Tag: Metro Station

  • ಮೆಟ್ರೋ ನಿಲ್ದಾಣದ ಬಳಿ ಟ್ರಂಕ್‍ನಲ್ಲಿ ರುಂಡವಿಲ್ಲದ ಮಹಿಳೆಯ ದೇಹ ಪತ್ತೆ

    ಮೆಟ್ರೋ ನಿಲ್ದಾಣದ ಬಳಿ ಟ್ರಂಕ್‍ನಲ್ಲಿ ರುಂಡವಿಲ್ಲದ ಮಹಿಳೆಯ ದೇಹ ಪತ್ತೆ

    ನವದೆಹಲಿ: ನಗರದ ಜಹಾಂಗೀರ್ಪುರಿ ಮೆಟ್ರೋ ನಿಲ್ದಾಣದಲ್ಲಿ ಶನಿವಾರ ತಲೆಯಿಲ್ಲದ ಮಹಿಳೆಯ ಮೃತ ದೇಹ ಪತ್ತೆಯಾಗಿದೆ.

    ಮಹಿಳೆಯ ದೇಹವನ್ನು ಒಂದು ಹೊದಿಕೆಯಿಂದ ಸುತ್ತಿದ್ದು, ಮೆಟಲ್ ಟ್ರಂಕ್‍ನಲ್ಲಿ ತುಂಬಿಸಿದ್ದಾರೆ. ಅದನ್ನು ಮೆಟ್ರೋ ನಿಲ್ದಾಣದಲ್ಲಿದ್ದ ಸೈಕಲ್ ಬಳಿಕ ಇಟ್ಟು ಹೋಗಿದ್ದಾರೆ. ಸ್ಥಳೀಯರು ಓಡಾಡುವಾಗ ಆ ಟ್ರಂಕ್ ಪತ್ತೆಯಾಗಿದೆ. ನಂತರ ಅನುಮಾನದ ಮೇರೆಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

    ಪೊಲೀಸರು ವಿಷಯ ತಿಳಿದು ಸ್ಥಳಕ್ಕೆ ಹೋಗಿದ್ದು, ಟ್ರಂಕ್ ಓಪನ್ ಮಾಡಿ ನೋಡಿದ್ದಾರೆ. ಆಗ ತಲೆಯಿಲ್ಲದ ಮಹಿಳೆಯ ದೇಹ ಪತ್ತೆಯಾಗಿದೆ. ಈ ಘಟನೆಯ ಬಗ್ಗೆ ಫೋರೆನ್ಸಿಕ್ ಕ್ರೈಂ ಬ್ರ್ಯಾಂಚ್‍ಗೆ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಫೋರೆನ್ಸಿಕ್ ತಂಡವು ಟ್ರಂಕ್ ಮೇಲಿದ್ದ ಫಿಂಗರ್ ಪ್ರಿಂಟ್‍ಗಳನ್ನು ತೆಗೆದುಕೊಂಡಿದ್ದಾರೆ.

    ಮಹಿಳೆಯನ್ನು ಎರಡು-ಮೂರು ದಿನಗಳ ಹಿಂದೆಯೇ ಕೊಲೆ ಮಾಡಲಾಗಿದೆ. ಮೃತ ಮಹಿಳೆಯ ಚರ್ಮವು ಕಪ್ಪು ಬಣ್ಣಕ್ಕೆ ತಿರುಗಿದೆ. ಜೊತೆಗೆ ದೇಹವು ಕೊಳೆತು ಹೋಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯಕ್ಕೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಿದ್ದು, ಈ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

  • ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಶಂಕಿತ ವ್ಯಕ್ತಿಯ ಓಡಾಟ- ಚೆಕ್ಕಿಂಗ್  ಕೌಂಟರ್‌ನಲ್ಲಿ  ಹೈ ಸೆಕ್ಯೂರಿಟಿ

    ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಶಂಕಿತ ವ್ಯಕ್ತಿಯ ಓಡಾಟ- ಚೆಕ್ಕಿಂಗ್ ಕೌಂಟರ್‌ನಲ್ಲಿ ಹೈ ಸೆಕ್ಯೂರಿಟಿ

    ಬೆಂಗಳೂರು: ಸೋಮವಾರ ರಾತ್ರಿ ಸಿಲಿಕಾನ್ ಸಿಟಿಯ ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದ ವ್ಯಕ್ತಿಯೊಬ್ಬ ಕಾಣಿಸಿಕೊಂಡಿದ್ದು, ಮೆಟ್ರೋ ನಿಲ್ದಾಣಗಳಲ್ಲಿ ಹೈ ಸೆಕ್ಯೂರಿಟಿ ಚೆಕ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ.

    ಸೋಮವಾರ ರಾತ್ರಿ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಬಂದ ವ್ಯಕ್ತಿಯೊಬ್ಬ ಮೆಟಲ್ ಡಿಟೆಕ್ಟರ್ ಬಳಿ ಹಾದು ಹೋದಾಗ ಸದ್ದಾಗಿದೆ. ಈ ವೇಳೆ ಆತನ ತಪಾಸಣೆ ಮಾಡಲು ಸೆಕ್ಯೂರಿಟಿ ಮುಂದಾಗಿದ್ದಾರೆ. ಆಗ ಆ ವ್ಯಕ್ತಿ ಎಸ್ಕೇಪ್ ಆಗಿದ್ದಾನೆ. ಆದ್ದರಿಂದ ಮೆಟ್ರೋ ನಿಲ್ದಾಣ ಹಾಗೂ ರೈಲ್ವೇ ನಿಲ್ದಾಣಕ್ಕೆ ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿದೆ. ಅಲ್ಲದೆ ಶಂಕಿತ ವ್ಯಕ್ತಿಯನ್ನು ಸೆರೆಹಿಡಿಯಲು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

    ಮುಂಜಾಗೃತ ಕ್ರಮವಾಗಿ ಮೆಟ್ರೋ ನಿಲ್ದಾಣದಲ್ಲಿ ಹೈ ಸೆಕ್ಯೂರಿಟಿ ಹಾಗೂ ಪ್ರಯಾಣಿಕರ ಫುಲ್ ಚೆಕ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೆ ಜನರ ಬ್ಯಾಗ್‍ಗಳನ್ನು ನಿಲ್ದಾಣದ ಹೊರಗಡೆಯಿಂದಲೇ ಭದ್ರತಾ ಸಿಬ್ಬಂದಿ ತಪಾಸಣೆ ಮಾಡುತ್ತಿದ್ದಾರೆ. ಜೊತೆಗೆ ಮೆಟ್ರೋ ನಿಲ್ದಾಣದ ಹೊರಭಾಗದಲ್ಲಿ ಪೊಲೀಸರಿಂದ ಹೈ ಸೆಕ್ಯೂರಿಟಿ ನೀಡಲಾಗುತ್ತದೆ.

    ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟವಾದ ಹಿನ್ನೆಲೆ ದೇಶದಲ್ಲಿ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮುನ್ನೇಚ್ಚರಿಕೆ ಕ್ರಮವನ್ನು ಕೈಗೊಳ್ಳಲಾಗಿದೆ. ಈ ಹಿಂದೆ ಬೆಂಗಳೂರಿಗೆ ಉಗ್ರರು ಬಂದಿಳಿದಿದ್ದಾರೆ ಐಟಿ ಕಂಪನಿಗಳ ಮೇಲೆ ದಾಳಿ ನಡೆಸಲು ತಯಾರಿ ಮಾಡುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಭಾನುವಾರದಂದು ಬೆಂಗಳೂರು ಸಿಟಿ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಟ್ವಿಟ್ಟರ್ ಮೂಲಕ ಸ್ಪಷ್ಟಪಡಿಸಿದ್ದರು.

  • ಗರ್ಭಿಣಿಯರಿಗೆ ನಮ್ಮ ಮೆಟ್ರೋದಿಂದ ಗುಡ್‍ನ್ಯೂಸ್

    ಗರ್ಭಿಣಿಯರಿಗೆ ನಮ್ಮ ಮೆಟ್ರೋದಿಂದ ಗುಡ್‍ನ್ಯೂಸ್

    ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವ ಗರ್ಭಿಣಿಯರಿಗೆ ನಮ್ಮ ಮೆಟ್ರೋ ಗುಡ್‍ನ್ಯೂಸ್ ನೀಡಿದ್ದು, ಮೆಟ್ರೋ ಹತ್ತಲು, ಸ್ಟೇಷನ್‍ಗೆ ಹೋದಾಗ ಗೇಟ್ ದಾಟಲು ಕಷ್ಟ ಪಡುತ್ತಿದ್ದ ಗರ್ಭಿಣಿಯರಿಗೆ ಸಹಾಯವಾಗಲು ಬಿಎಂಆರ್‍ಸಿಎಲ್ ಹೊಸ ವ್ಯವಸ್ಥೆ ಕಲ್ಪಿಸಿ ಕೊಡಲಿದೆ.

    ಸಾಮಾನ್ಯ ಜನರು ಓಡಾಟ ನಡೆಸುವ ಮಂದಿಗೆ ಹೋಲಿಕೆ ಮಾಡಿದರೆ ಗರ್ಭಿಣಿಯರು ಮೆಟ್ರೋ ನಿಲ್ದಾಣದ ಪ್ರವೇಶ ಹಾಗೂ ನಿರ್ಗಮನ ವೇಳೆ ಸಮಸ್ಯೆ ಎದುರಿಸಿದ್ದರು. ಸದ್ಯ ನಮ್ಮ ಮೆಟ್ರೋ ಈ ಸಮಸ್ಯೆಗೆ ಮುಕ್ತಿ ನೀಡಲು ಗರ್ಭಿಣಿಯರಿಗಾಗಿಯೇ ವಿಶೇಷ ಸರ್ವೀಸ್ ಗೇಟ್‍ಗಳ ವ್ಯವಸ್ಥೆಯನ್ನು ಮಾಡಲಿದೆ.

    ಸದ್ಯ ಮೆಟ್ರೋ ನಿಲ್ದಾಣದಲ್ಲಿ ಇರುವ ಆಟೋಮ್ಯಾಟಿಕ್ ಫೇರ್ ಕಲೆಕ್ಷನ್ ಗೇಟ್‍ಗಳು ಟೋಕನ್ ಹಾಕಿದ ತಕ್ಷಣ ತೆರೆದುಕೊಂಡು ನಿರ್ದಿಷ್ಟ ಸಮಯದೊಳಗೆ ಮುಚ್ಚಿಕೊಳ್ಳುತ್ತವೆ. ಈ ಅವಧಿಯಲ್ಲಿ ತುಂಬು ಗರ್ಭಿಣಿಯರು ಗೇಟ್ ದಾಟಲು ಆಗದೇ ಪರದಾಡುತ್ತಿದ್ದರು. ಇದರಿಂದ ಅವರಿಗೆ ಅಪಾಯ ಆಗಬಹುದು ಎಂದು ಬೇರೊಂದು ವ್ಯವಸ್ಥೆ ಮಾಡಲು ಕೆಲವು ಮಹಿಳೆಯರು ಬಿಎಂಆರ್‌ಸಿಎಲ್ ಗೆ ಮನವಿ ಮಾಡಿಕೊಂಡಿದ್ದರು. ಈ ಮನವಿ ಪರಿಗಣಿಸಿ, ಸರ್ವೀಸ್ ಗೇಟ್ ಕಲ್ಪಿಸಿಕೊಡಲು ಮೆಟ್ರೋ ನಿಗಮ ಮುಂದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೆಹಲಿ ಮೊರೆ ಹೋದ BMRCL ಅಧಿಕಾರಿಗಳು- ಮುಂದುವರಿದ ದುರಸ್ತಿ ಕಾರ್ಯ

    ದೆಹಲಿ ಮೊರೆ ಹೋದ BMRCL ಅಧಿಕಾರಿಗಳು- ಮುಂದುವರಿದ ದುರಸ್ತಿ ಕಾರ್ಯ

    ಬೆಂಗಳೂರು: ಟ್ರಿನಿಟಿ ಸರ್ಕಲ್ ಮೆಟ್ರೋ ನಿಲ್ದಾಣದ ಪಿಲ್ಲರ್‌ನಲ್ಲಿ ಕಾಣಿಸಿಕೊಂಡಿರುವ ಬಿರಕು ದುರಸ್ತಿ ಕಾರ್ಯವನ್ನು ರಾತ್ರಿ ಇಡೀ ಮಾಡಲಾಗಿದೆ.

    ಮೆಟ್ರೋ ಪಿಲ್ಲರ್‌ನಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ಬಿಎಂಆರ್‌ಸಿಎಲ್ ಅಧಿಕಾರಿಗಳು ದೆಹಲಿ ಮೆಟ್ರೋ ನಿಗಮದ ಮೊರೆ ಹೋಗಿದ್ದರು. ಅಧಿಕಾರಿಗಳ ಮನವಿಯಂತೆ ದೆಹಲಿ ಮೆಟ್ರೋ ನಿಗಮದ ಇಬ್ಬರು ಎಂಜಿನಿಯರ್‌ಗಳು ಬೆಂಗಳೂರಿಗೆ ಬಂದು ರಾತ್ರಿ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.

    ದೆಹಲಿ ಮೆಟ್ರೋ ನಿಗಮದ ಅಧಿಕಾರಿಗಳ ಜೊತೆ ದುರಸ್ತಿ ವಿಚಾರವಾಗಿ ಬಿಎಂಆರ್‌ಸಿಎಲ್ ಅಧಿಕಾರಿಗಳು ಚರ್ಚಿಸಿ ಮುಂಜಾನೆ ಅಷ್ಟರಲ್ಲಿ ದುರಸ್ತಿ ಕೆಲಸ ಮುಗಿಸುವ ವಿಶ್ವಾಸದಲ್ಲಿದ್ದಾರೆಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. ಅಷ್ಟೇ ಅಲ್ಲದೆ ಸದ್ಯ ದುರಸ್ಥಿ ಕಾರ್ಯ ನಡೆಯುತ್ತಿದ್ದು, ಮೆಟ್ರೋ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೆಟ್ರೋ ನಿಲ್ದಾಣದಲ್ಲಿ ಪತ್ರಕರ್ತೆಯನ್ನು ಟಚ್ ಮಾಡಿ ಲೈಂಗಿಕ ಕಿರುಕುಳ: ಶಾಕಿಂಗ್ ವಿಡಿಯೋ

    ಮೆಟ್ರೋ ನಿಲ್ದಾಣದಲ್ಲಿ ಪತ್ರಕರ್ತೆಯನ್ನು ಟಚ್ ಮಾಡಿ ಲೈಂಗಿಕ ಕಿರುಕುಳ: ಶಾಕಿಂಗ್ ವಿಡಿಯೋ

    ನವದೆಹಲಿ: ಇಲ್ಲಿನ ಐಟಿಒ ಮೆಟ್ರೋ ನಿಲ್ದಾಣದಲ್ಲಿ 25 ವರ್ಷದ ಯುವತಿಯೊಬ್ಬಳಿಗೆ ಕಿರುಕುಳ ನೀಡಿದ ಕಾಮುಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ವಿಡಿಯೋದಲ್ಲಿ ಯುವತಿ ಮೆಟ್ರೋ ನಿಲ್ದಾಣದ ಮೆಟ್ಟಿಲಿನಲ್ಲಿ ಇಳಿದುಕೊಂಡು ಬರುತ್ತಿದ್ದ ವೇಳೆ ಕಾಮುಕನೊಬ್ಬ ಆಕೆಯನ್ನು ಟಚ್ ಮಾಡಿದ್ದಾನೆ. ಈ ಸಂದರ್ಭದಲ್ಲಿ ಯುವತಿ ಏನೋ ಬೈ ಮಿಸ್ಟೆಕ್ ಅಂತ ಸುಮ್ಮನಾಗಿದ್ರು. ಆದ್ರೆ ಇದನ್ನೇ ಬಳಸಿಕೊಂಡ ಕಾಮುಕ ಮುಂದುವರೆದು ಆಕೆಯನ್ನು ಸುತ್ತುವರಿದು ಮತ್ತೊಂದು ಬಾರಿ ಮುಟ್ಟಿದ್ದಾನೆ. ಘಟನೆ ಸಂದರ್ಭದಲ್ಲಿ ಯಾವೊಬ್ಬ ಭದ್ರತಾ ಸಿಬ್ಬಂದಿ ಅಲ್ಲಿ ಇರಲಿಲ್ಲ. ಹೀಗಾಗಿ ಯುವತಿಯೇ ಕಾಮುಕನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಯುವತಿ ಕಾಮುಕನ್ನು ಹಿಡಿಯಲೆಂದು ಆತನ ಹಿಂದೆ ಓಡುತ್ತಿದ್ದಂತೆಯೇ ಆತ ಅಲ್ಲಿಂದ ಕಾಲ್ಕಿತ್ತಿದ್ದಾನೆ.

    ಘಟನೆ ನಡೆದಾಗ ನಾನು ಸುತ್ತ ನೋಡಿದರೂ ಒಬ್ಬನೇ ಒಬ್ಬ ಸೆಕ್ಯುರಿಟಿ ಅಲ್ಲಿ ಇರಲಿಲ್ಲ. ಒಬ್ಬ ಸೆಕ್ಯುರಿಟಿ ಇರುತ್ತಿದ್ದರೂ ಆತನನ್ನು ಹಿಡಿಯಬಹುದಿತ್ತು ಅಂತ ವೃತ್ತಿಯಲ್ಲಿ ಪತ್ರಕರ್ತೆಯಾಗಿರೋ ಯುವತಿ ಹೇಳಿದ್ದಾರೆ.

    ಈ ಘಟನೆ ನವೆಂಬರ್ 13ರಂದು ನಡೆದಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಆರೋಪಿ ಕಾಮುಕನನ್ನು ಬಂಧಿಸಿದ್ದಾರೆ. ಪಟಿಯಾಲ ಹೌಸ್ ಕೋರ್ಟ್ ಇಂದು ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

    ಆರೋಪಿ ಕಾಮುಕ ಪತ್ರಕರ್ತೆಗೆ ಕಿರಿಕುಳ ನೀಡಿದ ದಿನವೇ ಇನ್ನಿಬ್ಬರು ಯುವತಿಯರಿಗೂ ಕಿರುಕುಳ ನೀಡಿದ್ದನು ಎಂದು ವರದಿಯಾಗಿದೆ.

  • ಮೆಟ್ರೊ ನಿಲ್ದಾಣಗಳಲ್ಲಿ ನೀವು ಬೈಕ್ ನಿಲ್ಲಿಸಿ ಕೆಲ್ಸಕ್ಕೆ ಹೋಗ್ತೀರಾ? ಹಾಗಾದ್ರೆ ಈ ಸುದ್ದಿ ಓದ್ಲೇಬೇಕು

    ಮೆಟ್ರೊ ನಿಲ್ದಾಣಗಳಲ್ಲಿ ನೀವು ಬೈಕ್ ನಿಲ್ಲಿಸಿ ಕೆಲ್ಸಕ್ಕೆ ಹೋಗ್ತೀರಾ? ಹಾಗಾದ್ರೆ ಈ ಸುದ್ದಿ ಓದ್ಲೇಬೇಕು

    ಬೆಂಗಳೂರು: ಮೆಟ್ರೊ ನಿಲ್ದಾಣಗಳಲ್ಲಿ ನಿಲ್ಲಿಸಿದ್ದ ಬೈಕ್ ಗಳನ್ನು ಕ್ಷಣಾರ್ಧದಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ನಗರದ ನಿವಾಸಿಯಾಗಿರುವ ಮುಬಾರಕ್ ಎಂಬ ವ್ಯಕ್ತಿಯೇ ಬಂಧಿತ ಬೈಕ್ ಕಳ್ಳನಾಗಿದ್ದು, ಬೈಕ್ ಕಳ್ಳತನ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿ 10ಕ್ಕೂ ಹೆಚ್ಚು ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

    ಸಾಂದರ್ಭಿಕ ಚಿತ್ರ

    ಆರೋಪಿ ಮುಬಾರಕ್ ಮೆಟ್ರೋ ನಿಲ್ದಾಣಗಳಲ್ಲದೇ ನಗರದ ವಿವಿಧ ಪ್ರದೇಶಗಳಲ್ಲಿ ಮಾಸ್ಟರ್ ಕೀ ಬಳಸಿ ಬೈಕ್ ಕಳ್ಳತನ ಮಾಡುತ್ತಿದ್ದ. ನಂತರ ಕದ್ದ ಬೈಕ್‍ಗಳನ್ನು ದಾಸರಹಳ್ಳಿ ಪೆಟ್ರೋಲ್ ಬಂಕ್ ಬಳಿ ಬಿಟ್ಟು ಹೋಗುತ್ತಿದ್ದ. ಮರು ದಿನ ಸ್ಥಳಕ್ಕೆ ಬರುತ್ತಿದ್ದ ಆತನ ಬಾಸ್ ಯುವರಾಜ್ ಎಂಬಾತ ಬೈಕ್ ತೆಗೆದುಕೊಂಡು ಹೋಗುತ್ತಿದ್ದ.

    ಕದ್ದ ಬೈಕ್‍ಗಳನ್ನು ನಗರದಲ್ಲಿ ಮಾರಾಟ ಮಾಡಿದರೆ ಸಿಕ್ಕಿ ಬೀಳುವ ಅವಕಾಶಗಳು ಹೆಚ್ಚಾಗಿರುವುದರಿಂದ ಅವುಗಳನ್ನು ಗ್ರಾಮೀಣ ಭಾಗದಲ್ಲಿ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು. ಅಲ್ಲದೇ ಕದ್ದ ಬೈಕ್ ಚಾಸಿ ನಂಬರ್ ನೋಡಿ ನಕಲಿ ದಾಖಲೆಗಳನ್ನು ತಯಾರಿಸಿ ಕಡಿಮೆ ಬೆಲೆಗೆ ಮಾರುತ್ತಿದ್ದರು. ಆರೋಪಿ ಮುಬಾರಕ್ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಾಂದರ್ಭಿಕ ಚಿತ್ರ