Tag: Mettur Reservoir

  • KRS ಭರ್ತಿಗೆ ಇನ್ನೊಂದು ಅಡಿ ಬಾಕಿ-ಮೆಟ್ಟೂರು ಜಲಾಶಯಕ್ಕೆ 33.55 ಟಿಎಂಸಿ ನೀರು

    KRS ಭರ್ತಿಗೆ ಇನ್ನೊಂದು ಅಡಿ ಬಾಕಿ-ಮೆಟ್ಟೂರು ಜಲಾಶಯಕ್ಕೆ 33.55 ಟಿಎಂಸಿ ನೀರು

    ಮಂಡ್ಯ/ಚಾಮರಾಜನಗರ: ಮಂಡ್ಯ ಜಿಲ್ಲೆಯಲ್ಲಿರುವ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್‍ಎಸ್ ಡ್ಯಾಂ ಭರ್ತಿಗೆ ಇನ್ನೊಂದು ಅಡಿ ಬಾಕಿ ಇದೆ. ನಾಳೆ ವೇಳೆಗೆ ಜಲಾಶಯ ಬಹುತೇಕ ಭರ್ತಿ ಆಗಲಿದೆ

    ಜಲಾಶಯದ ಗರಿಷ್ಠ ಸಾಮರ್ಥ್ಯ 124.80 ಅಡಿಗಳಿದ್ದು, ಸದ್ಯ 123.45 ಅಡಿ ಭರ್ತಿಯಾಗಿದೆ. ಜಲಾಶಯಕ್ಕೆ 18,027 ಕ್ಯೂಸೆಕ್ ಒಳ ಹರಿವು, 18,027 ಕ್ಯೂಸೆಕ್ ಒಳ ಹರಿವು ಇದೆ. ಒಂದೇ ವಾರದಲ್ಲಿ ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ ಹರಿದ 33.55 ಟಿಎಂಸಿ ನೀರು ಹರಿದಿದ್ದು, ತಲೆದೋರಲಿದ್ದ ಕಾವೇರಿ ಸದ್ಯಕ್ಕೆ ದೂರವಾಗಿದೆ.

    ಕಬಿನಿ ಹಾಗೂ ಕೆಆರ್‍ಎಸ್ ನಿಂದ ಅಪಾರ ಪ್ರಮಾಣದ ನೀರು ಬಿಟ್ಟ ಹಿನ್ನೆಲೆ ಒಂದೇ ವಾರದಲ್ಲಿ ತಮಿಳುನಾಡಿಗೆ ಅಪಾರ ಪ್ರಮಾಣದ ನೀರು ಹರಿಸಲಾಗಿದೆ. ಆಗಸ್ಟ್ 7 ರಂದು ಕೇವಲ 28.99 ಟಿಎಂಸಿ ಇದ್ದ ನೀರು ಇಂದು 61.54 ಟಿಎಂಸಿಗೆ ಏರಿಕೆಯಾಗಿದೆ. ಮೆಟ್ಟೂರು ಡ್ಯಾಂನ ಗರಿಷ್ಠ ಮಟ್ಟ 214 ಅಡಿಗಳಿದ್ದು, ಸದ್ಯ 97 ಅಡಿ ಭರ್ತಿಯಾಗಿದೆ.

  • ತಮಿಳುನಾಡಿನ ನೀರಿನ ದಾಹ ತಣಿಸಿದ ಕಾವೇರಿ – ಮೆಟ್ಟೂರು ಜಲಾಶಯ ಭರ್ತಿ

    ತಮಿಳುನಾಡಿನ ನೀರಿನ ದಾಹ ತಣಿಸಿದ ಕಾವೇರಿ – ಮೆಟ್ಟೂರು ಜಲಾಶಯ ಭರ್ತಿ

    ಚಾಮರಾಜನಗರ: ಕಾವೇರಿ ನೀರಿಗಾಗಿ ಪದೇ ಪದೇ ಕ್ಯಾತೆ ತೆಗೆಯುತ್ತಿದ್ದ ತಮಿಳುನಾಡಿಗೆ ಇದೀಗ ಭರಪೂರ ನೀರು ಹರಿದಿದೆ.

    ತಮಿಳುನಾಡಿನ ಮೆಟ್ಟೂರು ಜಲಾಶಯ ಎರಡು ತಿಂಗಳ ಅವಧಿಯಲ್ಲಿ ನಾಲ್ಕನೇ ಬಾರಿಗೆ ಸಂಪೂರ್ಣ ಭರ್ತಿಯಾಗಿದ್ದು, ಈ ಮೂಲಕ ತಮಿಳುನಾಡಿನ ನೀರಿನ ದಾಹವನ್ನು ಕಾವೇರಿ ತಣಿಸಿದ್ದಾಳೆ.

    ಕಾವೇರಿ ಕೊಳ್ಳದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹೆಚ್ಚು ನೀರು ಸಂಗ್ರವಾಗಿದ್ದು, ಇದರಿಂದಾಗಿ ಭಾರೀ ಪ್ರಮಾಣದ ನೀರು ಮೆಟ್ಟೂರು ಜಲಾಶಯ ತಲುಪಿದೆ. ಈ ಮೂಲಕ ನಾಲ್ಕನೇ ಬಾರಿಗೆ ಮೆಟ್ಟೂರು ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾದಂತಾಗಿದೆ.

    ಮೆಟ್ಟೂರು ಜಲಾಶಯದ ಗರಿಷ್ಟ ನೀರಿನ ಮಟ್ಟ 120 ಅಡಿಯಾಗಿದ್ದು, ಇಂದಿನ ಮಟ್ಟ 120 ಅಡಿ ಇದೆ. ಈ ಮೂಲಕ ಸಂಪೂರ್ಣ ಭರ್ತಿಯಾಗಿದೆ. ಒಟ್ಟು 93.47 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವನ್ನು ಜಲಾಶಯ ಹೊಂದಿದೆ. ಪ್ರಸ್ತುತ ಒಳ ಹರಿವು 16,678 ಕ್ಯೂಸೆಕ್ ಇದ್ದು, ಹೊರ ಹರಿವು 15,600 ಸಾವಿರ ಕ್ಯೂಸೆಕ್ ಇದೆ.