Tag: Metrology Department

  • ಇನ್ನೂ ಮೂರೇ ಗಂಟೆಗಳಲ್ಲಿ ಬೆಂಗ್ಳೂರಿನಲ್ಲಿ ಭಾರೀ ಮಳೆ – ವಿಪತ್ತು ನಿರ್ವಹಣಾ ಇಲಾಖೆ ಎಚ್ಚರಿಕೆ

    ಇನ್ನೂ ಮೂರೇ ಗಂಟೆಗಳಲ್ಲಿ ಬೆಂಗ್ಳೂರಿನಲ್ಲಿ ಭಾರೀ ಮಳೆ – ವಿಪತ್ತು ನಿರ್ವಹಣಾ ಇಲಾಖೆ ಎಚ್ಚರಿಕೆ

    ಬೆಂಗಳೂರು: ನಗರದಲ್ಲಿ ಬಿರುಗಾಳಿ, ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಲಿದೆ (Heavy Rain) ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಎಚ್ಚರಿಸಿದೆ.

    ಮುಂದಿನ ಮೂರು ಗಂಟೆಗಳಲ್ಲಿ ಬೆಂಗಳೂರು ನಗರ (Bengaluru City), ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಮಂಡ್ಯ (Mandya) ಜಿಲ್ಲೆ ಸೇರಿದಂತೆ ವಿವಿಧೆಡೆ ಭಾರೀ ಮಳೆಯಾಗಲಿದೆ ಎಂದೂ ಹೇಳಿದೆ. ಈಗಾಗಲೇ ಮಳೆ ಆವರಿಸಿದ್ದು, ದಾಸರಹಳ್ಳಿ, ಮಲ್ಲಸಂದ್ರ, ಬಾಗಲಗುಂಟೆ ಸೇರಿದಂತೆ ಹಲವೆಡೆ ಕಳೆದ ಅರ್ಧ ಗಂಟೆಯಿಂದ ಮಳೆ ಸುರಿಯುತ್ತಿದೆ. ರಸ್ತೆ ಇಕ್ಕೆಲಗಳಲ್ಲಿ ನೀರು ತುಂಬಿಕೊಂಡಿದ್ದು, ಸಂಚಾರ ಅಸ್ತವ್ಯಸ್ಥಗೊಂಡಿದೆ. ಇದನ್ನೂ ಓದಿ: ಸೈಬರ್ ಕಳ್ಳರ ಕೈಚಳಕ – ಪೊಲೀಸ್ ಇಲಾಖೆ ಹೆಸರಿನಲ್ಲೇ ಫೇಕ್ ಫೇಸ್‍ಬುಕ್ ಅಕೌಂಟ್ ಸೃಷ್ಠಿ

    ರಾಜ್ಯದಲ್ಲಿ ಮಳೆ ಆರ್ಭಟ ಮುಂದುವರಿಯುತ್ತಿದ್ದು, ಸೋಮವಾರದಿಂದ (ಮೇ 29) ಮೂರ್ನಾಲ್ಕು ದಿನ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ಕರಾವಳಿ, ದಕ್ಷಿಣ ಒಳನಾಡಿನ ಕೆಲವಡೆ ಧಾರಾಕಾರ ಮಳೆಯಾಗಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ಚಾಮರಾಜನಗರ, ತುಮಕೂರು, ಮಂಡ್ಯ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ರಾಮನಗರ ಜಿಲ್ಲೆಗಳಲ್ಲಿ ಜೂನ್ 2ರ ವರೆಗೂ ಅಧಿಕ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ಗಾಬರಿ ಬೇಡ, ಊಹಾಪೋಹಗಳಿಗೆ ಕಿವಿಗೊಡಬೇಡಿ: ಡಿಕೆಶಿ

    ಇನ್ನೂ ದಕ್ಷಿಣ ಕನ್ನಡ, ಉಡುಪಿ,ಉತ್ತರ ಕನ್ನಡ, ಬಾಗಲಕೋಟೆ, ಕೊಪ್ಪಳ, ರಾಯಚೂರು, ವಿಜಯಪುರ, ಮೈಸೂರು, ವಿಜಯನಗರ, ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಮುಂಗಾರು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.

  • ರಾಜ್ಯದ ಹವಾಮಾನ ವರದಿ: 26-09-2022

    ರಾಜ್ಯದ ಹವಾಮಾನ ವರದಿ: 26-09-2022

    ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಮುಂಜಾನೆ ಚಳಿ ವಾತಾವಾರಣ ಇರಲಿದೆ. ಮಧ್ಯಾಹ್ನದ ವೇಳೆ ಬಿಸಿಲಿನ ತಾಪಮಾನ ಹೆಚ್ಚಾಗಲಿದ್ದು, ಸಂಜೆ ವೇಳೆಗೆ ಮೋಡ ಕವಿದ ವಾತಾವಾರಣ ಇರಲಿದೆ. ಕರಾವಳಿ ಸೇರಿದಂತೆ ಕೆಲ ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

    ರಾಜಧಾನಿ ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮೈಸೂರಿನಲ್ಲಿ ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಇನ್ನೂ ಚಿಕ್ಕಬಳ್ಳಾಪುರ, ಕೋಲಾರ, ಬಳ್ಳಾರಿ, ರಾಯಚೂರು, ಯಾದಗಿರಿ, ವಿಜಯಪುರ, ಬೀದರ್, ಕಲಬುರಗಿ, ಬಾಗಲಕೋಟೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    weather

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-19
    ಮಂಗಳೂರು: 30-24
    ಶಿವಮೊಗ್ಗ: 31-20
    ಬೆಳಗಾವಿ: 28-18
    ಮೈಸೂರು: 31-19
    ಮಂಡ್ಯ: 31-20

    weather

    ಮಡಿಕೇರಿ: 26-16
    ರಾಮನಗರ: 29-22
    ಹಾಸನ: 29-18
    ಚಾಮರಾಜನಗರ: 31-21
    ಚಿಕ್ಕಬಳ್ಳಾಪುರ: 27-19
    ಕೋಲಾರ: 28-21

    weather (1)

    ತುಮಕೂರು: 28-19
    ಉಡುಪಿ: 30-24
    ಕಾರವಾರ: 30-24
    ಚಿಕ್ಕಮಗಳೂರು: 28-17
    ದಾವಣಗೆರೆ: 31-20

    weather

    ಚಿತ್ರದುರ್ಗ: 29-20
    ಹಾವೇರಿ: 31-20
    ಬಳ್ಳಾರಿ: 31-23
    ಗದಗ: 30-20
    ಕೊಪ್ಪಳ: 29-22
    ರಾಯಚೂರು: 31-23

    weather

    ಯಾದಗಿರಿ: 31-23
    ವಿಜಯಪುರ: 28-21
    ಬೀದರ್: 28-21
    ಕಲಬುರಗಿ: 29-22
    ಬಾಗಲಕೋಟೆ: 30-22

    Live Tv
    [brid partner=56869869 player=32851 video=960834 autoplay=true]

  • ರಾಜ್ಯದ ಹವಾಮಾನ ವರದಿ: 10-09-2022

    ರಾಜ್ಯದ ಹವಾಮಾನ ವರದಿ: 10-09-2022

    ರಾಜ್ಯದಲ್ಲಿ ಎಂದಿನಂತೆ ಭಾರೀ ಮಳೆ ಮುಂದುವರಿಯಲಿದೆ. ಕರಾವಳಿ, ಉತ್ತರ, ದಕ್ಷಿಣ ಒಳನಾಡಿನಲ್ಲಿ ಮಳೆ ಅಬ್ಬರ ಮುಂದುವರಿಯಲಿದೆ.

    ಕರಾವಳಿಗೆ ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡಿಗೆ ಹಾಗೂ ದಕ್ಷಿಣ ಒಳನಾಡಿಗೆ ಇಂದು ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಮೈಸೂರು, ಚಾಮರಾಜನಗರ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.  

    weather

    ರಾಜಧಾನಿ ಬೆಂಗಳೂರಿನಲ್ಲಿ ಇಂದು ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಮನಗರ ಜಿಲ್ಲೆಉಲ್ಲಿ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 27-20
    ಮಂಗಳೂರು: 28-24
    ಶಿವಮೊಗ್ಗ: 26-21
    ಬೆಳಗಾವಿ: 25-21
    ಮೈಸೂರು: 28-21
    ಮಂಡ್ಯ: 28-21

    ಕೊಡಗು: 22-18
    ರಾಮನಗರ: 31-24
    ಹಾಸನ: 24-19
    ಚಾಮರಾಜನಗರ: 28-21
    ಚಿಕ್ಕಬಳ್ಳಾಪುರ: 27-20
    ಕೋಲಾರ: 28-21

    weather

    ತುಮಕೂರು: 28-21
    ಉಡುಪಿ: 28-25
    ಕಾರವಾರ: 28-25
    ಚಿಕ್ಕಮಗಳೂರು: 23-19
    ದಾವಣಗೆರೆ: 27-22

    weather

    ಚಿತ್ರದುರ್ಗ: 27-21
    ಹಾವೇರಿ: 27-22
    ಬಳ್ಳಾರಿ: 29-23
    ಗದಗ: 28-22
    ಕೊಪ್ಪಳ: 28-23
    ರಾಯಚೂರು: 29-23

    ಯಾದಗಿರಿ: 28-23
    ವಿಜಯಪುರ: 28-22
    ಬೀದರ್: 26-21
    ಕಲಬುರಗಿ: 27-23
    ಬಾಗಲಕೋಟೆ: 28-23

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಿನಲ್ಲಿ ಎಲ್ಲಿ-ಎಷ್ಟು ಮಳೆಯಾಗಿದೆ?

    ಬೆಂಗಳೂರಿನಲ್ಲಿ ಎಲ್ಲಿ-ಎಷ್ಟು ಮಳೆಯಾಗಿದೆ?

    ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ನಿನ್ನೆ ರಾತ್ರಿಯಿಡೀ ಸುರಿದ ಭಾರೀ ಮಳೆಗೆ ಬೆಂಗಳೂರಿನ ಜನ ಹೈರಾಣಾಗಿದ್ದಾರೆ. ಬೆಂಗಳೂರು ಉತ್ತರ ಭಾಗದಲ್ಲಿ ಅತಿಹೆಚ್ಚು ಮಳೆಯಾಗಿದ್ದು, ಹಲವೆಡೆ ರಸ್ತೆ ಸಂಚಾರ ಬಂದ್‌ ಆಗಿದೆ. ರಸ್ತೆಗಳು ನದಿಗಳಂತಾಗಿದ್ದು, ವಾಹನ ಸಂಚಾರಕ್ಕೂ ಪರದಾಡುತ್ತಿದ್ದಾರೆ.

    ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ಪೈಕಿ ಉತ್ತರ ಬೆಂಗಳೂರಿನ ಅತಿದೊಡ್ಡ ಮಾನ್ಯತಾ ಟೆಕ್ ಪಾರ್ಕ್ ಸಹ ಜಲಾವೃತಗೊಂಡಿದ್ದು, ಇಂದು ಕೆಲವು ನೌಕರರು ತಮ್ಮ ಕಚೇರಿಗೆ ತಲುಪಲಾಗದೇ ಮನೆಗೆ ಮರಳಿದ್ದಾರೆ. ಈ ನಡುವೆ ಕಳೆದ 24 ಗಂಟೆಯಲ್ಲಿ ಬೆಂಗಳೂರಿನ ವಿವಿಧ ವಲಯಗಳಲ್ಲಿ ಎಷ್ಟು ಪ್ರಮಾಣದ ಮಳೆಯಾಗಿದೆ ಎಂಬುದನ್ನು ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಅತ್ಯಾಚಾರದಂತಹ ಘಟನೆ ನಡೆಯುತ್ತಲೇ ಇರುತ್ತೆ: ಜಾರ್ಖಂಡ್ ಸಿಎಂ ಹೇಳಿಕೆಗೆ ತೀವ್ರ ವಿರೋಧ

    ಎಲ್ಲಿ-ಎಷ್ಟು ಮಿ.ಮೀ ಮಳೆಯಾಗಿದೆ?
    ಸಂಪಂಗಿರಾಮನಗರ(2) (ಪೂರ್ವವಲಯ) – 148.50
    ಎಚ್‌ಎಲ್‌ ವಿಮಾನ ನಿಲ್ದಾಣ (1) (ಮಹದೇವಪುರ ವಲಯ) – 142
    ವರ್ತೂರು – 141
    ಪುಲಕೇಶಿನಗರ (ಪೂರ್ವವಲಯ) – 139
    ರಾಜಮಹಲ್ ಗುಟ್ಟಹಳ್ಳಿ (ಪಶ್ಚಿಮ ವಲಯ) – 138
    ದೊಡ್ಡನೆಕ್ಕುಂದಿ (ಮಹದೇವಪುರ ವಲಯ) – 133.50
    ಮಾರತ್ತಹಳ್ಳಿ (ಪೂರ್ವವಲಯ) – 129
    ಕೊನೆನ ಅಗ್ರಹಾರ (ಜಿಪಿ) – 114.50
    ವಿದ್ಯಾಪೀಠ (ದಕ್ಷಿಣ ವಲಯ) – 114.50

    ಹಂಪಿ ನಗರ (ದಕ್ಷಿಣ ವಲಯ) – 104
    ಎಚ್‌ಎಎಲ್‌ ವಿಮಾನ ನಿಲ್ದಾಣ-2 (ಮಹದೇವಪುರ ವಲಯ) – 102.50
    ವಿಶ್ವೇಶ್ವರಪುರಂ (ದಕ್ಷಿಣ ವಲಯ) – 98
    ಹೊರಮಾವು(2) (ಮಹದೇವಪುರ ವಲಯ) – 94
    ಹಗದೂರು (ಮಹದೇವಪುರ ವಲಯ) – 93.50
    ಗಾಳಿಯಾಂಜನೇಯ ದೇವಸ್ಥಾನ ವಾರ್ಡ್ (ದಕ್ಷಿಣ ವಲಯ) – 93.50
    ಬೆಳ್ಳಂದೂರು(2) (ಮಹದೇವಪುರ ವಲಯ) – 89

    ಕೊಟ್ಟಿಗೆಪಾಳ್ಯ (ಆರ್‌ನಗರ ವಲಯ) – 89
    ಯಲಹಂಕ (ಯಲಹಂಕ ವಲಯ) – 87
    ಬಾಣಸವಾಡಿ (ಪೂರ್ವವಲಯ) – 87
    ಕೋರಮಂಗಲ (ದಕ್ಷಿಣ ವಲಯ) – 83
    ನಾಗರಭಾವಿ (ಪಶ್ಚಿಮ ವಲಯ) – 79
    ನಾಗಪುರ (ಪಶ್ಚಿಮ ವಲಯ) – 75.50
    ನಾಯಂಡಹಳ್ಳಿ (ಪಶ್ಚಿಮ ವಲಯ) – 75.50
    ಅತ್ತೂರು (ಯಲಹಂಕ ವಲಯ) – 74
    ಯಲಹಂಕ- ಕೆಎಸ್‌ಎನ್‌ಡಿಎಂಎಸ್‌ (ಯಲಹಂಕ ವಲಯ) – 72.50

    ಯಾನಂದನಗರ (ಪಶ್ಚಿಮ ವಲಯ) – 71.50
    ಚೌಡೇಶ್ವರಿ ವಾರ್ಡ್ (ಯಲಹಂಕ ವಲಯ) – 70.50
    ವಿಶ್ವನಾಥ ನಾಗೇನಹಳ್ಳಿ (ಪೂರ್ವವಲಯ) – 69
    ಹೆಮ್ಮಿಗೆಪುರ(1) (ಆರ್‌ಆರ್‌ ನಗರ ವಲಯ) – 69
    ಎಚ್‌ಆರ್‌ಎಸ್‌ ಲೇಔಟ್ (ಬೊಮ್ಮನಹಳ್ಳಿ ವಲಯ) – 67
    ಸಿಂಗಸಂದ್ರ(1) (ಬೊಮ್ಮನಹಳ್ಳಿ ವಲಯ) – 66.50
    ವಿದ್ಯಾರಣ್ಯಪುರ (ಯಲಹಂಕಜೋನ್) – 66
    ಎಚ್.ಗೊಲ್ಲಹಳ್ಳಿ (ಜಿಪಿ) – 64.50

    Live Tv
    [brid partner=56869869 player=32851 video=960834 autoplay=true]

  • ರಾಜ್ಯದ ಹವಾಮಾನ ವರದಿ: 19-08-2022

    ರಾಜ್ಯದ ಹವಾಮಾನ ವರದಿ: 19-08-2022

    ಕೆಲವು ದಿನಗಳಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಬ್ಬರಿಸಿದ ಮಳೆ ಇದೀಗ ಕೊಂಚ ಬಿಡುವು ನೀಡಿದ್ದು, ಒಂದೆರಡು ಜಿಲ್ಲೆಗಳಲ್ಲಿ ಮಾತ್ರ ಎಂದಿನಂತೆ ಮಳೆ ಮುಂದುವರೆಯಲಿದೆ.

    ಬೆಂಗಳೂರು, ಕಲಬುರಗಿ, ಮಂಗಳೂರು, ಶಿವಮೊಗ್ಗ, ಮೈಸೂರು, ಮಂಡ್ಯ, ಬೀದರ್, ಹಾಸನ, ರಾಯಚೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ದಕ್ಷಿಣ ಒಳನಾಡು ಭಾಗಗಳಲ್ಲಿ ಮುಂಜಾನೆ ಮೋಡ ಕವಿದ ವಾತಾವರಣ ಇರಲಿದ್ದು, ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪಮಾನ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    weather

    ರಾಜಧಾನಿ ಬೆಂಗಳೂರಿನಲ್ಲಿಂದು ಗರಿಷ್ಟ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಯಾದಗಿರಿಯಲ್ಲಿ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಾಳೆಯಿಂದ 6 ದಿನ ಮಳೆ: ಶಿವಮೊಗ್ಗ ಜಿಲ್ಲೆಯಲ್ಲಿ ನಾಳೆಯಿಂದ 6 ದಿನಗಳ ಕಾಲ ಮಳೆಯಾಗಲಿದ್ದು, ವಿಜಯಪುರದಲ್ಲಿ ಮೂರು ದಿನ ಮಳೆಯಾಗಲಿದೆ. ಹಾಗೆಯೇ ಬೆಳಗಾವಿ, ಕೊಡಗು, ರಾಮನಗರ, ಗದಗ, ವಿಜಯಪುರ, ಕೊಪ್ಪಳ, ಬಾಗಲಕೋಟೆ ಜಿಲ್ಲೆಗಳಲ್ಲೂ ಬಿಸಿಲು ಸಹಿತ ಜುತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಹೇಳಿದೆ.

    weather

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-19
    ಮಂಗಳೂರು: 29-14
    ಶಿವಮೊಗ್ಗ: 28-21
    ಬೆಳಗಾವಿ: 26-20
    ಮೈಸೂರು: 30-20

    ಮಂಡ್ಯ: 31-21
    ಕೊಡಗು: 24-17
    ರಾಮನಗರ: 32-26
    ಹಾಸನ: 27-19
    ಚಾಮರಾಜನಗರ: 31-20

    ಚಿಕ್ಕಬಳ್ಳಾಪುರ: 28-18
    ಕೋಲಾರ: 30-21
    ತುಮಕೂರು: 29-20
    ಉಡುಪಿ: 29-24
    ಚಿಕ್ಕಮಗಳೂರು: 26-18

    ದಾವಣಗೆರೆ: 29-21
    ಚಿತ್ರದುರ್ಗ: 29-21
    ಹಾವೇರಿ: 29-21
    ಬಳ್ಳಾರಿ: 33-23
    ಗದಗ: 29-21

    ಕೊಪ್ಪಳ: 31-22
    ರಾಯಚೂರು: 32-33
    ಯಾದಗಿರಿ: 32-23
    ವಿಜಯಪುರ: 29-21
    ಬೀದರ್: 28-21
    ಕಲಬುರಗಿ: 31-22
    ಬಾಗಲಕೋಟೆ: 31-22

    Live Tv
    [brid partner=56869869 player=32851 video=960834 autoplay=true]

  • ರಾಜ್ಯದ ಹವಾಮಾನ ವರದಿ: 16-08-2022

    ರಾಜ್ಯದ ಹವಾಮಾನ ವರದಿ: 16-08-2022

    ರಾಜ್ಯದಲ್ಲಿ ಹಲವು ಜಿಲ್ಲೆಗಳಿಂದ ಅಬ್ಬರಿಸಿದ ಮಳೆ ಕೆಲ ಜಿಲ್ಲೆಗಳಿಗೆ ಬಿಡುವು ನೀಡಿದ್ದು, ಮರ‍್ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ಎಂದಿನಂತೆ ಮಳೆ ಸುರಿಯುತ್ತಿದ್ದು, ಪ್ರವಾಹಭೀತಿಯೊಡ್ಡಿದೆ. ಬೆಳಗಾವಿ, ರಾಮನಗರ, ಯಾದಗಿರಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

    ಇನ್ನೂ ಬೆಂಗಳೂರು, ಕಲಬುರಗಿ, ಮಂಗಳೂರು, ಶಿವಮೊಗ್ಗ, ಮೈಸೂರು, ಮಂಡ್ಯ, ಕೊಡಗು, ಬೀದರ್, ಹಾಸನ, ರಾಯಚೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ದಕ್ಷಿಣ ಒಳನಾಡು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ವೇಳೆಗೆ ಅಲ್ಲಲ್ಲಿ ಚದುರಿದಂತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಶಿವಮೊಗ್ಗ, ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಇಂದು ಬಿಡುವು ನೀಡಿದ್ದು, ನಾಳೆಯಿಂದ ಮೂರು ದಿನಗಳ ಕಾಲ ಮಳೆಯಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 29-20
    ಮಂಗಳೂರು: 29-24
    ಶಿವಮೊಗ್ಗ: 29-21
    ಬೆಳಗಾವಿ: 26-20
    ಮೈಸೂರು: 31-20

    ಮಂಡ್ಯ: 32-21
    ಕೊಡಗು: 27-17
    ರಾಮನಗರ: 32-25
    ಹಾಸನ: 29-18
    ಚಾಮರಾಜನಗರ: 31-21

    ಚಿಕ್ಕಬಳ್ಳಾಪುರ: 30-19
    ಕೋಲಾರ: 31-21
    ತುಮಕೂರು: 30-19
    ಉಡುಪಿ: 29-24
    ಚಿಕ್ಕಮಗಳೂರು: 27-17

    weather

    ದಾವಣಗೆರೆ: 29-21
    ಚಿತ್ರದುರ್ಗ: 29-20
    ಹಾವೇರಿ: 29-21
    ಬಳ್ಳಾರಿ: 33-22
    ಗದಗ: 29-21

    ಕೊಪ್ಪಳ: 31-22
    ರಾಯಚೂರು: 32-23
    ಯಾದಗಿರಿ: 32-22
    ವಿಜಯಪುರ: 29-21
    ಬೀದರ್: 28-21
    ಕಲಬುರಗಿ: 30-22
    ಬಾಗಲಕೋಟೆ: 30-22

    Live Tv
    [brid partner=56869869 player=32851 video=960834 autoplay=true]

  • ರಾಜ್ಯದ ಹವಾಮಾನ ವರದಿ: 15-08-2022

    ರಾಜ್ಯದ ಹವಾಮಾನ ವರದಿ: 15-08-2022

    ರಾಜ್ಯದಲ್ಲಿ ಹಲವು ಜಿಲ್ಲೆಗಳಿಂದ ಅಬ್ಬರಿಸಿದ ಮಳೆ ಕೆಲ ಜಿಲ್ಲೆಗಳಿಗೆ ಬಿಡುವು ನೀಡಿದ್ದು, ಮರ‍್ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ಎಂದಿನಂತೆ ಮಳೆ ಸುರಿಯುತ್ತಿದ್ದು, ಪ್ರವಾಹಭೀತಿಯೊಡ್ಡಿದೆ. ಬೆಳಗಾವಿ, ರಾಮನಗರ, ರಾಯಚೂರು, ಯಾದಗಿರಿ, ಬೀದರ್, ಕಲಬುರಗಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

    ಇನ್ನೂ ಬೆಂಗಳೂರು, ಮಂಗಳೂರು, ಶಿವಮೊಗ್ಗ, ಮೈಸೂರು, ಮಂಡ್ಯ, ಕೊಡಗು, ಹಾಸನ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು,, ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ದಕ್ಷಿಣ ಒಳನಾಡು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ವೇಳೆಗೆ ಅಲ್ಲಲ್ಲಿ ಚದುರಿದಂತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-13
    ಮಂಗಳೂರು: 29-23
    ಶಿವಮೊಗ್ಗ: 28-20
    ಬೆಳಗಾವಿ: 25-20
    ಮೈಸೂರು: 30-19

    ಮಂಡ್ಯ: 31-19
    ಕೊಡಗು: 25-17
    ರಾಮನಗರ: 29-25
    ಹಾಸನ: 27-18
    ಚಾಮರಾಜನಗರ: 31-20

    weather

    ಚಿಕ್ಕಬಳ್ಳಾಪುರ: 28-19
    ಕೋಲಾರ: 30-20
    ತುಮಕೂರು: 29-19
    ಉಡುಪಿ: 29-24
    ಚಿಕ್ಕಮಗಳೂರು: 26-17

    weather-3-633x600

    ದಾವಣಗೆರೆ: 28-21
    ಚಿತ್ರದುರ್ಗ: 28-19
    ಹಾವೇರಿ: 28-21
    ಬಳ್ಳಾರಿ: 31-22
    ಗದಗ: 28-21

    ಕೊಪ್ಪಳ: 29-22
    ರಾಯಚೂರು: 31-23
    ಯಾದಗಿರಿ: 29-22
    ವಿಜಯಪುರ: 28-21
    ಬೀದರ್: 25-20
    ಕಲಬುರಗಿ: 28-22
    ಬಾಗಲಕೋಟೆ: 29-22

    Live Tv
    [brid partner=56869869 player=32851 video=960834 autoplay=true]

  • ಮುಂಗಾರು ಮಳೆ – ಜೂನ್ 25ರ ವರೆಗೆ ರೆಡ್ ಅಲರ್ಟ್ ಘೋಷಣೆ

    ಮುಂಗಾರು ಮಳೆ – ಜೂನ್ 25ರ ವರೆಗೆ ರೆಡ್ ಅಲರ್ಟ್ ಘೋಷಣೆ

    ಬೆಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಮುಂಗಾರು ಚುರುಕಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ವರುಣದೇವ ಅಬ್ಬರಿಸುತ್ತಿದ್ದಾನೆ.

    ಕಾರವಾರದ ರೈಲ್ವೆ ನಿಲ್ದಾಣ ರಸ್ತೆ, ಹಬ್ಬುವಾಡ, ಸೋನಾರವಾಡ, ಸಾಯಿಬಾಬಾ ಮಂದಿರ ರಸ್ತೆಗಳು ಜಲಾವೃತವಾಗಿ ಜನ ಪರದಾಡಿದ್ರು. ಮನೆಗಳಿಗೆ ನೀರು ನುಗ್ಗಿದ್ದಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಉತ್ತರ ಕನ್ನಡ ಜಿಲ್ಲೆಯಾದ್ಯಂತ ನಾಳೆಯು ಸಹ ವರುಣನ ರೌದ್ರಾವತಾರ ಮುಂದುವರಿಯಲಿದ್ದು, ಜೂನ್ 25ರ ವರೆಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಇದರೊಂದಿಗೆ ಸ್ಥಳೀಯರು, ಪ್ರವಾಸಿಗರು ನದಿ ಹಾಗೂ ಸಮುದ್ರದಲ್ಲಿ ಇಳಿಯದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

    ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ, ಕೋಲಾರ ಸೇರಿದಂತೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲೂ ಮುಂದಿನ 48 ಗಂಟೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಬೆಂಗಳೂರಿನಲ್ಲೂ ಗುಡುಗು ಸಹಿತ ಜೋರು ಮಳೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಇಂಥ ವ್ಯಕ್ತಿ ಅಧ್ಯಕ್ಷತೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಲು ಸರ್ಕಾರ ನಿರ್ಧರಿಸಿದ್ದೇ ತಪ್ಪು: ದೇವೇಗೌಡರ ಪತ್ರ

    ಸಾಂದರ್ಭಿಕ ಚಿತ್ರ

    ಇನ್ನು ಚಿಕ್ಕಮಗಳೂರಿನ ಕಳಸಾ ತಾಲೂಕಿನ ನೆಲ್ಲಿಬೀಡು ಗ್ರಾಮದಲ್ಲಿ ಭಾರೀ ಮಳೆಯಿಂದಾಗಿ ವಾರದ ಹಿಂದಷ್ಟೇ 30 ಲಕ್ಷ ವೆಚ್ಚದಲ್ಲಿ ನಿರ್ಮಿಸಿ ಉದ್ಘಾಟನೆಗೊಂಡಿದ್ದ ಸೇತುವೆ ಕುಸಿದುಬಿದ್ದಿದೆ. ಪಿಕಪ್ ವಾಹನ ಹೋಗುತ್ತಿದ್ದಾಗ ಕಾಂಕ್ರಿಟ್ ಗೋಡೆ ಕಳಚಿಬಿದ್ದಿದೆ. ಅದೃಷ್ಟವಶಾತ್ ವಾಹನದಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಮಹಿಳಾ ಪೊಲೀಸರಿಗೆ ಕ್ಯಾಕರಿಸಿ ಉಗಿದು ಕೈ ನಾಯಕಿ ನೆಟ್ಟಾ ಡಿಸೋಜಾ ಆಕ್ರೋಶ 

    ಅಂದ ಹಾಗೇ ಈ ಸೇತುವೆಯನ್ನು 30 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಇತ್ತ ಈಗಿರುವ NDRF ನಿಯಮಗಳನ್ನು ಕೂಡಲೇ ತಿದ್ದುಪಡಿ ಮಾಡಿ, ಪ್ರಕೃತಿ ವಿಕೋಪದಿಂದ ಆಗಿರುವ ಹಾನಿಗೆ ಸಮರ್ಪಕ ಪರಿಹಾರ ನೀಡುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

    Live Tv

  • ಮುಂಗಾರು ಮಳೆಯ ಆರ್ಭಟಕ್ಕೆ ಉರುಳಿ ಬಿದ್ದ ಮರಗಳು – ಮನೆಗಳಿಗೂ ಹಾನಿ

    ಮುಂಗಾರು ಮಳೆಯ ಆರ್ಭಟಕ್ಕೆ ಉರುಳಿ ಬಿದ್ದ ಮರಗಳು – ಮನೆಗಳಿಗೂ ಹಾನಿ

    ಚಿಕ್ಕಬಳ್ಳಾಪುರ: ಮುಂಗಾರು ಮಳೆಯ ಆರ್ಭಟಕ್ಕೆ ಭಾರೀ ಮರಗಳು ಧರೆಗೆ ಉರುಳಿದ್ದು, ಹಲವೆಡೆ ಮನೆಗಳಿಗೆ ಹಾನಿಯಾಗಿದೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮಾಕಳಿ, ಗುಂಡಮಗೆರೆ, ಹೊಸಹಳ್ಳಿ, ಆರೂಢಿ ವ್ಯಾಪ್ತಿಯಲ್ಲಿ ಮಳೆ ಅಬ್ಬರಿಸಿದ್ದು, ಹಲವು ಅವಾಂತರಗಳಿಗೆ ಕಾರಣವಾಗಿದೆ. ಇದನ್ನೂ ಓದಿ: ರೈತರ ಖಾತೆಗೆ ಮುಖ್ಯಮಂತ್ರಿ ಕಿಸಾನ್ ಸಮ್ಮಾನ್ ಸಹಾಯಧನ ವರ್ಗಾವಣೆ

    ಸತತ 30 ನಿಮಿಷಗಳಕಾಲ ಸುರಿದ ಭಾರೀ ಮಳೆಗೆ ತಾಲೂಕಿನ ಮಾಕಳಿ ಗ್ರಾಮದಲ್ಲಿ ಮರಗಳು ಉರುಳಿಬಿದ್ದು ಮನೆಗಳಿಗೆ ಹಾನಿಯಾಗಿವೆ. ಇನ್ನೂ ಕೆಲ ಮನೆಯ ಛಾವಣಿಗಳು ಹಾರಿಹೋಗಿವೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಪಾರಾಗಿದ್ದಾರೆ. ವಿದ್ಯುತ್ ಕಂಬಗಳು ಉರುಳಿ ಬಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

    ಇದೇ ಗ್ರಾಮದ ರಾಮಕೃಷ್ಣಪ್ಪ, ಗೋಪಾಲ್, ರೂಪಾ ಎನ್ನುವವರಿಗೆ ಸೇರಿದ ಮನೆಯ ಶೀಟುಗಳು ಹಾರಿಹೋಗಿವೆ. ಅಲ್ಲದೆ ರೈತ ಜಯಣ್ಣ ಅವರಿಗೆ ಸೇರಿದ ತೋಟದ ಮನೆಯ ಸುತ್ತ ನಿರ್ಮಿಸಿದ್ದ 100 ಅಡಿ ಕಾಂಪೌಂಡ್ ಉರುಳಿ ಬಿದ್ದು ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ. ಇದನ್ನೂ ಓದಿ: ಅಕ್ಷಯ್ ಕುಮಾರ್ ನಟನೆಯ ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರಕ್ಕೆ ತೆರಿಗೆ ವಿನಾಯ್ತಿ ಘೋಷಿಸಿದ ಯೋಗಿ ಆದಿತ್ಯನಾಥ್

    ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕೆಲ ದಿನಗಳ ಹಿಂದೆ ಮುಂಗಾರು ಪೂರ್ವ ಮಳೆ ಅವಾಂತರ ಸೃಷ್ಟಿ ಮಾಡಿತ್ತು. ಬಳಿಕ ಮಳೆ ಬಿಡುವು ನೀಡಿತ್ತು. ಕಳೆದ ಎರಡು ದಿನಗಳಿಂದ ಮಳೆಯ ಆರ್ಭಟ ಮುಂದುವರಿದಿದೆ.

    ಬೆಂಗಳೂರು ನಗರ, ಗ್ರಾಮಾಂತರ ಸೇರಿದಂತೆ 8ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ.

  • ಗಮನಿಸಿ, ಮುಂದಿನ 5 ದಿನಗಳ ಕಾಲ ಬೆಂಗ್ಳೂರಲ್ಲಿ ಭಾರೀ ಮಳೆ

    ಗಮನಿಸಿ, ಮುಂದಿನ 5 ದಿನಗಳ ಕಾಲ ಬೆಂಗ್ಳೂರಲ್ಲಿ ಭಾರೀ ಮಳೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಿನ್ನೆಯಿಂದ ಅಬ್ಬರಿಸುತ್ತಿರುವ ವರುಣನ ಆರ್ಭಟ ಇನ್ನೂ 5 ದಿನಗಳ ಕಾಲ ಮುಂದುವರಿಯಲಿದೆ.

    ಮೋಡ ಕವಿದ ವಾತಾವರಣ ಇರಲಿದ್ದು ಗುಡುಗು ಸಹಿತ ಮಳೆಯಾಲಿದೆ. ತಮಿಳುನಾಡಿನ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಹಾಗೂ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ 5 ದಿನ ಮಳೆ ಉಂಟಾಗಲಿದೆ. ಇದನ್ನೂ ಓದಿ: ಬೇಸಿಗೆಯ ಮಳೆಗೆ ಮುಳುಗಿದ ಬೆಂಗಳೂರು – ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?

    Rain

    ಈ 5 ದಿನಗಳಲ್ಲಿ ಮೂರು ದಿನ ಜೋರು ಮಳೆ, 2 ದಿನ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಹಾಗೆಯೇ ರಾಜ್ಯದ ಉತ್ತರ ಒಳನಾಡು ಭಾಗಗಳಲ್ಲಿ 4 ದಿನ, ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ 3 ದಿನ ಹಾಗೂ ಕರಾವಳಿ ಜಿಲ್ಲೆಗಳಲ್ಲಿ 3 ದಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವಿಜ್ಞಾನಿ ಎ.ಪ್ರಸಾದ್ ಮಾಹಿತಿ ನೀಡಿದ್ದಾರೆ.