Tag: Metro Station

  • ನಮ್ಮ ಮೆಟ್ರೋ ಸ್ಟೇಷನ್‌ಗಳಲ್ಲಿ ನಂದಿನಿ ಮಳಿಗೆ ತೆರೆಯಲು ದಿನಾಂಕ ಫಿಕ್ಸ್‌

    ನಮ್ಮ ಮೆಟ್ರೋ ಸ್ಟೇಷನ್‌ಗಳಲ್ಲಿ ನಂದಿನಿ ಮಳಿಗೆ ತೆರೆಯಲು ದಿನಾಂಕ ಫಿಕ್ಸ್‌

    ಬೆಂಗಳೂರು: ನಮ್ಮ ಮೆಟ್ರೋಗಳಲ್ಲಿ (Namma Metro) ನಂದಿನಿ ಮಳಿಗೆ (Nandini Shop) ಓಪನ್‌ಗೆ ದಿನಾಂಕ ನಿಗದಿ ಆಗಿದೆ. ಪ್ರಾರಂಭಿಕವಾಗಿ ಮೂರು ಮೆಟ್ರೋ ಸ್ಟೇಷನ್‌ಗಳಲ್ಲಿ ನಂದಿನಿ ಮಳಿಗೆಗಳು ನಿರ್ಮಾಣ ಆಗಿದೆ. ಈ ತಿಂಗಳ ಅಂತ್ಯದಲ್ಲಿ ನಮ್ಮ ಮೆಟ್ರೋಗಳಲ್ಲಿ ನಂದಿನಿ ಮಳಿಗೆಗಳು ಓಪನ್ ಆಗಲಿವೆ. ಕೆಎಂಎಫ್, ಬಿಎಂಆರ್‌ಸಿಎಲ್‌ ಮಳಿಗೆಗಳ ಓಪನ್‌ಗೆ ಸಿದ್ಧತೆ ಮಾಡಿವೆ.

    ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಮಳಿಗೆಗಳ ಓಪನ್‌ಗೆ ಡಿಸಿಎಂ ಡಿ.ಕೆ ಶಿವಕುಮಾರ್ (D K Shivakumar) ಅವಕಾಶ ನೀಡಿದ್ದರು. 10 ಮೆಟ್ರೋ ನಿಲ್ದಾಣಗಳಲ್ಲಿ ಓಪನ್ ಮಾಡ್ತೇವೆ ಎಂದಿದ್ದರು. ಈಗ ಪ್ರಾರಂಭಿಕವಾಗಿ 3 ಮೆಟ್ರೋ ನಿಲ್ದಾಣಗಳಲ್ಲಿ ಮಳಿಗೆಗಳ ನಿರ್ಮಾಣ ಸಿದ್ಧವಾಗಿದೆ. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ, ಸೆಂಟ್ರಲ್ ಕಾಲೇಜ್ ಮೆಟ್ರೋ ನಿಲ್ದಾಣ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಮಳಿಗೆ ನಿರ್ಮಾಣ ಆಗಿದೆ. ಇದನ್ನೂ ಓದಿ: ಸಚಿವ ಬೈರತಿ ಸುರೇಶ್ ಪಿಎಸ್ ಮನೆ ಮೇಲೆ ʻಲೋಕಾʼ ದಾಳಿ – ಭಾರೀ ಪ್ರಮಾಣದ ಆಸ್ತಿ ದಾಖಲೆ ವಶಕ್ಕೆ

    ಇನ್ನೂ ಈ ತಿಂಗಳ ಅಂತ್ಯ ಅಥವಾ ಆಗಸ್ಟ್ ಮೊದಲ ವಾರದಲ್ಲಿ ನಂದಿನಿ ಮಳಿಗೆಯು ಸಾರ್ವಜನಿಕರ ಸೇವೆಗೆ ಸಿಗಲಿದೆ. ಈ ಬಗ್ಗೆ ಕೆಎಂಎಫ್ ಎಂಡಿ ಶಿವಸ್ವಾಮಿ ಈಗಾಗಲೇ 3 ಮೆಟ್ರೋ ನಿಲ್ದಾಣಗಳಲ್ಲಿ ಸೇವೆಗೆ ಸಿದ್ಧವಾಗ್ತಿವೆ. ಮುಂದಿನ ವಾರದಲ್ಲಿ ಉದ್ಘಾಟನೆ ಮಾಡೋದಕ್ಕೆ ಪ್ಲ್ಯಾನ್ ಮಾಡುತ್ತಿದ್ದೇವೆ. ಎಲ್ಲಾ ರೀತಿಯ ನಂದಿನಿ ಉತ್ಪನ್ನಗಳು ಇಲ್ಲಿ ಸಿಗಲಿವೆ. 3 ಮೆಟ್ರೋ ಸ್ಟೇಷನ್‌ಗಳನ್ನ ಹೊರತುಪಡಿಸಿ ಉಳಿದ ಕಡೆಗಳಲ್ಲೂ ಮಳಿಗೆ ತೆರೆಯಲು ಪ್ಲ್ಯಾನ್ ಮಾಡಲಾಗ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯಿಂದ ಮುಂದಿನ ಉಪರಾಷ್ಟ್ರಪತಿ ಆಯ್ಕೆ – ಮೋದಿ ವಿದೇಶಿ ಪ್ರವಾಸದ ಬಳಿಕ ಅಂತಿಮ ನಿರ್ಧಾರ

    ಒಟ್ಟಾರೆ ನಮ್ಮ‌ ಮೆಟ್ರೋ ನಿಲ್ದಾಣದಲ್ಲಿ ಈ ತಿಂಗಳ ಅಂತ್ಯಕ್ಕೆ ನಂದಿನಿ ಮಳಿಗೆಗಳ ಓಪನ್ ಆಗ್ತಿದ್ದು, ಉಳಿದ ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಮಳಿಗೆ ಯಾವಾಗಿನಿಂದ ಓಪನ್ ಆಗಲಿವೆ. ಬೇರೆ ಬ್ರ್ಯಾಂಡ್‌ಗಳಿಗೆ ಮಣೆ ಹಾಕದೇ ನಂದಿನಿಗೆ ಹೆಚ್ಚು ಉತ್ತೇಜನ ನೀಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

  • ಮೆಟ್ರೋ ನಿಲ್ದಾಣದ ಕೆಳಗೆ ಪೋಷಕರೊಟ್ಟಿಗೆ ಮಲಗಿದ್ದ 3 ವರ್ಷದ ಬಾಲಕಿ ಮೇಲೆ ಅತ್ಯಾಚಾರ

    ಮೆಟ್ರೋ ನಿಲ್ದಾಣದ ಕೆಳಗೆ ಪೋಷಕರೊಟ್ಟಿಗೆ ಮಲಗಿದ್ದ 3 ವರ್ಷದ ಬಾಲಕಿ ಮೇಲೆ ಅತ್ಯಾಚಾರ

    ಲಕ್ನೋ: ಮೆಟ್ರೋ ನಿಲ್ದಾಣದ (Metro Station) ಕೆಳಗೆ ಪೋಷಕರೊಟ್ಟಿಗೆ ಮಲಗಿದ್ದ ಮೂರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸರ ಪ್ರಕಾರ, ಬುಧವಾರ ತಡರಾತ್ರಿ ದಿನಗೂಲಿ ಕಾರ್ಮಿಕರ (Daily Wage Labourers) ಮಗಳಾದ ಬಾಲಕಿ ಮೆಟ್ರೋ ನಿಲ್ದಾಣದ ಕೆಳಗೆ ಮಲಗಿದ್ದಾಗ ಘಟನೆ ನಡೆದಿದೆ. ಆರೋಪಿಯು ಬಾಲಕಿ ಪೋಷಕರೊಟ್ಟಿಗೆ ಮಲಗಿದ್ದಾಗಲೇ ಹೊತ್ತೊಯ್ದು ಏಕಾಂತ ಸ್ಥಳದಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಅತ್ಯಂತ ಕರಾಳ ದಿನ, ಡಿಸಿಎಂ ಅಪರಾಧಿ ಅನ್ನೋದು ರಾಜ್ಯಕ್ಕೆ ಗೊತ್ತಿದೆ: ಭಾಸ್ಕರ್‌ ರಾವ್‌ ಆಕ್ರೋಶ

    ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಉಪ ಪೊಲೀಸ್ ಆಯುಕ್ತ (ಕೇಂದ್ರ) ಆಶಿಶ್ ಕುಮಾರ್ ಶ್ರೀವಾಸ್ತವ್ ಸೇರಿದಂತೆ ಹಿರಿಯ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ. ಬಾಲಕಿಯನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: Stampede Case | ಸಿಎಂ ಸೂಚನೆ ಬೆನ್ನಲ್ಲೇ ನಾಲ್ವರು ಅರೆಸ್ಟ್‌, ಉಳಿದವರು ಎಸ್ಕೇಪ್‌

    ಬಳಿಕ ಮಾತನಾಡಿರುವ ಡಿಸಿಪಿ, ಅಲಂಬಾಗ್ ಪೊಲೀಸ್ ಠಾಣೆಯಲ್ಲಿ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಘಟನೆ ಬಳಿಕ ಆರೋಪಿಯನ್ನ ಬಂಧಿಸಲು ಐದು ವಿಶೇಷ ತಂಡಗಳನ್ನ ರಚಿಸಿದ್ದೇವೆ. ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ನಾನು ಚಡ್ಡಿ ಹಾಕಿದ್ನಾ.. ಇಲ್ವಾ ಅಂತ ಬಂದು ನೋಡಿದ್ರಾ? – ನೆಟ್ಟಿಗರ ಕಾಮೆಂಟ್‌ಗೆ ಖುಷಿ ಮುಖರ್ಜಿ ಬೋಲ್ಡ್‌ ಉತ್ತರ

  • ನಮ್ಮ ಮೆಟ್ರೋ ಎಡವಟ್ಟು – ಮೆಟ್ರೋ ಸ್ಟೇಷನ್ ಫುಲ್ ರಷ್

    ನಮ್ಮ ಮೆಟ್ರೋ ಎಡವಟ್ಟು – ಮೆಟ್ರೋ ಸ್ಟೇಷನ್ ಫುಲ್ ರಷ್

    – ಮೆಟ್ರೋ ವಿಳಂಬದಿಂದ ಪರದಾಡಿದ ಪ್ರಯಾಣಿಕರು

    ಬೆಂಗಳೂರು: ನಮ್ಮ ಮೆಟ್ರೋ (Namma Metro) ಎಡವಟ್ಟಿಗೆ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ. ಅಂಬೇಡ್ಕರ್ ಜಯಂತಿಯ ಸಲುವಾಗಿ ಇಂದು ರಜೆ ಎಂದು ಪ್ರತಿ ಹತ್ತು ನಿಮಿಷಕ್ಕೊಂದು ಮೆಟ್ರೋ ರೈಲಿನ ಸಂಚಾರವಿದ್ದುದರಿಂದ ಮೆಟ್ರೋ ಸ್ಟೇಷನ್‌ಗಳಲ್ಲಿ ಪ್ರಯಾಣಿಕರು ಪರದಾಡಿದ್ದಾರೆ.

    ಉಳಿದೆಲ್ಲಾ ದಿನದಲ್ಲಿ ಪ್ರತಿ 5 ನಿಮಿಷಕ್ಕೊಂದು ಮೆಟ್ರೋ ಸೇವೆ ಇರುತ್ತದೆ. ಆದರೆ ಇಂದು ಹತ್ತು ನಿಮಿಷಕ್ಕೊಂದು ಮೆಟ್ರೋ ಸೇವೆ ಇದ್ದುದರಿಂದ ಸ್ಟೇಷನ್‌ನಲ್ಲಿ ಜನದಟ್ಟಣೆಯಿಂದ ಪ್ರಯಾಣಿಕರು ಪರದಾಡುವಂತಾಯಿತು. ಇದನ್ನೂ ಓದಿ: ವಕ್ಫ್ ಹೆಸ್ರಲ್ಲಿ ಬಡವರ ಭೂಮಿ ಕಿತ್ತುಕೊಳ್ಳಲು ಸಾಧ್ಯವಿಲ್ಲ, ಲೂಟಿ ನಿಲ್ಲಲಿದೆ – ನರೇಂದ್ರ ಮೋದಿ

    ಸಾಮಾನ್ಯವಾಗಿ ಭಾನುವಾರ ಮಾತ್ರ ಈ ರೀತಿ ಮಾಡುತ್ತಿದ್ದ ಮೆಟ್ರೋ ಸಂಸ್ಥೆಯು, ಈಗ ಸಾರ್ವತ್ರಿಕ ರಜಾ ದಿನವೂ ಮೆಟ್ರೋ ಸೇವೆಯನ್ನು ವಿಳಂಬ ಮಾಡುತ್ತಿದೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ಮೆಟ್ರೋ ವಿರುದ್ಧ ಸಂಸದ ಪಿ.ಸಿ.ಮೋಹನ್ ವೀಡಿಯೋ ಟ್ಯಾಗ್ ಮಾಡಿ ಕಿಡಿಕಾರಿದ್ದಾರೆ. ಇದನ್ನೂ ಓದಿ: 4,500 ಎಕ್ರೆಗೆ ದಾಖಲೆ ಇದೆ, ಅರಮನೆ ಹೆಸರಿಗೆ ಜಮೀನು ಬಂದ್ರೂ ಗ್ರಾಮಸ್ಥರು ಆತಂಕ ಪಡಬೇಕಿಲ್ಲ: ಪ್ರಮೋದಾದೇವಿ ಒಡೆಯರ್

  • ಮೆಟ್ರೋ ನಿಲ್ದಾಣದ ಪಿಲ್ಲರ್‌ಗಳಲ್ಲಿ ಖಲಿಸ್ತಾನಿ ಪರ, ಮೋದಿ ವಿರುದ್ಧ ಬರಹ

    ಮೆಟ್ರೋ ನಿಲ್ದಾಣದ ಪಿಲ್ಲರ್‌ಗಳಲ್ಲಿ ಖಲಿಸ್ತಾನಿ ಪರ, ಮೋದಿ ವಿರುದ್ಧ ಬರಹ

    ನವದೆಹಲಿ: ದೆಹಲಿಯ ಮೆಟ್ರೋ ನಿಲ್ದಾಣಗಳ (Delhi Metro Station) ಪಿಲ್ಲರ್‌ಗಳಲ್ಲಿ ಖಲಿಸ್ತಾನ್ ಪರ ಮತ್ತು ಪ್ರಧಾನಿ ನರೇಂದ್ರ ಮೋದಿ (Naredra Modi) ಅವರನ್ನು ಗುರಿಯಾಗಿಸಿಕೊಂಡು ಘೋಷಣೆಗಳನ್ನು ಬರೆದಿರುವುದು ಭಾನುವಾರ ಪತ್ತೆಯಾಗಿದೆ.

    ಕರೋಲ್ ಬಾಗ್ ಮತ್ತು ಝಾಂಡೇವಾಲನ್ ಮೆಟ್ರೋ ನಿಲ್ದಾಣಗಳಲ್ಲಿ ಈ ಘೋಷಣೆಗಳನ್ನು ಬರೆದಿರುವುದು ಕಂಡುಬಂದಿವೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ವರದಿಯ ಪ್ರಕಾರ, ಯುನೈಟೆಡ್ ಸ್ಟೇಟ್ಸ್ ಮೂಲದ ನಿಷೇಧಿತ ಸಿಖ್ ಪ್ರತ್ಯೇಕತಾವಾದಿ ಗುಂಪು ಸಿಖ್ಸ್ ಫಾರ್ ಜಸ್ಟಿಸ್ (SFJ) ಬೆಂಬಲಿಗರು ಈ ಘೋಷಣೆಗಳನ್ನು ಬರೆದಿದ್ದಾರೆ.

    ತನಿಖೆ ಆರಂಭ: ಬರಹ ಸಂಬಂಧ ದೆಹಲಿ ಪೊಲೀಸರು ಈಗಾಗಲೇ ದೆಹಲಿ ಮೆಟ್ರೋ ಅಧಿಕಾರಿಗಳಿಂದ ಸಿಸಿಟಿವಿ ದೃಶ್ಯಗಳನ್ನು ಪಡೆದುಕೊಂಡಿದ್ದು, ಎಫ್‌ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ: ಹೆಚ್.ಡಿ ರೇವಣ್ಣಗೆ ಇಂದು ಸಿಗುತ್ತಾ ರಿಲೀಫ್?

    ಈ ಸಂಬಂಧ ತನಿಖೆ ನಡೆಸಲು ಈಗಾಗಲೇ ತಂಡಗಳನ್ನು ರಚಿಸಿದ್ದೇವೆ. ಆರೋಪಿಗಳ ಪತ್ತೆಗೆ ಮೆಟ್ರೋ ನಿಲ್ದಾಣಗಳಲ್ಲಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಗೀಚುಬರಹ ಮತ್ತು ಘೋಷಣೆಗಳನ್ನು ಅಳಿಸಲಾಗಿದೆ. ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ಕೂಡ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಭದ್ರತಾ ಸಿಬ್ಬಂದಿಯೊಬ್ಬರು ಭಾನುವಾರ ಬೆಳಗ್ಗೆ ಕರ್ತವ್ಯಕ್ಕೆ ಬಂದಾಗ ಮೆಟ್ರೊ ನಿಲ್ದಾಣದ ಪಿಲ್ಲರ್‌ಗಳ ಮೇಲೆ ಕಪ್ಪು ಬಣ್ಣದಲ್ಲಿ ಬರೆದಿರುವ ಘೋಷಣೆಗಳನ್ನು ಗಮನಿಸಿದ್ದಾರೆ. ಹೀಗಾಗಿ ಅವರು ಪ್ರತಿಕ್ರಿಯಿಸಿ, ನಾನು ಬೆಳಗ್ಗೆ 8 ಗಂಟೆಗೆ ಡ್ಯೂಟಿಗೆ ಬಂದಿದ್ದೇನೆ. ಈ ವೇಳೆ ಮೆಟ್ರೋ ನಿಲ್ದಾಣದ ಪಿಲ್ಲರ್‌ಗಳ ಮೇಲೆ ಕಪ್ಪು ಬಣ್ಣದಲ್ಲಿ ಏನೋ ಬರೆದಿರುವುದನ್ನು ಗಮನಿಸಿದ್ದೇನೆ. ಈ ವೇಳೆ ಅಲ್ಲಿ ಸಾಕಷ್ಟು ಜನ ಸೇರಿದ್ದು, ಗೋಡೆ ಬರಹಗಳನ್ನು ಓದುತ್ತಿದ್ದರು ಎಂದು ತಿಳಿಸಿದರು.

    ರಾತ್ರಿ ಹೊತ್ತು ಈ ಘೋಷಣೆಗಳನ್ನು ಬರೆಯಲಾಗಿದೆ. ಯಾಕೆಂದರೆ ಆ ಸಮಯದಲ್ಲಿ ಯಾರೂ ಇರುವುದಿಲ್ಲ. ಈ ಘೋಷಣೆಗಳನ್ನು ಯಾರು ಬರೆದಿದ್ದಾರೆ ಎಂಬುದು ತಿಳಿದಿಲ್ಲ ಎಂದು ಅವರು ಹೇಳಿದರು.

  • ಟೀಂ ಇಂಡಿಯಾ ಪ್ರಾಕ್ಟೀಸ್ ಜೆರ್ಸಿ, ಮೆಟ್ರೋ ಸ್ಟೇಷನ್‍ಗೂ ಕೇಸರಿ ಬಣ್ಣ- ಕೇಂದ್ರದ ವಿರುದ್ಧ ದೀದಿ ವಾಗ್ದಾಳಿ

    ಟೀಂ ಇಂಡಿಯಾ ಪ್ರಾಕ್ಟೀಸ್ ಜೆರ್ಸಿ, ಮೆಟ್ರೋ ಸ್ಟೇಷನ್‍ಗೂ ಕೇಸರಿ ಬಣ್ಣ- ಕೇಂದ್ರದ ವಿರುದ್ಧ ದೀದಿ ವಾಗ್ದಾಳಿ

    ಕೋಲ್ಕತ್ತಾ: ಪಶ್ಚಿಮ ಬಂಗಾಳ (West Bengal) ಸಿಎಂ ಮಮತಾ ಬ್ಯಾನರ್ಜಿಯವರು (Mamata Banerjee) ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಟೀಂ ಇಂಡಿಯಾದ ಪ್ರ್ಯಾಕ್ಟೀಸ್ ಜೆರ್ಸಿಯಲ್ಲಿ ಇರುವ ಕೇಸರಿ ಬಣ್ಣವನ್ನು ಕಟುವಾಗಿ ವಿರೋಧಿಸಿದ್ದಾರೆ.

    ಪೊಸ್ತಾ ಬಝಾರ್‍ನಲ್ಲಿ ಜಗಧಾತ್ರಿ ಪೂಜಾದ ಉದ್ಘಾಟನೆ ವೇಳೆ ಮಾತನಾಡಿದ ಅವರು, ಟೀಂ ಇಂಡಿಯಾದ (Team India Jersy) ಅಭ್ಯಾಸ ಜೆರ್ಸಿಗಳಲ್ಲಿ ಕೇಸರಿ ಬಣ್ಣ ಅಲ್ಲದೇ ಮೆಟ್ರೋ ಸ್ಟೇಷನ್‍ಗಳ ಗೋಡೆಗಳಿಗೂ ಕೇಸರಿ ಬಣ್ಣವನ್ನು ಬಳಿಯಲಾಗುತ್ತಿದೆ. ಈ ಮೂಲಕ ಕೇಂದ್ರ ಸರ್ಕಾರವು ಹಲವು ಸಂಸ್ಥೆಗಳನ್ನು ಕೇಸರೀಕರಣಗೊಳಿಸುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

    ಈ ಹಿಂದೆ ಅವರು ನೀಲಿ ಬಣ್ಣದ ಜೆರ್ಸಿ ಧರಿಸುತ್ತಿದ್ದರು. ಆದರೆ ಇದೀಗ ಬಿಜೆಪಿಯವರು (BJP) ಇಡೀ ದೇಶಕ್ಕೆ ಕೇಸರಿ ಬಣ್ಣ ಬಳಿಯಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ಭಾರತೀಯ ಆಟಗಾರರ ಮೇಲೆ ನಮಗೆ ಹೆಮ್ಮೆ, ಅಭಿಮಾನ ಹೊಂದಿದ್ದೇವೆ. ವಿಶ್ವಕಪ್ ನಲ್ಲಿ ಗೆಲ್ಲುತ್ತಾರೆಂದು ನಂಬುತ್ತೇನೆ. ಆದರೆ ನಮ್ಮ ಆಟಗಾರರು ಈಗ ಕೇಸರಿ ಬಣ್ಣದ ಜೆರ್ಸಿ ಹಾಕಿ ಆಡಬೇಕಿದೆ. ಇತ್ತ ಮೆಟ್ರೋ ಸ್ಟೇಷನ್‍ಗಳಿಗೂ ಕೇಸರಿ ಬಳಿಯಲಾಗಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಬ್ಯಾನರ್ಜಿ ಅಸಮಾಧಾನ ಹೊರಹಾಕಿದ್ದಾರೆ.

    ಭಾರತ ದೇಶವು ಇಲ್ಲಿನ ಜನರಿಗೆ ಸೇರಿದ್ದಾಗಿದೆ ಹೊರತು ಕೇವಲ ಬಿಜೆಪಿಯವರಿಗೆ ಸೇರಿದ್ದಲ್ಲ. ಅಧಿಕಾರ ನಿಂತ ನೀರಲ್ಲ, ಬರುತ್ತದೆ ಹೋಗುತ್ತದೆ. ಆದರೆ ಇಂತಹದ್ದೆಲ್ಲಾ ಯಾವ ಕಾರಣಕ್ಕೂ ಫಲ ನೀಡುವುದಿಲ್ಲ ಎಂದು ದೀದಿ ಗುಡುಗಿದ್ದಾರೆ. ಇದನ್ನೂ ಓದಿ: ಸರಣಿ ಶ್ರೇಷ್ಠ ಪ್ರಶಸ್ತಿಗೆ 9 ಮಂದಿಯ ನಾಮನಿರ್ದೇಶನ – ಟೀಂ ಇಂಡಿಯಾದ ನಾಲ್ವರು ಆಯ್ಕೆ

  • ಇರಾನ್‍ನಲ್ಲಿ ಹೆಚುತ್ತಿರುವ ಹಿಜಬ್ ವಿರೋಧಿ ಪ್ರತಿಭಟನೆ- ಮೆಟ್ರೋದಲ್ಲಿ ಮಹಿಳೆಯರನ್ನು ಥಳಿಸಿದ ಪೊಲೀಸರು

    ಇರಾನ್‍ನಲ್ಲಿ ಹೆಚುತ್ತಿರುವ ಹಿಜಬ್ ವಿರೋಧಿ ಪ್ರತಿಭಟನೆ- ಮೆಟ್ರೋದಲ್ಲಿ ಮಹಿಳೆಯರನ್ನು ಥಳಿಸಿದ ಪೊಲೀಸರು

    ಟೆಹ್ರಾನ್: ಇರಾನ್‍ನ (Iran) ಮೆಟ್ರೋ ನಿಲ್ದಾಣದಲ್ಲಿ (Metro Station) ಇರಾನ್ ಭದ್ರತಾ ಪಡೆಗಳು ಹಿಜಬ್ ವಿರೋಧಿ ಪ್ರತಿಭಟನಾಕಾರರ (Anti Hijab Protest) ಮೇಲೆ ಗುಂಡಿನ ದಾಳಿ ನಡೆಸಿದೆ.

    ಮಹ್ಸಾ ಅಮಿನಿಯ ( Mahsa Amini ) ಸಾವನ್ನು ವಿರೋಧಿಸಿ ಇರಾನ್‍ನಲ್ಲಿ ಇದೀಗ 3 ತಿಂಗಳಿಗೆ ತಲುಪಿದೆ. ಇರಾನ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವುದರ ನಡುವೆ ಪ್ರತಿಭಟನಾಕಾರರು ಮೆಟ್ರೋ ನಿಲ್ದಾಣಗಳಲ್ಲಿ ಹಿಜಬ್‍ಗೆ ಬೆಂಕಿ ಹಚ್ಚುತ್ತಿರುವುದು ಕಂಡುಬಂದಿತು. ಈ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸ್ ಅಧಿಕಾರಿಗಳು ಗುಂಡು ಹಾರಿಸಿದಾಗ ಜನರು ಅಲ್ಲಿಂದ ಓಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಷ್ಟೇ ಅಲ್ಲದೇ ರೈಲಿನೊಳಗೆ ಅಧಿಕಾರಿಗಳು ಮಹಿಳೆಯರನ್ನು ಲಾಠಿಗಳಿಂದ ಹೊಡೆದಿದ್ದಾರೆ. ಘಟನೆ ವೇಳೆ ಅನೇಕ ಜನರು ಬಿದ್ದು, ತುಳಿತಕ್ಕೊಳಗಾಗಿದ್ದಾರೆ.

    ಈಗಾಗಲೇ ಇರಾನ್ ದೇಶಲ್ಲಿ ಹಿಜಬ್ ಅನ್ನು ವಿರೋಧಿಸಿ ನಿರಂತರವಾಗಿ ಅಶಾಂತಿ ಮುಂದುವರಿದಿದ್ದು, ಸರ್ಕಾರಿ ವಿರೋಧಿ ಪ್ರತಿಭಟನೆ ನಡೆಸಿರುವ ಆರೋಪದಲ್ಲಿ ಕೆಲವರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಕ್ಲೆರಿಕಲ್ ಆಡಳಿತವನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಭಟಿಸಿರುವವರನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕ ಮೊದಲ ಬಾರಿಗೆ ಮರಣದಂಡನೆ ವಿಧಿಸಿದೆ. ಇದನ್ನೂ ಓದಿ: ಹನುಮಂತನ ಫೋಟೋ, ದೇವಾಲಯ ಆಕಾರದ ಕೇಕ್ ಕತ್ತರಿಸಿ ಕೈ ನಾಯಕನ ಬರ್ತ್‍ಡೇ ಸೆಲೆಬ್ರೇಷನ್

    ಇರಾನ್ ರಾಜಧಾನಿ ಟೆಹರಾನ್ ನಲ್ಲಿ ತಲೆಗೆ ಹಿಜಬ್ ಸರಿಯಾಗಿ ಧರಿಸದೇ ಇದ್ದಿದ್ದಕ್ಕೆ ಮಹ್ಸಾ ಅಮಿನಿಯನ್ನು ನೈತಿಕ ಪೊಲೀಸರು ಬಂಧಿಸಿದ್ದರು. ಪೊಲೀಸ್ ಬಂಧನದ ವೇಳೆ ಮಹ್ಸಾ ಸಾವನ್ನಪ್ಪಿದ್ದಳು. ಈಕೆಗೆ ಮೇಲೆ ಹಲ್ಲೆ ನಡೆಸುತ್ತಿರುವ ವೀಡಿಯೋ ವೈರಲ್ ಆದ ಬೆನ್ನಲ್ಲೇ ಇರಾನ್ ಸರ್ಕಾರದ ವಿರುದ್ಧ ಮಹಿಳೆಯರು, ಮಕ್ಕಳು ಬೀದಿಗೆ ಇಳಿದು ಹೋರಾಟ ಆರಂಭಿಸಿ ಮೂರು ತಿಂಗಳೂ ಕಳೆದಿವೆ. ಇದನ್ನೂ ಓದಿ: ವೈಟ್‍ಫೀಲ್ಡ್ ಮೆಟ್ರೋ ಸಂಚಾರ – ವೋಲ್ವೋ ಬಸ್ ಸಂಚಾರಕ್ಕೆ ಹೊಡೆತ

    Live Tv
    [brid partner=56869869 player=32851 video=960834 autoplay=true]

  • ಮೆಟ್ರೋ ಸ್ಟೇಷನ್ ಮೇಲಿಂದ ಜಿಗಿದು ಯುವತಿ ಆತ್ಮಹತ್ಯೆಗೆ ಯತ್ನ – CISF ಯೋಧರಿಂದ ರಕ್ಷಣೆ

    ಮೆಟ್ರೋ ಸ್ಟೇಷನ್ ಮೇಲಿಂದ ಜಿಗಿದು ಯುವತಿ ಆತ್ಮಹತ್ಯೆಗೆ ಯತ್ನ – CISF ಯೋಧರಿಂದ ರಕ್ಷಣೆ

    ನವದೆಹಲಿ: ಅಕ್ಷರಧಾಮ ಮೆಟ್ರೋ ನಿಲ್ದಾಣದಲ್ಲಿ 25 ವರ್ಷದ ಯುವತಿಯೊಬ್ಬಳು ಸೈಡ್‍ವಾಲ್‍ನ ಅಂಚಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿ ರಂಪಾಟ ಮಾಡಿದ್ದಾಳೆ.

    ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್‍ಎಫ್) ಸಿಬ್ಬಂದಿ ಯುವತಿಯನ್ನು ಗಮನಿಸಿದ ತಕ್ಷಣವೇ ಶಿಫ್ಟ್ ಇನ್ ಚಾರ್ಜ್‍ಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಮುಖ್ಯಸ್ಥರು ಯುವತಿಯನ್ನು ಕೆಳಗೆ ಬರುವಂತೆ ಮನವೊಲಿಸಲು ಯತ್ನಿಸಿದ್ದಾರೆ. ಆದರೆ ಈ ವೇಳೆ ಯುವತಿ ತಾನು ಅಂಚಿನ ಮೇಲಿನಿಂದ ಇಳಿಯುವುದಿಲ್ಲ ಎಂದು ಜಗಳವಾಡಿದ್ದಾಳೆ. ಇದನ್ನೂ ಓದಿ: ಸಂತೋಷ್ ಕೇಸ್ ಹಿಂದೆಯೂ ‘ಮಹಾನಾಯಕ’ ಇದ್ದಾನೆ: ರಮೇಶ್ ಜಾರಕಿಹೊಳಿ

    ನಂತರ ಶಿಫ್ಟ್ ಇನ್ ಚಾರ್ಜ್ ಸ್ಟೇಷನ್ ಕಂಟ್ರೋಲರ್, ಮೆಟ್ರೋ ಕಂಟ್ರೋಲ್, ಕ್ಲಸ್ಟರ್ ಇನ್ಸ್‌ಪೆಕ್ಟರ್ ಮತ್ತು ಲೈನ್ ಇನ್ ಚಾರ್ಜ್ ಅವರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಆಂಬ್ಯುಲೆನ್ಸ್ ವ್ಯವಸ್ಥೆಗೊಳಿಸಿದ್ದಾರೆ. ಇದನ್ನೂ ಓದಿ: ಈಶ್ವರಪ್ಪ ರಾಜೀನಾಮೆ ಯಾವಾಗ? – ಬಿಜೆಪಿಯ ನೈತಿಕತೆ ಎಲ್ಲಿ ಹೋಯ್ತು?

    ಕೊನೆಗೆ ಸಮೀಪದಲ್ಲಿದ್ದ ಮಾಲ್‍ವೊಂದರ ನಾಲ್ವರು ಸಿಬ್ಬಂದಿಯೊಂದಿಗೆ ಶಿಫ್ಟ್ ಇನ್ ಚಾರ್ಜ್ ಕೆಳಗೆ ಹೋಗಿ ದಪ್ಪವಾದ ಕಂಬಳಿ ವ್ಯವಸ್ಥೆಗೊಳಿಸಿ ಯುವತಿಯನ್ನು ರಕ್ಷಿಸಲು ಮುಂದಾದರು. ಹೀಗೆ ಸಕಲ ಪ್ರಯತ್ನಗಳ ನಂತರವೂ ಯುವತಿ ಅಂಚಿನಿಂದ ಕೆಳಗೆ ಬಿದ್ದಿದ್ದಾಳೆ. ಆದರೆ ಆಕೆಯನ್ನು ರಕ್ಷಿಸಿ, ತಕ್ಷಣವೇ ಸಮೀಪದ ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗಿತ್ತು. ಇದೀಗ ಯುವತಿಗೆ ಪ್ರಜ್ಞೆ ಬಂದಿದ್ದು, ಆಕೆಯ ಬಲಗಾಲಿಗೆ ಕೆಲವು ಗಾಯಗಳಾಗಿದೆ.

  • ಮೆಟ್ರೋ ನಿಲ್ದಾಣದ ಗ್ರಿಲ್‍ನಲ್ಲಿ ಸಿಲುಕಿದ್ದ ಬಾಲಕಿ ರಕ್ಷಿಸಿದ CISF ಸಿಬ್ಬಂದಿ!

    ಮೆಟ್ರೋ ನಿಲ್ದಾಣದ ಗ್ರಿಲ್‍ನಲ್ಲಿ ಸಿಲುಕಿದ್ದ ಬಾಲಕಿ ರಕ್ಷಿಸಿದ CISF ಸಿಬ್ಬಂದಿ!

    ನವದೆಹಲಿ: ಮೆಟ್ರೋ ನಿಲ್ದಾಣದಲ್ಲಿ ಕಿರಿದಾದ ಕಟ್ಟೆಯಲ್ಲಿ 9 ವರ್ಷದ ಬಾಲಕಿ ಸಿಕ್ಕಿಕೊಂಡಿದ್ದು, ಆಕೆಯನ್ನು ಸಿಐಎಸ್‍ಎಫ್ ಸಿಬ್ಬಂದಿ ರಕ್ಷಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಭಾನುವಾರ ಸಂಜೆ ದೆಹಲಿಯ ನಿರ್ಮಾಣ್ ವಿಹಾರ್ ಮೆಟ್ರೋ ನಿಲ್ದಾಣದಲ್ಲಿ ಗ್ರಿಲ್‍ನ ಹಿಂದೆ ಒಂಬತ್ತು ವರ್ಷದ ಬಾಲಕಿ ಸಿಕ್ಕಿಕೊಂಡಿದ್ದಳು. ಇದನ್ನು ಗಮನಿಸಿದ ಸ್ಥಳೀಯರು ಆಕೆಯ ರಕ್ಷಣೆಗಾಗಿ ಸಿಬ್ಬಂದಿಯನ್ನು ಕರೆದಿದ್ದು, ಸಿಐಎಸ್‍ಎಫ್ ಸಿಬ್ಬಂದಿ ಬಾಲಕಿಯನ್ನು ರಕ್ಷಿಸಿದ್ದಾರೆ. ಇದನ್ನೂ ಓದಿ: ರಷ್ಯಾ, ಉಕ್ರೇನ್ ಸಂಘರ್ಷ ಕೃಷಿ ರಫ್ತಿನ ಮೇಲೆ ಪರಿಣಾಮ ಬೀರುತ್ತೆ: ನಿರ್ಮಲಾ

    ನಡೆದಿದ್ದೇನು?
    ಬಾಲಕಿ ಮೆಟ್ಟಿಲುಗಳ ಸುತ್ತಲೂ ಆಟವಾಡುತ್ತಿದ್ದಳು. ಈ ವೇಳೆ ಬಾಲಕಿ ಮೆಟ್ಟಿಲುಗಳ ಮೇಲೆ ನೆಗೆಯುವ ಬದಲಿಗೆ ಪಕ್ಕಕ್ಕೆ ನೆಗೆದಿದ್ದಾಳೆ. ಪರಿಣಾಮ ಆಕೆ 15-20 ಅಡಿ ಎತ್ತರದ ಕಟ್ಟೆಯ ಮೇಲೆ ಸಿಲುಕಿಕೊಂಡಿದ್ದಾಳೆ. ಇದನ್ನು ನೋಡಿದ ಬಾಲಕಿಯ ಕುಟುಂಬ ಸಹಾಯಕ್ಕಾಗಿ ಕಿರುಚಲು ಪ್ರಾರಂಭಿಸಿದೆ. ನಂತರ ಸಿಐಎಸ್‍ಎಫ್ ಕ್ವಿಕ್ ರೆಸ್ಪಾನ್ಸ್ ತಂಡವನ್ನು ಸಹಾಯಕ್ಕಾಗಿ ಕರೆ ಮಾಡಲಾಗಿದೆ.

    ಸುದ್ದಿ ತಿಳಿದ ತಕ್ಷಣ ಬಂದ ಸಿಬ್ಬಂದಿ ಬಾಲಕಿಯನ್ನು ರಕ್ಷಿಸಿದ್ದಾರೆ. ಪ್ರಸ್ತುತ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ವೀಡಿಯೋದಲ್ಲಿ, ಸಿಐಎಸ್‍ಎಫ್ ಸಿಬ್ಬಂದಿ ಗ್ರಿಲ್ ನಲ್ಲಿ ಸಿಕ್ಕಿಕೊಂಡಿದ್ದ ಬಾಲಕಿಯನ್ನು ಹಿಂದಿನಿಂದ ಹೊರಬರಲು ಸಹಾಯ ಮಾಡುವುದನ್ನು ಸೆರೆಹಿಡಿಯಲಾಗಿದೆ. ಅಲ್ಲದೆ ಬಾಲಕಿಯನ್ನು ಸೂಕ್ಷ್ಮವಾಗಿ ಮೆಟ್ಟಿಲುಗಳಿಂದ ಜಾಗಕ್ಕೆ ಕರೆದುಕೊಂಡು ಹೋಗಲು ಹಗ್ಗದ ಸಹಾಯ ಪಡೆದುಕೊಳ್ಳುತ್ತಿರುವುದು ವೀಡಿಯೋದಲ್ಲಿ ಕಾಣಬಹುದು.  ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಯ್ತು ಪುಡಿ ರೌಡಿಗಳ ಹಾವಳಿ

    ವೀಡಿಯೋವನ್ನು ಸಿಐಎಸ್‍ಎಫ್ ಟ್ಟಿಟ್ಟರ್, ಫೆಬ್ರವರಿ 27ರಂದು ನಿರ್ಮಾನ್ ವಿಹಾರ್ ಮೆಟ್ರೋ ನಿಲ್ದಾಣದ ಪ್ರದೇಶದಲ್ಲಿ ಆಟವಾಡುತ್ತಿದ್ದ ಮಗು ಗ್ರಿಲ್‍ನಲ್ಲಿ ಸಿಲುಕಿಕೊಂಡಿತು. ಸಿಐಎಸ್‍ಎಫ್ ಕ್ಯೂಆರ್‌ಟಿ ತಂಡದ ಸಿಟಿ/ಜಿಡಿ ನಾಯಕ್ ಕೂಡಲೇ ಸ್ಪಂದಿಸಿ ಮಗುವನ್ನು ರಕ್ಷಿಸಿದ್ದಾರೆ ಎಂದು ಬರೆದು ಟ್ವೀಟ್ ಮಾಡಿದೆ.

  • ಉಕ್ರೇನ್‍ನಲ್ಲಿ ಬಾಂಬ್ ಆರ್ಭಟ – 30 ಗಂಟೆಗಳ ಕಾಲ ಮೆಟ್ರೋ ಸುರಂಗದಲ್ಲೇ ಕುಳಿತ ಭಾರತೀಯ ವಿದ್ಯಾರ್ಥಿಗಳು

    ಉಕ್ರೇನ್‍ನಲ್ಲಿ ಬಾಂಬ್ ಆರ್ಭಟ – 30 ಗಂಟೆಗಳ ಕಾಲ ಮೆಟ್ರೋ ಸುರಂಗದಲ್ಲೇ ಕುಳಿತ ಭಾರತೀಯ ವಿದ್ಯಾರ್ಥಿಗಳು

    ನವದೆಹಲಿ: ರಷ್ಯಾ ದಾಳಿಯಿಂದಾಗಿ ಉಕ್ರೇನ್‍ನಲ್ಲಿ ಭಾರತೀಯ ವಿದ್ಯಾರ್ಥಿಗಳು ಮೆಟ್ರೋ ಸುರಂಗದಲ್ಲಿ ಸತತ 30 ಗಂಟೆಗಳಿಂದ ಸಿಲುಕಿಕೊಂಡಿದ್ದಾರೆ. ಈ ನಡುವೆ ಕೆಲವು ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ವಾಪಸಾಗಲು ಸಹಾಯ ಕೇಳುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಸುಮಾರು 16,000 ಭಾರತೀಯರು ಉಕ್ರೇನ್‍ನಲ್ಲಿ ವಾಸಿಸುತ್ತಿದ್ದು, ಅವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳಾಗಿದ್ದಾರೆ. ಕೆಲವು ವಿದ್ಯಾರ್ಥಿಗಳು ತಮ್ಮ ಅಪಾರ್ಟ್‍ಮೆಂಟ್‍ಗಳನ್ನು ಬಿಟ್ಟು ತೊರೆಯುತ್ತಿಲ್ಲ. ಆದರೆ ಇನ್ನು ಹಲವಾರು ಮಂದಿ ಬಾಂಬ್ ದಾಳಿಯಿಂದ ತಪ್ಪಿಸಿಕೊಳ್ಳಲು ಮೆಟ್ರೋ ರೈಲು ನಿಲ್ದಾಣಗಳಲ್ಲಿರುವ ಸುರಂಗಗಳಿಗೆ ತೆರಳಿ ಬೀಡುಬಿಟ್ಟಿದ್ದಾರೆ. ಇದನ್ನೂ ಓದಿ: ಮೆಟ್ರೋ ಸುರಂಗದಲ್ಲಿ ಅವಿತಿದ್ದಾರೆ ಕನ್ನಡಿಗರು!

    ಈ ನಡುವೆ ಉಕ್ರೇನ್‍ನಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿರುವ ಉತ್ತರ ಪ್ರದೇಶದ ಬಲ್ಲಿಯಾ ಮೂಲದ ಮನೀಶ್ ಜೈಸ್ವಾಲ್ ಎಂಬವರು ಭಾರತೀಯರನ್ನು ಸ್ಥಳಾಂತರಿಸಲು ಶೀಘ್ರವೇ ವ್ಯವಸ್ಥೆಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ವಿನಂತಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ನಾವು ಅಸಹಾಯಕರಾಗಿದ್ದೇವೆ. ಬೆಳಿಗ್ಗೆಯಿಂದ ನಗರದಲ್ಲಿ ಮೂರು-ನಾಲ್ಕು ಬಾಂಬ್‍ಗಳ ದಾಳಿಯಾಗಿದೆ. ನಮಗೆ ಎಲ್ಲ ವಿಮಾನ ಮಾರ್ಗಗಳು ಮುಚ್ಚಲ್ಪಟ್ಟಿವೆ. ಸಾಧ್ಯವಾದಷ್ಟು ಬೇಗ ಭಾರತೀಯರನ್ನು ಸ್ಥಳಾಂತರಿಸಲು ವ್ಯವಸ್ಥೆ ಮಾಡಲು ನಾನು ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರನ್ನು ವಿನಂತಿಸುತ್ತೇನೆ. ಈ ವೀಡಿಯೋವನ್ನು ಮನೀಶ್ ಜೈಸ್ವಾಲ್ ಅವರು ತಮ್ಮ ಅಪಾಟ್‍ಮೆಂಟ್‍ನಿಂದ ಚಿತ್ರೀಕರಿಸಲಾಗಿದೆ ಎಂದು ತಿಳಿಸಿದ್ದಾರೆ.

    ಮತ್ತೊಂದು ವೀಡಿಯೋವನ್ನು ನಿಲೇಶ್ ಜೈನ್ ಅವರು ಹಂಚಿಕೊಂಡಿದ್ದು, ಸುಮಾರು 30 ಗಂಟೆಗಳ ಕಾಲ ಮೆಟ್ರೋ ನಿಲ್ದಾಣದಲ್ಲಿ ಸಿಲುಕಿಕೊಂಡಿರುವುದಾಗಿ ತಿಳಿಸಿದ್ದಾರೆ. ಜನರು ಮೆಟ್ರೋ ರೈಲ್ವೆ ನಿಲ್ದಾಣದ ಮಹಡಿ ಮೇಲೆ ಕುಳಿತುಕೊಂಡಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

    ಇಂಟರ್​​ನೆಟ್ ಸಂಪರ್ಕವು ಉತ್ತಮವಾಗಿಲ್ಲ. ನಾವು ಬಾಂಬ್ ಸ್ಫೋಟಿಸುವ ಶಬ್ದವನ್ನು ಕೇಳುತ್ತಿದ್ದೇವೆ. ದಯವಿಟ್ಟು ನಮಗೆ ಸಹಾಯ ಮಾಡಿ. ನಮ್ಮನ್ನು ಇಲ್ಲಿಂದ ತ್ವರಿತವಾಗಿ ಸ್ಥಳಾಂತರಿಸುವಂತೆ ನಾನು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡುತ್ತೇನೆ ಎಂದು ನಿಲೇಶ್ ಜೈನ್ ಕೋರಿಕೊಂಡಿದ್ದಾರೆ. ಇದನ್ನೂ ಓದಿ: ಪ್ರವಾಸಿಗರಿಗೆ ಸಿಹಿ ಸುದ್ದಿ- ಡಾರ್ಜಿಲಿಂಗ್‍ನ ಟಾಯ್ ರೈಲಿನ ದರ ಇಳಿಕೆ

    ಕೂ ಆ್ಯಪ್‍ನಲ್ಲಿ ವೀಡಿಯೋವೊಂದನ್ನು ಪೋಸ್ಟ್ ಮಾಡಿರುವ ಗುಜರಾತ್‍ನ ಭಾರತೀಯ ವಿದ್ಯಾರ್ಥಿಯೊಬ್ಬರು ಎಟಿಎಂಗಳು ಮತ್ತು ಅಂಗಡಿಗಳಲ್ಲಿ ಜನ ಕ್ಯೂನಲ್ಲಿ ನಿಂತಿದ್ದಾರೆ. ಎಲ್ಲರೂ ಭಯಭೀತರಾಗಿದ್ದಾರೆ. ಉಕ್ರೇನ್ ತನ್ನ ವಾಯುಪ್ರದೇಶವನ್ನು ಮುಚ್ಚಿದ ನಂತರ ಅವರ ವಿಮಾನ ಹಾರಾಟವನ್ನು ರದ್ದುಗೊಳಿಸಲಾಗಿದೆ. ಹೀಗಾಗಿ ಭಾರತಕ್ಕೆ ವಿಮಾನಗಳ ಮೂಲಕ ಹಿಂದಿರುಗಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ ತಿಳಿಸಿದ್ದಾರೆ. ಇದನ್ನೂ ಓದಿ:  ರಷ್ಯಾ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಹ್ಯಾಕರ್‌ಗೆ ಉಕ್ರೇನ್ ಕರೆ!

  • ಮೆಟ್ರೋ ರೈಲ್ವೆ ಹಳಿಗೆ ತಳ್ಳಿದ ವ್ಯಕ್ತಿ – ಕೂದಲೆಳೆ ಅಂತರದಲ್ಲಿ ಮಹಿಳೆ ಪಾರು

    ಮೆಟ್ರೋ ರೈಲ್ವೆ ಹಳಿಗೆ ತಳ್ಳಿದ ವ್ಯಕ್ತಿ – ಕೂದಲೆಳೆ ಅಂತರದಲ್ಲಿ ಮಹಿಳೆ ಪಾರು

    ಮೆಟ್ರೋ ರೈಲು ಆಗಮಿಸುತ್ತಿದ್ದ ವೇಳೆ ಫ್ಲಾಟ್ ಫಾರ್ಮ್‍ನಲ್ಲಿ ನಿಂತಿದ್ದ ಮಹಿಳೆಯನ್ನು ವ್ಯಕ್ತಿಯೋರ್ವ ಉದ್ದೇಶ ಪೂರ್ವಕವಾಗಿ ರೈಲ್ವೆ ಹಳಿಗೆ ತಳ್ಳಿದ್ದರೂ ಮಹಿಳೆ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾಳೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    metro train

    ಶುಕ್ರವಾರ ಸಂಜೆ ಬೆಲ್ಜಿಯಂನಲ್ಲಿ ಈ ಘಟನೆ ನಡೆದಿದ್ದು, 30 ಸೆಕೆಂಡ್ ಇರುವ ಈ ವೀಡಿಯೋದಲ್ಲಿ ಮಹಿಳೆ ಮೆಟ್ರೋ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿರುವುದನ್ನು ಕಾಣಬಹುದಾಗಿದೆ. ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ಕಪ್ಪು ಬಣ್ಣದ ಟಿ-ಶರ್ಟ್ ಧರಿಸಿದ್ದ ವ್ಯಕ್ತಿಯೊರ್ವ ಮಹಿಳೆಯನ್ನು ಹಿಂದಿನಿಂದ ಬಂದು ತಳ್ಳಿದ್ದಾನೆ. ಈ ವೇಳೆ ರೈಲ್ವೆ ಹಳಿಯ ಮೇಲೆ ಮಹಿಳೆ ಬಿದ್ದು, ಪ್ರಜ್ಞೆ ಕಳೆದುಕೊಳ್ಳುತ್ತಾಳೆ. ಇದನ್ನು ಗಮನಿಸಿದ ರೈಲು ಚಾಲಕ ಕೂಡಲೇ ಬ್ರೇಕ್ ಹಾಕಿದ್ದು, ಕೇವಲ ಇಂಚುಗಳ ಅಂತರದಲ್ಲಿ ಮಹಿಳೆ ಬಚಾವ್ ಆಗಿದ್ದಾಳೆ. ನಂತರ ಸ್ಥಳದಲ್ಲಿಯೇ ಇದ್ದ ಜನರು ಆಕೆಯ ಸಹಾಯಕ್ಕೆ ಧಾವಿಸಿದ್ದಾರೆ. ಇದನ್ನೂ ಓದಿ: ಕೋವಿಡ್ ಎಫೆಕ್ಟ್ ದಾಖಲೆ ಮಾರಾಟ – 358 ಕೋಟಿ ಟ್ಯಾಬ್ಲೆಟ್‍ಗಳು ಮಾರಾಟ

    ನಂತರ ಸಂತ್ರಸ್ತೆ ಹಾಗೂ ಮೆಟ್ರೋ ಚಾಲಕ ಇಬ್ಬರನ್ನು ಸಹ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಮನೆಗೆ ಕಳುಹಿಸಿ ಕೊಡಲಾಯಿತು. ಮಹಿಳೆಯನ್ನು ರೈಲ್ವೆ ಹಳಿಗೆ ತಳ್ಳಿ ಓಡಿ ಹೋಗುತ್ತಿದ್ದ ಆರೋಪಿಯನ್ನು ಇದೀಗ ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಕೊಲೆ ಯತ್ನ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಆತನ ಮಾನಸಿಕ ಸ್ಥಿತಿಯನ್ನು ಪರಿಶೀಲಿಸಲು ನ್ಯಾಯಾಲಯದಿಂದ ಮನೋವೈದ್ಯಕೀಯ ತಜ್ಞರನ್ನು ನೇಮಿಸಲಾಗಿದ್ದು, ಘಟನೆ ಕುರಿತಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಆರೋಗ್ಯ ಸಚಿವರ ತವರೂರಲ್ಲೇ ಕುರಿ ಸಂತೆ- ಸಾವಿರಾರು ಮಂದಿ ಜಮಾವಣೆ