Tag: Metro Stations

  • ಜಿ20 ಸಭೆ – ಭದ್ರತೆಗಾಗಿ ದೆಹಲಿಯಲ್ಲಿ ಹಲವು ಮೆಟ್ರೋ ನಿಲ್ದಾಣಗಳು ಬಂದ್

    ಜಿ20 ಸಭೆ – ಭದ್ರತೆಗಾಗಿ ದೆಹಲಿಯಲ್ಲಿ ಹಲವು ಮೆಟ್ರೋ ನಿಲ್ದಾಣಗಳು ಬಂದ್

    ನವದೆಹಲಿ: ಸೆಪ್ಟೆಂಬರ್ 9 ಮತ್ತು 10 ರಂದು ಪ್ರಗತಿ ಮೈದಾನದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಭಾರತ ಮಂಟಪದಲ್ಲಿ 18ನೇ ಜಿ20 ಶೃಂಗಸಭೆ (G20 Summit) ನಡೆಯಲಿದೆ. 25 ಕ್ಕೂ ಹೆಚ್ಚು ರಾಜ್ಯ ಮತ್ತು ಜಾಗತಿಕ ಸಂಸ್ಥೆಗಳ ಮುಖ್ಯಸ್ಥರು ಈ ಸಭೆಯಲ್ಲಿ ಭಾಗಿಯಾಗುತ್ತಿದ್ದು, ಭದ್ರತೆಯನ್ನು ಹೆಚ್ಚಿಸಲಾಗುತ್ತಿದೆ.

    ಗಣ್ಯರ ಭದ್ರತಾ ದೃಷ್ಟಿಯಿಂದ ಕಾರ್ಯಕ್ರಮ ನಡೆಯುವ ಸ್ಥಳ ಮತ್ತು ಕೆಲವು ಮೆಟ್ರೋ ನಿಲ್ದಾಣಗಳನ್ನು (Metro Stations) ಎರಡು ದಿನಗಳ ಕಾಲ ಬಂದ್ ಮಾಡಲು ನಿರ್ಧರಿಸಿದ್ದಾರೆ. ಪೊಲೀಸರು ಹೊರಡಿಸಿರುವ ಆದೇಶದ ಪ್ರಕಾರ, ಮೋತಿ ಬಾಗ್, ಭಿಕಾಜಿ ಕಾಮಾ ಪ್ಲೇಸ್, ಮುನಿರ್ಕಾ, ಆರ್‌ಕೆ ಪುರಂ, ಐಐಟಿ ಮತ್ತು ಸದರ್ ಬಜಾರ್ ಕಂಟೇನ್ಮೆಂಟ್ ಮೆಟ್ರೋ ನಿಲ್ದಾಣಗಳಲ್ಲಿ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಪ್ರಯಾಣಿಕರು ಈ ಮೆಟ್ರೋ ನಿಲ್ದಾಣಗಳಿಗೆ ಪ್ರವೇಶಿಸಲು ಅಥವಾ ಹೊರಬರಲು ಸಾಧ್ಯವಿಲ್ಲ. ಇದನ್ನೂ ಓದಿ: G 20ಯಲ್ಲಿ ಚೀನಾ ಅಧ್ಯಕ್ಷ ಭಾಗವಹಿಸದಿರುವುದು ಬೇಸರ ತಂದಿದೆ: ಜೋ ಬೈಡೆನ್

    ಧೌಲಾ ಕುವಾ, ಖಾನ್ ಮಾರ್ಕೆಟ್, ಜನಪಥ್, ಸುಪ್ರೀಂ ಕೋರ್ಟ್ ಮತ್ತು ಭಿಕಾಜಿ ಕಾಮಾ ಪ್ಲೇಸ್ ಮೆಟ್ರೋ ನಿಲ್ದಾಣಗಳನ್ನು ಸೂಕ್ಷ್ಮ ಸ್ಥಳಗಳ ಪಟ್ಟಿಯಲ್ಲಿ ಪೊಲೀಸರು ಇರಿಸಿದ್ದಾರೆ. ಇದರೊಂದಿಗೆ ಸುಪ್ರಿಂಕೋರ್ಟ್ ಮೆಟ್ರೋ ಸ್ಟೇಷನ್ ಸಂಪೂರ್ಣವಾಗಿ ಮುಚ್ಚಲ್ಪಡುತ್ತದೆ. ನಿಗದಿತ ಗೇಟ್‌ಗಳನ್ನು ಹೊರತುಪಡಿಸಿ, ದೆಹಲಿ ಮೆಟ್ರೋ ಎಂದಿನಂತೆ ಕಾರ್ಯನಿರ್ವಹಿಸುತ್ತದೆ. ಸೆ.7ರ ರಾತ್ರಿಯಿಂದ ಸೆ.11ರ ಸಂಜೆವರೆಗೆ ದೆಹಲಿ ವಿಮಾನ ನಿಲ್ದಾಣದ ಕಡೆಗೆ ಹೋಗುವ ಪ್ರಯಾಣಿಕರು ಮೆಟ್ರೊ ಬಳಸುವಂತೆ ಸೂಚಿಸಲಾಗಿದೆ. ಇದನ್ನೂ ಓದಿ: Chandrayaan-3: ಚಂದ್ರನ ಮೇಲೆ ಮತ್ತೊಮ್ಮೆ ಸಾಫ್ಟ್ ಲ್ಯಾಂಡಿಂಗ್ ಮಾಡಿದ ವಿಕ್ರಮ್ – ಇಸ್ರೋದಿಂದ ವೀಡಿಯೋ ರಿಲೀಸ್‌

    ಕಾಶ್ಮೀರ್ ಗೇಟ್, ಚಾಂದಿನಿ ಚೌಕ್, ಚಾವ್ರಿ ಬಜಾರ್, ನವದೆಹಲಿ, ರಾಜೀವ್ ಚೌಕ್, ಪಟೇಲ್ ಚೌಕ್, ಸೆಂಟ್ರಲ್ ಸೆಕ್ರೆಟರಿಯೇಟ್, ಉದ್ಯೋಗ್ ಭವನ, ಲೋಕ ಕಲ್ಯಾಣ ಮಾರ್ಗ ಮತ್ತು ಸುಪ್ರೀಂ ಕೋರ್ಟ್ ಮೆಟ್ರೋ ನಿಲ್ದಾಣ ಸೇರಿ 36 ನಿಲ್ದಾಣಗಳಲ್ಲಿ ಟೂರಿಸ್ಟ್ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ. ಇದನ್ನೂ ಓದಿ: ಪಾಕ್‌, ಚೀನಾಗೆ ಠಕ್ಕರ್‌ ಕೊಡಲು ʻಇಂದ್ರಜಾಲ್‌ʼ ಅಸ್ತ್ರ – ಅತ್ಯಾಧುನಿಕ ಆ್ಯಂಟಿ ಡ್ರೋನ್‌ ಅನಾವರಣ

    ರಾಷ್ಟ್ರ ರಾಜಧಾನಿಯಲ್ಲಿ ಟ್ರಾಫಿಕ್ ಚಲನೆಯ ಬಗ್ಗೆ ವಿವರವಾದ ಸಲಹೆಯನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಎಲ್ಲಾ ಸಂಚಾರ ನಿರ್ಬಂಧಗಳು ಸೆಪ್ಟೆಂಬರ್ 7ರ ರಾತ್ರಿಯಿಂದ ಜಾರಿಗೆ ಬರುತ್ತವೆ ಮತ್ತು ಸೆಪ್ಟೆಂಬರ್ 11 ರವರೆಗೆ ಜಾರಿಯಲ್ಲಿರುತ್ತವೆ ಎಂದು ಅಧಿಕೃತ ಹೇಳಿಕೆ ಬಹಿರಂಗಪಡಿಸಿದೆ. ಇದನ್ನೂ ಓದಿ: ದೆಹಲಿಯಲ್ಲಿ ಜಿ20 ಶೃಂಗಸಭೆ ನಡೆಯಲು ಬಿಡಬೇಡಿ: ಕಾಶ್ಮೀರಿ ಮುಸ್ಲಿಮರಿಗೆ ಖಲಿಸ್ತಾನಿ ಪ್ರತ್ಯೇಕತಾವಾದಿ ಕರೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮದ್ಯಪ್ರಿಯರಿಗೆ ಗುಡ್‌ನ್ಯೂಸ್- ವರ್ಷಾಂತ್ಯದ ವೇಳೆಗೆ 700 ಬಾರ್‌ಗಳು ಓಪನ್

    ಮದ್ಯಪ್ರಿಯರಿಗೆ ಗುಡ್‌ನ್ಯೂಸ್- ವರ್ಷಾಂತ್ಯದ ವೇಳೆಗೆ 700 ಬಾರ್‌ಗಳು ಓಪನ್

    ನವದೆಹಲಿ: 2021ರ ನವಂಬರ್ 17ರಲ್ಲಿ ಜಾರಿಗೆ ಬಂದ ಹೊಸ ಅಬಕಾರಿ ನೀತಿಯನ್ನು ರದ್ದುಗೊಳಿಸಿ ಹಳೆಯ ನೀತಿಯನ್ನೇ ಅನುಷ್ಠಾನಗೊಳಿಸಿದ ನಂತರ ದೆಹಲಿಯ ಅಬಕಾರಿ ಇಲಾಖೆಯು ಹಲವು ಬದಲಾವಣೆಗಳನ್ನು ತರಲು ಮುಂದಾಗಿದೆ.

    ಎಲ್ಲವೂ ಅಂದುಕೊಂಡಂತೆ ಆದರೆ ಇದೇ ಸೆಪ್ಟೆಂಬರ್ ತಿಂಗಳಲ್ಲಿ 500 ಮದ್ಯದಂಗಡಿಗಳು ಹಾಗೂ 2022ರ ವರ್ಷಾಂತ್ಯದ ವೇಳೆಗೆ ಇನ್ನೂ 200 ಅಂಗಡಿಗಳು ಸೇರಿ 700 ಮದ್ಯದಂಗಡಿಗಳು ತಲೆ ಎತ್ತಲಿವೆ ಎಂದು ದೆಹಲಿ ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದ ರಿಷಿಗೆ ಸೋಲು – ಬ್ರಿಟನ್ ಪ್ರಧಾನಿ ಗದ್ದುಗೆ ಏರಿದ ಲಿಜ್ ಟ್ರಸ್

    ಇದರ ಭಾಗವಾಗಿ ಮೆಟ್ರೋ ನಿಲ್ದಾಣಗಳಲ್ಲಿ ಮದ್ಯದಂಗಡಿಗಳನ್ನು ತೆರೆಯಲಾಗಿದೆ. ಕರೋಲ್ ಬಾಗ್, ರಾಜೌರಿ ಗಾರ್ಡನ್, ದ್ವಾರಕಾ, ಮುಂಡ್ಕಾ, ಶಿವಾಜಿ ಪಾರ್ಕ್, ಸುಲ್ತಾನ್‌ಪುರಿ, ಸುಭಾಷ್ ನಗರ ಮತ್ತು ಬಾದರ್‌ಪುರದ ಮೆಟ್ರೋ ನಿಲ್ದಾಣಗಳಲ್ಲಿ ಮದ್ಯ ಮಾರಾಟ ಮಾಡಲು ಅಂಗಡಿಗಳನ್ನು ತೆರೆಯಲಾಗಿದ್ದು, ಗ್ರಾಹಕರಿಗೆ ಸುಲಭವಾಗಿ ಸಿಗುವಂತೆ ನೋಡಿಕೊಳ್ಳಲಾಗುತ್ತಿದೆ. ಇದನ್ನೂ ಓದಿ: ನನ್ನನ್ನು ಬಂಧಿಸುವಂತೆ ಒತ್ತಡ ಹಾಕಿದ್ದಕ್ಕೆ ಸಿಬಿಐ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ: ಮನೀಶ್ ಸಿಸೋಡಿಯಾ

    ಕಳೆದ ನವೆಂಬರ್‌ನಲ್ಲಿ ದೆಹಲಿಯನ್ನು 32 ವಲಯಗಳಾಗಿ ವಿಂಗಡಿಸಿ 849 ಮದ್ಯದಂಗಡಿಗಳನ್ನು ತೆರೆಯಲಾಗಿತ್ತು. ಆದರೆ ಮತ್ತೆ ಹಳೆಯ ನೀತಿಯನ್ನೇ ಅನುಷ್ಠಾನಗೊಳಿಸಿದ ನಂತರ ಸುಮಾರು 65 ಮದ್ಯದಂಗಡಿಗಳು ಮುಚ್ಚಿದವು. ಇದರಿಂದ ಅಬಕಾರಿ ಇಲಾಖೆ ಆರ್ಥಿಕ ಕ್ರೋಢಿಕರಣಕ್ಕೆ ಸವಾಲು ಎದುರಿಸುವ ಪರಿಸ್ಥಿತಿ ನಿರ್ಮಾಣವಾಯಿತು. ಸದ್ಯ ಹೊಸ ನೀತಿಯನ್ನು ರದ್ದುಮಾಡಿ, ಮತ್ತೆ ಹಳೆ ನೀತಿಯಂತೆ ಮುಂದುವರಿಸುತ್ತಿದ್ದು, ಸರ್ಕಾರದಿಂದಲೇ ಮದ್ಯದಂಗಡಿಗಳನ್ನು ತೆರೆಯುವ ಕ್ರಮಕ್ಕೆ ಇಲಾಖೆ ಮುಂದಾಗಿದೆ.

    Live Tv
    [brid partner=56869869 player=32851 video=960834 autoplay=true]