Tag: Mexican Chicken Salad

  • ಮೆಕ್ಸಿಕನ್ ಸ್ಟೈಲ್‌ನಲ್ಲಿ ಚಿಕನ್ ಸಲಾಡ್ ಮಾಡಿ ನೋಡಿ

    ಮೆಕ್ಸಿಕನ್ ಸ್ಟೈಲ್‌ನಲ್ಲಿ ಚಿಕನ್ ಸಲಾಡ್ ಮಾಡಿ ನೋಡಿ

    ಡುಗೆ ಮಾಡೋದು ಕೂಡಾ ಒಂದು ಕಲೆ ಎಂದರೆ ತಪ್ಪಲ್ಲ. ಏಕೆಂದರೆ ಅಡುಗೆ ಪ್ರತಿಯೊಬ್ಬರೂ ಮಾಡುತ್ತಾರೆ. ಆದರೆ ಪ್ರತಿ ಬಾರಿ ವಿವಿಧ ರೀತಿಯಲ್ಲಿ ಮಾಡೋದು ಎಲ್ಲರಿಂದಲೂ ಸಾಧ್ಯವಿಲ್ಲ. ಅಡುಗೆ ಪ್ರಿಯರು ಯಾವಾಗಲೂ ಹೊಸದೇನನ್ನು ಮಾಡಬಹುದು ಎಂದು ಹುಡುಕುತ್ತಲೇ ಇರುತ್ತಾರೆ. ಅಂತಹವರಿಗಾಗಿ ನಾವಿಂದು ಒಂದು ರೆಸಿಪಿ ಹೇಳಿಕೊಡುತ್ತಿದ್ದೇವೆ. ಹೊಸ ಅಡುಗೆ ಮಾಡಲು ಬಯಸುವವರು, ದೇಶ ವಿದೇಶಗಳ ಫೇಮಸ್ ಅಡುಗೆಗಳನ್ನು ಪ್ರಯತ್ನಿಸಲು ಬಯಸುವವರು ಮೆಕ್ಸಿಕನ್ ಸ್ಟೈಲ್‌ನ ಚಿಕನ್ ಸಲಾಡ್ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಮೂಳೆಗಳಿಲ್ಲದ ಚಿಕನ್ – 500 ಗ್ರಾಂ
    ಮೊಸರು – 1 ಕಪ್
    ಮೆಯೋನೀಸ್ – ಅರ್ಧ ಕಪ್
    ಸಣ್ಣಗೆ ಹೆಚ್ಚಿದ ಈರುಳ್ಳಿ – 1
    ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಮ್ – 1
    ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – ಅರ್ಧ ಕಪ್
    ಸಣ್ಣಗೆ ಹೆಚ್ಚಿದ ಸ್ಪ್ರಿಂಗ್ ಆನಿಯನ್ – ಕಾಲು ಕಪ್
    ನಿಂಬೆ ಹಣ್ಣು – 1
    ಜೀರಿಗೆ ಪುಡಿ – 3 ಟೀಸ್ಪೂನ್
    ಕೆಂಪು ಮೆಣಸಿನಪುಡಿ – 2 ಟೀಸ್ಪೂನ್
    ಓರಿಗಾನೋ – 2 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಬೆಳ್ಳುಳ್ಳಿ ಪುಡಿ – ಒಂದೂವರೆ ಟೀಸ್ಪೂನ್
    ಸಕ್ಕರೆ ಪುಡಿ – 1 ಟೀಸ್ಪೂನ್
    ಸಾಸಿವೆ ಪುಡಿ – 1 ಟೀಸ್ಪೂನ್
    ಕರಿ ಮೆಣಸಿನಪುಡಿ – 1 ಟೀಸ್ಪೂನ್ ಇದನ್ನೂ ಓದಿ: ಸಖತ್ ರುಚಿಯಾದ ಚೀಸ್ ಕುಲ್ಚಾ ನೀವೂ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಚಿಕನ್ ಅನ್ನು ಬೇಯಿಸಿಕೊಂಡು, ನೀರನ್ನು ಹರಿಸಿ, ಸಣ್ಣ ಸಣ್ಣ ಚೂರುಗಳನ್ನಾಗಿ ಮಾಡಿಕೊಂಡು ಪಕ್ಕಕ್ಕಿಡಿ.
    * ಈಗ ಒಂದು ದೊಡ್ಡ ಪಾತ್ರೆ ತೆಗೆದುಕೊಂಡು, ಅದರಲ್ಲಿ ಈರುಳ್ಳಿ, ಕ್ಯಾಪ್ಸಿಕಮ್, ಕೊತ್ತಂಬರಿ ಸೊಪ್ಪು, ಸ್ಪ್ರಿಂಗ್ ಆನಿಯನ್ ಹಾಕಿ.
    * ತರಕಾರಿಗಳಿಗೆ ಜೀರಿಗೆ ಪುಡಿ, ಕೆಂಪು ಮೆಣಸಿನಪುಡಿ, ಓರಿಗಾನೋ, ಉಪ್ಪು, ಬೆಳ್ಳುಳ್ಳಿ ಪುಡಿ, ಸಕ್ಕರೆ ಪುಡಿ, ಸಾಸಿವೆ ಪುಡಿ ಹಾಗೂ ಕರಿ ಮೆಣಸಿನಪುಡಿ ಹಾಕಿ ಮಿಶ್ರಣ ಮಾಡಿ.
    * ಈಗ ಅದಕ್ಕೆ ಮೊಸರು ಹಾಗೂ ಮೆಯೋನೀಸ್ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ.
    * ಈಗ ಚಿಕನ್ ಸೇರಿಸಿ ಬಳಿಕ ನಿಂಬೆ ರಸ ಹಾಕಿ ಎಲ್ಲವನ್ನೂ ಮಿಶ್ರಣ ಮಾಡಿ.
    * ಪಾತ್ರೆಯನ್ನು ಮುಚ್ಚಿ, ಫ್ರಿಡ್ಜ್‌ನಲ್ಲಿಟ್ಟು ತಣ್ಣಗಾಗಿಸಿ.
    * ಇದೀಗ ಟೇಸ್ಟಿ ಮೆಕ್ಸಿಕನ್ ಚಿಕನ್ ಸಲಾಡ್ ತಯಾರಾಗಿದ್ದು, ಇದನ್ನು ನೀವು ಚಿಪ್ಸ್, ಕ್ರ್ಯಾಕರ್ಸ್, ಸ್ಯಾಂಡ್‌ವಿಚ್ ಅಥವಾ ಅನ್ನದೊಂದಿಗೂ ಸವಿಯಬಹುದು. ಈ ಸಲಾಡ್ ಅನ್ನು ಫ್ರಿಜ್‌ನಲ್ಲಿಟ್ಟರೆ ಹಲವು ದಿನಗಳವರೆಗೂ ಬಳಸಬಹುದು. ಇದನ್ನೂ ಓದಿ: ವೀಕೆಂಡ್‌ಗೆ ಮಾಡಿ ಕ್ರೀಮಿ ಸಿಗಡಿ ಪಾಸ್ತಾ