Tag: MHA

  • ಭಾರತದ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಲಖ್ಬೀರ್ ಸಿಂಗ್ ಲಾಂಡಾ ಭಯೋತ್ಪಾದಕ ಅಂತ ಘೋಷಣೆ – ಕೇಂದ್ರ ಅಧಿಕೃತ ಪ್ರಕಟ

    ಭಾರತದ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಲಖ್ಬೀರ್ ಸಿಂಗ್ ಲಾಂಡಾ ಭಯೋತ್ಪಾದಕ ಅಂತ ಘೋಷಣೆ – ಕೇಂದ್ರ ಅಧಿಕೃತ ಪ್ರಕಟ

    ನವದೆಹಲಿ: ಕೆನಡಾ ಮೂಲದ ದರೋಡೆಕೋರ (Canada-Based Gangster) ಲಖ್ಬೀರ್ ಸಿಂಗ್ ಲಾಂಡಾನನ್ನ ಭಯೋತ್ಪಾದಕ ಎಂದು ಭಾರತದ ಕೇಂದ್ರ ಗೃಹ ಸಚಿವಾಲಯ (MHA) ಘೋಷಿಸಿದ್ದು, ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದೆ.

    ಮಾಹಿತಿ ಪ್ರಕಾರ, 1989ರಲ್ಲಿ ಪಂಜಾಬ್‌ನ ತರ್ನ್ ತರನ್ ಜಿಲ್ಲೆಯಲ್ಲಿ ಜನಿಸಿದ ಲಾಂಡಾ (Lakhbir Singh Land) 2017ರಲ್ಲಿ ಕೆನಡಾಕ್ಕೆ ಪಲಾಯನ ಮಾಡಿದ. ಕೆಲ ವರ್ಷಗಳಿಂದ ಕೆನಡಾದಲ್ಲಿ ನೆಲೆಸಿದ್ದು, ಖಲಿಸ್ತಾನಿ ಗ್ರೂಪ್ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ)ಗೆ ಸೇರಿದ್ದಾನೆ. 2021ರಲ್ಲಿ ಮೊಹಾಲಿಯಲ್ಲಿರುವ ಪಂಜಾಬ್ ಪೊಲೀಸ್ (Punjab Police) ಇಂಟೆಲಿಜೆನ್ಸ್ ಮುಖ್ಯಕಚೇರಿ ಮೇಲೆ ರಾಕೆಟ್ ದಾಳಿಯ ಯೋಜನೆಯಲ್ಲಿ ಈತ ಭಾಗಿಯಾಗಿದ್ದನು ಎಂದು ವಿವರಿಸಲಾಗಿದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ನಿಷೇಧ: ಪ್ರಧಾನಿ ಘೋಷಣೆ 

    ಅಲ್ಲದೇ ಈತ ಪಾಕಿಸ್ತಾನ ಮೂಲದ ದರೋಡೆಕೋರ ಹರ್ವಿಂದರ್ ಸಿಂಗ್‌ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದ. ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವ ವಿವಿಧ ಘಟಕಗಳಿಗೆ ಸುಧಾರಿತ ಸ್ಫೋಟಕ ಸಾಧನಗಳು, ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನ ಪೂರೈಕೆ ಮಾಡುತ್ತಿದ್ದ. ಪಂಜಾಬ್‌ನಲ್ಲಿ ಮಾತ್ರವಲ್ಲದೇ ದೇಶದ ಇತರ ಭಾಗಗಳಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಹಣ ಪೂರೈಕೆ ಮಾಡುತ್ತಿದ್ದ. ಹೀಗೆ ಸಾಕಷ್ಟು ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗಿಯಾಗಿರುವ ಲಾಂಡಾ, ಕೆನಡಾ ಮೂಲದ ಹಲವಾರು ಖಲಿಸ್ತಾನಿ ಭಯೋತ್ಪಾದಕರೊಂದಿಗೆ ನಿಕಟ ಸಂಬಂಧ ಹೊಂದಿದ್ದ. ಸಿಖ್ಸ್ ಫಾರ್ ಜಸ್ಟಿಸ್‌ನ ಗುರುಪತ್‌ವಂತ್ ಸಿಂಗ್ ಪನ್ನುನ್ ಮತ್ತು ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್)ನ ಮೃತ ಹರ್ದೀಪ್ ಸಿಂಗ್ ನಿಜ್ಜರ್ ಜೊತೆಗೂ ಸಂಪರ್ಕ ಬೆಳೆಸಿದ್ದ ಎಂದು ಗೃಹ ಸಚಿವಾಲಯ ತಿಳಿಸಿದೆ.

    2022ರ ಡಿಸೆಂಬರ್‌ನಲ್ಲಿ ತರ್ನ್ ತರನ್‌ನಲ್ಲಿರುವ ಸರ್ಹಾಲಿ ಪೊಲೀಸ್ ಠಾಣೆಯಲ್ಲಿ ಆರ್‌ಪಿಜಿ ದಾಳಿ ಹಾಗೂ ಇತರ ಭಯೋತ್ಪಾದಕ ಚಟುವಟಿಕೆಗಳಲ್ಲಿಯೂ ಭಾಗಿಯಾಗಿದ್ದಾನೆ. ಜೊತೆಗೆ ಭಾರತದ ವಿರುದ್ಧ ಷಡ್ಯಂತ್ರಗಳನ್ನು ರೂಪಿಸುವಲ್ಲಿಯೂ ತೊಡಗಿದ್ದಾನೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಯುದ್ಧಪೀಡಿತ ಗಾಜಾದಲ್ಲಿ 5 ಕಿಮೀ ನಡೆದು ಆಸ್ಪತ್ರೆಯಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

  • ಪಿಎಫ್‍ಐ ವಿರುದ್ಧದ ಪ್ರಕರಣ – ತಮಿಳುನಾಡಿನ ಹಲವೆಡೆ ಎನ್‍ಐಎ ದಾಳಿ

    ಪಿಎಫ್‍ಐ ವಿರುದ್ಧದ ಪ್ರಕರಣ – ತಮಿಳುನಾಡಿನ ಹಲವೆಡೆ ಎನ್‍ಐಎ ದಾಳಿ

    ಚೆನೈ: ನಿಷೇಧಿತ ಭಯೋತ್ಪಾದಕ ಸಂಘಟನೆ ಪಿಎಫ್‍ಐ (PFI) ವಿರುದ್ಧದ ತನಿಖೆಗೆ ಸಂಬಂಧಿಸಿದಂತೆ ಎನ್‍ಐಎ (NIA) ಮಂಗಳವಾರ ತಮಿಳುನಾಡಿನ (Tamil Nadu) ನಾಲ್ಕು ಜಿಲ್ಲೆಗಳಲ್ಲಿ ದಾಳಿ ನಡೆಸಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಮಧುರೈ, ಚೆನ್ನೈ, ದಿಂಡಿಗಲ್ ಮತ್ತು ಥೇಣಿ ಜಿಲ್ಲೆಗಳ ಆರು ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಕಳೆದ ಸೆ. 19 ರಂದು ಪ್ರಕರಣ ದಾಖಲಾದಾಗಿನಿಂದ ಇದುವರೆಗೂ ಪ್ರಕರಣದಲ್ಲಿ 10 ಜನರನ್ನು ಬಂಧಿಸಲಾಗಿದೆ. ಬಂಧಿತರಾಗಿದ್ದ ಆರೋಪಿಗಳು ನೆಲೆಸಿದ್ದ ಸ್ಥಳಗಳಲ್ಲಿ ಶೋಧಕಾರ್ಯ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮುಸ್ಲಿಂ ಮೀಸಲಾತಿ ರದ್ದು ವಿಚಾರ- ಸುಪ್ರೀಂನಲ್ಲಿ ಇಂದು ವಿಚಾರಣೆ

    ಬಂಧಿತರಿಂದ ಹಲವಾರು ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅಲ್ಲದೆ ಆರೋಪಿಗಳು ಕೋಮು ಸೌಹಾರ್ದತೆಗೆ ಧಕ್ಕೆ ತರುವ ಚಟುವಟಿಕೆಯಲ್ಲಿ ತೊಡಗಿದ್ದರು. ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರು. ಅಲ್ಲದೆ ಮಾರಕಾಸ್ತ್ರಗಳ ಬಳಕೆಗೆ ಯುವಕರ ಗುಂಪಿಗೆ ತರಬೇತಿ ನೀಡಿತ್ತಿದ್ದರು ಎಂದು ಎನ್‍ಐಎ ಆರೋಪಿಸಿತ್ತು.

    ವಿವಿಧ ರಾಜ್ಯಗಳ ಪೊಲೀಸರು ಹಾಗೂ ಎನ್‍ಐಎ ನಡೆಸಿದ ತನಿಖೆಗಳಲ್ಲಿ ಪಿಎಫ್‍ಐ ಸಂಘಟನೆ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು. ಇದಾದ ನಂತರ ಕಳೆದ ಸೆಪ್ಟೆಂಬರ್‌ನಲ್ಲಿ ಪಿಎಫ್‍ಐ ಹಾಗೂ ಅದರ ಅನೇಕ ಅಂಗಸಂಸ್ಥೆಗಳನ್ನು ಗೃಹ ಸಚಿವಾಲಯ (Ministry of Home Affairs), ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಿ ನಿಷೇಧಿಸಿತ್ತು. ಇದನ್ನೂ ಓದಿ: ಕರಿ ಜೊತೆಗೆ ಅನ್ನ ಮಾಡಿಲ್ಲ ಅಂತಾ ಪತ್ನಿಯನ್ನ ಹೊಡೆದು ಕೊಂದ ಪಾಪಿ ಗಂಡ

  • 3 ದಿನಗಳ ಹಿಂದೆ ಸಭೆ – 6 ಕಂಟ್ರೋಲ್‌ ರೂಂ ಓಪನ್‌ – PFI, SDPI ಮೇಲೆ NIA, ED ದಾಳಿಯ ಇನ್‌ಸೈಡ್‌ ನ್ಯೂಸ್‌

    3 ದಿನಗಳ ಹಿಂದೆ ಸಭೆ – 6 ಕಂಟ್ರೋಲ್‌ ರೂಂ ಓಪನ್‌ – PFI, SDPI ಮೇಲೆ NIA, ED ದಾಳಿಯ ಇನ್‌ಸೈಡ್‌ ನ್ಯೂಸ್‌

    ನವದೆಹಲಿ: ಕಳೆದ ಮೂರು ದಿನಗಳಿಂದ ಗೃಹ ಸಚಿವಾಲಯದ (MHA) ಅಧಿಕಾರಿಗಳು ಸಭೆ ನಡೆಸಿ ಪ್ರತ್ಯೇಕ ಕಂಟ್ರೋಲ್‌ ರೂಮ್‌ (Control Room) ತೆರೆದು ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(PFI) ಪಿಎಫ್‌ಐ ಮೇಲೆ ದಾಳಿ ನಡೆಸಿದೆ. ಇಲ್ಲಿಯವರೆಗೆ ಕೆಲ ಜಾಗಗಳಲ್ಲಿ ಎನ್‌ಐಎ (NIA) ದಾಳಿ ನಡೆಸಿದ್ದರೆ, ಮೊದಲ ಬಾರಿ ದೊಡ್ಡ ಮಟ್ಟದಲ್ಲಿ ಇಡಿ ಜೊತೆ ಸೇರಿ ದೇಶದ 11 ರಾಜ್ಯಗಳಲ್ಲಿ ದಾಳಿ ನಡೆಸಲಾಗಿದೆ.

    ದೇಶ ವಿರೋಧಿ ಚಟುವಟಿಕೆಗಳಲ್ಲಿ ಪಿಎಫ್‌ಐ (PFI) ಭಾಗಿಯಾಗಿದೆ ಎಂಬ ಆರೋಪ ಈ ಕೇಳಿ ಬಂದಿತ್ತು. ಬಿಜೆಪಿ (BJP) ಮತ್ತು ಕಾಂಗ್ರೆಸ್‌ (Congress) ಪಕ್ಷಗಳು ಎಸ್‌ಡಿಪಿಐ (SDPI), ಪಿಎಫ್‌ಐ ನಿಷೇಧಿಸುವಂತೆ ಆಗ್ರಹಿಸಿದ್ದವು. ಇಲ್ಲಿಯವರೆಗೆ ಕೇಂದ್ರ ಸರ್ಕಾರ (Central Government) ಯಾವುದೇ ಕಠಿಣ ಕ್ರಮವನ್ನು ಕೈಗೊಂಡಿರಲಿಲ್ಲ. ಹತ್ಯೆಯಾದ ಸಂದರ್ಭದಲ್ಲಿ ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಸರಿಯಾದ ಪ್ಲ್ಯಾನ್‌ ಮಾಡಿಕೊಂಡೇ ದೇಶಾದ್ಯಂತ ಪಿಎಫ್‌ಐ ನಾಯಕರ ಮೇಲೆ ದಾಳಿ ನಡೆಸಿ ಶಾಕ್‌ ಕೊಟ್ಟಿದೆ. ಇದನ್ನೂ ಓದಿ: SDPI, PFI ಮೇಲೆ NIA, ED ದಾಳಿ – ಕರ್ನಾಟಕದಲ್ಲಿ 20, ದೇಶಾದ್ಯಂತ 106 ಮಂದಿ ಅರೆಸ್ಟ್‌

    ಏನಿದು ಸಭೆಯ ರಹಸ್ಯ?
    ಮೂರು ದಿನಗಳ ಹಿಂದೆಯಷ್ಟೇ ಇಡಿ, ಎನ್‌ಐಎ ಹಾಗೂ ಗುಪ್ತಚರ ಇಲಾಖೆ (Intelligence Bureau) ಅಧಿಕಾರಿಗಳೊಂದಿಗೆ ಗೃಹ ಸಚಿವಾಲಯವು ಸಭೆ ನಡೆಸಿದೆ. ಇಲ್ಲಿಯವರೆಗೆ ಯಾವೆಲ್ಲ ಪ್ರಕರಣ ದಾಖಲಾಗಿದೆ? ಈ ಸಂಘಟನೆಗೆ ಹಣ ಎಲ್ಲಿಂದ ಬರುತ್ತಿದೆ ಈ ಎಲ್ಲಾ ವಿಚಾರಗಳನ್ನು ಮಾಹಿತಿ ಕಲೆ ಹಾಕಿ ಚರ್ಚೆ ನಡೆಸಲಾಗಿತ್ತು. ಅದಕ್ಕಾಗಿ 6 ಕಂಟ್ರೋಲ್‌ ರೂಂಗಳನ್ನು ತೆರಲಾಗಿತ್ತು. ಪ್ರತಿ ರಾಜ್ಯದಲ್ಲಿರುವ ನಾಯಕರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಲಾಗಿತ್ತು. ಸಭೆ ನಡೆದ ತಡರಾತ್ರಿಯಿಂದಲೇ ಕಾರ್ಯಾಚರಣೆ ಆರಂಭವಾಗಿತ್ತು. ಪಿಎಫ್‌ಐ ಕಾರ್ಯಕರ್ತರು (PFI Workers) ಗಲಾಟೆ ಮಾಡಬಹುದು ಎಂಬ ಕಾರಣಕ್ಕೆ ಬಹುತೇಕ ಕಡೆ ರಾತ್ರಿಯೇ ಕಾರ್ಯಚರಣೆ ನಡೆಸಿ ನಾಯಕರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಉಗ್ರ ಸಂಘಟನೆ ಜೊತೆ ಸಂಪರ್ಕ-10 ರಾಜ್ಯಗಳ SDPI, PFI ಕಚೇರಿ, ನಾಯಕರ ಮನೆ ಮೇಲೆ NIA ದಾಳಿ

    ಆರೋಪ ಏನು?
    ಪಶ್ಚಿಮ ಏಷ್ಯಾದ ದೇಶಗಳಾದ ಕತಾರ್‌, ಕುವೈತ್‌, ಸೌದಿ ಅರೇಬಿಯಾ, ಟರ್ಕಿಯಿಂದ ಈ ಸಂಘಟನೆಗಳಿಗೆ ಅಕ್ರಮವಾಗಿ ಹಣ ಬರುತ್ತಿದೆ ಎನ್ನವ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದೆ. ಭಾರತದಲ್ಲಿ ಯುವಕರ ತಲೆ ಕೆಡಿಸಿ ಭಯೋತ್ಪಾದಕ ಕೃತ್ಯ ಎಸಗಲು ಈ ಸಂಘಟನೆಗಳು ಪ್ರೋತ್ಸಾಹ ನೀಡುತ್ತಿವೆ. ವಿದೇಶದಿಂದ ಬಂದ ನಿಧಿಯನ್ನು ದೇಶಾದ್ಯಂತ ಭಯೋತ್ಪಾದಕ ಚಟುವಟಿಕೆಗಳಿಗೆ ಮಾತ್ರವಲ್ಲದೆ ಯುವಕರಲ್ಲಿ ಮತಾಂಧತೆಯನ್ನು ಬೆಳೆಸಲು ಬಳಸಲಾಗುತ್ತಿದೆ. ಈ ಸಂಘಟನೆಯು ಮುಸ್ಲಿಂ ಸಹೋದರತ್ವ ಹೊಂದಿರುವಂತಹ ಪ್ಯಾನ್-ಇಸ್ಲಾಮಿಸ್ಟ್ ಸಂಘಟನೆಯೊಂದಿಗೆ ಸಂಪರ್ಕವನ್ನು ಹೊಂದಿದೆ.

    ಈ ಕುರಿತು ಮಾತನಾಡಿರುವ ಉತ್ತರ ಪ್ರದೇಶದ ಮಾಜಿ ಡಿಜಿಪಿ (DGP) ಬ್ರಿಜ್‌ಲಾಲ್, ಪಿಎಫ್‌ಐ ಅಪಾಯಕಾರಿ ಸಂಘಟನೆಯಾಗಿದ್ದು, ದೇಶದ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ಸಕ್ರಿಯವಾಗಿದೆ. ಜೊತೆಗೆ ನೇರವಾಗಿ ಪಾಕಿಸ್ತಾನದೊಂದಿಗೆ ಸಂಬಂಧ ಹೊಂದಿದೆ. ಈ ಸಂಘಟನೆಯ ಸದಸ್ಯರು ಭಾರತೀಯ ಮುಜಾಹಿದ್ದೀನ್‌ನೊಂದಿಗೆ ನೇರ ಸಂಪರ್ಕ ಹೊಂದಿದ್ದಾರೆ. ದೇಶದಲ್ಲಿ ಅನೇಕ ದೊಡ್ಡ ಸ್ಫೋಟಗಳನ್ನು ನಡೆಸಲು ಇವರೇ ಮುಖ್ಯ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: NIA ದಾಳಿ: ದೇಶದಲ್ಲಿ ಟೆರರಿಸ್ಟ್‌ಗಳನ್ನ ಹುಟ್ಟುಹಾಕಿದ್ದೇ ಕಾಂಗ್ರೆಸ್ – ಆರಗ ಜ್ಞಾನೇಂದ್ರ

    ಭಾರತದಲ್ಲಿ ನಿಷೇಧಕ್ಕೆ ಒಳಗಾಗಿರುವ ಸ್ಟುಡೆಂಟ್ಸ್‌ ಇಸ್ಲಾಮಿಕ್‌ ಮೂವ್‌ಮೆಂಟ್‌ ಆಫ್‌ ಇಂಡಿಯಾ(SIMI) ನಾಯಕರೇ ಪಿಎಫ್‌ಐ- ಎಸ್‌ಡಿಪಿಐ ಸಂಘಟನೆಯ ಪ್ರಮುಖ ನಾಯಕರಾಗಿದ್ದಾರೆ. ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಬೇಕು ಎನ್ನುವುದೇ ಇವರ ಮುಖ್ಯ ಉದ್ದೇಶ.

    ಸದ್ಯ ಭಾರತದಲ್ಲಿರುವ ಶಿಯಾ, ಸುನ್ನಿ, ಸೂಫಿ, ದಿಯೋಬಂದ್‌ ಪಂಗಡದ ನಾಯಕರು ಪಿಎಫ್‌ಐ ಹಾಗೂ ಎಸ್‌ಡಿಪಿಐನಲ್ಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಇನ್ಮುಂದೆ ನಿರ್ಬಂಧ ಇಲ್ಲದೇ ಎನ್‌ಆರ್‌ಐಗಳು 10 ಲಕ್ಷ ಕಳುಹಿಸಬಹುದು: ಮೊದಲು FCRA ನಿಯಮ ಏನಿತ್ತು? ಏನು ಬದಲಾವಣೆಯಾಗಿದೆ?

    ಇನ್ಮುಂದೆ ನಿರ್ಬಂಧ ಇಲ್ಲದೇ ಎನ್‌ಆರ್‌ಐಗಳು 10 ಲಕ್ಷ ಕಳುಹಿಸಬಹುದು: ಮೊದಲು FCRA ನಿಯಮ ಏನಿತ್ತು? ಏನು ಬದಲಾವಣೆಯಾಗಿದೆ?

    ನವದೆಹಲಿ: ಇನ್ಮುಂದೆ ನಿರ್ಬಂಧ ಇಲ್ಲದೇ  ಅನಿವಾಸಿ ಭಾರತೀಯರು(ಎನ್‌ಆರ್‌ಐ) ವಾರ್ಷಿಕವಾಗಿ 10 ಲಕ್ಷ ರೂ. ಕಳುಹಿಸಬಹುದು.

    ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆಯ (FCRA) ಕೆಲವು ನಿಯಮಗಳಿಗೆ ಕೇಂದ್ರ ಗೃಹ ಸಚಿವಾಲಯ ತಿದ್ದುಪಡಿಗಳನ್ನು ಮಾಡಿದೆ. ದೇಣಿಗೆ ಮೊತ್ತ ಹೆಚ್ಚಳ ಮತ್ತು ಸ್ವೀಕಾರದ ಮಾಹಿತಿ ಸಲ್ಲಿಸುವ ಅವಧಿಯನ್ನು ಹೆಚ್ಚಿಸಲಾಗಿದೆ. ಈ ತಿದ್ದುಪಡಿಯಿಂದ ಸಂಬಂಧಿಕರಿಂದ ವಿದೇಶಿ ದೇಣಿಗೆ ಪಡೆಯುವ ವ್ಯಕ್ತಿಗಳು ಹಾಗೂ ಸಂಘ ಸಂಸ್ಥೆಗಳಿಗೆ ಅನುಕೂಲವಾಗಲಿದೆ.

    ತಿದ್ದುಪಡಿ ಏನು?
    ಕೇಂದ್ರ ಗೃಹ ಸಚಿವಾಲಯ ಶುಕ್ರವಾರವೇ ಗೆಜೆಟ್‌ ಅಧಿಸೂಚನೆ ಪ್ರಕಟಿಸಿ 2022ರ ವಿದೇಶಿ ದೇಣಿಗೆ ನಿಯಂತ್ರಣ ತಿದ್ದುಪಡಿ ನಿಯಮಗಳನ್ನು ಜಾರಿಗೆ ತಂದಿದೆ. 2011ರ ವಿದೇಶಿ ದೇಣಿಗೆ ನಿಯಂತ್ರಣ ನಿಯಮಗಳ ಪ್ರಕಾರ ‘1 ಲಕ್ಷ ರೂಪಾಯಿ‘ ಪದವನ್ನು ‘10 ಲಕ್ಷ ರೂಪಾಯಿ‘ ಮತ್ತು ‘30 ದಿನಗಳು’ ಪದವನ್ನು ‘3 ತಿಂಗಳು‘ ಎಂದು ತಿದ್ದುಪಡಿ ಮಾಡಲಾಗಿದೆ.

    ಈ ಮೊದಲು ಹಣಕಾಸು ವರ್ಷವೊಂದರಲ್ಲಿ ಯಾವುದೇ ವ್ಯಕ್ತಿಯು 1 ಲಕ್ಷ ರೂ. ಅಥವಾ ಅದಕ್ಕಿಂತಲೂ ಹೆಚ್ಚಿನ ಮೊತ್ತದ ವಿದೇಶಿ ದೇಣಿಗೆಯನ್ನು ಸ್ವೀಕರಿಸಿದ್ದಲ್ಲಿ ದೇಣಿಗೆ ಪಡೆದ ದಿನದಿಂದ 30 ದಿನದ ಒಳಗೆ ಕೇಂದ್ರ ಸರಕಾರಕ್ಕೆ ಪೂರ್ಣ ವಿವರಗಳನ್ನು ಸಲ್ಲಿಸುವುದು ಕಡ್ಡಾಯವಾಗಿತ್ತು. ತಿದ್ದುಪಡಿಯಾದ ಬಳಿಕ ವಿದೇಶದಲ್ಲಿರುವ ಸಂಬಂಧಿಕರು ತಮ್ಮ ಕುಟುಂಬಸ್ಥರು ಅಥವಾ ಬೇರೆಯವರಿಗೆ ಕೇಂದ್ರದ ಗಮನಕ್ಕೆ ತರದೇ ಗರಿಷ್ಟ 10 ಲಕ್ಷ ರೂ.ವರೆಗೆ ದೇಣಿಗೆ ಕಳುಹಿಸಲು ಅನುಮತಿ ನೀಡಲಾಗಿದೆ. 10 ಲಕ್ಷ ರೂ.ಗಿಂತ ಹೆಚ್ಚಿನ ದೇಣಿಗೆ ಕಳಹಿಸಿದ್ದಲ್ಲಿ ದೇಣಿಗೆ ಸ್ವೀಕಾರದ ದಿನಾಂಕದಿಂದ 30 ದಿನಗಳ ಬದಲಿಗೆ 3 ತಿಂಗಳೊಳಗಾಗಿ ಕೇಂದ್ರಕ್ಕೆ ಮಾಹಿತಿಯನ್ನು ಸಲ್ಲಿಸಬೇಕಾಗುತ್ತದೆ.

    ದೇಣಿಗೆ ಸ್ವೀಕರಿಸಲು ‘ನೋಂದಣಿ’ ಮಾಹಿತಿ ಅಥವಾ ‘ಪೂರ್ವ ಅನುಮತಿ’ಗೆ ಸಂಬಂಧಿಸಿದಂತೆ ನಿಯಮ 9ಕ್ಕೆ ಕೂಡ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಇಲ್ಲಿಯವರೆಗೆ ದೇಣಿಗೆ ಪಡೆದ ಹಣದ ವಹಿವಾಟಿಗೆ ಬಳಸಲಾಗುವ ಬ್ಯಾಂಕ್‌ ಅಕೌಂಟ್‌ ಕುರಿತು 30 ದಿನದೊಳಗೆ ಕೇಂದ್ರಕ್ಕೆ ವಿವರ ಸಲ್ಲಿಸಬೇಕಿತ್ತು. ಈ ನಿಯಮವನ್ನು ಸಡಿಲಗೊಳಿಸಿದ್ದು, 45 ದಿನಗಳವರೆಗೆ ಹೆಚ್ಚಿಸಲಾಗಿದೆ.  ಇದನ್ನು ಓದಿ: 12 ಸಾವಿರ NGOಗಳ ವಿದೇಶಿ ದೇಣಿಗೆ ಸ್ವೀಕಾರ ಪರವಾನಿಗೆ ರದ್ದು

    ಹೊಸ ನಿಯಮಗಳಲ್ಲಿ ವಿದೇಶಿ ದೇಣಿಗೆ ಸ್ವೀಕರಿಸುವ ಸಂಸ್ಥೆಗಳು ಆ ಮೊತ್ತದಲ್ಲಿ ಶೇ. 20ಕ್ಕಿಂತಲೂ ಹೆಚ್ಚಿನ ಹಣವನ್ನು ಆಡಳಿತಾತ್ಮಕ ಕೆಲಸಗಳಿಗೆ ಬಳಸುವಂತಿಲ್ಲ ಎಂಬ ಷರತ್ತನ್ನು ಸೇರಿಸಲಾಗಿದೆ. ಈ ಮೊದಲು ಇದರ ಮಿತಿ ಶೇ. 50 ರಷ್ಟಿತ್ತು.

    ವಿದೇಶದಿಂದ ನೆರವು ಪಡೆದು ದೇಶದ ಒಳಗಡೆ ಉಗ್ರ ಚಟುವಟಿಕೆ, ರೈತರ ಪ್ರತಿಟಭನೆ, ಬಂದ್‌ ಇತ್ಯಾದಿ ಚಟುವಟಿಕೆಗಳಿಗೆ ಎನ್‍ಜಿಒಗಳ ಹಣ ಬಳಕೆಯಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಗೃಹ ಸಚಿವಾಲಯ FCRA ಗೆ ತಿದ್ದುಪಡಿ ತಂದಿತ್ತು. ಎನ್‌ಜಿಒಗಳು ಯಾವುದೇ ರಾಜಕೀಯ ಪಕ್ಷಗಳ ಜೊತೆ ನೇರವಾದ ನಂಟು ಹೊಂದಿರಬಾರದು ಎಂದು ಸೂಚಿಸಲಾಗಿದೆ.

    ವಿದೇಶದಿಂದ ಹಣ ಪಡೆಯುವ ಎನ್‍ಜಿಒಗಳು ದೆಹಲಿಯ ಎಸ್‍ಬಿಐ ಕಚೇರಿಯಲ್ಲಿ ಖಾತೆ ತೆರೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಅಲ್ಲದೇ ಹಣದ ಲೆಕ್ಕಪತ್ರ ಸಂಬಂಧ ಹಲವು ಬಿಗಿ ನಿಯಮಗಳನ್ನು ಪಾಲನೆ ಮಾಡಬೇಕೆಂದು ಎನ್‍ಜಿಒಗಳಿಗೆ ಗೃಹ ಇಲಾಖೆ ಸೂಚಿಸಿದೆ.

    Live Tv

  • ಭಯೋತ್ಪಾದನೆಯಲ್ಲಿ ತೊಡಗಲು ಮುಸ್ಲಿಂ ಯುವಕರಿಗೆ ಪ್ರೇರಣೆ- 5 ವರ್ಷ ಜಾಕಿರ್‌ ನಾಯಕ್‌ ಸಂಸ್ಥೆ ಬ್ಯಾನ್‌

    ಭಯೋತ್ಪಾದನೆಯಲ್ಲಿ ತೊಡಗಲು ಮುಸ್ಲಿಂ ಯುವಕರಿಗೆ ಪ್ರೇರಣೆ- 5 ವರ್ಷ ಜಾಕಿರ್‌ ನಾಯಕ್‌ ಸಂಸ್ಥೆ ಬ್ಯಾನ್‌

    ನವದೆಹಲಿ: ಇಸ್ಲಾಮಿಕ್‌ ರಿಸರ್ಚ್‌ ಫೌಂಡೇಷನ್‌ (IRF) ಕಾನೂನು ಬಾಹಿರ ಸಂಘಟನೆ. ಹೀಗಾಗಿ ಅದನ್ನು ಐದು ವರ್ಷಗಳ ಕಾಲ ನಿಷೇಧಿಸಲಾಗಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ (Ministry of Home Affairs) ತಿಳಿಸಿದೆ.

    ಈ ಸಂಬಂಧ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಐಆರ್‌ಎಫ್‌ನ ಸಂಸ್ಥಾಪಕ ಜಾಕಿರ್ ನಾಯ್ಕ್ ಅವರ ಭಾಷಣಗಳು ಆಕ್ಷೇಪಾರ್ಹವಾಗಿವೆ. ಏಕೆಂದರೆ ಅವರು ಭಯೋತ್ಪಾದಕರನ್ನು ಹೊಗಳುತ್ತಿದ್ದಾರೆ. ಪ್ರತಿಯೊಬ್ಬ ಮುಸ್ಲಿಮರೂ ಭಯೋತ್ಪಾದಕರಾಗಬೇಕು ಎಂದು ಘೋಷಿಸಿದ್ದಾರೆ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ಮತ್ತೊಂದು ಹಿಂದೂಯೇತರ ನೃತ್ಯಗಾರ್ತಿಗೆ ದೇವಸ್ಥಾನದ ಉತ್ಸವದಲ್ಲಿ ನಿರ್ಬಂಧ

    ಐಆರ್‌ಎಫ್ ಸಂಸ್ಥಾಪಕರು ಯುವಕರನ್ನು ಇಸ್ಲಾಂಗೆ ಬಲವಂತವಾಗಿ ಮತಾಂತರಗೊಳಿಸುವುದನ್ನು ಉತ್ತೇಜಿಸುತ್ತಿದ್ದಾರೆ. ಆತ್ಮಾಹುತಿ ಬಾಂಬ್ ದಾಳಿಯನ್ನು ಸಮರ್ಥಿಸುತ್ತಾರೆ. ಹಿಂದೂಗಳು, ಹಿಂದೂ ದೇವರುಗಳು ಮತ್ತು ಇತರ ಧರ್ಮಗಳ ವಿರುದ್ಧ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ. ಅದು ಇತರ ಧರ್ಮಗಳಿಗೆ ಅವಮಾನಕರವಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿಕೊಳ್ಳಲು ವಿಶ್ವ ಹಾಗೂ ಭಾರತದ ಮುಸ್ಲಿಂ ಯುವಜನತೆ ಮತ್ತು ಉಗ್ರಗಾಮಿಗಳಿಗೆ ನಾಯಕ್‌ ಪ್ರೇರಣೆಯಾಗಿದ್ದಾರೆ ಎಂದು ಸಚಿವಾಲಯ ಹೇಳಿದೆ. ಇದನ್ನೂ ಓದಿ: ನನ್ನ ದೇಶಕ್ಕಾಗಿ ಪ್ರಾಣವನ್ನೂ ಕೊಡಬಲ್ಲೆ: ಬಿಜೆಪಿಗೆ ಕೇಜ್ರಿವಾಲ್‌ ಟಾಂಗ್‌

    ಗುಜರಾತ್, ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕೇರಳ, ಮಹಾರಾಷ್ಟ್ರ ಮತ್ತು ಒಡಿಶಾದಲ್ಲಿ ಐಆರ್‌ಎಫ್, ಅದರ ಸದಸ್ಯರು ಮತ್ತು ಸಹಾನುಭೂತಿ ಹೊಂದಿರುವವರ ಕಾನೂನುಬಾಹಿರ ಚಟುವಟಿಕೆಗಳನ್ನು ಗಮನಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

  • ಕೋವಿಡ್-19 ನಿಯಂತ್ರಣಕ್ಕೆ ಕೇಂದ್ರದಿಂದ 10 ನಿರ್ದೇಶನಗಳು

    ಕೋವಿಡ್-19 ನಿಯಂತ್ರಣಕ್ಕೆ ಕೇಂದ್ರದಿಂದ 10 ನಿರ್ದೇಶನಗಳು

    ನವದೆಹಲಿ: ಕೇಂದ್ರ ಸರ್ಕಾರ ಕೊರೊನಾ ಲಾಕ್‍ಡೌನ್ ಅನ್ನು ಜೂನ್ 30ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ಜೊತೆಗೆ ಕೊರೊನಾ ನಿಯಂತ್ರಣಕ್ಕೆ ಪ್ರಮುಖ ಹತ್ತು ನಿರ್ದೇಶನಗಳನ್ನು ತಿಳಿಸಿದೆ.

    ಲಾಕ್‍ಡೌನ್ 5.0ನಲ್ಲಿ ಪ್ರಮುಖವಾಗಿ ಮಾಲ್ ಹಾಗೂ ದೇವಸ್ಥಾನ ಸೇರಿದಂತೆ ಧಾರ್ಮಿಕ ಕೇಂದ್ರಗಳು ತೆರೆಯಲು ಅನುಮತಿ ನೀಡಲಾಗುತ್ತಿದೆ. ಈಗಾಗಲೇ ಕಂಪನಿ, ಕೈಗಾರಿಕೋದ್ಯಮ ಪ್ರಾರಂಭಿಸಲು ಅನುಮತಿ ನೀಡಲಾಗಿದೆ. ಹೀಗಾಗಿ ಕೇಂದ್ರ ಸರ್ಕಾರವು ಕೆಲವು ಮಾರ್ಗಸೂಚಿಗಳನ್ನು ವಿಧಿಸಿದೆ. ಇದನ್ನೂ ಓದಿ: ಜೂ.30ರವರೆಗೆ ಲಾಕ್‍ಡೌನ್ ವಿಸ್ತರಣೆ- ಜೂನ್ 8ರಿಂದ ಮಾಲ್, ದೇವಸ್ಥಾನ ಓಪನ್

    ಕೋವಿಡ್-19 ನಿಯಂತ್ರಣಕ್ಕೆ ನಿರ್ದೇಶನಗಳು:
    1. ಮಾಸ್ಕ್: ಸಾರ್ವಜನಿಕ ಸ್ಥಳದಲ್ಲಿ, ಕಚೇರಿಯ ಒಳಗೆ, ಪ್ರಯಾಣದ ವೇಳೆ ಖಡ್ಡಾಯವಾಗಿ ಮಾಸ್ಕ್ ಧರಿಸಬೇಕು.
    2. ಸಾಮಾಜಿಕ ಅಂತರ: ಒಬ್ಬೊರಿಂದ ಮತ್ತೊಬ್ಬರ ಮಧ್ಯೆ 6 ಅಡಿ ಅಂತರ ಕಾಯ್ದುಕೊಳ್ಳಬೇಕು.
    3. ಸಭೆ-ಸಮಾರಂಭ: ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿ ಸಭೆ ಸಮಾರಂಭ ನಡೆಸುವಂತಿಲ್ಲ. ಮದುವೆಯಲ್ಲಿ 50ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಅತ್ಯಕ್ರಿಯೆ, ಅಂತಿಮನ ನಮನದ ವೇಳೆ 20ಕ್ಕಿಂತ ಹೆಚ್ಚು ಮಂದಿ ಭಾಗವಹಿಸುವಂತಿಲ್ಲ.
    4. ದಂಡ: ಸಾರ್ವಜನಿಕ ಸ್ಥಳದಲ್ಲಿ ಉಗುಳಿದರೆ ದಂಡ ವಿಧಿಸಲಾಗುವುದು. ಈ ಸಂಬಂಧ ರಾಜ್ಯ ಸರ್ಕಾರ, ಸ್ಥಳೀಯ ಆಡಳಿತಾಧಿಕಾರಿಗಳ ಸೂಚನೆಯಂತೆ ದಂಡ ವಿಧಿಸುವಂತೆ ಸೂಚಿಸಲಾಗಿದೆ. ಇದನ್ನೂ ಓದಿ: ಇನ್ನೂ 1 ತಿಂಗಳು ಶಾಲಾ, ಕಾಲೇಜು ತೆರೆಯುವಂತಿಲ್ಲ

    5. ನಿಷೇಧ: ಸಾರ್ವಜನಿಕ ಸ್ಥಳದಲ್ಲಿ ಮದ್ಯ ಕುಡಿಯುವುದು, ಪಾನ್, ಗುಟ್ಕಾ, ತಂಬಾಕು ತಿನ್ನುವುದು, ಸಿಗರೇಟ್ ಸೇದುವುದು ನಿಷೇಧ.
    6. ವರ್ಕ್ ಫ್ರಂ ಹೋಮ್: ಕಂಪನಿಗಳು, ಸಂಸ್ಥೆಗಳು ಸಾಧ್ಯವಾದಷ್ಟು ವರ್ಕ್ ಫ್ರಂ ಹೋಮ್ ಅನುಸರಿಸಬೇಕು.
    7. ಮುಂಜಾಗ್ರತಾ ಕ್ರಮ: ಕೆಲಸ ಅಥವಾ ವ್ಯವಹಾರದ ಸಮಯದಲ್ಲಿ ಅಧಿಕಾರಿಗಳು, ಕೆಲಸದ ಸ್ಥಳ, ಅಂಗಡಿ, ಮಾರುಕಟ್ಟೆ, ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು.
    8. ಸ್ಕ್ರೀನಿಂಗ್: ಕಂಪನಿ, ವ್ಯವಹಾರದ ಸ್ಥಳಗಲ್ಲಿ ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಇರಲೇಬೇಕು. ಜೊತೆಗೆ ಸಿಬ್ಬಂದಿ ಒಳಗೆ ಹಾಗೂ ಹೊರಗೆ ಹೋಗುವ ಜಾಗದಲ್ಲಿ ಸ್ಯಾನಿಟೈಜರ್ ಇರಿಸಬೇಕು.
    9. ಸ್ಯಾನಿಟೈಜೇಷನ್: ಕಚೇರಿಯ ಡೋರ್ ಹ್ಯಾಂಡಲ್ ಸೇರಿದಂತೆ ವಿವಿಧ ಕಡೆಗಳಲ್ಲಿ ಆಗಾಗ ಸ್ಯಾನಿಟೈಜೇಷನ್ ಮಾಡಬೇಕು.
    10. ಕೆಲಸ ವೇಳೆ ಸಾಮಾಜಿಕ ಅಂತರ: ಕಚೇರಿಯಲ್ಲಿ ಕೆಲಸ ಮಾಡುವಾಗ ಸಿಬ್ಬಂದಿಯ ಮಧ್ಯೆ ಅಂತರ ಇರಬೇಕು. ಜೊತೆಗೆ ಶಿಫ್ಟ್ ಗಳ ಮಧ್ಯೆ ಸ್ವಚ್ಛತೆ, ಸ್ಯಾನಿಟೈಜೇಷನ್ ಮಾಡಲು ಅನುಕೂಲವಾಗುವಂತೆ ಸಮಯದ ಅಂತರವಿರಬೇಕು.