Tag: mg road

  • ಕುಡಿದ ಜೋಶ್‍ನಲ್ಲಿ ಟೆರಸ್ ಹತ್ತಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಯುವಕ

    ಕುಡಿದ ಜೋಶ್‍ನಲ್ಲಿ ಟೆರಸ್ ಹತ್ತಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಯುವಕ

    ಬೆಂಗಳೂರು: ಮಂಗಳವಾರ ಹೊಸ ವರ್ಷವನ್ನ ರಾಜಧಾನಿಯ ಜನ ಅದ್ಧೂರಿಯಾಗಿ ಸ್ವಾಗತಿಸಿದರು. ಈ ನಡುವೆ ನಗರದ ಎಂಜಿ ರೋಡ್‍ನಲ್ಲಿ ನ್ಯೂ ಇಯರ್ ಜೋಶ್‍ನಲ್ಲಿ ಕುಡಿದ ಮತ್ತಿನಲ್ಲಿದ್ದ ಯುವಕನೊಬ್ಬ ಬಹುಮಡಿ ಕಟ್ಟಡವೇರಿ ಸೆಲ್ಫಿ ತೆಗೆದುಕೊಂಡು ಕೆಲಕಾಲ ಆತಂಕದ ವಾತವರಣ ಸೃಷ್ಟಿಸಿದ್ದನು.

    ಈ ಕುಡುಕನ ಅವಾಂತರ ಕಂಡ ಜನರು ಗಾಬರಿಗೊಂಡಿದ್ದರು. ಕೆಳಗಿಳಿಯುವಂತೆ ಜನ ಎಷ್ಟೇ ಕೂಗಾಡಿದರೂ ಕುಡಿತದ ನಶೆಯಲ್ಲಿದ್ದ ಅಸಾಮಿ ಮಾತ್ರ ಕ್ಯಾರೇ ಎಂದಿಲ್ಲ. ಈ ವೇಳೆ ಯುವಕ ಏರಿದ ಕಟ್ಟಡದ ಮುಂದೆ ಜನ ದೊಡ್ಡ ಮಟ್ಟದಲ್ಲಿ ಜಮಾಯಿಸಿದ್ದರು. ಕೆಳಗಿಳಿದು ಬನ್ನಿ ಎಂದು ಜೋರಾಗಿ ಜನರು ಕೂಗಾಡಲು ಪ್ರಾರಂಭಿಸಿದರು.

    ಜನ ಸೇರಿದ್ದನ್ನ ಗಮನಿಸಿ ಪೊಲೀಸರು ಕೂಡ ಸ್ಥಳಕ್ಕೆ ಬಂದರು. ಆದರೆ ಅಷ್ಟರೊಳಗೆ ಆ ಯುವಕ ತನ್ನ ಪಾಡಿಗೆ ತಾನು ಸೆಲ್ಫಿ ಕ್ಲಿಕ್ಕಿಸಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದನು.

  • ಮೆಟ್ರೋ ಮಾರ್ಗದಲ್ಲಿ ಬಿರುಕು- ರಾತ್ರಿಯಿಡೀ ಬಿಎಂಆರ್‌ಸಿಎಲ್  ದುರಸ್ಥಿ

    ಮೆಟ್ರೋ ಮಾರ್ಗದಲ್ಲಿ ಬಿರುಕು- ರಾತ್ರಿಯಿಡೀ ಬಿಎಂಆರ್‌ಸಿಎಲ್ ದುರಸ್ಥಿ

    – ಪಿಲ್ಲರ್ ಸುತ್ತಲು 4 ಸ್ಟಕ್ಚರ್ ಅಳವಡಿಕೆ

    ಬೆಂಗಳೂರು: ನಗರದ ಎಂಜಿ ರಸ್ತೆಯಲ್ಲಿ ಮೆಟ್ರೋ ಪಿಲ್ಲರ್ ಬಿರುಕು ಬಿಟ್ಟ ಹಿನ್ನೆಲೆಯಲ್ಲಿ ರಾತ್ರಿಯಿಡೀ ಬಿಎಂಆರ್ ಸಿಎಲ್ ಸಿಬ್ಬಂದಿಯಿಂದ ದುರಸ್ಥಿ ಕಾರ್ಯ ಮಾಡಲಾಯಿತು.

    ರಾತ್ರಿ 11 ಗಂಟೆಗೆ ಮೆಟ್ರೋ ಸಂಚಾರ ಸ್ಥಗಿತವಾದ ಬಳಿಕ ದುರಸ್ಥಿ ಕಾರ್ಯ ಆರಂಭಿಸಿದ ಸಿಬ್ಬಂದಿ ಮುಂಜಾನೆವರೆಗೂ ದುರಸ್ಥಿ ಕಾರ್ಯ ಮಾಡಿದ್ರು. ಪಿಲ್ಲರ್ ಬಿರಕು ಬಿಟ್ಟಿರುವ ಸ್ಥಳದ ಎರಡು ಕಡೆ ರಸ್ತೆ ಬ್ಲಾಕ್ ಮಾಡಿ ಕೆಲಸ ಮಾಡಲಾಯಿತು ಬಿರಕುಕೊಂಡಿರುವ ಪಿಲ್ಲರ್ ಸುತ್ತಲು ನಾಲ್ಕು ಸಪೋರ್ಟಿಂಗ್ ಸ್ಟಕ್ಚರ್  ಗಳನ್ನ ಅಳವಡಿಸಿದ್ದಾರೆ. ಇದನ್ನೂ ಓದಿ: ನಮ್ಮ ಮೆಟ್ರೋ ಕಂಬದಲ್ಲಿ ಬಿರುಕು ಮೂಡಿದ್ಯಾಕೆ : ಇಲ್ಲಿದೆ ಪ್ರಮುಖ ಕಾರಣಗಳು

    ಬಿಎಂಆರ್‍ಸಿಎಲ್ ಅಧಿಕಾರಿಗಳು ಪಿಲ್ಲರ್ ಬಿರಕುಗೊಂಡಿರೋದ್ರಿಂದ ಕೋಲ್ಕತ್ತಾ ಹಾಗೂ ದೆಹಲಿ ತಜ್ಞರರೊಂದಿಗೆ ಚರ್ಚೆ ಮಾಡಿ ಅವರ ಅಭಿಪ್ರಾಯದಂತೆ ದುರಸ್ಥಿ ಕಾರ್ಯ ಮಾಡಲಾಗಿದೆ ಎನ್ನಲಾಗುತ್ತಿದೆ. ದುರಸ್ಥಿ ಕಾರ್ಯ ಬರದಿಂದ ಸಾಗುತ್ತಿರುವ ಹಿನ್ನೆಲೆ ಎಂಜಿ ರಸ್ತೆಯಿಂದ ಹಲಸೂರು, ಇಂದಿರಾ ನಗರ ಮಾರ್ಗವಾಗಿ ಬೆನ್ನಿಗನಹಳ್ಳಿ ಒಡಾಡುವ ಟ್ರೈನ್ ಇಂದು ಕೊಂಚ ತಡವಾಗಿ ಆರಂಭವಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಮೂರು ದಿನದ ಹಿಂದೆಯೇ ನನ್ನ ಗಮನಕ್ಕೆ ಬಂದಿದೆ: ಸಿಎಂ ಎಚ್‍ಡಿಕೆ

    ಸದ್ಯ ಎಂಜಿ ರಸ್ತೆ ಮಾರ್ಗವಾಗಿ ಓಡಾಡುವ ಮೆಟ್ರೋದಲ್ಲಿ ಜನರ ಒಡಾಡಲು ಕೊಂಚ ಹಿಂದೇಟು ಹಾಕುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಿಯಾಯಿತಿ ದರದಲ್ಲಿ ಸೀರೆ ನೀಡದೇ ಮಹಿಳೆಯರ ಕೆಂಗಣ್ಣಿಗೆ ಗುರಿಯಾದ ಸಮ್ಮಿಶ್ರ ಸರ್ಕಾರ!

    ರಿಯಾಯಿತಿ ದರದಲ್ಲಿ ಸೀರೆ ನೀಡದೇ ಮಹಿಳೆಯರ ಕೆಂಗಣ್ಣಿಗೆ ಗುರಿಯಾದ ಸಮ್ಮಿಶ್ರ ಸರ್ಕಾರ!

    ಬೆಂಗಳೂರು: ಇಂದಿನಿಂದ ರಿಯಾಯಿತಿ ದರದಲ್ಲಿ ಮೈಸೂರು ರೇಷ್ಮೆ ಸೀರೆ ನೀಡುವುದಾಗಿ ಘೋಷಿಸಿ, ದಿನಾಂಕ ಮುಂದೂಡಿದ್ದರಿಂದ ಸಮ್ಮಿಶ್ರ ಸರ್ಕಾರ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಎಂ.ಜಿ ರೋಡ್ ಸಮೀಪದ ಕರ್ನಾಟಕ ಸಿಲ್ಕ್ ಉತ್ಪಾದನಾ ಕೇಂದ್ರದಲ್ಲಿ ವರಲಕ್ಷ್ಮೀ ಹಬ್ಬದ ನಿಮಿತ್ತ ಸಮ್ಮಿಶ್ರ ಸರ್ಕಾರವು, ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ನೀಡುವುದಾಗಿ ಘೋಷಿಸಿತ್ತು. ಅಷ್ಟೇ ಅಲ್ಲದೇ ಆಗಸ್ಟ್ 15ರಿಂದ ಸೀರೆಗಳ ಮಾರಾಟ ಪ್ರಾರಂಭವಾಗಲಿದೆ ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿತ್ತು.

    ಇಂದು ಬೆಳಗ್ಗೆ ಕರ್ನಾಟಕ ಸಿಲ್ಕ್ ಉತ್ಪಾದನಾ ಕೇಂದ್ರಕ್ಕೆ ಭಾರೀ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದರು. ಪ್ರತಿಯೊಬ್ಬರು ರಿಯಾಯಿತಿ ದರದ ಸೀರೆ ಪಡೆಯಲು ಕೈಯಲ್ಲಿ ಆಧಾರ ಕಾರ್ಡ್ ಹಿಡಿದುಕೊಂಡು ತಂದಿದ್ದರು. ಆದರೆ ದಿನಾಂಕ ಮುಂದೂಡಲಾಗಿದೆ ಅಂತಾ ಕೇಂದ್ರದ ಮುಂದೆ ಬೋರ್ಡ್ ಹಾಕಿದ್ದನ್ನು ನೋಡಿ ಮಹಿಳೆಯರು ಅಸಮಾಧಾನ ಹೊರ ಹಾಕಿದ್ದಾರೆ.

    ಕರ್ನಾಟಕ ಸಿಲ್ಕ್ ಉತ್ಪಾದನಾ ಕೇಂದ್ರಕ್ಕೆ ಮಾಧ್ಯಮಗಳು ಬರುತ್ತಿದ್ದಂತೆ ವರಸೆ ಬದಲಿಸಿದ ಕೆಎಸ್‍ಐಸಿ ಮ್ಯಾನೇಜರ್ ಭಾನು ಪ್ರಕಾಶ್, ಚುನಾವಣಾ ನೀತಿ ಸಂಹಿತಿ ಜಾರಿಯಾಗಿದ್ದರಿಂದ ರಿಯಾಯಿತಿ ದರ ಸೀರೆ ಮಾರಾಟವನ್ನು ಮುಂದೂಡಲಾಗಿದೆ. ನಿನ್ನೆ ರಾತ್ರಿಯಷ್ಟೇ ನಮಗೆ ಮಾಹಿತಿ ಗೊತ್ತಾಗಿದ್ದು, ಇವತ್ತು ಬಂದಿರುವ ಮಹಿಳೆಯರ ಆಧಾರ್ ಕಾರ್ಡ್ ನೋಡಿ ಟೋಕನ್ ನೀಡಲಾಗುತ್ತದೆ. ಮುಂದಿನ ದಿನ ಸೀರೆ ವಿತರಣೆ ಮಾಡುವಾಗ ಈ ಮಹಿಳೆಯರಿಗೆ ನೀಡಲಾಗುವುದು ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸರಗಳ್ಳತನಕ್ಕೆ ಬಂದವ ಮಹಿಳೆ ಮೇಲೆ ಡ್ರ್ಯಾಗರ್‌ನಿಂದ ಅಟ್ಯಾಕ್ ಮಾಡ್ದ!

    ಸರಗಳ್ಳತನಕ್ಕೆ ಬಂದವ ಮಹಿಳೆ ಮೇಲೆ ಡ್ರ್ಯಾಗರ್‌ನಿಂದ ಅಟ್ಯಾಕ್ ಮಾಡ್ದ!

    ಬೆಂಗಳೂರು: ಸಾಮಾನ್ಯವಾಗಿ ಸರಗಳ್ಳರು ತಮ್ಮ ಕೃತ್ಯವನ್ನ ಎಸಗಲು ನಿರ್ಜನ ಪ್ರದೇಶವನ್ನ ಆರಿಸಿಕೊಳುತ್ತಾರೆ. ಆದರೆ ಇಲ್ಲೊಬ್ಬ ಕಳ್ಳನಿಗೆ ಅದ್ಯಾವ ಭಂಡ ಧೈರ್ಯವೋ ಗೊತ್ತಿಲ್ಲ. ಜನರ ಮುಂದೆಯೇ ಕೈಚಳಕ ತೋರಿಸಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ.

    ಎಂಜಿ ರಸ್ತೆಯಲ್ಲಿ ನೂರಾರು ಜನರ ಮುಂದೆಯೇ ಸರಗಳ್ಳ ತನ್ನ ಕೈಚಳಕ ತೋರಿಸಲು ಯತ್ನಿಸಿದ್ದು, ಭಾನುವಾರ ಸಂಜೆ 7.30ರ ಸಮಯದಲ್ಲಿ ಸವಿತಾ ಎಂಬವರು ಮಕ್ಕಳನ್ನು ಆಡಿಸುತ್ತಿದ್ದ ವೇಳೆ ಮೊಹಮ್ಮದ್ ದಸ್ತಗೀರ್ ಎಂಬಾತ ಮಹಿಳೆ ಕೈಗೆ ಡ್ರ್ಯಾಗರ್‍ನಿಂದ ಇರಿದು ಸರ ಕಿತ್ತು ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಈ ವೇಳೆ ಸ್ಥಳದಲ್ಲಿ ಇದ್ದ ರೆವೆನ್ಯೂ ಇಲಾಖೆಯ ಗನ್ ಮ್ಯಾನ್ ರವೀಂದ್ರ ಎಂಬವರು ಕಳ್ಳನನ್ನ ಬೆನ್ನತ್ತಿದ್ದಾರೆ. ಆಗ ಮೊಹಮ್ಮದ್, ಗನ್ ಮ್ಯಾನ್ ಗೂ ಡ್ರ್ಯಾಗರ್ ನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದಾನೆ. ಇದನ್ನು ಕಂಡ ಸ್ಥಳೀಯರು ಮೊಹಮ್ಮದ್ ನನ್ನು ಹಿಡಿದು ಥಳಿಸಿ ಪೊಲೀಸರ ವಶಕ್ಕೆ ನೀಡಿದ್ದಾರೆ.

    ಘಟನೆ ಕುರಿತು ಮಾಹಿತಿ ನೀಡಿದ ಕೇಂದ್ರ ವಿಭಾಗದ ಡಿಸಿಪಿ ಡಾ. ಚಂದ್ರಗುಪ್ತ ಅವರು, ಸವಿತಾರ ಮೇಲೆ ದಾಳಿ ನಡೆಸುವ ಮುನ್ನ ಮೊಹಮ್ಮದ್ ಅದೇ ದಾರಿಯಲ್ಲಿ ಬರುತ್ತಿದ್ದ ಮತ್ತೊಬ್ಬ ಮಹಿಳೆಯ ಸರ ಕೀಳಲು ಹೋಗಿ ವಿಫಲನಾಗಿದ್ದ. ಆರೋಪಿಯ ಮೇಲೆ 20 ಸರಗಳ್ಳತನ ಪ್ರಕರಣಗಳಿದ್ದು, ಈ ಹಿಂದೆ ಪೊಲೀಸರಿಂದ ಗುಂಡೇಟು ತಿಂದಿದ್ದ ಎಂದು ಮಾಹಿತಿ ನೀಡಿದ್ದಾರೆ. ಘಟನೆ ಕುರಿತು ಕಬ್ಬನ್ ಪಾರ್ಕ್ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಈ ಬಾರಿಯ ಹೊಸ ವರ್ಷದಲ್ಲೂ ಕಾಮುಕರ ಕಾಟ- ಚರ್ಚ್‍ಸ್ಟ್ರೀಟ್‍ನಲ್ಲಿ ಯುವತಿಯರ ಅನುಚಿತ ವರ್ತನೆ

    ಈ ಬಾರಿಯ ಹೊಸ ವರ್ಷದಲ್ಲೂ ಕಾಮುಕರ ಕಾಟ- ಚರ್ಚ್‍ಸ್ಟ್ರೀಟ್‍ನಲ್ಲಿ ಯುವತಿಯರ ಅನುಚಿತ ವರ್ತನೆ

    ಬೆಂಗಳೂರು: ಬ್ರಿಗೇಡ್ ರೋಡ್‍ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಕಾಮುಕನೊಬ್ಬ ವಿದೇಶಿ ಮಹಿಳೆಯ ಜೊತೆಗೆ ಅಸಭ್ಯವಾಗಿ ವರ್ತಿಸಿರೋ ಘಟನೆ ನಡೆದಿದೆ.

    ಮಹಿಳೆಯ ಹಿಂಭಾಗಕ್ಕೆ ಹೊಡೆದು ಓಡಿಹೋಗಲು ಯತ್ನಿಸಿದ್ದ ಯುವಕನನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾದ್ರು. ನಂತ್ರ ಪೊಲೀಸರು ಆ ಯುವಕನನ್ನು ಮಹಿಳೆ ಬಳಿ ಕರೆದುಕೊಂಡು ಹೋದ್ರು. ಅಲ್ಲದೆ ಮಹಿಳೆಯ ಕಾಲು ಹಿಡಿದು ಕ್ಷಮೆ ಕೇಳುವಂತೆ ಹೇಳಿದ್ರು. ಈ ವೇಳೆ ನಡುರಸ್ತೆಯಲ್ಲೆ ಯುವಕ ಮಹಿಳೆಯ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ್ದಾನೆ. ಇದನ್ನೂ ಓದಿ: 2017ಕ್ಕೆ ಗುಡ್ ಬೈ, 2018ಕ್ಕೆ ಸ್ವಾಗತ!

    ಇನ್ನು ರಾತ್ರಿ ಹೊಸವರ್ಷಾಚರಣೆ ವೇಳೆ ಮಹಿಳೆಯೊಬ್ಬರಿಗೆ ಕಿಡಿಗೇಡಿಗಳು ಕಾಟ ಕೊಟ್ಟಿದ್ದಾರೆ. ತಿಪ್ಪಸಂದ್ರ ಮೂಲದ ಬೆನಕ ಎಂಬವರು ತಮ್ಮ ಕುಟುಂಬದೊಂದಿಗೆ ಹೊಸವರ್ಷಾಚರಣೆಗೆ ಎಂಜಿ ರೋಡ್‍ಗೆ ಬಂದಿದ್ರು. ಆದ್ರೆ ಈ ವೇಳೆ ಕಾಮುಕರ ಕಾಟದಿಂದ ವಾಪಸ್ ಹೊರಟ್ರು. ವಾಪಸ್ ಹೋಗುವಾಗಲೂ ಕಾಮುಕನೊಬ್ಬ ಯುವತಿಗೆ ಟಚ್ ಮಾಡಿ ಕಿರುಕುಳ ಕೊಟ್ಟಿದ್ದಾನೆ. ಈ ವೇಳೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಬೆನಕ, ಪೊಲೀಸರು ಬೆಂಗಳೂರು ಸೇಫ್ ಅಂತಾರೆ ಆದ್ರೆ, ಎಲ್ಲಕ್ಕಿಂತ ಹೆಚ್ಚು ಡೇಂಜರ್ ಈ ಬೆಂಗಳೂರು ಅಂತಾ ಅಸಮಾಧಾನ ಹೊರಹಾಕಿದ್ರು. ಇದನ್ನೂ ಓದಿ: ರಾಜ್ಯದೆಲ್ಲೆಡೆ ಹೊಸ ವರ್ಷದ ಸಂಭ್ರಮ- ಬೆಂಗ್ಳೂರಲ್ಲಿ ಮಾದರಿಯಾದ್ರು ಅಂಧ ಕ್ರಿಕೆಟ್ ತಂಡದ ಮಾಜಿ ನಾಯಕ ಶೇಖರ್ ನಾಯ್ಕ್

    ಹೊಸವರ್ಷದ ಸಂಭ್ರಮಾಚರಣೆ ವೇಳೆ ಕುಡಿದ ಮತ್ತಿನಲ್ಲಿ ಯುವತಿಯರು ಅನುಚಿತವಾಗಿ ವರ್ತಿಸಿದ್ದಾರೆ. ಚರ್ಚ್ ಸ್ಟ್ರೀಟ್ ನಲ್ಲಿರೋ ಸೋಸಿಯಲ್ ಹೋಟೆಲ್ ಮುಂಭಾಗದಲ್ಲಿ ಯುವತಿಯರು ಅರೆಪ್ರಜ್ಞಾಸ್ಥೆಯಲ್ಲಿ ಕುಡಿದು ಹೆಚ್ಚಾಗಿ ವಾಂತಿ ಮಾಡುತ್ತಿದ್ದಿದ್ದು ಕಂಡು ಬಂತು. ಜೊತೆಗೆ ಸಂಭ್ರಮಾಚರಣೆ ವೇಳೆ ಪೊಲೀಸರ ಬ್ಯಾರಿಕೇಡ್ ಮುರಿತು ಸಾವಿರಾರು ಜನ ಬ್ರಿಗೇಡ್ ರೋಡ್ ಕಡೆಗೆ ನುಗ್ಗಲು ಯತ್ನಿಸಿದ್ರು. ಈ ವೇಳೆ ಪೊಲೀಸರು ಗುಂಪು ಚದುರಿಸಲು ಅನಿವಾರ್ಯವಾಗಿ ಲಘು ಲಾಠಿ ಪ್ರಹಾರ ನಡೆಸಬೇಕಾಯ್ತು. ಇದನ್ನೂ ಓದಿ: ಉಡುಪಿಯಲ್ಲಿ ನ್ಯೂ ಇಯರ್ ಪಾರ್ಟಿ ಬಲು ಜೋರು

    ಯುವಕನೊಬ್ಬ ಪೊಲೀಸರ ಎದುರಲ್ಲೇ ಯುವತಿಯನ್ನು ಚುಡಾಯಿಸಿದ ಘಟನೆ ಬೆಂಗಳೂರಿನ ಗರುಡಾ ಮಾಲ್ ಬಳಿಯ ನೋ ಲಿಮಿಟ್ಸ್ ಕ್ಲಬ್ ಬಳಿ ನಡೆದಿದೆ. ಈ ವೇಳೆ ಯುವತಿಯನ್ನು ಚುಡಾಯಿಸಿದ ಯುವಕನಿಗೆ ಪಾನಮತ್ತ ಯುವಕನೊಬ್ಬ ಥಳಿಸಿದ್ದಾನೆ. ಎಲ್ಲವೂ ಪೊಲೀಸರ ಎದುರೇ ನಡೆದ್ರೂ ಪೊಲೀಸರು ಸುಮ್ಮನೆ ನೋಡುತ್ತಾ ನಿಂತಿದ್ರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಯುವತಿಯ ಪ್ರಿಯಕರ ಬೆಂಗಳೂರು ಪೊಲೀಸರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

  • 2017ಕ್ಕೆ ಗುಡ್ ಬೈ, 2018ಕ್ಕೆ ಸ್ವಾಗತ!

    2017ಕ್ಕೆ ಗುಡ್ ಬೈ, 2018ಕ್ಕೆ ಸ್ವಾಗತ!

    ಬೆಂಗಳೂರು: ವಿಶ್ವಾದ್ಯಂತ ಜನರು ಹೊಸವರ್ಷ 2018ನ್ನು ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಒಂದಿಷ್ಟು ಸಂತಸ, ಸ್ವಲ್ಪ ಬೇಸರ, ಒಂದಷ್ಟು ನೋವು, ಜೊತೆಗೆ ನಲಿವುಗಳನ್ನು ಕೊಟ್ಟ 2017ಕ್ಕೆ ಮಧ್ಯ ರಾತ್ರಿ 12 ಗಂಟೆಗೆ ವಿದಾಯ ಹೇಳಿದ ಜನರು ಹಲವಾರು ನಿರೀಕ್ಷೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಿದರು. ರಾಜ್ಯದಲ್ಲೂ ಹೊಸ ವರ್ಷಾಚರಣೆ ಸಂಭ್ರಮ ಬಲು ಜೋರಾಗಿತ್ತು.

    ರಾಜಧಾನಿ ಬೆಂಗಳೂರಿನಲ್ಲಿ ಹೊಸ ವರ್ಷ ಸ್ವಾಗತಿಸಲು ನಗರದ ಪ್ರಮುಖ ರಸ್ತೆಗಳನ್ನು ವಿದ್ಯುದ್ದೀಪಗಳಿಂದ ಸಿಂಗರಿಸಲಾಗಿತ್ತು. ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಮತ್ತು ಎಂ ಜಿ ರಸ್ತೆಗೆ ಲಕ್ಷಾಂತರ ಮಂದಿ ಆಗಮಿಸಿ ನ್ಯೂ ಇಯರ್ ಸಂಭ್ರಮದಲ್ಲಿ ಮೈ ಮರೆತರು. ಜನರನ್ನು ಸ್ವಾಗತಿಸಲು ಸಂಜೆ 7 ಗಂಟೆಯಿಂದಲೇ ನಗರದ ಪಬ್ ಮತ್ತು ರೆಸ್ಟೋರೆಂಟ್ ಗಳು ಸಿದ್ಧವಾಗಿದ್ದವು.

    ಬೆಂಗಳೂರಿನ ನ್ಯೂಇಯರ್ ಕಿಕ್ ಯಾವ ಮಟ್ಟಕ್ಕಿತ್ತು ಎಂದರೆ ಲಕ್ಷಾಂತರ ಮಂದಿ ‘ನಮ್ಮ ಮೆಟ್ರೋ’ದಲ್ಲಿ ಭಾನುವಾರ ಸಂಜೆ ಸಂಚರಿಸಿದ್ದಾರೆ ಬಿಎಂಆರ್ ಸಿಎಲ್ ಮಾಹಿತಿ ನೀಡಿದೆ. ಹೊಸ ವರ್ಷಾಚರಣೆಯ ಭದ್ರತೆಯನ್ನು ವೀಕ್ಷಿಸಲು ಈ ಬಾರಿ ಸ್ವತಃ ಗೃಹ ಸಚಿವರೇ ಫೀಲ್ಡ್ ಗಿಳಿದಿದ್ದರು. ಬ್ರಿಗೇಡ್ ರಸ್ತೆ, ಎಂಜಿ ರಸ್ತೆಗಳಲ್ಲಿ ಸಚಿವ ರಾಮಲಿಂಗಾರೆಡ್ಡಿ ಸ್ವತಃ ಪೊಲೀಸರಿಗೆ ಸೂಚನೆ ನೀಡುತ್ತಿದ್ದರು. ಬ್ರಿಗೇಡ್ ರೋಡ್ ನಲ್ಲಿ ಮಹಿಳೆಯರನ್ನು ರಕ್ಷಣೆ ಮಾಡಲು ಈ ಬಾರಿ ವಿಶೇಷವಾಗಿ ದುರ್ಗಿಯರ ಟೀಂ ಆಗಮಿಸಿತ್ತು. 100 ಜನ ದುರ್ಗಿಯರು ಮಹಿಳೆಯರ ರಕ್ಷಣಾ ಕಾರ್ಯಕ್ಕಿಳಿದಿದ್ದರು.

    ರಾಜ್ಯದ ಇತರೆ ಜಿಲ್ಲೆಗಳಲ್ಲೂ ಹೊಸ ವರ್ಷಾಚರಣೆ ಸಂಭ್ರಮ ಮುಗಿಲು ಮುಟ್ಟಿತ್ತು. ಮೈಸೂರು, ಮಂಗಳೂರು, ರಾಯಚೂರು, ಹುಬ್ಬಳ್ಳಿ, ಉಡುಪಿಯ ವಿವಿಧ ಹೋಟೆಲ್ & ರೆಸ್ಟೋರೆಂಟ್ ಗಳಲ್ಲಿ ನ್ಯೂ ಇಯರ್ ಪಾರ್ಟಿ ಆಯೋಜಿಸಲಾಗಿತ್ತು. ಎಲ್ಲೆಡೆ ಡಿಜೆ ಸದ್ದಿಗೆ ಮನಸೋತ ಯುವಜನತೆ ಹುಚ್ಚೆದ್ದು ಕುಣಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಝಗಮಗಿಸುವ ಬೆಳಕಿನ ನಡುವೆ ಹೆಜ್ಜೆ ಹಾಕುತ್ತಿದ್ದ ಯುವಕ ಯುವತಿಯರ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

    ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ನ್ಯೂ ಇಯರ್ ಸಂಭ್ರಮ ಮನೆ ಮಾಡಿತ್ತು. ದೆಹಲಿಯ ಇಂಡಿಯಾ ಗೇಟ್ ಬಳಿ ರಾತ್ರಿ 9 ಗಂಟೆಯಿಂದಲೇ ಹೊಸ ವರ್ಷದ ಆಚರಣೆಗೆ ದೆಹಲಿಯ ಜನರು ಸಿದ್ಧವಾಗಿ ನಿಂತಿದ್ದರು. ಮೈ ಕೊರತೆಯುವ ಚಳಿಯನ್ನು ಲೆಕ್ಕಿಸದೇ ಇಂಡಿಯಾ ಗೇಟ್ ಬಳಿ ಸೇರಿರುವ ಯುವಕ ಯುವತಿಯರು ಹೊಸ ವರ್ಷವನ್ನು ಬರ ಮಾಡಿಕೊಂಡರು. ವಾಣಿಜ್ಯ ನಗರಿ ಮುಂಬೈ, ಗೋವಾ, ಉತ್ತರಪ್ರದೇಶ, ನೋಯ್ಡಾದಲ್ಲೂ ಹೊಸ ವರ್ಷವನ್ನು ಸ್ವಾಗತಿಸಿ ಸಂಭ್ರಮಿಸಿದರು.

  • ಬಿಗಿ ಭದ್ರತೆಯಲ್ಲಿ ಹೊಸ ವರ್ಷಾಚರಣೆ- ಖಾಕಿಗಳಿಗೆ ಕೊಡ್ತಾರಂತೆ ರಿಫ್ಲೆಕ್ಟ್ ಜಾಕೆಟ್

    ಬಿಗಿ ಭದ್ರತೆಯಲ್ಲಿ ಹೊಸ ವರ್ಷಾಚರಣೆ- ಖಾಕಿಗಳಿಗೆ ಕೊಡ್ತಾರಂತೆ ರಿಫ್ಲೆಕ್ಟ್ ಜಾಕೆಟ್

    ಬೆಂಗಳೂರು: ಹೊಸ ವರ್ಷ ಆಚರಣೆ ಹಿನ್ನಲೆ ಪೂರ್ವ ಸಿದ್ಧತೆಯ ಭದ್ರತೆ ವೀಕ್ಷಿಸಲು ಹೆಚ್ಚುವರಿ ಪೊಲೀಸ್ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ, ಕೇಂದ್ರ ವಿಭಾಗದ ಡಿಸಿಪಿ ಚಂದ್ರಗುಪ್ತ ಎಂ ಜಿ ರಸ್ತೆ, ಬ್ರಿಗೇಡ್ ರಸ್ತೆಗೆ ಭೇಟಿ ನೀಡಿದರು.

    ಮುಂಜಾಗ್ರತಾ ಕ್ರಮವಾಗಿ ಎಲ್ಲೆಲ್ಲಿ ಸಿಸಿಟಿವಿ, ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕು ಅನ್ನೋದರ ಬಗ್ಗೆ ಪರಿಶೀಲನೆ ನಡೆಸಿದರು. ಅಲ್ಲದೇ ಎಷ್ಟು ಸಿಬ್ಬಂದಿ ಭದ್ರತೆ ನಿಯೋಜನೆಗೆ ಸೂಕ್ತ ಎಂಬುದರ ಬಗ್ಗೆ ಮಾಹಿತಿ ಕಲೆಹಾಕಿದ್ರು.

    ಇನ್ನು ಭದ್ರತೆಯಲ್ಲಿರುವ ಎಲ್ಲಾ ಪೊಲೀಸರಿಗೆ ಇದೇ ಮೊದಲ ಬಾರಿಗೆ ರಿಫ್ಲೆಕ್ಟ್ ಜಾಕೆಟ್ಸ್, ಹೈ ಡೆಫಿನೇಷನ್ 500 ಸಿಸಿಟಿವಿ ಕ್ಯಾಮರಾ ವ್ಯವಸ್ಥೆ ಮಾಡಲಾಗುವುದು. ಹಾಗೆಯೇ ಅನಿವಾರ್ಯ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸರನ್ನ ನಿಯೋಜನೆ ಮಾಡಲಾಗುವುದೆಂದು ಅವರು ತಿಳಿಸಿದರು.

  • ಸನ್ನಿ ನೈಟ್ಸ್ ಗೆ ಆಯ್ತು, ಈಗ ಹೊಸ ವರ್ಷ ಆಚರಣೆಗೆ ಕನ್ನಡ ಸಂಘಗಳಿಂದ ವಿರೋಧ

    ಸನ್ನಿ ನೈಟ್ಸ್ ಗೆ ಆಯ್ತು, ಈಗ ಹೊಸ ವರ್ಷ ಆಚರಣೆಗೆ ಕನ್ನಡ ಸಂಘಗಳಿಂದ ವಿರೋಧ

    ಬೆಂಗಳೂರು: ಸನ್ನಿ ನೈಟ್ಸ್ ಗೆ ವಿರೋಧ ಆಯ್ತು, ಈಗ ಎಂಜಿ ರೋಡ್‍ನಲ್ಲಿ ಹೊಸ ವರ್ಷ ಆಚರಣೆಗೆ ಕನ್ನಡ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಎಂಜಿ ರೋಡ್ ನಲ್ಲಿ ಹೊಸ ವರ್ಷ ಸಂಭ್ರಮಾಚರಣೆ ನಡೆಸದಂತೆ ಗುರುವಾರ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಲು ಮುಂದಾಗಿವೆ.

    ಮಹಾತ್ಮಾ ಗಾಂಧಿ ರಸ್ತೆ ಎಂದು ಹೆಸರಿದೆ, ಅಲ್ಲಿ ಕುಡಿದು ಕುಪ್ಪಳಿಸಿ ನಮ್ಮ ಸಂಸ್ಕೃತಿ ಹಾಳು ಮಾಡುತ್ತಿದ್ದಾರೆ. ಹೀಗಾಗಿ ಈ ಬಾರಿ ಈ ಆಚರಣೆಯೇ ಬಂದ್ ಮಾಡಬೇಕು ಎಂದು ಆಗ್ರಹಿಸಿ ಕಸ್ತೂರಿ ಕನ್ನಡ ಜನ ಪರ ವೇದಿಕೆ ಪ್ರತಿಭಟನೆ ನಡೆಸುವುದಾಗಿ ಹೇಳಿದೆ.

    ಹೊಸ ವರ್ಷ ಆಚರಣೆಗೆ ಬಾಲಿವುಡ್ ನ ಹಾಟ್ ಬ್ಯೂಟಿ ಸನ್ನಿ ಲಿಯೋನ್ ಬೆಂಗಳೂರಿಗೆ ಬರುವ ಕುರಿತು ನಗರದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ ಹಿನ್ನೆಲೆಯಲ್ಲಿ ಸ್ವತಃ ಸನ್ನಿ ನಾನು ಬರಲ್ಲ ಅಂತ ಹೇಳಿದ್ದಾರೆ. ಇದನ್ನೂ ಓದಿ: `ಸನ್ನಿ ನೈಟ್ಸ್’ಗಾಗಿ ಹೈ ಕೋರ್ಟ್ ಮೊರೆಹೋದ ಆಯೋಜಕರು

    ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದ ಸನ್ನಿ ಕಾರ್ಯಕ್ರಮಕ್ಕೆ ಪರ್ಮಿಷನ್ ಕೊಡಬಾರದು ಎಂದು ಆಗ್ರಹಿಸಿ ಕನ್ನಡ ಸಂಘಟನೆಗಳು ಪ್ರತಿಭಟಿಸಿತ್ತು. ನನ್ನ ಕಾರ್ಯಕ್ರಮ ನೋಡೋಕೆ ಬಂದ ಫ್ಯಾನ್ಸ್ ಗಳಿಗೆ ಏನೂ ಆಗಬಾರದು. ಅವರ ಸೇಫ್ಟಿ ಮುಖ್ಯ. ಹೀಗಾಗಿ ನಾನು ಕಾರ್ಯಕ್ರಮಕ್ಕೆ ಬರಲ್ಲ ಅಂತಾ ಟ್ವೀಟ್ ಮಾಡಿದ್ದಾರೆ.

    ಟ್ವೀಟ್ ನಲ್ಲಿ ಬೆಂಗಳೂರಿನ ಪೊಲೀಸರು ಹೊಸ ವರ್ಷದ ಕಾರ್ಯಕ್ರಮಕ್ಕೆ ನನಗೆ ಹಾಗೂ ನನ್ನ ಕಾರ್ಯಕ್ರಮ ನೋಡಲು ಭಾಗವಹಿಸುವವರಿಗೆ ಸುರಕ್ಷತೆ ಒದಗಿಸಲು ಸಾಧ್ಯವಿಲ್ಲ ಎಂದು ಸಾರ್ವಜನಿಕವಾಗಿ ಈಗಾಗಲೇ ತಿಳಿಸಿದ್ದಾರೆ. ನನಗೆ ಸುರಕ್ಷತೆ ಮುಖ್ಯವಾಗಿರುವ ಕಾರಣ ನಾನು ಕಾರ್ಯಕ್ರಮಕ್ಕೆ ಹಾಜರಾಗುತ್ತಿಲ್ಲ. ದೇವರು ಒಳ್ಳೆಯದನ್ನು ಮಾಡಲಿ. ನಾನು ಎಲ್ಲರ ಸುರಕ್ಷತೆಯನ್ನು ಹಾರೈಸುತ್ತೇನೆ. ಹೊಸ ವರ್ಷದ ಶುಭಾಶಯಗಳು ಅಂತ ಹೇಳಿದ್ದಾರೆ.

    ನಾನು ಬರಲ್ಲ: ನನ್ನ ಕಾರ್ಯಕ್ರಮ ನೋಡೋಕೆ ಬಂದ ಫ್ಯಾನ್ಸ್ ಗಳಿಗೆ ಏನೂ ಆಗಬಾರದು. ಅವರ ಸೇಫ್ಟಿ ಮುಖ್ಯ. ಹೀಗಾಗಿ ನಾನು ಕಾರ್ಯಕ್ರಮಕ್ಕೆ ಬರಲ್ಲ ಅಂತಾ ಸನ್ನಿ ಲಿಯೋನ್ ಟ್ವೀಟ್ ಮಾಡಿದ್ದಾರೆ. ಟ್ವೀಟ್ ನಲ್ಲಿ ಬೆಂಗಳೂರಿನ ಪೊಲೀಸರು ಹೊಸ ವರ್ಷದ ಕಾರ್ಯಕ್ರಮಕ್ಕೆ ನನಗೆ ಹಾಗೂ ನನ್ನ ಕಾರ್ಯಕ್ರಮ ನೋಡಲು ಭಾಗವಹಿಸುವವರಿಗೆ ಸುರಕ್ಷತೆ ಒದಗಿಸಲು ಸಾಧ್ಯವಿಲ್ಲ ಎಂದು ಸಾರ್ವಜನಿಕವಾಗಿ ಈಗಾಗಲೇ ತಿಳಿಸಿದ್ದಾರೆ. ನನಗೆ ಸುರಕ್ಷತೆ ಮುಖ್ಯವಾಗಿರುವ ಕಾರಣ ನಾನು ಕಾರ್ಯಕ್ರಮಕ್ಕೆ ಹಾಜರಾಗುತ್ತಿಲ್ಲ. ದೇವರು ಒಳ್ಳೆಯದನ್ನು ಮಾಡಲಿ. ನಾನು ಎಲ್ಲರ ಸುರಕ್ಷತೆಯನ್ನು ಹಾರೈಸುತ್ತೇನೆ. ಹೊಸ ವರ್ಷದ ಶುಭಾಶಯಗಳು ಅಂತ ಹೇಳಿದ್ದಾರೆ.

    ಸದ್ಯ ಕಾರ್ಯಕ್ರಮದ ಆಯೋಜಕರಾದ ಟೈಮ್ಸ್ ಕ್ರಿಯೇಷನ್ ಸಂಸ್ಥೆ ಪೊಲೀಸರು ಅನುಮತಿ ನೀಡದ್ದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದೆ.

  • ಬೆಳ್ಳಂಬೆಳಗ್ಗೆ ಬೆಂಗ್ಳೂರಿನ ಎಂಜಿ ರೋಡ್‍ನಲ್ಲಿರೋ ಕಟ್ಟಡದಲ್ಲಿ ಅಗ್ನಿ ಅವಘಡ!

    ಬೆಳ್ಳಂಬೆಳಗ್ಗೆ ಬೆಂಗ್ಳೂರಿನ ಎಂಜಿ ರೋಡ್‍ನಲ್ಲಿರೋ ಕಟ್ಟಡದಲ್ಲಿ ಅಗ್ನಿ ಅವಘಡ!

    ಬೆಂಗಳೂರು: ನಗರದ ಎಂಜಿ ರೋಡ್‍ನಲ್ಲಿ ಬೆಳ್ಳಂಬೆಳಗ್ಗೆ ಅಗ್ನಿ ಅನಾಹುತ ಸಂಭವಿಸಿದೆ.

    ಕಾವೇರಿ ಜಂಕ್ಷನ್ ಬಳಿಯ ನವರತ್ನ ಆ್ಯಂಟಿಕ್ ಆರ್ಟ್ & ಕ್ರಾಫ್ಟ್ ಅಂಗಡಿಯ 5ನೇ ಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇಂದು ಬೆಳ್ಳಂಬೆಳಗ್ಗೆ 4 ಗಂಟೆ ಸುಮಾರಿಗೆ ಈ ಅನಾಹುತ ಸಂಭವಿಸಿದ್ದು, ಕೂಡಲೇ 9 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ.

    ಶಾರ್ಟ್ ಸರ್ಕ್ಯೂಟ್‍ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

    https://www.youtube.com/watch?v=q1C2ypETe_Y

  • “ನಮ್ಮ ಊರು ಬೆಂಗಳೂರು, ಸಖತ್ ಕೂಲು”- ಹಳೇ ಬೆಂಗ್ಳೂರನ್ನ ನೆನಪಿಸೋ ಈ ವಿಡಿಯೋ ನೋಡಿ

    “ನಮ್ಮ ಊರು ಬೆಂಗಳೂರು, ಸಖತ್ ಕೂಲು”- ಹಳೇ ಬೆಂಗ್ಳೂರನ್ನ ನೆನಪಿಸೋ ಈ ವಿಡಿಯೋ ನೋಡಿ

    ಬೆಂಗಳೂರು: ನೀವು ಬೆಂಗ್ಳೂರಲ್ಲೇ ಹುಟ್ಟಿ ಬೆಳೆದವರಾಗಿದ್ರೆ ಅಥವಾ ಬಹಳ ವರ್ಷಗಳಿಂದ ಬೆಂಗ್ಳೂರಲ್ಲೇ ನೆಲೆಸಿದ್ರೆ ಈ ವಿಡಿಯೋ ನಿಮಗೆ ಹಳೇ ಬೆಂಗ್ಳೂರನ್ನ, ಅದರ ಸೊಬಗನ್ನ ನೆನಪಿಸೋದ್ರಲ್ಲಿ ಡೌಟಿಲ್ಲ.

    ಯುವತಿಯೊಬ್ಬರು ಬೆಂಗ್ಳೂರಿನಿಂದ ಲಂಡನ್‍ಗೆ ಹಾರೋ ಮುನ್ನ ಒಮ್ಮೆ ತನ್ನ ಪ್ರೀಮಿಯರ್ ಪದ್ಮಿನಿ ಕಾರಿನಲ್ಲಿ ನಗರಪ್ರದಕ್ಷಿಣೆ ಮಾಡೋ ವಿಡಿಯೋ ಇದು. ಈಕೆಗೆ ಬೆಂಗ್ಳೂರು ಕೇವಲ ನಗರವಲ್ಲ, ಒಂದು ಬಾಂಧವ್ಯ. ಬೆಂಗ್ಳೂರು ಇಸ್ ಎ ಸಿಟಿ ಆಫ್ ಅಟ್ಯಾಚ್‍ಮೆಂಟ್ ಎಂತಲೇ ವಿಡಿಯೋ ಆರಂಭವಾಗುತ್ತೆ.

    ಬೆಂಗ್ಳೂರಿನ ಪ್ರಖ್ಯಾತ ಎಂಟಿಆರ್ ರೆಸ್ಟೊರೆಂಟ್‍ನಿಂದ ಹಿಡಿದು ಚಿಕ್ಕ ಚಿಕ್ಕ ಗಲ್ಲಿಗಳಿಗೊಮ್ಮೆ ಭೇಟಿ. ವಿಧಾನಸೌಧ, ಎಂಜಿ ರೋಡ್, ಟೌನ್ ಹಾಲ್, ಲಾಲ್‍ಬಾಗ್ ಹೀಗೆ ಬೆಂಗ್ಳೂರಿನ ಎಲ್ಲಾ ಪ್ರಮುಖ ಸ್ಥಳಗಳನ್ನ, ಅದರ ವೈಭವವನ್ನ ಈ ವಿಡಿಯೋ ಸಾರುತ್ತೆ. ಅಲ್ಲದೆ ಈ ವಿಡಿಯೋದಲ್ಲಿ ಹಳೇ ಬೆಂಗಳೂರಿನ ಚಿತ್ರಣಗಳೂ ಇದ್ದು, ನಿಮ್ಮನ್ನ ಆ ಹಳೇ ದಿನಗಳಿಗೆ ಕರೆದುಕೊಂಡು ಹೋಗುತ್ತೆ. “ನಮ್ಮ ಊರು ಬೆಂಗಳೂರು…. ಸಖತ್ ಕೂಲು..” ಅನ್ನೋ ಸಾಲುಗಳು ಇದು ನಮ್ಮೂರು ಅನ್ನೋ ಹೆಮ್ಮೆಯ ಭಾವ ಮೂಡಿಸುತ್ತೆ.

    ಫ್ಲಾಶ್ ಫ್ರೇಮ್ ವಿಶುವಲ್ಸ್ ಅಕಾಡಮಿ ಆಫ್ ಫಿಲ್ಮ್ ಅಂಡ್ ಟೆಲಿವಿಶನ್‍ನವರು ನಿರ್ಮಾಣ ಮಾಡಿರೋ ಈ ಬೆಂಗ್ಳೂರು ಹಾಡು ಈಗಾಗಲೇ 98 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದ್ದು 6 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ.

    ಬೆಂಗಳೂರು ತುಂಬಾ ಬದಲಾಗಿದೆ ಅಂತ ನಾವು ಯಾವಾಗಲೂ ದೂರುತ್ತಿರುತ್ತೇವೆ. ಆದ್ರೆ ವಿಡಿಯೋದಲ್ಲಿ ಹಳೇ ಹಾಗೂ ಹೊಸ ಬೆಂಗಳೂರಿನ ದೃಶ್ಯಗಳನ್ನ ನೋಡಿದಾಗ, ಬದಲಾಗಿರೋದು ಬೆಂಗ್ಳೂರಲ್ಲ, ಜನರಿಂದಲೇ ಈ ರೀತಿ ಆಗಿದೆ ಅನ್ನೋದು ಕಾಣುತ್ತೆ. ನಾವು ಬೆಂಗ್ಳೂರಿನ ಒಳ್ಳೇ ಅಂಶಗಳನ್ನ ತೋರಿಸಲು ಬಯಸಿದ್ವಿ ಅಂತ ವಿಡಿಯೋ ನಿರ್ಮಾಣ ಮಾಡಿರೋ ಕೀರ್ತಿ ಕುಮಾರ್ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.

    ನೀವೂ ಒಮ್ಮೆ ಈ ವಿಡಿಯೋ ನೋಡಿ…. ರಿವೈಂಡ್ ಮೋಡ್‍ನಲ್ಲಿ ಬೆಂಗಳೂರು ಪ್ರದಕ್ಷಿಣೆ ಮಾಡಿದ ಅನುಭವವಾಗುತ್ತೆ.

    https://www.facebook.com/ffvacademy/videos/1589373407739350/