ಬೆಂಗಳೂರು: 2025ರ ಹೊಸ ವರ್ಷ (New Year 2025) ಸ್ವಾಗತಕ್ಕೆ ಕೆಲವೇ ನಿಮಿಷಗಳು ಬಾಕಿಯಿದೆ. ರಾಜಧಾನಿ ಬೆಂಗಳೂರಿನಲ್ಲಿ ಸಂಭ್ರಮಾಚರಣೆಗೆ ನೆರೆದಿರುವ ಜನಸಮೂಹ 2024ಕ್ಕೆ ಗುಡ್‌ಬೈ ಹೇಳಿ 2025ಕ್ಕೆ ಹಾಯ್ ಹೇಳಲು ತುದಿಗಾಲಲ್ಲಿ ನಿಂತಿದ್ದಾರೆ. ಕೆಲವರು ಆಗಲೇ ಎಣ್ಣೆ ಹೊಡೆದು ಜೋಶ್‌ನಲ್ಲಿ ತೇಲಾಡುತ್ತಿದ್ದಾರೆ.
ಈ ನೆಡುವೆ ಯುವ ಸಮೂಹ ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿದ್ದು, ಮದ್ಯದ ದರ ಏರಿಕೆ ಮಾಡಿರುವುದಕ್ಕೆ ಆಕ್ರೋಶ ಹೊರಹಾಕಿದೆ. ಒಂದೆಡೆ ಅಭಿಮಾನಿಗಳು ಆರ್‌ಸಿಬಿ… ಆರ್‌ಸಿಬಿ… ಈ ಸಲ ಕಪ್ ನಮ್ದೇ ಅಂತ ಜೈಕಾರ ಹಾಕುತ್ತಿದ್ದರೆ, ಮತ್ತೊಂದೆಡೆ, ಮದ್ಯದ ದರ ಏರಿಕೆಯಾಗಿದೆ ಎಂದು ಬೇಸರ ಹೊರಹಾಕಿದ್ದಾರೆ.
ಇದೇ ವೇಳೆ ಯುವಕನೊಬ್ಬ ಮಾತನಾಡುತ್ತಾ, ಮದ್ಯಪ್ರಿಯರಿಗೆ ಬಂದಿರುವ ಕಷ್ಟ ಏನಂದ್ರೆ? ಗುರು… ಅಲ್ಲಿ ಮಾರೋದು 500 ರೂಪಾಯಿ, ಇಲ್ಲಿ ಮಾರೋದು 300 ರೂಪಾಯಿ, ಆಚೆ ಹೋದ್ರೆ 150 ರೂಪಾಯಿ… ಏನ್ ಅನ್ಯಾಯ ಗುರು..? ಸರ್ಕಾರ ನಡೀತಿರೋದೇ ಮದ್ಯಪ್ರಿಯರಿಂದ ಆದ್ರೆ, ಎಣ್ಣೆ ರೇಟ್ ಜಾಸ್ತಿ ಮಾಡಿದ್ದಾರೆ, ನಾವೇನ್ ಹೊರದೇಶದಿಂದ ಬಂದವರಾ ಎಂದೆಲ್ಲಾ ಅಲವತ್ತುಕೊಂಡಿದ್ದಾರೆ.
ಬೆಂಗಳೂರು: 2025ರ ಹೊಸ ವರ್ಷ (New Year 2025) ಸ್ವಾಗತಕ್ಕೆ ಇಡೀ ಜಗತ್ತೇ ಸಜ್ಜಾಗಿದೆ. ಹೊಸ ಹುರುಪಿನೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಲು ರಾಜ್ಯ ರಾಜಧಾನಿಯೂ ಸಜ್ಜಾಗಿದೆ. 2024ಕ್ಕೆ ಗುಡ್‌ಬೈ ಹೇಳಿ 2025ಕ್ಕೆ ಹಾಯ್ ಹೇಳಲು ಸಿಲಿಕಾನ್ ಸಿಟಿ ಮಂದಿ ಕಾತರರಾಗಿದ್ದಾರೆ.
ಈಗಾಗಲೇ ಬೆಂಗಳೂರು ಸಂಭ್ರಮಾಚರಣೆಯ ಮೂಡ್‌ನಲ್ಲಿದೆ.. ಹೊಸ ವರ್ಷದ ಹಾಟ್‌ಸ್ಪಾಟ್‌ಗಳಾದ ಎಂ.ಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಕೋರಮಂಗಲ, ಇಂದಿರಾ ನಗರ ಕಲರ್‌ಫುಲ್ ಆಗಿವೆ.. ಝಗಮಗ ಎನ್ನುತ್ತಿವೆ.. ಸಹಸ್ರ ಸಹಸ್ರ ಮಂದಿ ಕುಣಿದು ಕುಪ್ಪಳಿಸಲು.. ಗೆಳೆಯ ಗೆಳೆತಿಯರ ಜೊತೆ ಸಂಭ್ರಮಿಸಲು ಸೆಲೆಬ್ರೆಷನ್ ಸ್ಟಾಟ್‌ಗಳಿಗೆ ಬರ್ತಿದ್ದಾರೆ.
ರಾತ್ರಿ 12 ಗಂಟೆ ಹೊತ್ತಿಗೆ ಎಂ.ಜಿ ರೋಡ್, ಬ್ರಿಗೇಡ್ ರೋಡ್‌ನಲ್ಲಿ 2 ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಮಹಿಳೆಯರಿಗಾಗಿ 40 ಸೇಫ್ಟಿ ಐಲ್ಯಾಂಡ್, ವಾಚ್ ಟವರ್ ನಿರ್ಮಿಸಲಾಗಿದೆ. ಮಧ್ಯರಾತ್ರಿ 1 ಗಂಟೆ ವರೆಗೆ ಮಾತ್ರ ಸಂಭ್ರಮಾಚರಣೆಗೆ ಅವಕಾಶ ನೀಡಲಾಗಿದೆ.
ಮಹಿಳೆಯರ ಸುರಕ್ಷತೆಗಾಗಿ ಪ್ರತಿ ಮೆಟ್ರೋ ಕೋಚ್‌ನಲ್ಲೂ ಭದ್ರತಾ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ. ಫ್ಲೈಓವರ್‌ಗಳನ್ನು ಮುಂಜಾಗ್ರತಾ ಕ್ರಮವಾಗಿ ಬಂದ್ ಮಾಡಲಾಗಿದೆ.
ಬೆಂಗಳೂರು: ಹೊಸವರ್ಷಾಚರಣೆಗೆ ಕ್ಷಣಗಣನೆ ಶುರುವಾಗಿದ್ದು, ನಗರದಲ್ಲಿ ಹೆಚ್ಚುವರಿ ಬಿಎಂಟಿಸಿ (BMTC) ಬಸ್‌ಗಳು ಕಾರ್ಯನಿರ್ವಹಿಸಲಿವೆ.
ಡಿ.31 ರಾತ್ರಿಯಿಂದ ಜ.1ರಂದು ಮುಂಜಾನೆ 2 ಗಂಟೆಯವರೆಗೂ ಎಂ.ಜಿ.ರಸ್ತೆಯಿಂದ (MG Road) ನಗರದ ವಿವಿಧ ಭಾಗಗಳಿಗೆ ಹೆಚ್ಚು ಬಸ್‌ಗಳು ಸಂಚರಿಸಲಿವೆ. ಹೊಸ ವರ್ಷಾಚರಣೆಯಲ್ಲಿ ಭಾಗವಹಿಸುವ ಜನರ ಅನುಕೂಲಕ್ಕಾಗಿ ಬಿಎಂಟಿಸಿ ಈ ಕ್ರಮ ಕೈಗೊಂಡಿದೆ.ಇದನ್ನೂ ಓದಿ: ಡಿ.ಕೆ.ಸುರೇಶ್ ತಂಗಿ ಹೆಸರಲ್ಲಿ ವಂಚನೆ – ಐಶ್ವರ್ಯಗೌಡ, ಪತಿಗೆ 14 ದಿನ ಜೈಲು
ಬಸ್ ಮಾರ್ಗ ಸಂಖ್ಯೆ ಎಲ್ಲಿಂದ ಎಲ್ಲಿಗೆ
ಜಿ-3 ಬ್ರಿಗೇಡ್ ರಸ್ತೆ ಎಲೆಕ್ಟ್ರಾನಿಕ್ಸ್ ಸಿಟಿ
ಜಿ-4 ಜಿಗಣಿ
ಜಿ-2 ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ ಸರ್ಜಾಪುರ
ಜಿ-6 ಕೆಂಗೇರಿ ಕೆ.ಹೆಚ್.ಬಿ. ಕ್ವಾರ್ಟ್ರ್ಸ್
ಜಿ-7 ಜನಪ್ರಿಯ ಟೌನ್ ಶಿಪ್
ಜಿ-8 ನೆಲಮಂಗಲ
ಜಿ-9 ಯಲಹಂಕ ಉಪನಗರ 5ನೇ ಹಂತ
ಜಿ-10 ಯಲಹಂಕ
ಜಿ-11 ಬಾಗಲೂರು
317-ಜಿ ಹೊಸಕೋಟೆ
ಎಸ್‌ಬಿಎಸ್-13ಕೆ ಚನ್ನಸಂದ್ರ
ಎಸ್‌ಬಿಎಸ್-1ಕೆ ಕಾಡುಗೋಡಿ
13 ಬನಶಂಕರಿ
ಜನದಟ್ಟಣೆ ಇರುವ ಪ್ರಮುಖ ಬಸ್ ನಿಲ್ದಾಣ ಹಾಗೂ ಜಂಕ್ಷನ್‌ಗಳಿಂದಲೂ ಹೆಚ್ಚುವರಿ ಬಸ್ ಕಾರ್ಯನಿರ್ವಹಿಸಲಿವೆ. ಕೆಂಪೇಗೌಡ ಬಸ್ ನಿಲ್ದಾಣ, ಕೆ.ಆರ್ ಮಾರುಕಟ್ಟೆ, ಶಿವಾಜಿನಗರ, ಕೋರಮಂಗಲ, ಕಾಡುಗೋಡಿ, ಕೆಂಗೇರಿ, ಸುಮನಹಳ್ಳಿ, ಗೊರಗುಂಟೆಪಾಳ್ಯ, ಯಶವಂತಪುರ, ಯಲಹಂಕ, ಶಾಂತಿನಗರ, ಬನಶಂಕರಿ, ಹೆಬ್ಬಾಳ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ಗಳಿಂದ ಪ್ರಯಾಣಿಕರ ದಟ್ಟಣೆಗನುಸಾರ ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ಬಿಎಂಟಿಸಿ ತಿಳಿಸಿದೆ.ಇದನ್ನೂ ಓದಿ: ಮನಮೋಹನ್ ಸಿಂಗ್ ಅಂತ್ಯಕ್ರಿಯೆ ವಿಚಾರದಲ್ಲಿ ಕೆಟ್ಟ ರಾಜಕೀಯ ಮಾಡ್ಬೇಡಿ – ರಾಹುಲ್‌ಗೆ ಬಿಜೆಪಿ ತಿರುಗೇಟು
ಬೆಂಗಳೂರು: ರಸ್ತೆ ಮಧ್ಯೆಯೇ ಬಿಎಂಟಿಸಿ ಬಸ್ (BMTC bus) ಹೊತ್ತಿ ಉರಿದ ಘಟನೆ (Fire Accident) ಎಮ್‍ಜಿ ರಸ್ತೆಯ ( MG Road) ಅನಿಲ್ ಕುಂಬ್ಳೆ ಸರ್ಕಲ್ ಬಳಿ ನಡೆದಿದೆ.
ಬಸ್ ರೋಸ್ ಗಾರ್ಡನ್‍ನಿಂದ ಶಿವಾಜಿನಗರದ ಕಡೆಗೆ ಹೋಗುತ್ತಿತ್ತು. ಈ ವೇಳೆ ಬಸ್‍ನ ಇಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಚಾಲಕ ಪ್ರಯಾಣಿಕರನ್ನು ಕೆಳಗೆ ಇಳಿಸಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಬಸ್‍ನಲ್ಲಿ 30 ಜನ ಪ್ರಯಾಣಿಕರಿದ್ದರು ಎಂದು ಬಸ್‍ನ ನಿರ್ವಾಹಕ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಕೂಲ್ ಕೂಲ್- ಇಂದು ಸಾಧಾರಣ ಮಳೆ ಸಾಧ್ಯತೆ
ಸ್ಥಳ್ಕಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಬಳಿಕ ಪೊಲೀಸರು ಉಂಟಾಗಿದ್ದ ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಿದ್ದು, ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ಬೆಂಗಳೂರು: ನೇರಳೆ ಮಾರ್ಗದಲ್ಲಿ ತಾತ್ಕಾಲಿಕವಾಗಿ ಮೆಟ್ರೋ (Namma Metro) ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಟ ಅನುಭವಿಸುತ್ತಿದ್ದಾರೆ.
ಎಂಜಿ ರೋಡ್ ನಿಂದ (MG Road) ಬೈಯಪ್ಪನಹಳ್ಳಿ (Baiyappanahalli) ಮಾರ್ಗ ಸಂಚಾರ ಬಂದ್ ಆಗಿದ್ದು, ಮೊದಲು ತಾಂತ್ರಿಕ ಸಮಸ್ಯೆ ಹಿನ್ನೆಲೆ ಎಂದು ಬಿಎಂಆರ್ ಸಿಎಲ್ ವಿಷಾದ ವ್ಯಕ್ತಪಡಿಸಿದೆ. ಜೊತೆಗೆ ಶೀಘ್ರವೇ ಬಗೆಹರಿಸುವ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿತ್ತು. ಇದನ್ನೂ ಓದಿ: ಇಡೀ ವಿಶ್ವವೇ ತಿರುಗಿ ನೋಡುವ ಕೆಲಸ ಮಾಡಿದ್ದಾರೆ: ಮೋದಿ ಹೊಗಳಿದ ರೆಡ್ಡಿ
ಆದರೆ ಇದೀಗ ಮೆಟ್ರೋ ಪವರ್ ಡಿಸ್ಟ್ರಿಬ್ಯೂಷನ್ ನಲ್ಲಿ ಸಮಸ್ಯೆಯಾಗಿದೆ. ಅದನ್ನ ಸರಿಪಡಿಸಲು ಪ್ರಯತ್ನ ಮಾಡಲಾಗುತ್ತಿದೆ. ಕಳೆದ ಒಂದು ಗಂಟೆಯಿಂದ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡಲಾಗುತ್ತಿದೆ. ಇನ್ನೂ ಒಂದು ಗಂಟೆ ಹೆಚ್ಚಾಗುವ ಸಾಧ್ಯತೆಯಿದೆ. ಯಾವ ಕಾರಣಕ್ಕೆ ಈ ಸಮಸ್ಯೆ ಆಯ್ತು ಅಂತ ಇನ್ನೂ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಬಿಎಂಆರ್ ಸಿಎಲ್ ಉನ್ನತ ಮೂಲಗಳು ಮಾಹಿತಿ ನೀಡಿವೆ.
ಹೋಯ್ಸಳ ಪೊಲೀಸರು ಪ್ರಯಾಣಿಕರಿಗೆ ಈ ಕುರಿತು ಅನೌನ್ಸ್ ಮೆಂಟ್ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಆಟೋ, ಕ್ಯಾಬ್ ಗಳ ಮೂಲಕ ಜನ ಹೋಗುತ್ತಿದ್ದಾರೆ.
ಜಗತ್ತಿಗೆ ಶಾಂತಿ, ಪ್ರೀತಿಯ ಸಂದೇಶ ಸಾರಿದ ದೇವಪುತ್ರ ಯೇಸುವಿನ ಜನ್ಮದಿನದ ಆಚರಣೆಯೇ ಕ್ರಿಸ್ಮಸ್ (Christmas). ಮನುಷ್ಯ ಎಲ್ಲರಿಗೂ ಉಪಯುಕ್ತನಾಗಬೇಕು, ಎಲ್ಲರಲ್ಲಿಯೂ ಒಂದಾಗಿ ಬಾಳಬೇಕು ಮತ್ತು ಒಳ್ಳೆಯದನ್ನ ಕೇಳುವಂತವನಾಗಿರಬೇಕು ಎನ್ನುವುದೇ ಹಬ್ಬದ ಮುಖ್ಯ ಧ್ಯೇಯ.
ಪ್ರತಿ ವರ್ಷ ಡಿಸೆಂಬರ್ 25ರಂದು ದೇಶಾದ್ಯಂತ ಕ್ರೈಸ್ತ ಬಾಂಧವರು ಕ್ರಿಸ್ಮಸ್ ಹಬ್ಬವನ್ನು (Christmas Festival) ಆಚರಿಸುತ್ತಾರೆ. ವಿವಿಧ ಚರ್ಚ್‌ಗಳಲ್ಲಿ ಯೇಸುವಿಗೆ ವಿಶೇಷ ಪೂಜೆ ಸಲ್ಲಿಸುವ ಜೊತೆ ಭಾರೀ ಗಾತ್ರದ ಕೇಕ್‌ಗಳನ್ನು ಕತ್ತರಿಸುತ್ತಾರೆ. ಪ್ರಮುಖ ನಗರದ ಮಾಲ್‌ಗಳಲ್ಲಿಯೂ ವಿಶೇಷ ಕ್ರಿಸ್ಮಸ್ ದೀಪಾಲಂಕಾರ, ಕ್ರಿಸ್ಮಸ್ ಟ್ರೀ (Christmas Tree) ಸ್ಥಾಪಿಸಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುತ್ತಾರೆ. ಇದನ್ನೂ ಓದಿ: ಹೊಸವರ್ಷ ಆಚರಣೆ – ಮಹಿಳೆಯರ ರಕ್ಷಣೆಗೆ ಮುಂದಿನ ವಾರದಲ್ಲಿ ಗೈಡ್‌ಲೈನ್ಸ್: ಬೆಂಗ್ಳೂರು ಪೊಲೀಸ್
ಈ ಬಾರಿ ಏನು ವಿಶೇಷ?
ಈ ಬಾರಿಯ ಕ್ರಿಸ್ಮಸ್ ಹಬ್ಬಕ್ಕೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ದೇಶದಲ್ಲೇ ಅತಿದೊಡ್ಡ 100 ಅಡಿ ಎತ್ತರದ ಕ್ರಿಸ್ಮಸ್ ಟ್ರೀಯನ್ನು ಅನಾವರಣಗೊಳಿಸಲಾಗಿದೆ. ಇದರೊಂದಿಗೆ ನೀರು ಹಾಗೂ ಸಂಗೀತ ಕಾರಂಜಿಯನ್ನೂ ಆಯೋಜಿಸಲಾಗಿದೆ. ಇದರ ಪಕ್ಕದಲ್ಲೇ ಸಾಂತಾಕ್ರೂಸ್ ವೇಶದಲ್ಲಿರುವ ವ್ಯಕ್ತಿಗೆ ಕ್ರಿಸ್ಮಸ್ ವಿಶ್ ಮಾಡುವ ಮೂಲಕ ಜನರು ಸಂತಸ ಹಂಚಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಬೆಂಗಳೂರಿನ ವಿವಿಧೆಡೆ ಕೇಸ್ ಉತ್ಸವಗಳನ್ನೂ ಹಮ್ಮಿಕೊಳ್ಳಲಾಗಿದೆ.
ಹೊಸ ವರ್ಷಕ್ಕೆ ಕೆಲವೇ ದಿನಗಳ ಮುನ್ನ ಬರುವ ಈ ಹಬ್ಬದಲ್ಲಿ ಸ್ಥಳೀಯರು ಹಾಗೂ ಯುವಸಮೂಹದ ಸಂಭ್ರಮಕ್ಕೆ ಪಾರವೇ ಇರುವುದಿಲ್ಲ. ಕೋವಿಡ್ ಮೊದಲ ಅಲೆ ಅಪ್ಪಳಿಸಿದಾಗ, ಕರೋಲ್ ಸಂಗೀತ ಕಛೇರಿಗಳಿಗೂ ಬ್ರೇಕ್ ಹಾಕಲಾಗಿತ್ತು. ಸೀಮಿತ ಪೂಜೆ ಪ್ರಾರ್ಥನೆಗಳಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು. ಆದ್ರೆ ಕಳೆದ 2 ವರ್ಷಗಳಿಂದ ಅದ್ಧೂರಿಯಾಗಿ ಈ ಉತ್ಸವಗಳು ಸಾಗುತ್ತಿವೆ. ಇದನ್ನೂ ಓದಿ: ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಾಫಿಕ್ ಜಾಮ್ – 3 ಕಿಮೀ ವರೆಗೆ ನಿಂತ ವಾಹನಗಳು; 2 ಗಂಟೆ ಪ್ರಯಾಣಿಕರ ಪರದಾಟ
ಕ್ರಿಸ್ಮಸ್ ಹಬ್ಬದ ಪ್ರಾಮುಖ್ಯತೆ:
ಒಂದು ಕಾಲದಲ್ಲಿ ಕ್ರಿಸ್ಮಸ್ ಹಬ್ಬವನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಮತ್ತು ಕ್ರೈಸ್ತರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಮಾತ್ರ ಆಚರಿಸಲಾಗುತ್ತಿತ್ತು. ಆದರಿಂದು ಪ್ರಪಂಚದಾದ್ಯಂತ ಆಚರಿಸುವ ಹಬ್ಬವಾಗಿ ಇದು ಮಾರ್ಪಟ್ಟಿದೆ. ಜನರನ್ನು ಪಾಪದಿಂದ ಮುಕ್ತಗೊಳಿಸಲು ಮತ್ತು ಜನರಿಗೆ ಒಳಿತನ್ನು ಮಾಡಲು ದೇವರು ತನ್ನ ಮಗನನ್ನು ಭೂಮಿಗೆ ಕಳುಹಿಸಿದನು ಮತ್ತು ಜನರನ್ನು ಪಾಪದಿಂದ ಮುಕ್ತಗೊಳಿಸುವ ಹೋರಾಟದಲ್ಲಿ ಯೇಸು ಕ್ರಿಸ್ತನು ತನ್ನ ಪ್ರಾಣ ತ್ಯಾಗ ಮಾಡಿದನು ಎಂಬ ನಂಬಿಕೆ ಇದೆ. ಈ ಎಲ್ಲ ನೆನಪಿನೊಂದಿಗೆ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಗುತ್ತದೆ ಎನ್ನುತ್ತಾರೆ ಮೈಸೂರು ಸೇಂಟ್ ಫಿಲೋಮಿನಾ ಚರ್ಚ್‌ನ ಪಾದ್ರಿ ಸ್ಟ್ಯಾನಿ ಡಿ. ಅಲ್ಮೆಡಾ.
ಕರೋಲ್ ಕಂಪು:
ಪ್ರತಿವರ್ಷ ಡಿಸೆಂಬರ್ 24ರಂದು ರಾತ್ರಿ 12 ಗಂಟೆಯಿಂದ ಬಲಿಪೂಜೆಯೊಂದಿಗೆ ಕ್ರಿಸ್ಮಸ್ ಹಬ್ಬ ಆರಂಭವಾಗುತ್ತದೆ. ಬಲಿಪೂಜೆಯ ನಂತರ ಯೇಸುವಿನ ಭಕ್ತರು ಪ್ರಾರ್ಥನೆ ಸಲ್ಲಿಸುತ್ತಾರೆ. ನಂತರ ರಾತ್ರಿಯಿಡೀ ಕರೋಲ್ ಗೀತಗಾಯನವಿರುತ್ತದೆ. ಹಬ್ಬಕ್ಕಿಂತ ಮೊದಲೇ ಆರಂಭವಾಗುವ ಈ ಸಂಪ್ರದಾಯದಲ್ಲಿ ಯುವಕರ ಗುಂಪುಗಳು ರಾತ್ರಿ ತಮ್ಮ ಸನಿಹದ ಪ್ರದೇಶದ ಮನೆ ಮನೆಗಳಿಗೆ ತೆರಳಿ ಕರೋಲ್ ಗಳನ್ನು (ಭಜನೆ ಅಥವಾ ಸೌಹಾರ್ದತೆಯ ಸಂದೇಶ ಸಾರುವ ಕ್ರಿಸ್ಮಸ್ ಹಾಡುಗಳು) ಹಾಡುತ್ತಾರೆ. ಆ ಮೂಲಕ ಯೇಸುಕ್ರಿಸ್ತನು ಈ ಮನೆಯಲ್ಲಿ ಹುಟ್ಟಿದ್ದಾನೆ ಮತ್ತು ಈ ಮನೆಯಲ್ಲಿ ಜೀವಿಸುತ್ತಾನೆ ಎಂದು ಪವಿತ್ರ ಭಾವನೆ ಮೂಡಿಸುವ ಸಂದೇಶ ಸಾರಲಾಗುತ್ತದೆ ಎನ್ನುತ್ತಾರೆ ಅಲ್ಮೆಡಾ. ಇದನ್ನೂ ಓದಿ: ಹೊಸ ವರ್ಷಾಚರಣೆ – ಬ್ರಿಗೇಡ್ ರಸ್ತೆಯಲ್ಲಿ ಜೋಡಿಗಳಿಗೆ ಪ್ರತ್ಯೇಕ ಮಾರ್ಗ
ಕ್ರಿಸ್ಮಸ್ ಹಿನ್ನೆಲೆ ಏನು?
ಕ್ರಿಸ್ಮಸ್ ಆಚರಣೆಯು ಹಲವು ಶತಮಾನಗಳ ಹಿಂದಿನದ್ದು. ಕ್ರಿಸ್ಮಸ್ ಅನ್ನು ಮೊದಲು ರೋಮ್ ದೇಶದಲ್ಲಿ ಆಚರಿಸಲಾಯಿತು ಎಂದು ಹೇಳಲಾಗುತ್ತದೆ. ಆದರೆ ಕ್ರಿಸ್‌ಮಸ್‌ಗೆ ಮುನ್ನ ರೋಮ್‌ನಲ್ಲಿ ಡಿಸೆಂಬರ್ 25ರ ದಿನವನ್ನು ಸೂರ್ಯ ದೇವರ ಜನ್ಮದಿನವಾಗಿ ಆಚರಿಸಲಾಯಿತು. ಆ ಸಮಯದಲ್ಲಿ, ರೋಮ್‌ನ ಚಕ್ರವರ್ತಿಗಳು ಸೂರ್ಯದೇವನನ್ನು ತಮ್ಮ ಮುಖ್ಯ ದೇವರಾಗಿ ಪರಿಗಣಿಸುತ್ತಿದ್ದರು ಮತ್ತು ಸೂರ್ಯದೇವನನ್ನು ಪೂಜಿಸುತ್ತಿದ್ದರು. ನಂತರ ಕಾಲಘಟ್ಟದಲ್ಲಿ ರೋಮ್‌ನಲ್ಲಿ ಕ್ರಿಶ್ಚಿಯನ್ ಧರ್ಮದ ಪ್ರಚಾರವು ವೇಗವಾಗಿ ಬೆಳೆಯಲು ಪ್ರಾರಂಭಿಸಿತು. ರೋಮ್‌ನಲ್ಲಿ ಕ್ರೈಸ್ತ ಧರ್ಮದ ಅನುಯಾಯಿಗಳ ಸಂಖ್ಯೆ ಹೆಚ್ಚಾಯಿತು. ಇದಾದ ನಂತರ ಕ್ರಿ.ಶ.336ರಲ್ಲಿ ಕ್ರೈಸ್ತ ಧರ್ಮದ ಅನುಯಾಯಿಗಳು ಯೇಸುಕ್ರಿಸ್ತನನ್ನು ಸೂರ್ಯದೇವನ ಅವತಾರವೆಂದು ಒಪ್ಪಿಕೊಂಡರು. ಅಂದಿನಿಂದ ಕ್ರಿಸ್ಮಸ್ ಹಬ್ಬವನ್ನು ಯೇಸುಕ್ರಿಸ್ತನ ಜನ್ಮದಿನವಾಗಿ ಆಚರಿಸುವ ಸಂಪ್ರದಾಯವು ಬೆಳೆದುಬಂದಿತು ಎನ್ನುತ್ತಾರೆ ಹಿರಿಯ ಪಾದ್ರಿಗಳು.
ಬೆಂಗಳೂರು: ನಗರದಲ್ಲಿ ನಡೆದ ನ್ಯೂ ಇಯರ್ ಸೆಲೆಬ್ರೇಷನ್ (New Year Celebration) ದೊಡ್ಡ ದಾಖಲೆ ಎಂದೇ ಹೇಳಬಹುದು. ಯಾಕಂದ್ರೆ ಪೊಲೀಸರು (Police) ನಿರೀಕ್ಷೆ ಮಾಡಿದ್ದಕ್ಕಿಂತ ಎರಡು ಪಟ್ಟು ಜನ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಬ್ರಿಗೇಡ್ ರೋಡ್ (Brigade Road), ಚರ್ಚ್ ಸ್ಟ್ರೀಟ್, ಎಂ.ಜಿ ರಸ್ತೆಯಲ್ಲಿ (MG Road) ಸಂಭ್ರಮಾಚರಣೆಗೆ ಬಂದ ಜನರ ಸಂಖ್ಯೆ ಸುಮಾರು 3 ಲಕ್ಷಕ್ಕೂ ಅಧಿಕ ಎಂದು ಅಂದಾಜಿಸಲಾಗಿದೆ.
ಕಳೆದೆರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ವರ್ಷಾಚರಣೆಗೆ ಬ್ರೇಕ್ ಬಿದ್ದಿತ್ತು. ಈ ವರ್ಷ ಕೊರೊನಾ (Corona) ರೂಪಾಂತರಿ ಆತಂಕ ಇದ್ರೂ ನಿರ್ಬಂಧಗಳ ಜೊತೆ ಹೊಸ ವರ್ಷ ಸ್ವಾಗತಿಸಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಈ ಹಿನ್ನೆಲೆಯಲ್ಲಿ ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಎಂ.ಜಿ ರಸ್ತೆಯಲ್ಲಿ ಜನಸಾಗರ ಸೇರಿತ್ತು. ಒಂದು ಅಂದಾಜಿನ ಪ್ರಕಾರ ಸಂಭ್ರಮಾಚರಣೆಗೆ ಬಂದ ಜನರ ಸಂಖ್ಯೆ ಸುಮಾರು 3 ಲಕ್ಷಕ್ಕೂ ಹೆಚ್ಚಿತ್ತು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಚರ್ಚ್ ಸ್ಟ್ರೀಟ್‌ನಲ್ಲಿ ಮಾರಾಮಾರಿ – ಲವರ್ ಮುಟ್ಟಿದ್ದಕ್ಕೆ ಬಿತ್ತು ಗೂಸಾ
ಕೊರೊನಾದಿಂದಾಗಿ ಕಳೆದೆರಡು ವರ್ಷಗಳಿಂದ ಡಲ್ ಹೊಡೆದಿದ್ದ ಹೊಸ ವರ್ಷಾಚರಣೆ ಈ ಬಾರಿ ಗ್ರ್ಯಾಂಡ್ ಆಗಿ ಜರುಗಿದೆ. ಜನ ಕಳೆದೆರಡು ವರ್ಷ ಜನ ವರ್ಷಾರಣೆಗೆ ನಿರ್ಬಂಧ ವಿಧಿಸಿದ್ದ ಹಿನ್ನೆಲೆ ಮನೆಯಿಂದ ಹೊರ ಬಂದಿರಲಿಲ್ಲ. ಈ ಬಾರಿ ಅವಕಾಶವಿದ್ದ ಕಾರಣ ಬೆಂಗಳೂರಿನ ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‍ನಲ್ಲಂತೂ ಜನಸಾಗರವೇ ಸೇರಿತ್ತು. ಹಾಡು, ಕುಣಿತ, ಡ್ಯಾನ್ಸ್, ಮಸ್ತಿ ಮಾಡಿ, ಪಟಾಕಿ ಸಿಡಿಸಿ ಹೊಸ ವರ್ಷವನ್ನು ಬರಮಾಡಿಕೊಂಡರು. ಬಾರ್, ಪಬ್, ಕ್ಲಬ್‍ಗಳಲ್ಲಿ ಸೇರಿದ್ದ ಪಾರ್ಟಿ ಪ್ರಿಯರು ಸಖತ್ ಎಂಜಾಯ್ ಮಾಡಿದರು. ಸಂಭ್ರಮಾಚರಣೆ ಬಳಿಕ ಪ್ರಮುಖ ರಸ್ತೆಗಳಲ್ಲಿ ಗಂಟೆಗಟ್ಟಲೇ ಟ್ರಾಫಿಕ್ ಜಾಮ್‌ನಿಂದ ವಾಹನ ಸವಾರರು ಪರದಾಡಿದರು. ಇದನ್ನೂ ಓದಿ: ಹೊಸ ವರ್ಷ ಸಂಭ್ರಮ – ನಂದಿಗಿರಿಧಾಮಕ್ಕೆ ಲಗ್ಗೆ ಇಟ್ಟ ಸಾವಿರಾರು ಪ್ರವಾಸಿಗರು
ಒಂದೆರಡು ಕಡೆ ಸಣ್ಣಪುಟ್ಟ ಗಲಾಟೆಗಳು ಹೊರತುಪಡಿಸಿ, ಉಳಿದಂತೆ ಸಿಲಿಕಾನ್ ಸಿಟಿಯಲ್ಲಿ ನ್ಯೂ ಇಯರ್ ಸಂಭ್ರಮಾಚರಣೆ ಯಶಸ್ವಿಯಾಗಿ ನಡೆದಿದೆ. 8,500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಸಿಸಿಟಿವಿ ಕಣ್ಗಾವಲಿನಲ್ಲಿ ಭದ್ರತೆ ಕಲ್ಪಿಸಲಾಗಿತ್ತು. ಹಾಗಾಗಿ ಕೊರೊನಾ ರೂಪಾಂತರಿ ಆತಂಕದ ಮಧ್ಯೆ ಜನ ಸಂಭ್ರಮದಲ್ಲಿ ಮಿಂದೆದ್ದರು.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: 2022ಕ್ಕೆ ಟಾಟಾ ಹೇಳಿ, 2023ಕ್ಕೆ ಹಾಯ್ ಹಾಯ್ ಹೇಳಲು ಇನ್ನು ಕೆಲವೇ ಗಂಟೆಯಷ್ಟೇ ಬಾಕಿ. ಈಗಾಗಲೇ ಬೆಂಗಳೂರು (Bengaluru), ಮೈಸೂರು (Mysuru), ಹುಬ್ಬಳ್ಳಿ(Hubballi), ಕಲಬುರಗಿ, ಬೆಳಗಾವಿ (Belagavi), ಮಂಗಳೂರು (Managaluru) ಸೇರಿ ರಾಜ್ಯದೆಲ್ಲೆಡೆ ಸಂಭ್ರಮಾಚರಣೆಗಳು ಶುರುವಾಗಿವೆ. ಎಲ್ಲರೂ ರಂಗು ರಂಗಾಗಿದ್ದಾರೆ.
12 ಗಂಟೆ ಯಾವಾಗ ಆಗುತ್ತಪ್ಪಾ ಎಂದು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಬೆಂಗಳೂರಿನ ಎಂಜಿ ರೋಡ್, ಬ್ರಿಗೇಡ್ ರೋಡ್‍ಗಳು ಯುವ ಸಮೂಹದಿಂದ ಕಿಕ್ಕಿರಿಯುತ್ತಿವೆ. ಪಬ್, ಬಾರ್ ಅಂಡ್ ರೆಸ್ಟೋರೆಂಟ್‍ಗಳು ಕಲರ್‌ಫುಲ್ ಆಗಿವೆ. ಮುಂಜಾಗ್ರತಾ ಕ್ರಮವಾಗಿ 8,500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಈಗಾಗಲೇ ಇಂದಿರಾನಗರ ಚರ್ಚ್ ಸ್ಟ್ರೀಟ್ ಬಂದ್ ಆಗಿದ್ದು, ದುಬಾರಿ ಚಾರ್ಜ್ ನಡುವೆಯೂ ಪಬ್‍ಗಳಿಗೆ ಫುಲ್ ಬೇಡಿಕೆ ಕೇಳಿಬರುತ್ತಿವೆ. ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿ ಪಬ್‍ಗಳು ಭರ್ತಿಯಾಗಿದ್ದು, ಪಬ್‍ಗಳು ಹೊಸ ವರ್ಷದ ಪಾರ್ಟಿಗೆ ದರ ಹೆಚ್ಚಿಸಿದೆ. ಪ್ರತಿಬಾರಿಗಿಂತ ಇಂದು ಶೇ.50ರಷ್ಟು ಏರಿಕೆ ಆಗಿದ್ದು, 2.5 ಸಾವಿರ ಇದ್ದ ಚಾರ್ಚ್ 4.5 ರಿಂದ 5 ಸಾವಿರ ಚಾರ್ಚ್ ಮಾಡಲಾಗುತ್ತಿದೆ. ದುಪ್ಪಟ್ಟು ಚಾರ್ಚ್ ನಡುವೆಯೂ ಪಾರ್ಟಿ ಪ್ರೀಯರು ಮುಂಗಡ ಬುಕ್ಕಿಂಗ್ ಮಾಡಿದ್ದಾರೆ. ಇದನ್ನೂ ಓದಿ: ಬಂಡೀಪುರದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಅವಕಾಶವಿಲ್ಲ – ಪ್ರವಾಸಿಗರಿಗೆ ಕಾಟೇಜ್ ಕೊಡದಿರಲು ನಿರ್ಧಾರ
ವಾಚ್ ಟವರ್, ವುಮೆನ್ ಸೇಫ್ ಹೌಸ್ ನಿರ್ಮಿಸಲಾಗಿದೆ. ಸಿಸಿಟಿವಿಗಳ ಕಣ್ಗಾವಲು, ಆರೆಂಜ್ ಸ್ಕ್ವಾಡ್ ಕೂಡ ಇದೆ. ಮಧ್ಯರಾತ್ರಿ 1 ಗಂಟೆಯವರೆಗೆ ಮಾತ್ರ ಸಂಭ್ರಮಾಚರಣೆಗೆ ಅವಕಾಶವಿದೆ. ನಸುಕಿನಜಾವ 2 ಗಂಟೆಯವರೆಗೂ ಮೆಟ್ರೋ ಸೇವೆ ಇರಲಿದೆ. ಅವಧಿ ಮೀರಿದ್ರೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ. ಈಗಾಗಲೇ ಏರ್‌ಪೋರ್ಟ್ ಮೇಲ್ಸೇತುವೆ ಹೊರತುಪಡಿಸಿ ಉಳಿದೆಲ್ಲಾ ಫ್ಲೈಓವರ್ ಬಂದ್ ಆಗಿವೆ. ಇದನ್ನೂ ಓದಿ: ಕಾಂಗ್ರೆಸ್ ತುಕ್ಡೆ ತುಕ್ಡೆ ಗ್ಯಾಂಗ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ: ಅಮಿತ್ ಶಾ
Live Tv
[brid partner=56869869 player=32851 video=960834 autoplay=true]
ಮುಂಬೈ: ಪುಣೆಯ ಬೀದಿಗಳಲ್ಲಿ ವೃದ್ಧೆಯೊಬ್ಬರು ಜೀವನ ನಡೆಸಲು ಪೆನ್ನುಗಳನ್ನು ಮಾರಾಟ ಮಾಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಮನ ಗೆಲ್ಲುತ್ತಿದೆ.
ಈ ಫೋಟೋವನ್ನು ಶಿಖಾ ರಾಠಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ರತನ್ ಜೀವನ ನಡೆಸುವುದಕ್ಕಾಗಿ ಪುಣೆಯ ಎಂಜಿ ರಸ್ತೆಯಲ್ಲಿ ಪೆನ್ನುಗಳನ್ನು ಮಾರಾಟ ಮಾಡುತ್ತಾರೆ. ಭಿಕ್ಷೆ ಬೇಡುವುದನ್ನು ನಿರಾಕರಿಸಿ ತನ್ನ ಜೀವನವನ್ನು ಗೌರವ ಹಾಗೂ ಸ್ವಾವಲಂಬಿಯಾಗಿ ನಡೆಸಲು ವಿವಿಧ ರೀತಿಯ ಬಣ್ಣ, ಬಣ್ಣದ ಪೆನ್ನುಗಳನ್ನು ಬಾಕ್ಸ್‌ನಲ್ಲಿ ಹಿಡಿದುಕೊಂಡು ನಗುಮುಖದಿ ಮಾರಾಟ ಮಾಡುತ್ತಿರುವ ಫೋಟೋವನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಕತ್ರಿನಾ ಜೊತೆಗಿನ ಎಂಗೇಜ್‍ಮೆಂಟ್ ಬಗ್ಗೆ ಸುಳಿವು ಕೊಟ್ರಾ ವಿಕ್ಕಿ ಕೌಶಲ್ ?
ಫೋಟೋ ಜೊತೆಗೆ ಕ್ಯಾಪ್ಷನ್‍ನಲ್ಲಿ ಇಂದು ನಾನು ಜೀವನದ ನಿಜವಾದ ನಾಯಕಿ ಹಾಗೂ ಚಾಂಪಿಯನ್ ರತನ್ ಅವರನ್ನು ನೋಡಿದೆ. ಇವರನ್ನು ನನ್ನ ಸ್ನೇಹಿರೊಂದಿಗೆ ಹೊರ ಹೋಗಿದ್ದಾಗ ಭೇಟಿಯಾದೆ. ಈ ವೇಳೆ ಬಾಕ್ಸ್ ಮೇಲೆ ಬರೆದಿರುವುದನ್ನು ಓದಿ ನನ್ನ ಸ್ನೇಹಿತರು ಪೆನ್ನನ್ನು ಖರೀದಿ ಮಾಡಿದರು. ಆಗ ರತನ್ ಬಹಳ ಸಂತೋಷಗೊಂಡು ನಗುಮುಖದಿ ಧನ್ಯವಾದ ತಿಳಿಸಿದರು. ಈ ವೇಳೆ ಅವರ ಮುಖದಲ್ಲಿ ಮಂದಹಾಸ, ಕೃತಜ್ಞತೆ ಹಾಗೂ ದಯೆ ಎದ್ದು ಕಾಣುತ್ತಿತ್ತು. ನಮಗೆ ಮತ್ತಷ್ಟು ಪೆನ್ನು ಖರೀದಿಸಬೇಕು ಎನಿಸಿತು. ಅವರ ವರ್ತನೆ ಮತ್ತು ಅವರ ಸಿಹಿಯಾದ ನಗು, ಸ್ವಾಭಿಮಾನ ನನಗೆ ಮತ್ತಷ್ಟು ಪೆನ್ನು ಖರೀದಿಸುವಂತೆ ಮಾಡಿತು ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಎಂ.ಜಿ ರಸ್ತೆಗೆ ಯಾರಾದರೂ ಹೋದಾಗ ಈ ವೃದ್ಧೆಯಿಂದ ಮತ್ತಷ್ಟು ಪೆನ್ನುಗಳನ್ನು ಖರೀದಿಸುವಂತೆ ಮನವಿ ಮಾಡಿದ್ದಾರೆ.
ಬೆಂಗಳೂರು: ನಗರದ ಎಂಜಿ ರಸ್ತೆಯ ಅಜಂತಾ ಟ್ರಿನಿಟಿ ಹೊಟೆಲ್ ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ 7 ಜನ ಪಾರಾಗಿದ್ದಾರೆ.
ಸೋಮವಾರ ರಾತ್ರಿ 10.30ರ ಸುಮಾರಿಗೆ ಘಟನೆ ನಡೆದಿದ್ದು, ಕೂದಲೆಳೆಯ ಅಂತರದಲ್ಲಿ ಭಾರೀ ಅಗ್ನಿ ಅವಘಡ ತಪ್ಪಿದಂತಾಗಿದೆ. ಘಟನೆ ವೇಳೆ 7 ಜನ ಜಸ್ಟ್ ಸೇಫ್ ಆಗಿದ್ದಾರೆ.
ನಾಗೇಶ್, ಮಹೇಂದ್ರ, ಸತ್ಯಪ್ರಕಾಶ್, ದಿನೇಶ್, ಅಭಿಷೇಕ್, ರಾಚಪ್ಪಜಿ ಮತ್ತು ಶೇಖರ್ ಅವರನ್ನು ರಕ್ಷಣೆ ಮಾಡಲಾಗಿದೆ. 7 ಜನರಲ್ಲಿ ಇಬ್ಬರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ ಪಾರ್ಕಿಂಗ್ ಲಾಟ್ ನಲ್ಲಿದ್ದ ಒಂದು ಆಟೋ, ಒಂದು ಜೀಪ್ ಸುಟ್ಟು ಕರಕಲಾಗಿದೆ.
ದಟ್ಟ ಹೊಗೆ ಆವರಿಸಿದ್ದು, ಉಸಿರಾಡಲಾಗದೇ ಹೊಟೆಲ್ ನಲ್ಲಿದ್ದ ಓರ್ವ ವ್ಯಕ್ತಿ ಎರಡನೇ ಮಹಡಿಯಿಂದ ಕಿಟಕಿ ಮೂಲಕ ಜಿಗಿದಿದ್ದಾರೆ. ಘಟನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಪೀಠೋಪಕರಣ ಭಸ್ಮವಾಗಿದ್ದು, ಹೋಟೆಲ್ ನ ರಿಸಪ್ಷನ್ ಜಾಗ ಸಂಪೂರ್ಣ ಸುಟ್ಟು ಕರಕಲಾಗಿದೆ. ಘಟನೆ ಸಂಬಂಧ ಹಲಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಡೀ ಅಜಂತಾ ಹೋಟೆಲ್ ನಲ್ಲಿ ದಟ್ಟ ಹೊಗೆ ಆವರಿಸಿದೆ. ನಾಲ್ಕು ಬ್ಲಾಕ್ ನ ತಲಾ 24 ರೂಮ್ ಸೇರಿ 96 ರೂಮ್‍ಗಳನ್ನು ಹೊಟೆಲ್ ಹೊಂದಿದೆ. ಹೋಟೆಲ್ ಪಕ್ಕದಲ್ಲೇ ಪೆಟ್ರೋಲ್ ಬಂಕ್ ಕೂಡ ಇದ್ದು, ಭಾರೀ ಅನಾಹುತ ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಮೂರು ಮಳಿಗೆಗೆ ಹೊಗೆ ಹಬ್ಬಿದ್ದು, ವ್ಯಕ್ತಿ 2ನೇ ಮಹಡಿಯಿಂದ ಕಿಟಕಿ ಮೂಲಕ ಜಿಗಿದಿದ್ದಾರೆ.
ಈ ಕುರಿತು ಡಿಸಿಪಿ ಶರಣಪ್ಪ ಮಾಹಿತಿ ನೀಡಿದ್ದು, ಹೋಟೆಲಿನ ಕೆಳಗಿನ ಮಹಡಿಯಲ್ಲಿಬೆಂಕಿ ಕಾಣಿಸಿಕೊಂಡಿದೆ. ಸುಮಾರು 10:30ಕ್ಕೆ ಹೋಟಲ್ ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಹೋಟೆಲ್‍ನಲ್ಲಿ 5 ಜನ ಇದ್ದರು. 5 ಜನರನ್ನೂ ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಐವರಲ್ಲಿ ಇಬ್ಬರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವ ಕಾರಣಕ್ಕೆ ಬೆಂಕಿ ತಗುಲಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಅಗ್ನಿಶಾಮಕ ಸಿಬ್ಬಂದಿ ಕಾರಣ ಪತ್ತೆಮಾಡಲಿದ್ದಾರೆ ಎಂದು ತಿಳಿಸಿದರು.
ಹೋಟಲ್ ಕಿಟಿಕಿಯಿಂದ ಜಿಗಿದು ಪ್ರಾಣ ಉಳಿಸಿಕೊಂಡ ರಾಚಪ್ಪಜಿ ಮತ್ತು ಶೇಖರ್ ಹೇಳಿಕೆ ನೀಡಿದ್ದು, ರಾತ್ರಿ ಸುಮಾರು 10:15ಕ್ಕೆ ಹೋಟಲ್ ಗೆ ಬಂದೆವು. ಊಟ ಮಾಡಿ, ಟಿವಿ ನೋಡುತ್ತಿರಬೇಕಾದರೆ ನಮ್ಮ ಡ್ರೈವರ್ ಬಂದು ಬೆಂಕಿ ಬಿದ್ದಿದೆ ಎಂದು ಹೇಳಿದರು. ಹೊರ ಬರಲು ಕಾರಿಡಾರ್ ಗೆ ಬಂದ್ವಿ, ಅಷ್ಟೋತ್ತಿಗೆ ಎರಡನೇ ಮಹಡಿಯಲ್ಲಿ ದಟ್ಟ ಹೊಗೆ ತುಂಬಿಕೊಂಡಿತ್ತು. ಬೆಂಕಿ ಹೆಚ್ಚಾಗ್ತಿತ್ತು, ಕೊಡಲೇ ರೂಮ್ ಕಿಟಿಕಿ ಒಡೆದು ಅಲ್ಲಿಂದ ಜಿಗಿದು ಪ್ರಾಣ ಉಳಿಸಿಕೊಂಡೆವು ಎಂದು ಹೇಳಿದ್ದಾರೆ.
ಒಟ್ಟು 96 ರೂಮ್ ಇರುವ ಹೋಟೆಲ್ ನಲ್ಲಿ ಬುಕ್ ಆಗಿದ್ದು ಕೇವಲ 1 ರೂಮ್ ಮಾತ್ರ. ಹೋಟೆಲ್ ಮಾಲೀಕರ ಕಡೆಯಿಂದ ರಾತ್ರಿ ಇಬ್ಬರು ಬಂದು ಉಳಿದಿದ್ದರು ಎನ್ನಲಾಗುತ್ತಿದೆ. ಉಳಿದಂತೆ 95 ರೂಮ್ ಗಳು ಖಾಲಿ ಇದ್ದವು. ಕೇವಲ ಕೆಲಸಗಾರರು ಮಾತ್ರ ಐವರಿದ್ದರು. ಹೀಗಾಗಿ 7 ಜನರ ರಕ್ಷಣೆ ಬೇಗನೇ ಆಗಿದೆ. ರೂಮ್ ಗಳು ಫುಲ್ ಆಗಿದ್ದರೆ ಮಾರಣಹೋಮವೇ ನಡೆಯುತ್ತಿತ್ತು.
ಕಟ್ಟಡದಿಂದ ಜಿಗಿದು ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಕೂಡ ಇತ್ತು. ಅಲ್ಲದೇ ಹೋಟೆಲ್ ಪಕ್ಕದಲ್ಲೆ ಪೆಟ್ರೋಲ್ ಬಂಕ್ ಇದ್ದು, ಅಲ್ಲಿವರೆಗೆ ಬೆಂಕಿ ವ್ಯಾಪಿಸಿದ್ದರೂ ದೊಡ್ಡ ಅನಾಹುತ ನಡೆದುಹೋಗ್ತಿತ್ತು. ಸದ್ಯ ಘಟನೆ ನಡೆದ ಐದೇ ನಿಮಿಷಕ್ಕೆ ಅಗ್ನಿಶಾಮಕ ವಾಹನ ಆಗಮಿಸಿದೆ. ಹೀಗಾಗಿಯೇ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ವಿಗ್ರಹಕ್ಕೆ ಏನೂ ಆಗಿಲ್ಲ
ಇಡೀ ಹೋಟೆಲ್ ಸುಟ್ಟು ಕರಕಲಾದರೂ ಆ ವಿಗ್ರಹಕ್ಕೆ ಮಾತ್ರ ಏನು ಆಗಿಲ್ಲ, ಅಜಂತಾ ಟ್ರಿನಿಟಿ ಹೋಟೆಲ್ ರಿಸೆಪ್ಷನ್ ಬಳಿ ಇದ್ದ ಗಣೇಶ ಕಲ್ಲಿನ ವಿಗ್ರಹಕ್ಕೆ ಯಾವುದೇ ಹಾನಿಯಾಗಿಲ್ಲ. ಹೋಟೆಲ್ ಸುಟ್ಟು, ಗೋಡೆ ಕುಸಿದು ಬೀಳುತ್ತಿದ್ದರೂ ವಿಗ್ರಹವಿದ್ದ ಜಾಗ ಮಾತ್ರ ಏನೂ ಆಗಿಲ್ಲ. ಗಣೇಶನ ಮೂರ್ತಿಗೂ ಯಾವುದೇ ಹಾನಿ ಆಗಿಲ್ಲ.