Tag: mg srinivas

  • ‘ಬೀರ್ ಬಲ್ 2’ ಸಿನಿಮಾ ಘೋಷಿಸಿದ ನಿರ್ದೇಶಕ, ನಟ ಶ್ರೀನಿ

    ‘ಬೀರ್ ಬಲ್ 2’ ಸಿನಿಮಾ ಘೋಷಿಸಿದ ನಿರ್ದೇಶಕ, ನಟ ಶ್ರೀನಿ

    ನಿರ್ದೇಶಕ, ನಟ ಎಂ.ಜಿ. ಶ್ರೀನಿವಾಸ್ ಈಗಾಗಲೇ ಶಿವರಾಜ್ ಕುಮಾರ್ ನಟನೆಯ ಹೊಸ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆಯೇ ಅವರು ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಸಿನಿಮಾವನ್ನು ಈಗ ಘೋಷಣೆ ಮಾಡಿದ್ದರೂ, ಅದು ಸೆಟ್ಟೇರುವುದು 2023ರಲ್ಲಿ ಎಂದು ಅವರೇ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಕಾಳಿ ಕೈಗೆ ಸಿಗರೇಟು : ಮಾಳವಿಕಾ ಅವಿನಾಶ್ ಛೀಮಾರಿ, ನಟ ಕಿಶೋರ್ ವಿಭಿನ್ನ ಪ್ರತಿಕ್ರಿಯೆ

    2017ರಲ್ಲಿ ಶ್ರೀನಿ ಬೀರ್ ಬಲ್ ಹೆಸರಿನ ಸಿನಿಮಾವನ್ನು ನಿರ್ದೇಶನ ಮಾಡಿ, ಹೀರೋ ಆಗಿಯೂ ನಟಿಸಿದ್ದರು. ಬೀರ್ ಬಲ್ ಹೆಸರಿನ ಲಾಯರ್ ಕಥೆಯನ್ನು ಹೇಳಿದ್ದರು. ಇದೇ ಸಿನಿಮಾ ಇದೀಗ ಭಾಗ 2 ಆಗಿ ನಿರ್ಮಾಣಗೊಳ್ಳಲಿದೆ. ಇಂದು ಶ್ರೀನಿ ಅವರ ಹುಟ್ಟು ಹಬ್ಬವಾಗಿದ್ದರಿಂದ, ಅದರ ಸಂಭ್ರಮಕ್ಕಾಗಿ ಬೀರ್ ಬಲ್ 2 ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ್ದಾರೆ ನಿರ್ದೇಶಕರು. ಬೀರ್ ಬಲ್ 1 ರಲ್ಲಿ ಫೈಂಡಿಂಗ್ ವಜ್ರಮುನಿ ಕಥೆಯನ್ನು ಹೇಳಿದ್ದರು. ಇಲ್ಲಿ ಮತ್ತೊಂದು ಕೇಸ್ ಇರಲಿದೆಯಂತೆ.

    ಬೀರ್ ಬಲ್ ಮೊದಲ ಭಾಗದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾದಲ್ಲಿ ನಾಯಕಿಯಾಗುವ ಅವಕಾಶ ಯಾರಿಗೆ ಲಭಿಸಲಿದೆ ಎನ್ನುವುದನ್ನು ಕಾದು ನೋಡಬೇಕು. ಇನ್ನೂ ಒಂದು ವರ್ಷದ ನಂತರ ಈ ಚಿತ್ರ ಸೆಟ್ಟೇರುವುದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ವಿಷಯಗಳು ಹೊರಬರಹುದು. ಬೀರ್ ಬಲ್ ಟ್ರಯಾಲಜಿ ಸಿನಿಮಾ ಆಗಿರುವುದರಿಂದ, ಇನ್ನೊಂದು ಭಾಗದಲ್ಲೂ ಈ ಸಿನಿಮಾ ಬರಲಿದೆ.

    Live Tv
    [brid partner=56869869 player=32851 video=960834 autoplay=true]

  • ಅದಿತಿ ಏಕೆ ‘ರಂಗನಾಯಕಿ’ಯಾದರು?

    ಅದಿತಿ ಏಕೆ ‘ರಂಗನಾಯಕಿ’ಯಾದರು?

    ಬೆಂಗಳೂರು: ಕಿರುತೆರೆಯಲ್ಲಿ ನಾಗಕನ್ನಿಕೆ ಎಂಬ ಧಾರಾವಾಹಿಯ ಮೂಲಕ ಖ್ಯಾತಿ ಗಳಿಸಿದ್ದ ಅದಿತಿ ಪ್ರಭುದೇವ ಇದೀಗ ರಂಗನಾಯಕಿಯಾಗಿದ್ದಾರೆ. ಸಿನಿಮಾಗಳ ಸಂಖ್ಯೆಗಿಂತಲೂ ತಾನು ನಟಿಸೋ ಒಂದೊಂದು ಪಾತ್ರಗಳೂ ಕೂಡಾ ಜನರ ಮನಸಲ್ಲುಳಿಯಬೇಕೆಂಬ ತುಡಿತ ಹೊಂದಿರುವ ಅಪ್ಪಟ ನಟಿ ಅದಿತಿ. ಅವರ ಹಂಬಲಕ್ಕೆ ತಕ್ಕುದಾಗಿಯೇ ದಯಾಳ್ ಪದ್ಮನಾಭನ್ ನಿರ್ದೇಶನದ ರಂಗನಾಯಕಿ ಚಿತ್ರದ ಅವಕಾಶ ಅವರನ್ನು ಅರಸಿ ಬಂದಿತ್ತು. ಅಷ್ಟಕ್ಕೂ ಈ ಸವಾಲಿನಂಥಾ ಪಾತ್ರವನ್ನು ನಿರ್ವಹಿಸೋ ಅವಕಾಶ ಅದಿತಿ ಪಾಲಿಗೆ ಕೂಡಿ ಬಂದಿದ್ದೇ ಅವರ ಪ್ರತಿಭೆಯ ಕಾರಣದಿಣಂದ.

    ನಿರ್ದೇಶಕ ದಯಾಳ್ ಪದ್ಮನಾಭನ್ ಒಂದು ಘಟನೆಯಿಂದ ಪ್ರೇರಿತರಾಗಿ ವರ್ಷಗಟ್ಟಲ್ಲೇ ಅದನ್ನೇ ಧ್ಯಾನಿಸುತ್ತಾ ಕಡೆಗೂ ಪರಿಪೂರ್ಣವಾದ ಕಥೆಯೊಂದನ್ನು ಸಿದ್ಧಪಡಿಸಿದ್ದರು. ಆದರೆ ಆ ಬಳಿಕ ಪಾತ್ರ ವರ್ಗದ ಆಯ್ಕೆಯ ವಿಚಾರ ಬಂದಾಗ ಅವರನ್ನು ಬಹುವಾಗಿ ಕಾಡಿದ್ದದ್ದು ರಂಗನಾಯಕಿಯ ಪಾತ್ರ. ಅದನ್ನು ನಿರ್ವಹಿಸೋದೆಂದರೆ ಸುಲಭದ ಮಾತಲ್ಲ. ಮಾಮೂಲಿ ಜಾಡಿನಲ್ಲಿಯೇ ಆಸಕ್ತಿ ಹೊಂದಿರುವ ನಟಿಯರು ಅದನ್ನು ನಿರ್ವಹಿಸಲು ಸಾಧ್ಯವಾಗೋದೂ ಇಲ್ಲ. ಸಾಕಷ್ಟು ಸಮಯವನ್ನು ದಯಾಳ್ ಈ ಹುಡುಕಾಟಕ್ಕೆಂದೇ ಮೀಸಲಿಟ್ಟಿದ್ದರಂತೆ. ಕಡೆಗೂ ಅವರು ರಂಗನಾಯಕಿಯಾಗಲು ಅದಿತಿ ಪ್ರಭುದೆವ ಅವರೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದರು.

    ನಂತರ ಮಾತುಕತೆಯಾಗಿ ದಯಾಳ್ ರಂಗನಾಯಕಿಯ ಕಥೆ ಹೇಳಿ ಮುಗಿಸುವ ಹೊತ್ತಿಗೆಲ್ಲ ಅದಿತಿ ಭಾವಿಕರಾಗಿದ್ದರಂತೆ. ಅದು ಅವರು ಸದಾ ಕಾಲ ಬಯಸುತ್ತಾ ಬಂದಿದ್ದ ಭಿನ್ನವಾದ ಪಾತ್ರ. ಆದರೆ ಆ ಪಾತ್ರದ ಭಾವ ತೀವ್ರತೆಯನ್ನು ಕಂಡ ಅದಿತಿಗೆ ಈ ಪಾತ್ರವನ್ನು ಸಂಭಾಳಿಸಲು ತನ್ನಿಂದ ಸಾಧ್ಯವಾಗುತ್ತಾ ಅಂತೊಂದು ಅಳುಕು ಕಾಡಿತ್ತಂತೆ. ಯಾಕೆಂದರೆ, ಅದು ಎಲ್ಲ ಭಾವಗಳನ್ನೂ ಆವಾಹಿಸಿಕೊಂಡು ನಟಿಸ ಬೇಕಿದ್ದ ಪಾತ್ರ. ಅತ್ಯಾಚಾರಕ್ಕೀಡಾದ ಹುಡುಗಿಯೊಬ್ಬಳ ತಲ್ಲಣಗಳನ್ನು ಆವಾಹಿಸಕೊಂಡು ಅದಿತಿ ನಟಿಸಿದ ಪರಿ ಕಂಡು ಇಡೀ ಚಿತ್ರತಂಡವೇ ಅಚ್ಚರಿಗೊಂಡಿದೆ. ಅದು ಇದೇ ನವೆಂಬರ್ ಎಂಟರಿಂದ ಪ್ರತೀ ಪ್ರೇಕ್ಷಕರ ಕಣ್ಣುಗಳಲ್ಲಿಯೂ ಪ್ರತಿಫಲಿಸಲಿದೆ.

  • ರಂಗನಾಯಕಿ: ಕನ್ನಡಿಗರೆಲ್ಲರ ಹೆಮ್ಮೆಯ ಚಿತ್ರ!

    ರಂಗನಾಯಕಿ: ಕನ್ನಡಿಗರೆಲ್ಲರ ಹೆಮ್ಮೆಯ ಚಿತ್ರ!

    ಬೆಂಗಳೂರು: ಕನ್ನಡ ಚಿತ್ರಗಳು ಕರ್ನಾಟಕಕ್ಕೆ ಮಾತ್ರವೇ ಸೀಮಿತ ಎಂಬಂಥಾ ವಾತಾವರಣ ಹಲವಾರು ವರ್ಷಗಳ ಕಾಲ ಚಾಲ್ತಿಯಲ್ಲಿತ್ತು. ಆದರೆ ಕನ್ನಡ ಸಿನಿಮಾಗಳು ಪರಭಾಷಾ ಚಿತ್ರಗಳಿಗೆ ಸೆಡ್ಡು ಹೊಡೆದು ನಿಲ್ಲುತ್ತವೆ, ಪರಭಾಷಾ ಚಿತ್ರಗಳೆದುರೂ ಸ್ಪರ್ಧೆಯೊಡ್ಡಿ ಗೆದ್ದು ಬೀಗುತ್ತವೆಂಬುದು ಇತ್ತೀಚಿನ ದಿನಗಳಲ್ಲಿ ಸ್ಪಷ್ಟವಾಗಿಯೇ ಮನನವಾಗಿದೆ. ಕೆಜಿಎಫ್‍ನಂಥಾ ಚಿತ್ರಗಳು ಅದನ್ನು ಮತ್ತಷ್ಟು ಸ್ಪಷ್ವಾಗಿಯೇ ಸಾಬೀತುಗೊಳಿಸಿವೆ. ಇತ್ತೀಚೆಗೆ ಶುರುವಾಗಿರೋ ಕನ್ನಡ ಚಿತ್ರಗಳ ಖದರ್ ಅನ್ನು ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ಮೂಡಿ ಬಂದಿರೋ ರಂಗನಾಯಕಿ ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಮಿರುಗುವಂತೆ ಮಾಡಿದೆ.

    ಪ್ರತೀ ಬಾರಿ ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡ ಚಿತ್ರಗಳು ಸ್ಥಾನ ಗಿಟ್ಟಿಸಿಕೊಳ್ಳಲು ಶತಾಯ ಗತಾಯ ಪ್ರಯತ್ನಿಸುತ್ತಿದ್ದವು. ಆದರೆ ತೀವ್ರ ಸ್ಪರ್ಧೆಯೊಡ್ಡಿದರೂ ಅದು ಸಾಧ್ಯವಾಗಿರಲಿಲ್ಲ. ಆದರೆ ರಂಗನಾಯಕಿ ವಿಚಾರದಲ್ಲಿ ಬಹು ಕಾಲದ ಕನಸು ಕೈಗೂಡಿದೆ. ಈ ಚಿತ್ರ ಗೋವಾ ಫಿಲಂ ಫೆಸ್ಟಿವಲ್‍ನ ಇಂಡಿಯನ್ ಪನೋರಮಾ ವಿಭಾಗದಲ್ಲಿ ಆಯ್ಕೆಯಾಗಿದೆ. ಈ ಮೂಲಕ ಈ ಸಿನಿಮೋತ್ಸವಕ್ಕೆ ಆಯ್ಕೆಯಾಗಿರೋ ಮೊದಲ ಚಿತ್ರವೆಂಬ ಹೆಗ್ಗಳಿಕೆಯೂ ಈ ಚಿತ್ರದ ಪಾಲಾಗಿದೆ.

    ಇದು ಪ್ರತಿಯೊಬ್ಬರೂ ಹೆಮ್ಮೆ ಪಡುವಂಥಾ ಸಂಗತಿ. ಈ ಮೂಲಕವೇ ದಯಾಳ್ ಕನ್ನಡ ಚಿತ್ರರಂಗದ ತಾಕತ್ತೇನೆಂಬುದನ್ನು ಇಡೀ ದೇಶಕ್ಕೇ ತೋರಿಸಿಕೊಟ್ಟಿದ್ದಾರೆ. ಅದೇನು ಸಾಮಾನ್ಯದ ಸಾಧನೆಯಲ್ಲ. ವಿಶ್ವಾದ್ಯಂತ ಬೇರೆ ಬೇರೆ ಭಾಷೆಗಳ ನೂರಾರು ಚಿತ್ರಗಳೊಂದಿಗೆ ಸರ್ಧೆಯೊಡ್ಡಿ ಜಯಿಸಿಕೊಂಡರೆ ಮಾತ್ರವೇ ಈ ಸಿನಿಮೋತ್ಸವಕ್ಕೆ ಪ್ರವೇಶ ಸಿಗುತ್ತದೆ. ಅದನ್ನು ರಂಗನಾಯಕಿ ಚಿತ್ರ ಸಮರ್ಥವಾಗಿಯೇ ಮಾಡಿ ತೋರಿಸಿದೆ. ಇದು ಸದರಿ ಚಿತ್ರದ ಭಿನ್ನವಾದ ಹೂರಣದ ಪ್ರತಿಫಲ. ಇನ್ನೇನು ವಾರದೊಪ್ಪತ್ತಿನಲ್ಲಿಯೇ ಬಿಡುಗಡೆಗೊಳ್ಳಲಿರೋ ರಂಗನಾಯಕಿ ಕನ್ನಡಿಗರೆಲ್ಲರ ಹೆಮ್ಮೆಯ ಚಿತ್ರವೆಂಬುದರಲ್ಲಿ ಎರಡು ಮಾತಿಲ್ಲ.

  • ಖಡಕ್ ಟ್ರೈಲರ್‌ನೊಂದಿಗೆ ಪ್ರತ್ಯಕ್ಷನಾದ ಬೀರ್‌ಬಲ್!

    ಖಡಕ್ ಟ್ರೈಲರ್‌ನೊಂದಿಗೆ ಪ್ರತ್ಯಕ್ಷನಾದ ಬೀರ್‌ಬಲ್!

    ಈ ಹಿಂದೆ ಶ್ರೀನಿವಾಸ ಕಲ್ಯಾಣ ಚಿತ್ರವನ್ನು ನಿರ್ದೇಶನ ಮಾಡಿ ನಟಿಸಿದ್ದವರು ಎಂ ಜಿ ಶ್ರೀನಿವಾಸ್ ಅವರೀಗ ಬೀರ್‌ಬಲ್ ಎಂಬ ಮತ್ತೊಂದು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ತಾವೇ ನಾಯಕನಾಗಿಯೂ ನಟಿಸಿದ್ದಾರೆ. ಇದರ ಟ್ರೈಲರ್ ಅನ್ನು ಇದೀಗ ರಿಯಲ್ ಸ್ಟಾರ್ ಉಪೇಂದ್ರ ಬಿಡುಗಡೆ ಮಾಡಿದ್ದಾರೆ.

    ಒಂದು ಮರ್ಡರ್ ಮಿಸ್ಟರಿಯ ಸೂಚನೆ ಕೊಡುವಂಥಾ ವೇಗದ ಟ್ರೈಲರ್ ಅನ್ನು ಬಹುವಾಗಿ ಮೆಚ್ಚಿಕೊಂಡೇ ಉಪ್ಪಿ ಬಿಡುಗಡೆ ಮಾಡಿದ್ದಾರೆ. ಬಿಡುಗಡೆಯಾದ ಕೆಲ ಹೊತ್ತಲ್ಲಿಯೇ ಈ ಟ್ರೈಲರ್ ಗೆ ಎಲ್ಲೆಡೆಯಿಂದಲೂ ಅದ್ಭುತ ಪ್ರತಿಕ್ರಿಯೆ ಕೇಳಿ ಬರಲಾರಂಭಿಸಿವೆ.

    ಶ್ರೀನಿವಾಸ ಕಲ್ಯಾಣ ಚಿತ್ರದಲ್ಲಿ ಕಾಮಿಡಿ ಟ್ರ್ಯಾಕಿನಲ್ಲಿಯೇ ಭಿನ್ನವಾದೊಂದು ಕಥೆ ಹೇಳಿದ್ದವರು ಶ್ರೀನಿವಾಸ್. ಅದರ ಮೂಲಕ ನಟನಾಗಿ ನಿರ್ದೇಶಕನಾಗಿಯೂ ಅವರು ಗೆದ್ದಿದ್ದರು. ಆದರೆ ಎರಡನೇ ಪ್ರಯತ್ನವಾದ ಬೀರ್‌ಬಲ್ ಚಿತ್ರದಲ್ಲವರು ಸಸ್ಪೆನ್ಸ್ ಥ್ರಿಲ್ಲರ್ ಕಥೆಯೊಂದನ್ನು ಆರಿಸಿಕೊಂಡಿರುವಂತಿದೆ. ಇದೆಲ್ಲ ಏನೇ ಇದ್ದರೂ ಈ ಟ್ರೈಲರ್ ಅಂತೂ ಎಲ್ಲೆಡೆ ಹರಿದಾಡುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv