Tag: Metro Train

  • ತುಮಕೂರನ್ನೂ ಗ್ರೇಟರ್ ಬೆಂಗಳೂರಿಗೆ ಸೇರಿಸಿ – ಪರಮೇಶ್ವರ್

    ತುಮಕೂರನ್ನೂ ಗ್ರೇಟರ್ ಬೆಂಗಳೂರಿಗೆ ಸೇರಿಸಿ – ಪರಮೇಶ್ವರ್

    – ತುಮಕೂರಿಗೆ ಮೆಟ್ರೋ ಅಗತ್ಯವಿದೆ ಎಂದ ಗೃಹಸಚಿವ

    ಬೆಂಗಳೂರು: ತುಮಕೂರನ್ನೂ (Tumkur) ಗ್ರೇಟರ್ ಬೆಂಗಳೂರಿಗೆ ಸೇರಿಸಬೇಕು ಅಂತ ಗೃಹ ಸಚಿವ ಪರಮೇಶ್ವರ್ (G. Parameshwar) ಸರ್ಕಾರವನ್ನ ಒತ್ತಾಯಿಸಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ತುಮಕೂರನ್ನ ಗ್ರೇಟರ್ ಬೆಂಗಳೂರಿಗೆ (Greater Bengaluru) ಸೇರಿಸಬೇಕು. ರಾಮನಗರವನ್ನ ಬೆಂಗಳೂರು ದಕ್ಷಿಣ ಅಂತ ಮಾಡಿ ಗ್ರೇಟರ್ ಬೆಂಗಳೂರಿಗೆ ಸೇರಿಸಿದ್ದಾರೆ. ತುಮಕೂರು ಬೆಂಗಳೂರಿಗೆ 70 ಕಿಮೀ ದೂರ ಇರೋದು. ನಮ್ಮನ್ನು ಬೆಂಗಳೂರಿಗೆ ಸೇರಿಸಿಕೊಂಡ್ರೆ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯದಾಗುತ್ತದೆ. ಹೀಗಾಗಿ ಗ್ರೇಟರ್ ಬೆಂಗಳೂರಿಗೆ ನಮ್ಮನ್ನ ಸೇರಿಸಬೇಕು ಅಂತ ನಾವು ಪ್ರಸ್ತಾವನೆ ಕೊಡ್ತೀವಿ ಅಂತ ತಿಳಿಸಿದರು. ಇದನ್ನೂ ಓದಿ: ಕಾಲ್ತುಳಿತದಲ್ಲಿ ಗಾಯಗೊಂಡವರಿಗೆ ಡಿಸಿ ನೋಟಿಸ್ – ತನಿಖೆಗೆ ಹಾಜರಾಗುವಂತೆ 45 ಮಂದಿಗೆ ಸೂಚನೆ

    ಇದೇ ವೇಳೆ ಕೇಂದ್ರ ಸಚಿವ ಸೋಮಣ್ಣರನ್ನ ಭೇಟಿಯಾಗಿದ್ದ ಬಗ್ಗೆ ಮಾಹಿತಿ ನೀಡಿದ್ರು. ತುಮಕೂರು ನ್ಯಾಷನಲ್ ಹೈವೆಯಲ್ಲಿ ತುಮಕೂರು ಪ್ರಾರಂಭದಲ್ಲಿ ಆರ್ಚ್ ಹಾಕಬೇಕು ಅಂತ ಸ್ಮಾರ್ಟ್ ಸಿಟಿಯಲ್ಲಿ ಹಣ ಹೊಂದಿಸಿದ್ದೇವೆ. ಇದಕ್ಕೆ ಕೇಂದ್ರ ಸರ್ಕಾರದ ಅನುಮತಿ ಆಗಬೇಕು. ಇದಕ್ಕಾಗಿ ಸೋಮಣ್ಣ (V Sonanna) ಅವರನ್ನ ಭೇಟಿಯಾಗಿ ಗಡ್ಕರಿ ಅವರಿಗೆ ಮಾತಾಡಿ ಅನುಮತಿ ಕೊಡಿಸೋಕೆ ಕೇಳೋಕೆ ಹೋಗಿದ್ದೆ. ಕುಡಿಯೋ ನೀರಿನ ಅನೇಕ ಯೋಜನೆ ಕೇಂದ್ರ ಸರ್ಕಾರಕ್ಕೆ ಹೋಗಿದೆ. ಅದನ್ನು ಕೊಡಿಸಬೇಕು ಅಂತ ಮನವಿ ಮಾಡಿದ್ದೇನೆ ಎಂದರು. ಇದನ್ನೂ ಓದಿ: ಎಕ್ಸ್‌ಪ್ರೆಸ್ ವೇಯಲ್ಲಿ ಕಾರುಗಳ ನಡುವೆ ಅಪಘಾತ – ಇಬ್ಬರು ಸಾವು, ನಾಲ್ವರು ಗಂಭೀರ

    ತುಮಕೂರಿಗೆ ಮೆಟ್ರೋ ಅಗತ್ಯವಿದೆ
    ತುಮಕೂರಿಗೆ ಮೆಟ್ರೋ ಯೋಜನೆ ರಾಜ್ಯದ ತೀರ್ಮಾನ ಏನಾಗುತ್ತೆ ನೋಡಿಕೊಂಡು ಕೇಂದ್ರದವರ ಬಳಿ ಮಾತಾಡ್ತೀವಿ. ಮೆಟ್ರೋ ಅಗತ್ಯವಿದೆ ಅಂತ ಸೋಮಣ್ಣ ಹೇಳಿದ್ದಾರೆ. ಜೊತೆಗೆ ಸಬ್‌ ಅರ್ಬನ್‌ ಕೂಡ ಆಗಬೇಕು ಅಂತ ಇದೆ. ಎರಡೂ ಆಗಲಿ, ತುಮಕೂರು ಅತಿವೇಗವಾಗಿ ಬೆಳೆಯುತ್ತಿದೆ. ಇಂಡಸ್ಟ್ರಿ ಹಬ್ ಬೆಳೆಯುತ್ತಿದೆ. ಬೆಂಗಳೂರು ವಿಸ್ತರಣೆ ಮಾಡಿದಂತೆ ತುಮಕೂರು ವಿಸ್ತರಣೆ ಮಾಡಬೇಕು ಅಂತ ಅನೇಕರು ಹೇಳ್ತಿದ್ದಾರೆ. ಅದರ ಬಗ್ಗೆ ಚರ್ಚೆ ಆಗ್ತಿದೆ ಎಂದರು. ಇದನ್ನೂ ಓದಿ: ವಿಜಯಪುರ | ಭಾರೀ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಗೃಹಿಣಿ ಸಾವು

  • ದೇಶದ ವಿವಿಧ ನಗರಗಳ ಮೆಟ್ರೋ ದರಕ್ಕಿಂತಲೂ ಬೆಂಗಳೂರು ಮೆಟ್ರೋ ದರವೇ ದುಬಾರಿ!

    ದೇಶದ ವಿವಿಧ ನಗರಗಳ ಮೆಟ್ರೋ ದರಕ್ಕಿಂತಲೂ ಬೆಂಗಳೂರು ಮೆಟ್ರೋ ದರವೇ ದುಬಾರಿ!

    – ಕೊಲ್ಕತ್ತಾ ಮೆಟ್ರೋದಲ್ಲೇ ಅತ್ಯಂತ ಕನಿಷ್ಠ ದರ – ಏಕೆ?

    ಬೆಂಗಳೂರು: ಸಿಲಿಕಾನ್‌ ಸಿಟಿಯ ಅಚ್ಚುಮೆಚ್ಚಿನ ಸಂಚಾರನಾಡಿಯಾದ ನಮ್ಮ ಮೆಟ್ರೋ ಟಿಕೆಟ್ ದರ (Metro Ticket Price) ಏರಿಕೆಯಾಗಿದೆ. ಅದು ಬರೋಬ್ಬರಿ 46% – 50% ನಷ್ಟು ಟಿಕೆಟ್ ರೇಟ್ ಹೈಕ್ ಆಗಿದೆ. ಈ ದರ ಏರಿಕೆ ದಾಖಲೆ ನಿರ್ಮಿಸಿದ್ದು, ದೇಶದ ವಿವಿಧ ನಗರಗಳ ಮೆಟ್ರೋ ದರಕ್ಕಿಂತಲೂ, ಬೆಂಗಳೂರಿನ ನಮ್ಮ ಮೆಟ್ರೋ (Namma Metro) ದರವೇ ದುಬಾರಿಯಾಗಿದೆ.

    ದಿನದಿಂದ ದಿನಕ್ಕೆ ದೇಶಾದ್ಯಂತ ನಮ್ಮ ಮೆಟ್ರೋ ಛಾಪು ಮೂಡಿಸುತ್ತಿದೆ. ಪ್ರತಿನಿತ್ಯ ಲಕ್ಷಾಂತರ ಜನ ನಮ್ಮ ಮೆಟ್ರೋ ಅವಲಂಬಿಸಿದ್ದಾರೆ. ದೇಶದ ಪ್ರಮುಖ ನಗರಗಳಾದ ದೆಹಲಿ, ಹೈದರಾಬಾದ್, ಚೆನೈ, ಮುಂಬೈ, ಕೊಲ್ಕತ್ತಾ, ಲಕ್ನೋ, ಕೊಚ್ಚಿ, ಜೈಪುರ ಸೇರಿದಂತೆ ಹಲವೆಡೆ ಮೆಟ್ರೋ ದಟ್ಟಣೆ ಹೆಚ್ಚಾಗಿದೆ. ಆದ್ರೆ ಈ ಎಲ್ಲಾ ನಗರಗಳ ಮೆಟ್ರೋ ದರಕ್ಕೆ ಹೋಲಿಸಿದ್ರೇ ನಮ್ಮ ಮೆಟ್ರೋದ ಗರಿಷ್ಟ ದರವೇ ಹೆಚ್ಚಾಗಿದೆ. ದೇಶದ ವಿವಿಧ ಪ್ರಮುಖ ನಗರದಲ್ಲಿ ಎಷ್ಟೇಷ್ಟು ದರವಿದೆ ಅನ್ನೋದು ಈ ಕೆಳಕಂಡಂತಿದೆ. ಇದನ್ನೂ ಓದಿ: Aero India 2025 | ವೈಮಾನಿಕ ಪ್ರದರ್ಶನಕ್ಕಿಂದು ಚಾಲನೆ – ರಷ್ಯಾ, ಅಮೆರಿಕ ಸೇರಿ 90 ದೇಶಗಳು ಭಾಗಿ

    ಯಾವ ನಗರಗಳಲ್ಲಿ ಮೆಟ್ರೋ ದರ ಎಷ್ಟಿದೆ?
    ಕನಿಷ್ಠ ದರ – ಗರಿಷ್ಠ ದರ

    * ಬೆಂಗಳೂರು-10 ರೂಪಾಯಿ -90 ರೂಪಾಯಿ (30 ಕಿಲೋಮೀಟರ್ ನಂತರ)
    * ದೆಹಲಿ-10 ರೂಪಾಯಿ -60 ರೂಪಾಯಿ (32 ಕಿಲೋಮೀಟರ್ ಕ್ಕಿಂತ ಹೆಚ್ಚಿನ ದೂರ)
    * ಹೈದರಾಬಾದ್-10 ರೂಪಾಯಿ -60 ರೂಪಾಯಿ (26 ಕಿಲೋಮೀಟರ್ ಕ್ಕಿಂತ ಹೆಚ್ಚಿನ ದೂರ)
    * ಮುಂಬೈ-10 ರೂಪಾಯಿ -80 ರೂಪಾಯಿ (42 ಕಿಲೋಮೀಟರ್ ಕ್ಕಿಂತ ಹೆಚ್ಚಿನ ದೂರ)
    * ಕೊಲ್ಕತ್ತಾ-5 ರೂಪಾಯಿ -50 ರೂಪಾಯಿ (30 ಕಿಲೋಮೀಟರ್ ಗೂ ಹೆಚ್ವಿನ ದೂರ)

    ಈ ಎಲ್ಲಾ ನಗರಗಳ ಪೈಕಿ ನಿನ್ನೆ ದರ ಏರಿಕೆಯಾಗಿ ಬೆಂಗಳೂರಿನ ನಮ್ಮ ಮೆಟ್ರೋ ದರವೇ ಅತ್ಯಂತ ಹೆಚ್ಚಿದೆ. ಕನಿಷ್ಠ ಅಂದ್ರೆ ಕೋಲ್ಕತ್ತಾ ಮೆಟ್ರೋ ಆಗಿದೆ. ಪ್ರಮುಖವಾಗ ಕೊಲ್ಕತ್ತಾ ಮೆಟ್ರೋವನ್ನು ಭಾರತೀಯ ರೈಲ್ವೆಯೇ ನಡೆಸುತ್ತಿರೋದ್ರಿಂದ ಕನಿಷ್ಠ ದರವಿದೆ ಅಂತಾ ಹೇಳಲಾಗುತ್ತಿದೆ. ಹೀಗಾಗಿ ದೇಶದ ಬೇರೆ ನಗರಗಳಿಂದ ಬೆಂಗಳೂರಲ್ಲಿ ಮೆಟ್ರೋ ದರ ಏರಿಕೆಯಾಗಿರೋದು ಸರಿಯಲ್ಲ. ಇದರಿಂದ ಮೆಟ್ರೋ ಪ್ರಯಾಣಿಕರು ದ್ವಿಚಕ್ರ ವಾಹನ ಸೇರಿದಂತೆ ಪರ್ಯಾಯ ಮಾರ್ಗಗಳಿಗೆ ಹೊರಳಬಹುದು ಅಂತಾ ಜನ ಹಾಗೂ ಕೆಲ ತಜ್ಞರ ಅಭಿಪ್ರಾಯವಾಗಿದೆ. ಇದನ್ನೂ ಓದಿ: ಗಮನಿಸಿ – ಏರ್‌ ಶೋ ಹಿನ್ನೆಲೆ ಬೆಂಗಳೂರು ಏರ್‌ಪೋರ್ಟ್‌ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ‌

  • ಹೊಸ ವರ್ಷಾಚರಣೆಗೆ ಮೆಟ್ರೋ ರೈಲು ಸೇವೆ ವಿಸ್ತರಣೆ – ರಾತ್ರಿ 11 ಗಂಟೆ ಬಳಿಕ ಎಂ.ಜಿ ರಸ್ತೆಯಿಂದ ಸಂಚಾರ ಬಂದ್‌

    ಹೊಸ ವರ್ಷಾಚರಣೆಗೆ ಮೆಟ್ರೋ ರೈಲು ಸೇವೆ ವಿಸ್ತರಣೆ – ರಾತ್ರಿ 11 ಗಂಟೆ ಬಳಿಕ ಎಂ.ಜಿ ರಸ್ತೆಯಿಂದ ಸಂಚಾರ ಬಂದ್‌


    – ಎಲ್ಲಿ ಹತ್ತಿ, ಇಳಿದರೂ 50 ರೂ. ಪೇಪರ್ ಟಿಕೆಟ್ ಫಿಕ್ಸ್‌

    ಬೆಂಗಳೂರು: ಹೊಸ ವರ್ಷಕ್ಕೆ ರಾಜಧಾನಿ ಬೆಂಗಳೂರು (Bengaluru) ರೆಡಿಯಾಗ್ತಿದ್ದು, ಡಿ.31ರ ರಾತ್ರಿ ನೇರಳೆ ಮತ್ತು ಹಸಿರು ಮಾರ್ಗ ಮೆಟ್ರೋ ರೈಲು ಸೇವೆಗಳ (Namma Metro Train Service) ವಿಸ್ತರಣೆ ಮಾಡಲಾಗಿದೆ. ಇದನ್ನೂ ಓದಿ:  ಅಂತ್ಯಕ್ರಿಯೆ ಸ್ಥಳದಲ್ಲೇ ತಲೆಯೆತ್ತಲಿದೆಯೇ ಸಿಂಗ್‌ ಸ್ಮಾರಕ? – ಪ್ರಧಾನಿ ಮೋದಿಗೆ ಕಾಂಗ್ರೆಸ್‌ ಪತ್ರ!

    ಜನವರಿ-1 ರಂದು ಮುಂಜಾನೆ 2 ಗಂಟೆಗೆ ಎಲ್ಲಾ ಟರ್ಮಿನಲ್‌ನಿಂದ ಮೆಟ್ರೋ ಸಂಚರಿಸಲಿದೆ. ಮೆಜೆಸ್ಟಿಕ್‌ನಿಂದ ಕೊನೆಯ ರೈಲು ಎಲ್ಲಾ 2.40 ಗಂಟೆಗೆ ಕೊನೆಯ ರೈಲು ಹೊರಡಲಿದೆ. 31 ಡಿಸೆಂಬರ್ ರಾತ್ರಿ 11 ರಿಂದ 10 ನಿಮಿಷಕ್ಕೊಮ್ಮೆ ಟ್ರೈನ್ ಸೇವೆ ಲಭ್ಯವಿರಲಿದೆ. ಇದನ್ನೂ ಓದಿ: ಮಧ್ಯಪ್ರದೇಶದ ಕುನೋ ಪಾರ್ಕ್‌ನ ಚಿರತೆ ಶಿಯೋಪುರ್ ರಸ್ತೆಯಲ್ಲಿ ಪತ್ತೆ – ನಿವಾಸಿಗಳಲ್ಲಿ ಆತಂಕ

    ಡಿ. 31ರಂದು ರಾತ್ರಿ 11 ಗಂಟೆಯಿಂದ ಎಂಜಿ ರಸ್ತೆ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನದ ದ್ವಾರಗಳನ್ನು ಮುಚ್ಚಲಾಗುತ್ತದೆ. ಹತ್ತಿರದ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ರೈಲುಗಳು ನಿಲ್ಲುತ್ತವೆ. ಎಲ್ಲಿ ಹತ್ತಿ ಇಳಿದರೂ 50 ರೂ. ಪೇಪರ್ ಟಿಕೆಟ್ ಫಿಕ್ಸ್‌ ಇರಲಿದೆ. ಇದನ್ನೂ ಓದಿ: ನೆಲಮಂಗಲ | ರೈಲಿಗೆ ಸಿಲುಕಿ 24 ಮೇಕೆಗಳ ದಾರುಣ ಸಾವು, 4 ಲಕ್ಷ ನಷ್ಟ

  • Bengaluru | ಡಿ.11ರಂದು ಎಂದಿನಂತೆ ನಮ್ಮ ಮೆಟ್ರೋ ಸಂಚಾರ

    Bengaluru | ಡಿ.11ರಂದು ಎಂದಿನಂತೆ ನಮ್ಮ ಮೆಟ್ರೋ ಸಂಚಾರ

    ಬೆಂಗಳೂರು: ‘ನಮ್ಮ ಮೆಟ್ರೋ’ ಸೇವೆಯಲ್ಲಿ ಡಿ.11ರಂದು (ಬುಧವಾರ) ಯಾವುದೇ ವ್ಯತ್ಯಯ ಇರುವುದಿಲ್ಲ. ವೇಳಾಪಟ್ಟಿಯಂತೆ ಮೆಟ್ರೋ ರೈಲುಗಳು ಸಂಚರಿಸಲಿದೆ ಎಂದು BMRCL ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

    ಮಾಜಿ ಮುಖ್ಯಮಂತ್ರಿ ಎಸ್‌.ಎಂ ಕೃಷ್ಣ (SM Krishna) ಅವರ ನಿಧನದ ಹಿನ್ನೆಲೆ ಬುಧವಾರ ರಾಜ್ಯ ಸರ್ಕಾರ ಸಾರ್ವಜನಿಕ ರಜೆ ಘೋಷಣೆ ಮಾಡಿದೆ. ಶಾಲಾ, ಕಾಲೇಜು, ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ‘ನಮ್ಮ ಮೆಟ್ರೋ’ (Namma Metro) ಕೂಡ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಸುಳ್ಳು ವದಂತಿ ಹರಡಿದಾಡಿತ್ತು. ಇದಕ್ಕೆ ಬಿಎಂಆರ್‌ಸಿಎಲ್‌ ಸ್ಪಷ್ಟನೆ ನೀಡಿದೆ.

    ಶಾಲಾ-ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳು ಬುಧವಾರ ಕಾರ್ಯನಿರ್ವಹಿಸುತ್ತಿಲ್ಲವಾದರೂ ‘ನಮ್ಮ ಮೆಟ್ರೋ’ ಎಂದಿನಂತೆ ಸೇವೆ ಸಲ್ಲಿಸಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ ಎಂದು ತನ್ನ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

  • ತುಮಕೂರಿಗೆ ಮೆಟ್ರೋ ರೈಲು‌ ಸೇವೆ ಕಲ್ಪಿಸಲು ಡಿಪಿಆರ್ ಪರಿಶೀಲನೆ ನಡೀತಿದೆ: ಪರಮೇಶ್ವರ್‌

    ತುಮಕೂರಿಗೆ ಮೆಟ್ರೋ ರೈಲು‌ ಸೇವೆ ಕಲ್ಪಿಸಲು ಡಿಪಿಆರ್ ಪರಿಶೀಲನೆ ನಡೀತಿದೆ: ಪರಮೇಶ್ವರ್‌

    -ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಬೇಕು; ಸಿಎಂ, ಡಿಸಿಎಂಗೆ ಮನವಿ

    ತುಮಕೂರು: ಜಿಲ್ಲೆಯು ಬಹಳ ವೇಗವಾಗಿ ಬೆಳೆಯಲಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಮೆಟ್ರೋ ರೈಲು (Metro Train) ಸೇವೆ ಕಲ್ಪಿಸಲು ಸಮಗ್ರ ಯೋಜನಾ ವರದಿಯ (DPR) ಪರಿಶೀಲನೆ ನಡೆಯುತ್ತಿದೆ ಎಂದು ಜಿ. ಪರಮೇಶ್ವರ್‌ (G Parameshwara) ತಿಳಿಸಿದರು.

    ತುಮಕೂರಿನಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸಾವಿರಾರು ಕೋಟಿ ರೂ.ಗಳ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು. ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಪರಮೇಶ್ವರ್‌ ಮಾತನಾಡಿದರು. ತುಮಕೂರು ಜಿಲ್ಲೆಯಲ್ಲಿ ಇವತ್ತಿನ ಕಾರ್ಯಕ್ರಮ ಇತಿಹಾಸ ಸೃಷ್ಟಿ ಮಾಡಿದೆ. ಇವತ್ತು 1,250 ಕೋಟಿ ರೂ. ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. 1.5 ಲಕ್ಷ ಫಲಾನುಭವಿಗಳಿಗೆ ಸವಲತ್ತು ಹಂಚಿಕೆಯಾಗಿದೆ. ಕಂದಾಯ ಇಲಾಖೆಯಿಂದ 2 ಸಾವಿರ ಹಕ್ಕು ಪತ್ರ ಕೊಟ್ಟಿದ್ದೇವೆ. 891 ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿದ್ದೇವೆ. ತುಮಕೂರು ಬೆಂಗಳೂರಿನ ಭಾಗವಾಗಿ ಅಭಿವೃದ್ಧಿಯಾಗುತ್ತಿದೆ ಎಂದು ಶ್ಲಾಘಿಸಿದರು.

    ಈಗಾಗಲೇ ಏಷ್ಯಾ ಖಂಡದಲ್ಲೇ ದೊಡ್ಡ ಕೈಗಾರಿಕಾ ಘಟಕ ಸ್ಥಾಪನೆಗೆ ಕ್ರಮ ಆಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಅಡಿಗಲ್ಲು ಹಾಕಲಾಗಿದೆ. ಈ ಮೂಲಕ ತುಮಕೂರು ವಿಶ್ವದ ಭೂಪಟದಲ್ಲಿ ಕಾಣಿಸಿಕೊಳ್ಳಲಿದೆ. ತುಮಕೂರು ಜಿಲ್ಲೆಗೆ ಕಾಯಕಲ್ಪ ಮಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಸಹಕಾರ ನೀಡುತ್ತಿದೆ. 2023 ರಲ್ಲಿ ಈ ರಾಜ್ಯದ ಜನತೆಗೆ 5 ಗ್ಯಾರಂಟಿ ಭರವಸೆ ಕೊಟ್ಟಿದ್ದೆವು. ಆ ಐದು ಗ್ಯಾರಂಟಿ ಪರಿಪೂರ್ಣವಾಗಿ ಜಾರಿ ಮಾಡಿದ್ದು ಸಿದ್ದರಾಮಯ್ಯರ ಕಾಂಗ್ರೆಸ್ ಸರ್ಕಾರ. ಆದರೆ 10 ಕೆಜಿ ಅಕ್ಕಿ ಕೊಡಲು ಆಗಿಲ್ಲ, ಬದಲಾಗಿ ದುಡ್ಡು ಕೊಟ್ಟಿದ್ದೇವೆ ಎಂದು ನುಡಿದರು. ಇದನ್ನೂ ಓದಿ: ರಾಜ್ಯದಲ್ಲಿ ಹಣ, ಹೆಂಡ ಹಂಚಿಕೆಯಲ್ಲಿ ಬಿಜೆಪಿಗೆ ಕಾಂಗ್ರೆಸ್ ಪೈಪೋಟಿ ನೀಡಿದೆ: ಚರ್ಚೆಗೆ ಗ್ರಾಸವಾಯ್ತು ಬಿಕೆ ಹರಿಪ್ರಸಾದ್ ಮಾತು

    ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆ ಬಹಳ ವೇಗವಾಗಿ ಬೆಳೆಯಲಿ. ತುಮಕೂರು ಜಿಲ್ಲೆಗೆ ಮೆಟ್ರೋ ರೈಲು ಬರುವ ಕಾಮಗಾರಿಯ ಡಿಪಿಆರ್ ನಡೀತಿದೆ ಎಂದರು. ಅಲ್ಲದೇ ತುಮಕೂರು, ಬೆಂಗಳೂರಿನಿಂದ ಕೇವಲ 65 ಕಿಮಿ ದೂರದಲ್ಲಿದೆ. ಹಾಗಾಗಿ ತುಮಕೂರಿಗೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಗಬೇಕು. ರಾಜ್ಯದ 2ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನ ಇಲ್ಲಿಗೆ ಕೊಡಬೇಕು ಎಂದು ಸಿಎಂ, ಡಿಸಿಎಂಗೆ ವೇದಿಕೆಯಲ್ಲೇ ಮನವಿ ಮಾಡಿದರು. ಇದನ್ನೂ ಓದಿ:  ಪವನ್‌ ಕಲ್ಯಾಣ್‌ ಮನವಿ – ಆಂಧ್ರದ ಅರಣ್ಯ ಸಿಬ್ಬಂದಿಗೆ ಕೊಡಗಿನ ದುಬಾರೆ ಸಾಕಾನೆ ಶಿಬಿರದಲ್ಲಿ ತರಬೇತಿ

    ಮುಂದುವರಿದು… ಪಾವಗಡದಲ್ಲಿ ಭದ್ರಾದಿಂದ ಕುಡಿಯುವ ನೀರು ಬಂದಿದೆ. ಸ್ಮಾರ್ಟ್ ಸಿಟಿ ಅಡಿಯಲ್ಲಿ ಕೆಲವೇ ಕೆಲವು ವಾರ್ಡ್‌ ಅಭಿವೃದ್ಧಿ ಆಗಿದೆ. ಇನ್ನುಳಿದ ವಾರ್ಡ್‌ ಅಭಿವೃದ್ಧಿಗೆ 500 ಕೋಟಿ ರೂ. ನೀಡಬೇಕು ಎಂದು ಕೋರಿದರು. ಇದನ್ನೂ ಓದಿ: ಸಚಿವ ಸ್ಥಾನ ಉಳಿಸಿಕೊಳ್ಳಲು 1 ತಿಂಗಳ ಮೊದಲೇ ರಿಪೋರ್ಟ್‌ ಕಾರ್ಡ್‌ ಸಲ್ಲಿಸಿದ ಬೋಸರಾಜು

  • ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್ – ಮುಂದಿನ ವರ್ಷದೊಳಗೆ 21 ಹೊಸ ರೈಲುಗಳು ಸೇರ್ಪಡೆ

    ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್ – ಮುಂದಿನ ವರ್ಷದೊಳಗೆ 21 ಹೊಸ ರೈಲುಗಳು ಸೇರ್ಪಡೆ

    ಬೆಂಗಳೂರು: `ನಮ್ಮ ಮೆಟ್ರೋ’ (Namma Metro) ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದು ನೀಡಿದ್ದು, ಮುಂದಿನ ವರ್ಷದೊಳಗೆ 21 ಹೊಸ ರೈಲುಗಳು ಸೇರ್ಪಡೆಯಾಗಲಿದೆ. ಇನ್ನೂ ಹೊಸ ರೈಲುಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿದ ಬಳಿಕ ಪ್ರತಿ 3 ನಿಮಿಷಕ್ಕೆ ಒಂದರಂತೆ ರೈಲು ಸಂಚಾರ ಮಾಡಲಿದೆ.

    ಸಿಲಿಕಾನ್ ಸಿಟಿಯ ಟ್ರಾಫಿಕ್‌ಗೆ ಇರುವ ಒಂದೇ ಒಂದು ಪರಿಹಾರವೆಂದರೆ ಅದು ನಮ್ಮ ಮೆಟ್ರೋ. ಇದೀಗ ಬಿಎಂಆರ್‌ಸಿಎಲ್ (BMRCL) ಬೆಂಗಳೂರು ಜನರಿಗೆ ಗುಡ್ ನ್ಯೂಸ್ ನೀಡಲು ಸಜ್ಜಾಗಿದೆ.ಇದನ್ನೂ ಓದಿ: 1,000 ಕೋಟಿಗೆ RCB ಫ್ರಾಂಚೈಸಿ ಖರೀದಿಸಲು ಪ್ಲ್ಯಾನ್‌; ಮಂಡ್ಯದಲ್ಲಿ ಸದ್ದು ಮಾಡ್ತಿದೆ ಫ್ಯಾನ್ಸ್‌ ಪೋಸ್ಟರ್‌

    ಹೌದು, ನಮ್ಮ ಮೆಟ್ರೋ ರೈಲು ಈಗಾಗಲೇ ಸರಿಸುಮಾರು 76 ಕಿ.ಮೀ. ಸೇವೆಯನ್ನು ನೀಡುತ್ತದೆ. ಇದರಲ್ಲಿ ಹಸಿರು ಮಾರ್ಗದಲ್ಲಿ ಮಾದವಾರದಿಂದ ಸಿಲ್ಕ್ ಬೋರ್ಡ್ ಹಾಗೂ ನೇರಳೆ ಮಾರ್ಗದಲ್ಲಿ ಚಲಘಟ್ಟದಿಂದ ವೈಟ್‌ಫೀಲ್ಡ್‌ವರೆಗೆ ಪ್ರತಿನಿತ್ಯ ಸರಾಸರಿ 7 ಲಕ್ಷ ಪ್ರಯಾಣಿಕರು ಮೆಟ್ರೋಸೇವೆಯ ಉಪಯೋಗ ಪಡೆಯುತ್ತಿದ್ದಾರೆ. ಪೀಕ್ ಟೈಮ್‌ನಲ್ಲಿ ಮೆಟ್ರೋದಲ್ಲಿ ಜನಜಾತ್ರೆಯಂತೆ ಇರುತ್ತದೆ.

    ಇನ್ನೂ ನಮ್ಮ ಮೆಟ್ರೋದಲ್ಲಿ ಈಗಾಗಲೇ 57 ಮೆಟ್ರೋ ರೈಲು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ಪ್ರತಿನಿತ್ಯ 55 ರೈಲುಗಳು ಸಾರ್ವಜನಿಕ ಸೇವೆ ನೀಡುತ್ತಿದ್ದು, ಇನ್ನೂಳಿದ ಎರಡು ರೈಲುಗಳನ್ನು ತುರ್ತುಪರಿಸ್ಥಿತಿಗಾಗಿ ಉಳಿಸಿಕೊಳ್ಳಲಾಗಿದೆ. ಹಸಿರು ಮತ್ತು ನೇರಳೆ ಮೆಟ್ರೋ ಮಾರ್ಗದ ಟೆಂಡರ್ ಪ್ರಕ್ರಿಯೆ ಸಮಯದಲ್ಲಿ ಒಟ್ಟು 78 ರೈಲುಗಳನ್ನು ಒದಗಿಸುವಂತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಒಪ್ಪಂದದನ್ವಯ ಮುಂದಿನ ವರ್ಷದೊಳಗೆ 21 ಹೊಸ ರೈಲುಗಳು ನಮ್ಮ ಮೆಟ್ರೋಕ್ಕೆ ಸೇರ್ಪಡೆಯಾಗಲಿದೆ.

    ಇದರಿಂದ ನಮ್ಮ ಮೆಟ್ರೋ ಎರಡು ಮಾರ್ಗದ ಜನ ದಟ್ಟಣೆಗೆ ಅನುಕೂಲವಾಗಲಿದೆ. ಅಷ್ಟೇ ಅಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ರೈಲುಗಳು ಹಳಿಗೆ ಇಳಿಯುವುದರಿಂದ ಈಗಿನ ಸಮಯದ ಅಂತರವನ್ನು ಇನ್ನಷ್ಟು ಕಡಿಮೆ ಮಾಡಿ ಪ್ರತಿ 3, 3:05 ನಿಮಿಷಕ್ಕೆ ಒಂದೊಂದು ರೈಲು ಸಂಚಾರ ಮಾಡಲಿದೆ. ಇದು ಫೀಕ್ ಟೈಮ್‌ನಲ್ಲಿ ಜನಜಂಗುಳಿಯನ್ನು ತಪ್ಪಿಸಲು ಅನೂಕುಲ ಆಗಲಿದೆ. ಸದ್ಯ ಪ್ರತಿ 5 ನಿಮಿಷಗಳಿಗೆ ಒಂದರಂತೆ ಮೆಟ್ರೋ ಸಂಚಾರ ಮಾಡುತ್ತಿದ್ದು, ಹೊಸ ರೈಲುಗಳು ಸೇರ್ಪಡೆಯಾದ ಬಳಿಕ ಪ್ರತಿ 3 ನಿಮಿಷಕ್ಕೆ ಒಂದರಂತೆ ಮೆಟ್ರೋ ಸಂಚಾರ ಮಾಡಲಿದೆ.

    ಒಟ್ಟಿನಲ್ಲಿ ಮುಂದಿನ ಜನವರಿಯಿಂದ ಹಂತಹಂತವಾಗಿ 21 ಹೊಸ ಮೆಟ್ರೋ ರೈಲುಗಳು ಹಸಿರು ಮತ್ತು ನೇರಳೆ ಮಾರ್ಗಕ್ಕೆ ಬರುವುದರಿಂದ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲವಾಗಲಿದೆ.ಇದನ್ನೂ ಓದಿ: ಬೀಡಿ, ಗುಟ್ಕಾ ಬೇಕು: ಕಲಬುರಗಿ ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಿಂದ ಪ್ರತಿಭಟನೆ

  • 2026ರ ವೇಳೆಗೆ 175 ಕಿಮೀ ನೂತನ ಮೆಟ್ರೋ ಮಾರ್ಗಗಳು ಸಾರ್ವಜನಿಕರ ಸೇವೆಗೆ – ಡಿಕೆಶಿ

    2026ರ ವೇಳೆಗೆ 175 ಕಿಮೀ ನೂತನ ಮೆಟ್ರೋ ಮಾರ್ಗಗಳು ಸಾರ್ವಜನಿಕರ ಸೇವೆಗೆ – ಡಿಕೆಶಿ

    – 1,130 ಕೋಟಿ ರೂ. ವೆಚ್ಚದಲ್ಲಿ 21 ಹೊಸ ರೈಲುಗಳ ಸೇರ್ಪಡೆ

    ಬೆಂಗಳೂರು: 2025ರ ವೇಳೆಗೆ ಸುಮಾರು 30 ಕಿಮೀ ಹಾಗೂ 2026ರ ವೇಳೆಗೆ 175 ಕಿಮೀ ನೂತನ ಮೆಟ್ರೋ ಮಾರ್ಗಗಳನ್ನು (Metro Line) ಸಾರ್ವಜನಿಕರ ಸೇವೆಗೆ ನೀಡಲಾಗುವುದು ಎಂದು ಡಿಸಿಎಂ ಡಿ‌.ಕೆ ಶಿವಕುಮಾರ್ (DK Shivakumar) ಹೇಳಿದರು.

    ಮೆಟ್ರೋ ಹಸಿರು ಮಾರ್ಗದಲ್ಲಿ ನಾಗಸಂದ್ರದಿಂದ ತುಮಕೂರು ರಸ್ತೆಯ ಮಾದಾವರ (ಬೆಂಗಳೂರು ಅಂತರರಾಷ್ಟ್ರೀಯ ಮತ್ತು ಪ್ರದರ್ಶನ ಕೇಂದ್ರ)ದ ತನಕ ವಿಸ್ತರಣೆ ಮಾಡಿರುವ ನೂತನ ಮಾರ್ಗದಲ್ಲಿ ಪ್ರಾಯೋಗಿಕ ಮೆಟ್ರೋ ರೈಲು ಸಂಚಾರವನ್ನು ಡಿಸಿಎಂ ಡಿಕೆ ಶಿವಕುಮಾರ್ ಅವರು ಬುಧವಾರದಂದು ಪರಿಶೀಲನೆ ಮಾಡಿದರು.

    ಸಂಸದ ತೇಜಸ್ವಿ ಸೂರ್ಯ, ನೆಲಮಂಗಲ ಶಾಸಕ ಶ್ರೀನಿವಾಸಯ್ಯ, ದಾಸರಹಳ್ಳಿ ಶಾಸಕ ಮುನಿರಾಜು ಅವರ ಜೊತೆ ಯಶವಂತರಪುರ ಮೆಟ್ರೋ ರೈಲು ನಿಲ್ದಾಣದಿಂದ ಮಾದಾವರದ ತನಕ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದರು. ಜೊತೆಗೆ ಬಿಎಂಆರ್ ಸಿಎಲ್ ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ಮಾದಾವರ ಮೆಟ್ರೋ ನಿಲ್ದಾಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

    ಈಗಾಗಲೇ 1,130 ಕೋಟಿ ರೂ. ವೆಚ್ಚದಲ್ಲಿ 21 ಹೊಸ ರೈಲುಗಳಿಗೆ ಹರಾಜು ಪ್ರಕ್ರಿಯೆ ನಡೆಸಿ ಹಣ ಕಟ್ಟಲಾಗಿದೆ. ಹೊಸ ರೈಲುಗಳು ಆದಷ್ಟು ಬೇಗ ಸೇವೆಗೆ ಲಭ್ಯವಾಗಲಿವೆ. ಮೆಟ್ರೋ ಮಾರ್ಗದ ಒಂದು ಹಾಗೂ 2ನೇ ಹಂತಗಳನ್ನು ನಾವು ಪೂರ್ಣಗೊಳಿಸಿದ್ದು, 3ನೇ ಹಂತಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದರು. ಇದನ್ನೂ ಓದಿ: ಮೂರೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳ ಜಯ ನಿಶ್ಚಿತ: ಎಂಡಿ ಲಕ್ಷ್ಮೀನಾರಾಯಣ

    ಪಾದಚಾರಿ ಮೇಲ್ಸೇತುವೆ, ಅಂಡರ್ ಪಾಸ್ ನಿರ್ಮಾಣ:
    ಮಂಜುನಾಥನಗರ ನಿಲ್ದಾಣದಲ್ಲಿ ರಸ್ತೆ ದಾಟಲು ಪಾದಚಾರಿ ಮೇಲ್ಸೆತುವೆಯ ಅನುಕೂಲ ಮಾಡಿಕೊಡಲಾಗುತ್ತಿದೆ‌. ಯಶವಂತಪುರ ನಿಲ್ದಾಣದಲ್ಲಿ ಸಾರ್ವಜನಿಕರು ಯಾವುದೇ ಅಡಚಣೆಯಿಲ್ಲದೇ ಸಂಚರಿಸಲು ಭಾರತೀಯ ರೈಲ್ವೇ ಹಾಗೂ ನಮ್ಮ ಮೆಟ್ರೋ ಸಂಸ್ಥೆ ಪಾದಚಾರಿ ಮೇಲ್ಸೆತುವೆ ಸೇರಿದಂತೆ ಇತರೇ ಅನುಕೂಲಗಳನ್ನು ಮಾಡಲು ಜಂಟಿಯಾಗಿ ಒಪ್ಪಂದ ಮಾಡಿಕೊಂಡಿವೆ ಎಂದು ತಿಳಿಸಿದರು. ಇದನ್ನೂ ಓದಿ: ನಾಗಸಂದ್ರ – ಮಾದಾವರ ಮೆಟ್ರೋ ಸೇವೆ ನಾಳೆಯಿಂದ ಸಾರ್ವಜನಿಕರಿಗೆ ಲಭ್ಯ

    ಚಿಕ್ಕಬಿದಿರಕಲ್ಲು ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿ ಸಂಸ್ಥೆಯೊಟ್ಟಿಗೆ ಸೇರಿ ಅಂಡರ್ ಪಾಸ್ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ. ಮಾದಾವರ ಮೆಟ್ರೋ ನಿಲ್ದಾಣದ ಬಳಿಯೂ ಅಂಡರ್ ಪಾಸ್ ನಿರ್ಮಾಣಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಸಂಸ್ಥೆಯವರ ಬಳಿ ಮಾತುಕತೆ ನಡೆಸಲಾಗುತ್ತಿದೆ. ಮುಂದೆ ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಬರುವವರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ ವಾಹನ ನಿಲುಗಡೆ ಮಾಡಿ ಸಂಚಾರ ದಟ್ಟಣೆ ರಹಿತವಾಗಿ ನಗರ ಪ್ರದಕ್ಷಿಣೆ ಮಾಡಬಹುದು ಹಾಗೂ ಅವರ ಕೆಲಸಗಳನ್ನು ತ್ವರಿತವಾಗಿ ಮುಗಿಸಿಕೊಳ್ಳಬಹುದು ಎಂದು ಹೇಳಿದರು.

    ಶೀಘ್ರ ಅಧಿಕೃತ ಉದ್ಘಾಟನೆ:
    ನಾಗಸಂದ್ರದಿಂದ 3 ಕಿಮೀ ದೂರವಿರುವ ಮಾದಾವರದ ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ವರೆಗೆ ವಿಸ್ತರಿತ ನೂತನ ಮಾರ್ಗವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಾಯೋಗಿಕವಾಗಿ ಉದ್ಘಾಟನೆ ಮಾಡಲಾಗಿದೆ‌. ನಾನು ಈ ಹಿಂದೆ ನಗರಾಭಿವೃದ್ಧಿ ಸಚಿವನಾಗಿದ್ದಾಗ ಈ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ ಯೋಜನೆಗೆ ಒಪ್ಪಿಗೆ ನೀಡಿದ್ದೆ. ಮುಂದಿನ ದಿನಗಳಲ್ಲಿ ಎಲ್ಲ ಸಂಸದರು ಹಾಗೂ ಇತರೇ ಜನಪ್ರತಿನಿಧಿಗಳನ್ನು ಆಹ್ವಾನಿಸಿ ವಿಸ್ತರಿತ ಮೆಟ್ರೋ ಮಾರ್ಗವನ್ನು ಅಧಿಕೃತವಾಗಿ ಉದ್ಘಾಟನೆ ಮಾಡಲಾಗುವುದು ಎಂದು ತಿಳಿಸಿದರು.

    ಪ್ರಸ್ತುತ ಮೆಟ್ರೋ ಹಸಿರು ಮಾರ್ಗವು 33.46 ಕಿಮೀ ಉದ್ದವಿದೆ. ನೇರಳೆ ಮಾರ್ಗ 40.5 ಕಿಮೀ ಉದ್ದವಿದೆ. ಈ ಮಹತ್ತರವಾದ ಕಾರ್ಯ ಸಾಕಾರಗೊಳ್ಳಲು ಸಹಕಾರ ನೀಡಿದ ಕೇಂದ್ರ ಸರ್ಕಾರಕ್ಕೆ, ಕೈ ಜೋಡಿಸಿದ ಎಲ್ಲರಿಗೂ ಹಾಗೂ ವಿಶೇಷವಾಗಿ ಬೆಂಗಳೂರಿನ ಜನತೆಗೆ ಅಭಿನಂದನೆ ತಿಳಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: Mysuru| ಬಿಜೆಪಿಯಿಂದ ಸಿಎಂ ವಿರುದ್ಧ ‘ಗೋ ಬ್ಯಾಕ್’ ಚಳುವಳಿ- ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು

    ದೇಶದಲ್ಲೇ ಹೆಚ್ಚು ಪ್ರಯಾಣಿಕರ ಸಂಚಾರ:
    ದೆಹಲಿ, ಮುಂಬೈ ಸೇರಿದಂತೆ ದೇಶದ ಇತರೆಡೆಗಳಲ್ಲಿ ಇರುವ ಮೆಟ್ರೋಗಳಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗಿಂತ ಬೆಂಗಳೂರಿನಲ್ಲಿರುವ 76.95 ಕಿಮೀ ಉದ್ದದ ಮೆಟ್ರೋ ಮಾರ್ಗದಲ್ಲಿ ಹೆಚ್ಚು ಪ್ರಯಾಣಿಕರು ಪ್ರತಿನಿತ್ಯ ಸಂಚರಿಸುತ್ತಿದ್ದಾರೆ. ನಮ್ಮ ಮೆಟ್ರೋಯಿಂದ ಬೆಂಗಳೂರಿನ ನಾಗರಿಕರಿಗೆ ಉತ್ತಮ ಸೇವೆ ದೊರೆಯುತ್ತಿದೆ ಎಂಬುದಕ್ಕೆ ಇದು ಸಾಕ್ಷಿ ಎಂದು ಹೇಳಿದರು.

  • ಮೆಟ್ರೋದಲ್ಲಿ ಶ್ರೀರಾಮನ ಭಜನೆ; ಇದು ಸಾರ್ವಜನಿಕ ಸ್ಥಳದ ದುರುಪಯೋಗ ಎಂದ ಬಿಗ್‌ ಬಾಸ್‌ ತಾರೆಗೆ ತರಾಟೆ

    ಮೆಟ್ರೋದಲ್ಲಿ ಶ್ರೀರಾಮನ ಭಜನೆ; ಇದು ಸಾರ್ವಜನಿಕ ಸ್ಥಳದ ದುರುಪಯೋಗ ಎಂದ ಬಿಗ್‌ ಬಾಸ್‌ ತಾರೆಗೆ ತರಾಟೆ

    ಮುಂಬೈ: ನವರಾತ್ರಿ ಆಚರಣೆಯ ಭಾಗವಾಗಿ ಹೌರಾದ ಮೆಟ್ರೋ ರೈಲ್ಲಿನಲ್ಲಿ ʻಜೈ ಶ್ರೀರಾಮ್‌ʼ (Jai Shree Ram) ಘೋಷಣೆ ಕೂಗುತ್ತಾ ಭಜನೆ ಮಾಡಲಾಗುತ್ತಿತ್ತು. ಈ ದೃಶ್ಯವನ್ನು ಕಂಡು ತೀವ್ರವಾಗಿ ಟೀಕಿಸಿದ್ದ ಬಿಗ್ ಬಾಸ್ ತಾರೆ ಪೂಜಾ ಭಟ್‌ಗೆ (Pooja Bhatt) ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

    ಮೆಟ್ರೋ ರೈಲಿಯಲ್ಲಿ (Mumbai Metro Train) ಶ್ರೀರಾಮನ ಭಜನೆ ಮಾಡುತ್ತಿದ್ದ ವೀಡಿಯೋವನ್ನು ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದ ನಟಿ, ಇದು ಸಾರ್ವಜನಿಕ ಸ್ಥಳದ ದುರುಪಯೋಗ. ಇಂತಹದ್ದಕ್ಕೆ ಟ್ರೈನ್‌ಗಳಲ್ಲಿ ಏಕೆ ಅನುಮತಿ ನೀಡುತ್ತೀರಿ ಎಂದು ಪ್ರಶ್ನೆ ಮಾಡಿದ್ದರು. ನಟಿ ಟ್ವೀಟ್‌ ಮಾಡಿದ ಬಳಿಕ ಕೆಲ ನೆಟ್ಟಿಗರು ಆಕೆಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ, ಹಿಗ್ಗಾಮುಗ್ಗಾ ಟ್ರೋಲ್‌ ಮಾಡಿದ್ದಾರೆ. ಇದನ್ನೂ ಓದಿ: ದುರ್ಗಾದೇವಿ ಮೂರ್ತಿ ವಿರ್ಸಜನೆ| ಮಸೀದಿ ಎದುರು ಹಾಡು ಹಾಕಿದ್ದಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ

    ಪೂಜಾ ಭಟ್‌ ಹೇಳಿದ್ದೇನು?
    ಸಾರ್ವಜನಿಕ ಸ್ಥಳದಲ್ಲಿ ಇದನ್ನು ಹೇಗೆ ಅನುಮತಿಸಲಾಗಿದೆ? ಅದು ಹಿಂದುತ್ವದ ಪಾಪ್, ಕ್ರಿಸ್‌ಮಸ್ ಕರೋಲ್‌ಗಳು, ಬಾಲಿವುಡ್ ಬ್ಲಾಕ್‌ಬಸ್ಟರ್‌ಗಳು ಅಥವಾ ಯಾವುದೇ ಸಂಗೀತ ಆಗಿರಲಿ, ಸಾರ್ವಜನಿಕ ಸ್ಥಳಗಳನ್ನು ಈ ರೀತಿ ದುರುಪಯೋಗಪಡಿಸಿಕೊಳ್ಳುವಂತಿಲ್ಲ. ಅಧಿಕಾರಿಗಳು ಇದನ್ನು ಹೇಗೆ ಮತ್ತು ಏಕೆ ಅನುಮತಿಸುತ್ತಿದ್ದಾರೆ? ಎಂದು ಹೇಳಿದ್ದರು. ಇದನ್ನೂ ಓದಿ: Uttar Pradesh | ದುರ್ಗಾದೇವಿ ಮೂರ್ತಿ ವಿರ್ಸಜನೆ ವೇಳೆ ಕೋಮು ಸಂಘರ್ಷ – ಲಾಠಿ ಚಾರ್ಜ್, 30 ಮಂದಿ ಬಂಧನ

    ನಟಿಯ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಕುನಾಲ್ ಪುರೋಹಿತ್ ಎಂಬವರು, ನವರಾತ್ರಿ ಆಚರಣೆಗಾಗಿಯೇ ಹಿಂದುತ್ವದ ಪಾಪ್ ಸಂಗೀತವನ್ನು ವಿನ್ಯಾಸಗೊಳಿಸಲಾಗಿದೆ. ಇದು ಗ್ರಾಮೀಣ ಮತ್ತು ನಗರಗಳಾದ್ಯಂತ ವಿವಿಧ ವರ್ಗಗಳ ಜನರನ್ನ ಸುಲಭವಾಗಿ ಆಕರ್ಷಿಸುತ್ತದೆ. ಮೆಟ್ರೋದಲ್ಲಿ ಇದನ್ನ ಹಾಡುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಅಲ್ಲದೇ ಮುಂಚಿತವಾಗಿ ಇದಕ್ಕಾಗಿಯೇ ಮೆಟ್ರೋವನ್ನ ಕಾಯ್ದಿರಿಸಲಾಗಿತ್ತು ಎಂದೂ ಸ್ಪಷ್ಟನೆ ನೀಡಿದ್ದಾರೆ.

    ನಟಿ ಪೂಜಾ ಭಟ್‌ ಬಿಗ್‌ ಬಾಸ್‌ ಒಟಿಟಿ-2 ರಿಯಾಲಿಟಿ ಶೋ ಮೂಲಕ ಸಿನಿ ಜಗತ್ತಿಗೆ ಪ್ರವೇಶಿಸಿದರು. ನಂತರ ಬಿಗ್ ಗರ್ಲ್ಸ್ ಡೋಂಟ್ ಕ್ರೈ ಶೋ ವೆಬ್‌ಸಿರೀಸ್‌ ಕಾಣಿಸಿಕೊಂಡರು. ಇದನ್ನೂ ಓದಿ: ಕಾಂಗ್ರೆಸ್‌ ಸರ್ಕಾರಕ್ಕೆ ಭಯೋತ್ಪಾದಕರೇ ಬಿಗ್ ಬಾಸ್, ಸಿದ್ದರಾಮಯ್ಯ ಮುಸಲ್ಮಾನರ ಬಿಗ್‌ ಬಾಸ್: ಅಶೋಕ್‌ ಲೇವಡಿ

  • ನಮ್ಮ ಮೆಟ್ರೋದಿಂದ ಮತ್ತೊಂದು ಗುಡ್‌ನ್ಯೂಸ್ – ಹೊಸ ವರ್ಷದಿಂದ್ಲೇ ಎಲೆಕ್ಟ್ರಾನಿಕ್ ಸಿಟಿಗೆ ಮೆಟ್ರೋ ರೈಲು!

    ನಮ್ಮ ಮೆಟ್ರೋದಿಂದ ಮತ್ತೊಂದು ಗುಡ್‌ನ್ಯೂಸ್ – ಹೊಸ ವರ್ಷದಿಂದ್ಲೇ ಎಲೆಕ್ಟ್ರಾನಿಕ್ ಸಿಟಿಗೆ ಮೆಟ್ರೋ ರೈಲು!

    – ಆರ್‌.ವಿ ರಸ್ತೆಯಿಂದ-ಬೊಮ್ಮಸಂದ್ರದ ಮಾರ್ಗದಲ್ಲಿ 30 ನಿಮಿಷದೊಳಗೆ 3 ರೈಲುಗಳ ಸಂಚಾರ

    ಬೆಂಗಳೂರು: ಸಿಲಿಕಾನ್‌ ಸಿಟಿ ಜನರಿಗೆ ನಮ್ಮ ಮೆಟ್ರೋ (Namma Metro) ಮತ್ತೊಂದು ಗುಡ್‌ನ್ಯೂಸ್‌ ಕೊಟ್ಟಿದೆ.‌ 2025ರ ಜನವರಿಯಿಂದ ಎಲೆಕ್ಟ್ರಾನಿಕ್ ಸಿಟಿಗೆ ಮೆಟ್ರೋ ರೈಲು ಆರಂಭವಾಗಲಿದೆ ಎಂದು ತಿಳಿದುಬಂದಿದೆ.

    ಶನಿವಾರ ರೀಚ್ -5 (ಹಳದಿ ಮಾರ್ಗದ) (Yellow Line) ಆರ್‌.ವಿ ರಸ್ತೆಯಿಂದ ಬೊಮ್ಮಸಂದ್ರದವರೆಗಿನ (R.V. Road to Bommasandra) ಪ್ರಗತಿ ಸ್ಥಿತಿಯ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: Exit Poll Result | ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್‌-ಎನ್‌ಸಿ ಮೈತ್ರಿಕೂಟಕ್ಕೆ ಅಧಿಕಾರ – ಬಿಜೆಪಿಗೆ ಹಿಂದಿಗಿಂತ ಹೆಚ್ಚು ಸ್ಥಾನ

    ಸಿವಿಲ್ ಅಥವಾ ಸಿಸ್ಟಂ ಕಾಮಗಾರಿಗಳು ಗಣನೀಯವಾಗಿ ಪೂರ್ಣಗೊಂಡಿವೆ. ಪ್ರೋಟೋ-ಟೈಪ್ ರೈಲಿನ ಪರೀಕ್ಷೆ ಪ್ರಗತಿಯಲ್ಲಿದ್ದು, ರೈಲ್ವೆ ಮಂಡಳಿಯು ಟ್ರಾಕ್ಷನ್‌ ಗೆ ಸಂಬಂಧಿಸಿದಂತೆ ತಾಂತ್ರಿಕ ಮಂಜೂರಾತಿ ನೀಡಿದೆ. ಸಿಗ್ನಲಿಂಗ್ ಸಿಸ್ಟಮ್ ಮತ್ತು ರೋಲಿಂಗ್ ಸ್ಟಾಕ್ ಪೂರ್ವಭಾವಿ ಹಂತದಲ್ಲಿದೆ ಎಂದು ತಿಳಿಸಿದೆ.

    ಇನ್ನೂ ನವೆಂಬರ್-ಡಿಸೆಂಬರ್ 2024ರ ವೇಳೆಗೆ 3 ರೈಲು ಸೆಟ್‌ಗಳು ಲಭ್ಯವಿರಲಿದೆ. ಜನವರಿ 2025ರ ವೇಳೆಗೆ ಈ ಮಾರ್ಗದಲ್ಲಿ 3 ರೈಲುಗಳೊಂದಿಗೆ 30 ನಿಮಿಷಗಳ ಆವರ್ತನದಲ್ಲಿ ಕಾರ್ಯಾರಂಭಿಸುವ ಗುರಿಯನ್ನು ಹೊಂದಿದೆ. ಇದನ್ನೂ ಓದಿ: Bengaluru Rains | ಎಲೆಕ್ಟ್ರಾನಿಕ್ ಸಿಟಿ ಮತ್ತೆ ಜಲಾವೃತ – ಸಣ್ಣ ಮಳೆಗೆ ತತ್ತರಿಸಿದ ಐಟಿಬಿಟಿ ಮಂದಿ

    ಡಿಸೆಂಬರ್ 2024ರಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರಿಂದ ಶಾಸನಬದ್ಧ ಪರೀಕ್ಷೆ ನಡೆಸಲು ಯೋಜಿಸಲಾಗಿದೆ. ಮಾರ್ಚ್ 2025 ರಿಂದ ಪ್ರತಿ ತಿಂಗಳು 2 ರೈಲು ಸೆಟ್‌ಗಳನ್ನ ಟಿಆರ್‌ಎಸ್‌ಎಲ್ ಸಂಸ್ಥೆಯಿಂದ ಪಡೆಯಲಾಗುತ್ತದೆ ಹಾಗೂ ಹಂತ ಹಂತವಾಗಿ ಪ್ರಯಾಣದ ಆವರ್ತನವನ್ನು ಕಡಿಮೆ ಗೊಳಿಸಲಾಗುತ್ತದೆ. ಆಗಸ್ಟ್ 2025ರ ಒಳಗೆ ಹಳದಿ ಮಾರ್ಗಕ್ಕೆ ಬೇಕಾಗಿರುವ ಎಲ್ಲಾ 15 ರೈಲುಗಳ ಸೆಟ್‌ಗಳು ಲಭ್ಯವಿರುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇದರಿಂದ ಐಟಿ-ಬಿಟಿ ಕಂಪನಿ ಉದ್ಯೋಗಿಗಳಿಗೆ ಅನುಕೂಲವಾಗಲಿದ್ದು, ಟ್ರಾಫಿಕ್ ದಟ್ಟಣೆಯೂ ಕಡಿಮೆಯಾಗಲಿದೆ.

  • Bengaluru | ಆಗಸ್ಟ್‌ 15ರ ವರೆಗೆ ಹಸಿರು ಮಾರ್ಗದ ಮೆಟ್ರೋ ಸೇವೆಯಲ್ಲಿ ವ್ಯತ್ಯಯ

    Bengaluru | ಆಗಸ್ಟ್‌ 15ರ ವರೆಗೆ ಹಸಿರು ಮಾರ್ಗದ ಮೆಟ್ರೋ ಸೇವೆಯಲ್ಲಿ ವ್ಯತ್ಯಯ

    ಬೆಂಗಳೂರು: ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ (Green Line Metro Route) ಮೂರು ದಿನ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ತಿಳಿಸಿದೆ.

    ಹಸಿರು ಮಾರ್ಗದ ನಾಗಸಂದ್ರದಿಂದ ಮಾದಾವರವರೆಗಿನ ವಿಸ್ತೃತ ಮಾರ್ಗದಲ್ಲಿ ಸಿಗ್ನಲಿಂಗ್‌ ಪರೀಕ್ಷೆ ನಡೆಸಬೇಕಾಗಿರುವುದರಿಂದ ಪೀಣ್ಯ ಕೈಗಾರಿಕಾ ಪ್ರದೇಶದಿಂದ ನಾಗಸಂದ್ರ ಮೆಟ್ರೋ ನಿಲ್ದಾಣಗಳ ನಡುವೆ ರೈಲು (Metro Train) ಸಮಯದಲ್ಲಿ ವ್ಯತ್ಯಯವಾಗಲಿದೆ ಎಂದು ಬಿಎಂಆರ್‌ಸಿಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಅ.3 ರಂದು ಮೈಸೂರು ದಸರಾ ಉದ್ಘಾಟನೆ; ಅ.12 ಕ್ಕೆ ಜಂಬೂಸವಾರಿ – ಸಿಎಂ ಸಿದ್ದರಾಮಯ್ಯ

    ಆಗಸ್ಟ್‌ 13 ರಂದು ಕೊನೆಯ ರೈಲು ಸೇವೆ ರಾತ್ರಿ 11 ಗಂಟೆ ಬದಲಿಗೆ 10 ಗಂಟೆಗೆ ಕೊನೆಯಾಗಲಿದೆ. ಆ. 14 ರಂದು ಬೆಳಗ್ಗೆ 5 ಗಂಟೆಗೆ ಬದಲಾಗಿ 6 ಗಂಟೆಗೆ ಪ್ರಾರಂಭ ಮತ್ತು ಕೊನೆಯ ರೈಲು ಸೇವೆ ರಾತ್ರಿ 11 ಗಂಟೆಗೆ ಬದಲಾಗಿ 10 ಗಂಟೆ ವರೆಗೆ ಮಾತ್ರ ಇರಲಿದೆ. ಆ.15ರಂದು ಬೆಳಗ್ಗೆ 5 ಗಂಟೆಗೆ ಬದಲಾಗಿ 6ಕ್ಕೆ ಸೇವೆ ಆರಂಭವಾಗಲಿದೆ ಎಂದು ಪ್ರಕಟಣೆಯಲ್ಲಿ ವಿವರಿಸಿದೆ.

    ನಾಗಸಂದ್ರ ನಿಲ್ದಾಣದಿಂದ ಆ.13 ಮತ್ತು 14ರಂದು ಕೊನೆಯ ರೈಲು ಸೇವೆ ರಾತ್ರಿ 11.05 ಗಂಟೆ ಬದಲಾಗಿ 10 ಗಂಟೆಗೆ ಕೊನೆಗೊಳ್ಳುತ್ತದೆ. ಆ.14 ಮತ್ತು 15ರಂದು ನಾಗಸಂದ್ರದಿಂದ ಮೊದಲ ರೈಲು ಸೇವೆ ಬೆಳಗ್ಗೆ 5ಕ್ಕೆ ಬದಲಾಗಿ 6ಕ್ಕೆ ಪ್ರಾರಂಭವಾಗುತ್ತದೆ. ಇದನ್ನೂ ಓದಿ: ಟಿಬಿ ಡ್ಯಾಂನ 19ನೇ ಗೇಟ್ ಕೊಚ್ಚಿ ಹೋಗಿ 46 ಗಂಟೆ; ಶರವೇಗದಲ್ಲಿ ಹೊಸ ಗೇಟ್‌ಗಳ ನಿರ್ಮಾಣ ಕಾರ್ಯ

    ಆದಾಗ್ಯೂ, ಪೀಣ್ಯ ಕೈಗಾರಿಕಾ ಪ್ರದೇಶದಿಂದ – ರೇಷ್ಮೆ ಸಂಸ್ಥೆ ಮೆಟ್ರೊ ನಿಲ್ದಾಣಗಳ ನಡುವೆ ಆ.13 ಮತ್ತು 14ರಂದು ರಾತ್ರಿ 11, 12 ಗಂಟೆವರೆಗೆ ಕೊನೆಯ ರೈಲು ಸೇವೆ ಲಭ್ಯವಿರುತ್ತದೆ. ಪೀಣ್ಯ ಇಂಡಸ್ಟ್ರಿಯಿಂದ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವೆ ಮೊದಲ ರೈಲು ಸೇವೆ ಆ.14 ಮತ್ತು 15 ರಂದು ಬೆಳಗ್ಗೆ 5 ಗಂಟೆಗೆ ಪ್ರಾರಂಭವಾಗುತ್ತದೆ. ಆಧಿದರೆ, ನೇರಳೆ ಮಾರ್ಗದ ಮೆಟ್ರೋ ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ನಿಗಮ ತಿಳಿಸಿದೆ.

    ಲಾಲ್‌ಬಾಗ್‌ಗೆ ಪೇಪರ್‌ ಟಿಕೆಟ್‌ ವ್ಯವಸ್ಥೆ:
    ಆಗಸ್ಟ್‌ 19ರ ವರೆಗೆ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ ಆಯೋಜಿಸಿದ್ದು, ವೀಕ್ಷಕರ ಅನುಕೂಲಕ್ಕಾಗಿ ಬಿಎಂಆರ್‌ಸಿಎಲ್‌ ತ್ವರಿತ ಪ್ರಯಾಣಕ್ಕಾಗಿ ರಿಟರ್ನ್‌ ಜರ್ನಿ ಪೇಪರ್‌ ಟಿಕೆಟ್‌ ವಿತರಿಸುತ್ತಿರುವುದಾಗಿ ಬಿಎಂಆರ್‌ಸಿಎಲ್‌ ಹೇಳಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಆ. 15, 17 ಮತ್ತು 18ರಂದು ಮೆಟ್ರೋದಲ್ಲಿ ರಿಟರ್ನ್‌ ಜರ್ನಿ ಪೇಪರ್‌ ಟಿಕೆಟ್‌ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 10ರಿಂದ ರಾತ್ರಿ 8 ಗಂಟೆವರೆಗೆ ಪೇಪರ್‌ ಟಿಕೆಟ್‌ ಲಭ್ಯವಿರಲಿದೆ. ಲಾಲ್‌ಬಾಗ್‌ ಮೆಟ್ರೋ ನಿಲ್ದಾಣದಿಂದ ಯಾವುದೇ ನಿಲ್ದಾಣಕ್ಕೆ 30 ರೂ. ಪೇಪರ್‌ ಟಿಕೆಟ್‌ ಪಡೆದು ಪ್ರಯಾಣಿಸಬಹುದು.

    ರಿಟರ್ನ್‌ ಜರ್ನಿ ಪೇಪರ್‌ ಟಿಕೆಟ್‌ಗಳನ್ನು ಖರೀದಿಸಿದ ದಿನದಂದು ಲಾಲ್‌ಬಾಗ್‌ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಬಹುದಾಗಿದೆ. ಸಾರ್ವಜನಿಕರು ಟೋಕನ್‌, ಕಾರ್ಡ್‌, ಕ್ಯೂ ಆರ್‌ ಕೋಡ್‌ ಬಳಸಿ ಟಿಕೆಟ್‌ ಪಡೆಯುವ ಮೂಲಕ ಲಾಲ್‌ಬಾಗ್‌ ನಿಲ್ದಾಣಕ್ಕೆ ಪ್ರಯಾಣಿಸಬಹುದು ಹಾಗೂ ಲಾಲ್‌ಬಾಗ್‌ ಮೆಟ್ರೊ ನಿಲ್ದಾಣದಿಂದ ಹಿಂತಿರುಗಲು ಟೋಕನ್‌ಗಳ ಬದಲಿಗೆ ಪೇಪರ್‌ ಟಿಕೆಟ್‌, ಕಾರ್ಡ್‌ ಮತ್ತು ಕ್ಯೂ ಆರ್‌ ಕೋಡ್‌ ಟಿಕೆಟ್‌ ಮೂಲಕ ಮಾತ್ರ ಪ್ರಯಾಣಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ದೇಶದ್ಯಾಂತ ಪ್ರತಿಭಟನೆ