಿನದ ಸಂಸತ್‍ನಲ್ಲಿ ಸಂಸದೆ ಸುಪ್ರಿಯಾ ಸುಳೆಯವರೂ ಬೊಮ್ಮಾಯಿ ವಿರುದ್ಧ ಕಿಡಿಕಾರಿದರು.

    ಗಡಿಯಲ್ಲಿ ಮಹಾರಾಷ್ಟ್ರಿಗರ ಮೇಲೆ ಕರ್ನಾಟಕ ದಾಳಿ ನಡೆಸ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಗೃಹಮಂತ್ರಿ ಅಮಿತ್ ಶಾ ಮಧ್ಯಪ್ರವೇಶ ಮಾಡ್ಬೇಕು ಎಂದು ಆಗ್ರಹಿಸಿದ್ದಾರೆ. ಕೊಲೆ ಆರೋಪಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದ ತಾಲಿಬಾನ್‌

    ಇದಕ್ಕೆ ಶಿವಕುಮಾರ್ ಉದಾಸಿ ತಿರುಗೇಟು ನೀಡಿದ್ದಾರೆ. ಗಡಿ ಕ್ಯಾತೆ ತೆಗೆದಿದ್ದೇ ಅವರು, ಸುಮ್ನೆ ಕನ್ನಡಿಗರ ಮೇಲೆ ಗೂಬೆ ಕೂರಿಸ್ತಿದ್ದಾರೆ ಎಂದಿದ್ದಾರೆ. ಆದರೆ, ಅದ್ಯಾಕೋ ಏನೋ ಬೊಮ್ಮಾಯಿ ಸರ್ಕಾರ ಮಾತ್ರ ಶಾಂತಿ ಮಂತ್ರ ಪಠಿಸುತ್ತಿದೆ. ಸಿಎಂ ಜೊತೆ ಚರ್ಚೆ ಬಳಿಕ ಮಾತಾಡಿದ ಸಚಿವ ಗೋವಿಂದ ಕಾರಜೋಳ ಅವರು ಕೂಡ, ಮಹಾರಾಷ್ಟ್ರದ ಪುಂಡರನ್ನು ತೆಗಳೋದಿಕ್ಕಿಂತಲೂ ಹೆಚ್ಚಾಗಿ ಸಿದ್ದರಾಮಯ್ಯರನ್ನು ಟಾರ್ಗೆಟ್ ಮಾಡಿದಂತೆ ಕಂಡುಬಂತು. ಸಿದ್ದರಾಮಯ್ಯ ಬಯಸಿದಂತೆ ರಾಜಕೀಯ ಮಾಡೋಕೆ ಬಿಜೆಪಿ ಸಿದ್ಧವಿಲ್ಲ. ಯಾವಾಗ ಸಭೆ ಕರೆಯಬೇಕು ಅಂತ ನಮಗೆ ಗೊತ್ತಿದೆ ಎಂದರು. ಇನ್ನು, ಸಿಟಿ ರವಿ ಎಂದಿನಂತೆ, ನಾವೆಲ್ಲಾ ಭಾರತೀಯರು ಎಂಬ ಭಾವನೆ ಇಟ್ಕೊಂಡು ಕೆಲಸ ಮಾಡ್ಬೇಕು ಅಂತಾ ಬೋಧಿಸಿದರು. ಪಾರಿವಾಳ ಹಿಡಿಯಲು ಹೋಗಿ ಕರೆಂಟ್‌ ಶಾಕ್‌ ಪ್ರಕರಣ – ಚಿಕಿತ್ಸೆ ಫಲಿಸದೇ ಮತ್ತೊಬ್ಬ ಬಾಲಕ ಸಾವು

    Live Tv
    [brid partner=56869869 player=32851 video=960834 autoplay=true]