Tag: mg road

  • ವಿಡಿಯೋ: ಮೆಡಿಕಲ್ ಶಾಪಲ್ಲಿ ನಗದು ಸಿಗದೆ ಪರ್ಫ್ಯೂಮ್ ಬಾಟಲಿ ಕದ್ದೊಯ್ದ ಖದೀಮರು

    ವಿಡಿಯೋ: ಮೆಡಿಕಲ್ ಶಾಪಲ್ಲಿ ನಗದು ಸಿಗದೆ ಪರ್ಫ್ಯೂಮ್ ಬಾಟಲಿ ಕದ್ದೊಯ್ದ ಖದೀಮರು

    ತುಮಕೂರು: ನಗರದ ಎಂಜಿ ರಸ್ತೆಯಲ್ಲಿರುವ ಶ್ರೀನಿವಾಸ್ ಮೆಡ್ ಪ್ಲಸ್ ಅಂಗಡಿಯಲ್ಲಿ ತಡರಾತ್ರಿ ಕಳ್ಳತನವಾಗಿದೆ. ಈ ಹೈಫೈ ಕಳ್ಳರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಇಬ್ಬರು ಕಳ್ಳರು ಶೆಟ್ಟರ್ ಮೀಟಿ ಒಳನುಗ್ಗುತ್ತಾರೆ. ಇದರಲ್ಲಿ ಓರ್ವ ಮುಖಕ್ಕೆ ಮಾಸ್ಕ್ ಹಾಗೂ ತಲೆಗೆ ಕ್ಯಾಪ್ ಧರಿಸಿಕೊಂಡು ಗುರುತು ಸಿಗದಂತೆ ಬಂದು ಕಳ್ಳತನ ಮಾಡಿದ್ದಾನೆ. ಕೆಲ ಹೊತ್ತು ಅಂಗಡಿಯಲ್ಲಿ ಹುಡುಕಾಡಿದ್ರೂ ಕಳ್ಳರಿಗೆ ಏನೂ ಸಿಕ್ಕಿಲ್ಲ.

    ಮೆಡಿಕಲ್ ಶಾಪಲ್ಲಿ ನಗದು ಇಲ್ಲದಿದ್ದರಿಂದ ಕೇವಲ ಮೂರು ಪರ್ಫ್ಯೂಮ್ ಬಾಟಲಿ ಕದ್ದೊಯ್ದಿದಾರೆ. ಕಳ್ಳತನದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=jM05ymKnj1Q&feature=youtu.be

  • ಇಂದಿನಿಂದ 6 ತಿಂಗಳು ಚರ್ಚ್ ಸ್ಟ್ರೀಟ್ ಬಂದ್..!

    ಬೆಂಗಳೂರು: ಸಿಲಿಕಾನ್ ಸಿಟಿಯ ವೀಕೆಂಡ್ ಹಾಟ್ ಫೇವರೇಟ್ ಚರ್ಚ್‍ಸ್ಟ್ರೀಟ್ ಶುಕ್ರವಾರದಿಂದ ಆರು ತಿಂಗಳ ಕಾಲ ಬಂದ್ ಆಗಲಿದೆ. ಕಾರಣ ಈ ರಸ್ತೆಯಲ್ಲಿ ಬಿಬಿಎಂಪಿ ಟೆಂಡರ್ ಶ್ಯೂರ್ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಿದೆ.

    ವೀಕೆಂಡ್‍ನಲ್ಲಿ ಎಂ.ಜಿ ರೋಡ್, ಬ್ರಿಗೇಡ್ ರೋಡ್ ಸುತ್ತಾಡೋರು, ಊಟ ಮಾಡೋಕೆ ಹೆಜ್ಜೆ ಹಾಕೋದು ಚರ್ಚ್ ಸ್ಟ್ರೀಟ್ ರಸ್ತೆ ಕಡೆಗೆ. ಇಲ್ಲಿ ಚೈನೀಸ್, ಜಾಪ್ನೀಸ್, ಕೇರಳ ರೆಸ್ಟೋರೆಂಟ್‍ಗಳು ಸೇರಿ ಸುಮಾರು 100ಕ್ಕೂ ಹೆಚ್ಚು ರೆಸ್ಟೋರೆಂಟ್, ಪಬ್, ಬಾರ್‍ಗಳಿವೆ. ಹಲವಾರು ಕಾರ್ಪೊರೇಟ್ ಕಂಪನಿಗಳು ಈ ರಸ್ತೆಯಲ್ಲಿರೋದ್ರಿಂದ ಅಗಾಗ ಈವೆಂಟ್‍ಗಳು ನಡೀತಿರುತ್ತವೆ. ಆದ್ರೆ ರಸ್ತೆಯಲ್ಲಿ ಟೆಂಡರ್ ಶ್ಯೂರ್ ಕಾಮಗಾರಿ ಕೈಗೆತ್ತಿಕೊಂಡಿರೋದ್ರಿಂದ ಈ ರಸ್ತೆ ಮುಂದಿನ ಆರು ತಿಂಗಳವರೆಗೆ ಬಂದ್ ಆಗಲಿದೆ.

    ಟೆಂಡರ್ ಶ್ಯೂರ್ ಕಾಮಗಾರಿ ನಡೆಸುತ್ತಿರೋದೇನೋ ಸರಿ. ಆದ್ರೆ, ರಸ್ತೆಯ ಎರಡೂ ಬದಿಗಳನ್ನು ಬಂದ್ ಮಾಡ್ತಿರೋದು ಇದೀಗ ರೆಸ್ಟೋರೆಂಟ್‍ಗಳ ಮಾಲೀಕರ ಅಸಮಾಧಾನಕ್ಕೆ ಕಾರಣವಾಗಿದೆ.

    ಸಾಧ್ಯವಾದಷ್ಟು ಬೇಗ ಕಾಮಗಾರಿ ಮುಗಿಸಿಕೊಡುವ ಭರವಸೆಯನ್ನು ಬಿಬಿಎಂಪಿ ನೀಡಿದೆ. ಹಾಗಿದ್ರೂ ಮುಂದಿನ ಆರು ತಿಂಗಳ ಕಾಲ ಪಾರ್ಕಿಂಗ್ ಸಮಸ್ಯೆ ಸೇರಿದಂತೆ ಹಲವು ಅನಾನುಕೂಲಗಳನ್ನ ಅಲ್ಲಿಗೆ ಹೋಗೋರು ಸಹಿಸಿಕೊಳ್ಳಬೇಕಾಗಿದೆ.